ನಿಮ್ಮ ಮಕ್ಕಳನ್ನು ಗಿಣಿಯಂತೆ ಸಾಕಿ ಪ್ರಗತಿಪರರ ಕೈಗೊಪ್ಪಿಸಬೇಡಿ..
– ಪ್ರವೀಣ್ ಕುಮಾರ್ ಮಾವಿನಕಾಡು
ಆಕೆ ನನಗಿಂತಾ ಎರಡು ಮೂರು ವರ್ಷ ದೊಡ್ಡವಳು. ನನ್ನದೇ ಶಾಲೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿಯಾಗಿದ್ದವಳು. ನನ್ನಂತೆಯೇ ನಾಲ್ಕೈದು ಮೈಲಿ ದೂರದಿಂದ ಗದ್ದೆ, ಬಯಲು, ಗುಡ್ಡ, ಹಾಡ್ಯ, ಒಳ ದಾರಿಗಳನ್ನು ದಾಟಿ ಶಾಲೆಗೆ ಬರುತ್ತಿದ್ದಳು. ನನಗೆ ಪಾಠ ಮಾಡಿದ ಶಿಕ್ಷಕರೇ ಆಕೆಗೂ ಪಾಠ ಮಾಡಿದ್ದರು. ಆದರೆ ಆಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ನನಗಿಂತಲೂ ತುಂಬಾ ಚುರುಕಾಗಿದ್ದಳು. ಆದರೆ ನಾನಿನ್ನೂ ಬದುಕಿದ್ದೇನೆ. ಆಕೆ ಪೊಲೀಸರ ಗುಂಡಿಗೆ ಬಲಿಯಾಗಿ ಒಂದು ದಶಕವೇ ಕಳೆದಿದೆ!
ಆ ವರ್ಷ ನಮ್ಮ ಪ್ರೌಢಶಾಲೆಯ ಬೆಳ್ಳಿ ಹಬ್ಬ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಏಳನೇ ತರಗತಿ ಮುಗಿಸಿದ ನಂತರ ಸೇರುತ್ತಿದ್ದುದು ಅದೇ ಪ್ರೌಢಶಾಲೆಗೆ. ಹಾಗಾಗಿ ಹತ್ತಾರು ಹಳ್ಳಿಗಳಲ್ಲೂ ಬೆಳ್ಳಿ ಹಬ್ಬದ ಸಂಭ್ರಮ. ಬೆಳ್ಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ಶಾಲೆಯಿಂದ ವಿದ್ಯಾರ್ಥಿಗಳ ಬರಹಗಳೇ ತುಂಬಿರುವ ಸ್ಮರಣಸಂಚಿಕೆಯೊಂದನ್ನು ಹೊರತರಲಾಯಿತು. ಆ ಸ್ಮರಣಸಂಚಿಕೆಯಲ್ಲಿ ಕೆಲವು ಮಕ್ಕಳು ನಗೆ ಹನಿಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಮಲೆನಾಡಿನ ಸೊಬಗನ್ನು ವರ್ಣಿಸಿ ಬರೆದಿದ್ದರು. ಕೆಲವು ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದಿದ್ದರು. ಬುದ್ದಿವಂತೆ ಎಂದು ಗುರುತಿಸಿಕೊಂಡಿದ್ದ ಆಕೆ ಮಾತ್ರ ಬಡತನ, ಶೋಷಣೆ, ಜಮೀನ್ದಾರೀ ಪದ್ಧತಿಯ ಬಗ್ಗೆ ತನಗನ್ನಿಸಿದ ರೀತಿಯಲ್ಲಿ ಹಲವು ಬರಹಗಳನ್ನು ಬರೆದಿದ್ದಳು. ಮತ್ತಷ್ಟು ಓದು 
ನಾವೆಲ್ಲರೂ ಒಂದೇ...
– ಗೀತಾ ಹೆಗ್ಡೆ
ಒಂದಿಲ್ಲೊಂದು ಕಾರಣಗಳಿಂದ ನೀನು ಹಿಂದು, ನೀನು ಕ್ರಿಶ್ಚಿಯನ್, ನೀನು ಮುಸ್ಲಿಂ ಹೀಗೆ ಅವರವರ ಧರ್ಮದ ಹೆಸರಲ್ಲಿ, ಒಂದಿನಿತೂ ಅವರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಅನ್ನುವ ಭಾವನೆ ಬೆಳೆಯಲು ಈ ಸಮಾಜ ಯಾಕೆ ಅನುವು ಮಾಡಿಕೊಡುತ್ತಿಲ್ಲ.. ಇದು ಸದಾ ಕಾಡುವ ನನ್ನೊಳಗಿನ ಪ್ರಶ್ನೆ. ಎಷ್ಟೋ ಸಾರಿ ಜೀವನದ ಅನೇಕ ವೇಳೆಯಲ್ಲಿ ಎದುರಾಗುವ ಮಾನವೀಯ ಜನರು ನಮ್ಮ ಕಷ್ಟ ಸುಃಖಕ್ಕೆ ಸ್ಪಂಧಿಸಿರುತ್ತಾರೆ. ಅವರ ಒಡನಾಟದಲ್ಲಿ ನಾವು ಜಾತಿಯ ಬಗ್ಗೆ ಯೋಚನೆಯನ್ನೆ ಮಾಡುವುದಿಲ್ಲ. ಅಷ್ಟು ನಮ್ಮೊಳಗಿನ ಮನಸ್ಸು ಬೇಧ ಭಾವ ಮರೆತು ಕೇವಲ ಅವರ ಒಳ್ಳೆಯ ನಡೆ ನುಡಿಗಳಲ್ಲಿ ತಲ್ಲೀನವಾಗಿರುತ್ತದೇ. ಆದರೆ ಸಮಾಜದ ಕೆಲವು ವ್ಯಕ್ತಿಗಳು ಇಷ್ಟು ಮುಕ್ತ ಮನಸ್ಸಿನಿಂದ ಬದುಕಲು ಬಿಡುವುದಿಲ್ಲ. ಆಗಾಗ ಅವರ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಅಲ್ಲಿ ನಮ್ಮ ಬದುಕಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದನ್ನು ಪ್ರತಿಭಟಿಸುವಷ್ಟು ಶಕ್ತಿ ಎಲ್ಲರಲ್ಲೂ ಇರುವುದಿಲ್ಲ. ಸಮಾಜದ ಕಟ್ಟು ಕಟ್ಟಳೆಗೆ ತಲೆ ಬಾಗಲೇ ಬೇಕಾಗುತ್ತದೆ. ಅಂಥದೊಂದು ಘಟನೆ ಎದುರಿಸಿದ ಸಂದರ್ಭವಿದು. ಮತ್ತಷ್ಟು ಓದು 
ಮಾಧ್ಯಮಗಳ ಟಿ.ಆರ್.ಪಿ ದಾಹಕ್ಕೆ ಬಲಿಯಾದಳೇ ಸುಹಾನಾ ಸೈಯದ್ ?
– ಸುರೇಶ್ ಮುಗಬಾಳ್
ಬಹಳಷ್ಟು ಮಂದಿಗೆ ‘ಸುಹಾನಾ ಸೈಯದ್’ ಎಂಬ ಸಂಗೀತ ಪ್ರತಿಭೆಯ ಪರಿಚಯವೇ ಇರಲಿಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರದ ಯಾವುದೋ ಮೂಲೆಯಲ್ಲಿದ್ದ ಸುಹಾನಾ, ತಾನು ಹಾಡಿದ ಒಂದೇ ಒಂದು ಹಾಡಿನಿಂದ ಇಡೀ ದೇಶದಲ್ಲಿ ಮನೆಮಾತಾಗಿಬಿಟ್ಟಳು. ಅವಳ ಆ ಹಾಡಿನಲ್ಲೇನಿದೆ ಅಂತಹ ವಿಶೇಷತೆ ? ಸಂಗೀತ ಕಲಿತ ಯಾರು ಬೇಕಾದರೂ ಹಾಡಬಲ್ಲರು, ಎಷ್ಟೋ ಸಂಗೀತ ಪ್ರತಿಭೆಗಳು ತಾವು ವಾಸವಿರುವ ಮನೆಯ ಪಕ್ಕದ ಕೇರಿಗೂ ಪರಿಚಯವಿರುವುದಿಲ್ಲ, ಅಂತಹುದರಲ್ಲಿ ಸುಹಾನಾ ಹೇಗೆ ಇಷ್ಟು ಪ್ರಚಾರ ಪಡೆದುಕೊಂಡಳು? ಕಾರಣಗಳಿಷ್ಟೇ; ಅವಳು ಶ್ರೀನಿವಾಸನ ಹಾಡು ಹಾಡಿದಳು, ಅವಳು ಹಿಜಾಬ್ ಧರಿಸಿದ್ದಳು, ಅವಳು ಒಬ್ಬ ಮಹಿಳೆಯಾಗಿದ್ದಳು, ಅವಳು ಸುಂದರ ವದನ ಹೊಂದಿದ್ದಳು ಇದೆಲ್ಲದಕ್ಕಿಂತ ಮುಖ್ಯವಾಗಿ ಅವಳು ಮುಸ್ಲಿಂ ಧರ್ಮೀಯಳಾಗಿದ್ದಳು.ಪ್ರತಿ ಮತವೂ ಬಿಜೆಪಿಗೆ ಬೀಳುತ್ತದೆ ಎನ್ನುವ ಮುನ್ನ…
– ರಮಕಾಂತ್ ಶೆಟ್ಟಿ
ಚುನಾವಣೆ ಈ ದೇಶದಲ್ಲೊ೦ದು ಸಮೂಹ ಸನ್ನಿ ಎ೦ದರೆ ತಪ್ಪಿಲ್ಲ. ರಾಜಕೀಯ ಪಕ್ಷಗಳಿಗೆ ಚುನಾವಣೆಯೆ೦ದರೆ ಕದನ ಕುತೂಹಲ, ಪರೀಕ್ಷಾ ಸಮಯ. ಪಕ್ಷಗಳ ಅಭಿಮಾನಿಗಳಿಗೆ ನೆಚ್ಚಿನ ನಾಯಕನ ಗೆಲುವಿನ ಹ೦ಬಲಿಕೆ. ತಮ್ಮ ನಾಯಕನೇ ಗೆದ್ದರೆ ಸಿಗುವ ಅಹ೦ ತೃಪ್ತಿಯ ಹ೦ಬಲಿಕೆ. ಹಲವರಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಬೆರಳಿಗೊ೦ದಷ್ಟು ಮಸಿ ಬಳಿದುಕೊ೦ಡು ಸಾಮಾಜಿಕ ಜಾಲತಾಣದಲ್ಲೊ೦ದು ಭಾವಚಿತ್ರ ತಗುಲಿಸುವ ಉತ್ಸಾಹ. ಕೆಲವರಿಗೆ ಯಾರು ಗೆದ್ದರೂ ದೇಶವೇನೂ ಬದಲಾಗದು ಬಿಡು ಎನ್ನುವ ತಾತ್ಸಾರ. ಹೀಗೆ ಹತ್ತು ಹಲವು ಭಾವಗಳ ಹೊಮ್ಮುವಿಕೆ ಚುನಾವಣೆ. ಆದರೆ ಚುನಾವಣೆ ಎ೦ದಾಕ್ಷಣ ಕೊ೦ಚ ಬೆಚ್ಚಿಬೀಳುವ, ಚೂರು ಬೇಸರ ವ್ಯಕ್ತಪಡಿಸುವ ವರ್ಗವೂ ಒ೦ದಿದೆ. ಅದು ರಾಜ್ಯ, ಕೇ೦ದ್ರ ಸರ್ಕಾರಿ ನೌಕರರ ವರ್ಗ. ಕೇ೦ದ್ರ ಸರ್ಕಾರಿ ಸ್ವಾಮ್ಯದ ಕ೦ಪನಿಗಳ ಉದ್ಯೋಗಿಗಳೂ ಇದೇ ಸಾಲಿಗೆ ಸೇರುತ್ತಾರೆ. ಚುನಾವಣೆಯೆ೦ದರೆ ಅವರ ಪಾಲಿಗೆ ಬರಿ ಮತದಾನ ಮಾತ್ರವಲ್ಲ. ನೇರವಾಗಿ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಿಬ್ಬ೦ದಿಗಳು ಸರ್ಕಾರಿ ನೌಕರರು. ರಾಜ್ಯ ಸರ್ಕಾರಿ ಶಿಕ್ಷಕರ ಪಾಲಿಗ೦ತೂ ಚುನಾವಣೆ ಕರ್ತವ್ಯವೆನ್ನುವುದು ಮತ್ತೊ೦ದು ಅರೆಕಾಲಿಕ ಉದ್ಯೋಗವೆ೦ದರೆ ತಪ್ಪಾಗಲಾರದು. ಸಣ್ಣದ್ದೊ೦ದು ಸಹಕಾರಿ ಸ೦ಸ್ಥೆಯ ಚುನಾವಣೆಯಿ೦ದ ಹಿಡಿದು ಲೋಕಸಭೆಯ ಚುನಾವಣೆಯವರೆಗಿನ ಎಲ್ಲ ಚುನಾವಣಾ ಕರ್ತವ್ಯಗಳೂ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ. ಕೇವಲ ಶಿಕ್ಷಕರು ಮಾತ್ರವಲ್ಲದೇ ಕೇ೦ದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ವೃತ್ತಿಜೀವನದಲ್ಲಿ ಒಮ್ಮಿಲ್ಲೊಮ್ಮೆ ಚುನಾವಣಾ ಕರ್ತವ್ಯವನ್ನೂ ನಿಭಾಯಿಸಿಯೇ ಇರುತ್ತಾನೆ. ಈ ಚುನಾವಣೆಯ ಪ್ರಕ್ರಿಯೆ ಹೇಗಿರುತ್ತದೆ ಎ೦ಬುದರ ಒ೦ದು ಸಣ್ಣ ಪರಿಚಯ ಇ೦ದು ಮಾಡಿಕೊಡಬೇಕೆನ್ನಿಸಿದೆ. ಮತ್ತಷ್ಟು ಓದು 
ಈ ಪ್ರತ್ಯೇಕತಾ ಭಾವ ಹುಟ್ಟುತ್ತಿರುವುದು ಎಲ್ಲಿಂದ..?
– ಡಾ. ಮೋಹನ್ ತಲಕಾಲುಕೊಪ್ಪ
ನಮ್ಮ ಸಾಗರದ ಸುಹಾನಾ ಅವರ ಸುಶ್ರಾವ್ಯ ಗಾಯನ, ಅದಕ್ಕೆ ತೀರ್ಪುಗಾರರ ಹಾಗೂ ನಿರೂಪಕಿಯ ನಾಟಕೀಯ, ಧಾರ್ಮಿಕ ಹಾಗೂ ಟಿಆರ್ ಪಿ ಪ್ರೇರಿತ ಮಾತುಗಳ ಹಿನ್ನೆಲೆಯಲ್ಲಿ ಈ ಪೋಸ್ಟ್.
ಅಲ್ಲ ಮಾರಾಯರೆ, ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಕುರುಬರು, ದಲಿತರು, ಜೈನರು, ಸಿಖ್ಖರು, ಬೌದ್ಧರು, ಜಾಟರು ಇತ್ಯಾದಿ ಸಮುದಾಯಗಳು ಇದ್ದ ಹಾಗೆ ಭಾರತದಲ್ಲಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಕೂಡಾ ಒಂದೊಂದು ಸಮುದಾಯ, ಅವರಿಗೆ ಎಲ್ಲ ಸಮುದಾಯಗಳಂತೆ, ದೇವರು, ಸಂಪ್ರದಾಯ, ರೀತಿ-ರಿವಾಜು, ಉಡುಗೆ-ತೊಡುಗೆ, ಆಹಾರ ವಿಶೇಷಗಳಿವೆ ಎಂದು ಭಾವಿಸಿದರೆ ಈಗಿನ ಸಮಸ್ಯೆಗಳೆಲ್ಲಾ ಪರಿಹಾರ ಅಂತ ನನಗನ್ನಿಸುತ್ತದೆ. ಅವರು ಎಲ್ಲರಂತೆ ಅಂತ ತಿಳಿದು ವರ್ತಿಸಿದರೆ ಏನು ತೊಂದರೆ? ಅವರಿಗೆ ವಿಶೇಷ ಗಮನವೂ ಬೇಡ. ನಿರ್ಲಕ್ಷ್ಯವೂ ಸಲ್ಲದು. ಸಹಜವಾಗಿ ಮನುಷ್ಯರಂತೆ ಭಾವಿಸಿದರೆ ಏನಾಗುತ್ತದೆ? ಮತ್ತಷ್ಟು ಓದು 
ವಿಶ್ವವನ್ನೇ ಅಚ್ಚರಿಯ ತೆಕ್ಕೆಗೆ ಸೆಳೆಯುವ ಭಾರತದ ದೈತ್ಯ
– ಸುರೇಶ್ ಮುಗಬಾಳ್
ತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ತನ್ನ ಆಸೆ ಈಡೇರದೆ ಸೆರೆಮನೆಯತ್ತ ಮುಖಮಾಡಿದಾಗ, ಇತ್ತ ಇಡೀ ಪ್ರಪಂಚವೇ ನಮ್ಮ ದೇಶದತ್ತ ಮುಖಮಾಡಿತ್ತು. ಶಶಿಕಲಾ ಸೆರೆಮನೆಗೆ ಹೋಗುವುದನ್ನು ನೋಡಲಿಕ್ಕಲ್ಲಾ, ನಮ್ಮ ಹೆಮ್ಮೆಯ ISRO ( Indian Space Research Organisation) PSLV-C37 ಗ್ರಹ ನೌಕೆಯ ಸಹಾಯದಿಂದ 104 ಉಪಗ್ರಹಗಳನ್ನು ಒಂದೇ ಬಾರಿಗೆ ಕಕ್ಷೆಗೆ ಸೇರಿಸುವುದರೊಂದಿಗೆ ಯಾರೂ ಮಾಡದ ಸಾಧನೆಗೆ ಕೈ ಹಾಕಿದೆ ಎಂದು. ಅಚ್ಚರಿ ಪಡಲೇಬೇಕು..! ಏಕೆ ಗೊತ್ತೇ? ಭಾರತೀಯ ಟಿ.ವಿ. ಮಾಧ್ಯಮಗಳು ಇಡೀ ದಿನ ಶಶಿಕಲಾರ ಬಗ್ಗೆ ಪ್ರಸಾರ ಮಾಡುತ್ತಿದ್ದರೆ ಅಲ್ಲೆಲ್ಲೋ ಅಮೇರಿಕಾ, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಡ್, ಯು.ಎ.ಇ., ಇಸ್ರೇಲ್, ಖಜಕೀಸ್ತಾನ್ ದೇಶಗಳು ತಮ್ಮ ಮಾಧ್ಯಮಗಳ ತಲೆಪಂಕ್ತಿಯಲ್ಲಿ (Headlines) ನಮ್ಮ ದೇಶದ ಸಾಧನೆಯನ್ನು ಬಿತ್ತರಿಸಿದವು. ತಮ್ಮದೇ ದೇಶದ ವಿಜ್ಞಾನಿಗಳು ಭೂಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದವರಂತೆ ಅಲ್ಲಿನ ಪ್ರಜೆಗಳು ಖುಷಿಪಟ್ಟುಕೊಂಡರು. ನಮ್ಮ ಟಿ.ವಿ.ಮಾಧ್ಯಮಗಳ ಕತೆಯೇ ಬೇರೆ, ಸುದ್ದಿ ಬಿತ್ತರಿಸುವಾಗ ಗಮನಾರ್ಹವಾದ ಸುದ್ದಿಗಳು 2-3 ನಿಮಿಷಗಳಿಗಷ್ಟೇ ಸೀಮಿತವಾಗಿಸಿಬಿಡುತ್ತವೆ. ಅದೇ ಕೊಳಕು ರಾಜಕೀಯವು ಮಾಧ್ಯಮಗಳ ತುಂಬೆಲ್ಲಾ ಹರಡಿರುತ್ತದೆ. ಚೀನಾದ ಪ್ರಮುಖ ಪತ್ರಿಕೆಯೊಂದು ಭಾರತದ ಈ ಸಾಧನೆಯನ್ನು ಕೊಂಡಾಡಿ, ಸಂಪಾದಕೀಯದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿತ್ತು. ಮತ್ತಷ್ಟು ಓದು 
ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ. ಮತ್ತಷ್ಟು ಓದು 
ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಭಾರತೀಯ ಸಂಪ್ರದಾಯಗಳಲ್ಲಿ ಟೀಕೆಗಳು ಹಾಗೂ ವಿಮರ್ಶೆಗಳು ಮುಂಚಿನಿಂದಲೂ ಬೆಳೆದುಕೊಂಡು ಬಂದಿವೆ. ನೂರಾರು ದರ್ಶನಗಳು ತಮ್ಮ ತತ್ತ್ವವನ್ನು ಸಾಧಿಸುವಾಗ ಉಳಿದ ದರ್ಶನಗಳನ್ನು ಟೀಕಿಸುತ್ತವೆ. ಅವೈದಿಕ ದರ್ಶನಗಳು ವೈದಿಕರು ಹೇಳುವ ಆತ್ಮಾಸ್ತಿತ್ವವನ್ನು ನಿರಾಕರಿಸುತ್ತವೆ. ಉಪನಿಷತ್ತಿನ ದರ್ಶನಗಳು ವೈದಿಕರ ಕರ್ಮಕಾಂಡವನ್ನು ಟೀಕಿಸುತ್ತವೆ. ಅದ್ವೈತ, ವಿಶಿಷ್ಟಾದ್ವೈತ, ತತ್ತ್ವವಾದಗಳಂಥ ದರ್ಶನಗಳ ದಾರ್ಶನಿಕರು ಪರಸ್ಪರ ಒಬ್ಬರನ್ನೊಬ್ಬರು ಟೀಕಿಸುತ್ತಾರೆ. ಹಾಗೆಯೇ ವೀರಶೈವ ದರ್ಶನವೂ ಉಳಿದ ದರ್ಶನಗಳನ್ನು ಟೀಕಿಸುತ್ತದೆ. ಹೀಗೆ ನಮ್ಮ ಪೂರ್ವಜರು ಪರಸ್ಪರರ ದರ್ಶನಗಳನ್ನು ಟೀಕಿಸುತ್ತ, ಪರರ ಟೀಕೆಗಳಿಗೆ ಸಮಾಧಾನವನ್ನು ಹೇಳುತ್ತ ತಮ್ಮ ತಮ್ಮ ದರ್ಶನಗಳ ವಾದಗಳನ್ನು ಶ್ರೀಮಂತವಾಗಿಸುತ್ತ ಬಂದಿದ್ದಾರೆ. ಈ ಚರ್ಚೆಯ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಮತ್ತಷ್ಟು ಓದು 
ಎತ್ತ ಸಾಗುತ್ತಿದೆ ಕನ್ನಡದ ಬೌದ್ಧಿಕ ಜಗತ್ತು..?
– ಡಾ. ಪ್ರವೀಣ ಟಿ. ಎಲ್
ಉಪನ್ಯಾಸಕರು
ಕುವೆಂಪು ವಿಶ್ವವಿದ್ಯಾನಿಲಯ
ಬೌದ್ಧಿಕವಲಯದಲ್ಲಿ ಮುಕ್ತ ಸಂವಾದಗಳು ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮುಖ್ಯ. ಅವುಗಳು ಹೆಚ್ಚೆಚ್ಚು ನಡೆಯಲೆಂದೇ ಯುಜಿಸಿಯಂತಹ ಸಂಸ್ಥೆಗಳು, ಸರ್ಕಾರಗಳು ಕೋಟಿಗಟ್ಟಲೇ ಹಣವನ್ನು ನೀಡುತ್ತವೆ. ವಿದ್ಯಾರ್ಥಿಗಳ ನಡುವೆ, ಚಿಂತಕರ ನಡುವೆ ಸಂವಾದಗಳು, ಚರ್ಚೆಗಳು ನಡೆದರೆ ಮಾತ್ರವೇ ತಮ್ಮ ತಿಳುವಳಿಕೆಯ ಮಿತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಹೊಸ ಹೊಸ ಚಿಂತನೆಯ ಉಗಮಕ್ಕೆ ದಾರಿಯಾಗಲಿವೆ. ಆಗ ಅಲ್ಲಿನ ಬೌದ್ಧಿಕ ವಲಯವು ಹೆಚ್ಚು ಕ್ರಿಯಾಶೀಲವಾಗಿದೆ ಎಂದು ತೀರ್ಮಾನಿಸಬಹುದು. ಕರ್ನಾಟಕದ ಸಂದರ್ಭದಲ್ಲಿ ಬುದ್ಧಿಜೀವಿಗಳೆಂದರೆ ಸಾಹಿತಿಗಳು ಎಂಬಂತಾಗಿದೆ. ಕನ್ನಡ ಬೌದ್ಧಿಕ ವಲಯದಲ್ಲಿ ಇಂತಹ ಸಂವಾದಗಳು ನಡೆಯುತ್ತಿವೆಯೇ? ಎಂಬ ಮುಖ್ಯ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಾದ ಸುಸಂದರ್ಭದಲ್ಲಿದ್ದೇವೆ. ಮತ್ತಷ್ಟು ಓದು 
ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಬಹುದೇ?
– ಸುರೇಶ್ ಮುಗಬಾಳ್
ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಇದರ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ, ದೇಶದ ಘನತೆಗೆ ತಕ್ಕಂತೆ ಹುಲಿಯು ರಾಷ್ಟ್ರ ಪ್ರಾಣಿಯಾಗಿರುವುದು ದೇಶಪ್ರೇಮಿಗಳಾದ ನಮಗೆ ಒಂದು ರೀತಿಯ ಗೌರವವೆಂದೇ ಭಾವಿಸಿದ್ದೇವೆ. 2006ರ ಹುಲಿಗಣತಿಯ ಪ್ರಕಾರ ಇಡೀ ಭಾರತದಲ್ಲಿ ಕೇವಲ 1411 ಹುಲಿಗಳು ಮಾತ್ರ ಬದುಕಿದ್ದವು. ಇನ್ನೇನು ನಮ್ಮ ರಾಷ್ಟ್ರ ಪ್ರಾಣಿ ನಮ್ಮ ದೇಶದಲ್ಲೇ ಇಲ್ಲವಾಗುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಹುಲಿಗಳ ರಕ್ಷಣೆಗಾಗಿ ಹಲವಾರು NGO ಗಳು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಬಗ್ಗೆ ಎಚ್ಚೆತ್ತುಕೊಂಡ ಭಾರತ ಸರ್ಕಾರ ಹುಲಿಗಳ ರಕ್ಷಣೆಗೆ ಮುಂದಾಯಿತಲ್ಲದೆ ಹುಲಿಗಳನ್ನು ಸಂರಕ್ಷಿಸಿ ಉಳಿಸುವ ಕಾರ್ಯಕ್ಕೆ ಮೊದಲಾಯಿತು. ಈ ಎಚ್ಚರಿಕೆ ಕ್ರಮದ ಫಲವಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗತೊಡಗಿತು. 2011 ರ ಗಣತಿಯಲ್ಲಿ 1706 ರಷ್ಟಿದ್ದ ಹುಲಿಗಳ ಸಂಖ್ಯೆ 2014 ರಲ್ಲಿ 2226 ರಷ್ಟಾಯಿತು. ಭಾರತದ ಮಟ್ಟಿಗೆ ಇದೊಂದು ಧನಾತ್ಮಕ ಅಂಶವಾಗಿತ್ತು. ಇನ್ನು ಇತ್ತೀಚಿನ ಹುಲಿಗಣತಿಯ ಪ್ರಕಾರ ಗರಿಷ್ಠ 2500 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಸುಂದರ್ಬನ್ ಕಾಡುಗಳನ್ನು ಹುಲಿಗಳ ಸಂರಕ್ಷಿತಾರಣ್ಯ ಎಂದು ಗುರುತಿಸುವುದಕ್ಕೆ ಮೊದಲು ಈ ಅಂಶವನ್ನೊಮ್ಮೆ ನೋಡಿ. ಇಡೀ ಭಾರತದಲ್ಲಿ ಅತೀ ಹೆಚ್ಚು ಹುಲಿಗಳಿರುವುದು ನಮ್ಮ ಕರ್ನಾಟಕದಲ್ಲಿ. ಮತ್ತಷ್ಟು ಓದು 




