ಮರೆತರೆ ಕ್ಷಮಿಸಿದಂತೆ ಆದೀತು,ಎಚ್ಚರ!
– ಭರತ್ ಶಾಸ್ತ್ರೀ
ಈ ವರ್ಷದ ಗಣರಾಜ್ಯೋತ್ಸವಕ್ಕೆ ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಪೋಲಿಸರ ಸರ್ಪಕಾವಲಿನಲ್ಲಿ ಧ್ವಜಾರೋಹಣ ನಡೆಸಲಾಯಿತು, ಜತೆಗೆ ಶ್ರೀನಗರದ ಲಾಲ್ ಚೌಕ್ ದಲ್ಲಿ ಧ್ವಜ ಹಾರಿಸಲಿಲ್ಲ ಎಂಬ ಕಳವಳಕಾರಿ ಸುದ್ದಿಯೂ ಬಂತು. ಈ ಹಿನ್ನೆಲೆಯಲ್ಲಿ ಜನವರಿ 24, 2010 ರ “ದಿ ಪಯೊನೀರ್” ಪತ್ರಿಕೆಯಲ್ಲಿ ಖ್ಯಾತ ಅಂಕಣಕಾರ ಕಾಂಚನ್ ಗುಪ್ತಾ ಅವರ To forget would be to forgive ಎಂಬ ಮನಕಲಕುವ ಲೇಖನದ ಸಾರಾಂಶವನ್ನು ಓದುಗರಿಗೆ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. 60 ವರ್ಷ ತುಂಬಿದ ನಮ್ಮ ಗಣರಾಜ್ಯದಲ್ಲಿ ಇಂತಹ ದೌರ್ಜನ್ಯ ನಮ್ಮ ಮಾಧ್ಯಮಗಳ ಕಣ್ಣಿಗೆ ಏಕೆ ಕಾಣುವುದಿಲ್ಲ ಎಂಬ ನನ್ನ ಹತಾಶೆಯನ್ನು ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಮತ್ತಷ್ಟು ಓದು 
ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನೇ ಪ್ರಶ್ನಿಸಬಹುದಾದರೆ ಡಾರ್ವಿನ್ ನ ವಿಕಾಸವಾದವನ್ನೇಕಲ್ಲ?
– ಸುಜಿತ್ ಕುಮಾರ್
ವರ್ಷ ಕ್ರಿಸ್ತ ಶಕ 1917. ಸಾಪೇಕ್ಷತಾ ಸಿದ್ಧಾಂತವೆಂಬ (Theory of Relativity) ಮಹಾನ್ ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದ್ದ ಐನ್ಸ್ಟೀನ್ ಎಂದರೆ ಇಡೀ ವಿಶ್ವವೇ ತಲೆಬಾಗುತಿದ್ದ ಕಾಲ. ಆನೆ ನಡೆದಿದ್ದೆ ದಾರಿ ಎಂಬಂತೆ ಅಂದು ಐನ್ಸ್ಟೀನ್ ಮಂಡಿಸುತಿದ್ದ ಸಿದ್ಧಾಂತಗಳೆಲ್ಲವೂ ಸಂಶೋಧನಾ ವಲಯದಲ್ಲಿ ಅಲ್ಲಿಯವರೆಗೂ ನಂಬಿಕೊಂಡು ಬಂದಿದ್ದ ವೈಜ್ಞಾನಿಕ ಸೂತ್ರಗಳನೆಲ್ಲವನ್ನೂ ತಲೆಕೆಳಗಾಗಿಸುತ್ತಿದ್ದವು. ವಿಜ್ಞಾನವೆಂದರೆ ಹಾಗೆಯೆ ಅಲ್ಲವೇ ಮತ್ತೆ? ಹೀಗೆ ಅಣು, ಪರಮಾಣು, ಭೂಮಿ, ಸೌರಮಂಡಲ, ಜಗತ್ತು ಎಂಬ ಸೂಕ್ಷ್ಮದಿಂದಿಡಿದು ಸಮಗ್ರದವರೆಗೂ ಆತನ ಸಂಶೋಧನೆಗಳು ಜರುಗುತ್ತಿದ್ದವು. ಅಂತಹದೇ ಸಂಶೋಧನೆಗಳಲ್ಲಿ ವಿಶ್ವದ ರಚನೆಯ ಸಂಶೋದನೆಯೂ ಕೂಡ ಒಂದು. ಐನ್ಸ್ಟೀನ್ನ ಪ್ರಕಾರ ಸಕಲ ವಿಶ್ವದ (ಬ್ರಹ್ಮಾಂಡ) ಆಕಾರವು ಜಡ ವಸ್ತುವಿನಂತೆ ಸ್ಥಿರವಾಗಿದ್ದೂ ಗೋಳಾಕಾರದ ರಚನೆಯನ್ನು ಹೊಂದಿದೆ ಎಂಬುದಾಗಿತ್ತು (Static Universe). ಆದರೆ ಅಷ್ಟೊತ್ತಿಗಾಗಲೇ ಕೆಲ ವಿಜ್ಞಾನಿಗಳು ವಿಶ್ವವು ಸ್ಥಿರವಾಗಿರದೆ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ ಎಂಬ ವಾದವನ್ನು ಮಂಡಿಸಿರುತ್ತಾರೆ. ಅದನ್ನು ಸಾಧಿಸಿ ತೋರಿಸುವ ಸನಿಹದಲ್ಲೂ ಇರುತ್ತಾರೆ. ಆದರೆ ಐನ್ ಸ್ಟೀನಿನ್ನ ಸ್ಥಿರವಾದದ ನಂತರ ಅವರೆಲ್ಲರ ವಾದಗಳು ಕೊಂಚ ಮಂಕಾಗತೊಡಗುತ್ತವೆ. ಅಂದಿನ ವಿಜ್ಞಾನ ವಲಯ ಕ್ರಮೇಣವಾಗಿ ಐನ್ಸ್ಟೀನ್ ನ್ನಿನ Static Universe ವಾದವನ್ನು ಒಪ್ಪಿಕೊಳ್ಳತೊಡಗಿತು. ಅದು ವರ್ಷ 1929. ಅಮೇರಿಕಾದ ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ ವಿಶ್ವದ ರಚನೆಯ ಬಗ್ಗೆ ಐನ್ಸ್ಟೀನ್ ನ್ನಿನ ವಾದಕ್ಕೆ ವಿರುದ್ಧವಾಗಿರುವ ಸಿದ್ಧಾಂತವೊಂದನ್ನು ಮಂಡಿಸುತ್ತಾನೆ ಅಲ್ಲದೆ ಅದನ್ನೂ ಸಾಧಿಸಿಯೂ ತೋರುತ್ತಾನೆ. ಆತನ ಪ್ರಕಾರ ಗ್ಯಾಲಕ್ಸಿಗಳ (ತಾರಾಗಣ) ದೂರ ಅವುಗಳ ಸ್ಥಾನಪಲ್ಲಟದೊಟ್ಟಿಗೆ ನೇರ ಸಂಬಂಧವನ್ನು ಹೊಂದಿರುತ್ತವೆ ಎಂಬುದಾಗಿರುತ್ತದೆ. ಅರ್ಥಾತ್ ಪ್ರಸ್ತುತ ಕಾಣಸಿಗುವ ಗ್ಯಾಲಕ್ಸಿಗಳು ದೂರಸರಿಯುತ್ತಿರುವುದು ವಿಶ್ವವು ಹಿಗ್ಗುತ್ತಿದೆ ಎಂಬುದಾಗಿರುತ್ತದೆ. ಹಬಲ್ನ ಸಿದ್ದಾಂತ ನಿಜವಾದ ಸುದ್ದಿಯನ್ನು ಕೇಳಿದ ಕೂಡಲೇ ಐನ್ಸ್ಟೀನ್ ತನ್ನ Static Universe ಸಿದ್ದಾಂತವನ್ನು ಕೈಬಿಡುತ್ತಾನೆ ಅಲ್ಲದೇ ಮುಂದೊಂದು ದಿನ ಆತ ತನ್ನ ಜೀವನದಲ್ಲಿ ಜರುಗಿದ ಅತಿ ದೊಡ್ಡ ಪ್ರಮಾದಗಳಲ್ಲಿ Static Universe ಸಿದ್ಧಾಂತವೂ ಒಂದು ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ಮತ್ತೊಮ್ಮೆ ವಿಜ್ಞಾನವೆಂಬುದು ನಿಂತ ನೀರಲ್ಲ ಎಂಬುದು ಸಾಬೀತಾಗುತ್ತದೆ. ಮತ್ತಷ್ಟು ಓದು 
ಅನಂತಕುಮಾರ್ ಹೇಳಿದ್ದರಲ್ಲೇನು ತಪ್ಪಿದೆ?
– ಜೆಬಿಆರ್ ರಂಗಸ್ವಾಮಿ
ಅನಂತ ಕುಮಾರ್ ಹೆಗಡೆಯವರ ಮಾತುಗಳನ್ನು ಕೇಳಿದೆ. ಯಾವ context ನಲ್ಲಿ ಯಾಕಾಗಿ ಆ ಮಾತುಗಳನ್ನಾಡಿದ್ದಾರೆ ? ಅದನ್ನೂ ಆಲಿಸಿದೆ. ಅವರು ಉದ್ದೇಶಿಸಿ ಹೇಳಿದ ಮಾತುಗಳಲ್ಲಿ ಅಪರಾಧವೇನಿದೆ ? ಅನ್ನಿಸಿತು. ಮತ್ತೊಮ್ಮೆ ಎಲ್ಲ ಛಾನಲ್ಗಳಲ್ಲಿ ಅವರು ಆಡಿದ ಮಾತುಗಳನ್ನು ಗ್ರಹಿಸಲು ಯತ್ನಿಸಿದೆ. ಕಾವ್ಯಾನಂದರ ( ಕುವೆಂಪು ಅಲ್ಲ ) ಮೊದಲು ನೀನು ಮಾನವನಾಗು ಎಂಬುದನ್ನು ಉಲ್ಲೇಖಿಸಿ ಪ್ರಾಸಂಗಿಕವಾಗಿ ಮಾತನಾಡಿದ್ದಾರೆಯೇ ಹೊರತು, ಆ ಮಾತುಗಳನ್ನು ಅವಹೇಳನ ಮಾಡಿದ್ದಾರೆ ಅನ್ನಿಸಲಿಲ್ಲ. ಕಾವ್ಯಾನಂದರನ್ನು ಟೀಕಿಸಲಿಲ್ಲ. ಬುದ್ದಿಜೀವಿಗಳು ಎಂದೊಡನೆ ‘ಪುಸ್ತಕ ಬರೆವ ಎಲ್ಲರೂ’ ಅಂದುಕೊಳ್ಳಬೇಕಿಲ್ಲ. ಆ ಹೆಸರಿನಲ್ಲಿ ವ್ಯಾಪಾರ ಮಾಡುವ ಗೋಸುಂಬೆಗಳು, ದುರ್ಲಾಭ ಪಡೆದುಕೊಳ್ಳುವ ವಂಚಕರು; ಫೋನು, ಫ್ಯಾನು, ಗೂಟದ ಕಾರಿನ ಸವಲತ್ತಿಗಾಗಿ ಹಾತೊರೆವ ಅಪ್ರಾಮಾಣಿಕರ ಗುಂಪನ್ನು ಉದ್ದೇಶಿಸಿ ಹೇಳಿದ ಮಾತುಗಳು ಎಂದು ಯಾರಿಗಾದರೂ ಗೊತ್ತಾಗುತ್ತದೆ. ಬುದ್ದಿಜೀವಿಗಳ ಸೋಗಿನಲ್ಲಿ ಪರಾನ್ನಪುಷ್ಟರಾಗಿರುವ ಗಂಜಿಗಿರಾಕಿಗಳನ್ನು ಎಲ್ಲ ಕಡೆಯೂ ನಾವು ದಿನವೂ ನೋಡುತ್ತಿಲ್ಲವೇ ? ಮತ್ತಷ್ಟು ಓದು 
ಸಂಘಟನೆಯನ್ನು ನಿಷೇಧಿಸಬಹುದು.ಆದರೆ ಮನಸ್ಥಿತಿಯನ್ನು ಏನು ಮಾಡುವುದು?
– ರಾಕೇಶ್ ಶೆಟ್ಟಿ
ಸಂಘಟನೆಯನ್ನು ನಿಷೇಧಿಸಬಹುದು.ಆದರೆ,ಮನಸ್ಥಿತಿಯನ್ನು ಏನು ಮಾಡುವುದು? ಇಂತಹದ್ದೊಂದು ಪ್ರಶ್ನೆಯನ್ನು ಫೇಸ್ಬುಕ್ಕಿನಲ್ಲಿ ಗೆಳೆಯ ಸಂದೀಪ್ ಕೇಳಿದ್ದರು.ಅವರ ಪ್ರಶ್ನೆಯಿದ್ದಿದ್ದು Ban PFI ಎಂಬ ಹೋರಾಟದ ಕುರಿತು. ವಾಜಪೇಯಿಯವರ ಕಾಲದಲ್ಲಿ ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ಆಮೇಲೇನಾಯ್ತು? ರಕ್ತಬೀಜಾಸುರರಂತೆ ನಾನಾ ಹೆಸರು,ಸಂಘಟನೆಗಳನ್ನು ಮಾಡಿಕೊಂಡು ಇಸ್ಲಾಮೀಕರಣದ ತಮ್ಮ ಅಜೇಂಡಾವನ್ನು ಇವರು ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಸಿಕೊಂಡು ಬಂದರು.ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ದೇಶದಲ್ಲಿ ನಡೆದ ಬಾಂಬ್ ಸ್ಪೋಟದ ಆರೋಪಿಗಳು ಒಂದೋ ನಿಷೇಧಿತ ಸಿಮಿಯ ಕಾರ್ಯಕರ್ತರಾಗಿದ್ದವರು ಅಥವಾ ಹೊಸತೊಂದು ಸಂಘಟನೆಯ ಬ್ಯಾನರಿನಡಿಯಲ್ಲಿ ಸಿಮಿಯ ಕಾರ್ಯವನ್ನೇ ಮುಂದುವರೆಸಿದ್ದವರು.ಅಂದರೆ ಒಂದು ವಿಷಯ ಸ್ಪಷ್ಟವಾಗಿದೆ. ಸಂಘಟನೆ ನಿಷೇಧವಾದರೂ, ಹೆಸರು ಬದಲಾದರೂ ಅವರ “ಉದ್ದೇಶ” ಬದಲಾಗಲಿಲ್. ಏಕೆ? ಈ ಪ್ರಶ್ನೆಗೆ ಉತ್ತರ ಡಾ.ಬಿ.ಆರ್ ಅಂಬೇಡ್ಕರ್ ಅವರ “Pakistan or Partition of India” ಪುಸ್ತಕದಲ್ಲಿ ಸಿಗುತ್ತದೆ. ಆ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಲ್ಲ,ಅವೆರಡರ ಜೊತೆಗೆ ಮುಖ್ಯವಾಗಿ,ಇಸ್ಲಾಮ್ ಹಾಗೂ ಭಾರತೀಯ ಮುಸ್ಲಿಂರ ಮನಸ್ಥಿತಿಯ ಬಗ್ಗೆಯೂ ವಿವರವಾಗಿ ಬರೆದಿದ್ದಾರೆ.
ಇಂತಹ ಸಂಘಟನೆಗಳ ಬಹುಮುಖ್ಯ ಉದ್ದೇಶ,ಒಂದು ದೇಶವನ್ನು ದಾರ್-ಉಲ್-ಅರ್ಬ್ ನಿಂದ ದಾರ್-ಉಲ್-ಇಸ್ಲಾಮ್ ಮಾಡುವುದೇ ಆಗಿರುತ್ತದೆ. ಏನಿದು ದಾರ್-ಉಲ್-ಅರ್ಬ್/ದಾರ್-ಉಲ್-ಇಸ್ಲಾಮ್? ಅಂಬೇಡ್ಕರ್ ಅವರ ಮಾತನ್ನೇ ಕೋಟ್ ಮಾಡುತ್ತೇನೆ. “… According to Muslim Canon Law the world is divided into two camps, Dar-ul-lslam (abode of Islam), and Dar-ul-Harb (abode of war). A country is Dar-ul-lslam when it is ruled by Muslims. A country is Dar-ul-Harb when Muslims only reside in it but are not rulers of it. That being the Canon Law of the Muslims, India cannot be the common motherland of the Hindus and the Musalmans. It can be the land of the Musalmans—but it cannot be the land of the ‘Hindus and the Musalmans living as equals…” ಅಂದರೆ, ಯಾವ ದೇಶವು ಸಂಪೂರ್ಣವಾಗಿ ಇಸ್ಲಾಮ್ ಅನ್ನು ಒಪ್ಪಿಕೊಂಡು ಮುಸ್ಲಿಮರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಇಸ್ಲಾಮ್ ಎಂದು ಕರೆಸಿಕೊಳ್ಳುತ್ತದೆ. ಯಾವ ದೇಶವು ಮುಸ್ಲಿಮೇತರರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಅರ್ಬ್ ಆಗಿರುತ್ತದೆ.
ಪ್ರಶ್ನೆ ರಾಹುಲ್ ಪಟ್ಟಾಭಿಷೇಕದ್ದಲ್ಲ; ಕಾಂಗ್ರೆಸ್ಸಿನ ನಿಗೂಢ ನಡೆಗಳದ್ದು
– ರಾಕೇಶ್ ಶೆಟ್ಟಿ
ಸೋನಿಯಾ ಗಾಂಧಿಯವರನ್ನು ಅಧ್ಯಕ್ಷೆಯನ್ನಾಗಿಸುವಾಗ,ವಯೋವೃದ್ಧ ಕೇಸರಿಯವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎನ್ನುವುದು ಈಗ ಇತಿಹಾಸ. ಆದರೆ ಕೇಸರಿಯವರ ರಾಜಕೀಯ ಅಧ್ಯಾಯ ತೀರಾ,ಇಂದಿರಾ ಗಾಂಧಿಯವರ ಕಾಲದಲ್ಲಿ ದಲಿತ ನಾಯಕ ಜಗಜೀವನ್ ರಾಮ್ ಅವರ ರಾಜಕೀಯ ಜೀವನವನ್ನು ಮುಗಿಸಿದಷ್ಟು ಕ್ರೂರವಾಗಿರಲಿಲ್ಲವೆಂಬುದೇ ಸಮಾಧಾನ!
ದೇವೇಗೌಡರ ನೇತೃತ್ವದ ಸರ್ಕಾರವನ್ನು ವಿನಾಕಾರಣ ಬೀಳಿಸಿದ್ದ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆ ಗೆಲ್ಲಲು ನಾಯಕರೇ ಇರಲಿಲ್ಲವೆಂಬ ನೆಪವೊಡ್ಡಿ ಸೋನಿಯಾ ಅವರನ್ನು ಮುನ್ನೆಲೆಗೆ ತರಲಾಯಿತು. ರಾಜೀವ್ ಗಾಂಧಿಯವರ ಕೊಲೆಯ ನಂತರ ದೇಶವನ್ನು,ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿದ್ದ ಪಿವಿ ನರಸಿಂಹರಾವ್ ಕಾಂಗ್ರೆಸ್ಸಿನಲ್ಲಿ ಯಾರಿಗೂ ಆಗ ಬೇಡವಾಗಿದ್ದರು. ಕಾರಣ ಸ್ಪಷ್ಟ, ನೆಹರೂ ಕುಟುಂಬದ ಸುತ್ತ ಸುತ್ತುವ ಕ್ಷುದ್ರ ಗ್ರಹಗಳಿಗೆ, ನಕಲಿ ಗಾಂಧಿ ಕುಟುಂಬದ ಮುಖ ಸ್ತುತಿ ಮಾಡುವ ಗುಲಾಮರು ಇಷ್ಟವಾಗುತ್ತಾರೆಯೇ ಹೊರತು ಸ್ವಂತ ಬುದ್ಧಿಶಕ್ತಿ,ಚಿಂತನೆಯುಳ್ಳ ನಾಯಕರಲ್ಲ. ಇಂದಿರಾ ಕಾಲದಲ್ಲಿ ಜಗಜೀವನ್ ರಾಮ್,ಮೊರಾರ್ಜಿ ದೇಸಾಯಿಯಂತವರನ್ನು ಹಣಿಯಲಾಗಿತ್ತು. ಸೋನಿಯಾ ಕಾಲಕ್ಕೆ ನರಸಿಂಹರಾವ್,ಕೇಸರಿಯವರು ನೆಹರೂ ಕುಟುಂಬದ ರಾಜಕೀಯ ಬೇಟೆಗೆ ಬಲಿಯಾದರು.ಕೇಸರಿಯವರನ್ನು ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಅಧ್ಯಕ್ಷ ಹುದ್ದೆಯಿಂದ ಇಳಿಸಿ, ಸೋನಿಯಾ ಅವರಿಗೆ ಪಟ್ಟ ಕಟ್ಟಲು,ಸೋನಿಯಾರ ಟೀಮು ಸೇರಿಕೊಂಡಿದ್ದ ಪ್ರಣಬ್ ಮುಖರ್ಜಿ,ಶರದ್ ಪವಾರ್ ಅವರಂತವರಿಗೂ ಮುಂದೊಂದು ದಿನ ಕೇಸರಿಯವರಿಗೆ ಸಿಕ್ಕ ಅದೇ ರುಚಿಯ ಸ್ವಾದವೂ ಸಿಕ್ಕಿತು. ಶರದ್ ಪವಾರ್, ಸಂಗ್ಮಾ, ತಾರೀಖ್ ಅನ್ವರ್ ಅವರನ್ನು ಪಕ್ಷದಿಂದ ಹೊರಹಾಕಿದರು. ಮುಂದೊಂದು ದಿನ ಅಡ್ಡಿಯಾಗಬಹುದಾಗಿದ್ದ ರಾಜೇಶ್ ಪೈಲಟ್,ಮಾಧರಾವ್ ಸಿಂಧಿಯಾ ರಸ್ತೆ ಮತ್ತು ವಿಮಾನಾಪಘಾತಗಳಲ್ಲಿ ಸತ್ತರು.ಈ ರೀತಿ ವಿಮಾನಾಪಘಾತ/ರಸ್ತೆ ಅಪಘಾತಗಳಲ್ಲಿ ಸಾಯುವವರ ಪಟ್ಟಿ ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಲ್ಲಿ ಸಿಗುತ್ತದೆ.ಆದರೆ ಹಾಗೆ ಸಿಗುವ ಪಟ್ಟಿ ಇದೇ ನೆಹರು ಕುಟುಂಬದ ಆಸುಪಾಸಿನಲ್ಲಿ ಸುತ್ತುತ್ತದೆ. ನಿಗೂಢತೆ ಮತ್ತು ನೆಹರೂ ಕುಟುಂಬಕ್ಕೂ ಅದೇನೋ ಒಂದು ನಂಟು.
ಲೈಂಗಿಕ ದೌರ್ಜನ್ಯ,ಬುದ್ಧಿಜೀವಿಗಳು ಮತ್ತು ಐಡಿಯಾಲಜಿ
– ಅಶ್ವಿನಿ ಬಿ ದೇಸಾಯಿ ಮತ್ತು ಚೈತ್ರ ಎಂ.ಎಸ್
ಆರೋಹಿ ಸಂಶೋಧನಾ ಸಂಸ್ಥೆ, ಜಯನಗರ, ಬೆಂಗಳೂರು
ಹಾಲಿವುಡ್‍ನ ನಿರ್ದೇಶಕ ಹಾರ್ವೆ ವೇನ್‍ಸ್ಟೀನ್‍ರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಈ ಕಾರಣಕ್ಕಾಗಿ ‘MeToo’ Hasgtag ಅಡಿಯಲ್ಲಿ ಹೊರಬರುತ್ತಿರುವ ದೌರ್ಜನ್ಯಗಳ ಕಥೆಗಳು ಈಗ ಜಾಗತಿಕ ಸುದ್ದಿಯಾಗಿದೆ. ಈ ಪ್ರತಿಕ್ರಿಯೆಗಳು ಒಳ್ಳೆಯ ಬೆಳವಣಿಗೆಯೆಂದು ಭಾರತದ ಸ್ತ್ರೀವಾದಿ ಮತ್ತು ಪ್ರಗತಿಪರರ ಅಭಿಪ್ರಾಯವಾಗಿದೆ. ಈ ನಡುವೆ, ‘MeToo’ ಚಳವಳಿಯ ಭಾಗವಾಗಿ ರಾಯಾ ಸರ್ಕಾರ್ ಎಂಬ ವಿದ್ಯಾರ್ಥಿನಿಯೊಬ್ಬಳು ಕೆಲವು ಭಾರತೀಯ ಪ್ರಾಧ್ಯಾಪಕರನ್ನು ಲೈಂಗಿಕ ಕಿರುಕುಳದಂಥ ಕೃತ್ಯಗಳಲ್ಲಿ ಆರೋಪಿಗಳೆಂದು ಗುರುತಿಸಿದ್ದಾಳೆ. ಈ ಪಟ್ಟಿಯಲ್ಲಿ ಜೆಎನ್‍ಯು, ಜಾಧವಪುರ ವಿಶ್ವವಿದ್ಯಾನಿಲಯಗಳಂಥ ಸಂಸ್ಥೆಗಳಿಂದ ಹಿಡಿದು, ಚಿಂತಕರಾದ ಕೌಶಿಕ್ ಬಸು, ಸದಾನಂದ ಮೆನನ್, ದೀಪೇಶ್ ಚಕ್ರವರ್ತಿಯವರಿಂದ ಪಾರ್ಥ ಚಟರ್ಜಿಯವರೆಗೆ ಅನೇಕರ ಹೆಸರುಗಳಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಆರೋಪಿಗಳು ಬ್ರಾಹ್ಮಣರು ಹಾಗೂ ಮೇಲ್ಜಾತಿಯವರು, ಆದ್ದರಿಂದ ಲೈಂಗಿಕ ದೌರ್ಜನ್ಯದ ಸಮಸ್ಯೆಯೇ ಜಾತಿವ್ಯವಸ್ಥೆಯ ಇನ್ನೊಂದು ರೂಪವೆಂದು ವಾದಿಸಿದ್ದಾರೆ. ಮರುಕ್ಷಣ ಮಾಲತಿ ಕುಮಾರಿ ಎಂಬ ಮತ್ತೋರ್ವ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿರುವ ದಲಿತ-ಬಹುಜನ ಅಧ್ಯಾಪಕರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದಾಳೆ. ಈ ಪಟ್ಟಿಯಲ್ಲಿ ಕಾಂಚ ಇಳಯ್ಯರಿಂದ ಹಿಡಿದು ಅನೇಕ ದಲಿತ ಚಿಂತಕರ ಹೆಸರು ಸೇರಿಕೊಂಡಿದೆ. ಚಿಂತಕರನೇಕರು ಈ ಪಟ್ಟಿಯನ್ನು ಇದು ಮೇಲ್ಜಾತಿಯ ಹುನ್ನಾರವೆಂದು ಚರ್ಚಿಸಿದ್ದೂ ಆಗಿದೆ.
ಬುದ್ಧಿಜೀವಿಗಳು ಹಾಗೂ ಪೌರಾಣಿಕ ವ್ಯಕ್ತಿಗಳು
– ವಿನಾಯಕ ವಿಶ್ವನಾಥ ಹಂಪಿಹೊಳಿ
ಈ ಲೇಖನವು ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಹರಿದು ಬಂದಿರುವ ಪೌರಾಣಿಕ ಕಥೆಗಳಲ್ಲಿ ಕಂಡು ಬರುವ ವ್ಯಕ್ತಿಗಳ ಕುರಿತು ನಮ್ಮ ದೇಶದ ಬುದ್ಧಿಜೀವಿಗಳು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವದನ್ನು ಸಮಂಜಸವಾಗಿ ವಿವರಿಸುವ ಒಂದು ಚಿಕ್ಕ ಪ್ರಯತ್ನವಾಗಿದೆ. ಬೇರೆ ಬೇರೆ ಪೌರಾಣಿಕ ವ್ಯಕ್ತಿಗಳ ಕುರಿತು ಬುದ್ಧಿಜೀವಿಗಳು ಏಕೆ ಬೇರೆ ಬೇರೆ ನಿಲುವುಗಳನ್ನು ತಾಳುತ್ತಾರೆ ಹಾಗೂ ಒಂದೇ ಪೌರಾಣಿಕ ವ್ಯಕ್ತಿಯ ಕುರಿತು ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸದಂತೆ ಕಾಣುವ ಹೇಳಿಕೆಗಳನ್ನು ಏಕೆ ಕೊಡುತ್ತಾರೆ ಎನ್ನುವದನ್ನು ಇಲ್ಲಿ ವಿವರಿಸಲು ಯತ್ನಿಸಲಾಗಿದೆ. ಮತ್ತಷ್ಟು ಓದು 
ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕು ಎಮ್ಮ ಮನ!
– ಸುಜಿತ್ ಕುಮಾರ್
ಆತ ಪ್ರಪಂಚದ ಅತಿರಥ ಶ್ರೀಮಂತ. ಆಸ್ತಿಯ ಮೊತ್ತ ಸುಮಾರು ಐದುಕಾಲು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು! ಕಾಲೇಜಿನಿಂದ ಹೊರಬಿದ್ದು ಮುಂದೆ ಇನ್ನೇನೂ ಸಾಧ್ಯವಲ್ಲ ಎಂಬಂತಿದ್ದ ಹುಡುಗನೊಬ್ಬನಿಂದ ಈ ಮಟ್ಟಿನ ಬೆಳವಣಿಗೆ ಸಾಧ್ಯವೆ ಎಂಬುದು ಇಂದಿಗೂ ಹಲವರಲ್ಲಿ ಕಾಡುತ್ತಿರುವ ಜಟಿಲ ಪ್ರಶ್ನೆ. ಇವನೊಟ್ಟಿಗೆ ಮತ್ತೊಬ್ಬನಿದ್ದಾನೆ. ಇಂದಿಗೂ ಕೀಲಿಮಣೆಯ ದಶಕದಷ್ಟು ಹಳೆಯ ಮೊಬೈಲ್ ಫೋನನ್ನೇ ಉಪಯೋಗಿಸುವ ಈತ ಸುಮಾರು ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳ ಒಡೆಯ! ಕೋಕಾ ಕೋಲಾ, ವೀಕ್ಲಿ ಮ್ಯಾಗಜಿನ್, ಚೆವಿಂಗ್-ಗಮ್ ಗಳನ್ನು ಮಾರುತ್ತಿದ್ದ ಈ ಪೋರ ‘ಲಕ್ಷ ಗಳಿಕೆಗಿರುವ ಸಾವಿರ ಮಾರ್ಗಗಳು’ ಎಂಬಂತಹ ಒಂದು ಪುಸ್ತಕದಿಂದ ಪ್ರೇರಣೆ ಪಡೆದು ಈ ಮಟ್ಟಿಗೆ ಬೆಳೆದ ಎಂದರೆ ನೀವು ನಂಬಲೇಬೇಕು! ಮತ್ತಷ್ಟು ಓದು 
ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!!
– ಸುಜಿತ್ ಕುಮಾರ್
ಕೆಳಗಿನ ಕೆಲ ಪ್ರಶ್ನೆಗಳಿಗೆ ಸಾದ್ಯವಾದರೆ ನಿಮ್ಮ ಎದೆಯ ಮೇಲೆ ಕೈಯಿರಿಸಿ ಉತ್ತರಿಸಿ. ಕಳೆದ ತಿಂಗಳು ರಾಜ್ಯದಾದ್ಯಂತ ನಡೆದ ವೈದ್ಯರ ಮುಷ್ಕರವನ್ನು ನಿಜವಾಗಿಯೂ ನೀವು ಬೆಂಬಲಿಸುತ್ತೀರಾ? ಇಂದು ಕೆಲಸ ಮಾಡಿದರಷ್ಟೇ ನಾಳಿನ ಕೂಳನ್ನು ಕಾಣುವ ಕೋಟ್ಯಂತರ ಹೊಟ್ಟೆಗಳ ಮೇಲೆ ಲಕ್ಷ ಲಕ್ಷ ಹೊರೆಯನ್ನೊರಿಸುವ ಖಾಸಗಿ ಆಸ್ಪತ್ರೆಗಳ ದಬ್ಬಾಳಿಕೆಗೆ ಕಾನೂನಿನ ಚೌಕಟ್ಟಿನಲ್ಲಿ ಕಡಿವಾಣ ಹಾಕುವ ಒಂತಿನಿತು ಕಾನೂನು ನಿಮಗೆ ಬೇಡವೆನಿಸುವುದೇ? ವೈದ್ಯ ಹೇಳಿದ್ದೆ ರೋಗ, ನೀಡಿದ್ದೆ ಮದ್ದು ಎಂಬಂತಾಗಿರುವ ಸಂದರ್ಭದಲ್ಲಿ, ರೋಗಿಗಳ/ಜನತೆಯ ಹಿತದೃಷ್ಟಿಯಿಂದ ತರಲೆತ್ನಿಸುತ್ತಿರುವ ಕಾಯಿದೆಯ ನಿಜವಾದ ಉದ್ದೇಶ ನಿಮಗೆ ತಿಳಿದಿದೆಯೇ? ನಿಮ್ಮ ಹತ್ತಿರದವರೇ ಒಬ್ಬರು ತಕ್ಷಣಕ್ಕೆ ಯಾವುದಾದರೊಂದು ಪ್ರೈವೇಟ್ ಆಸ್ಪ್ರತ್ರೆಗೆ ಸೇರಿ ನಂತರ ಹಣ ಸಾಲುತ್ತಿಲ್ಲವೆನ್ನುತ್ತ ಜಿಲ್ಲೆಯ ಅಥವಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಬಂದು ಪಡುವ ವಿಪರ್ಯಾಸವನ್ನು ಕಣ್ಣು ಮುಚ್ಚಿಕೊಂಡು ನೀವು ಸಹಿಸುತ್ತೀರಾ? ಅದೇ ಪ್ರೈವೇಟ್ ಆಸ್ಪತ್ರೆಯಲ್ಲಿ ಸತ್ತ ಒಂದು ಬಡ ಹೆಣವನ್ನು ಹಿಂದಿರುಗಿಸಲೂ ಹಣದ ಬಿಲ್ಲನ್ನೇ ಮುಂದಿಟ್ಟು ಸತಾಯಿಸುವ ಕಟು ಹೃದಯಿಗಳನ್ನು ನೀವು ಹೊತ್ತು ಮೆರವಣಿಗೆ ಮಾಡುತ್ತೀರಾ? ಯಾರೋ ಪುಡಾರಿ ರಾಜಕಾರಣಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಅಂತಹ ಸಂಸ್ಥೆಗಳನ್ನು ವಿರೋಧಿಸಲಾರ ಎಂಬುದಾದರೆ ನೀವುಗಳು ಸಹ ‘ಕುರಿಗಳು ಸಾರ್ ಕುರಿಗಳು’ ಎಂಬಂತೆ ಆತನನ್ನೇ ಹಿಂಬಾಲಿಸುತ್ತೀರಾ? ಹೇಳಿ. ಇಂದು ಒಂದು ಸಾಧಾರಣ ಜ್ವರಕ್ಕೆ ಪ್ಯಾರಾ-ಅಸಿಟಮೋಲ್ ಮಾತ್ರೆಯನ್ನು ಕೊಡಲೇ ಸಾವಿರ ಸಾವಿರ ರೂಪಾಯಿಗಳನ್ನು ಪೀಕುವ ಆಸ್ಪತ್ರೆಗಳು ದಿನಕ್ಕೆ ಇನ್ನೂರು ರೂಪಾಯಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಅಂತಹ ಆಸ್ಪತ್ರೆಗಳ ಹತ್ತಿರವೂ ಸುಳಿಯದಂತೆ ಮಾಡುತ್ತಿರುವುದು ಎಷ್ಟು ಮಟ್ಟಿನ ನ್ಯಾಯ? ಇವರಿಗೆ ಜಾಗ, ಓದು, ಕಟ್ಟಡ ಎಲ್ಲವೂ ಬಡ ಜನರ ದುಡ್ಡಿನಲ್ಲಿ ನಡೆಯುವ ರಾಜ್ಯಸರ್ಕಾರದ್ದೇ ಬೇಕು ವಿನಃ ಅಂತಹ ಬಡ ಜನರ ಶೂಶ್ರುಷೆಯಲ್ಲ. ದಿನಪೂರ್ತಿ ಇಂಗ್ಲಿಷಿನ ಪೋಷಾಕುಗಳನ್ನೇ ತೋರುತ್ತ 1 ನಿಮಿಷ ತೋರ್ಪಡಿಕೆಗೆ ಏನೋ ಎಂಬಂತೆ ಕನ್ನಡ ಕನ್ನಡ ಎಂದು ಬೊಬ್ಬೆಯೊಡೆಯುವ ಹಲವರು ಇದೇ ಕನ್ನಡ ನಾಡಿನಲ್ಲಿ ಅವೇ ಇಂಗ್ಲಿಷ್ ಔಷಧಗಳು ತಮ್ಮ ರಣಬೆಲೆಯ ಬಲದಲ್ಲಿ ನಮ್ಮವರನ್ನು ಕಬ್ಬಿನ ಜಲ್ಲೆಯಂತೆ ಅರೆಯುತ್ತಿರುವುದು ನಿಮಗೆ ತಪ್ಪು ಎನಿಸುವುದಿಲ್ಲವೇ? ಮತ್ತಷ್ಟು ಓದು 
ಮಾರ್ಕ್ಸ್ ವಾದ ಮತ್ತು ನೆಹರೂವಾದ ಗಾಂಧಿವಾದವನ್ನು ಕೊಂದಿತೇ?
ಡಾ|| ಬಿ.ವಿ ವಸಂತ ಕುಮಾರ್
ಕನ್ನಡ ಪ್ರಾಧ್ಯಾಪಕರು
ಮಹಾರಾಣಿ ಮಹಿಳಾ ಕಾಲೇಜು
ಮೈಸೂರು
ಇಂದು ಕೇರಳ ಹಾಗೂ ಕರ್ನಾಟಕದಲ್ಲಿ ಕ್ರಮವಾಗಿ ಮಾರ್ಕ್ಸ್ ವಾದಿ ಹಾಗೂ ನೆಹರೂವಾದೀ ಪ್ರಭುತ್ವಗಳು ಆಳುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಸೈದ್ಧಾಂತಿಕವಾದ ಕಾರಣಗಳಿಗಾಗಿ ಹಿಂದೂ ಕಾರ್ಯಕರ್ತರ ಕೊಲೆಗಳು ಆಗುತ್ತಿವೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರೊಟ್ಟಿಗೆ ಕೇರಳ ಹಾಗೂ ಕರ್ನಾಟಕದ ಪಿ.ಎಫ್.ಐ ಸಂಘಟನೆಯು ಮುಸ್ಲಿಂ ಮೂಲಭೂತವಾದಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಸಂಗವಿರುವ ಸಂಘಟನೆಗಳ ಜೊತೆಗೆ ಹೆಸರು ತುಳುಕು ಹಾಕಿಕೊಂಡಿದೆ. ಈ ನಡುವೆ ದಕ್ಷಿಣ ಭಾರತದ ಹೆಸರಾಂತ ನಟ ಕಮಲಹಾಸನ್ ಹಿಂದೂ ಭಯೋತ್ಫಾದನೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಮತ್ತೊಬ್ಬ ಕನ್ನಡದ ನಟ ಪ್ರಕಾಶ ರೈ ಸಮರ್ಥಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿಯ ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರು ಖಂಡಿಸಿ ಹೋರಾಟಕ್ಕಿಳಿದಿದ್ದಾರೆ. ಮತ್ತಷ್ಟು ಓದು 






