ಕರ್ನಾಟಕ ಬಿ.ಜೆ.ಪಿ ನಾಯಕರೇ ಏನ್ರೀ ನಿಮ್ ಅವಸ್ಥೆ…?
ಅತೀ ಪ್ರಸಿದ್ದಿ ಪಡೆದ ಗಾದೆ ಮಾತೊಂದಿದೆ “ನಾಯಿ ಬಾಲ ಯಾವತ್ತಿದ್ರೂ ಡೊಂಕೆ ” ಈ ಮಾತು ಕರ್ನಾಟಕದ ಬಿ.ಜೆ.ಪಿ ನಾಯಕರಿಗೆ ಅತ್ಯಂತ ಹತ್ತಿರದ ಗಾದೆ ಮಾತು .. ಒಂದೇ ಒಂದು ವ್ಯತ್ಯಾಸ ಅಂದ್ರೆ ಇಲ್ಲಿ ನಾಯಿಯ ಬಾಲ ಮಾತ್ರ ಡೊಂಕು ಅಲ್ಲರೀ.. ನಾಯಿಯೇ ಡೊಂಕಾಗಿಬಿಟ್ಟಿದೆ. ಇವರ ಸ್ಟೋರಿನೇ ವಿಚಿತ್ರ ಮಾದ್ಯಮಗಳಿಗೆ ಏನ್ ನ್ಯೂಸ್ ಸಿಕ್ಕಿಲ್ಲ ಅಂದ್ರೆ, ಯಾಕ್ರಿ ಸುಮ್ನೆ ಕುತ್ಕೊತಿರಾ ನಿಮಗೆ ನ್ಯೂಸ್ ತಾನೇ …? ನಾವ್ ಕೊಡ್ತಿವ್ರಿ ಅಂತ ಬರೋ ವಿಶಾಲ ಮನಸ್ಸಿನ ನಾಚಿಕೆ ಇಲ್ಲದ ನಾಯಕರು.ಪಾಪ ನಮ್ ಜನ ಬಿ.ಜೆ.ಪಿ ಯವರನ್ನ ವಿರೋದ ಪಕ್ಷದಲ್ಲಿ ನೋಡಿ ನೋಡಿ ಬೇಸತ್ತು ಇವರು ಒಂದು 5 ವರ್ಷ ಆಡಳಿತ ಮಾಡ್ಲಿ ಬಿಡಿ… ಅಂಥ ಇವರನ್ನ ಆಡಳಿತಕ್ಕೆ ತಂದ್ರು, ಆದರೆ ಈ ನಾಯಕರು ಕೊಟ್ಟ ಆಡಳಿತ 100 ವರುಷ ಕಳೆದರೂ ಮರೆಯಲು ಸಾದ್ಯವಾಗದ ಆಡಳಿತ. (ದಯವಿಟ್ಟು ಕ್ಷಮಿಸಿ ಓದುಗರೇ “ಅವರು-ಇವರು” ಪದವನ್ನ ಇಲ್ಲಿ ಬಳಸಿದರೆ ಆ ಪದಕ್ಕೆ ಇರುವ ಗೌರವ ಸ್ವಲ್ಪ ಕಡಿಮೆ ಆಗಬಹುದು ಅದ್ದರಿಂದ ಈ ಪದವನ್ನ ಇಲ್ಲಿ ನಿಷೇದಿಸಲಾಗಿದೆ) ಇವರಲ್ಲಿ ಒಬ್ಬ ಬರೋಬ್ಬರಿ ರಾಜ್ಯದ ಸಂಪತ್ತನ್ನ ದೋಚುತ್ತಾನೆ. ಇನ್ನೊಬ್ಬ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಮಾಡುತ್ತಾನೆ, ಇನ್ನೊಬ್ಬ ನರ್ಸ್ ಜೊತೆ ಮೊಬೈಲ್ ನಲ್ಲಿ ಹರಿದಾಡುತ್ತಾನೆ.
ಇವರೆಲ್ಲಾ ನಮ್ ನಾಯಕ್ರು. ಕುಟುಂಬ ಕಲ್ಯಾಣ ಯೋಜನೆಯನ್ನ ಪಾಲಿಸುವವನು ರಾಜ್ಯದ ಸಂಪತ್ತನ್ನ ತನ್ನ ಪ್ರೀತಿಯ ಕುಟುಂಬದವರ ಹೆಸರಲ್ಲಿ ಮಾಡಿ ಕೊಟ್ಟಂತಹ ಪುಣ್ಯಾತ್ಮ, ಇದೆಲ್ಲವನ್ನು ದಾಟಿ ನಿನ್ನೆ ನಮ್ಮ ತ್ರಿಮೂರ್ತಿ ಮಂತ್ರಿಗಳು ಸದನದ ಕಲಾಪ ನಡಯುತ್ತಿದ್ದ ಸಂದರ್ಭದಲ್ಲೇ “ಬ್ಲೂ ಫಿಲಂ” ನೋಡಿ ಸಿಕ್ಕಿಬಿದ್ದ ನಾಮಧೇಯ ನಾಯಕ್ರು.. ಯಾಕ್ರಿ ಹಿಂಗ್ ಮಾಡ್ತಿದ್ದೀರ..? ಯಾವಾಗ ಸಾರ್ ನೀವೆಲ್ಲಾ ಸರಿ ಆಗ್ತೀರಾ ? ಗೌರವಾನ್ವಿತ ಶ್ರೀ ಅಟಲ್ ಬಿಹಾರಿ ವಾಜಪಾಯಿ ಕಟ್ಟಿ ಬೆಳೆಸಿದ ಬಿ.ಜೆ.ಪಿ ಪಕ್ಷವನ್ನ ಯಾವ ಮಟ್ಟಕ್ಕೆ ತಂದು ಬಿಟ್ರಿ ನೀವು.. ನಿಮ್ಮನ್ನ ಒಂದು ವಿಷಯದಲ್ಲಂತೂ ಅಭಿನಂಧಿಸಬೇಕ್ರಿ.,!! 50 ವರುಷದಲ್ಲಿ ಮಾಡಬೇಕಾದ ಸಾಧನೆಯನ್ನ ಕೇವಲ 3 ವರುಷದಲ್ಲೇ ಸಾಧಿಸಿದ್ದೀರ, ಅಭಿನಂದನೆಗಳು ಬಿ.ಜೆ.ಪಿ ನಾಯಕರೇ ಅಭಿನಂದನೆಗಳು..!! ಮತ್ತಷ್ಟು ಓದು 
ದೇಶ – ಭಾಷೆಗಳ ನಡುವೆ
– ರಾಕೇಶ್ ಶೆಟ್ಟಿ
ಆಗ ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಪ್ರಧಾನಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿಗಳು.ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!
ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ “ಚಿಂತನಗಂಗಾ” ಪುಸ್ತಕದ ಸುತ್ತ ಅಂತರ್ಜಾಲದಲ್ಲಿ ನಡೆಯುತ್ತಿರುವ ಚರ್ಚೆ ಫ಼ಾಲೋ ಮಾಡುವಾಗ “ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ” ಎನ್ನುವ ಪದ ಬಳಕೆ ನೋಡಿ ನಗು ಬಂತು.ಅಸಲಿಗೆ ಯಾವುದೇ ಸಂಘಟನೆ,ಸ್ವಸ್ಥ ಸಮಾಜದಲ್ಲಿ ವಿಚಾರ ಸ್ವಾತಂತ್ರ್ಯವಿರಲೇಬೇಕು ಅದು ಇರಲಿ ಅಂತ ಕೇಳುವುದು ತಪ್ಪೇನು ಅಲ್ಲ.ಆದರೆ ವಿಚಾರ ಸ್ವಾತಂತ್ರ್ಯದ ಬಗ್ಗೆ ಕೇಳಿದವರು ಯಾರು ಅನ್ನುವುದು ಮುಖ್ಯವಾಗುತ್ತದಲ್ಲವೇ? ವೇದಾಂತ ಇರೋದು ಬೇರೆಯವ್ರಿಗೆ ಹೇಳೋಕ್ ಮಾತ್ರ ಅಂದುಕೊಂಡವರಿಗಾಗಿಯೇ ಗಾಂಧೀಜಿಯವರು ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅಂದಿದ್ದು.
ಅಪಘಾತ ಎಂಬ ಬಹಿರಂಗ ಹತ್ಯೆ
– ಚಾಮರಾಜ ಸವಡಿ

ಪುಣೆಯಲ್ಲಿ ಬುಧವಾರ ಸಂಭವಿಸಿದ ಘಟನೆ ನಿರ್ಲಕ್ಷ್ಯದ ಚಾಲನೆ ಅಥವಾ ರೋಷಾವೇಶದ ಚಾಲನೆ ಕುರಿತ ಪ್ರಶ್ನೆಗಳನ್ನು ಮತ್ತೆ ಎತ್ತಿದೆ. ತಲೆ ಕೆಟ್ಟ ಚಾಲಕನೊಬ್ಬ ಸರ್ಕಾರಿ ಬಸ್ಸನ್ನು ಮನಸೋಇಚ್ಛೆ ಚಾಲನೆ ಮಾಡಿ ೧೦ ಜನ ಅಮಾಯಕರ ಸಾವಿಗೆ ಹಾಗೂ ೩೫ಕ್ಕೂ ಹೆಚ್ಚು ಜನ ಗಾಯಗೊಳ್ಳಲು ಕಾರಣನಾಗಿದ್ದಾನೆ.
ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರುವುದೇಕೆ?
ನಿಜ, ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ, ಭಾವಾವೇಶಕ್ಕೆ ಒಳಗಾಗಿ ರಸ್ತೆಗಿಳಿಯುವ ಮನಃಸ್ಥಿತಿ ಎಂಥದು? ಅದರಲ್ಲೂ ಪಕ್ಕದಲ್ಲಿ ಹಾಗೂ ಎದುರು ಇರುವ ವಾಹನಗಳನ್ನು ಹಿಂದಿಕ್ಕಿ ಹೋಗಬೇಕೆನ್ನುವ ಚಪಲ ಏಕೆ ಉಂಟಾಗುತ್ತದೆ? ರಸ್ತೆ ಸೂಚನೆಗಳನ್ನು ಉಲ್ಲಂಘಿಸುವ, ಇತರರ ಸರಾಗ ಚಲನೆಗೆ ಅಡ್ಡಿಪಡಿಸುವ ಮನಃಸ್ಥಿತಿ ಏಕೆ ಮೂಡುತ್ತದೆ?
ಹೆಚ್ಚುತ್ತಿರುವ ಒತ್ತಡ
ಇತ್ತೀಚಿನ ದಿನಗಳಲ್ಲಿ ಒತ್ತಡ ಪ್ರಮಾಣ ಹೆಚ್ಚುತ್ತಿದೆ. ಕೆಲಸದ ಸ್ಥಳಗಳ ಒತ್ತಡ ಬಹಳಷ್ಟು ಸಾರಿ ಇಂಥ ತಲೆಕೆಟ್ಟ ನಡತೆಗಳಿಗೆ ಕಾರಣವಾಗಿದ್ದೂ ಉಂಟು. ಮೇಲಧಿಕಾರಿಗಳ ಒತ್ತಡ, ಹಿಂಸೆ, ಸಹೋದ್ಯೋಗಿಗಳ ಕಿರಿಕಿರಿ, ಕೆಲಸದ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ, ಅಸ್ತವ್ಯಸ್ತ ಕೆಲಸದ ಅವಧಿ, ರಜೆ ಕೊಡದಿರುವುದು, ಸರಿಯಾದ ವೇತನ/ಸೌಲಭ್ಯ ನೀಡದಿರುವುದು- ಹೀಗೆ ಹಲವಾರು ಕಾರಣಗಳಿಂದ ಒತ್ತಡ ಉಂಟಾಗುತ್ತದೆ. ಇದಕ್ಕೆ ವೈಯಕ್ತಿಕ ಸಮಸ್ಯೆಗಳ ಒತ್ತಡವೂ ಸೇರುತ್ತದೆ. ಮತ್ತಷ್ಟು ಓದು 
ಏನ್ ಗುರು ರಾಜಕೀಯನಾ?
-ಅಶ್ವಿನ್ ಎಸ್ ಅಮೀನ್
ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ.
ಲೇಖನ ಆರಂಭದಲ್ಲಿ ಅರೆಸ್ಸಿಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.! ಮತ್ತಷ್ಟು ಓದು 
ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ಕಂಡುಬರುವಂತಹ ಸಾಮ್ಯತೆಗಳು
-ರಾಜುವಿನಯ್ ದಾವಣಗೆರೆ
ಇತ್ತೀಚಿಗೆ ನಾವು ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ.ಇಂದಿನ ರಾಜಕೀಯ ವ್ಯವಸ್ಥೆಗೂ, ಇಂದಿನ ಮಾಧ್ಯಮ (ದೃಶ್ಯ)ಗಳಿಗೂ ವ್ಯತ್ಯಾಸಗಳೇ ಕಾಣುತ್ತಿಲ್ಲ.
———–*ಪಕ್ಷಾಂತರ*———–
ನಿಲುಮೆ ಮಂಥನ
-ತ್ರಿವೇಣಿ, ಮ್ಯೆಸೂರು
ನಿಲುಮೆಯ ಆತ್ಮೀಯ ಬೆಂಬಲಿಗರೇ,
ನಿಲುಮೆಯು ಸತತ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕನ್ನಡ ಸಾರಸತ್ವ ಲೋಕದಲ್ಲಿ ಸತತವಾಗಿ ಲೇಖನ, ಕವನ, ಚರ್ಚೆ, ಪ್ರಚಲಿತ ವಿದ್ಯಮಾನ, ಸಂಸ್ಕೃತಿ, ಕನ್ನಡ, ಕರ್ನಾಟಕ, ಭಾರತ, ವಿಜ್ಣಾನ, ಕನ್ನಡಿಗರಿಗೆ ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತ ಬರುತ್ತಲಿದೆ. ಇದಕ್ಕೆ ಬೆನ್ನುತಟ್ಟಲು ನಿಮ್ಮೆಲ್ಲರ ಬೆಂಬಲವಿಲ್ಲದೆ ಅದು ಸಾಧ್ಯವಾಗಿಯೂ ಇಲ್ಲ, ಅನ್ನೋದು ಮರೆತಿಲ್ಲ. ಅದೆಷ್ಟೊ ಲಕ್ಷ ಓದುಗರು ನಿಲುಮೆಯೊಂದಿಗೆ ಅವಿನಾನುಭಾವ ಸಂಬಂಧ ಬೆಸೆದುಕೊಂಡಿರುವರು. ಈ ಹಂತಕ್ಕೆ ನಿಲುಮೆ ಬೆಳೆದು ಬರಲು ಹಾದಿಯೇನು ಅಷ್ಟು ಸುಲಭವಾಗೇನು ಇರಲಿಲ್ಲ. ಮೊದಲಿಗೆ ಸ್ನೇಹಿತರ ಸಣ್ಣ ಗುಂಪೊಂದು ವರ್ಡ್ ಪ್ರೆಸ್ಸಿನಲ್ಲಿ ತನ್ನ ಖಾತೆಯನ್ನು ತೆರೆದಾಗ ಅರವಿಂದ್ ಎಂಬುವವರ ಮೊದಲ ಲೇಖನ ರಂಗೋಲಿ.. ಚಿತ್ತ ಚಿತ್ತಾರಗಳ ನಡುವೆ ಎಂಬ ಶೀರ್ಷಿಕೆಯೊಂದಿಗೆ ೫ನೇ ಅಕ್ಟೋಬರ್ ೨೦೧೦ ಪ್ರಕಟವಾಯ್ತು. ಅಸಲಿಗೆ ನಿಲುಮೆ ನಾನು ನೋಡಿದ್ದು, ರಂಗೋಲಿಗಳು ಎಂದು ಗೂಗಲಿನಲ್ಲಿ ಹುಡುಕಲು ಹೋದಾಗ ನಾನು ಹುಡುಕ ಹೊದದ್ದೇ ಒಂದು, ಸಿಕ್ಕಿದ್ದು ಮಾತ್ರ ಭರಪೂರ ರೋಮಾಂಚನ, ನಿಲುಮೆ ಹೆಸರು ಯಾಕೋ ಅಂದು ಬಹಳ ಇಷ್ಟವಾಗಿತ್ತು. ನಂತರ ದಿನಕ್ಕೊಂದರಂತೆ ಅತ್ಯುತ್ತಮ ಲೇಖನಗಳು ಬರತೊಡಗಿದಾಗ ಆ ಬ್ಲಾಗ್ ದಿನಕ್ಕೆ ಒಂದೆರಡು ಸಾರಿಯಾದರೂ ತೆರೆಯದೆ ಇರುವ ಮನಸ್ಸಾಗದೇ ಇರಲಿಲ್ಲ. ಆ ಲೇಖನಗಳ ಸ್ಪೂರ್ತಿಯಿಂದ ನನ್ನಲ್ಲು ಬರೆಯುವ ಅಮಿತ ಉತ್ಸಾಹವಿದ್ದರೂ ಬರೆದದ್ದೂ ಮಾತ್ರ ಈಗಲೇ, ನನ್ನಂತವಳಲ್ಲಿ ಲೇಖಕಿಯನ್ನು ಬೆಳೆಸಿದ ನಿಲುಮೆಗೆ ಅನಂತ ಧನ್ಯವಾದಗಳು. ನನ್ನ ನೆನಪಂತೆ ದಿನಕ್ಕೆ ಕೆಲವೇ ಕೆಲವು ಬೆಂಬಲಿಗರು ಬಂದು ನಿಲುಮೆಯ ಕದ ತಟ್ಟಿ ಹೋಗುತ್ತಿದ್ದರು. ಅಂದಿಗೆ ದಿನದ ಭೇಟಿಗಳು ಹೆಚ್ಚೆಂದರೆ ನೂರರ ಆಸುಪಾಸಿನಲ್ಲಿ ಓಡಾಡುತ್ತಿತ್ತು.
ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.
– ಪೂರ್ಣಚಂದ್ರ
(ಇತ್ತೀಚಿಗೆ ದಿನೇಶ್ ಅಮಿನ್ ಮಟ್ಟು ಅವರು ಬರೆದ ಬಹುಚರ್ಚಿತ ಲೇಖನಕ್ಕೆ ಪೂರ್ಣಚಂದ್ರ ಅವರು ಪ್ರತಿಕ್ರಿಯಯನ್ನು ಕಳುಹಿಸಿದ್ದಾರೆ. ಓದಿ..)
ಪ್ರೀತಿಯ ಮಟ್ಟು ಸರ್,
ನಿಮಗೊಂದು ಪ್ರೀತಿಯ ಬಹಿರಂಗ ಪತ್ರ.
ನಮಸ್ಕಾರಗಳು. ನನ್ನ ಪರಿಚಯ ನಿಮಗೆ ಇಲ್ಲ ಎಂದು ಕಾಣುತ್ತೆ. ಆದರೆ, ನಿಮ್ಮ ಪರಿಚಯ ನನಗೆ ೧೦ ವರ್ಷದ್ದು. ನಿಮ್ಮ ಅಂಕಣಗಳನ್ನು ಓದುತ್ತಾ ಬೆಳೆದವನು ನಾನು.
ವಿವೇಕಾನಂದರ ಬಗ್ಗೆ ನೀವು ಬರೆದ ಲೇಖನ ಓದಿದ ಬಳಿಕ, ನನಗನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಅಷ್ಟರಲ್ಲಿಯೇ ವಿವೇಕಾನಂದರ ಪರ ಎಂದು ಭ್ರಮಿಸಿರುವ, ಭಾವಿಸಿಕೊಂಡಿರುವ ಬಲಪಂಥೀಯ ಮೂಲಭೂತವಾದಿಗಳು ನಿಮ್ಮ ವಿರುದ್ಧ ಕತ್ತಿ ಬೀಸಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ, ತಾವು ಮಟ್ಟು ಪರ(ವಿವೇಕನಂದ ಪರ ಅಲ್ಲ) ಎಂದು ಭ್ರಮಿಸಿರುವ ಎಡಪಂಥೀಯ ಹಾಗೂ ಪ್ರಗತಿಪರ ಮೂಲಭೂತವಾದಿಗಳು ಕೂಡ ತಮ್ಮ ಕತ್ತಿಗೆ ಸಾಣೆ ಹಿಡಿಯಲಾರಂಭಿಸಿದರು.
ಈ ಎರಡೂ ವರ್ಗದ ಮೂಲಭೂತವಾದಿಗಳು ಶಿವಮೊಗ್ಗ ಮತ್ತು ಬೆಂಗಳೂರಿನ ಬೀದಿಗಳಲ್ಲಿ, ನಿಮ್ಮ ಕಚೇರಿ ಎದುರು, ಬ್ಲಾಗ್‌ಗಳಲ್ಲಿ ಕತ್ತಿ ಬೀಸಾಡುವಾಗ ಮಧ್ಯೆ ಪ್ರವೇಶಿಸಲು ಭಯವಾಯಿತು. ಯಾರದ್ದಾದರೂ ಕತ್ತಿ ನನ್ನನ್ನೇ ತಿವಿದುಬಿಡಬಹುದು ಎಂದು ಸುಮ್ಮನಾದೆ. ಈಟಿ, ಭರ್ಜಿ, ಕತ್ತಿ ಗುರಾಣಿಗಳ ಅಬ್ಬರ ಕಡಿಮೆಯಾಗಿದೆ. ಹಾಗಾಗಿ ಇದು ಸೂಕ್ತ ಸಮಯ ಎಂದು ನನಗನಿಸಿದ್ದ ಕೆಲ ಸಂಗತಿಗಳನ್ನು ಹೇಳಲು ಪ್ರಯತ್ನಿಸುವೆ. ಮತ್ತಷ್ಟು ಓದು 
ಈ ಪ್ರೀತಿ…!!
– ಸುಷ್ಮಾ ಮೂಡಬಿದ್ರಿ
ಇಬ್ಬರ ಮದ್ಯದಲ್ಲೂ ನೀರವ ಮೌನ…ಆಗತಾನೆ ಹೊರಗೆ ಮಳೆ ತಣ್ಣಗೆ ಆರಂಭವಾಗಿ, ಭೋರ್ಗರೆಯುತ್ತಾ ಸುರಿಯಲಾರಂಭಿಸಿತು. ಬೀಸಿ ಬಂದ ಗಾಳಿಗೆ ಕಿಟಕಿ ಪರದೆಗಳೆಲ್ಲಾ ನೃತ್ಯವಾಡುತ್ತಿತ್ತು…ಕಿಟಕಿಯಿಂದ ಹೊರಗೆ ದೂರದ ಅದ್ಯಾವ ಬಿಂದುಗೋ ದೃಷ್ಟಿ ಹಾಯಿಸುತ್ತಾ ನಿಂತಿದ್ದ..ಮೆಲ್ಲಗೆ “ಸುಂಜೂ….”ಎಂದೆ..ರಭಸದ ಮಳೆ ಸದ್ದಿಗೋ ಏನೋ ಕೇಳಿಸಿಲ್ಲವೆಂಬಂತೆ ನಿಂತೇ ಇದ್ದ ಅಂವ..ಮೌನ ಮುರಿಯಲಾಗಲಿಲ್ಲ ನನ್ನಿಂದ..ಶೂನ್ಯದೆಡೆಗಿನ ಅವನ ನೋಟ ಕದಲಿಸಲಾಗಲಿಲ್ಲ..ಹತ್ತಿರ ಬಂದು ನಿಂತೆ..ಈಗ ನೋಡಿದ..ಕಂಗಳು ಕಾಂತಿಹೀನ ಅನಿಸಿತು.
“ಮಾತಡೋಲ್ಲವಾ….”ಎಂದೆ..
ಮತ್ತೇ ದೃಷ್ಟಿ ಬದಲಿಸಿದ…ಈ ಬಗೆಯ ಮೌನ ಸಹಿಸಲಾಗಲಿಲ್ಲ…
“ಪ್ಲೀಸ್..”ಎಂದ ನನ್ನ ಕಣ್ಣಲ್ಲಿ ನೀರಾಡಿತ್ತು…
ಅದೇನನಿಸಿತೋ..”ಸುಶೀ..”ಕರೆದ…ಹ್ಞು0 ಗುಟ್ಟಿದೆ…
“ಯೂನಿವರ್ಸಲ್ ಬ್ರದರ್‌ಹುಡ್” ಬರೀ ಬೂಟಾಟಿಕೆಯೇ ?
-ಸಾಗರ್ ಮೈಸೂರು
ಸ್ವಾಮೀ,
ಯಾಕೆ ಮುಗ್ಧ ಜನರ ತಲೆಯಲ್ಲಿ ವಿಷದ ಬೀಜ ಬಿತ್ತುತ್ತಿದ್ದೀರಿ? ನೀಮಗೂ ಭಯೋತ್ಪಾದಕರನ್ನು ಹುಟ್ಟು ಹಾಕುವ ಮುಲ್ಲಾ ಗಳಿಗೂ ಅಥವಾ ಭಾಷಾ ದುರಭಿಮಾನಿಗಳಿಗೂ ಏನು ವ್ಯತ್ಯಾಸ? ಸಾಮರಸ್ಯದಿಂದ ಬದುಕುವ ಬಗೆ ಹೇಗೆಂದು ತಿಳಿದಿದ್ದರೆ ಬರೆಯಿರಿ. ಇಲ್ಲಾಂದ್ರೆ ಸುಮ್ಮನಿರಿ. ನಿಮ್ಮನ್ತವರನ್ತು ಬರೆದು , ಬೆಂಕಿ ಹಚ್ಚಿ ತಣ್ಣಗೆ ಕುಳಿತು ಚಂದ ನೋಡುತ್ತಿರಿ. ಅಮಾಯಕರು ನಿಮ್ಮಿಂದ ಪ್ರೇರಿತರಾಗಿ ಯಾರದೋ ಮೈಮೇಲೆ ಬಿದ್ದು ಸಮಾಜದ ಶಾಂತಿ ಕದದುತ್ತಾರೆ ಅಥವಾ ಜೀವ ಬಿಡುತ್ತಾರೆ. ದುರಭಿಮಾನ, ಭಯೋತ್ಪಾದನೆ ಹುಟ್ಟುವುದು ಮೊದಲು ಮನಸ್ಸಿನಲ್ಲಿ. ಪ್ರೇರಿತರದವರು ಕೆಲವರು ಚಾಕು ಬಳಸುತ್ತಾರೆ, ಕೆಲವರು ಬಾಂಬು ಹಾಕುತ್ತಾರೆ, ಅವರವರ ಯೋಗ್ಯತೆಗೆ ತಕ್ಕಂತೆ. ನಿಮ್ಮಂಥವರು ಚಂದ ನೋಡುತ್ತೀರಿ.
“ಬೆಂಗಳೂರಿನ ಜುಟ್ಟು ಈಗಾಗಲೇ ರೆಡ್ಡಿಗಳ ಕೈಯ್ಯಿಗೆ ಕೊಟ್ಟಾಗಿದೆ” ಎಂದು ಮಹಾನ್ ಮೇಧಾವಿಯೊಬ್ಬರು (ಹಾಗೆಂದು ತಿಳಿದ) ಹೇಳಿದಾಗ ಅದ್ಯಾವನೋ ‘ವಿಷ್ಣು’ ಎಂಬುವವ ನೀಡಿದ್ದ ‘ಪ್ರತಿಕ್ರಿಯೆ’ ಅದು! ಹೌದಾ?! ಅದು ನಿಜಾನಾ? ನಮ್ಮ ಬೆಂಗಳೂರನ್ನ ನಿಜವಾಗಿಯೂ ‘ಅನ್ಯರು’, ‘ಕನ್ನಡೇತರರು’ ಆಳುತ್ತಿದ್ದಾರಾ ಎಂಬ ಪ್ರಶ್ನೆಯನ್ನ ನಮಗೆ ನಾವೇ ಹಾಕಿಕೊಂಡು serious ಆಗಿ ‘ಪರೀಕ್ಷಿಸಲು’ ಹೊರಟರೆ ಆ ‘ವಿಷ್ಣು’ ಎಂಬುವವನ ‘ಅಡ್ರಸ್ಸ್ ಹುಡುಕು’ವ ಮನಸ್ಸಾಗುತ್ತದೆ! ಅವನಿಗೊಂದು ವಿಶೇಷವಾದ ‘ದೊಣ್ಣೆ’ ರೆಡಿಮಾಡಿಸುವ ಕನಸು ಮೂಡುತ್ತದೆ!! ಆ ಮೇಧಾವಿ ಎಂಬ ಪತ್ರಕರ್ತ ಯಾವಾಗ ನೋಡಿದರೂ ‘ಭಾರತ’, ‘ಭಾರತೀಯತೆ’ ಎಂದು ಕಿರುಚಾಡುವವ. ಅಂಥವನೇ “ಪರಭಾಷಿಕರನ್ನ ಮಟ್ಟ ಹಾಕದಿದ್ದರೆ ಅಪಾಯ ತಪ್ಪಿದ್ದಲ್ಲ” ಎಂಬ ಸತ್ಯವನ್ನ ಕಂಡುಕೊಂಡಿದ್ದಾನೆ ಎಂದರೆ, ಅದರ ಮಹತ್ವವನ್ನ ನೀವೇ ಅರ್ಥಮಾಡಿಕೊಳ್ಳಿ.






