ಬದಲಾವಣೆಗೆ ಹೊ೦ದಿಕೊಳ್ಳದವ ಬದುಕ ಗೆಲ್ಲಲಾರ…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಥೂ, ನಮ್ಮ ಆಫೀಸಿಗೆ ಈ ಕ೦ಪ್ಯೂಟರ್ ಗಳನ್ನು ತ೦ದು ಕೆಲಸ ಕೆಟ್ಟೋಯ್ತಪ್ಪ.ಕೈಯಲ್ಲೇ ಫೈಲುಗಳನ್ನು ಬರೆದುಕೊ೦ಡು ಆರಾಮಾಗಿದ್ವಿ.ನಮಗ೦ತೂ ಈ ಕ೦ಪ್ಯೂಟರ್
ಗಳನ್ನು ಆಪರೇಟ್ ಮಾಡೋಕೆ ಬರಲ್ಲ.ಪ್ರತಿದಿನ ತಪ್ಪುಗಳನ್ನು ಮಾಡೋದು,ಪ್ರತಿದಿನ ಬಯ್ಯಿಸಿಕೊಳ್ಳೋದು,ಇದೇ ಆಗೋಯ್ತು ನಮ್ಮ ಹಣೆಬರಹ,ಏನ್ ಕರ್ಮಾನಪ್ಪಾ”
ಎ೦ದು ಅವರು ಗೊಣಗುತ್ತಿದ್ದರು.ಅವರೊಬ್ಬ ಸರಕಾರಿ ನೌಕರ.ಸುಮಾರು ನಲವತ್ತರ ಆಸುಪಾಸಿನ ವಯಸ್ಸು. ಕಚೇರಿಯ ಕೆಲಸಕಾರ್ಯಗಳ ಸುಲಭ ಮತ್ತು ಸಮರ್ಪಕ
ನಿರ್ವಹಣೆಗಾಗಿ ಅವರ ಆಫೀಸಿಗೆ ಹೊಸದಾಗಿ ಗಣಕಯ೦ತ್ರಗಳನ್ನು ಅಳವಡಿಸಲಾಗಿದೆ.ಅದನ್ನು ಬಳಸುವ ಬಗ್ಗೆ ವಿಶೇಷ ತರಬೇತಿಯನ್ನೂ ಸಹ ಎಲ್ಲ ಉದ್ಯೋಗಿಗಳಿಗೆ
ನೀಡಲಾಗಿದೆ.ಹೆಚ್ಚಿನವರು ಗಣಕಯ೦ತ್ರಗಳನ್ನು ಬಳಸುವುದು ಹೇಗೆ೦ದು ಕಲಿತುಕೊ೦ಡರಾದರೂ ಇವರು ಮಾತ್ರ ಇನ್ನೂ ಅದಕ್ಕೆ ಹೊ೦ದಿಕೊ೦ಡಿಲ್ಲ.ಹಳೆಯ ಪದ್ದತಿಯೇ
ಸರಿಯಾಗಿತ್ತೆ೦ದು,ಈ ಕ೦ಪ್ಯೂಟರ್,ಗಿ೦ಪ್ಯೂಟರ್ ಎಲ್ಲಾ ತಮ್ಮ ವಯಸ್ಸಿಗೆ ಅಲ್ಲವೆ೦ಬುದು ಅವರ ಅಭಿಪ್ರಾಯ. ಹಾಗಾಗಿ ಪದೇ ಪದೇ ತಪ್ಪುಗಳನ್ನು ಮಾಡುತ್ತ, ಹಿರಿಯ ಅಧಿಕಾರಿಗಳಿ೦ದ ಬಯ್ಯಿಸಿಕೊಳ್ಳುತ್ತಿರುತ್ತಾರೆ.ಅಧಿಕಾರಿಗಳಿಗೆ ತಿರುಗಿ ಬಯ್ಯಲಾರದೇ,ಕಚೇರಿಗೆ ಬರುವ ಜನರ ಮೇಲೆ ಸಿಡುಕುತ್ತಾರೆ.ಕೆಲವೊಮ್ಮೆ ಜನರೊ೦ದಿಗೆ ಜಗಳವೂ ಮಾಡಿಕೊ೦ಡಿದ್ದು೦ಟು.
ಮತ್ತಷ್ಟು ಓದು 
ರಾಷ್ಟ್ರದ ಹಿತ ದೃಷ್ಟಿಯಿಂದಾದರು ಈ ಭಯೋತ್ಪಾದನೆಯ ರಾಜಕೀಯಕ್ಕೆ ಅಂತ್ಯ ಹಾಡಬೇಕಲ್ಲವೇ?
– ಅನಿಲ ಚಳಗೇರಿ
ಡಿಸೆಂಬರ್ ೩೧ ರ ರಾತ್ರಿ ಶಂಕಿತ ಉಗ್ರರ ಹಡಗನ್ನು ನೌಕ ಪಡೆ ಪತ್ತೆ ಹಚ್ಚಿ ಅದನ್ನು ಹಿಂಬಾಲಿಸಿ ಹೋದಾಗ ಅದರಲ್ಲಿರುವವರು ಹಡಗನ್ನು ಸ್ಪೋಟಿಸಿದರು ಎನ್ನುವ ವಿಷಯ ತಿಳಿದೊಡನೆ ನಮ್ಮಲ್ಲಿ ಅನೇಕರಿಗೆ ನೌಕಾಪಡೆಗೆ ಒಂದು ಶಬ್ಭಾಶ್ ಹೇಳಬೇಕೆನ್ನಿಸಿರಬಹುದು, ಅದಾಗಲೇ ರಾಜಕೀಯ ಪಕ್ಷಗಳು ಇಂತಹ ಒಂದು ಹಡಗು ಇತ್ತಾ? ಅದರಲ್ಲಿ ನಿಜವಾಗಲು ಉಗ್ರರಿದ್ದರಾ ? ಅದು ಪಾಕಿಸ್ತಾನಕ್ಕೆ ಸೇರಿದ ಹಡಗಾಗಿತ್ತಾ ? ಹಾಗಿದ್ದರೆ ಅವುಗಳ ದಾಖಲೆ ವೀಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿ, ನಮಗೆ ಇದರ ಮೇಲೆ ಶಂಕೆಯಿದೆಯೆಂದು ಪ್ರಶ್ನಿಸಲು ಪ್ರಾರಂಭಿಸಿದನ್ನು ನೋಡಿ ನೋಡಿ ನಮ್ಮಲ್ಲಿ ಅನೇಕರಿಗೆ ಬೇಜಾರಾಗಿರಬೇಕು. ಪ್ರತಿ ಬಾರಿ ಉಗ್ರಗಾಮಿಯೊಬ್ಬ ಸಿಕ್ಕಾಗ, ಬಾಂಬ್ ದಾಳಿಯಾದಾಗ ಅಥವಾ ಯಾವುದೇ ಉಗ್ರ ಚಟುವಟಿಕೆ ನಡೆದಾಗ, ತನಿಖೆಯ ಪ್ರಾರಂಭದಿಂದಲೇ ಒಂದಲ್ಲ ಒಂದು ರಾಜಕೀಯ ಪಕ್ಷಗಳು ಅಥವಾ ಬುದ್ಧಿ ಜೀವಿಗಳು ಈ ಶಕಿಂತ ಆರೋಪಿಗಳ ನಿಂತೇಬಿಡುತ್ತಾರೆ. ತನಿಖೆ ನಡೆಯುತ್ತಿರುವಾಗಲೇ ಕ್ಲೀನ್ ಚಿಟ್ ಕೊಡುವದು, ರಾಜಕೀಯ ಬಣ್ಣ ಕಟ್ಟಲು ಪ್ರಯತ್ನಿಸುವದು ಅಥವಾ ಇಂತಹ ಗಂಭೀರ ವಿಷಯದಲ್ಲಿ ಜಾತಿ ಅಥವಾ ಧರ್ಮದ ಮಾತುಗಳನ್ನು ಆಡುವದು ನೋಡುತ್ತಲೇ ಇರುತ್ತೇವೆ, ಕೆಲವಿರಿಗೆ ಇದು ಇದು ಓಲೈಕೆಯ ಒಂದು ಭಾಗವಾದರೆ ಇನ್ನು ಕೆಲವರಿಗೆ ಇದು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳಲು ಒಂದು ಗಿಮಿಕ್. ಇಂತಹ ಹೇಳಿಕೆಗಳನ್ನು IC – 814 ಹೈ ಜಾಕ್ ನಿಂದ ಹಿಡಿದು ಅಫ್ಜಲ್ ಗುರು, ಬಾಟ್ಲ ಹೌಸ್ ಎನ್ಕೌಂಟರ್, ಇಶ್ರಾತ್ ಜಹಾ ಎನ್ಕೌಂಟರ್, ಹೈದರಾಬಾದ್ ಬ್ಲಾಸ್ಟ್, ಜರ್ಮನ್ ಬೇಕರಿ ಬ್ಲಾಸ್ಟ್ ಹಾಗು ಮುಂಬೈ ತಾಜ್ ಅಟ್ಯಾಕ್ ಆದಗಲು ಕೇಳುತ್ತಲೇ ಬಂದಿದ್ದೇವೆ. ಪ್ರತ್ಯೇಕತೆಯ ಹೆಸರಿನಲ್ಲಿ ಉಗ್ರವಾದ, ನಕ್ಸಲ್ ಹೆಸರಿನಲ್ಲಿ ಉಗ್ರವಾದ ಹಾಗು ಮಾವೋವಾದಿಗಳ ಉಗ್ರ ಚಟುವಟಿಕೆಯನ್ನು ವಹಿಸಿಕೊಂಡು ಮಾತನಾಡುವಂತಹ ಬುದ್ಧಿ ಜೀವಿಗಳು ಇಡೀ ದೇಶದಲ್ಲಿ ತುಂಬಿದ್ದಾರೆ. ಕೆಲವೊಮ್ಮ ರಾಜಕೀಯ ಪಕ್ಷಗಳ ಜೊತೆ, ಕೆಲವೊಮ್ಮೆ ಮಾಧ್ಯಮಗಳ ಜೊತೆ ಇನ್ನು ಕೆಲವೊಮ್ಮೆ ಮಾನವ ಹಕ್ಕು ಹೋರಾಟದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ದಶಕಗಳ ಹಿಂದೆಯೇ ಧರ್ಮ ಮತ್ತು ರಾಜಕೀಯದ ಹೆಸರಿನಲ್ಲಿ ಇಂಥಹ ಸಂಘಟನೆಗಳನ್ನು ಸಮರ್ಥಿಸಿಕೊಂಡ ಪಾಕಿಸ್ತಾನ, ಆಫ್ತಾನಿಸ್ತಾನ, ಇರಾಕ್ ಹಾಗು ಇಂತಹ ಅನೇಕ ರಾಷ್ಟ್ರಗಳು ತಾವೇ ಬೆಳಸಿದ ಈ ಉಗ್ರರಿಂದ ತಮ್ಮ ದೇಶವನ್ನು ಕಾಪಾಡಿಕೊಳ್ಳಲು ಇಂದು ಕಷ್ಟಪಡುತ್ತಿರುವದನ್ನು ನಾವೆಲ್ಲ ನೋಡುತ್ತಿದ್ದೇವೆ.
ಮತ್ತಷ್ಟು ಓದು 
PK ಎಂಬ ರಾಂಗ್ ನಂಬರ್
– ಸಂತೋಷ್ ಕುಮಾರ್ ಪಿ.ಕೆ
ಅಮೀರ್ ಖಾನ್ ಎಂದರೆ ವಿಭಿನ್ನ ಶೈಲಿಯ ಚಿತ್ರಗಳನ್ನು ತೆರೆಗೆ ತರುವ ಸಾಮರ್ಥ್ಯ ಉಳ್ಳವರು ಎಂಬುದೇ ಬಹುತೇಕರ ಭಾವನೆ, ಅದು ಸತ್ಯ ಕೂಡ. ಈಗ ಬಂದಿರುವ ಪೀಕೆ ಚಿತ್ರ ಕೆಲವು ತಪ್ಪುಗ್ರಹಿಕೆಗಳ ಆಧಾರದ ಮೇಲೆ ಹೋಗುತ್ತದೆ ಎಂಬುದು ಬಿಟ್ಟರೆ ಅದನ್ನೊಂದು ಉತ್ತಮ ಲವ್ ಸ್ಟೋರಿ ಆಧಾರಿತ ಚಿತ್ರವನ್ನಾಗಿ ನಿರ್ದೇಶಕರು ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ. ಹಾಗಾದರೆ ಆ ತಪ್ಪುಗ್ರಹಿಕೆಗಳು ಏನು?
1. ಭಾರತೀಯ ಸಂಪ್ರದಾಯ ಮತ್ತು ಸೆಮೆಟಿಕ್ ರಿಲಿಜನ್ ಗಳು ಭಗವಾನ್ ಮತ್ತು ಗಾಡ್ ಎಂದು ಮಾತನಾಡುವಾಗ ಇರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳದಿರುವುದು. ನಮ್ಮಲ್ಲಿ ಸಾಮಾನ್ಯವಾಗಿ ದೇವರೇ ಕಾಪಾಡಬೇಕು, ದೇವರು ನಿನಗೆ ಕರುಣಿಸಲಿ, ಹೀಗೆ ಇತ್ಯಾದಿಗಳನ್ನು ದೇವರಿಗೆ ಆರೋಪಿಸುವಾಗ, ಅಕ್ಷರಶಃ ದೇವರನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡಿರುತ್ತೇವೆಯೆ? ಅದು ಹೇಳುವವರಿಗೂ ಸ್ಪಷ್ಟವಿರುವುದಿಲ್ಲ, ಕೇಳಿಸಿಕೊಳ್ಳುವವರಿಗೂ ತಿಳಿದಿರುವುದಿಲ್ಲ,. ಆಡುವ ಮಾತಿಗೂ ಕ್ರಿಯೆಗೂ ಕೆಲವು ಬಾರಿ ನಮ್ಮ ಸಂಸ್ಕೃತಿಯಲ್ಲಿ ಸಂಬಂಧವೇ ಇರುವುದಿಲ್ಲ, ದೇವರು ಇದ್ದಾನೆ ಎಂದರೆ ಇದ್ದಾನೆ ಎಂದಷ್ಟೇ..ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ನಮ್ಮ ಪ್ರಶ್ನೆಯೂ ಅಲ್ಲ ಆಸಕ್ತಿಯೂ ಅಲ್ಲ. ಆದರೆ ಇದನ್ನೇ ರಿಲಿಜನ್ ಸಮಾಜಗಳಲ್ಲಿ ಬಳಸಿದರೆ ಅದಕ್ಕೆ ನಿರ್ದಿಷ್ಟ ಅರ್ಥವೂ ಇದೆ, ಅದನ್ನು ಹುಡುಕಲು (ತೀರ ಸಿಗುವುದಿಲ್ಲ ಎಂದು ತಿಳಿದಿದ್ದರೂ) ಸಹಾಯ ಮಾಡುವ ಸಂಸ್ಥೆಗಳು ಹಾಗೂ ಗ್ರಂಥಗಳು ದೊರಕುತ್ತವೆ. ಇಲ್ಲಿ ಭಾಷೆಯ ಒಕ್ಕಣೆಯ ಆಧಾರದ ಮೇಲೆ ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವುದಕ್ಕಿಂತ ಏನನ್ನು ಹೇಳುತ್ತಿಲ್ಲ ಎಂಬುದು ಅರ್ಥೈಸಿಕೊಳ್ಳುವುದು ಸವಾಲಿನ ಕೆಲಸ. ಏಲಿಯನ್ ಮನುಷ್ಯನಿಗೆ ಭಾಷೆ ತಿಳಿದ ಮಾತ್ರಕ್ಕೆ ಸಂಸ್ಕೃತಿಯೇ ಅರ್ಥವಾಗಿಬಿಡುತ್ತದೆ ಎಂಬುದು ನಿರ್ದೇಶಕರ ತಪ್ಪುಗ್ರಹಿಕೆಗೆ ಒಂದು ನಿದರ್ಶನವಾಗಿದೆ.
ಪ್ರತೀ ಬಾರಿಯೂ ಹಿಂದೂ ಧರ್ಮವೇ ವಿಮರ್ಷೆಗೊಳಪಡಬೇಕೇ?
– ಲಕ್ಷ್ಮೀಶ ಜೆ.ಹೆಗಡೆ
ಪೇಷಾವರದಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕರು ಶಾಲೆಯ ಮೇಲೆ ದಾಳಿ ನಡೆಸಿ ಅಮಾಯಕ ಮಕ್ಕಳ ಮಾರಣ ಹೋಮ ನಡೆಸಿದಾಗ ನಮ್ಮಲ್ಲಿನ ಕೆಲವು ವಿಚಾರವಾದಿಗಳಿಗೆ ಅನ್ನಿಸಿದ್ದು ಧರ್ಮಗ್ರಂಥಗಳ ನಿಷ್ಕರ್ಷೆಯಾಗಬೇಕೆಂದು.ಅದರಲ್ಲೂ ವಿಶೇಷವಾಗಿ ‘ಹಿಂಸೆಗೆ ಪ್ರಚೋದನೆ’ ಕೊಡುವ ಭಗವದ್ಗೀತೆಯ ವಿಮರ್ಷೆಯಂತೂ ಆಗಲೇಬೇಕು.ಆಗ ಮಾತ್ರ ಜಗತ್ತು ಶಾಂತಿಯ ದಿನಗಳನ್ನು ನಿರೀಕ್ಷಿಸಬಹುದು.ಜಗತ್ತಿನ ಶಾಂತಿಗೆ ಭಂಗ ತರಲು ಪ್ರಮುಖ ಕಾರಣವಾಗಿರುವುದು ಇಸ್ಲಾಮಿಕ್ ಭಯೋತ್ಪಾದನೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಪ್ರಾಮಾಣಿಕವಾಗಿ ವಿಮರ್ಷೆಗೊಳಪಡಬೇಕಾಗಿರುವುದು ಭಗವದ್ಗೀತೆಯಂತೆ.ಅದೇ ಸಮಯದಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸುವ ಕುರಿತೂ ಚರ್ಚೆ ನಡೆಯುತ್ತಿರುವುದರಿಂದ ಅವರ ಮಾತುಗಳು ಸಾಂಧರ್ಬಿಕವೋ, ಕಾಕತಾಳೀಯವೋ ಎಂಬುದನ್ನು ಅವರುಗಳೇ ಹೇಳಬೇಕು.
ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಿಸಕೂಡದು ಎಂದಾದರೆ ಬೇರೆ ಯಾವ ಗ್ರಂಥವಾಗಬೇಕೆಂದು ಕೇಳಿದರೆ ನಮಗೆ ನಮ್ಮ ಸಂವಿಧಾನವೇ ಸಾಕು ಎನ್ನುತ್ತಾರೆ.ಸಂವಿಧಾನ ಎಂದಿಗೂ ಧಾರ್ಮಿಕ ಗ್ರಂಥವಾಗಲಾರದು. ಅದು ಎಲ್ಲ ಧರ್ಮಗಳನ್ನೂ ಮೀರಿದ್ದು.ಅದನ್ನು ಎಲ್ಲರೂ ಗೌರವಿಸಲೇಬೇಕು.ಜಗತ್ತಿನ ಇತರ ಅನೇಕ ರಾಷ್ಟ್ರಗಳೂ ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ ಮತ್ತು ಅದನ್ನು ಗೌರವಿಸುತ್ತವೆ ಕೂಡಾ.ಆದರೆ ಆ ಇತರ ರಾಷ್ಟ್ರಗಳು ತಮ್ಮದೇ ಆದ ಧಾರ್ಮಿಕ ಮೌಲ್ಯ,ಧರ್ಮಗ್ರಂಥಗಳನ್ನು ಘೋಷಿಸಿ,ಪೋಷಿಸುತ್ತಿರುವಾಗ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಅದರದ್ದೇ ಆದ ಧಾರ್ಮಿಕ ಮೌಲ್ಯ,ರಾಷ್ಟ್ರೀಯ ಗ್ರಂಥ ಇರಬೇಡವೇ?ಅದು ಈ ದೇಶದ ಬಹುಸಂಖ್ಯಾತ ಹಿಂದೂಗಳ ಭಗವದ್ಗೀತೆಯಾದರೆ ಇತರ ಧರ್ಮಗಳ ಅಸ್ತಿತ್ವಕ್ಕೇನಾದರೂ ಧಕ್ಕೆ ಬರುತ್ತದೆಯೇ?ರಾಷ್ಟ್ರೀಯ ಗ್ರಂಥವಾಗಿ ಘೋಷಣೆಯಾದ ಕೂಡಲೇ ಕಡ್ಡಾಯವಾಗಿ ಎಲ್ಲರೂ ಭಗವದ್ಗೀತೆಯನ್ನು ಪಠಣ ಮಾಡಬೇಕು ಎಂಬ ಕಾನೂನನ್ನು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾರಿಗೆ ತರಲು ಸಾಧ್ಯವೇ?ಇದನ್ನು ಅರ್ಥಮಾಡಿಕೊಳ್ಳದ ಕೆಲವರು ಭಗವದ್ಗೀತೆ,ಹಿಂದೂ ಧರ್ಮ,ಸನಾತನ ಧರ್ಮ ವಿಮರ್ಷೆಗೊಳಗಾಗಬೇಕೆಂದು ಕೂಗುತ್ತಿದ್ದಾರೆ.
ಪುಸ್ತಕ ಪರಿಚಯ : ಶಿಲಾಕುಲ ವಲಸೆ
– ವಿದ್ಯಾ ಕುಲಕರ್ಣಿ
ಲೇಖಕರು :- ಕೆ. ಎನ್ ಗಣೇಶಯ್ಯ
ಸಾರಾಂಶ :- ಆರ್ಯರು ಪಶ್ಚಿಮದಿಂದ ಭಾರತಕ್ಕೆವಲಸಿಗರಾಗಿ ಬರಲಿಲ್ಲ.ಪಶ್ಚಿಮಕ್ಕೆ ವಲಸೆ ಹೋದರು.
ನಾನು ಕಾದಂಬರಿಗಳನ್ನು ಓದಲು ಅಥವಾ ಓದುವ ಹುಚ್ಚು ರೂಢಿಸಿಕೊಂಡಿದ್ದು ಶ್ರೀ ತರಾಸು ಅವರ ಸಿಡಿಲ ಮೊಗ್ಗು ಕಾದಂಬರಿಯಿಂದ ಅಂತ ಹೇಳಬಹುದು. ಆ ಕಾದಂಬರಿಯನ್ನು ನಮ್ಮಣ್ಣನ ತರಗತಿಗೆ ಪಠ್ಯ ಪುಸ್ತಕವಾಗಿ ಹಚ್ಚಿದ್ದರು. ಅವನು ನನಗೆ ಅದನ್ನು ಓದಲು ತಿಳಿಸಿದ್ದಲ್ಲದೇ ಅದರಲ್ಲಿನ ಕೆಲವಾರು ಅಂಶಗಳ ಕುರಿತು ಚರ್ಚಿಸಿ, ಅದನ್ನು ವಿವರಿಸಿ ಹೇಳಿದ್ದಲ್ಲದೇ ನಾನು ಸರಿಯಾಗಿ ತಿಳಿದಿರುವೆನೋ ಇಲ್ಲವೋ ಎಂದು ಪರೀಕ್ಷೆ ಸಹ ಮಾಡಿದ್ದ. ಹೀಗಾಗಿ ನಾನು ಸುಮಾರು 8 ನೇ ತರಗತಿಯಲ್ಲಿದ್ದಾಗಲೇ ಅದನ್ನು ಚನ್ನಾಗಿ ಓದಿ ಹಾಗೇನೇ ಓದುವ ಗೀಳು ಬೆಳೆಸಿಕೊಂಡಿದ್ದೆ. ಶ್ರೀಮತಿ ಗೀತಾ ನಾಗಭೂಷಣ ಅವರ ಕಥೆ ಹೂವ ತಂದವರು ಸಹ ನಮಗೆ ಪಠ್ಯಪುಸ್ತಕದಲ್ಲಿ ಪಾಠವಾಗಿತ್ತು. ಅದನ್ನು ನನ್ನಣ್ಣ ನನಗೆ ಚನ್ನಾಗಿ ವಿವರಿಸಿ ಓದಿಸಿ ಹೇಳಿದ್ದರಿಂದ ಓದುವ ಗೀಳನ್ನು ಬೆಳೆಸಿದ ಅವನಿಗೆ ನನ್ನ ಕೃತಜ್ಞತೆ ಮೊದಲು ಸಲ್ಲುತ್ತವೆ.
ನಂತರದ ದಿನಗಳಲ್ಲಿ ನಾನು ತ್ರಿವೇಣಿ , ಉಷಾ ನವರತ್ನರಾಂ , ರೇಖಾ ಕಾಖಂಡಕಿ ಎಚ್ . ಜಿ ರಾಧಾದೇವಿ. ಎಂ. ಕೆ ಇಂದಿರಾರ ಹಾಗೂ ಇನ್ನಿತರರ ಕಾದಂಬರಿಗಳನ್ನು ಹಾಗೆ ಕಾರಂತರ ಭೈರಪ್ಪರ ಕಾದಂಬರಿಗಳನ್ನು ಓದಿದೆ. ಆದರೆ ಈ ಎಲ್ಲಾ ಕಾದಂಬರಿಗಳಿಗಿಂತ ನನಗೆ ಅಚ್ಚು ಮೆಚ್ಚಾದದ್ದು ಶ್ರೀ ಎಂಡಮೂರಿ ಅವರ ಕಾದಂಬರಿಗಳು . ಅವುಗಳನ್ನು ಓದಲು ಆರಂಭಿಸಿದರೆ ಪುಸ್ತಕ ಕೆಳಗಿಡಲೇ ಆಗುವದಿಲ್ಲ. ಅಷ್ಟೊಂದು ಥ್ರಿಲ್ಲಿಂಗ್ ಇರುತ್ತವೆ. ಇಷ್ಟೊಂದು ಸುಂದರವಾಗಿ ಪುಸ್ತಕ ಕೆಳಗಿಡಲೇ ಆಗದಂತೆ ಕಾದಂಬರಿ ಬರೆಯುವವರು ಕನ್ನಡದಲ್ಲಿ ಇಲ್ಲವಲ್ಲಾ ಎಂದು ನಾನು ಕೊರಗುತ್ತಿದ್ದೆ. ಆ ಕೊರಗನ್ನು ತುಂಬಿದವರೇ ಶ್ರೀ ಕೆ. ಎನ್ ಗಣೇಶಯ್ಯನವರು.
ಶ್ರೀ ಗಣೇಶಯ್ಯನವರ ಕಾದಂಬರಿಗಳು ಯಾಕೆ ಇಷ್ಟವಾಗುತ್ತವೆಂದರೆ ಒಂದನೆಯದು ಬರವಣಿಗೆಯಲ್ಲಿನ ಥ್ರಿಲ್ಲಿಂಗ್. ಎರಡನೆಯದು ಆಧಾರ ಸಮೇತ ಇತಿಹಾಸದ ನಿರೂಪಣೆ.ಇತಿಹಾಸ ಪುಸ್ತಕವನ್ನು ಓದುವದೆಂದರೆ ತುಂಬಾ ಬೇಜಾರು ಮಾಡಿಕೊಳ್ಳುವವರಿಗಾಗಿ ಸುಂದರ ಚೌಕಟ್ಟಿನಲ್ಲಿ ಕಥಾ ರೂಪದಲ್ಲಿ ಇತಿಹಾಸ ತಿಳಿಸುವದು ಗಣೇಶಯ್ಯ ಕಾದಂಬರಿಯ ಉದ್ದೇಶಗಳೆನ್ನಬಹುದು. ಕೇವಲ ರೋಚಕತೆಗಾಗಿ ಏನೋ ಒಂದನ್ನು ಹೇಳದೇ ಅವರು ಐತಿಹಾಸಿಕ ಸಾಕ್ಷಿ ಪುರಾವೆಗಳ ಸಮೇತ ತಿಳಿಸುತ್ತಾರೆ. ಅವುಗಳನ್ನು ಯಾರೂ ಪರೀಕ್ಷೆ ಮಾಡಬಹುದಾಗಿದೆ.
ಯಾನದ ಕಿಟಕಿಯಿಂದೊಂದು ಇಣುಕು ನೋಟ
ಭೈರಪ್ಪನವರ ಕಾದಂಬರಿಗಳು ವಸ್ತು ವಿಷಯದಿಂದಲೂ, ಕಥೆಯ ಗಂಭೀರ ಹಂದರದಿಂದಲೂ ಇತರರಿಗಿಂತ ಭಿನ್ನವಾಗಿರುವ ವಿಚಾರ ತಿಳಿಯದ್ದೇನಲ್ಲ. ಈ ಸರಣಿಗೆ ಮತ್ತೊಂದು ಸೇರ್ಪಡೆ ‘ಯಾನ’. ಇಂಗ್ಲೆಂಡಿನ ಸಾಹಿತ್ಯಾಸಕ್ತರು ಯಾನವನ್ನು ಓದಿ ವಿಮರ್ಶಿಸಿ ಬರೆದ ಲೇಖನಗಳ ಸರಣಿ ನಿಮ್ಮ ಮುಂದಿದೆ.
ಉಮಾ ವೆಂಕಟೇಶ್, ದಾಕ್ಷಾಯಿಣಿ, ಕೇಶವ್ ಕುಲಕರ್ಣಿ ಹಾಗೂ ಸುದರ್ಶನ ಗುರುರಾಜರಾವ್ ಬರೆದ ಇಣುಕು ನೋಟದ ಪರಿಚಯ ನಿಮಗೆ ನೀಡುತ್ತಿದ್ದೇವೆ,ಪ್ರಯಾಣದಲ್ಲಿ ಹೊರ ನೋಟದ ಅನುಭವ ಕಣ್ಣಿಗೆ ಒಂದೇ ಆಗಿದ್ದರೂ, ಅನುಭಾವ ವಿಭಿನ್ನವೇ
– ಸುದರ್ಶನ ಗುರುರಾಜರಾವ್
ಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠ ವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.
‘’ಯಾನ’’ ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ., ಪ್ರಯಾಣವೊಂದು ಧಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಗ್ಗುವುದಲ್ಲದೆಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ ಸಿದ್ದಹವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ,ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು.ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ,ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ ;ಆದರೆ ಆಯಾಮ ಮಾತ್ರ ಬೇರೆ.
ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.
ಮಳೆ
-ಗುರುರಾಜ ಕೊಡ್ಕಣಿ ಯಲ್ಲಾಪುರ
ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ
ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡುಗಳ ನಡುವೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು ಕತ್ತಲು ಹೊದ್ದು ಮಲಗಿದ೦ತೆ ಕಾಣಿಸುತ್ತಿದ್ದವು.ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿದ್ದ ಗುಡುಗಿನ ಸದ್ದು ರಾಕ್ಷಸ ಘರ್ಜನೆಯ೦ತೇ ಬೆದರಿಸುತ್ತಿತ್ತು.ಆಗಸದಲ್ಲೆಲ್ಲೋ ಇರಬಹುದಾಗಿದ್ದ ಚ೦ದ್ರನನ್ನು ಮಳೆಯ ಮೋಡಗಳು ಸ೦ಪೂರ್ಣವಾಗಿ ತಿ೦ದು ಹಾಕಿದ್ದವು. ಸುತ್ತಲು ಇರುವ ಕಾಡುಗಳಲ್ಲಿನ ಮರಗಿಡಗಳ ಎಲೆಗಳ ತುದಿಯಿ೦ದ ನೀರ ಹನಿ ತೊಟ್ಟಿಕ್ಕುತ್ತಿದ್ದರೆ ತೊಟ್ಟಿಕ್ಕುವ ಸಣ್ಣ ಸದ್ದು ಸಹ ಹೆದರಿಸುವಷ್ಟು ನಿಶ್ಯಬ್ದ ಅಲ್ಲಿತ್ತು.ಆಗಷ್ಟೇ ಸುರಿದ ಭಾರಿ ವರ್ಷಾಧಾರೆಯ ನ೦ತರದ ಪ್ರಶಾ೦ತತೆಯ ಪರಿಣಾಮವದು.ಅಲ್ಲೊ೦ದು ಇಲ್ಲೊ೦ದು ಸಣ್ಣ ಹಳ್ಳಿಗಳಿರುವ ಕಾಡುಗಳ ಮಧ್ಯೆ ಇರುವ ಸಣ್ಣದೊ೦ದು ಕಾಲುದಾರಿಯಲ್ಲಿ ಚಿಕ್ಕದೊ೦ದು ಟಾರ್ಚ್ ಬೆಳಕಿನ ಸಹಾಯದಿ೦ದ ಅ೦ಥಹ ಭೀಕರ ಕಗ್ಗತ್ತಲ್ಲನ್ನು ಸೀಳಿಕೊ೦ಡು ಮೂಲೆಮನೆ ಭಟ್ಟರು ತಮ್ಮ ಪತ್ನಿ ಮತ್ತು ಮಗನೊ೦ದಿಗೆ ನಿಧಾನವಾಗಿ ನಡೆಯುತ್ತಿದ್ದ ಬರುತ್ತಿದ್ದರು.
“ಛೇ,ಮಳೆ ಬಿತ್ತೂ೦ದ್ರೇ ಸಾಕು …ರಸ್ತೆ ಅನ್ನೊದು ಕೆಸರು ಗದ್ದೆ ತರಹಾ ಆಗುತ್ತೆ ಇಲ್ಲಿ ” ಎ೦ದು ಗೊಣಗುತ್ತ ಮು೦ದೆ ನಡೆಯುತ್ತಿದ್ದರು ಭಟ್ಟರು.
ಮತಾಂತರ ಸರಿಯಾದರೇ ,ಮರುಮತಾಂತರವೇಕೆ ತಪ್ಪು?
– ರಾಕೇಶ್ ಶೆಟ್ಟಿ
ಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ.”೧೫ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು” ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು “ಅನುಭವಿಸಿ ಬದಲಾಯಿಸುವ ಶಕ್ತಿ – ೧೫ ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು” ಎಂದು ಕಾಣಿಸಲಾರಂಭಿಸಿತು. ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!
ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್,ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,”ಬೈಬಲ್ ಮತ್ತು ಜೀಸಸ್” ಮಾತ್ರ ಸತ್ಯ ಮತ್ತು ಅವು ಮಾತ್ರವೇ “ಪಾಪಿ”ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!.ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.
ಭಗವದ್ಗೀತೆಯ ಕುರಿತ ಪರಕೀಯ ನಿರೂಪಣೆಗಳು/ನಿರ್ಣಯಗಳು…!
-ಡಾ. ಪ್ರವೀಣ್ ಟಿ. ಎಲ್.
ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ
ಭಗವದ್ಗೀತೆಯು ಸದಾ ಚರ್ಚೆಯಲ್ಲಿರುವ ವಸ್ತುವಿಷಯ. ಅದನ್ನು ಶಾಲೆಯಲ್ಲಿ ಭೋದಿಸುವ ಸಲುವಾಗಿ ಕಳೆದ ಬಾರಿ ಚರ್ಚೆಯಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಅದನ್ನೊಂದು ರಾಷ್ಟ್ರೀಯ ಗ್ರಂಥ ಮಾಡುವ ಆಶಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಹಲವು ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಲೇ ಇವೆ. ಮುಖ್ಯವಾಗಿ ಪ್ರಜಾವಣಿಯ ‘ಸಂಗತ’ದಲ್ಲಿ ಪ್ರಕಟವಾದ ಪ್ರೊ. ಭಗವಾನ್‍ರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಬರಹ. ಹಾಗೆಂದು ಭಗವದ್ಗೀತೆ ರಾಷ್ಟೀಯ/ಧರ್ಮ ಗ್ರಂಥವಾಗಬೇಕೆಂಬ ಆಶಯ ನನ್ನದಲ್ಲ. ಬದಲಾಗಿ ‘ಭಗವದ್ಗೀತೆಯು ಜಾತಿವ್ಯವಸ್ಥೆಯನ್ನು ಪ್ರತಿಪಾದಿಸುವ ಒಂದು ಅಪಾಯಕಾರಿ ಕೃತಿ’ ಎನ್ನುವ ಹಾಗೂ ‘ಧರ್ಮಗ್ರಂಥ’ ಮಾಡಬೇಕೆನ್ನುವ ಎರಡೂ ವಾದಗಳು ಹೇಗೆ ನಮಗೆ ಪರಕೀಯವಾಗಿವೆ ಎಂಬುದನ್ನು ತೋರಿಸುವುದು.
ಲೇಖಕರು ತಮ್ಮ ವಾದದ ಸಮರ್ಥನೆಗೆ ನೀಡಿದ ಅಂಶಗಳು ಭಗವದ್ಗೀತೆಯು ಜಾತಿವ್ಯವಸ್ಥೆಯನ್ನು ಪ್ರತಿಪಾದಿಸಿದೆ ಎಂಬುದನ್ನು ಸಾಭೀತುಪಡಿಸಲು ಯಶಸ್ವಿಯಾಗಿಲ್ಲ.
ಜಾತ್ಯತೀತರಿಗೆ ಈವರೆಗಿನ ಮತಾಂತರವೇಕೆ ಕಾಣಲಿಲ್ಲ?
ಡ್ಯಾನಿ ಪಿರೇರಾ

ಭಾರತದ ರಾಷ್ಟ್ರೀಯ ಜೀವನದಲ್ಲಿ ಅತಿ ದೀರ್ಘಕಾಲದಿಂದ ಘಾಸಿಗೊಳಿಸುತ್ತಿರುವ ಸಮಸ್ಯೆಗಳಲ್ಲಿ ಮತಾಂತರವೂ ಒಂದು. ಸೆಮೆಟಿಕ್ ಮೂಲವೆಂದು ಹೇಳಲಾಗುವ ಇಸ್ಲಾಂ ಮತ್ತು ಕ್ರೈಸ್ತ ಮತಗಳಲ್ಲಿ ನಡೆಯುತ್ತಿರುವ ಮತಾಂತರದ ಚಟುವಟಿಕೆಗಳು ನೂರಾರು ವರ್ಷಗಳಿಂದ ಈ ಸಮಸ್ಯೆ ಭಾರತವನ್ನು ಕಾಡುತ್ತಲೇ ಬಂದಿದೆ. ಇದಕ್ಕೆ ಬಲಿಯಾದವರ ಸಂಖ್ಯೆ ಭಾರಿಯೇ ಎನ್ನಬಹುದು. ಉತ್ತರ ಪ್ರದೇಶದಲ್ಲಿ 200 ಜನ 30 ವರ್ಷಗಳ ಹಿಂದೆ ಇಸ್ಲಾಮಿಗೆ ಮತಾಂತರಗೊಂಡು ನಂತರ ಹಿಂದೂ ಸಂಘಟನೆಗಳ ಪ್ರಯತ್ನದ ತರುವಾಯ ಮರಳಿ ಮಾತೃ ಧರ್ಮಕ್ಕೆ ಬಂದರೆ ದೇಶದ ಸೆಕ್ಯುಲರ್ ವಲಯಗಳಲ್ಲಿ ಚರ್ಚೆಯಾಗುತ್ತದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವಕ್ಕೆ ಹೋರಾಡ ಬೇಕಾದ ಅನಿವಾರ್ಯತೆ ಉಂಟಾಗಿರುವ ರಾಜಕೀಯ ನಾಯಕರಿಗೆ ಮುಸ್ಲಿಮರು ಹಿಂದೂ ಧರ್ಮಕ್ಕೆ ಬಂದಿರುವುದು ಇವರ ಹೊಟ್ಟೆ ತೊಳೆಸಿಕೊಳ್ಳಲು ಶುರುವಾಗಿರುವ ಸಂಗತಿ ಗೋಚರವಾಗುತ್ತಿದೆ. ಹಾಗಾಗಿ ಕೇವಲ ಇನ್ನೂರು ಜನ ಮುಸ್ಲಿಮರು ಹಿಂದು ಧರ್ಮಕ್ಕೆ ಮತಾಂತರಗೊಳಿಸಿರುವುದರಿಂದ ಧಾರ್ಮಿಕ ಸಾಮರಸ್ಯ ಹಾಳಾಗುತ್ತದೆ ಎಂದು ಅರಚಲು ಶುರು ಮಾಡಿದ್ದಾರೆ. ಇಲ್ಲಿ ಒಂದು ವಿಷಯ ಹೇಳಲೇಬೇಕು. ಅದೆಂದರೆ ಇವರು ಯಾವ ಸಾಮರಸ್ಯದ ಬಗ್ಗೆ ಮಾತಾಡುತ್ತಿದ್ದಾರೆ ಎಂಬುದು!
ಹಾಗೆ ಹೇಳುವುದಾದರೆ ಮತಾಂತರ ಪ್ರಕ್ರಿಯೆಯೇ ಆತ್ಮಘಾತುಕತನದ್ದು. ‘ಮತಾಂತರ’ ಎನ್ನುವ ಶಬ್ದವೇ ಒಂದು ಧರ್ಮ ಮತ್ತೊಂದು ಧರ್ಮವನ್ನು ಕೆಣಕುವ ಅಥವಾ ಸಾಮರಸ್ಯದ ಬುಡಕ್ಕೆ ಬೀಳುವ ಕೊಡಲಿ ಪಟ್ಟು. ಒಬ್ಬ ವ್ಯಕ್ತಿ ತಾನು ಯಾವ ಧರ್ಮವನ್ನು ಆಚರಿಸಬೇಕು ಆಥವಾ ಬಿಡಬೇಕು ಎನ್ನು ತೀರ್ಮಾನ ಆತನದ್ದೇ. ಆ ಹಕ್ಕನ್ನು ನಮ್ಮ ದೇಶದ ಸಂವಿಧಾನ ಕೊಟ್ಟಿದೆ ನಿಜ. ಆದರೆ ಮತಾಂತರಿಸುವ ಸಮಾಜ ಅದು ಕ್ರೈಸ್ತ, ಮುಸ್ಲಿಂ ಅಥವಾ ಹಿಂದೂಗಳಾಗಲಿ, ಅವರವರ ಮತಗ್ರಂಥಗಳನ್ನು ಕೊಟ್ಟು ಇದನ್ನು ಓದು ಇದರಿಂದ ನಿನ್ನ ಮನಪರಿವರ್ತನೆಯಾದರೆ ನನ್ನ ಮತಕ್ಕೆ ಬಾ ಎಂದು ಹೇಳುವುದಿಲ್ಲ. ಹಾಗೆ ಮಾಡಿದ್ದರೆ ಖಂಡಿತ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಈ ಮತಾಂತರ ಪ್ರಕ್ರಿಯೆಯಲ್ಲಿ ಒಟ್ಟಾರೆ ಒಂದು ಧರ್ಮದ ನಂಬಿಕೆಗಳನ್ನು ಹೀಯಾಳಿಸಿ ತನ್ನ ಮತ ಶ್ರೇಷ್ಠ ಎನ್ನುವ ಭ್ರಮೆಯೊಂದಿಗೆ ಅಸಹಿಷ್ಣುತೆ ಬೆಳೆಸಲಾಗುತ್ತದೆ, ಜೊತೆಗೆ ಆಸೆ-ಆಮಿಷಗಳು! ಉತ್ತರ ಪ್ರದೇಶದಲ್ಲಿ ಮುಸ್ಲಿಂ ಕಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ರಾಷ್ಟ್ರವ್ಯಾಪಿ ಚರ್ಚೆ ಮಾಡುವ ಸೆಕ್ಯುಲರ್ ನಾಯಕರು ಇದೇ ಮತಾಂತರಕ್ಕೆ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಿರುವ ಕ್ರೈಸ್ತ ಮಿಶನರಿಗಳ ಮತ್ತು ಜಿಹಾದ್ ಹೆಸರಿನಲ್ಲಿ ನಡೆಯುವ ಮತಾಂತರದ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ?! ಇದೇ ಮುಖವಾಡದ ಸೆಕ್ಯುಲರಿಷ್ಟರು ಹಿಂದೂ ಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿರುವುದನ್ನೇಕೆ ಪ್ರಶ್ನಿಸುತ್ತಿಲ್ಲ! ಇಷ್ಟಕ್ಕೂ ಈ ಮಿಶನರಿಗಳು ಮಾಡುತ್ತಿರುವುದು ಧರ್ಮ ಬೋಧನೆಯಲ್ಲ! ತಮ್ಮ ಮತದ ಜನಸಂಖ್ಯೆ ಹೆಚ್ಚಳವಷ್ಟೇ. 2011ರ ಒಂದು ವರದಿಯ ಪ್ರಕಾರ ಪ್ರತಿವರ್ಷ ಹಿಂದುಗಳನ್ನು ಮತಾಂತರಿಸಲು 10,500ಕೋಟಿ ರೂ. ಹಣ ಅಮೆರಿಕಾ, ಜರ್ಮನಿ, ಯುಕೆ, ನೆದರಲ್ಯಾಂಡ್,ಸ್ಪೇನ್ ಇಟಲಿ ಮುಂತಾದ ಕಡೆಗಳಿಂದ ಹಣ ಸರಬರಾಜಗುತ್ತದೆ ಎಂದು ಹೇಳಲಾಗುತ್ತದೆ. ಸರ್ಕಾರವೇ ಹೇಳುವ ವರದಿಯಂತೆ ಕೆಲವು ಎನ್ ಜಿ ಒ ಗಳಿಗೆ ಕ್ರೈಸ್ತ ಮಿಶನರಿಗಳೇ ಅವರ ಖಾತೆಗೆ ಹಣ ಜಮೇಮಾಡಿವೆಯಂತೆ. ವರದಿಯಂತೆ ಮತಾಂತರಿಯು ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಗಳಿಗೆ ಹೇಳಿದ್ದೇನೆಂದರೆ ಹಿಂದಿನ ಸರ್ಕಾರಗಳು ಅನುಸರಿಸಿದ ಕುರುಡು ನೀತಿಯು ಇದನ್ನೆಲ್ಲ ಮುಚ್ಚಿ ಹಾಕಿವೆ. ಇಲ್ಲಿ ರಾಜಕಾರಣಿಗಳ ಬಾಯಿ ಮುಚ್ಚಿಕೊಂಡಿರುವಂತೆ ಅವರ ಬಾಯಿಗೆ ಹಣ ಹಾಕಲಾಗುತ್ತದೆಯಂತೆ. ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧವಾಗಿರುವುದರಂದ ಬಾಯಿ ಮುಚ್ಚಿಕೊಂಡಿರಲು ಭಾರಿ ಮೊತ್ತವನ್ನು ವ್ಯಯಮಾಡಲಾಗುತ್ತದೆಯಂತೆ. ಆ ಐ.ಬಿ.ಅಧಿಕಾರಿ ಹೇಳುವಂತೆ- ‘ಸಾವಿರದಲ್ಲೊಬ್ಬ ಈ ಆಮಿಷದ ಮತಾಂತರದ ಬಗ್ಗೆ ದೂರು ನೀಡಲು ಬರುತ್ತಾನೆ. ಈ ಮಿಶನರಿಗಳು ಭಾರಿ ಹಣ ಬಳಸಿ ಅವರ ಬಾಯಿ ಮುಚ್ಚಿಸುತ್ತವೆ’ ಎಂದು. ಹಾಗಾದರೆ ಇದರಿಂದ ಸಮರಸ್ಯಕ್ಕೆ ಧಕ್ಕೆ ಬರುವುದಿಲ್ಲವೇ? ಇದೊಂದು ಜಾತ್ಯತೀತರ ಇಬ್ಬಗೆ ನೀತಿ ಎನ್ನುವುದು ಒಂದಷ್ಟು ವಿವೇಚನೆ ಇರುವಂತರಗೆ ಖಂಡಿತ ಅರ್ಥವಾಗುತ್ತದೆ ಎನ್ನುವಾಗ ಈ ಆಕ್ಷೇಪದ ಹಿಂದೆ ಒಂದಷ್ಟು ಹೊಲಸು ರಾಜಕಾರಣದ ವಾಸನೆಯಿದೆ ಎಂದೆನಿಸದಿರದು.





