ವಿಷಯದ ವಿವರಗಳಿಗೆ ದಾಟಿರಿ

Posts from the ‘ಕಥೆ’ Category

20
ಮೇ

ಬೀಭತ್ಸ (ಭಾಗ ೨)

ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭಾಗ 1 ರಿಂದ ಮುಂದುವರೆದ ಕತೆ

8149361_f260“ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ..”? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್, “ಹೌದು, ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮುಗಿದಿತ್ತೇನೋ ಎಂದು ಭಾಸವಾಗುತ್ತಿದೆ. ಕಾಲ ಎಷ್ಟು ಬೇಗ ಸರಿದು ಹೋಗುತ್ತದಲ್ಲವಾ..’?”ಎಂದು ನುಡಿದಳು. ಅಷ್ಟರಲ್ಲಿ ಕ್ಲಾರ್ಕ್ ನ ಸರದಿ ಮುಗಿದು ಡೆಲಾಕ್ರೋಕ್ಸ್ ತನ್ನ ಪಾಳಿಗಾಗಿ ಕಾಯುತ್ತ ನಿಂತಿದ್ದ. “ಅಲ್ನೋಡು ನನ್ನ ಗಂಡನ ಸರದಿ ಬಂದೇ ಬಿಟ್ಟಿತು” ಎಂದ ಅವನ ಮಡದಿಗೆ ಒಂದು ಕ್ಷಣ ಉಸಿರು ನಿಂತ ಅನುಭವ. ಡೆಲಾಕ್ರೊಕ್ಸ್ ಚೀಟಿಯನ್ನೆತ್ತಿಕೊಂಡು ಸ್ವಸ್ಥಾನಕ್ಕೆ ಮರಳಿದ. “ಡನ್ಬರ್” ಎಂಬ ಹೆಸರು ಕೇಳುತ್ತಲೇ ಕಾಲು ಮುರಿದುಕೊಂಡು ಮನೆಯಲ್ಲಿಯೇ ಮಲಗಿದ್ದ ಡನ್ಬರನ ಮಡದಿ ನಿಧಾನವಾಗಿ ಕಪ್ಪುಪೆಟ್ಟಿಗೆಯ ಬಳಿ ನಡೆಯಲಾರಂಭಿಸಿದಳು. ಆಕೆಯನ್ನು ಗಮನಿಸಿದ ಮಹಿಳೆಯೊಬ್ಬಳು “ಧೈರ್ಯವಾಗಿ ಹೋಗು ಜೇನಿ, ಭಯ ಬೇಡ” ಎನ್ನುತ್ತ ಆಕೆಯನ್ನು ಹುರಿದುಂಬಿಸಿದಳು. “ನಮ್ಮದು ಮುಂದಿನ ಸರದಿ” ಎನ್ನುತ್ತ ಕೊಂಚ ಗಂಭೀರಳಾದಳು ಶ್ರೀಮತಿ ಗ್ರೇವ್ಸ್. ತನ್ನ ಪತಿ ಗಡಿಬಿಡಿಯಾಗಿ ಕರಿಪೆಟ್ಟಿಗೆಯತ್ತ ತೆರಳಿ ಸಮ್ಮರ್ಸನಿಗೊಂದು ನಮಸ್ಕಾರ ಹೇಳಿ, ಚೀಟಿಯನ್ನು ಎತ್ತಿದ್ದನ್ನು ದೂರದಿಂದಲೇ ಗಮನಿಸಿದಳಾಕೆ. ಸಾಕಷ್ಟು ಸಮಯ ಕಳೆದಿತ್ತು. ಅದಾಗಲೇ ಚೀಟಿಯನ್ನು ಎತ್ತುಕೊಂಡಿದ್ದ ಜನ ಚೀಟಿಯನ್ನು ತೆರೆದು ನೋಡಲಾಗದೆ, ಕುತೂಹಲವನ್ನು ತಡೆದುಕೊಳ್ಳಲಾಗದೆ ನಿಂತಲ್ಲೆ ಸಣ್ಣಗೆ ಕಂಪಿಸುತ್ತಿದ್ದರು. ಡನ್ಬರನ ಮಡದಿ ಸಹ ಕೊಂಚ ಆತಂಕದಿಂದಲೇ ತನ್ನೆರಡು ಮಕ್ಕಳೊಡಗೂಡಿ ಮೂಲೆಯೊಂದರಲ್ಲಿ ನಿಂತಿದ್ದಳು. ಅಷ್ಟರಲ್ಲಿ ಹರ್ಬರ್ಟನ ಸರದಿ ಮುಗಿದು, ಹಚ್ಚಿಸನ್ನನ ಸರದಿ ಬಂದಿತ್ತು. “ಬೇಗ ಹೋಗಿ ಚೀಟಿ ಎತ್ತು, ಬಿಲ್” ಎಂದ ಟೆಸ್ಸಿಯ ಮಾತಿನ ಶೈಲಿಯೇ ನೆರೆದಿದ್ದ ಕೆಲವರಿಗೆ ನಗು ತರಿಸಿತ್ತು. ಹಚ್ಚಿಸನ್ನನ ನಂತರ ಚೀಟಿಯೆತ್ತುವ ಸರದಿ ಜೋನ್ಸಳದ್ದು. ಮತ್ತಷ್ಟು ಓದು »

19
ಮೇ

ಬೀಭತ್ಸ…….!!(ಭಾಗ ೧)

ಗುರುರಾಜ್ ಕೊಡ್ಕಣಿ,ಯಲ್ಲಾಪುರ

8149361_f260ಅದು ಜೂನ್ ಇಪ್ಪತ್ತೇಳನೆಯ ತಾರೀಖು. ಎಳೆಯ ಬಿಸಿಲಿನ್ನೂ ಭೂಮಿಯನ್ನು ಚುಂಬಿಸುತಿತ್ತು. ಮೈದಾನದುದ್ದಕ್ಕೂ ಆವರಿಸಿಕೊಂಡಿದ್ದ ಹಸಿರು ಹುಲ್ಲಿನ ನಡುನಡುವೆ ಬೆಳೆದುಕೊಂಡಿದ್ದ ಸಣ್ಣ ಗಿಡಗಳ ತುಂಬೆಲ್ಲ ಚಂದದ ಪುಷ್ಫಗಳು ಅರಳಿಕೊಂಡಿದ್ದವು. ಹಳ್ಳಿಯ ಅಂಚೆ ಕಚೇರಿ ಮತ್ತು ಬ್ಯಾಂಕುಗಳ ರಸ್ತೆಗಳು ಕೂಡುವ ಚೌಕದಲ್ಲಿ ನಿಧಾನವಾಗಿ ಹಳ್ಳಿಗರು ಸೇರಲಾರಂಭಿಸಿದ್ದರು. ಹಳ್ಳಿಯ ಚೀಟಿ ಎತ್ತುವಿಕೆಯ ಕಾರ್ಯಕ್ರಮ ಕೇವಲ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ. ಆದರೆ ಬೇರೆ ಕೆಲವು ಪಟ್ಟಣಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಕಡಿಮೆಯೆಂದರೂ ಎರಡು ದಿನಗಳಷ್ಟು ಕಾಲಾವಕಾಶ ಬೇಕು. ಕಡಿಮೆ ಜನಸಂಖ್ಯೆಯ ಕಾರಣದಿಂದಾಗಿ ಆ ಹಳ್ಳಿಯ ಜನ ಬೆಳಗ್ಗಿನ ಹತ್ತು ಗಂಟೆಗೆಲ್ಲ ಕಾರ್ಯಕ್ರಮ ಆರಂಭಿಸಿ, ಮಧ್ಯಾಹ್ನದ ಹೊತ್ತಿಗೆ ವಿಧಿವಿಧಾನಗಳನ್ನು ಪೂರೈಯಿಸಿ ಊಟಕ್ಕೆಂದು ತಮ್ಮತಮ್ಮ ಮನೆಗಳಿಗೆ ತೆರಳುತ್ತಿದ್ದರು. ಮತ್ತಷ್ಟು ಓದು »

6
ಮೇ

ಸೈಕಲ್ಲೇರಿದ ನಲ್ಲ, ದಾಟಿದ ಸಾವಿರ ಮೈಲಿಗಲ್ಲ!

– ರಾಘವೇಂದ್ರ ಸುಬ್ರಹ್ಮಣ್ಯ

12316585_929706350454452_2022226888221524595_nಒಬ್ಬ ಬಡ ಹುಡುಗ, ಒಂದು ದಿನ ಒಬ್ಬ ಶ್ರೀಮಂತ ಹುಡುಗಿಯನ್ನ ಭೇಟಿಯಾದ. ಇಬ್ಬರಲ್ಲೂ ಪ್ರೇಮಾಂಕುರವಾಯ್ತು. ಹುಡುಗಿ ವಾಪಾಸು ತನ್ನ ದೇಶಕ್ಕೆ ಹೊರಟುಹೋದಳು. ಹುಡುಗ ‘ನನ್ನ ಪ್ರೀತಿಯನ್ನ ಸಾಯೋಕೆ ಬಿಡಲ್ಲ. ಬರ್ತೀನಿ. ಒಂದಲ್ಲಾ ಒಂದು ದಿನ ನಿನ್ನ ಭೇಟಿಯಾಗುತ್ತೇನೆ’ ಅಂತಾ ಆಕೆಗೂ, ಆಕೆಯ ಜೊತೆಗೆ ತನಗೆ ತಾನೇ ಮಾತುಕೊಟ್ಕೊಂಡ. ಆದರೆ ಅವಳಿದ್ದಲ್ಲಿಗೆ ಹೋಗೋಣ ಅಂದ್ರೆ ಇವನ ಹತ್ರ ದುಡ್ಡಿಲ್ಲ. ಬೆಳಾಗಾದ್ರೆ ‘ಇವತ್ತು ಸಾಯಂಕಾಲ ಊಟಕ್ಕೆ ಏನು?’ ಅನ್ನುವಷ್ಟು  ಬಡತನ. ಆದರೆ ಕಮಿಟ್ಮೆಂಟ್ ಕೊಟ್ಟಾಗಿದೆ. ಒಂದಿನ ಆ ಹುಡುಗ ‘ಇನ್ನು ಸುಮ್ನಿದ್ರೆ ಆಗಲ್ಲ. ಶುರು ಮಾಡೇಬಿಡೋಣ’ ಅಂತಾ ಹೇಳ್ಕಂಡು ಒಂದು ಸೈಕಲ್ ತಗಂಡು ಈ ಹುಡುಗಿಯನ್ನು ಭೇಟಿಯಾಗೋಕೆ ಹೊರಟೇ ಬಿಡ್ತಾನೆ. ಎಷ್ಟೂ ದೂರ ಸೈಕಲ್ ಹೊಡೆದ ಅಂತೀರಾ? ನೂರಲ್ಲ, ಐನೂರಲ್ಲ, ಸಾವಿರವೂ ಅಲ್ಲ. ಬರೋಬ್ಬರಿ 9350 ಕಿಲೋಮೀಟರ್ ದೂರ!! ಪ್ರೀತಿಯ ಆಳದ ಮುಂದೆ ಈ ದೂರ ಯಾವ ಲೆಕ್ಕ ಬಿಡ್ರೀ! ಮತ್ತಷ್ಟು ಓದು »

30
ಏಪ್ರಿಲ್

ತಮ್ಮನ ಪುನರ್ಮಿಲನ

image (1)

– ರಂಜನ್ ಕೇಶವ

ಪ್ರತಾಪನು ಚೇತಕ್ ನೊಡನೆ ರಣಭೂಮಿಯಿಂದ ತೆರಳಿದಾಗ ಹಲ್ದೀಘಾಟಿಯ ಯುದ್ಧ ಭಾಗಶಃ ಮುಗಿದಿತ್ತು. ಪ್ರತಾಪನಿಗೆ ಒಂದುಕಡೆ ಯುದ್ಧದಲ್ಲುಂಟಾದ ಸೋಲಿನ ನಿರಾಶೆ ಮತ್ತೊಂದೆಡೆ ಮೊಘಲ್ ಸೇನೆಯನ್ನು ಮುಂದೆ ತಡೆಯುವುದು ಹೇಗೆಂಬ ಚಿಂತೆ. ತರಾತುರಿಯಲ್ಲಿ ತೆರಳಿದ್ದಕ್ಕಾಗಿ ಪ್ರತಾಪನು ಏಕಾಂಗಿಯಾಗಿದ್ದ, ಜೊತೆಗೆ ಯಾವೊಬ್ಬ ಸಹಚರನೋ ಸರದಾರರೋ ಇರಲಿಲ್ಲ. ವ್ಯಾಕುಲಗೊಂಡ ಮನಸ್ಸಿನ ಕಾರಣ ಏಕಾಂಗಿತನದ ಅರಿವೂ ಇಲ್ಲ.
ಹೀಗೆ ಸಾಗುತ್ತಿದ್ದ ಪ್ರತಾಪನನ್ನು ಅವನ ಅರಿವಿಗೆ ಬಾರದಂತೆ ಇಬ್ಬರು ಮೊಘಲ್ ಸವಾರರು ಹಿಂಬಾಲಿಸುತಿದ್ದರು ! ಇಬ್ಬರಲ್ಲೂ ಪ್ರತಾಪನನ್ನು ಕೊಂದು ಷೆಹಂಷಾಹ್ ನಿಂದ ಪುರಸ್ಕಾರ ಪಡೆಯುವ ಆಕಾಕ್ಷೆಯಿತ್ತು.

ಚೇತಕ್ ಕುದುರೆ ತನ್ನ ಸ್ವಾಮಿಯನ್ನು ರಕ್ಷಿಸಲೆಂದು ನೆಲದ ಏರಿಳಿತ, ಕಲ್ಲು ಬಂಡೆ ಮತ್ಯಾವ ಅಡೆತಡೆಗಳಿಗೂ ಸ್ವಲ್ಪವೂ ವೇಗ ಕುಗ್ಗಿಸದೇ ಒಂದೇ ರಭಸದಲ್ಲಿ ಓಡುತ್ತಿತ್ತು. ಕಾಲಿನ ಗಾಯದ ರಕ್ತಸ್ರಾವದಲ್ಲೂ ಯಾವ ಬಾಧೆಯನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿತ್ತು. ಹೀಗೆ ಸಾಗುತ್ತಾ ಒಂದು ನದಿಯ ಕವಲನ್ನು ಚೇತಕ್ ಒಂದೇ ನೆಗೆತಕ್ಕೆ ದಾಟಿತು. ಆದರೆ ಆ ಮೊಘಲ್ ಸೈನಿಕರ ಕುದುರೆಗಳಿಗೆ ದಾಟಲಾಗದೆಯೇ ಅಲ್ಲೇ ನಿಂತವು. ಮತ್ತಷ್ಟು ಓದು »

28
ಏಪ್ರಿಲ್

ಶೂರ್ಪನಖಿ, ಆಹಾ! ಎಂಥಾ ಸುಖಿ!

– ನಾಗೇಶ ಮೈಸೂರು

4398694301_230970e9f7

ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೇ?

ಬಹುಶಃ ರಾಮಾಯಣದ ಪಾತ್ರಗಳನ್ನು ವಿಶ್ಲೇಷಣೆಗೆ ಪರಿಗಣಿಸಿದಾಗ, ಅದರಲ್ಲೂ ಮಹಿಳೆಯ ಪಾತ್ರದ ವಿಷಯಕ್ಕೆ ಬಂದರೆ ಸೀತೆ, ಕೈಕೆ, ಮಂಡೋದರಿ, ಮಂಥರೆ ಹೀಗೆ ಎಷ್ಟೋ ಪಾತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಆದರೆ ಅವುಗಳ ನಡುವೆ ಸಾಮಾನ್ಯವಾಗಿ ಯಾರೂ ಪರಿಗಣಿಸದ ಒಂದು ವಿಶೇಷ ಪಾತ್ರವೆಂದರೆ ಶೂರ್ಪನಖಿಯದು. ತೀರಾ ಪ್ರಖರವಾಗಿ ಎದ್ದು ಕಾಣದೆ, ತೆಳುವಾದ ಮೇಲುಸ್ತರದಲ್ಲೇ ಮುಲುಗಾಡುವ ಈ ಪಾತ್ರ ಇಡೀ ರಾಮಾಯಣದಲ್ಲಿ ಬಂದು ಹೋಗುವ ಆವರ್ತಗಳ ಗಣನೆಯಲ್ಲಿ ಕೆಲವೇ ಕೆಲವಾದರೂ, ಆ ಪಾತ್ರ ಇಡೀ ರಾಮಾಯಣ ಕಥನದಲ್ಲುಂಟುಮಾಡುವ ಪರಿಣಾಮ ನೋಡಿದರೆ, ಈ ಪಾತ್ರದ ಕುರಿತು ಅಷ್ಟಾಗಿ ಪರಿಶೀಲನೆ, ವಿಶ್ಲೇಷಣೆ ನಡೆದಿಲ್ಲವೆಂದೇ ಕಾಣುತ್ತದೆ. ಮತ್ತಷ್ಟು ಓದು »

26
ಏಪ್ರಿಲ್

ವಿಡಂಬನೆ: ಸಾಹಿತ್ಯ ಗದ್ದುಗೆ ಹಾಗೂ ಮಣ್ಣಂಗಟ್ಟಿ ಸಾಹಿತ್ಯ!

– ತುರುವೇಕೆರೆ ಪ್ರಸಾದ್

kannadaತರ್ಲೆಕ್ಯಾತನಳ್ಳಿ ಖ್ಯಾತ ಸಾಹಿತಿ ಅನಂತ ಜೋಷಿ ಮತ್ತು ತಾಲ್ಲೂಕ ಸಾಹಿತ್ಯ ಸಭೆಯ ನೂತನ ಅಧ್ಯಕ್ಷ ಗುದ್ಲಿಂಗ ಜಮಖಂಡಿ ಅವರ ಮಧ್ಯೆ ನಡೆದ ಫೋನ್ ಸಂಭಾಷಣೆ ಹೀಗಿದೆ:
‘ನಮಸ್ಕಾರ್ರೀ ! ನಾನ್ ಜಮಖಂಡಿ ಮಾತಾಡಕ್ ಹತ್ತೀನಿ’
‘ಓಹೋ! ಜಮಖಂಡಿ ಅವರು!ಏನ್ರಪ್ಪಾ! ಆರಾಮದೀರೇನು?’
‘ಹಾಂ! ಆರಾಮದೀನಿ..ವಿಷ್ಯ ತಿಳೀತೇನ್ರೀ ಎಪ್ಪಾ?’
‘ಯಾವ ವಿಷ್ಯ ಹೇಳಕ್ ಹತ್ತೀರಿ ನೀವು? ಕೊಶ್ನೆ ಪೇಪರ್ ಲೀಕಾಯ್ತಲ್ಲ ಅದಾ ? ಇಲ್ಲ ಯಡಿಯೂರಪ್ಪಗೆ ಅಧ್ಯಕ್ಷ ಪಟ್ಟ ಸಿಕ್ತಲ್ಲ ಅದಾ?’
‘ಏ ! ಅವೆಲ್ಲಾ ಹಳೇದಾತ್ ಬಿಡ್ರಿ, ಈಗ ನಂಗ್ ಸಾಹಿತ್ಯ ಸಭೆ ಅಧ್ಯಕ್ಷಗಿರಿ ಸಿಕ್ಕೈತೆ, ಮೊನ್ನೆ ಯುಗಾದಿ ಮುಂದ ಪೇಪರ್ನಾಗ್ ಬಂದಿತ್ತು, ನೀವು ನೋಡ್ಲಿಲ್ಲೇನು?’
‘ಅರೆ! ಹೌದಾ? ನಿಮ್ಗೆ ಅಧ್ಯಕ್ಷಗಿರಿ ಕಟ್ಯಾರಾ? ಅಂದ್ರೆ ಹಾರ ತುರಾಯಿ ಹಾಕಿಸ್ಕೊಳೋಕ್ ಕೊಳ್ ಚಾಚ್ಕಂಡ್ ಕುಂತ್ ಬಿಟ್ರಿ ಅನ್ನಿ, ಇಂದ್ರಾಬಾಯವ್ರು ನಮಗಾ ಒಂದ್ ಮಾತೂ ಕೇಳ್ದ, ಸಭೆನೂ ಕರೀದೆ ನಿಮ್ಮನ್ನ ಹೆಂಗ್ ಅಧ್ಯಕ್ಷ ಮಾಡಾರೆ?’
‘ನಿಮ್ಗೆ ಇದ್ ಕೇಳಿದ್ ಕೂಡ್ಲೆ ಹೊಟ್ಟೆನಾಗೆ ಮೆಣಸಿನಕಾಯ್ ಕಿವುಚಿದಂಗಾಗ್ತದೆ ಅಂತ ನಂಗೊತ್ತಿತ್ತು ಬಿಡ್ರಲಾ! ಅದೆಂಥ ಹೊಟ್ಟೆ ಉರೀನ್ರೀ ನಿಮ್ದು..! ಇನ್ನೊಬ್ರಿಗೆ ಒಳ್ಳೇದಾತು ಅಂದ್ರೆ ಸಹಿಸೋ ಮಂದಿ ಅಲ್ಲ ನೀವು’ ಮತ್ತಷ್ಟು ಓದು »

19
ಏಪ್ರಿಲ್

ಸೋಸುಕ (ಫಿಲ್ಟರ್)

– ಎಸ್ ಎನ್ ಸಿಂಹ, ಮೇಲುಕೋಟೆ

man-on-seesaw-with-heart-and-brainಕೋಪದ ಭರದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾಗಿರುತ್ತವೆ ಎಂದು ನೀವು ಈಗಲೂ ಭಾವಿಸುತ್ತೀರಾ? ಎಂದ.
ದೂರಾನ್ವಯದೋಷದಿಂದ ಕೂಡಿದೆಯೆಂಬಂತೆ ಭಾಸವಾಗುವ ಇಂತಹ ವಾಕ್ಯಗಳು ಸಾಮಾನ್ಯ ಜನರಿಗೆ ಒಂದೇ ಸಲಕ್ಕೆ ಅರ್ಥವಾಗುವುದಿಲ್ಲ.
ಅವಳಿಗೂ ಹಾಗೇ ಆಯಿತು. ರೈಲು ನಿಲ್ದಾಣದ ಸಿಮೆಂಟು ಬೆಂಚಿನ ಮೇಲೆ ಮಗುವಿನೊಂದಿಗೆ ಕುಳಿತಿದ್ದ ಅವಳು ಗಲಿಬಿಲಿಗೊಂಡು, ಏನು? ಎಂದಳು.
ಸಿಟ್ಟಿನಲ್ಲಿ ತಗೋಳೋ ತೀರ್ಮಾನಗಳು ಸರಿಯಾಗಿರುತ್ವೆ ಅಂತೀರಾ? ಅಂದ.
ಅದಕ್ಕೇನೂ ಉತ್ತರಿಸದೆ, ‘ಊಟದ ಪಾರ್ಸೆಲ್ ಜೊತೆ ಚಾಕಲೇಟೂ ಬೇಕಂತೆ ಅಂತ ಡ್ಯಾಡಿಗೆ ಹೇಳಿ ತೆಗೆಸ್ಕೊಂ ಬಾ’ ಎಂದು ತನ್ನ ಮಗುವಿಗೆ ಹೇಳಿ ಕಳಿಸಿದಳು. ಖುಷಿಯಿಂದ ಓಡಿತು ಮಗು.
ಇವನ ಕಣ್ಣುಗಳಲ್ಲಿ ಮಾತ್ರ ಅದೇ ಪ್ರಶ್ನೆ ಸ್ಥಾಯಿಯಾಗಿ ನಿಂತಿದೆ.
ಬಲವಂತವಾಗಿ ನಗುತ್ತಾ, ನೀವು ಈಗಲೂ ಹಾಗೇ ಒಗಟಾಗಿಯೇ ಮಾತಾಡುತ್ತೀರಿ ಅಂದಳು. ಮತ್ತಷ್ಟು ಓದು »

15
ಏಪ್ರಿಲ್

ನೂರು ಸಾಲಿನ ಸರಳ (ಮಿನಿ) ರಾಮಾಯಣ ಕಾವ್ಯ…

ನಾಗೇಶ ಮೈಸೂರು

Ram-Vs-Ravan-14

ಶ್ರೀ ರಾಮ ಸೀತೆಯ ಕಥೆ ನಮಗೇನು ಹೊಸದಲ್ಲ ಬಿಡಿ.. ಎಲ್ಲಾ ಭಾಷೆಗಳಲ್ಲಿ ಖಂಡುಗಗಟ್ಟಲೆ ಕಥೆ, ಕಾವ್ಯಗಳು ಸಿಕ್ಕುತ್ತವೆ. ಆದರಿದು ಆಧುನಿಕ ವೇಗದ ಜಗ.. ಎಲ್ಲಾ ಸಂಕ್ಷಿಪ್ತದಲ್ಲಿ, ಫಾಸ್ಟ್ ಪುಡ್ಡಿನ ಹಾಗೆ ಶೀಘ್ರಗತಿಯಲ್ಲಿ ಸಿಗುವಂತಿದ್ದರೆ ಅದನ್ನೇ ಬಯಸುವ ಗ್ರಾಹಕ ವರ್ಗವೂ ಸಾಕಷ್ಟು ದೊಡ್ಡದಿದೆ. ಇನ್ನು ಮಿಕ್ಕವರಿಗೆ ದೊಡ್ಡದು, ಚಿಕ್ಕದು ಎನ್ನುವ ಜಿಜ್ಞಾಸೆಗಿಂತ ಸಮಯದ ಅಭಾವ. ಇನ್ನು ಕಿರಿಯರ ವಿಷಯಕ್ಕೆ ಬಂದರೆ ಅವರಿಗೆ ತೀರಾ ಭಾರವಾಗದ ರೀತಿಯಲ್ಲಿ ಅರುಹಬೇಕಾದ ಅನಿವಾರ್ಯ.. ಇದನ್ನೆಲ್ಲಾ ಗಮನದಲ್ಲಿರಿಸಿಕೊಂಡು ಹೆಣೆದ ನೂರು ಸಾಲಿನ, ಚತುಷ್ಪಾದಿ ಅವತಾರದಲ್ಲಿರುವ ಕಾವ್ಯರೂಪಿ ರಾಮಾಯಣ ಸಾರ – ಈ ಶ್ರೀರಾಮ ಚರಿತ. ನರಮಾನವನಾಗಿ ಪಡಿಪಾಟಲು ಪಟ್ಟನೆನ್ನುವ ಹಿನ್ನಲೆಯನ್ನು ಅಂತರ್ಗತವಾಗಿಸಿಕೊಂಡು ಮೂಡಿಬಂದ ಕಥಾಲಹರಿ. ಸರಳ ಲಹರಿ ಹಿತವಾಗಿ ನುಡಿವಂತಿದ್ದು ಮುದ ತಂದರೆ ಧನ್ಯ .

ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು

ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು

ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ

ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || ೦೧ ||

ಮತ್ತಷ್ಟು ಓದು »

15
ಏಪ್ರಿಲ್

ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು…!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

The-Eyes-Have-It-Postರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೇ. ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು. ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದ ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ. ರೈಲು ಬಿಡುವವರೆಗೂ ಅವಳಿಗೆ ನಿಮಿಷಕ್ಕೊಂದು ಎಚ್ಚರಿಕೆ ಕೊಡುತ್ತ ನಿಂತಿದ್ದ ಆಕೆಯ ಪೋಷಕರ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು. “ಬ್ಯಾಗುಗಳನ್ನು ಕಾಲ ಬಳಿಯೇ ಇರಿಸಿಕೋ, ಕಿಟಕಿಯಿಂದ ಕೈ ಹೊರಗೆಹಾಕಬೇಡ, ಹುಶಾರು, ಅಪರಿಚಿತರೊಡನೆ ಮಾತನಾಡಬೇಡ” ಹೀಗೆ ಕೆಲವು ಸಲಹೆಗಳನ್ನು ಆಕೆಯ ಹೆತ್ತವರು ನೀಡುತ್ತಿರುವಂತೆಯೇ ರೈಲು ಹೊರಟಿತು. ಮೊದಲೇ ನಾನು ಕುರುಡ. ಬೆಳಕು ಮತ್ತು ಕತ್ತಲುಗಳನ್ನು ಹೊರತುಪಡಿಸಿ ಇನ್ನೇನನ್ನೂ ಗುರುತಿಸಲು ನನ್ನಿಂದಾಗುತ್ತಿರಲಿಲ್ಲ. ಹಾಗಾಗಿ ಆ ಹುಡುಗಿ ನೋಡಲು ಹೇಗಿರಬಹುದೆಂದು ಊಹಿಸುವುದು ನನ್ನಿಂದ ಶಕ್ಯವಾಗಲಿಲ್ಲ. ಆಕೆಯ ಚಪ್ಪಲಿಯಿಂದ ಬರುತ್ತಿದ್ದ ಸಪ್ಪಳದಿಂದಾಗಿ ಆಕೆ ಹವಾಯಿ   ಚಪ್ಪಲಿಗಳನ್ನು   ಧರಿಸಿರಬೇಕೆನ್ನುವುದನ್ನು   ಅರಿತೆ.   ಆಕೆಯದ್ದೋ ಕೋಗಿಲೆಯಂತಹ ಮಧುರ ಧ್ವನಿ.  ಹೇಗಾದರೂ  ಸರಿ,  ಆಕೆಯ  ರೂಪವನ್ನು ಗ್ರಹಿಸಬೇಕೆಂದುಕೊಂಡೆನಾದರೂ  ನನ್ನ ಸಹಾಯಕ್ಕೆ ಅಲ್ಲಿ ಯಾರೂ ಇರದಿದ್ದದ್ದು ನನಗೆ ಕೊಂಚ ಬೇಸರವನ್ನುಂಟು ಮಾಡಿತ್ತು. ಮತ್ತಷ್ಟು ಓದು »

7
ಏಪ್ರಿಲ್

ಮತ್ತೊಮ್ಮೆ ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

anton-chekhov-1-728ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ ವಾಲ್ಡೆರೆವ್ ಮತ್ತೊಮ್ಮೆ ” ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ”ಎಂದು ಪ್ರಶ್ನಿಸಿದ. ಮತ್ತಷ್ಟು ಓದು »