ಸಂಸ್ಕೃತಿ ಸಂಕಥನ – ೧೨- ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ
– ರಮಾನಂದ ಐನಕೈ
ಭಾರತದಲ್ಲಿರುವ ಜಾತಿಗಳು ಒಂದು ‘ವ್ಯವಸ್ಥೆ’ ಅಲ್ಲ
ಕೆಲವು ವೈದ್ಯರಿರುತ್ತಾರೆ. ಔಷಧಿ ಕೊಟ್ಟಾಕ್ಷಣ ರೋಗ ವಾಸಿಯಾಗುತ್ತದೆ. ನಾವಂದುಕೊಳ್ಳುತ್ತೇವೆ ‘ಅವರು ತುಂಬಾ ಚೆನ್ನಾಗಿ ಔಷಧಿ ಕೊಡುತ್ತಾರೆ’ ಎಂದು. ಹಾಗಾದರೆ ಮಾರುಕಟ್ಟೆಯಲ್ಲಿ ಎಷ್ಟೊಂದು ವೈವಿಧ್ಯಮಯವಾದ ಔಷಧಿಗಳು ಸಿಗುತ್ತವೆ. ಎಲ್ಲ ವೈದ್ಯರು ಕೊಡಬಹುದಲ್ಲ? ಇಲ್ಲೇ ಇದೆ ಸೂಕ್ಷ್ಮ. ವೈದ್ಯರ ಯಶಸ್ಸು ಇರುವುದು ಔಷಧಿ ಕೊಡುವುದರಲ್ಲೊಂದೇ ಅಲ್ಲ. ಅದಕ್ಕಿಂತ ಮುಖ್ಯವಾಗಿ ವ್ಯಕ್ತಿಯಲ್ಲಿರುವ ರೋಗ ಪತ್ತೆಮಾಡುವುದರಲ್ಲಿರುತ್ತದೆ. ಒಮ್ಮೆ ರೋಗ ಗೊತ್ತಾದರೆ ಅದಕ್ಕೆ ಔಷಧ ಯಾವುದೆಂಬುದು ವೈದ್ಯಕೀಯ ಸಾಮಾನ್ಯಜ್ಞಾನ.
ಸದ್ಯದ ಸಮಾಜವಿಜ್ಞಾನ ಪ್ರಕಾರ ಭಾರತೀಯ ಸಮಾಜದ ಪರಿಸ್ಥಿತಿಯೂ ಇದೇ ಆಗಿದೆ. ಭಾರತೀಯ ಸಮಾಜ ವ್ಯವಸ್ಥೆ ಸರಿಯಾಗಿಲ್ಲ. ಮೌಢ್ಯ ಮತ್ತು ಅಸಮಾನತೆಯಿಂದ ಕೊಳೆಯುತ್ತ ರೋಗಗ್ರಸ್ತವಾಗಿವೆ ಎಂಬುದು ಚಿಂತಕರ ಅಭಿಮತ. ಜಾತಿವ್ಯವಸ್ಥೆ ಭಾರತೀಯಸಮಾಜಕ್ಕೆ ಅಂಟಿಕೊಂಡ ದೊಡ್ಡ ರೋಗ. ಹಾಗಾಗಿ ಈ ರೋಗ ಹೋಗಬೇಕಾದರೆ ಜಾತಿವ್ಯವಸ್ಥೆಯನ್ನು ಆಮೂಲಾಗ್ರವಾಗಿ ನಾಶಮಾಡಬೇಕು ಎಂಬ ಮಾತು ದಿನನಿತ್ಯ ಕೇಳಿಬರುತ್ತವೆ. ಭಾರತೀಯ ಸಮಾಜಕ್ಕೆ ಈ ರೀತಿಯ ರೋಗವಿದೆಯೆಂಬ ತಿಳುವಳಿಕೆ ಎಲ್ಲಿಂದ ಬಂತು? ಇದು ನಿಜವಾಗಿಯೂ ರೋಗ ಹೌದೋ ಎಂಬುದರ ಬಗ್ಗೆ ನಾವು ಚಿಂತಿಸಿಲ್ಲ. ನೂರಾರು ವರ್ಷಗಳಿಂದ ಹಲವಾರು ರೀತಿಯ ಔಷಧ ಮಾಡುತ್ತಲೇ ಬಂದಿದ್ದೇವೆ. ರೋಗ ಗುಣಾಗುವುದರ ಬದಲು ಉಲ್ಭಣಿಸುತ್ತ ಬಂದಿದೆ. ಅಂದರೆ ನಾವು ರೋಗವನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಹಾಗಾಗಿ ನಾವು ನೀಡುವ ಔಷಧಿಗಳು ವ್ಯರ್ಥವಾಗುತ್ತಿವೆ. ರೋಗ ಇಲ್ಲದೆಯೇ ಔಷಧ ಕೊಡುವುದು ಅಥವಾ ಸರಿಯಾದ ರೋಗಕ್ಕೆ ಸರಿಯಾದ ಔಷಧ ಕೊಡದೇ ಇರುವುದು ಯಾವತ್ತೂ ಅಪಾಯ. ಅದು ದೊಡ್ಡ ರೋಗಕ್ಕೆ ನಾಂದಿಯಾಗುತ್ತದೆ.
‘ಮಾಡಿದ್ದುಣ್ಣೋ ಮಹಾರಾಯ’- ಒಂದು ವಿಶ್ಲೇಷಣೆ
– ಗೋವಿಂದ ರಾವ್ ವಿ ಅಡಮನೆ
‘ಮಾಡಿದ್ದುಣ್ಣೋ ಮಹಾರಾಯ’, ‘ಬಿತ್ತಿದಂತೆ ಬೆಳೆ’ ಈ ಜಾಣ್ನುಡಿಗಳು ಪುನರ್ಜನ್ಮದ ಪರಿಕಲ್ಪನೆಯ ಹುಟ್ಟಿಗೆ ಕಾರಣವಾದ ಕರ್ಮಸಿದ್ಧಾಂತದ ತಿರುಳನ್ನು ಬಿಂಬಿಸುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಈ ಉಕ್ತಿಗಳನ್ನು ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಅರ್ಥೈಸಿ ಮೂಢನಂಬಿಕೆಗಳನ್ನೂ ಕರುಡು ಸಂಪ್ರದಾಯಗಳನ್ನೂ ಹುಟ್ಟುಹಾಕಲು ಬಳಸಿಕೊಂಡಿವೆ, ಯಶಸ್ವಿಯೂ ಆಗಿವೆ.
ಪುನರ್ಜನ್ಮಪರ ವಾದಿಗಳು ಒದಗಿಸಿರುವ ಉದಾಹರಣೆಗಳನ್ನು ಆಧರಿಸಿ ಈ ಉಕ್ತಿಗಳ ಇಂಗಿತಾರ್ಥವನ್ನು ನಾನು ವಿವರಿಸುವ ಪರಿ ಇಂತಿದೆ: ಭೌತಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಲು ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇರುವಂತೆಯೇ ಮಾನವನ ಜೀವನವನ್ನು ನಿಯಂತ್ರಿಸಲೂ ಕಾರಕ-ಪರಿಣಾಮ ಆಧಾರಿತ ನೈಸರ್ಗಿಕ ನಿಯಮಗಳು ಇವೆ. ಈ ನಿಯಮಗಳನ್ನೇ ನಾವು ನೈತಿಕ ನಿಯಮಗಳು ಎಂದು ಉಲ್ಲೇಖಿಸುತ್ತೇವೆ. ಇವು ಸಾರ್ವಕಾಲಿಕ, ಸಾರ್ವದೇಶಿಕ ಮತ್ತು ಸಾರ್ವತ್ರಿಕ. ಭೌತಪ್ರಪಂಚದ ನೈಸರ್ಗಿಕ ನಿಯಮಗಳು ಹೇಗೆ ಅನುಲ್ಲಂಘನೀಯವೋ ಅಂತೆಯೇ ಇವೂ ಕೂಡ. ಎಲ್ಲ ನೈಸರ್ಗಿಕ ನಿಯಮಗಳೂ ಅನಾದಿ ಹಾಗೂ ಅನಂತ್ಯ, ಯಾರೋ ಮಾಡಿದ ನಿಯಮಗಳು ಇವಲ್ಲವಾದ್ದರಿಂದ. ಭೌತಪ್ರಪಂಚದಲ್ಲಿ ಲಾಗೂ ಆಗುವ ನಿಯಮಗಳೇ ಆಧುನಿಕ ವಿಜ್ಞಾನಗಳ ಅಧ್ಯಯನ ವಸ್ತು. ನೈಸರ್ಗಿಕ ನೈತಿಕ ನಿಯಮಗಳನ್ನು ಅಧ್ಯಯಿಸಲು ಆಧುನಿಕ ವಿಜ್ಞಾನಗಳಿಗೆ ಸಾಧ್ಯವಾಗಿಲ್ಲ. ವಿವಿಧ ಮತಗಳ ಆಧಾರ ಗ್ರಂಥಗಳಲ್ಲಿ ಈ ನೈತಿಕ ನಿಯಮಗಳನ್ನು ಪಟ್ಟಿ ಮಾಡುವ ಪ್ರಯತ್ನಗಳು ಆಗಿವೆಯಾದರೂ ಸರ್ವಮಾನ್ಯವಾದ ಪಟ್ಟಿಮಾಡಲು ಸಾಧ್ಯವಾಗಿಲ್ಲದಿರುವುದು, ಪಟ್ಟಿ ಮಾಡಿರುವ ನಿಯಮಗಳ ಅನುಸರಣೆ ಅಥವ ಉಲ್ಲಂಘನೆಯ ಪರಿಣಾಮಗಳ ಕುರಿತಾಗಿ ಇರುವ ಭಿನ್ನಾಭಿಪ್ರಾಯಗಳು ಅನೇಕ ಹಿಂಸಾಕೃತ್ಯಗಳ ಹುಟ್ಟಿಗೆ ಕಾರಣವಾಯಿತು. ಭೌತನಿಯಮಗಳಂತೆಯೇ ಇವೂ ಅನುಲ್ಲಂಘನೀಯವಾದವುಗಳು ಆಗಿದ್ದರೂ ನಿಯಮೋಲ್ಲಂಘನೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಸಾರಿದ ‘ಪುರೋಹಿತ ವರ್ಗ’ (ಇವರು ಬೇರೆ ಬೇರೆ ಹೆಸರುಗಳಲ್ಲಿ ಎಲ್ಲ ಮತಗಳಲ್ಲಿಯೂ ಇದ್ದಾರೆ) ಅದಕ್ಕಾಗಿ ಅನೇಕ ಕಂದಾಚಾರಗಳನ್ನೂ ಮೂಢನಂಬಿಕೆಗಳನ್ನೂ ಹುಟ್ಟುಹಾಕಿತು, ಬೆಳೆಯಿಸಿತು, ಪೋಷಿಸಿತು. ಮುಖಸ್ತುತಿಗೆ ಮರುಳಾಗಿ ಅಥವ ಮಾಡಿದ ಅನೈತಿಕ ಕೃತ್ಯಕ್ಕೆ ಅನುಗುಣವಾಗಿ ಸಂಕೀರ್ಣತೆ ಮತ್ತು ವೆಚ್ಚ ಹೆಚ್ಚುವ ‘ಪೂಜೆ, ಹೋಮ, ಹರಕೆ, ನೈವೇದ್ಯ, ದಾನ’ ಇವೇ ಮೊದಲಾದ ‘ಪ್ರಾಯಶ್ಚಿತ್ತ’ಗಳನ್ನು ಮಾಡಿದರೆ ಎಲ್ಲ ರೀತಿಯ ಅನೈತಿಕತೆಯನ್ನು ಮನ್ನಿಸುವ ‘ದೇವರ’ ಪರಿಕಲ್ಪನೆಯನ್ನು ಸ್ವಲಾಭಕ್ಕಾಗಿ ಸೃಷ್ಟಿಸಿ ಪೋಷಿಸಿದ್ದೂ ಇದೇ ವರ್ಗ. ಪುನರ್ಜನ್ಮ ಇರುವುದೇ ನಿಜವಾದರೆ, ಇಂಥ ‘ದೇವರ’ ಪರಿಕಲ್ಪನೆಯನ್ನು ಒಪ್ಪಿಕೊಳ್ಳುವುದಕ್ಕೆ ಬದಲಾಗಿ ಕರ್ಮಸಿದ್ಧಾಂತ ಸೂಚಿಸುವ ನೈಸರ್ಗಿಕ ನೈತಿಕ ನಿಯಮಾನುಸಾರ ಬಾಳ್ವೆ ನಡೆಸುವುದು ಉತ್ತಮ.
ಪುನರ್ಜನ್ಮಪರ ವಾದಿಗಳ ಒದಗಿಸುವ ಸಾಕ್ಷ್ಯಾಧಾರ ಎಂದು ನೀಡುತ್ತಿರುವ ಉದಾಹರಣೆಗಳನ್ನು ಕರ್ಮಸಿದ್ಧಾಂತದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದರೆ ಮತಾತೀತವೂ ಕುಲಾತೀತವೂ ಲಿಂಗಾತೀತವೂ ಆದ ಕೆಲವು ನಿಯಮಗಳನ್ನು ಅನುಮಾನಿಸಬಹುದು (ಇನ್ ಫರ್). ಈ ರೀತಿ ಅನುಮಾನಿಸಿದ ಪ್ರಧಾನ ನಿಯಮಗಳು ಇಂತಿವೆ:
ಅತಿಯಾದ ಕಾಳಜಿಯೂ ಮುಳುವಾದೀತು ಜೋಕೆ…!
-ವಿಷ್ಣುಪ್ರಿಯ
ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ.
ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಕೆಲವೊಂದು ಬಾರಿ ನಮ್ಮ ವಿಪರೀತ ಕಾಳಜಿಯೇ ನಮಗೆ ಮುಳುವಾಗುವಂಥ ಪ್ರಸಂಗಗಳೂ ಬರುತ್ತವೆ. ದಪ್ಪಗಾಗುತ್ತೇವೆ ಎಂಬ ಆತಂಕದಲ್ಲಿ ಆಹಾರ ಬಿಡುತ್ತೇವೆ; ಪೋಷಕಾಂಶದ ಕೊರತೆ ಎದುರಾಗುತ್ತದೆ; ನಿತ್ರಾಣ ಆವರಿಸಿಕೊಳ್ಳುತ್ತದೆ; ಮತ್ತೆ ಅದನ್ನು ಸರಿಪಡಿಸುವುದಕ್ಕೆ ಔಷಧಿ ತೆಗೆದುಕೊಳ್ಳುತ್ತೇವೆ; ಉಪ್ಪು ತಿಂದರೆ ಬಿಪಿ ಬರುತ್ತೆ ಅಂತ ಉಪ್ಪು ತೀರಾ ಕಡಿಮೆ ತಿನ್ನುತ್ತೇವೆ; ಬಿಪಿ ಕಡಿಮೆಯಾಗುತ್ತದೆ; ಮತ್ತೆ ಗಿಡ್ಡಿನೆಸ್ ಕಾಡುತ್ತದೆ; ಅದಕ್ಕೆ ಔಷಧಿ.
ಹೌದು, ಮನುಷ್ಯ ಸದಾ ಏನೋ ಮಾಡುತ್ತೇನೆಂದು ಹೊರಡುತ್ತಾನೆ. ಅದಿನ್ನೇನೋ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೋಗಗಳೇ ಪ್ರಪಂಚವನ್ನು ಆಳುತ್ತಿರುವಂಥ ಸಂದರ್ಭದಲ್ಲಿ ಮಾನವ ಯಾವುದೋ ಹೊಸ ರೋಗದ ಹೆಸರು ಕೇಳಿದರೆ ಭೀತಿಗೊಳಗಾಗುತ್ತಿದ್ದಾನೆ. ಅದರಿಂದ ರಕ್ಷಣೆ ಪಡೆಯಬೇಕು ಅಂತ ಮೊದಲೇ ಔಷಧಿ ತೆಗೆದುಕೊಳ್ಳುವ ಆತುರ ತೋರುತ್ತಾನೆ. ಇದಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ; ಆ ಉಪಕರಣಗಳ ಪ್ರಾಮಾಣಿಕತೆಯನ್ನು, ಅವುಗಳ ವಿಶ್ವಾಸಾರ್ಹತೆಯನ್ನು ಪರಿಗಣಿಸುವ, ಈ ವಿಚಾರದ ಬಗ್ಗೆ ಅರೆಕ್ಷಣವೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೊಂಡುಕೊಂಡು ಬಿಡುತ್ತೇನೆ. ತಪ್ಪು ಮಾಹಿತಿ ನಿಡಿ ರೋಗ ಇದೆ ಎಂದು ಹೇಳಿತೋ ನಮ್ಮ ಆತಂಕ ಹೆಚ್ಚುತ್ತದೆ, ಒಂದು ವೇಳೆ ಇರುವ ರೋಗವನ್ನು ಸೂಚಿಸದೇ ಇದ್ದಲ್ಲಿ, ನಮ್ಮ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತದೆ.
ಇನ್ನು ಕೆಲವೊಂದು ಬಾರಿ ಯಾವುದೇ ಸಮಸ್ಯೆಗೆಂದು ಚಿಕಿತ್ಸೆ ಪಡೆಯುತ್ತೇವೆ. ಆದರೆ ಆ ಚಿಕಿತ್ಸೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಲವಾರು ಬಾರಿ ಔಷಧಿಗಳು ಅಡ್ಡ ಪರಿಣಾಮ ಬೀರಿ ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಇನ್ನೊಂದಷ್ಟು ಸಮಯ ಹೆಣಗಾಡಬೇಕಾದಂಥ ಪರಿಸ್ಥಿತಿ ಬರುತ್ತದೆ. ಇಷ್ಟೇ ಆಗಿದ್ದರೆ ಹೀಗೆಯೋ ಸುಧಾರಿಸಬಹುದಿತ್ತು. ಆದರೆ ಕೆಲವೊಂದು ಚಿಕಿತ್ಸೆಗಳು ಕ್ಯಾನ್ಸರ್ನಂಥ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ. ಹೀಗೆಲ್ಲ ಆಗುತ್ತದೆಯೇ? ನಿಜಕ್ಕೂ ಈ ಉಪಕರಣಗಳು ನಿಖರವಾದ ಮಾಹಿತಿಯನ್ನು ಕೊಡುವುದಿಲ್ಲವೇ? ಒಂದು ಚಿಕಿತ್ಸೆ ಇನ್ನೊಂದು ರೋಗವನ್ನು ಸೃಷ್ಟಿ ಮಾಡಿತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಮತ್ತಷ್ಟು ಓದು 
ಶ್ರೀರಾಮುಲು ಪುರಾಣದೊಳ್ ಭಾಜಪದ ಅವಸ್ಥೆ….!!
-ಅರೆಹೊಳೆ ಸದಾಶಿವರಾವ್
ಇಡೀ ಕರ್ನಾಟಕದ ರಾಜಕೀಯ ನಕ್ಷೆಯ ಮೇಲೆ ತನ್ನ ಪ್ರಭಾವ ಬೀರಿ, ಒಂದು ಹಂತದಲ್ಲಿ ಪಕ್ಷದ ಹೈಕಮಾಂಡ್‌ನ್ನೂ ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಬಳ್ಳಾರಿಯ ಕಥೆ ನೋಡಿ. ಇಂದು ತಮ್ಮಿಂದ ಉಪಕಾರ ಪಡೆದ ಎಲ್ಲರಿಗೂ ತಲೆನೋವಾಗಿ, ಉಪಚುನಾವಣೆಗೆ ಕಾರಣವಾಗಿ, ’ಬಹಿರಂಗ’ವಾಗಿ, ಅ ಕಾರಣವಾಗಿ ಭಾಜಪದಿಂದ ಡೈವೋರ್ಸ್ ಪಡೆದು, ಶ್ರೀರಾಮುಲು ನಡೆಸಿರುವ ಕಾರುಬಾರು, ಎಲ್ಲರ ಹುಬ್ಬೇರಿಸಿದೆ.
ಅಲ್ಲಿ, ಚಂಚಲಗೂಡಿನಲ್ಲಿ ಗಣಿಯ ಹಿರಿಧಣಿ,
ಪರಪ್ಪನ ಅಗ್ರಹಾರದಲ್ಲಿ ಭಾಜಪದ ಕಣ್ಮಣಿ!
ಈ ನಡುವೆ ಶ್ರೀರಾಮುಲುದ್ದೇ ಬೇರೆ ಹಣಾಹಣಿ.
ಈಗ ಬಳ್ಳಾರಿಗೆ ಮತ್ತೆ ಚುನಾವಣೆಯ ಸಗಣಿ!!!
ಈ ಸಗಣಿ ಎಂದ ಬಗ್ಗೆ ನಿಮಗೆ ಆಶ್ಚರ್ಯವಿರಬಹುದು. ಆದರೆ ಇದು ಶ್ರೀರಾಮುಲು ತಮ್ಮ ಮುಖಕ್ಕೆ ಮೆತ್ತಿದ ಸಗಣಿಯನ್ನು ಯಾರದ್ದೋ ಮುಖಕ್ಕೆ ಹಚ್ಚಿ, ಏನೋ ಮಾಡಲು ಹೊರಟಿದ್ದಾರೆ. ಇನ್ನುಳಿದ ಕೇವಲ ಅಲ್ಪ ಸಮಯಕ್ಕೆ ಅಲ್ಲಿ ಚುನಾವಣೆಯ ಕಾವೇರುವಂತೆ ಮಾಡಿದ ಶ್ರೀರಾಮುಲು ಒಂದು ರೀತಿಯಲ್ಲಿ ತನ್ನ ಆಪ್ತ ಜನಾರ್ದನ ರೆಡ್ಡಿಯೊಂದಿಗೆ ಸೇರಿಕೊಂಡು, ರಾಜ್ಯಕ್ಕೆ ಸಾಲು ಸಾಲಾಗಿ ಉಪಚುನಾವಣೆಗಳನ್ನೇ ತಂದವರು ಎಂಬುದು ಗಮನಾರ್ಹ!. ಇನ್ನೇನು ಸರಕಾರ ರಚನೆಗೆ ಅಣಿಯಾಗಬೇಕು ಎಂದು ಭಾಜಪ ಶಾಲು ಕೊಡವಿಕೊಳ್ಳುವಷ್ಟರಲ್ಲಿ ಎದುರಾದದ್ದು ಬಹುಮತದ ಕೊರತೆ. ಆಗ ಪಕ್ಷೇತರರಿಗೆ ಲಾಟರಿ ಹೊಡೆಸಿ, ಅವರನ್ನು ಹೆಲಿಕಾಪ್ಟರ್‌ನಲ್ಲಿಯೇ ತಂದು, ಖರೀದಿಸಿ ಸರಕಾರ ರಚಿಸಿದ ನಂತರ, ’ಆಪರೇಷನ್ ಕಮಲ’ದ ಆಮಿಷದ ಹಬ್ಬ. ಈ ಮೂಲಕ ಮತ್ತೆ ಮತ್ತೆ ಉಪಚುನಾವಣೆಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಜನತೆಯ ಮೇಲೆ ಹೇರಿದ್ದು, ಇದೇ ರೆಡ್ಡಿ ಮತ್ತು ಕಂಪೆನಿ.
ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 11 -ಮದ್ದಿಗೆ ಒದಗಿದ ಸಿದ್ದೌಷದ…..
ವೆಂಕಟರಮಣ ಭಟ್ಟರನ್ನು ಮೂಡಬಿದರೆಗೆ ಕರೆತರಲು ಜನ ಕಳುಹಿಸಿದೆ. ಅವರು ಬಂದರು.
“ಏನಾಗಬೇಕಿತ್ತು, ಜ್ಞಾನದಾಸಕ್ತನೇ, ಆನು ಬಂದುದರಿಂದ ಆಗಲೇನಿಹುದು?” ಎಂದರು. ಪ್ರಾಸಬದ್ಧವಾಗಿ ಮಾತನಾಡುವುದು ಅವರಿಗೊಂದು ಶ್ರಮದ ಕಾರ್ಯವಲ್ಲ.
ಕಾಗದ ಲೇಖನಿಗಳನ್ನು ಸಿದ್ಧವಾಗಿರಿಸಿಕೊಂಡೇ, ಅವರಲ್ಲಿ ನನ್ನ ಅಗತ್ಯಗಳನ್ನು ವಿವರಿಸಿದೆ.
ಪ್ರಸಂಗ ರಚನೆ
“ಹೂಂ ಬರೆದುಕೊಳ್ಳಿ” ಎಂಬ ಅಪ್ಪಣೆ ಆಯಿತು.
ನಾನು ಬರೆದುಕೊಳ್ಳತೊಡಗಿದೆ.
ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೧೧ -ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ
– ರಮಾನಂದ ಐನಕೈ
ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ
ಇತ್ತೀಚೆಗೆ ನಾಡಿನ ಪ್ರಸಿದ್ಧ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತ ಈ ದೇಶ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ವೈದಿಕಶಾಹಿ ಆಡಳಿತ ಕಂಡಿದೆ. ಇವೆಲ್ಲವುಗಳಲ್ಲಿ ವೈದಿಕಶಾಹಿ ಆಡಳಿತ ಭಯಂಕರವಾಗಿತ್ತು ಎಂದಿದ್ದಾರೆ. ನನ್ನ ಇತಿಹಾಸ ಜ್ಞಾನದ ಪ್ರಕಾರ ಮುಸ್ಲಿಂ,ಕ್ರಿಶ್ಚಿಯನ್ ಹಾಗೂ ಕೆಲವು ಕಾಲ ಮೌರ್ಯರು, ಗುಪ್ತರು ಮುಂತಾದ ರಾಜರುಗಳು ಆಳಿದ್ದನ್ನು ಓದಿದ್ದೇನೆ. ಈ ವೈದಿಕಶಾಹಿಗಳು ಯಾರು? ಇವರು ಎಷ್ಟನೇ ಇಸವಿಯಿಂದ ಎಷ್ಟನೇ ಇಸವಿಯವರೆಗೆ ಆಳಿದರು? ಇವರ ಆಡಳಿತದ ಹಾಗೂ ಯುದ್ಧದ ವಿವರಗಳೇನು? ಈ ಕುರಿತು ಗ್ರಂಥ, ಶಾಸನ, ನಾಣ್ಯ ಇತ್ಯಾದಿಗಳು ಇವೆಯೇ ಎಂಬ ಉತ್ತರ ಬೇಕು. ಸುಮ್ಮ ಸುಮ್ಮನೇ ವೇದಿಕೆಯ ಮೇಲೆ ಮಾತನಾಡುವುದು ಈ ದೇಶದ ವಾಕ್ ಸ್ವಾತಂತ್ರ್ಯದ ಫಲ. ಪ್ರಗತಿಪರರೆನಿಸಿಕೊಂಡವರು ವೇದಿಕೆ ಹತ್ತಿದಾಕ್ಷಣ ಪುರೋಹಿತಶಾಹಿ, ವೈದಿಕಶಾಹಿ ಮುಂತಾದ ಪದಪುಂಜಗಳೇ ಹೊರಗೆ ಬರುತ್ತವೆ. ಇದಕ್ಕೆ ಆಧಾರ ಇದೆಯೇ? ಇವೆಲ್ಲ ಪರೋಕ್ಷವಾಗಿ ಬ್ರಾಹ್ಮಣರನ್ನು ಪ್ರಹಾರ ಮಾಡಲು ಉಪಯೋಗಿಸುವ ಪ್ರತಿಮೆಗಳು. ಇದರಿಂದ ಕಂಡಿತ ತೆ ಸಾಧ್ಯವಿಲ್ಲ.
ಸೆಕ್ಯುಲರ್ ಬುದ್ಧಿಜೀವಿಗಳ ದೃಷ್ಟಿಯಲ್ಲಿ ಭಾರತದಲ್ಲಿ ಬ್ರಾಹ್ಮಣರು ಖಳನಾಯಕರು. ಇವರನ್ನು ಪುರೋಹಿತಶಾಹಿಗಳು, ವೈದಿಕಶಾಹಿ ಗಳು ಎಂಬಿತ್ಯಾದಿಯಾಗಿ ಚಿತ್ರಿಸುತ್ತಿದ್ದಾರೆ. ಬ್ರಾಹ್ಮಣರು ಪ್ರಾಚೀನ ಭಾರತವನ್ನು ಆಳಿದವರು, ದಬ್ಬಾಳಿಕೆ ಮಾಡಿದವರು, ತರತಮದ ಸಾಮಾಜಿಕ ವ್ಯವಸ್ಥೆಯ ಶಿಲ್ಪಿಗಳು ಇವೇ ಮುಂತಾಗಿ ಬಾಯಿಗೆ ಬಂದಂತೆ ಹಲುಬುತ್ತಿದ್ದಾರೆ. ನಿದು ನಿಜವೇ? ಇವರಿಗೆ ಈ ತಿಳುವಳಿಕೆ ಏಕೆ ಬಂತು? ಎಲ್ಲಿಂದ ಬಂತು? ಬ್ರಾಹ್ಮಣರು ನಿಜವಾಗಿಯೂ ಪುರೋ ಹಿತಶಾಹಿಗಳೇ?
ಈ ಪರಿಯ ಬದುಕು………….
– ಅರೆಹೊಳೆ ಸದಾಶಿವರಾವ್
ಮನುಷ್ಯ ಜೀವನದ ಬಹು ಚೋದ್ಯಗಳಲ್ಲೊಂದು ಮನುಷ್ಯ ಸಂಬಂಧಗಳು. ಇದನ್ನು ನಾನು ಚೋದ್ಯವೆಂದು ಕರೆದದ್ದು ನಿಮಗೆ ಪ್ರಶ್ನಾರ್ಥಕವಾಗಿ ಕಾಣಬಹುದು. ಏಕೆಂದರೆ ಮನುಷ್ಯ ಸಂಬಂಧಗಳಿಗೆ ಅದರದ್ದೇ ಆದ ಹಲವು ವ್ಯಾಖ್ಯೆಗಳಿರುವಾಗ ಮತ್ತು ಅದಕ್ಕೆ ಸಾಕಷ್ಟು ಉತ್ತರ, ಪುರಾವೆ ಅನುಭವಗಳೂ ಇರುವಾಗ ಅದನ್ನು ಚೋದ್ಯವೆಂದು ಗುರುತಿಸುವ ಔಚಿತ್ಯದ ಬಗ್ಗೆ ಪ್ರಶ್ನೆಗಳೇಳುವುದು ಸಹಜ.
ಇವತ್ತಿನ ಸಂಬಂಧ ಕೇವಲ ವ್ಯಾವಹಾರಿಕ ನೆಲಗಟ್ಟಿನ ಮೇಲೆ ಅಸ್ತಿತ್ವ ಕಂಡುಕೊಳ್ಳುತ್ತಿರುವುದರ ದುರಂತವೆಂದರೆ, ಯಾವ ಸಂಬಂಧಗಳಿಗೂ ಬೆಲೆ ಇಲ್ಲದ ದುಸ್ಥಿತಿ ತಲುಪಿದೆ. ಬಾಂಧವ್ಯ ಎಂಬುದು ಸಂಘಜೀವಿ ಮನುಷ್ಯನ ಬದುಕಿಗೆ ಅನಿವಾರ್ಯ ಎಂದಿದ್ದ ಕಾಲದಿಂದ, ಇಂದು ಅದಕ್ಕೂ ಮೊದಲು ವ್ಯವಾಹಾರ, ಅದರಿಂದ ನಮಗೆ ಸಿಗಬಹುದಾದ ಲಾಭ-ನಷ್ಟದ ಮಾತುಕತೆ ಮುಖ್ಯವಾಗುವ ತನಕ ಬದಲಾಗಿದೆ.
ದುರಂತ ನೋಡಿ, ಇತ್ತೀಚೆಗೆ ಮಾದ್ಯಮಗಳು ಮತ್ತು ದೂರಸಂಪರ್ಕ ಕ್ರಾಂತಿ ಪ್ರಪಂಚದ ಗಾತ್ರವನ್ನು ಕುಗ್ಗಿಸಿದೆ. ಬೆರಳ ತುದಿಯಲ್ಲಿಯೇ ಜಗತ್ತಿನ ಯಾವುದೋ ಮೂಲೆಂದ ಮತ್ತೆಲ್ಲಿಗೋ ಸಂಪರ್ಕ ಸಾಧ್ಯವಾಗಿಸಿ, ಭೌತಿಕ ದೂರವನ್ನು ಕಿರಿದುಗೊಳಿಸಿ, ನಿಜಾರ್ಥದಲ್ಲಿ ಪ್ರಪಂಚವನ್ನು ಒಂದು ಪುಟ್ಟ ಅಂಗಣವಾಗಿಸಿದೆ. ಆದರೆ ಇದನ್ನು ಹಿಂಬಾಲಿಸಿ ಸಂಬಂಧಗಳು ಮಾತ್ರ ಮೊದಲಿಗಿಂತಲೂ ಜಟಿಲವಾಗಿವೆ, ದೂರವಾಗಿವೆ, ವೈಮನಸ್ಸುಗಳು ಅಗಾಧವಾಗಿವೆ. ದಾರಿಯ ದೂರವನ್ನು ಕಿರಿದುಗೊಳ್ಳಿಸಿದ ಹೊರತಾಗಿಯೂ, ಮಾನಸಿಕವಾಗಿ ನಾವೆಲ್ಲರೂ ದೂರ, ಬಹುದೂರ ಸಾಗುತ್ತಿದ್ದೇವೆ. ಆಚೀಚೆ ಮನೆಯವರೇ ನಮಗೆ ಅಪರೂಪ-ಅಪರಿಚಿತರಾಗುತ್ತಿದ್ದರೆವಾಗುತ್ತಿದ್ದರೆ, ಟಿವಿ, ಮೋಬೈಲ್, ಇಂಟರ್ನೆಟ್‌ಗಳೇ ಪರಮಾಪ್ತವಾಗುತ್ತಿವೆ. ದುರಂತವೆಂದರೆ ಈ ಎಲ್ಲದರಿಂದ ನಾವು ಮಾನವಿ ಯತೆಂದ ಅಮಾನವಿಯತೆಗೆ, ಸಾಮಾಜಿಕ ಸ್ವಾಸ್ಥದಿಂದ ಸ್ವಹಿತದೆಡೆಗೆ, ಸ್ವಾಸ್ಥ್ಯದಿಂದ ಅಸ್ವಾಸ್ಥ್ತ್ಯದೆಡೆಗೆ ದಾಪುಗಾಲಿನಲ್ಲಿ ಪಯಣಿಸುತ್ತಿದ್ದೇವೆ.
ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ
-ಡಾ ರಾಕೇಶ್ ಬಿ.ಎಚ್.
ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ?
ಗಾಂಧಿ ತಾತನ ಕಾಲದಿಂದಾನು ಭಾರತ ಹಳ್ಳಿಗಳಿರುವ ರಾಷ್ಟ್ರ ಅಂತಾನೆ ನಾವೆಲ್ಲಾ ಕಲಿತಿರೋದು ಹಾಗು ಅದು ಸತ್ಯ ಕೂಡ. ಯಾಕಂದ್ರೆ ತಲತಲಾಂತರದಿಂದಾನು ನಮ್ಮ ಪೂರ್ವಜರು ಹಳ್ಳಿಯಲ್ಲೇ ಇದ್ದುಕೊಂಡು ವ್ಯವಸಾಯವನ್ನೇ ಜೀವನ ಮಾಡಿಕೊಂಡವರು. ಹಾಗಾಗಿ ಉತ್ತಿ ಬಿತ್ತು ಬೆಳೆ ತೆಗೆಯೋರು ಮತ್ತು ಹೆಚ್ಚಾಗಿ ಅದೇ ಅವರ ದೈನಂದಿನ ಊಟ ಕೂಡ ಆಗಿರುತ್ತಿತ್ತು. ಸಹಜವಾಗಿ 90 ಕ್ಕೂ ಹೆಚ್ಚು ಜನ ಸಸ್ಯಹಾರಿಗಳಾಗಿದ್ದರು.
ಬೌಗೋಳಿಕವಾಗಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು, ವ್ಯವಸಾಯವೇ ಅತಿ ಪ್ರಮುಖ ಆದಾಯವಾಗಿದ್ದು ಹಾಗು ಅಷ್ಟೊಂದು ಜನ ಸಸ್ಯಹಾರಿಗಳಿದ್ದು ತೀರ ಹಲ್ಲಿ ತಿನ್ನೋ ಮಟ್ಟಕ್ಕೆ ನಾವು ಇಳಿತೀವ? ವಿಪರ್ಯಸವಾದ್ರು ಇದು ಸತ್ಯ ಕಣ್ರೀ. ಜಾಸ್ತಿ ತಲೆ ಉಪಯೋಗಿಸೋದೆನು ಬೇಡ, ಯಾಕೆಂದ್ರೆ ಉತ್ತರ ನಮ್ಮ ಕಣ್ಣು ಮುಂದೆ ಬಿದ್ದು ಹೊರಳಾಡ್ತಾ ಇದೆ. ನೀವೇ ಯೋಚನೆ ಮಾಡಿ, ಸಸ್ಯಹಾರಿಗಳಾಗೆ ಉಳಿಬೇಕೂಂದ್ರೆ ಸಸ್ಯಗಳನ್ನ ಬೆಳಿಬೇಕು, ಹೌದ? ಸಸ್ಯಗಳನ್ನ ಬೆಳೆಬೇಕು ಅಂದ್ರೆ ಭೂಮಿ ಬೇಕು, ಹೌದ? ಮತ್ತಷ್ಟು ಓದು 
ಮಂಗಳಪ್ರಯಾಣಕ್ಕೆ ಸಿದ್ಧತೆ..
-ವಿಷ್ಣುಪ್ರಿಯ
ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ.
ಅದು ಒಂದು ಸಂಪೂರ್ಣ ಮುಚ್ಚಲ್ಪಟ್ಟ ಕೋಣೆ; ಗಾಳಿ ನುಸುಳುವುದಕ್ಕೆ ಒಂಚೂರೂ ಜಾಗವಿಲ್ಲ; ನೀರಂತೂ ಪ್ರವೇಶಿಸುವುದಕ್ಕೇ ಆಗದು; ಒಳಗಣ ಶಾಖಕ್ಕೆ ಸಾಮಾನ್ಯ ಜೀವ ಬೆಂದು ಹೋಗುವಂಥ ಪರಿಸ್ಥಿತಿ; ಆದರೂ ಆರು ಜನ ಅದರೊಳಗಿದ್ದರು; ಒಂದೆರಡು ದಿನವಲ್ಲ; ಬರೋಬ್ಬರಿ 520 ದಿನಗಳು! ಕೃತಕ ಆಮ್ಲಜನಕದ ಉಸಿರಾಟ, ಸಂಸ್ಕರಿತ ಆಹಾರ; ಇವಿಷ್ಟನ್ನೇ ಸೇವಿಸಿಕೊಂಡು ಅಷ್ಟೂ ದಿನ ಈ ಕೋಣೆಯೊಳಗಿದ್ದರು; ಕೆಲವು ದಿನಗಳ ಹಿಂದಷ್ಟೇ ಈ ಆರೂ ಜನರು ಈ ಕೋಣೆಯಿಂದ ಹೊರಬಂದಾಗ ಅವರು ಒಂದಷ್ಟು ಸೊರಗಿದ್ದಾರೆಯೋ ಎಂದೆನಿಸುತ್ತಿತ್ತು; ಆದರೂ ಸಹ ಅವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು; ಹೊಸದೊಂದು ಸಾಹಸಕ್ಕೆ ಅಣಿಯಾದ, ಯುದ್ಧವನ್ನು ಜಯಿಸಬಲ್ಲೆ ಎಂಬ ದೃಢವಿಶ್ವಾಸ ಹೊಂದಿರುವ ರಣಕಲಿಯ ಕಳೆ ಅವರಲ್ಲಿತ್ತು.
ಅವರು ಬಾಹ್ಯಾಕಾಶ ವಿಜ್ಞಾನಿಗಳು. 2030ರಲ್ಲಿ ಮಂಗಳಗ್ರಹದ ಮೇಲೆ ಪಾದಾರ್ಪಣೆ ಮಾಡಲು ಸಿದ್ಧವಾಗುತ್ತಿರುವ ಅವರು ಇದ್ದದ್ದು, ಮಂಗಳನಲ್ಲಿ ಇರಬಹುದಾದಂಥ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲ್ಪಟ್ಟಂಥ ಕೋಣೆಯೊಳಗೆ. ಮೂವರು ರಷ್ಯನ್ನರು, ಒಬ್ಬ ಫ್ರೆಂಚ್, ಒಬ್ಬ ಇಟಾಲಿಯನ್-ಕೊಲಂಬಿಯನ್ ಮತ್ತು ಒಬ್ಬ ಚೀನೀ ಬಾಹ್ಯಾಕಾಶ ವಿಜ್ಞಾನಿಗಳನ್ನು ಒಳಗೊಂಡಂಥ ತಂಡ ಮಾಸ್ಕೋದಲ್ಲಿನ ಈ ಮಂಗಳನ ತದ್ರೂಪಿನಲ್ಲಿ 520 ದಿನಗಳ ಕಾಲ ಇದ್ದು ಬಂದಿದ್ದಾರೆ. ಇಲ್ಲಿ ಮಂಗಳನಲ್ಲಿರಬಹುದಾದಂಥ ಎಲ್ಲ ರೀತಿಯ ವಾತಾವರಣವೂ ಇದೆ, ಆದರೆ ಗುರುತ್ವಾಕರ್ಷಣಶಕ್ತಿಯೊಂದನ್ನು ಹೊರತುಪಡಿಸಿ! ಹೀಗಾಗಿ ತೂಕವಿಲ್ಲದೇ ಇರುವ ಅನುಭವ ಮಾತ್ರ ಸಿಕ್ಕಿಲ್ಲ. ಮತ್ತಷ್ಟು ಓದು 
ಬೈಲೂರ ಬಸ್ಸು ಹತ್ತಿ
ಪ್ರಶಸ್ತಿ.ಪಿ, ಸಾಗರ
ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ “ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ” ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ? ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ 🙂
ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು 🙂 ಮತ್ತಷ್ಟು ಓದು 




