ಸಂಸ್ಕೃತಿ ಸರಣಿ 5
“ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ, ಅಲ್ಲಿ ದೇವತೆಗಳು ಸಂತೋಷಗೊಳ್ತಾರೆ” ಅಂತ ಅಂದಕೂಡಲೇ,
“ನಮ್ಮನ್ನು ಮನುಷ್ಯರನ್ನಾಗಿ ನೋಡಿ, ನಿಮ್ಮ ಪೂಜೆಯ ಅಗತ್ಯವಿಲ್ಲ” ಅಂತ ಕೆಲ ಸ್ತ್ರೀಯರು ಯಾಕೆ ಪ್ರತಿಕ್ರಿಯಿಸುತ್ತಾರೆ.. ಅದರ ಹಿಂದಿನ ಕಾರಣ ಏನು?
ಪೂಜೆಯ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಕಾರಣಗಳು.
ಭಾರತೀಯರ ಭಾಷೆ ಮತ್ತು ಚಿಂತನೆಯ ಮೇಲೆ ಅಬ್ರಹಾಮಿಕ್ ಮತಗಳ ಪ್ರಭಾವ ಹೇಗೆ ಆಗಿದೆ ಹಾಗೂ ಸುಶಿಕ್ಷಿತ ವರ್ಗದಲ್ಲಿ ಭಾರತೀಯತೆಯ ಬಗ್ಗೆ ತಾತ್ಸಾರಕ್ಕೆ ಕಾರಣಗಳು ಏನು ?
ನೆನಪುಗಳೊಂದಿಗೆ ಯುಗಾದಿ…
– ಗೀತಾ ಹೆಗ್ಡೆ
ಅನೇಕ ಸಲ ನಾವಂದುಕೊಳ್ಳುತ್ತೇವೆ; ಈ ನೆನಪುಗಳು ಇರಲೇಬಾರದು. ಅದರಲ್ಲೂ ಕಹಿ ನೆನಪುಗಳಂತೂ ಪೂರ್ತಿ ಮರೆತು ಹೋಗಬೇಕು. ಬರಿ ಸಿಹಿ ಸಿಹಿ ನೆನಪುಗಳೆ ಇದ್ದರೆ ಸಾಕು. ಎಷ್ಟು ಖುಷಿಯಾಗಿರಬಹುದು. ಛೆ! ಯಾಕೆ ಬರುತ್ತೋ ಈ ನೆನಪು, ಜೀವ ಹೈರಾಣೋಗುತ್ತಿದೆ ಈ ಕೆಟ್ಟ ನೆನಪು. ಮರುಕಳಿಸಬಾರದಿತ್ತು. ಯಾರಲ್ಲೂ ಹೇಳಿಕೊಳ್ಳಲೂ ಆಗೋದಿಲ್ಲ, ಒಬ್ಬನೆ ಅನುಭವಿಸೋಕೂ ಆಗೋದಿಲ್ಲ. ರಾತ್ರಿ ನಿದ್ದೆ ಕೂಡಾ ಕಸಿದುಕೊಂಡುಬಿಡುತ್ತದಲ್ಲಾ. ಹಾಸಿಗೆಯಲ್ಲಿ ನಿದ್ದೆ ಇಲ್ಲದೆ ಹೊರಳಾಟ. ಅಬ್ಬಾ! ಎಷ್ಟು ಶಕ್ತಿ ಇದಕ್ಕೆ. ಮತ್ತಷ್ಟು ಓದು 
ಸಂಪ್ರದಾಯವೆಂದರೆ ಏನು.. ? ( ಸಂಸ್ಕೃತಿ ಸರಣಿ – ಭಾಗ ೩ )
ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ. ಮತ್ತಷ್ಟು ಓದು 
ಸಂಸ್ಕೃತಿ ಸರಣಿ – ಭಾಗ ೧ : ಪೂಜೆ
ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ.
ಭಾರತದ್ದು ಇಂತಹ ಭ್ರಮಾ ಕಲ್ಪಿತ ಮತ್ತು ಆಕ್ರಾಮಕ ಶ್ರೇಷ್ಠತೆ ಅಲ್ಲ.ಅದರ ಶ್ರೇಷ್ಠತೆಯ ಗುಣಲಕ್ಷಣಗಳೇ ಬೇರೆ. ಹೂವಿನ ಗಂಧ ಸಹ ಜವಾಗಿ ಹರಡುವಂತೆ ಭಾರತೀಯ ಜೀವನ ವಿಧಾನದ ಅಂತಃಸತ್ವ ಬಹುತೇಕ ಭೂಭಾಗವನ್ನು ಪ್ರಭಾವಿಸಿತ್ತು.ಆದರೆ ಅದೆಲ್ಲ ಈಗ ಗತಕಾಲದ ಚರಿತ್ರೆ.ಕಳೆದ ಸಾವಿರ ವರ್ಷಗಳ ಐತಿಹಾಸಿಕ ಘಟನೆಗಳು ಮತ್ತು ಪರಕೀಯ ಶಿಕ್ಷಣ ವಿಧಾನ ನಮ್ಮ ಸಂಸ್ಕೃತಿಗೆ ನಮ್ಮನ್ನೇ ಪರಕೀಯರಂತೆ ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ, ಆಚರಣೆಗಳ ಕುರಿತು ಹಲವರಿಗೆ ಪ್ರಶ್ನೆಗಳೇಳುವುದು ಸಹಜವೇ.
ಅಂತಹ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಶ್ರೀ.ದತ್ತರಾಜ್ ಅವರು ಈ “ಸಂಸ್ಕೃತಿ ಸರಣಿ”ಯನ್ನು ಪ್ರಾರಂಭಿಸಿದ್ದಾರೆ. ಭಾರತ ಯಾವ ರೀತಿಯಲ್ಲಿ ಭಿನ್ನ ಹಾಗೂ ಶ್ರೇಷ್ಠ ಎಂಬುದನ್ನು ವಿವರಿಸಲಿದ್ದಾರೆ.ದತ್ತರಾಜ್ ಅವರು ಧಾರವಾಡದ ಬಳಿ ಹಳ್ಳಿಯಲ್ಲಿ ಹುಟ್ಟಿದವರು.ಆರನೇ ವಯಸ್ಸಿಗೇ ಮನೆ ತೊರೆದು ಮಹಾರಾಷ್ಟ್ರ, ಆಂಧ್ರ, ತಮಿಳು ನಾಡು ಇತ್ಯಾದಿ ಕಡೆಗಳಲ್ಲಿ ವೇದ ಪಂಡಿತರ ಮನೆಗಳಲ್ಲಿ ಇದ್ದು ಗುರು ಸೇವೆ, ಭಿಕ್ಷೆ ಮಾಡಿಕೊಂಡು 12 ವರ್ಷ ಋಗ್ವೇದವನ್ನು ಆರು ಅಂಗಗಳ ಸಹಿತ ಕಂಠಪಾಠ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ.ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ.ತಮ್ಮ ಅಧ್ಯಯನ ಮತ್ತು ವಿಭಿನ್ನ ಜೀವನದ ಅನುಭವದ ಆಧಾರದಿಂದ ಭಾರತೀಯ ಸಂಸ್ಕೃತಿ ಪರಿಚಯವನ್ನು ಸರಳ ಆಡು ಭಾಷೆಯಲ್ಲಿ ಮಾಡಿಕೊಡಲಿದ್ದಾರೆ.
ಸಂಸ್ಕೃತಿ ಸರಣಿಯ ಮೊದಲ ಎರಡು ಭಾಗವಾಗಿ “ಪೂಜೆ”ಯ ಕುರಿತು ಮಾತನಾಡಿದ್ದಾರೆ.ಆ ಎರಡು ಭಾಗಗಳು ನಿಮಗಾಗಿ ನಿಲುಮೆಯಲ್ಲಿ – ನಿಲುಮೆ ನಿರ್ವಾಹಕರು
ಮತ್ತಷ್ಟು ಓದು 
ಸತ್ಯಂ ಶಿವಂ ಸುಂದರಂ
– ರೋಹಿತ್ ಚಕ್ರತೀರ್ಥ
“ನೀವು ವಿಜ್ಞಾನ ಬರಹಗಾರರಾಗಿ ದೇವರನ್ನು ನಂಬ್ತೀರಾ?!” ಎಂಬ ಪ್ರಶ್ನೆ ಸಾಧಾರಣವಾಗಿ ಆಗಾಗ ನನ್ನೆದುರು ಬರುತ್ತದೆ. ಹೆಚ್ಚಾಗಿ ಅಂಥ ಸಂದರ್ಭಗಳಲ್ಲೆಲ್ಲ ಪ್ರಶ್ನೆ ಕೇಳಿದವರು ಯಾರು ಎಂಬುದನ್ನು ನೋಡಿಕೊಂಡು ಉತ್ತರ ಕೊಡುತ್ತೇನೆ. ನಿಜವಾಗಿಯೂ ಧಾರ್ಮಿಕರಾಗಿದ್ದು ನನ್ನ ವಿಜ್ಞಾನ ಲೇಖನಗಳನ್ನೂ ಓದಿಕೊಂಡವರು ಕೇಳಿದ್ದರೆ ಸಂಕ್ಷಿಪ್ತವಾಗಿ “ಹೌದು” ಎಂದುಬಿಡುತ್ತೇನೆ. ಆಗ ಅವರಿಗೆ ಖುಷಿಯಾಗುತ್ತದೆ. ಪರವಾಗಿಲ್ಲ, ವಿಜ್ಞಾನ ಗಿಜ್ಞಾನ ಅಂತ ಹೇಳ್ತಿದ್ದರೂ ಹುಡುಗನಿಗೆ ದೈವಭಕ್ತಿ ಇದೆ ಎಂದು ಸಂಭ್ರಮಪಡುತ್ತ ಹೋಗುತ್ತಾರೆ. ಸ್ವಲ್ಪ ವಿಚಾರವಾದಿಗಳ ಹಾಗೆ ಕಂಡರೆ “ನಾನು ಆಸ್ತಿಕ ಎಂದು ಹೇಳಿದ್ದ ಸ್ಟೇಟ್‍ಮೆಂಟ್ ಇದ್ದರೆ ಕೊಡಿ” ಎಂದು ಕೇಳುತ್ತೇನೆ. ಈ ಮನುಷ್ಯ ಅದ್ಯಾಕೋ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ ಎಂದು ಭಾವಿಸಿದ ಅವರು ದೇವರನ್ನು ನಂಬುವ ವಿಚಾರವನ್ನು ಅಲ್ಲಿಗೇ ಬಿಟ್ಟು “ಈ ವಾರ ಈರುಳ್ಳಿ ಬೆಲೆ ಏರಿದೆ ನೋಡಿ” ಎಂದು ವಿಷಯಾಂತರ ಮಾಡುತ್ತಾರೆ. ಒಂದೆರಡು ವರ್ಷಗಳ ಹಿಂದೆ ಓರ್ವ ಹಿರಿಯ ವಿಜ್ಞಾನ ಲೇಖಕರೇ ನನಗೆ “ವಿಜ್ಞಾನ ಬರೆಯುವವನಾಗಿ ದೇವರನ್ನು ಹೇಗೆ ನಂಬ್ತೀಯೋ?” ಎಂದು ಕೇಳಿ ಗೊಂದಲಪಡಿಸಿದ್ದರು. “ನನಗೆ ದೇವರ ಬಗ್ಗೆ ಭಕ್ತಿ ಎಂಬುದು ಯಾಕೋ ಅಷ್ಟು ಸುಲಭದಲ್ಲಿ ಬರುವುದಿಲ್ಲ. ದೇವರ ಬಗ್ಗೆ ಕುತೂಹಲ ಇದೆ, ಪ್ರೀತಿ ಇದೆ, ಗೆಳೆತನ ಇದೆ” ಎಂದಿದ್ದೆ. “ಓಹೋ ಹಾಗೋ? ಅಂದರೆ ನೀನು ನಾಸ್ತಿಕನೆಂದಾಯಿತು. ನಾಸ್ತಿಕನಾಗಿದ್ದು ಆಸ್ತಿಕನಂತೆ ಬರೆಯಬೇಡ. ಆಸ್ತಿಕನಾಗಿದ್ದು ನಾಸ್ತಿಕನಂತೆ ಬರೆ” ಎಂದು ಅವರು ಉಪದೇಶ ಮಾಡಿದ್ದರು! ಅಸಲಿಗೆ ನನಗೆ ನಾನು ಆಸ್ತಿಕನೋ ನಾಸ್ತಿಕನೋ ಎಂಬ ಪ್ರಶ್ನೆಯೇ ಪ್ರಮುಖ ಅನ್ನಿಸಿಲ್ಲ. ಜಗತ್ತಿನಲ್ಲಿರುವ ಪ್ರತಿ ವ್ಯಕ್ತಿಯೂ ಈ ಎರಡು ಕೆಟಗರಿಗಳಲ್ಲಿ ಒಂದನ್ನು ಆರಿಸಿಕೊಳ್ಳಲೇಬೇಕು ಎಂದು ಯಾರಾದರೂ ಸರ್ವಾಧಿಕಾರಿ ರೂಲ್ಸು ಮಾಡುವ ತನಕ ನನಗೆ ನಿಶ್ಚಿಂತೆ. ಮತ್ತಷ್ಟು ಓದು 
ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ. ಮತ್ತಷ್ಟು ಓದು 
ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )
– ವಿನಾಯಕ ವಿಶ್ವನಾಥ ಹಂಪಿಹೊಳಿ
ಭಾರತೀಯ ಸಂಪ್ರದಾಯಗಳಲ್ಲಿ ಟೀಕೆಗಳು ಹಾಗೂ ವಿಮರ್ಶೆಗಳು ಮುಂಚಿನಿಂದಲೂ ಬೆಳೆದುಕೊಂಡು ಬಂದಿವೆ. ನೂರಾರು ದರ್ಶನಗಳು ತಮ್ಮ ತತ್ತ್ವವನ್ನು ಸಾಧಿಸುವಾಗ ಉಳಿದ ದರ್ಶನಗಳನ್ನು ಟೀಕಿಸುತ್ತವೆ. ಅವೈದಿಕ ದರ್ಶನಗಳು ವೈದಿಕರು ಹೇಳುವ ಆತ್ಮಾಸ್ತಿತ್ವವನ್ನು ನಿರಾಕರಿಸುತ್ತವೆ. ಉಪನಿಷತ್ತಿನ ದರ್ಶನಗಳು ವೈದಿಕರ ಕರ್ಮಕಾಂಡವನ್ನು ಟೀಕಿಸುತ್ತವೆ. ಅದ್ವೈತ, ವಿಶಿಷ್ಟಾದ್ವೈತ, ತತ್ತ್ವವಾದಗಳಂಥ ದರ್ಶನಗಳ ದಾರ್ಶನಿಕರು ಪರಸ್ಪರ ಒಬ್ಬರನ್ನೊಬ್ಬರು ಟೀಕಿಸುತ್ತಾರೆ. ಹಾಗೆಯೇ ವೀರಶೈವ ದರ್ಶನವೂ ಉಳಿದ ದರ್ಶನಗಳನ್ನು ಟೀಕಿಸುತ್ತದೆ. ಹೀಗೆ ನಮ್ಮ ಪೂರ್ವಜರು ಪರಸ್ಪರರ ದರ್ಶನಗಳನ್ನು ಟೀಕಿಸುತ್ತ, ಪರರ ಟೀಕೆಗಳಿಗೆ ಸಮಾಧಾನವನ್ನು ಹೇಳುತ್ತ ತಮ್ಮ ತಮ್ಮ ದರ್ಶನಗಳ ವಾದಗಳನ್ನು ಶ್ರೀಮಂತವಾಗಿಸುತ್ತ ಬಂದಿದ್ದಾರೆ. ಈ ಚರ್ಚೆಯ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಮತ್ತಷ್ಟು ಓದು 
ಶಿಕ್ಷಣದಿಂದ ಸ್ತ್ರೀ ಮತ್ತು ಉಕ್ಕಿನ ತರುಣ ಪಡೆ; ಎರಡು ತತ್ವಗಳ ಸಂಗಮ ಈ ಸಾಹಿತ್ಯ ಸಮ್ಮೇಳನ
– ಅಕ್ಷತಾ ಬಜ್ಪೆ
ವಿವೇಕಾನಂದರ ಪಶ್ಚಿಮದ ದಿಗ್ವಿಜಯದ ಕಥೆ ನಮಗೆಲ್ಲ ಗೊತ್ತೇ ಇದೆ. ಆದರೆ ಈ ಒಂದು ದಿಗ್ವಿಜಯ ಗುರು–ಶಿಷ್ಯೆಯರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶಕ್ಕೆ ಶುಭಶಕುನವಾಯಿತು. ಸ್ವಾಮಿ ವಿವೇಕಾನಂದರು ಹೋದಲ್ಲೆಲ್ಲಾ ಅವರನ್ನು ಅನುಸರಿಸುತ್ತಾ ಅವರ ಉಪನ್ಯಾಸಗಳನ್ನು ಕೇಳುತ್ತಿದ್ದ ಐಯರ್ಲೆಂಡಿನ ಮಾರ್ಗರೆಟ್ ಗೆ ಭಾರತದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗುತ್ತಲೇ ಹೋಯಿತು. ಭಾರತಕ್ಕೆ ಬರಲು ಉತ್ಸುಕರಾಗತೊಡಗಿದರು. ಇದಕ್ಕಾಗಿ ಸ್ವಾಮೀಜಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದರು. ಆದರೆ ಸ್ವಾಮೀಜಿ ಒಪ್ಪಲಿಲ್ಲ. ಸ್ವಾಮೀಜಿಯವರು ತಮ್ಮ ಮೊದಲ ಯುರೋಪ್ ಪ್ರವಾಸ ಮುಗಿಸಿ ಆಗಷ್ಟೇ ಭಾರತಕ್ಕೆ ಹಿಂದಿರುಗಿದ್ದರು. ಪರಿಸ್ಥಿತಿಗೆ ಸ್ಪಂದಿಸಿದ ಸ್ವಾಮೀಜಿ ಮಾರ್ಗರೆಟ್ ಗೆ ಪತ್ರ ಬರೆದು ಭಾರತಕ್ಕೆ ಬರುವಂತೆ ಸೂಚನೆಯಿತ್ತರು.
ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸೋದರಿ ನಿವೇದಿತಾ ಭೋಗ ಭೂಮಿಯನ್ನು ತೊರೆದು ಯೋಗ ಭೂಮಿಯತ್ತ ಪಯಣಿಸಿದರು. ಹೊರಡುವ ಮುಂಚೆಯೇ ಭಾರತದಲ್ಲಿನ ದಯನೀಯ ಪರಿಸ್ಥಿತಿಯನ್ನು ವಿವರಿಸಿದ್ದ ಸ್ವಾಮೀಜಿಗೆ ‘ನಿಮ್ಮ ಜನರೇ ಇನ್ನು ನಮ್ಮ ಜನರು’ ಎಂದು ಸಮಾಧಾನ ಪಡಿಸಿದ್ದರು.ಒಂದು ರೆಕ್ಕೆಯಿಂದ ಹಕ್ಕಿ ಹಾರಲಾರದು ಅಂತೆಯೇ ಪುರುಷರ ಜೊತೆಯಾಗಿ ಸ್ತ್ರೀಯರೂ ಶಿಕ್ಷಿತರಾಗಿ ಬಲಿಷ್ಟರಾದರೆ ಮಾತ್ರ ಸಧೃಡ ಭಾರತವನ್ನು ಕಟ್ಟಲು ಸಾಧ್ಯ ಎಂಬ ಚಿಂತನೆ ಹೊಂದಿದ್ದರು. ಸ್ವಾಮೀಜಿ ‘ತಾಯಿಯ ಮೃದು ಹೃದಯ, ಯೋಧನ ವಿರ್ಯೋತ್ಸಾಹಗಳು, ತತ್ವಜ್ಞಾನಿಯ ಬೌದ್ಧಿಕ ಪ್ರತಿಭೆ, ಸಂತನ ದಿವ್ಯದೃಷ್ಟಿ, ದೇಶ ಪ್ರೇಮಿಯ ರಾಷ್ಟ್ರಪ್ರಜ್ಞೆ ಇದೆಲ್ಲಾ ಏಕತ್ರ ಕಲಿತ ನಾರೀಮಣಿ ನಿವೇದಿತಾ, ಸ್ವಾಮೀಜಿಗೆ ತಮ್ಮ ಇಂಗ್ಲೆಂಡ್ ಕಾರ್ಯದ ಪರಿಣಾಮವಾಗಿ ದೊರೆತಂತಹ ಅತ್ಯಂತ ಶ್ರೇಷ್ಟ ಪುಷ್ಪ.
ಕಡಲತಡಿಯಲ್ಲಿ ಮೊಳಗಲಿದೆ ಸಾಹಿತ್ಯ ಸಮ್ಮೇಳನದ ಝೇಂಕಾರ
– ರಾಜೇಶ್ ನರಿಂಗಾನ
ಹೌದು.. ಕಡಲತೀರ ಮಂಗಳೂರು ಒಂದು ವಿಶಿಷ್ಟ, ವಿನೂತನ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಜ್ಜುಗೊಂಡಿದೆ. ಇದನ್ನು ವಿಶಿಷ್ಟ, ವಿನೂತನ ಎಂದು ಕರೆಯುವುದಕ್ಕೂ ಕಾರಣವಿದೆ. ಇದು ದೇಶದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿರುವ ಸಾಹಿತ್ಯದ ಉತ್ಸವ. ಜಗತ್ತು ಕಂಡ ಶ್ರೇಷ್ಠ ಸಂತ, ಸಿಡಿಲ ಸಂನ್ಯಾಸಿ ಸ್ವಾಮಿ ವಿವೇಕಾನಂದ ಮತ್ತು ಅವರ ಅಸ್ಖಲಿತ ವಾಗ್ಝರಿಗೆ ಮರುಳಾಗಿ ದೂರದ ಪಾಶ್ಚಿಮಾತ್ಯ ದೇಶವಾದ ಐರ್ಲೆಂಡಿನಿಂದ ಭಾರತಕ್ಕೆ ಆಗಮಿಸಿ, ಈ ದೇಶಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ನಿವೇದಿಸಿದ ಸೋದರಿ ನಿವೇದಿತಾ ಅವರ ಸಾಹಿತ್ಯದ ಸಂಗಮವಿದು. ಈ ಇಬ್ಬರು ಶ್ರೇಷ್ಟ ವ್ಯಕ್ತಿಗಳ ಸಾಹಿತ್ಯದ ಅಧ್ಯಯನ, ಅವರ ಜೀವನ ಪ್ರೇರಣೆಯ ಸಂದೇಶದ ಅಪೂರ್ವ ಸಮಾವೇಶವೇ “ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ”
ಈ ನಾಡಿನ ಖ್ಯಾತ ಚಿಂತಕ, ವಾಗ್ಮಿ, ಅಂಕಣಕಾರ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಅನೇಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಇಡೀ ರಾಷ್ಟ್ರದ ಗಮನ ಸೆಳೆದಿರುವ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ನೇತೃತ್ವದಲ್ಲಿ ಈ ಅಭೂತಪೂರ್ವ ಸಾಹಿತ್ಯ ಸಮ್ಮೇಳನವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇದೇ ಫೆಬ್ರವರಿ 11 ಮತ್ತು 12 ರಂದು ಸಂಪನ್ನಗೊಳ್ಳಲಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಏನಿದೆ?
ಮತ್ತಷ್ಟು ಓದು 




