ವಿಷಯದ ವಿವರಗಳಿಗೆ ದಾಟಿರಿ

Posts from the ‘ಶಿಕ್ಷಣ’ Category

15
ಮೇ

ಸಿದ್ಧಾಂತಗಳ ಸಂಗ ಸಾಕಾಗಿದೆ; ದೇಶಭಕ್ತಿಯ ಸಂಘ ಬೇಕಾಗಿದೆ

– ರೋಹಿತ್ ಚಕ್ರತೀರ್ಥ

indian-flag-rallyಕನ್ನಡದಲ್ಲಿ “ತಾಯಿನಾಡು” ಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದ ಮತ್ತು ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಮೊದಲ ಚುನಾಯಿತ ಶಾಸಕನಾಗಿದ್ದ ಪಿ.ಆರ್.ರಾಮಯ್ಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ದಿನಗಳು. ಪದವಿಯ ಅಂತಿಮ ವರ್ಷದಲ್ಲಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನದಿನಕ್ಕೆ ಏರುತ್ತಿದ್ದ ಹೊತ್ತು. ಗಾಂಧಿಯ ಮಾತುಗಳನ್ನು ಕೇಳಲು ಎಲ್ಲಿಂದ ಎಲ್ಲಿಯವರೆಗೂ ಕಾಲ್ನಡಿಗೆಯಲ್ಲೋ ರೈಲಿನಲ್ಲೋ ಹೋಗಿಬರಲು ತಯಾರಾಗಿದ್ದ ರಾಮಯ್ಯನವರಿಗೆ ಒಂದು ದಿನ ವಾರಾಣಸಿಯ ಪಕ್ಕದಲ್ಲೇ ಗಾಂಧಿ ಭಾಷಣ ಏರ್ಪಾಟಾಗಿದ್ದನ್ನು ಕಂಡು ಸಕ್ಕರೆ ಹಾಲು ಕುಡಿದಷ್ಟು ಸಂತೋಷವಾಯಿತು. ಅಂದಿನ ಭಾಷಣದಲ್ಲಿ ಗಾಂಧಿ, ಹೋರಾಟಕ್ಕೆ ಭೀಮಬಲ ಬರಬೇಕಾದರೆ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಾಲಾ-ಕಾಲೇಜುಗಳಿಂದ ಹೊರಬಂದು ಹೋರಾಟದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಮಾತು ರಾಮಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅವರು ತಕ್ಷಣ ತನ್ನ ಪದವಿ ವ್ಯಾಸಂಗವನ್ನು ಮೊಟಕುಗೊಳಿಸಿ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಬಿಟ್ಟರು. ಇನ್ನೊಂದೆರಡು ವಾರಗಳು ಕಳೆದರೆ ಮುಖ್ಯಪರೀಕ್ಷೆಗಳು ಪ್ರಾರಂಭವಾಗುವುದರಲ್ಲಿದ್ದವು. ಈಗ ಏಕಾಏಕಿ ವಿಶ್ವವಿದ್ಯಾಲಯ ತೊರೆದರೆ ಗತಿಯೇನು ಎಂಬ ಸಣ್ಣದೊಂದು ಅಂಜಿಕೆಯೂ ಅವರ ಮನದ ಮೂಲೆಯಲ್ಲಿತ್ತು. ನೇರವಾಗಿ ವಿವಿಯ ಕುಲಪತಿಗಳಾಗಿದ್ದ ಮದನ ಮೋಹನ ಮಾಲವೀಯರಲ್ಲಿಗೆ ಹೋಗಿ ತನ್ನ ಇಬ್ಬಂದಿತನವನ್ನು ವಿವರಿಸಿ ಏನು ಮಾಡಲಿ ಎಂದು ಮಾರ್ಗದರ್ಶನ ಕೇಳಿದರು. ಮತ್ತಷ್ಟು ಓದು »

11
ಮೇ

ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?

– ನಾಗೇಶ ಮೈಸೂರು
EDUCATIONಹೀಗೆ ಯೋಚಿಸುತ್ತ ಕುಳಿತಿದ್ದೆ ಪಾರ್ಕಿನ ಬೆಂಚೊಂದರ ಮೇಲೆ. ಶನಿವಾರ, ಭಾನುವಾರಗಳ ಒಂದೂವರೆ ತಾಸಿನ ನಡೆದಾಟ ಮುಗಿಸಿ, ಹಿಂದಿರುಗುವ ಮುನ್ನ ಅಲ್ಲೊಂದರ್ಧ ಗಂಟೆ ಕೂತು ವಿಶ್ರಮಿಸಿ ಹೊರಡುವುದು ರೂಢಿ. ಹಾಗೆ ಕೂತ ಗಳಿಗೆ, ಮನಸಿಗಷ್ಟು ಹುರುಪೆದ್ದರೆ ಒಂದು ಕವನವೊ, ಚುಟುಕವೊ ಗೀಚುವುದುಂಟು. ಇಲ್ಲವಾದರೆ, ಕಿವಿಗುಟ್ಟುವ ಹಾಡಿನ ಜತೆ ಗುನುಗುತ್ತ ಯಾವುದೋ ಆಲೋಚನೆಯಲ್ಲಿ ಕಳುವಾಗುವುದು ಉಂಟು. ಪ್ರತಿಬಾರಿಯೂ ಇದೇ ಪದೇ ಪದೇ ಪುನರಾವರ್ತನೆಯಾದರೂ ಇನ್ನು ಬೋರೆನಿಸುವ ಮಟ್ಟಕ್ಕೆ ತಲುಪದ ಕಾರಣ, ಇದನ್ನು ಮನಸಿಗೆ ಹಿತವಾದ ಪ್ರಕ್ರಿಯೆಯೆಂದೇ ಅಂದುಕೊಂಡೇನೋ, ಒಂದೆರಡು ವರ್ಷಗಳಿಂದ ಇದು ಹಾಗೆ ಮುಂದುವರೆದಿದೆ. ಮತ್ತಷ್ಟು ಓದು »

18
ಏಪ್ರಿಲ್

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ: ಪರ ಮತ್ತು ವಿರೋಧ

-ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟೆ

sslc-examವೃತ್ತಿಪರ ಕೋರ್ಸುಗಳ ಏಕರೂಪ ಅರ್ಹತಾ ಪ್ರವೇಶ ಪರೀಕ್ಷೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ವಿಷಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪರ ಮತ್ತು ವಿರೋಧವಾಗಿ ಮಾತುಗಳು ಕೇಳಿ ಬರುತ್ತಿವೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ಈ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿವೆ. ಭಾರತದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ವಿಶೇಷವಾಗಿ ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಅನೇಕ ಪ್ರಕಾರದ ಅರ್ಹತಾ ಪರೀಕ್ಷೆಗಳು ಚಾಲ್ತಿಯಲ್ಲಿವೆ. ಪ್ರತಿ ರಾಜ್ಯಗಳಲ್ಲಿ ಆಯಾ ಸರ್ಕಾರ ವೈದ್ಯಕೀಯ ಕೋರ್ಸಿನ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಜೊತೆಗೆ ಖಾಸಗಿ ಕಾಲೇಜುಗಳಲ್ಲಿನ ಮ್ಯಾನೆಜಮೆಂಟ್ ಸೀಟುಗಳಿಗಾಗಿ, ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯವೆಂದು ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳಿಗಾಗಿ ಎಂದು ಹೀಗೆ ಒಂದೇ ರಾಜ್ಯದಲ್ಲಿ ಅನೇಕ ಪ್ರಕಾರದ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಯೊಬ್ಬ ಒಂದಕ್ಕಿಂತ ಹೆಚ್ಚಿನ ಅರ್ಹತಾ ಪ್ರವೇಶ ಪರೀಕ್ಷೆಗಳನ್ನು ಬರೆಯುವ ಸಂದಿಗ್ಧತೆಗೆ ಒಳಗಾಗುತ್ತಾನೆ. ಅಲ್ಲದೆ ಪ್ರತಿಯೊಂದು ಪ್ರವೇಶ ಪರೀಕ್ಷೆಯ ಶುಲ್ಕ ಅತ್ಯಂತ ದುಬಾರಿಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಇದು ಹೊರೆಯಾಗುತ್ತಿದೆ. ಮತ್ತಷ್ಟು ಓದು »

30
ಮಾರ್ಚ್

ಪೇಪರು ಔಟಾಗಿ, ಎಂಟ್ರೆನ್ಸು ಬೇಕಾಗಿ..

– ನಾಗೇಶ ಮೈಸೂರು

chemistry-paper-leak-305_032216115714ಅದು ಸುಮಾರು ೮೨-೮೩ ರ ಕಾಲ. ನಾವು ಅಗ ಎರಡನೆ ಪೀಯೂಸಿಯಲ್ಲಿ ಓದುತಿದ್ದೆವು. ಆಗಿನ್ನೂ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳಿಗೆ ಪ್ರವೇಶ ಪರೀಕ್ಷೆ ಇರಲಿಲ್ಲ – ಪೀಯೂಸಿ ಅಂಕೆ, ದರ್ಜೆಯ ಮೇಲೆ ಸೀಟು ನಿರ್ಧಾರವಾಗುತ್ತಿದ್ದ ಕಾಲ. ‘ಸೈನ್ಸ್ ತೆಗೆದುಕೊಂಡರೆ ಕೆಲಸ ಸುಲಭ ಸಿಗುತ್ತೆ’ ಅನ್ನುವ ಜನಪ್ರಿಯ ನಂಬಿಕೆಯನುಸಾರ ಪೀಸಿಎಂಬಿ ತೆಗೆದುಕೊಡಿದ್ದ ನನಗಂತೂ ಕೂತಲ್ಲಿ, ನಿಂತಲ್ಲಿ ಅದೇ ಧ್ಯಾನ, ಆತಂಕ, ಕಳವಳ.

ಫೇಲಾಗಿ ಬಿಟ್ಟರೆ ಎಲ್ಲರ ಎದುರು ಮುಖವೆತ್ತಿ ತಿರುಗುವುದು ಹೇಗೆ ಅನ್ನುವುದಕ್ಕಿಂತ, ಸುತ್ತ ಮುತ್ತಲಿನವರೆಲ್ಲ ಇಟ್ಟುಕೊಂಡಿರುವ ‘ಮಹಾ ಬುದ್ಧಿವಂತ, ಗ್ಯಾರಂಟಿ ಎಂಜಿನಿಯರೋ, ಡಾಕ್ಟರೋ ಆಗ್ತಾನೆ’ ಅನ್ನೋ ನಂಬಿಕೆ ಸುಳ್ಳಾಗಿಬಿಟ್ರೆ ಏನು ಕಥೆಯಪ್ಪ ? ಅನ್ನೋ ಅಳುಕೇ ಹೆಚ್ಚಾಗಿ ಕಿತ್ತು ತಿನ್ನುತ್ತಿತ್ತು. ಇನ್ನು ಮಿಕ್ಕಿದ್ದೆಲ್ಲ ಹೇಳುವ ಹಾಗೆ ಇಲ್ಲಾ ಬಿಡಿ – ಬೆಳಗಿನಿಂದ ಕಾಲೇಜು ಕ್ಲಾಸು, ಮುಗಿಯುತ್ತಿದ್ದಂತೆ ಸೈಕಲ್ ಏರಿ ಹೊರಟರೆ ಒಂದು ಕಡೆಯಿಂದ ಟ್ಯೂಶನ್ನಿನ ಪರಿಭ್ರಮಣನೆ.. ಎಂಜಿನಿಯರಿಂಗೋ, ಮೆಡಿಕಲ್ಲೋ ಆನ್ನೋ ಸಂದಿಗ್ದಕ್ಕೆ ಎಲ್ಲಾ ನಾಲ್ಕು ಸಬ್ಜೆಕ್ಟ್ಟಿಗೂ ಟ್ಯೂಷನ್.. ಮನೆಗೆ ಬಂದ ಮೇಲೆ ಮತ್ತೆ ರಿವಿಷನ್, ಸ್ಟಡಿ ನಡುರಾತ್ರಿಯವರೆಗೆ. ಇವಿಷ್ಟು ಬಿಟ್ಟರೆ ಬೇರೆ ಬದುಕೇ ಇಲ್ಲ ಅನ್ನೋ ತರಹದ ಜೀವನ. ಮತ್ತಷ್ಟು ಓದು »

19
ಮಾರ್ಚ್

ಪರೀಕ್ಷೆಯ ಲೆಕ್ಕಾಚಾರ

– ನಾಗೇಶ ಮೈಸೂರು

2284916ಒಲ್ಲದ ಮನಸ್ಸಿನಿಂದ ಪುಸ್ತಕ ಹಿಡಿದು ಪರೀಕ್ಷೆಗೆ ಓದಿಕೊಳ್ಳಲು ಒದ್ದಾಡುತ್ತಿದ್ದ ಮಗನನ್ನು ಸಾಮ, ದಾನ, ದಂಡ, ಭೇಧೋಪಾಯಗಳೆಲ್ಲದರ ಬಳಕೆ ಮಾಡುತ್ತ ಸಿದ್ಧಗೊಳಿಸಲು ಹೆಣಗಾಡುತ್ತಾ ಕುಳಿತಿದ್ದೆ. ಅದೇ ಹೊತ್ತಿನಲ್ಲಿ ಟೀವಿಯಲ್ಲಿ ಪ್ರವೇಶ ಪರೀಕ್ಷೆಯ ನಂತರದ ಸವಾಲು, ಮತ್ತದನ್ನೆದುರಿಸುವ ಬಗೆಯನ್ನು ಕುರಿತು ಆತಂಕಪೂರ್ಣ ಚರ್ಚೆ ನಡೆಯುತ್ತಾ ಇತ್ತು. ಒಂದು ಕಾಲದಲ್ಲಿ ನಾವೂ ಇದನ್ನೆಲ್ಲಾ ಅನುಭವಿಸಿ ಮುಂದೆ ಸಾಗಿದ್ದವರೇ. ಆದರೆ ಆ ದಿನದಲ್ಲಿ ಕಾಡಿದ್ದ ಅದೆಷ್ಟೋ ಆತಂಕ, ಒತ್ತಡಗಳು ಕೇವಲ ಆತಂಕ, ಅಜ್ಞಾನ, ನಿಖರ ಗಮ್ಯವಿಲ್ಲದ ಒದ್ದಾಟಗಳ ಕಾರಣದಿಂದ ಉಂಟಾದದ್ದು. ಇಂದು ತಿರುಗಿ ನೋಡಿದರೆ ನಾನು ಓದಿದ್ದಕ್ಕೂ, ಮಾಡುತ್ತಿರುವ ಕೆಲಸಕ್ಕೂ ನೇರ ಸಂಬಂಧವೇ ಇಲ್ಲ. ವಿದ್ಯಾರ್ಹತೆ ಕೇವಲ ಕೆಲಸ ಗಿಟ್ಟಿಸುವ ಆರಂಭದ ರಹದಾರಿಯಾಯ್ತೆಂಬುದನ್ನು ಬಿಟ್ಟರೆ ಮಿಕ್ಕೆಲ್ಲಾ  ಹೊಸ ಹೋರಾಟ, ಪರೀಕ್ಷೆಗಳೇ ಎದುರಾದದ್ದು ವಾಸ್ತವ ಸತ್ಯ. ನಮ್ಮ ವಿದ್ಯಾರ್ಹತೆ, ವಿದ್ಯಾಭ್ಯಾಸ ಆ ಹೋರಾಟಕ್ಕೆ ನಮ್ಮನ್ನು ಸಿದ್ದಪಡಿಸಿರಲೇ ಇಲ್ಲ. ಆದರೂ ನಾವು ಅದೇ ಮರೀಚಿಕೆಯ ಹಿಂದೆ ನಮ್ಮ ಭವಿಷ್ಯದ ಪೀಳಿಗೆಯನ್ನು ತಳ್ಳುತ್ತ ಕುರಿಮಂದೆಗಳ ಹಾಗೆ ಸಾಗುತ್ತಿದ್ದೇವಲ್ಲ ಎಂದೆನಿಸಿ ಖೇದವೂ ಆಯ್ತು.
ಮತ್ತಷ್ಟು ಓದು »