ವಿಷಯದ ವಿವರಗಳಿಗೆ ದಾಟಿರಿ

Posts from the ‘ರಾಜಕೀಯ’ Category

30
ಜನ

ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?

– ನರೇಂದ್ರ ಎಸ್ ಗಂಗೊಳ್ಳಿ

08ma_jallikattu_dg_1748590fನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು »

2
ಜನ

ಮೋದಿ ಭಕ್ತರೇನು ಮುಟ್ಟಾಳರೇ..?

– ಸಂತೋಷಕುಮಾರ ಮೆಹೆಂದಳೆ.

2( ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು ಮಿತ್ರರಷ್ಟೇ ಶತ್ರುಗಳನ್ನೂ ಗಳಿಸುತ್ತಾನೆ. ಕಾರಣ ಯಶಸ್ಸು ಎನ್ನುವುದು ಎಂಥವನ ನಿಯತ್ತನ್ನೂ ಹಾಳು ಮಾಡಿಬಿಡುತ್ತದೆ ) ಮತ್ತಷ್ಟು ಓದು »

27
ಡಿಸೆ

ಮೋದಿಯಂತವರು ರಾಜಕೀಯಕ್ಕೆ ಬರಬೇಕು..

– ರಾಕೇಶ್ ಶೆಟ್ಟಿ

2ದೇಶದ ಪಾಲಿಗೆ ಮಹತ್ವದ ದಿನಗಳಾಗಿ ಇತಿಹಾಸದ ದಿಕ್ಕು ದೆಸೆಯನ್ನೇ ಬದಲಿಸಿದ ಆಗಸ್ಟ್ ೧೫, ಜನವರಿ ೨೬, ಅಕ್ಟೋಬರ್ ೨, ಜನವರಿ ೨೩ರ ಸಾಲಿಗೆ ನಿಶ್ಚಿತವಾಗಿ ನವೆಂಬರ್ ೮ರ ದಿನವನ್ನು ಸೇರಿಸಬಹುದೆನಿಸುತ್ತದೆ. ನವೆಂಬರ್ ೮ರ ಮಧ್ಯರಾತ್ರಿಯಿಂದ ೫೦೦, ೧೦೦೦ ರೂಪಾಯಿಗಳ ಹಳೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲು ಬದಲಿಸಲು ಹೊರಟ ದಿನ. ಮತ್ತಷ್ಟು ಓದು »

24
ಡಿಸೆ

ದೇವನೂರು ಮಹಾದೇವ ಅವರಿಗೊಂದು ಪ್ರೀತಿಪೂರ್ವಕ ಪತ್ರ

– ಪ್ರವೀಣ್ ಕುಮಾರ್, ಮಾವಿನಕಾಡು

sulsuddiಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಯಲ್ಪಡುವ ಪ್ರೀತಿಯ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು.

ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ತಾವು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರೂ ಹೌದು. ಆದರೆ ನಿಮ್ಮಲ್ಲಿ ಎಳ್ಳಷ್ಟೂ ಜಂಭವಿಲ್ಲ, ಅಹಂಕಾರವಿಲ್ಲ ಮತ್ತು ದೊಡ್ಡ ದೊಡ್ಡ ಸಾಹಿತಿಗಳು ತೋರುವ ಶೋಕಿಯಿಲ್ಲ. ಸರಳತೆಯೇ ನಿಮ್ಮ ಗುರುತು ಪತ್ರ ಎಂದರೂ ತಪ್ಪಾಗದು. ಮತ್ತಷ್ಟು ಓದು »

16
ಡಿಸೆ

ಮೌಲ್ಯ ರಾಜಕಾರಣ ಮರೆತ ಜಯಲಲಿತಾ!

– ತುರುವೇಕೆರೆ ಪ್ರಸಾದ್
ಪತ್ರಕರ್ತರು

54849200ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನೊಂದಿಗೆ ಅವರ ಆಡಳಿತ ಕೊನೆಗೊಂಡಿದೆ. ಇದನ್ನೇ ಜಯಲಲಿತಾ ಯುಗಾಂತ್ಯ ಎಂದು ಬಣ್ಣಿಸಲಾಗುತ್ತಿದೆ. ತಮಿಳುನಾಡಿನ ಕೋಟಿ ಕೋಟಿ ಜನರು ತಮ್ಮ ಅಮ್ಮನ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಅಮ್ಮನ ಸಾವಿನ ಭಾವೋದ್ವೇಗದ ಅಲೆ ಉಕ್ಕಿ ಹರಿಯುತ್ತಿದೆ. ಎಲ್ಲೆಡೆ ಅಮ್ಮನ ಗುಣಗಾನ ನಡೆಯುತ್ತಿದೆ. ಜಯಲಲಿತಾ ತಾವು ಬದುಕಿರುವಷ್ಟು ದಿನವೂ ತಮ್ಮ ನಾಡಿನ ರೈತರಿಗಾಗಿ ಕಾವೇರಿ ನೀರನ್ನು ಶತಾಯಗತಾಯ ಹರಿಸಿಕೊಳ್ಳಲೇಬೇಕು ಎಂದು ಹಠ ಹಿಡಿದವರಂತೆ ವರ್ತಿಸಿದರು. ಈ ವರ್ಷವೂ ಕರ್ನಾಟಕದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗಿ ನಿಂತಿದ್ದಾಗಲೂ ಸಹ ಜಯಲಲಿತಾ ತಮ್ಮ ರಾಜ್ಯಕ್ಕೆ ನೀರು ಹರಿಸಲೇಬೇಕೆಂದು ಕರ್ನಾಟಕದ ಮೇಲೆ ಒತ್ತಡ ಹೇರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ಕರ್ನಾಟಕದ ಜನ ಅವರ ಸಾವಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ, ಒಬ್ಬ ಧೀಮಂತ ಮಹಿಳೆಯ ಸಾವಿಗೆ ನೀಡಬೇಕಾದ ಘನತೆ ಗೌರವಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರದರ್ಶಿಸಿ ಕನ್ನಡಿಗರು ಎಂದಿನಂತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಮತ್ತಷ್ಟು ಓದು »

10
ಡಿಸೆ

ಇದು ಆರಂಭ ಅಷ್ಟೇ; ಕಾದು ನೋಡೋಣ

– ಮು ಅ ಶ್ರೀರಂಗ

maxresdefault‘ಹಳ್ಳಿಗಳ ಮನೆಯಲ್ಲಿನ ಹೆಂಗಸರು’ ಆಪದ್ಧನ ಎಂದು ಕೂಡಿಡುವ ಹಣ ಸಾವಿರಾರು ರೂಪಾಯಿಗಳು ಇರಬಹುದು. ಆದರೆ ಲಕ್ಷಾಂತರ ರೂಪಾಯಿಗಳ ತನಕ ಇರುತ್ತದೆ ಎಂಬುದು ಕೇವಲ ಉತ್ಪ್ರೇಕ್ಷೆ. ಇದಕ್ಕೆ ಕಾರಣಗಳು ಹೀಗಿವೆ..

(೧). ಹಿಂದಿದ್ದಂತೆ ಈಗ ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬಗಳು ಇಲ್ಲ. ತಾವು ಪಟ್ಟ ಹಳ್ಳಿಯ ಕಷ್ಟಗಳು ತಮ್ಮ ಮಕ್ಕಳಿಗೆ ಬೇಡ ಎಂದು ತಾಯಿತಂದೆಯರೇ ತಮ್ಮ ಮಕ್ಕಳನ್ನು ಓದು, ಕೆಲಸ ಎಂದು ಪಟ್ಟಣಕ್ಕೆ ಕಳಿಸುತ್ತಿದ್ದಾರೆ ಅಥವಾ ಮಕ್ಕಳೇ ಸ್ವತಃ ಹುಟ್ಟಿದೂರನ್ನು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗಿಯಾಗಿದೆ. ಅವರು ಮತ್ತೆ ಬಂದು ಹಳ್ಳಿಯಲ್ಲಿ ತಮ್ಮಂತೆ ವ್ಯವಸಾಯ ಮಾಡಿಕೊಂಡಿರುವುದಿಲ್ಲ ಎಂದು ತಾಯಿ-ತಂದೆಯರಿಗೂ ಗೊತ್ತು; ಊರು ಬಿಟ್ಟು ಬಂದ ಮಕ್ಕಳು ಒಮ್ಮೆ ಪಟ್ಟಣ ವಾಸದ ರುಚಿ ಹತ್ತಿದ ಮೇಲೆ ಹಳ್ಳಿಗೆ ಹೋಗುವುದು ವರ್ಷಕ್ಕೊಮ್ಮೆ ಊರ ಜಾತ್ರೆಗೋ ಅಥವಾ ತಾಯಿ ತಂದೆಯರು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಬಂದ ಮೇಲೆ ಅಷ್ಟೇ. ಮತ್ತಷ್ಟು ಓದು »

6
ಡಿಸೆ

ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?

– ಸಂತೋಷಕುಮಾರ ಮೆಹೆಂದಳೆ.

hqdefault( ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್‍ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲಾ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ ಲೊಚಗುಟ್ಟಿದಂತೆ ತಾವೊಂದೆರಡು ಸಾಲು ಸೇರಿಸಿಬಿಡುತ್ತಾರೆ. ಆದರೆ ಅದರ ಕೆಳಗೆ ಮುಖ ಮೂತಿ, ಪರಿಚಯವೇ ಇಲ್ಲದವರೂ, ಜಾತಿ ಪಂಥದ ಹೊರತಾಗಿ ಪರಮ ದ್ವೇಷಿಗಳಾಗಿ ಬದಲಾಗಿ, ನಿರಂತರ ಸಂಘರ್ಷಗಳಿಗಿಳಿದು ಉಳಿದುಬಿಡುತ್ತಾರಲ್ಲ ಅದರ ಹೊಣೆಗಾರಿಕೆ ಯಾರದ್ದು…? ) ಮತ್ತಷ್ಟು ಓದು »

3
ಡಿಸೆ

ಆ ಯೋಧನ ಸಾವೂ ಕೂಡಾ ಚಿಲ್ಲರೆ ಸಂಗತಿಯಲ್ಲಿ ಹೂತುಹೋಯಿತು..!

– ಸಂತೋಷ್ ತಮ್ಮಯ್ಯ

srinivas-kumar-sinha-3ಅಂದು ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯೊಂದುನಡೆದುಹೋಗಿತ್ತು. ದೇಶಾದ್ಯಂತ ಅಚ್ಚರಿ, ಕೆಲವರಿಗೆ ಆಘಾತ. ಇದೇಕೆ ಹೀಗೆ ಎಂಬ ಉದ್ಗಾರ. ಆರ್ಮಿ ಕೇಂದ್ರಕಛೇರಿಯ ಸೌತ್‌ಬ್ಲಾಕ್‌ನಲ್ಲಿ ತಿಂಗಳುಗಟ್ಟಲೆ ಗಾಸಿಫ್‌ಗಳು. ಎಮರ್ಜೆನ್ಸಿ ಇನ್ನೂ ಹೋಗಿಲ್ಲವೇ? ಇಂದಿರಾ ಸರ್ವಾಧಿಕಾರಕ್ಕೆ ಇದಕ್ಕಿಂತ ಇನ್ನೇನು ಉದಾಹರಣೆ ಬೇಕು ಎಂದು ವಿರೋಧ ಪಕ್ಷಗಳ ಆರೋಪ.

ಅಂದು ನಡೆದಿದ್ದು ಇಷ್ಟು:
ಆರ್ಮಿಯ ೧೧ನೇ ಚೀಫ್ ಆಫ್ ಆರ್ಮಿ ಸ್ಟಾಫ್ ಕೆ.ವಿ ಕೃಷ್ಣರಾವ್ ೧೯೮೩ರ ಮೇ ಕೊನೆಯಲ್ಲಿ ನಿವೃತ್ತರಾಗುವವರಿದ್ದರು. ಕೆಲವು ದಿನಗಳ ಹಿಂದಿನಿಂದಲೇ ಸೌತ್ ಬ್ಲಾಕ್ ಹೊಸ ಜನರಲ್‌ನ ನೇಮಕದ ಪ್ರಕ್ರಿಯೆಯಲ್ಲಿ ನಿರತವಾಗಿತ್ತು. ಹೊಸ ಜನರಲ್ ಯಾರೆಂಬ ಬಗ್ಗೆ ಆರ್ಮಿಗಾಗಲಿ, ಜನರಿಗಾಗಲೀ ಯಾವುದೇ ಗೊಂದಲಗಳಿರಲಿಲ್ಲ. ಏಕೆಂದರೆ ಕೃಷ್ಣರಾವ್ ಚೀಫ್ ಆಗಿದ್ದಾಗ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದವರು ಮಹಾ ಮೇಧಾವಿ ಯೋಧ ಶ್ರೀನಿವಾಸ್ ಕುಮಾರ್ ಸಿನ್ಹಾ. ಮಿಲಿಟರಿಯ ಸೇವಾರ್ಹತೆಯಲ್ಲಿ ಸದ್ಯಕ್ಕಿದ್ದ ಹಿರಿಯರು ಅವರೇ. ಅಲ್ಲದೆ ಅವರು ಪ್ರಥಮ ಮಹಾದಂಡನಾಯಕ ಜನರಲ್ ಕಾರ್ಯಪ್ಪನವರಿಗೆ adc-aide de corps ಅಗಿದ್ದ ಅನುಭವಸ್ಥರು. ಜನರಲ್ ಆಯ್ಕೆಗೆ ಇನ್ನು ಅಧಿಕೃತ ಪ್ರಕಟಣೆಯೊಂದು ಮಾತ್ರ ಉಳಿದಿತ್ತು. ಜ.ಕೃಷ್ಣರಾವ್ ನಿವೃತ್ತರಾಗುವ ಕೇವಲ ಮೂರು ದಿನಗಳ ಹಿಂದೆ ಆ ಅಧಿಕೃತ ಪ್ರಕಟಣೆ ಹೊರಬಿತ್ತು. ದೇಶವನ್ನು ಆಘಾತಕ್ಕೆ ದೂಡಿದ್ದು ಆ ಪ್ರಕಟಣೆಯೇ. ಏಕೆಂದರೆ ಎಸ್. ಕೆ. ಸಿನ್ಹಾ ಅವರಿಗಿಂತ ವಯಸ್ಸಿನಲ್ಲೂ, ಸೇವಾವಧಿಯಲ್ಲೂ ಕಿರಿಯರಾಗಿದ್ದ ಲೆ.ಜ ಎ.ಎಸ್. ವೈದ್ಯ ಅವರನ್ನು ಭೂಸೇನೆಯ ದಂಡನಾಯಕ ಎಂದು ಘೋಷಣೆ ಮಾಡಲಾಗಿತ್ತು. ಈ ಎ.ಎಸ್ ವೈದ್ಯ ಎಂಥ ಮಹಾ ಯೋಧರೆಂದರೆ ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದು mahavirachakra bar ಎಂದು ಹೆಸರು ಪಡೆದಿದ್ದವರು. ಅಂದರೆ ಎಸ್. ಕೆ ಸಿನ್ಹಾರನ್ನು ಸೂಪರ್ ಸೀಡ್ ಮಾಡಲಾಗಿತ್ತು! ಮತ್ತಷ್ಟು ಓದು »

25
ನವೆಂ

ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ

– ವಿನಾಯಕ ಹಂಪಿಹೊಳಿ

e-commerceಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.

ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು »

21
ನವೆಂ

ಸದ್ಯದ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳ ನಡೆ ಸರಿಯಾಗಿದೆಯೇ..?

– ಮು ಅ ಶ್ರೀರಂಗ

maxresdefaultದಿನ ನಿತ್ಯ ಮಾಮೂಲಾಗಿ ಸಾಗುತ್ತಿದ್ದ ಜೀವನಕ್ಕೆ ಸ್ವಲ್ಪ ತಡೆ ಉಂಟಾದಾಗ ಮನಸ್ಸಿಗೆ ಕಸಿವಿಸಿ ಆಗುವುದು ಸಹಜ. ೫೦೦ ಮತ್ತು ೧೦೦೦ ನೋಟುಗಳ ಚಲಾವಣೆಯ  ನಿಷೇಧದ ಪರಿಣಾಮದಿಂದಲೂ ಹೀಗಾಗಿದೆ. ಬಸ್ಸು, ರೈಲು, ವಿಮಾನ, ನೀರು, ವಿದ್ಯುತ್ತು ಇವುಗಳ ದರ ಇಷ್ಟನೇ ತಾರೀಖಿನಿಂದ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿ ಘೋಷಣೆ ಮಾಡಿದಂತೆ ನೋಟಿನ ವಿಷಯದಲ್ಲಿ  ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದರ ಹಿಂದಿನ ಉದ್ದೇಶವೇ ನಿರರ್ಥಕವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆ ಎರಡು ನೋಟುಗಳ ಬದಲಾವಣೆಗಾಗಿ ೫೦ ದಿನಗಳ ಕಾಲಾವಕಾಶವಿದೆ.  ಆದರೆ   ಹೆಚ್ಚಿನ ಪತ್ರಿಕೆ ಮತ್ತು ಟಿ  ವಿ ಸುದ್ದಿ ಮಾಧ್ಯಮಗಳು ನೆಗೆಟಿವ್ ಧೋರಣೆಗೆ ಕೊಟ್ಟಷ್ಟು ಮಹತ್ವವನ್ನು ಧನಾತ್ಮಕ ಸುದ್ದಿಗಳಿಗೆ ಕೊಡದೆ ಇರುವುದು ಸಮಸ್ಯೆಯು ಜಟಿಲವಾಗುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಹರಡುತ್ತಿದೆ. ಮತ್ತಷ್ಟು ಓದು »