ವಿಷಯದ ವಿವರಗಳಿಗೆ ದಾಟಿರಿ

Posts from the ‘ಭಾರತ’ Category

25
ಫೆಬ್ರ

ಸತ್ಯಂ ಶಿವಂ ಸುಂದರಂ

– ರೋಹಿತ್ ಚಕ್ರತೀರ್ಥ

shiv-mahapuran“ನೀವು ವಿಜ್ಞಾನ ಬರಹಗಾರರಾಗಿ ದೇವರನ್ನು ನಂಬ್ತೀರಾ?!” ಎಂಬ ಪ್ರಶ್ನೆ ಸಾಧಾರಣವಾಗಿ ಆಗಾಗ ನನ್ನೆದುರು ಬರುತ್ತದೆ. ಹೆಚ್ಚಾಗಿ ಅಂಥ ಸಂದರ್ಭಗಳಲ್ಲೆಲ್ಲ ಪ್ರಶ್ನೆ ಕೇಳಿದವರು ಯಾರು ಎಂಬುದನ್ನು ನೋಡಿಕೊಂಡು ಉತ್ತರ ಕೊಡುತ್ತೇನೆ. ನಿಜವಾಗಿಯೂ ಧಾರ್ಮಿಕರಾಗಿದ್ದು ನನ್ನ ವಿಜ್ಞಾನ ಲೇಖನಗಳನ್ನೂ ಓದಿಕೊಂಡವರು ಕೇಳಿದ್ದರೆ ಸಂಕ್ಷಿಪ್ತವಾಗಿ “ಹೌದು” ಎಂದುಬಿಡುತ್ತೇನೆ. ಆಗ ಅವರಿಗೆ ಖುಷಿಯಾಗುತ್ತದೆ. ಪರವಾಗಿಲ್ಲ, ವಿಜ್ಞಾನ ಗಿಜ್ಞಾನ ಅಂತ ಹೇಳ್ತಿದ್ದರೂ ಹುಡುಗನಿಗೆ ದೈವಭಕ್ತಿ ಇದೆ ಎಂದು ಸಂಭ್ರಮಪಡುತ್ತ ಹೋಗುತ್ತಾರೆ. ಸ್ವಲ್ಪ ವಿಚಾರವಾದಿಗಳ ಹಾಗೆ ಕಂಡರೆ “ನಾನು ಆಸ್ತಿಕ ಎಂದು ಹೇಳಿದ್ದ ಸ್ಟೇಟ್‍ಮೆಂಟ್ ಇದ್ದರೆ ಕೊಡಿ” ಎಂದು ಕೇಳುತ್ತೇನೆ. ಈ ಮನುಷ್ಯ ಅದ್ಯಾಕೋ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ ಎಂದು ಭಾವಿಸಿದ ಅವರು ದೇವರನ್ನು ನಂಬುವ ವಿಚಾರವನ್ನು ಅಲ್ಲಿಗೇ ಬಿಟ್ಟು “ಈ ವಾರ ಈರುಳ್ಳಿ ಬೆಲೆ ಏರಿದೆ ನೋಡಿ” ಎಂದು ವಿಷಯಾಂತರ ಮಾಡುತ್ತಾರೆ. ಒಂದೆರಡು ವರ್ಷಗಳ ಹಿಂದೆ ಓರ್ವ ಹಿರಿಯ ವಿಜ್ಞಾನ ಲೇಖಕರೇ ನನಗೆ “ವಿಜ್ಞಾನ ಬರೆಯುವವನಾಗಿ ದೇವರನ್ನು ಹೇಗೆ ನಂಬ್ತೀಯೋ?” ಎಂದು ಕೇಳಿ ಗೊಂದಲಪಡಿಸಿದ್ದರು. “ನನಗೆ ದೇವರ ಬಗ್ಗೆ ಭಕ್ತಿ ಎಂಬುದು ಯಾಕೋ ಅಷ್ಟು ಸುಲಭದಲ್ಲಿ ಬರುವುದಿಲ್ಲ. ದೇವರ ಬಗ್ಗೆ ಕುತೂಹಲ ಇದೆ, ಪ್ರೀತಿ ಇದೆ, ಗೆಳೆತನ ಇದೆ” ಎಂದಿದ್ದೆ. “ಓಹೋ ಹಾಗೋ? ಅಂದರೆ ನೀನು ನಾಸ್ತಿಕನೆಂದಾಯಿತು. ನಾಸ್ತಿಕನಾಗಿದ್ದು ಆಸ್ತಿಕನಂತೆ ಬರೆಯಬೇಡ. ಆಸ್ತಿಕನಾಗಿದ್ದು ನಾಸ್ತಿಕನಂತೆ ಬರೆ” ಎಂದು ಅವರು ಉಪದೇಶ ಮಾಡಿದ್ದರು! ಅಸಲಿಗೆ ನನಗೆ ನಾನು ಆಸ್ತಿಕನೋ ನಾಸ್ತಿಕನೋ ಎಂಬ ಪ್ರಶ್ನೆಯೇ ಪ್ರಮುಖ ಅನ್ನಿಸಿಲ್ಲ. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯೂ ಈ ಎರಡು ಕೆಟಗರಿಗಳಲ್ಲಿ ಒಂದನ್ನು ಆರಿಸಿಕೊಳ್ಳಲೇಬೇಕು ಎಂದು ಯಾರಾದರೂ ಸರ್ವಾಧಿಕಾರಿ ರೂಲ್ಸು ಮಾಡುವ ತನಕ ನನಗೆ ನಿಶ್ಚಿಂತೆ. ಮತ್ತಷ್ಟು ಓದು »

21
ಫೆಬ್ರ

ವಿಶ್ವವನ್ನೇ ಅಚ್ಚರಿಯ ತೆಕ್ಕೆಗೆ ಸೆಳೆಯುವ ಭಾರತದ ದೈತ್ಯ

– ಸುರೇಶ್ ಮುಗಬಾಳ್

isroತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ತನ್ನ ಆಸೆ ಈಡೇರದೆ ಸೆರೆಮನೆಯತ್ತ ಮುಖಮಾಡಿದಾಗ, ಇತ್ತ ಇಡೀ ಪ್ರಪಂಚವೇ ನಮ್ಮ ದೇಶದತ್ತ ಮುಖಮಾಡಿತ್ತು. ಶಶಿಕಲಾ ಸೆರೆಮನೆಗೆ ಹೋಗುವುದನ್ನು ನೋಡಲಿಕ್ಕಲ್ಲಾ, ನಮ್ಮ ಹೆಮ್ಮೆಯ ISRO ( Indian Space Research Organisation) PSLV-C37 ಗ್ರಹ ನೌಕೆಯ ಸಹಾಯದಿಂದ 104 ಉಪಗ್ರಹಗಳನ್ನು ಒಂದೇ ಬಾರಿಗೆ ಕಕ್ಷೆಗೆ ಸೇರಿಸುವುದರೊಂದಿಗೆ ಯಾರೂ ಮಾಡದ ಸಾಧನೆಗೆ ಕೈ ಹಾಕಿದೆ ಎಂದು. ಅಚ್ಚರಿ ಪಡಲೇಬೇಕು..! ಏಕೆ ಗೊತ್ತೇ? ಭಾರತೀಯ ಟಿ.ವಿ. ಮಾಧ್ಯಮಗಳು ಇಡೀ ದಿನ ಶಶಿಕಲಾರ ಬಗ್ಗೆ ಪ್ರಸಾರ ಮಾಡುತ್ತಿದ್ದರೆ ಅಲ್ಲೆಲ್ಲೋ ಅಮೇರಿಕಾ, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಡ್, ಯು.ಎ.ಇ., ಇಸ್ರೇಲ್, ಖಜಕೀಸ್ತಾನ್ ದೇಶಗಳು ತಮ್ಮ ಮಾಧ್ಯಮಗಳ ತಲೆಪಂಕ್ತಿಯಲ್ಲಿ (Headlines) ನಮ್ಮ ದೇಶದ ಸಾಧನೆಯನ್ನು ಬಿತ್ತರಿಸಿದವು. ತಮ್ಮದೇ ದೇಶದ ವಿಜ್ಞಾನಿಗಳು ಭೂಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದವರಂತೆ ಅಲ್ಲಿನ ಪ್ರಜೆಗಳು ಖುಷಿಪಟ್ಟುಕೊಂಡರು. ನಮ್ಮ ಟಿ.ವಿ.ಮಾಧ್ಯಮಗಳ ಕತೆಯೇ ಬೇರೆ, ಸುದ್ದಿ ಬಿತ್ತರಿಸುವಾಗ ಗಮನಾರ್ಹವಾದ ಸುದ್ದಿಗಳು 2-3 ನಿಮಿಷಗಳಿಗಷ್ಟೇ ಸೀಮಿತವಾಗಿಸಿಬಿಡುತ್ತವೆ. ಅದೇ ಕೊಳಕು ರಾಜಕೀಯವು ಮಾಧ್ಯಮಗಳ ತುಂಬೆಲ್ಲಾ ಹರಡಿರುತ್ತದೆ. ಚೀನಾದ ಪ್ರಮುಖ ಪತ್ರಿಕೆಯೊಂದು ಭಾರತದ ಈ ಸಾಧನೆಯನ್ನು ಕೊಂಡಾಡಿ, ಸಂಪಾದಕೀಯದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿತ್ತು. ಮತ್ತಷ್ಟು ಓದು »

20
ಫೆಬ್ರ

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )

– ವಿನಾಯಕ ವಿಶ್ವನಾಥ ಹಂಪಿಹೊಳಿ

muslim-talakಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ. ಮತ್ತಷ್ಟು ಓದು »

18
ಫೆಬ್ರ

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )

–  ವಿನಾಯಕ ವಿಶ್ವನಾಥ ಹಂಪಿಹೊಳಿ

the_union_of_vaishnavism_and_shaivism_pg41ಭಾರತೀಯ ಸಂಪ್ರದಾಯಗಳಲ್ಲಿ ಟೀಕೆಗಳು ಹಾಗೂ ವಿಮರ್ಶೆಗಳು ಮುಂಚಿನಿಂದಲೂ ಬೆಳೆದುಕೊಂಡು ಬಂದಿವೆ. ನೂರಾರು ದರ್ಶನಗಳು ತಮ್ಮ ತತ್ತ್ವವನ್ನು ಸಾಧಿಸುವಾಗ ಉಳಿದ ದರ್ಶನಗಳನ್ನು ಟೀಕಿಸುತ್ತವೆ. ಅವೈದಿಕ ದರ್ಶನಗಳು ವೈದಿಕರು ಹೇಳುವ ಆತ್ಮಾಸ್ತಿತ್ವವನ್ನು ನಿರಾಕರಿಸುತ್ತವೆ. ಉಪನಿಷತ್ತಿನ ದರ್ಶನಗಳು ವೈದಿಕರ ಕರ್ಮಕಾಂಡವನ್ನು ಟೀಕಿಸುತ್ತವೆ. ಅದ್ವೈತ, ವಿಶಿಷ್ಟಾದ್ವೈತ, ತತ್ತ್ವವಾದಗಳಂಥ ದರ್ಶನಗಳ ದಾರ್ಶನಿಕರು ಪರಸ್ಪರ ಒಬ್ಬರನ್ನೊಬ್ಬರು ಟೀಕಿಸುತ್ತಾರೆ. ಹಾಗೆಯೇ ವೀರಶೈವ ದರ್ಶನವೂ ಉಳಿದ ದರ್ಶನಗಳನ್ನು ಟೀಕಿಸುತ್ತದೆ. ಹೀಗೆ ನಮ್ಮ ಪೂರ್ವಜರು ಪರಸ್ಪರರ ದರ್ಶನಗಳನ್ನು ಟೀಕಿಸುತ್ತ, ಪರರ ಟೀಕೆಗಳಿಗೆ ಸಮಾಧಾನವನ್ನು ಹೇಳುತ್ತ ತಮ್ಮ ತಮ್ಮ ದರ್ಶನಗಳ ವಾದಗಳನ್ನು ಶ್ರೀಮಂತವಾಗಿಸುತ್ತ ಬಂದಿದ್ದಾರೆ. ಈ ಚರ್ಚೆಯ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಮತ್ತಷ್ಟು ಓದು »

11
ಫೆಬ್ರ

ಶಿಕ್ಷಣದಿಂದ ಸ್ತ್ರೀ ಮತ್ತು ಉಕ್ಕಿನ ತರುಣ ಪಡೆ; ಎರಡು ತತ್ವಗಳ ಸಂಗಮ ಈ ಸಾಹಿತ್ಯ ಸಮ್ಮೇಳನ

– ಅಕ್ಷತಾ ಬಜ್ಪೆ

sister-niveditaವಿವೇಕಾನಂದರ ಪಶ್ಚಿಮದ ದಿಗ್ವಿಜಯದ ಕಥೆ ನಮಗೆಲ್ಲ ಗೊತ್ತೇ ಇದೆ. ಆದರೆ ಈ ಒಂದು ದಿಗ್ವಿಜಯ ಗುರು–ಶಿಷ್ಯೆಯರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶಕ್ಕೆ ಶುಭಶಕುನವಾಯಿತು. ಸ್ವಾಮಿ ವಿವೇಕಾನಂದರು ಹೋದಲ್ಲೆಲ್ಲಾ ಅವರನ್ನು ಅನುಸರಿಸುತ್ತಾ ಅವರ ಉಪನ್ಯಾಸಗಳನ್ನು ಕೇಳುತ್ತಿದ್ದ ಐಯರ್ಲೆಂಡಿನ ಮಾರ್ಗರೆಟ್ ಗೆ ಭಾರತದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ಭಾರತಕ್ಕೆ ಬರಲು ಉತ್ಸುಕರಾಗತೊಡಗಿದರು. ಇದಕ್ಕಾಗಿ ಸ್ವಾಮೀಜಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದರು. ಆದರೆ ಸ್ವಾಮೀಜಿ ಒಪ್ಪಲಿಲ್ಲ. ಸ್ವಾಮೀಜಿಯವರು ತಮ್ಮ ಮೊದಲ ಯುರೋಪ್ ಪ್ರವಾಸ ಮುಗಿಸಿ ಆಗಷ್ಟೇ ಭಾರತಕ್ಕೆ ಹಿಂದಿರುಗಿದ್ದರು. ಪರಿಸ್ಥಿತಿಗೆ ಸ್ಪಂದಿಸಿದ ಸ್ವಾಮೀಜಿ ಮಾರ್ಗರೆಟ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಸೂಚನೆಯಿತ್ತರು. ಮತ್ತಷ್ಟು ಓದು »

8
ಫೆಬ್ರ

ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಬಹುದೇ?

– ಸುರೇಶ್ ಮುಗಬಾಳ್

donkeyಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಇದರ ಬಗ್ಗೆ ಅನೇಕರಿಗೆ ಹೆಮ್ಮೆ ಇದೆ, ದೇಶದ ಘನತೆಗೆ ತಕ್ಕಂತೆ ಹುಲಿಯು ರಾಷ್ಟ್ರ ಪ್ರಾಣಿಯಾಗಿರುವುದು ದೇಶಪ್ರೇಮಿಗಳಾದ ನಮಗೆ ಒಂದು ರೀತಿಯ ಗೌರವವೆಂದೇ ಭಾವಿಸಿದ್ದೇವೆ. 2006ರ ಹುಲಿಗಣತಿಯ ಪ್ರಕಾರ ಇಡೀ ಭಾರತದಲ್ಲಿ ಕೇವಲ 1411 ಹುಲಿಗಳು ಮಾತ್ರ ಬದುಕಿದ್ದವು. ಇನ್ನೇನು ನಮ್ಮ ರಾಷ್ಟ್ರ ಪ್ರಾಣಿ ನಮ್ಮ ದೇಶದಲ್ಲೇ ಇಲ್ಲವಾಗುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಹುಲಿಗಳ ರಕ್ಷಣೆಗಾಗಿ ಹಲವಾರು NGO ಗಳು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರು‌‌. ಈ ಬಗ್ಗೆ ಎಚ್ಚೆತ್ತುಕೊಂಡ ಭಾರತ ಸರ್ಕಾರ ಹುಲಿಗಳ ರಕ್ಷಣೆಗೆ ಮುಂದಾಯಿತಲ್ಲದೆ ಹುಲಿಗಳನ್ನು ಸಂರಕ್ಷಿಸಿ ಉಳಿಸುವ ಕಾರ್ಯಕ್ಕೆ ಮೊದಲಾಯಿತು. ಈ ಎಚ್ಚರಿಕೆ ಕ್ರಮದ ಫಲವಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗತೊಡಗಿತು. 2011 ರ ಗಣತಿಯಲ್ಲಿ 1706 ರಷ್ಟಿದ್ದ ಹುಲಿಗಳ ಸಂಖ್ಯೆ 2014 ರಲ್ಲಿ 2226 ರಷ್ಟಾಯಿತು. ಭಾರತದ ಮಟ್ಟಿಗೆ ಇದೊಂದು ಧನಾತ್ಮಕ ಅಂಶವಾಗಿತ್ತು. ಇನ್ನು ಇತ್ತೀಚಿನ ಹುಲಿಗಣತಿಯ ಪ್ರಕಾರ ಗರಿಷ್ಠ 2500 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಸುಂದರ್ಬನ್ ಕಾಡುಗಳನ್ನು ಹುಲಿಗಳ ಸಂರಕ್ಷಿತಾರಣ್ಯ ಎಂದು ಗುರುತಿಸುವುದಕ್ಕೆ ಮೊದಲು ಈ ಅಂಶವನ್ನೊಮ್ಮೆ ನೋಡಿ. ಇಡೀ ಭಾರತದಲ್ಲಿ ಅತೀ ಹೆಚ್ಚು ಹುಲಿಗಳಿರುವುದು ನಮ್ಮ ಕರ್ನಾಟಕದಲ್ಲಿ. ಮತ್ತಷ್ಟು ಓದು »

6
ಫೆಬ್ರ

ನಾನೇ ಭಾರತ!

ಆಂಗ್ಲ ಮೂಲ: ರಾಜೀವ್ ಮಲ್ಹೋತ್ರಾ
ಅನುವಾದ : ಉದಯನ ಹೆಗಡೆ

stock-vector-greeting-card-with-hindi-text-mera-bharat-my-india-and-ashoka-wheel-on-famous-monuments-and-293935577ಭಾರತವು ಸೂಪರ್ ಪವರ್ ಆಗುವುದೆಂಬ ಕಲರವ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಸೂಪರ್ ಪವರ್‌ಗಳು ರಾಷ್ಟ್ರೀಯತೆಯ ಬಗೆಗೆ ಭ್ರಮೆಯನ್ನು ಹೊಂದಿವೆಯೇ? ಅಥವಾ ತಮ್ಮ ಹಿಂದುಳಿದ ನಾಗರೀಕತೆಯನ್ನು ಬದಲಾಯಿಸಲು ಬೇರೆಯವರಿಗೆ ಆಹ್ವಾನ ನೀಡುವುದು ಎಂದರ್ಥವೇ ? ಸೂಪರ್ ಪವರ್ ಆದ ಯಾವುದಾದರೂ ದೇಶವು ಯಾವತ್ತಾದರೂ ತನ್ನ ಪ್ರಜೆಗಳನ್ನು ವಿದೇಶೀ ಒಪ್ಪಂದದ ಏಜೆಂಟರಾಗಿ ಬಳಸಿಕೊಳ್ಳಲು ಅನವು ಮಾಡಿಕೊಡುತ್ತದೆಯೇ ? ಇಲ್ಲ. ಆದರೆ, ಭಾರತವು ಉದಾರವಾಗಿ ವಿದೇಶೀ ಒಪ್ಪಂದಗಳನ್ನು ಒಪ್ಪಿಕೊಳ್ಳುತ್ತಿದೆ. ಇದರಿಂದ ಭಾರತವವನ್ನು ಅವರು ವಿಭಕ್ತವಾಗೇ ಕಾಣುತ್ತಾರೆ. ಆದರೆ ಸೂಪರ್ ಪವರ್‌ಗಳು ಅಂದರೆ ತಪ್ಪು ತಿಳುವಳಿಕೆ ಎಂದರ್ಥವೇ ? ಮತ್ತಷ್ಟು ಓದು »

31
ಜನ

ಇಂದು ಕಂಬಳ, ನಾಳೆ ಜೋಡೆತ್ತಿನ ಗಾಡಿ, ಸಂಕ್ರಾಂತಿ, ನಾಡಿದ್ದು ಇನ್ನೇನೋ…?

– ಶಿವಕುಮಾರ ಪಿ.ವಿ.
ಸಂಶೋಧನಾ ವಿದ್ಯಾರ್ಥಿ
ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ.

860897a4867e00f161e4236fd7fe5aeeಪ್ರಾಣಿಗಳಿಗೆ ಹಿಂಸೆ ನೀಡಿ ಮನರಂಜನೆ ಪಡೆಯಲಾಗುತ್ತಿದೆ ಎಂಬುದು ಕಂಬಳ, ಜಲ್ಲಿಕಟ್ಟುವಿನಂತ ಕ್ರೀಡೆಗಳನ್ನು ನಿಲ್ಲಿಸಲು ಪ್ರಾಣಿದಯಾ ಸಂಘಗಳು ನೀಡುತ್ತಿರುವ ಕಾರಣ. ನ್ಯಾಯಾಲಯವೂ ಕೂಡ ‘ಪ್ರಾಣಿ ಹಿಂಸೆ’ಯ ಮಾನದಂಡವನ್ನಾದರಿಸಿ ಈ ಕ್ರೀಡೆಗಳಿಗೆ ನಿಷೇಧಾಜ್ಞೆಯನ್ನೂ ಹೇರುತ್ತಿದೆ. ಇದನ್ನಿಟ್ಟುಕೊಂಡೇ ನೋಡಿದರೆ, ಕೋಳಿ-ಕುರಿ, ದನಗಳನ್ನು ಕಡಿದು ತಿನ್ನುವುದು ಅವುಗಳ ಮಾರಣಹೋಮವಾಗಿ ಕಾಣಿಸಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಆಶ್ಚರ್ಯವೆಂದರೆ, ಪ್ರಾಣಿ ಹಿಂಸೆ, ಪ್ರಾಣಿ ಬಲಿಯನ್ನು ನಿಷೇಧಿಸಬೇಕೆನ್ನುವ ಸಕಲ ಪ್ರಾಣಿಗಳ ಜೀವಪರ ದಯಾಳುಗಳೆ ಬೀಫ್, ಮತ್ತಿತರ ಮಾಂಸ ಖಾದ್ಯಗಳನ್ನು, ಅವುಗಳ ರಕ್ತದ ಸೂಪನ್ನು ಚಪ್ಪರಿಸುತ್ತಿರುತ್ತಾರೆ. ಅದಕ್ಕಾಗಿ ಹೋರಾಟಗಳನ್ನೂ ಮಾಡುತ್ತಾರೆ. ಪ್ರಾಣಿಗಳನ್ನು ಬೇಕಾದರೆ ಕಡಿದು ತಿನ್ನಿ, ಆದರೆ ಅವುಗಳಿಗೆ ಹಿಂಸೆ ಕೊಡಬೇಡಿ ಎಂಬುದು ಇವರ ಆಕ್ಷೇಪಣೆ! ಹಾಗಾದರೆ, ಪ್ರಾಣಿ ಹಿಂಸೆಯ ಗುರಾಣಿಯ ಹಿಂದಿರುವ ತರ್ಕವೇನು, ಇವರ ನಿಜವಾದ ಕಾಳಜಿ ಪ್ರಾಣಿ ಹಿಂಸೆ ಮಾಡಬಾರದೆನ್ನುವುದೇ? ಮತ್ತಷ್ಟು ಓದು »

30
ಜನ

ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?

– ನರೇಂದ್ರ ಎಸ್ ಗಂಗೊಳ್ಳಿ

08ma_jallikattu_dg_1748590fನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು »

19
ಜನ

ಕಾಲೇಜು – ವಿ.ವಿಗಳಲ್ಲಿ ಐಡಿಯಾಲಜಿ ಪ್ರಣೀತ ಹೋರಾಟಗಳು ಅವಶ್ಯಕವೇ?

– ಪ್ರವೀಣ ಟಿ.ಎಲ್
ಶಿವಮೊಗ್ಗ

519ಭಾರತೀಯ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಹಲವು ಪ್ರಬಂಧಗಳೇ ಮಂಡನೆಯಾಗಿವೆ. ಆದರೆ ಇತ್ತೀಚಿನ ಕೆಲವು ಘಟನೆಗಳು ನಮ್ಮನ್ನು ಹೊಸ ಸಮಸ್ಯೆಯತ್ತ ಗಮನಹರಿಸುವಂತೆ ಮಾಡಿದೆ. ಅಂತಹ ಘಟನೆಗಳೆಂದರೆ;

  • ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯ ಸುತ್ತ ನಡೆದ ಪ್ರಹಸನ. ಆತ ವಿವಿಯಲ್ಲಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕೆ ಆತನ ಆತ್ಮಹತ್ಯೆಯನ್ನು ಕೇಂದ್ರ ಸರ್ಕಾರವೇ ವ್ಯವಸ್ಥಿತವಾಗಿ ನಡೆಸಿದೆ ಎಂಬ ಆರೋಪ.

ಮತ್ತಷ್ಟು ಓದು »