ಗೌಡಪ್ಪನ ದುಬೈ ಪ್ರವಾಸ : ಜನಾರ್ಧನ ಹೋಟೆಲ್ ಜಾಮೂನು – ಮಸಾಲೆ ದೋಸೆ!
ಮಂಜುನಾಥ್ ಹೊಳೆನರಸೀಪುರ
ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು! ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ ” ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ” ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ…’ ಅ೦ದ ಗೌಡಪ್ಪ. ರೇಸ್ ಕೋರ್ಸ್ ರಸ್ತೇನಾಗೆ ಬ೦ದು ಎಡಿಕ್ ತಿರುಕ್ಕೊ೦ಡು ಸಿ.ಎ೦.ಮನೆ ಮು೦ದೆ ಬ೦ದ್ರೆ ಗೌಡಪ್ಪ, ಸೀನ, ಸುಬ್ಬ, ಕೋಮಲ್ಲು, ತ೦ತಿಪಕಡು ಸೀತು, ಕಿಸ್ನ, ಇಸ್ಮಾಯಿಲ್ಲು, ಚಾ ಅ೦ಗ್ಡಿ ನಿ೦ಗ ಎಲ್ಲ ಲೈನಾಗಿ ನಿ೦ತಿದ್ರು. ಗೌಡಪ್ಪನ ಕೈನಾಗೆ ದೊಡ್ಡದೊ೦ದು ಬ್ಯಾಗು!
ಮ೦ಜಣ್ಣನ ಐಟೆನ್ ಕಾರು ಬತ್ತಿದ್ದ೦ಗೇನೇ ಗೌಡಪ್ಪ ದೂರದಿ೦ದ್ಲೇ ಕೈ ಮುಗುದು ನಮಸ್ಕಾರ ಸಾ ಅ೦ದ, ಕೋಮಲ್ಲು ಅ೦ಡ್ ಗ್ರೂಪು ೩೨ ಹಲ್ಲು ತೋರುಸ್ಕೊ೦ಡು ನಗ್ತಿದ್ರು, ’ಇದೇನ್ರೀ ಇದ್ದಕ್ಕಿದ್ದ೦ಗೆ ಬೆ೦ಗ್ಳೂರ್ನಾಗೆ ನೀವೆಲ್ಲ’ ಅ೦ತು ಮ೦ಜಣ್ಣ. ”ಇ೦ಗೇ ಸಿ.ಎ೦.ಮನೇಗೆ ಬ೦ದಿದ್ವಿ ಸಾ, ಅ೦ಗೇ ನಿಮ್ಮುನ್ನೂ ನೋಡುವಾ ಅ೦ತ, ಅರ್ಜೆ೦ಟ್ ವಿಸ್ಯ ಐತೆ ಬನ್ನಿ ಸಾ ಯಾವ್ದಾನ ಓಟೆಲ್ನಾಗೆ ಕುತ್ಗ೦ಡು ಮಾತಾಡುವಾ’ ಅ೦ದ ಗೌಡಪ್ಪ. ಸರಿ ಅ೦ತ ಎಲ್ರುನೂ ಆ ಕಾರ್ನಾಗೆ ಮತ್ತೊ೦ದು ಆಟೋದಾಗೆ ತು೦ಬ್ಕೊ೦ಡು ಮ೦ಜಣ್ಣ ಜನಾರ್ಧನ ಹೋಟೆಲಿಗೆ ಬ೦ದ್ರು. ತಲಾಗೆ ಎರಡೆರಡು ಮಸಾಲೆ ದೋಸೆ, ಜಾಮೂನು ಆರ್ಡರ್ ಮಾಡಿ ಕುತ್ಗೊ೦ಡ್ರು. ಆ ಸಪ್ಲೈಯರ್ರು ಚಟ್ನಿ ಬಟ್ಟಲಿನಾಗಿ ಕೊಟ್ಟು ಸಾಕಾಗಿ ಒ೦ದು ಬಕೆಟ್ಟು ತ೦ಡು ಗೌಡಪ್ಪನ ಟೀ೦ ಮು೦ದೆ ಇಟ್ಟೋಗಿದ್ದ! ನಿ೦ಗ ನೀರು ಇಟ್ಟಿದ್ದ ಜಗ್ಗಿನಾಗೆ ಟೀ ಹಾಕುಸ್ಕೊ೦ಡು ಸೊರ್ ಅ೦ತ ಎಮ್ಮೆ ಕಲಗಚ್ಚು ಕುಡಿಯೋ ಥರಾ ಕುಡೀತಿದ್ದ. ಮತ್ತಷ್ಟು ಓದು 
ಜೀವನ ಬಂಡೆ ಕಲ್ಲಾ?
ಸುಬ್ರಹ್ಮಣ್ಯ ಬಿ ಎಸ್
ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ…
ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ ಮೊಬೈಲ್ ಫೋನ್ಗೆ ಬಂತು. ನಿಯಮ ಇಷ್ಟೇ , ಪ್ರಶ್ನೆ ( ಸರಿಯಾಗಿ ಹೇಳಬೇಕೆಂದರೆ ಪದ ) ಓದಿದಾಗ ಮೊದಲಬಾರಿಗೆ ಅದೇನು ಹೊಳೆಯುತ್ತದೋ ಹೇಳಿ ಬಿಡಬೇಕಿತ್ತು.
ಮೊದಲನೆಯದು “ಪ್ರೀತಿ “- ಮನಸ್ಸಿನಲ್ಲಿ ಪಟ ಪಟ ಸದ್ದು ಮಾಡ್ತಾ ಜೋಡಿ ಹಕ್ಕಿಗಳು ಕಣ್ಮುಂದೆ ಬಂದ್ಬಿಡೋದೇ…? ಹೌದು ಇನ್ನೇನು , ಅಪ್ಪ ಅಮ್ಮಂದಿರ , ಸಂಸಾರ ,ಬಂಧುಬಳಗದ ವಿರೋಧ ಇಲ್ದಿದ್ರೆ ಪ್ರೀತಿ ಜೋಡಿ ಹಕ್ಕಿನೇ ತಾನೇ? ಸ್ವಚ್ಚಂದ ಆಗಸದಲ್ಲಿ ಪಟ ಪಟ ರೆಕ್ಕೆ ಬಿಚ್ಚಿ ಹಾರಿ ಇಬ್ಬರೇ ಕಾಲ ಕಳೀಬಹುದಲ್ವಾ?
ಎರಡನೆಯದು “ಜೀವನ” -ಅದ್ಯಾಕೋ ದೊಡ್ಡ ಬಂಡೆ ಕಲ್ಲುಗಳು ಕಣ್ಮುಂದೆ ಬರಬೇಕೆ? ಯಾಕೆ ಬಂತು? ನಾನೇನು ಬಂಡೆಕಲ್ಲುಗಳ ಕೆಲಸ ಮಾಡೋನಲ್ಲ.. ಚಿಕ್ಕ ಕಲ್ಲೆತ್ತಿ ಹೊಡೆದಿದ್ದೂ ಕಮ್ಮಿನೇ , ಮತ್ಯಾಕೆ? ಬಸ್ಸಿನೊಳಗೆ ಕುಳಿತ ನನಗೆ ಆ ರಾತ್ರಿಯ ಕತ್ತಲಲ್ಲಿ ಸುತ್ತ ಮುತ್ತ ಬಂಡೆಗಳೇನು ಕಾಣಿಸೋ ಹಾಗಿರಲಿಲ್ಲ..ಹಾಗಂತ ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ,ಜೀವಿಸಲು ಶ್ರಮಪಟ್ಟು ಜೀವನವೆಂದರೆ ಕಠಿಣ ಅನ್ನೋವಷ್ಟು ವಯಸ್ಸಾಗಲಿ ,ಸಾಧನೆಯಾಗಲಿ ಮಾಡಿಲ್ಲ. ಜುಜುಬಿ ಇಪ್ಪತ್ನಾಲ್ಕಕ್ಕೆ ಜೀವನ ಅಂದಾಗ ಬಂಡೆ ಕಲ್ಲು ಕಣ್ಣೆದುರಿಗೆ ಬಂದ್ರೆ ಸ್ವಲ್ಪ ಯೋಚನೆ ಮಾಡದಿದ್ದರೆ ಹೇಗೆ ? ಮತ್ತಷ್ಟು ಓದು 
ಹನಿ ಹನಿ ಮುತ್ತು..
-ಅಬ್ದುಲ್ ಸತ್ತಾರ್

ಬೆಳಕಿಗೆ ಹೊಸತನ ನೀಡಲಿ ಹಣತೆಗಳ ಸಾಲು
ಸಂಜೆ ಯಾವಾಗ ಆಗುವುದೆಂಬ ಕಾತುರ. ನಾನಾಗ ಐದನೆಯ ಅಥವಾ ಆರನೆಯ ತರಗತಿಯಲ್ಲಿದ್ದೆ. ಶಾಲೆಯ ಕೊನೆಯ ಗಂಟೆ – ಆಗಿನ ಪರಿಭಾಷೆಯಲ್ಲಿ ಲಾಂಗ್‌ಬೆಲ್ ಯಾವಾಗ ಕೇಳಿಸುವುದೆಂದೇ ನಮ್ಮ ಗಮನ. ಶಿಕ್ಷಕರು ಕೂಡ ಇದನ್ನು ಅರಿತವರೇ ಆಗಿದ್ದರು. ಏಕೆಂದರೆ, ಅವರು ಕೂಡ ನಮ್ಮ ಹಾಗೆ ಎಳೆಯರೇ ಆಗಿದ್ದವರಲ್ಲ! ಅರ್ಧತಾಸು ಬೇಗನೆ ಲಾಂಗ್‌ಬೆಲ್! ಕ್ಲಾಸಿನಿಂದ ಹೊರ ಚಿಮ್ಮಿದ ಮಕ್ಕಳ ಹರ್ಷೋದ್ಗಾರ. ಪುಸ್ತಕದ ಚೀಲ ಹೆಗಲಿಗೇರಿಸಿ, ಬುತ್ತಿಯನ್ನು ಹುಡುಕಿಕೊಂಡು… ಮನೆಯ ಕಡೆಗೆ ಓಟ. ಆ ದಿನ ಅದು ಎಂದಿನ, ಸಾಮಾನ್ಯ ನಡಿಗೆಯಾಗಿರಲಿಲ್ಲ. ಅದು ಮನೆಯ ಕಡೆಗೆ “ಒಲಿಂಪಿಕ್ ಓಟ’. ಎಷ್ಟು ಬೇಗ ಮನೆ ತಲುಪುತ್ತೇವೆಯೋ ಅಷ್ಟು ಸಂಭ್ರಮದ ವೃದ್ಧಿ ಎಂಬ ಭಾವನೆ. ಬಾಲ್ಯದ ದಿನಗಳ ವಿಶೇಷವಾದ ಸ್ಪಂದನ ಇದಾಗಿತ್ತು.
ಈ ಸಂಭ್ರಮಕ್ಕೆ ಕಾರಣ. ದೀಪಾವಳಿಯ ಆರಂಭ. ರಜೆಯ ಸಂತಸದ ಜತೆ ಪ್ರತಿದಿನವೂ ಬಗೆಬಗೆಯ ರೂಪದಲ್ಲಿ ದೀಪಾವಳಿಯ ಆಚರಣೆಯ ಸ್ವಾರಸ್ಯ. ವರ್ಷಪೂರ್ತಿ ಉಳಿಸಿಕೊಂಡು ಬಂದ ಚಿಲ್ಲರೆ ಈಗ ನಮ್ಮ ಡಬ್ಬಿಯಲ್ಲಿ ಭಾರೀ ಮೊತ್ತ ಆಗಿರಬಹುದು ಎಂಬ ಲೆಕ್ಕಾಚಾರ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ನಮ್ಮ ಈ “ಖಜಾನೆ’ಯನ್ನು ಒಡೆಯಲು ಮನೆಯವರ ಅನುಮತಿ. ಈ ಖಜಾನೆಯ ಸಂಪತ್ತು ನಮ್ಮ ಪಟಾಕಿ ಖರೀದಿ ಎಂಬ “ಮಹತ್ಕಾರ್ಯ’ಕ್ಕೆ ವಿನಿಯೋಗವಾಗಬೇಕು.
ಮತ್ತಷ್ಟು ಓದು 
ಕಳ್ಳ…! ನಮ್ಮ ಅನ್ನ ಕದ್ದ ಕಳ್ಳ..!
-ರವಿ ಮುರ್ನಾಡು
ಹೊಡೆಯಬೇಡಿ ನನ್ನನ್ನು… ಹೊಡೆಯಬೇಡಿ…. ಇನ್ನು ಮುಂದೆ ಕದಿಯುವುದಿಲ್ಲ…! ಹಾಗಂತ, ತೊದಲು ನುಡಿಯಲ್ಲಿ ಪ್ರಾರ್ಥಿಸಿದ್ದೆ. ಹೊಡೆತ ನಿಂತಿತ್ತು. “ಕಳ್ಳ” ಅನ್ನುವ ಹಣೆಪಟ್ಟಿ ತೆಗೆಯಲಾಗಲಿಲ್ಲ. ಅವರೆಲ್ಲಾ ಕೆಕ್ಕರುಗಣ್ಣಿನಲ್ಲಿ ದುರುಗುಟ್ಟಿ ನೋಡುತ್ತಿದ್ದರು. ಇನ್ನು ಅನ್ನ ಕದ್ದರೆ, ಕಣ್ಣಿಗೆ ಮೆಣಸು ಹಾಕಿ ಹೊಡೆದೇವು ಜೋಕೆ ಅಂದರು. ಆಯಿತು, ನಾನು ಕದಿಯಲಿಲ್ಲ. ಅನ್ನದ ಆಸೆಗೆ ಮೂಗು ಸುವಾಸನೆಯನ್ನು ಅರಸುತ್ತಿತ್ತು. ಹೊಟ್ಟೆ ಅರ್ಧವಾದರೂ ಏಟಿಗೆ ಹೆದರಿ ಹಸಿಯದೆ ಸುಮ್ಮನಾಯಿತು.
ಅನ್ನ ಕದ್ದ ಕತೆಗಳು ಸಿನೇಮಾದಲ್ಲಿ ಬಣ್ಣಗಳಾದವು. ಜಗತ್ತಿನ ಅತ್ತ್ಯುನ್ನತ ಪ್ರಶಸ್ತಿಗಳ ಕಿರೀಟ ಹೊತ್ತ ಹಲವು ಸಾಹಿತ್ಯ ಪ್ರಾಕಾರಗಳು ಇದರ ಹಿಂದೆ ಇತಿಹಾಸದ ಪುಟ ಸೇರಿದವು. ಇಂದಿಗೂ ಕಣ್ಣಿಗೆ ಕಾಣದ ಅನ್ನ ಕದಿಯುವ ಸರದಿಗಳು ಈ ಸಮಾಜದಲ್ಲಿ ಹೀಗೆ ಸಾಲು ಸಾಲಾಗಿ ಜೀವಂತವಾಗಿವೆ. ಇಂತಹ ಸಿನೇಮಾ ನೋಡುವಾಗ ಮತ್ತು ಸಾಹಿತ್ಯಗಳನ್ನು ಓದುವಾಗ ಅದರೊಳಗೆ ಆಕಸ್ಮಿಕವಾಗಿ ನಾನೇ ಪಾತ್ರಧಾರಿಯಾಗುತ್ತೇನೆ. ಅಲ್ಲೆಲ್ಲಾ ಮಾತನಾಡುತ್ತೇನೆ. ನನ್ನ ಹಾಗೇ ನನ್ನದೇ ನೆರಳಿನ ನರ್ತನ…!. ನನ್ನದೇ ಜಗತ್ತಿನ ಒಂದು ಪ್ರಶ್ನೆ . ನಾನೊಬ್ಬ ಅನ್ನ ಕದ್ದ ಕಳ್ಳನೇ?. ಹಿಗ್ಗಾ ಮುಗ್ಗಾ ಹೊಡೆದರು. ಬೆಳಿಗ್ಗಿನಿಂದ ಸಂಜೆಯವರೆಗೆ ದುಡಿದ ಅವರ ಅನ್ನವನ್ನು ನಾನು ಕದ್ಡೆ ಅನ್ನುವ ಕಾರಣಕ್ಕಾಗಿ ಕಂಡ ಕಂಡಾಗಲೆಲ್ಲ ಕಳ್ಳ ಎಂದು ಮೂದಲಿಸಿದರು. ಅವರ ಮಕ್ಕಳೆಲ್ಲಾ ಹಿಯ್ಯಾಳಿಸಿದರು. ಕಣ್ಣುಗಳು ತೇವಗೊಳ್ಳುತ್ತವೆ…. ಏಕೆ ಅನ್ನ ಕದ್ದೆ ಅಂತ ಅವರು ಕೇಳಲಿಲ್ಲ. ಸುರುಳಿ ಬಿಚ್ಚುತ್ತಿದೆ ಮನಸ್ಸು …!
ಅದು ಕಾರ್ಮಿಕರ ಲೈನ್ ಮನೆ. ಓಗರೆಯ ಐದು ಮನೆಗಳಿದ್ದವು. ಕೊಡಗಿನ ಸೋಮವಾರಪೇಟೆಯಲ್ಲಿ ಹೆಚ್ಚು ಇಂತಹ ಕಾರ್ಮಿಕರ ಮನೆಗಳು ಕಂಡು ಬರುತ್ತವೆ. ದೊಡ್ಡ ದೊಡ್ಡ ಕಾಫಿ ತೋಟಗಳು ಅದು. ಕಾಫೀ ಕೊಯ್ಲಿನ ಸಮಯದಲ್ಲಿ ಹೊರ ಜಿಲ್ಲೆಗಳಾದ ಮೈಸೂರು,ಹಾಸನ ಸೇರಿದಂತೆ, ಕೇರಳ,ತಮಿಳುನಾಡಿನಿಂದಲೂ ಕಾರ್ಮಿಕರು ಠಿಕಾಣಿ ಹೂಡುತ್ತಾರೆ. ಸುಂಟಿಕೊಪ್ಪ ಪಟ್ಟಣದಿಂದ ಎಂಟು ಕಿ. ಮೀ. ದೂರ ” ಕಾರೆಕೊಲ್ಲಿ” ಕಾಫಿ ಎಸ್ಟೇಟಿಗೆ. ಅಲ್ಲಿಂದ “ಕಂಟ್ರೋಲ್” ಎಸ್ಟೇಟಿಗೆ ಮೂರು ಕಿ.ಮೀ. ದೂರ . ಸುಂಟಿಕೊಪ್ಪದಿಂದ ಮಡಿಕೇರಿ ದಾರಿ ಮಧ್ಯೆಯೂ ಬಸ್ಸಿನಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಅದು ನಮಗೆ ಗೊತ್ತಿಲ್ಲ. ನಾವೆಲ್ಲರೂ ನಡೆದು ಹೋಗಿಯೇ ಈ ಎಸ್ಟೇಟಿಗೆ ತಲಪುತ್ತಿದ್ದದ್ದು. ಅದು ಕಾರೆಕೊಲ್ಲಿ ಎಸ್ಟೇಟ್ ಮೂಲಕ. ಇಲ್ಲಿಯೇ ನನ್ನ ಅಜ್ಜಿ ಮನೆ. ಮತ್ತಷ್ಟು ಓದು 
ಇಲ್ಲಿ ‘ನಿಮ್ಮ’ ಕಣ್ಣಿಗೆ ಸಣ್ಣವರಾದ ಸಾಮಾನ್ಯ ಜನರು ಇದ್ದರು…
ಡಾ.ಅಜಕ್ಕಳ ಗಿರೀಶ್
ರಾಮದೇವ್ ಬಗ್ಗೆ ಬೇಕಾದದ್ದು ಮಾತಾಡಲಿ. ಆದರೆ ಹಾಗೆ ಹಿಡನ್ ಅಜೆಂಡಾ, ಕೋಮುವಾದಿಗಳು ಇತ್ಯಾದಿ ಬೈಯುವಾಗ ಕೂಡ ಯಾರೊಬ್ಬರೂ ಗಮನಿಸದ ವಿಚಾರ ಅಂದರೆ, ಅವರನ್ನು ಬೇಂಬಲಿಸಿ ರಾಮಲೀಲ ಮೈದಾನಕ್ಕೆ ಗಂಟುಮೂಟೆ ಕಟ್ಟಿಕೊಂಡು ಹೋದ ಸಾವಿರಾರು ಜನರು ಇದ್ದಾರಲ್ಲ ಅವರು ಯಾವ ಸ್ವಾರ್ಥದಿಂದ ಹೋದರು? ನಿಜ , ಅಲ್ಲಿ ಕಡುಬಡವರು ಇದ್ದಿರಲಾರರು. ಆದರೆ,ಅಲ್ಲಿ ಇದ್ದವರು ನಿಜವಾದ ದೇಶಭಕ್ತರು. ದೇಶಭಕ್ತಿ ಅಂದರೆ ಏನು ಅಂತ ವಿವರಿಸುವುದು ಯಾವಾಗಲೂ ಕಷ್ಜ್ಟ. ಆದರೆ ಇಂದು ಬಹುಶಃ ದೇಶಭಕ್ತಿ ಅಂದರೆ ಏನು ಅಂತ ಯಾರಿಗಾದರೂ ಪಾಠ ಹೇಳಬೇಕಾದರೆ ನಾವು ಇದು ಅಂತ ತೋರಿಸಬಹುದುದು. ಬೇರೆ ಅಂಥ ಉದಾಹರಣೆಗಳು ಬಹಳ ಸಿಗಲಿಕ್ಕಿಲ್ಲ. ಊಟದ ಆಸೆಯಿಂದ ಸೇರಿದ್ದಾರೆ ಅನ್ನಲು ಅಲ್ಲಿ ಊಟವಿಲ್ಲ,ಉಪವಾಸ. ಹಣದ ಆಸೆಗೆ ಹೋದರೇ? ಅವರು ತಮ್ಮ ಸ್ವಂತ ಹಣದಿಂದ ಹೋದರು ,ಅಷ್ಟೇ ಅಲ್ಲ ,ಬಹುಶ ಬಹಳ ಜನ ಪೆಂಡಲ್ ಇತ್ಯಾದಿ ಖರ್ಚಿಗೆ ದೇಣಿಗೆ ಕೂಡ ಕೊಟ್ಟಿರಬಹುದು(ದೇವಸ್ತಾನಗಳಿಗೆ ನಮ್ಮ ಖರ್ಚಲ್ಲಿ ಹೋಗಿ ಕಾಣಿಕೆ ಹಾಕಿದಂತೆ.ದೇವಸ್ತಾನದಲ್ಲಿ ಪುಣ್ಯವಾದರೂ ಸಿಗುತ್ತೆ ಸ್ವಂತಕ್ಕೆ ಅಂತ ಆಸೆ ಇರುತ್ತೆ, ಇಲ್ಲಿ ಸ್ವಂತಕ್ಕೆ ಅಂತ ಏನಿಲ್ಲ.) ಮತ್ತಷ್ಟು ಓದು 
ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?
– ಡಾ.ಶೈಲಾ ಯು.
ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ. ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ. ಮತ್ತಷ್ಟು ಓದು 
ಹನುಮಪ್ಪನೆ ಆಗಿರಲಿ ಇಮಾಂ ಸಾಬಿಯೇ ಆಗಿರಲಿ…!
– ಪವನ್ ಪಾರುಪತ್ತೇದಾರ‍್, ಬೆಂಗಳೂರು
ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ. ಎರಡು ಗ್ರೇಟ್ ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ. ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531 ಕಿ.ಮೀ. ಓಟ ಮುಗಿಸಿದ್ದಾರೆ.ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ. ಆದರೆ ,ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ ” ಟೈಮ್ಸ್ ನೌ” ಅರ್ನಬ್ ಗೋಸ್ವಾಮಿ ಇರಬಹುದು ಅಥವಾ “ಸಿಎನ್‍ಎನ್” ನ ರಾಜ್ದೀಪ್ ಸರ್ದೇಸಾಯಿ ಇರಬಹುದು, ಶಾರುಕ್ ಖಾನ್, ಸಲ್ಮಾನ್ ಖಾನ್ ,ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು, ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಈ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಗಂಟೆಗೊಂದು ಹೇಳಿಕೆ ರಾಮದೇವ್ ವಿರುದ್ದ ನೀಡುತಿದ್ದಾರೆ ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ ಕಾಂಪ್ರಮೈಸ್ ಅಗೋ ತಂತ್ರ ಹೆಣೆಯುತಿದ್ದಾರೆ .
ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು ? ಮರದ ಚಪ್ಪಲಿ ಅದರೇನು ADIDAS ಶೂ ಅದರೇನು? ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50 ರೂಪಾಯಿ ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಈ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಾಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಈ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಾಭವಂತು ಇಲ್ಲ.ಈ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು. ಈಗ ಬೆಂಬಲ ಸೂಚಿಸಿದೆ. ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ ಬಿಜೆಪಿ ಏಜೆಂಟ್ ಆಗಿದ್ದಾರೆ.
ಆಯುರ್ವೇದವನ್ನು ಕಂಡರೆ ಪಾಶ್ಚಾತ್ಯರಿಗೆ ಭೀತಿ!
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ. ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. ಇದು ಹಿಂದಿ ಹೇರಿಕೆ ಬೂತದ ಕೈಚಳಕ
ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.
ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-
೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.
ಮತ್ತಷ್ಟು ಓದು 





