ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 17, 2011

45

ಸಂಸ್ಕೃತಿ ಸಂಕಥನ – ೧೧ -ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ

‍ನಿಲುಮೆ ಮೂಲಕ

– ರಮಾನಂದ ಐನಕೈ

ಬ್ರಾಹ್ಮಣರಿಗೆ ಖಳನಾಯಕರ ಪಟ್ಟ ಕಟ್ಟಿದ ಇತಿಹಾಸ

ಇತ್ತೀಚೆಗೆ ನಾಡಿನ ಪ್ರಸಿದ್ಧ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಮಾತನಾಡುತ್ತ ಈ ದೇಶ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ವೈದಿಕಶಾಹಿ ಆಡಳಿತ ಕಂಡಿದೆ. ಇವೆಲ್ಲವುಗಳಲ್ಲಿ ವೈದಿಕಶಾಹಿ ಆಡಳಿತ ಭಯಂಕರವಾಗಿತ್ತು ಎಂದಿದ್ದಾರೆ.  ನನ್ನ ಇತಿಹಾಸ ಜ್ಞಾನದ ಪ್ರಕಾರ ಮುಸ್ಲಿಂ,ಕ್ರಿಶ್ಚಿಯನ್ ಹಾಗೂ ಕೆಲವು ಕಾಲ ಮೌರ್ಯರು, ಗುಪ್ತರು ಮುಂತಾದ ರಾಜರುಗಳು ಆಳಿದ್ದನ್ನು ಓದಿದ್ದೇನೆ. ಈ ವೈದಿಕಶಾಹಿಗಳು ಯಾರು? ಇವರು ಎಷ್ಟನೇ ಇಸವಿಯಿಂದ ಎಷ್ಟನೇ ಇಸವಿಯವರೆಗೆ ಆಳಿದರು? ಇವರ ಆಡಳಿತದ ಹಾಗೂ ಯುದ್ಧದ ವಿವರಗಳೇನು? ಈ ಕುರಿತು ಗ್ರಂಥ, ಶಾಸನ, ನಾಣ್ಯ ಇತ್ಯಾದಿಗಳು ಇವೆಯೇ ಎಂಬ ಉತ್ತರ ಬೇಕು. ಸುಮ್ಮ ಸುಮ್ಮನೇ ವೇದಿಕೆಯ ಮೇಲೆ ಮಾತನಾಡುವುದು ಈ ದೇಶದ ವಾಕ್ ಸ್ವಾತಂತ್ರ್ಯದ ಫಲ. ಪ್ರಗತಿಪರರೆನಿಸಿಕೊಂಡವರು ವೇದಿಕೆ ಹತ್ತಿದಾಕ್ಷಣ ಪುರೋಹಿತಶಾಹಿ, ವೈದಿಕಶಾಹಿ ಮುಂತಾದ ಪದಪುಂಜಗಳೇ ಹೊರಗೆ ಬರುತ್ತವೆ. ಇದಕ್ಕೆ ಆಧಾರ ಇದೆಯೇ? ಇವೆಲ್ಲ ಪರೋಕ್ಷವಾಗಿ ಬ್ರಾಹ್ಮಣರನ್ನು ಪ್ರಹಾರ ಮಾಡಲು ಉಪಯೋಗಿಸುವ ಪ್ರತಿಮೆಗಳು. ಇದರಿಂದ ಕಂಡಿತ ತೆ ಸಾಧ್ಯವಿಲ್ಲ.

ಸೆಕ್ಯುಲರ್ ಬುದ್ಧಿಜೀವಿಗಳ ದೃಷ್ಟಿಯಲ್ಲಿ ಭಾರತದಲ್ಲಿ ಬ್ರಾಹ್ಮಣರು ಖಳನಾಯಕರು. ಇವರನ್ನು ಪುರೋಹಿತಶಾಹಿಗಳು, ವೈದಿಕಶಾಹಿ ಗಳು ಎಂಬಿತ್ಯಾದಿಯಾಗಿ ಚಿತ್ರಿಸುತ್ತಿದ್ದಾರೆ. ಬ್ರಾಹ್ಮಣರು ಪ್ರಾಚೀನ ಭಾರತವನ್ನು ಆಳಿದವರು, ದಬ್ಬಾಳಿಕೆ ಮಾಡಿದವರು, ತರತಮದ ಸಾಮಾಜಿಕ ವ್ಯವಸ್ಥೆಯ ಶಿಲ್ಪಿಗಳು ಇವೇ ಮುಂತಾಗಿ ಬಾಯಿಗೆ ಬಂದಂತೆ ಹಲುಬುತ್ತಿದ್ದಾರೆ. ನಿದು ನಿಜವೇ? ಇವರಿಗೆ ಈ ತಿಳುವಳಿಕೆ ಏಕೆ ಬಂತು? ಎಲ್ಲಿಂದ ಬಂತು? ಬ್ರಾಹ್ಮಣರು ನಿಜವಾಗಿಯೂ ಪುರೋ ಹಿತಶಾಹಿಗಳೇ?

ಬೆಲ್ಜಿಯಂ ಗೆಂಟ್ ವಿಶ್ವವಿದ್ಯಾಲಯದ ಪ್ರೊ. ಬಾಲಗಂಗಾಧರರು ಭಾರತೀಯ ಸಂಸ್ಕೃತಿಯನ್ನು ತರ್ಕಬದ್ಧವಾಗಿ, ಎಳೆಎಳೆಯಾಗಿ ವಿಶ್ಲೇಷಿಸುವ ತನಕ ನಾವೂ ಕೂಡ ಅಸಹಾಯಕರಾಗಿದ್ದೆವು. ಬ್ರಾಹ್ಮಣರ ಕುರಿತಾದ ಈ ಧೋರಣೆ ತಪ್ಪು ಎಂದು ಮನಸ್ಸಿಗೆ ಅನಿಸುತ್ತಿತ್ತು. ಈಗ ಬ್ರಾಹ್ಮಣರ ಕುರಿತು ಈ ಅಭಿಪ್ರಾಯ ರೂಪಿತವಾಗಲು ಕಾರಣವಾದ ಸಂಗತಿ ಬೆಳಕಿಗೆ ಬರುತ್ತಿದೆ.

ಎಲ್ಲರಂತೆ ಬ್ರಾಹ್ಮಣರೂ ಕೂಡ ಈ ದೇಶದಲ್ಲಿ ಸಾದಾ ಸೀದಾ ಬದುಕುತ್ತಿದ್ದ ಜನ. ಅವರಲ್ಲಿ ಕೆಲವು ಜನರು ಪೂಜೆ-ಪುನಸ್ಕಾರಗಳನ್ನು ಮಾಡಿಕೊಂಡು ಬ್ರಾಹ್ಮಣ ಸಮುದಾಯಕ್ಕೆ ಪೂಜಾರಿಗಳಾಗಿದ್ದರು. ಇವರು ಸಂಸ್ಕೃತ ಬಲ್ಲವರಾಗಿದ್ದು ಭಾರತೀಯ ಪುರಾಣಗಳ ಬಗ್ಗೆ ತಿಳುವಳಿಕೆ ಹೊಂದಿದವರಾಗಿದ್ದರು. ಭಾರತಕ್ಕೆ ಬ್ರಾಹ್ಮಣರೊಂದೇ ಪೂಜಾರಿಗಳಾಗಿರಲಿಲ್ಲ. ಇತರೆ ಹಲವು ಜಾತಿಗಳಲ್ಲೂ ಕೂಡ ಅವರವರದ್ದೇ ಆದ ಪೂಜಾರಿಗಳಿದ್ದರು. ದೇವರ ಪೂಜೆಗೆ ಹೊರತಾಗಿ ಇತರೆ ಧಾರ್ಮಿಕ ಕ್ರಿಯಾವಿಧಿಗಳನ್ನು ನಡೆಸುವವರಿಗೆ ಪೂರೋಹಿತರು ಎಂದು ಕರೆಯುತ್ತಿದ್ದರೇ ವಿನಾ ಉಳಿದ ಸಮಯದಲ್ಲಿ ಸಾಮಾನ್ಯ ನಾಗರಿಕರಾಗೇ ಬದುಕಿದವರು. ಇವರಿಗೆ ಯಾವುದೇ ವಿಶೇಷ ಅಧಿಕಾರವಾಗಲೀ, ಆಡಳಿತ ವ್ಯವಸ್ಥೆಯಾಗಲಿ ಇರಲಿಲ್ಲ. ಹಿಂದೆ ಈ ದೇಶವನ್ನು ಆಳಿದ ರಾಜರುಗಳಲ್ಲಿ ಯಾರಾದರೂ ಬ್ರಾಹ್ಮಣ ಜಾತಿಯರಿದ್ದಿರಬಹುದೇ ವಿನಾ ಬ್ರಾಹ್ಮಣರೇ ಆಳಿದರು ಎಂಬ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಈ ದೇಶದಲ್ಲಿ ಜಾತಿ ಪದ್ಧತಿ ಇದ್ದಿದ್ದಕ್ಕೂ ಬ್ರಾಹ್ಮಣರಿಗೂ ಯಾವ ಸಂಬಂಧವೂ ಇಲ್ಲ. ಈ ಜಾತಿ ಪದ್ಧತಿಯನ್ನು ‘ಜಾತಿವ್ಯವಸ್ಥೆ’ ಎಂದು ಕರೆದು ಅದನ್ನು ಬ್ರಾಹ್ಮಣರೇ ಹುಟ್ಟುಹಾಕಿದರು ಎಂಬ ತರ್ಕಕ್ಕೂ ಯಾವ ಐತಿಹಾಸಿಕ ಪುರಾವೆಗಳಿಲ್ಲ. ಊಹಾಪೋಹ ಗಳಿಂದ, ಪೂರ್ವಾಗ್ರಹಗಳಿಂದ, ತಪ್ಪು ತಿಳುವಳಿಕೆಯಿಂದ ಹುಟ್ಟಿದ ಅಭಿಪ್ರಾಯ ಇದು. ಈ ಅಭಿ ಪ್ರಾಯದ ಪುನರ್ ಪರಿಶೀಲನೆಗೆ ಈಗಲೂ ಅವಕಾಶ ಇದೆ.

ಬ್ರಾಹ್ಮಣರಿಗೆ ಪುರೋಹಿತಶಾಹಿ ಎಂಬ ಪಟ್ಟಕಟ್ಟಿದವರು ಐರೋಪ್ಯ ಪ್ರೊಟೆಸ್ಟಾಂಟ್ ಸುಧಾರಣಾ ವಾದಿಗಳು. ಅವರ ಜೊತೆಗೆ ಪ್ರೊಟೆಸ್ಟಾಂಟ್ ಪ್ರಭಾವಿತ ಸೆಕ್ಯುಲರ್ ಚಿಂತಕರೂ ಸೇರಿಕೊಂಡರು. ಕೆಥೋಲಿಕ್ ಪ್ರೀಸ್ಟ್ಗಳು ಸಮಾಜವನ್ನು ಶ್ರೇಣೀಕರಣ ಮಾಡಿದ್ದಾರೆಂಬ ಪೂರ್ವಾಗ್ರಹ ಹೊಂದಿದ ಪ್ರೊಟೆಸ್ಟಾಂಟರಿಗೆ ಭಾರತವನ್ನು ಇಲ್ಲಿನ ಬಹುಸಂಸ್ಕೃತಿಗಳ ಜೊತೆಗೆ ಗ್ರಹಿಸಲು ಸಾಧ್ಯವಾಗಲಿಲ್ಲ. ಜೊತೆಗೆ ಪ್ರೊಟೆಸ್ಟಾಂಟರು ಕ್ರಿಶ್ಚಿಯಾನಿಟಿಯ ಕಣ್ಣಿಂದ ಭಾರತವನ್ನು ನೋಡತೊಡಗಿದರು. ಆಗ ಈ ಪರದೇಶಿ ಕಣ್ಣುಗಳಿಗೆ ಭಾರತೀಯ ಸಮಾಜವು ಜಾತಿಯ ಶ್ರೇಣೀಕರಣದಿಂದ ನಿಯಂತ್ರಿತವಾದಂತೆ ಕಂಡಿತು. ಹಾಗೂ ಬ್ರಾಹ್ಮಣರು ಅದರ ತುತ್ತ ತುದಿಯಲ್ಲಿದ್ದರು. ಇಲ್ಲಿ ಪ್ರೀಸ್ಟ್ಗಳನ್ನು ಹುಡುಕಿದರು. ಸಲೀಸಾಗಿ ಬ್ರಾಹ್ಮಣ ಪೂಜಾರಿಗಳು ಸಿಕ್ಕರು. ಪ್ರೀಸ್ಟ್ ಹುಡ್ಗೆ ಪರ್ಯಾಯವಾಗಿ ಬ್ರಾಹ್ಮಣ ಪೂಜಾರಿ ಗಳಿಗೆ ಪುರೋಹಿತಶಾಹಿಗಳು ಎಂದು ನಾಮಕರಣ ಮಾಡಿದರು. ನಂತರ ಕ್ಯಾಥೋಲಿಕ್ ಪ್ರೀಸ್ಟ್ಗಳು ಅನೈತಿಕರು ಅಥವಾ ಕನ್ನಿಂಗ್ ಎಂಬುದಕ್ಕೆ ಯಾವ ಯಾವ ಕಾರಣಗಳನ್ನು  ನೀಡಿದ್ದರೋ ಅವೆಲ್ಲವನ್ನೂ ಬ್ರಾಹ್ಮಣರಿಗೆ ಆರೋಪಿದರು. ಭಾರತದಲ್ಲಿದ್ದದ್ದು ಜಾತಿ ವ್ಯವಸ್ಥೆ ಇದಕ್ಕೆ  ಬ್ರಾಹ್ಮಣರೇ ಕಾರಣರೆಂದು ಜರಿಯುತ್ತ ಉಳಿದ ಜಾತಿಯವರ ಮನಸ್ಸು ಗೆಲ್ಲಲು ಪ್ರಯತ್ನಿಸಿದರು.

ಇಲ್ಲಿ ಇನ್ನೂ ಸ್ವಾರಸ್ಯಕರವಾದ ಅಂಶವೊಂದಿದೆ. ಬ್ರಾಹ್ಮಣರಲ್ಲಿ ಕೆಲವರು ಇತರರಿಗೆ ಹೋಲಿಸಿದರೆ ಬುದ್ಧಿವಂತರು, ಗಣಿತಬಲ್ಲವರು ಆಗಿದ್ದರು. ಐರೋಪ್ಯರ ಜೊತೆಗೆ ಸಲೀಸಾಗಿ ಸಂವಹನ ಮಾಡುವ ಸಾಮಥ್ರ್ಯ ಹೊಂದಿದವರಾಗಿದ್ದರು. ಇಡೀ ಭಾರತವನ್ನು ಕ್ರೈಸ್ತೀಕರಣ ಮಾಡಲು ಈ ಬ್ರಾಹ್ಮಣ ಸಮುದಾಯವೇ ಸಾಕಾಗಿತ್ತು. ಆದರೆ ಐರೋಪ್ಯರ ದುರ್ದೈವಕ್ಕೆ ಕ್ರೈಸ್ತರ ಸಂದೇಶ ಜನರಿಗೆ ತಲುಪಿಸುವಲ್ಲಿ ಬ್ರಾಹ್ಮಣರೇ ತಡೆಗೋಡೆಯಾದರು. ಗಾಡ್ನ ಸಂದೇಶವನ್ನು ಹೊತ್ತ ಪಾಶ್ಚಾತ್ಯ ದೂತರು ಬ್ರಾಹ್ಮಣರನ್ನು ಕ್ರಿಶ್ಚಿಯಾನಿಟಿಗೆ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಬ್ರಾಹ್ಮಣರು ಕ್ರಿಶ್ಚಿಯಾನಿಟಿ ಸುಳ್ಳು ಎಂದು ಭಾವಿಸಲಿಲ್ಲ. ಆದರೆ ನಮ್ಮ ಪದ್ಧತಿ ನಮಗೆ ದೇವರು ನೀಡಿದ್ದು, ಅದರೊಳಗೆ ಅಪರಿಚಿತರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಜಾಣತನದಿಂದ ತಮ್ಮತನ ಉಳಿಸಿ ಕೊಂಡರು.

ಹೀಗೆ ಬ್ರಾಹ್ಮಣರನ್ನೊಳಗೊಂಡು ಭಾರತೀಯ ಉಚ್ಚವರ್ಗದವರನ್ನು ಕ್ರೈಸ್ತರನ್ನಾಗಿ ಬದಲಾಯಿಸಲು ಸಾಧ್ಯವಾಗದೆ ಕೇವಲ ಕೆಳಜಾತಿಯ ಗುಂಪುಗಳನ್ನು ಸೇರಿಸಿಕೊಳ್ಳುವುದರಲ್ಲೇ  ಮಿಶನರಿಗಳು ತೃಪ್ತಿಪಟ್ಟು ಕೊಳ್ಳಬೇಕಾಯಿತು. ಪರಿಣಾಮವಾಗಿ ಕ್ರಿಶ್ಚಿಯಾನಿಟಿಯು ಕೆಳಜಾತಿಯ ಸಮಾಜಗಳ ಜೊತೆಗೆ ಗುರುತಿಸಲ್ಪಟ್ಟು ಸಾಮಾಜಿಕವಾಗಿ ಮೂಲೆಗುಂಪಾಗತೊಡಗಿತು. ನೀವೇ ಊಹಿಸಿ! ಸಾವಿರಾರು ಮೈಲು ದೂರದಿಂದ ಕ್ರೈಸ್ತರ ಸಂದೇಶ ಹೊತ್ತು ಬಂದ ದೂತರಿಗೆ ಇದೇನು ಕಡಿಮೆ ಆಘಾತವೇ? ಈ ಹಿನ್ನೆಲೆಯಲ್ಲಿ ಬ್ರಾಹ್ಮಣರ ಕುರಿತಾಗಿ ಇಲ್ಲಸಲ್ಲದ ತಿಳುವಳಿಕೆಗಳು ಸೃಷ್ಟಿಯಾಗತೊಡಗಿದವು. ಭಾರತೀಯ ಸಮಾಜ ಬ್ರಾಹ್ಮಣರಿಂದ ಸೃಷ್ಟಿಯಾದ ಶ್ರೇಣೀಕರಣ ಜಾತಿ ವ್ಯವಸ್ಥೆಯೊಂದಿಗೆ ಅಸಮಾನತೆಯಲ್ಲಿ ಕೊಳೆಯುತ್ತಿದೆ ಎಂದು ಇತಿಹಾಸ ಸೃಷ್ಟಿಸಿದರು. ಅದೇ ಮುಂದೆ ಭಾರತೀಯ ಸಮಾಜ ವಿಜ್ಞಾನಕ್ಕೆ ಆಧಾರವಾಯಿತು. ನಾನೂರು ವರ್ಷ ಅದನ್ನೇ ಪುನಃ ಪುನಃ ಓದುತ್ತ ಬಂದ ಭಾರತೀಯ ಬುದ್ಧಿಜೀವಿ ವರ್ಗ ಈಗಿರುವಂತೆ ಇರದೇ ಬೇರೆ ಹೇಗಿರಲು ಸಾಧ್ಯ? (ಹೆಚ್ಚಿನ ಮಾಹಿತಿಗಾಗಿ ಸ್ಮೃತಿ-ವಿಸ್ಮೃತಿ- ಭಾರ ತೀಯ ಸಂಸ್ಕೃತಿ ಗ್ರಂಥದ 144ನೇ ಪುಟದಿಂದ ನೋಡಬಹುದು)

ಹಾಗಂತ ಮೊದಮೊದಲು ಭಾರತೀಯ ಪೂಜಾರಿಗಳ ಜೊತೆಗೆ ಕೆಥೋಲಿಕ್ ಪ್ರೀಸ್ಟ್ಗಳ ಸಂಬಂಧ ಚೆನ್ನಾಗಿಯೇ ಇತ್ತು. ಮಧ್ಯಯುಗದಲ್ಲಿ ಪಾಶ್ಚಾತ್ಯರಿಗೆ ಬ್ರಾಹ್ಮಣರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಭಾರತೀಯ ಪೂಜಾರಿಗಳು ಆದರ್ಶ ಪುರೋಹಿತರು ಎಂದು ಹೇಳಿದ್ದರ ಬಗ್ಗೆಯೂ ಉಲ್ಲೇಖವಿದೆ. ಯಾವಾಗ ಪ್ರೊಟೆಸ್ಟಾಂಟರು ಭಾರತಕ್ಕೆ ಬಂದರೋ ಆಗ ಅವರ ಗ್ರಹಿಕೆ ಬೇರೆ ಯಾಯಿತು. ಇಲ್ಲಿ ಬಂದಾಗ ಅವರಿಗೆ ಮುಖ್ಯವಾಗಿ ಕಂಡಿದ್ದು ಐಡೋಲೇಟ್ರಿ. ಅಂದರೆ ಮೂರ್ತಿಪೂಜೆ. ಗಾಡ್ ಐಡೋಲೇಟ್ರಿಯನ್ನು ನಿಷೇಧಿಸಿದ್ದಾನೆ. ಈ ಕಾರಣಕ್ಕಾಗಿ ಇಲ್ಲಿನ ಸಮಾಜ ವ್ಯವಸ್ಥೆಯೂ ಅನೈತಿಕವಾಗಿದೆಯೆಂಬ ತೀರ್ಮಾನಕ್ಕೆ ಬಂದರು. ಅಷ್ಟೇ ಅಲ್ಲ ಹಿಂದೂಯಿಸಂ ಅವನತಿ ಯತ್ತ ಸಾಗಿದೆ ಅಂದುಕೊಂಡರು. ಕೆಥೋಲಿಕ್ ಪಂಥ ಹಾಳಾಗಲಿಕ್ಕೆ ಪ್ರೀಸ್ಟ್ಹುಡ್ ಕಾರಣವಾದಂತೆ ಹಿಂದೂಯಿಸಂ ಬ್ರಾಹ್ಮಣ ಪುರೋಹಿತರಿಂದ ಹಾಳಾಗುತ್ತಿದೆ ಎಂದು ಕಥೆ ಬರೆದರು. ಪ್ರೊಟೆಸ್ಟಾಂಟರ ಮುಖ್ಯವಾದ ವಿರೋಧ ರಿಲಿಜನ್ನಿನ ಸ್ವಿರಿಟಿಗೆ ಸಂಬಂಧಪಟ್ಟಿದ್ದಾಗಿತ್ತು. ಆದರೆ ಅವರ ಜೊತೆ ಸೇರಿಕೊಂಡ ಯುರೋಪಿನ ಸೆಕ್ಯುಲರ್ ಚಿಂತಕರು ಇದನ್ನೇ ವಿಸ್ತೃತ ಮಾಡಿ ಇಡೀ ಭಾರತೀಯ ಸಮಾಜ ವ್ಯವಸ್ಥೆಯೇ ಬ್ರಾಹ್ಮಣರೆಂಬವರ ಕಪಿಮುಷ್ಠಿಯಲ್ಲಿದೆ. ಅವರೇ ಜಾತಿ ಪದ್ಧತಿ ಪೋಷಿಸಿದವರು ಎಂದರಲ್ಲದೇ ಶೋಷಣೆ ಎಂಬ ಪದವನ್ನು ಜಾರಿಗೆ ತಂದರು.

ಪ್ರೊಟೆಸ್ಟಾಂಟ್ ಪ್ರಭಾವಿತ ಸೆಕ್ಯುಲರ್ ಚಿಂತಕರೂ ಬೇರೆ ರೀತಿ ಯೋಚಿಸಲು ಸಾಧ್ಯವಿಲ್ಲ ವಾಗಿತ್ತು. ಪ್ರತಿಯೊಂದು ಸಂಸ್ಕೃತಿಯಲ್ಲೂ ರಿಲಿಜನ್ ಇರುತ್ತದೆ ಎಂದು ನಂಬಿದವರು ಅವರು. ಪ್ರತಿಯೊಂದು ರಿಲಿಜನ್ ಅವನತಿ ಹೊಂದಿದಾಗಲೂ ಅದನ್ನು ಸರಿಪಡಿಸಲು ಯುಗಪುರುಷರು ಹುಟ್ಟುತ್ತಾರೆ. ಮಾರ್ಟಿನ್ ಲೂಥರ್ ತರಹ ಭಾರತದ ಬುದ್ಧ, ಬಸವ ಎಲ್ಲರೂ ಹಿಂದೂಯಿಸಂ ರಿಪೇರಿ ಮಾಡಲು ಹುಟ್ಟಿದ ಮಹಾತ್ಮರು ಹಾಗೂ ಇವರೆಲ್ಲ ಬ್ರಾಹ್ಮಣರು ಮತ್ತು ಅವರು ನಿರ್ಮಿಸಿದ ವ್ಯವಸ್ಥೆಯ ವಿರುದ್ಧ ಹೋರಾಡಿದರು ಎಂಬುದಾಗಿ ವರ್ಣಿಸಿದರು.

ಕೊನೆಗೂ ಹೀದನ್ನರ ಪೂಜಾರಿ ಕಸುಬಿನ ಕುರಿತು ಇವರಿಗಿದ್ದ ದ್ವೇಷ, ಬ್ರಾಹ್ಮಣರನ್ನು ಕ್ರಿಶ್ಚಿ ಯಾನಿಟಿಗೆ ಪರಿವರ್ತಿಸಲಾಗದ ಹತಾಶೆ, ಬ್ರಾಹ್ಮಣರನ್ನು ಪ್ರೀಸ್ಟ್ಗಳೆಂದು ಗುರುತಿಸುವಿಕೆ, ಅವರ ಆಚರಣೆಯ ಹಿಂದಿದ್ದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಅಸಾಮಥ್ರ್ಯ ಮುಂತಾದ ಅನೇಕ ಕಾರಣಗಳು ಭಾರತೀಯ ಬ್ರಾಹ್ಮಣರಿಗೆ ಖಳನಾಯಕ ಪಟ್ಟವನ್ನು ಖಾಯಂಗೊಳಿಸಿತು.

ಇದೇ ಈಗ ನಮ್ಮ ಸಮಾಜವಿಜ್ಞಾನ! ವರ್ತ ಮಾನದ ಭಾರತದ ಬುದ್ಧೀವಿಗಳಿಗೆ ಬ್ರಾಹ್ಮಣರೇ ನಿತ್ಯ ಆಹಾರ. ದಯಾಮಯನಾದ ಭಗವಂತನು ಇವರ ಬುದ್ಧಿಭ್ರಮಣೆಯನ್ನು ನಿವಾರಿಸಲಿ.

45 ಟಿಪ್ಪಣಿಗಳು Post a comment
  1. ನವೆಂ 17 2011

    ಚಿಂತನೆ ಮಾಡಲು ಆಹಾರ ಕೊಟ್ತಿರುವಿರಿ. ಧನ್ಯವಾದಗಳು. ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವ ನನ್ನ ಅನಿಸಿಕೆ ತಿಳಿಸಿಬಿಡುವೆ. ಇತಿಹಾಸದ ಬಗ್ಗೆ ನನ್ನ ತಿಳುವಳಿಕೆ ಕಡಿಮೆ. ಆದರೆ ನನ್ನ ಚಿಕ್ಕ ವಯಸ್ಸಿನಲ್ಲಿ ನಾನು ಕಂಡಿದ್ದು ಆನಂತರದ ದಿನಗಳಲ್ಲಿ ಆಗಿರುವ ಸುಧಾರಣೆ ಬಗ್ಗೆ ಎರಡು ಮಾತು. ನನ್ನ ಚಿಕ್ಕ ವಯಸ್ಸಿನಲ್ಲಿ ಹರಿಜನ ಕುಟುಂಬಕ್ಕೆ ಸೇರಿದ ಜನರು ಬ್ರಾಹ್ಮಣರ ಮತ್ತು ವಕ್ಕಲಿಗ ಜಾತಿಯ ಜಮೀನಿನಲ್ಲಿ ಕೂಲಿ ಮಾಡುತ್ತಿದುದು ಸಾಮಾನ್ಯ. ಆದರೆ ಬ್ರಾಹ್ಮಣ ಕೇರಿಗೆ ಹರಿಜನರು ಕಾಲಿಡುತ್ತಿರಲಿಲ್ಲ. ಬ್ರಾಹ್ಮಣರೆದುರು ನಿಲ್ಲುತ್ತಲೇ ಇರಲಿಲ್ಲ. ಹರಿಜನರಿಗೆ ಅದು ಒಗ್ಗಿ ಹೋಗಿತ್ತು. ಬ್ರಾಹ್ಮಣರಿಗೂ ಏನೂ ಅನ್ನಿಸುತ್ತಲೇ ಇರಲಿಲ್ಲ. ನನಗೆ ಹಲವು ಬಾರಿ ಏನೋ ಮುಜುಗರವಾಗಿದೆ. ಏಕೆ ಹೀಗೆ? ಎಂದು ಚಿಂತಿಸಿದ್ದುಂಟು. ಆದರೆ ಕಾಲದ ಗತಿಯಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ಈ ದೃಶ್ಯ ಬಹುಪಾಲು ಬದಲಾಗಿದೆ. ಈಗ ಎಲ್ಲಾ ಜಾತಿಗಳಲ್ಲೂ ಡಾಕ್ತರು, ಇಂಜಿನಿಯರುಗಳು ಹೊರಹೊಮ್ಮಿದ್ದಾರೆ. ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಈಗ ಬಹುಪಾಲು ಸುಧಾರಣೆ ಯಾಗಿದೆ. ನಾಲ್ಕೈದು ದಶಕಗಳ ಹಿಂದಿನ ಜೀವನ ನೆನಪು ಮಾಡಿಕೊಂಡಾಗ ಎಲ್ಲೋ ಏನೋ ತಪ್ಪಾಗಿದೆ! ಎಂದೇ ನನ್ನ ಅನಿಸಿಕೆ. ಬಹುಷ: ಜ್ಞಾನ ಎಲ್ಲರಿಗೂ ಲಭ್ಯವಾಗಲಿಲ್ಲ. ಎನಿಸದೆ ಇರದು. ಆದರೆ ನಮ್ಮ ದೇಶಕ್ಕೆ ಬ್ರಾಹ್ಮಣ ಸಮುದಾಯದ ಕೊಡುಗೆ ಅಲ್ಲಗಳೆಯುವಂತಿಲ್ಲ.

    ಉತ್ತರ
  2. ramakrishna
    ನವೆಂ 17 2011

    ವೈದಿಕಶಾಹಿ ಆಡಳಿತ ಎಂದರೆ ಬ್ರಾಹ್ಮಣರೇ ನೇರವಾಗಿ ಸಿಂಹಾಸನದಲ್ಲಿ ಕುಳಿತು ಆಡಳಿತ ನಡೆಸಿದ್ದಲ್ಲ. ಬ್ರಾಹ್ಮಣರು ಕ್ಷತ್ರಿಯ ರಾಜರ ಆಡಳಿತದಲ್ಲಿ ರಾಜಪುರೋಹಿತರಾಗಿದ್ದುಕೊಂಡು ಮೇಲು ಕೀಳು ಎಂಬ ವ್ಯವಸ್ಥೆಯನ್ನು ಕಾಯ್ದುಕೊಂಡು ಬರುತ್ತಿದ್ದರು ಎಂಬುದು ಇಂಗಿತ. ಮೇಲು ಕೀಳು ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುಸ್ಮೃತಿಯನ್ನು ರಚಿಸಿದ್ದು ಯಾರು? ಬ್ರಾಹ್ಮಣರೇ ಅಲ್ಲವೆ? ಭಾರತದಲ್ಲಿ ಮೇಲು ಕೀಳು ವ್ಯವಸ್ಥೆಯನ್ನು ರೂಪಿಸಿ ಅದನ್ನು ಕಾಯ್ದುಕೊಂಡು ಬರುವಲ್ಲಿ ಬ್ರಾಹ್ಮಣರೇ ಕಾರಣ ಎಂಬುದು ಸ್ಪಷ್ಟ. ಇದನ್ನು ಅಂಬೇಡ್ಕರ್ ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ. ಹೀಗಾಗಿ ಇರುವ ವಿಷಯವನ್ನು ಹೇಳಿದರೆ ತಪ್ಪು ಹೇಗಾಗುತ್ತದೆ?

    ಉತ್ತರ
    • ನವೆಂ 18 2011

      Who told Manu was a Brahmin?

      ಉತ್ತರ
      • ramakrishna
        ನವೆಂ 18 2011

        ಮನು ಬ್ರಾಹ್ಮಣ ರಾಜನಾಗಿದ್ದ. ಅವನು ಸತ್ಯವೃತ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದ. ಅವನ ಹೆಂಡತಿಯಾ ಹೆಸರು ಶ್ರದ್ಧಾ ಅಥವಾ ನಿಹಾರಿಕ ಎಂದೂ ಕರೆಯಲ್ಪಡುತ್ತದೆ. (ಆಧಾರ, ವಿಕಿಪೀಡಿಯ)

        ಉತ್ತರ
        • ಗಿರೀಶ್
          ನವೆಂ 18 2011

          ಮನು ರಾಜನಾಗಿದ್ದರೆ ಆಗಿನಂತೆ ಅವನು ಕ್ಷತ್ರಿಯ ಬ್ರಾಹ್ಮಣನಲ್ಲ. ಆಗಿನ ವರ್ಣಾಶ್ರಮದಂತೆ ರಾಜ ಬ್ರಾಹ್ಮಣನಾಗಲು ಸಾಧ್ಯವಿರಲಿಲ್ಲ. ಏಕೆಂದರೆ ವರ್ಣಾಶ್ರಮ ಆತ ಕಾಯಕದ ಮೇಲೆ ಅವಲಂಬಿತವಾಗಿತ್ತು.

          ಉತ್ತರ
        • surendranath
          ಮೇ 11 2013

          this is totally irrelevant when according to you manu was the king and he only has made the division in cast if so how can he be the king he is supposed to be the priest.

          ಉತ್ತರ
  3. ಗಿರೀಶ್
    ನವೆಂ 17 2011

    ರಮಾನಂದ್,
    ಸಂಶೋಧನೆಯೆಂದರೆ ಇರುವುದನ್ನೆ ಮತ್ತೆ ಹೊಸ ಹೊಸ ಪದಗಳನ್ನು ಬಳಸಿ ಬರೆಯುವುದಲ್ಲ. ಸತ್ಯವನ್ನು ಹುಡುಕುವುದು ಎನ್ನುವುದನ್ನು ನಿಮ್ಮ ತಂಡ ಯಶಸ್ವಿಯಾಗಿ ನಡೆಸುತ್ತಿದೆ. ಪೂರ್ವಗ್ರಹವಲ್ಲದ ಸತ್ಯದ ಸಂಶೋಧನೆ ಎಂದಿದ್ದರೂ ಪ್ರಕಾಶಿಸುತ್ತದೆ. ಒಂದು ಸುಳ್ಳನ್ನು ನೂರು (ಜನ) ಬಾರಿ ಹೇಳಿದರೆ ಸತ್ಯದಂತೆ ಗೋಚರಿಸುತ್ತದೆ. ಅದೇ ನಮ್ಮ ಸಮಾಜ ವಿಜ್ಞಾನಿಗಳ ಇವತ್ತಿನ ಪರಿಸ್ಥಿತಿ. ನೀವು ಅಲ್ಲಿ ವಿಭಿನ್ನವಾಗಿ ನಿಲ್ಲುತ್ತೀರಿ. ಅಭಿನಂದನೆಗಳು.
    ಮಹಾಭಾರತ ನಂತರದ ಇತಿಹಾಸ ಏನಾಗಿತ್ತೆಂದು ಎಲ್ಲಿಯೂ ತಿಳಿಯುತ್ತಿಲ್ಲ. ಮಹಾಭಾರತ ನಂತರ ಅಶೋಕನವರೆಗೂ ಭಾರತದ ಇತಿಹಾಸ ಪಾಶ್ಚಿಮಾತ್ಯರ ಪೂರ್ವಗ್ರಹಕ್ಕೆ ಸಿಕ್ಕಿ ನಲುಗಿದೆ ಎನಿಸುತ್ತಿದೆ. ನಿಮ್ಮ ಅಭಿಪ್ರಾಯವೇನು?

    ಉತ್ತರ
  4. ನವೆಂ 17 2011

    ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಅನ್ನಿಸುತದೆ ಅದಕ್ಕೆ ಉದಾಹರಣೆ ಉಡುಪಿ ಮಠ……..ಅಂದರೆ ಜಾತಿ ವ್ಯವಸ್ತೆಯನು ಬ್ರಾಹ್ಮಣರು ತರಲಿಲ್ಲ ಆಗಾದರೆ ಯಾರು ತಂದಿದ್ದು ? ದಲಿತರು ತಂದಿದ್ದ ? ಕೆಲಒಂದು ಮೆಲ್ವರ್ಗದವರು ತಮ್ಮ ಉಳಿವಿಗಾಗಿ ತಮ್ಮ ಪ್ರತಿಷ್ಠೆಗಾಗಿ ಕೆಲಒಂದು ಜಾತಿಗಳನ್ನು ತುಂಬಾನೆ ಕೀಳಾಗಿ ಕಂಡವು ಅದರಲ್ಲಿ ಭ್ರಾಹ್ಮಣರೆ ಮೊದಲಿಗರು ಅನೊದು ಎಲ್ಲರಿಗು ತಿಳಿದ ವಿಚ್ಚಾರ ಹಿಂದು ದರ್ಮದಲ್ಲಿ ದೇವರಿಗೆ ಪೂಜೆಮಾಡುವವರನು ಪೂಜ್ಯಸ್ಥಾನದಿಂದ ನೊಡುತ್ತಾರೆ ಅದು ಹಿಂದು ದರ್ಮದಲ್ಲಿನ ಯಾವುದೆ ಜಾತಿ ಇರಲಿ ಅದರೆ ಬ್ರಾಹ್ಮಣರು ಇದನ್ನೆ ಅಸ್ತ್ರವಾಗಿಸಿ ಕೊಂಡು ಬೆಳೆದವರು ಅಂತಾನೂ ಹೇಳಬಹುದಲ್ಲ…………ಜಾತಿ ವ್ಯವಸ್ತೆ ಯಾರಿಂದಲ್ಲೆ ಬಂದಿರಲಿ ಅದು ಎರಡನೆ ವಿಚ್ಚಾರ ಅದರೆ ದಲಿತರನ್ನು ಹಾಗು ಇನ್ನು ಕೆಲವು ಕೆಳವರ್ಗದ ಜನರುನ್ನು ಇದೆ ಬ್ರಾಹ್ಮಣರು ಹಾಗೂ ಇನ್ನಿತರ ಮೆಲ್ಜಾತಿ ಎಂದು ಎಳಿಕೊಳ್ಳುವವರು ಸಾವಿರಾರು ವರ್ಷಗಳಿಂದ ಶೊಷಣೆ ಮಾಡುತ್ತಾಲೆ ಬಂದಿದ್ದಿರಲ್ಲ ಅವರ ಮನಸ್ಥಿತಿ ಹೆಗಿರಬೆಡ ಯೊಚಿಸಿದ್ದಿರ….
    ಇಲ್ಲಿ ಬ್ರಾಹ್ಮಣರನು ಸಮರ್ತಿಸಿಕೊಳ್ಳಲು ಕೆಲವೊಂದು ಹೆಳಿಕೆಗಳನು ಕೊಟ್ಟಿದ್ದಿರ ( ಬ್ರಾಹ್ಮಣರನ್ನೊಳಗೊಂಡು ಭಾರತೀಯ ಉಚ್ಚವರ್ಗದವರನ್ನು ಕ್ರೈಸ್ತರನ್ನಾಗಿ ಬದಲಾಯಿಸಲು ಸಾಧ್ಯವಾಗದೆ ಕೇವಲ ಕೆಳಜಾತಿಯ ಗುಂಪುಗಳನ್ನು ಸೇರಿಸಿಕೊಳ್ಳುವುದರಲ್ಲೇ ಮಿಶನರಿಗಳು ತೃಪ್ತಿಪಟ್ಟು ಕೊಳ್ಳಬೇಕಾಯಿತು.) ಹಾಗು ( ಬ್ರಾಹ್ಮಣರಿಗೆ ಪುರೋಹಿತಶಾಹಿ ಎಂಬ ಪಟ್ಟಕಟ್ಟಿದವರು ಐರೋಪ್ಯ ಪ್ರೊಟೆಸ್ಟಾಂಟ್ ಸುಧಾರಣಾ ವಾದಿಗಳು. ಅವರ ಜೊತೆಗೆ ಪ್ರೊಟೆಸ್ಟಾಂಟ್ ಪ್ರಭಾವಿತ ಸೆಕ್ಯುಲರ್ ಚಿಂತಕರೂ ಸೇರಿಕೊಂಡರು ) ಜಾತಿ ವ್ಯವಸ್ತೆ ಕೇವಲ ಹಿಂದು ದರ್ಮದಲ್ಲಿ ಮಾತ್ರವಲ್ಲ ಕ್ರೈಸ್ತ ಇಸ್ಲಾಮ್ ದರ್ಮಗಳಲ್ಲು ಇದೆ ಅದರೆ ಅವರಲ್ಲಿ ನಾವು ಮೆಲು ನೀವು ಕೀಳು ಅನೊದೆಲ್ಲ ಇಲ್ಲ ಆದ್ದರಿಂದಲೇ ಅ ದರ್ಮಗಳು ಭಾರತದಲ್ಲಿ ಹೆಚ್ಚು ಜನರನ್ನು ಅಕರ್ಷಿಸಿರೊದು ಅದರಲ್ಲೂ ತಮ್ಮ ದರ್ಮದವರಿಂದಲೆ ನೊಂದ ಹಿಂದು ದರ್ಮದ ದಲಿತರು ಹಾಗು ಕೆಲವರ್ಗಗಳಿಗೆ ಕ್ರೈಸ್ತ,ಇಸ್ಲಾಮ್ ದರ್ಮ ಗಳು ತಮ್ಮತ ಬರಮಾಡಿ ಕೊಂಡವು ಅದರೆ ಇದನ್ನು ಬ್ರಾಹ್ಮಣರು ಹಾಗು ಮೆಲ್ವರಾಗಗಳು ನಮ್ಮ ಜಾತಿಯ ಸ್ವಂತಿಕೆ, ಇರುವಿಕೆ, ಗೆಲುವು ಅಂದಿಕೊಂಡರೆ ಅದು ಹಿಂದು ದರ್ಮದ ಬಹು ದೊಡ್ಡ ದುರಂತ ಅನ್ನದೇ ವಿದಿ ಇಲ್ಲ ಯಾಕೆಂದರೆ ಕ್ರೈಸ್ತ ಮಿಷನರಿಗಳು ಕೈ ಹಾಕಿರುವುದು ಬುಡಕ್ಕೆ ಅನೊದನ್ನ ಮರೆಯದಿದ್ದರೆ ಒಳ್ಳೆಯದು ನಮ್ಮ ಹಿಂದು ದರ್ಮದಲ್ಲಿ ಕೇವಲ ಬ್ರಾಹ್ಮಣರು ಹಾಗು ಮೆಲ್ವರ್ಗಗಳು ಅಂದು ಕೊಳ್ಳುವವರು ಮಾತ್ರ ಇದ್ದಿದ್ದರೆ ಹಿಂದು ದರ್ಮವನ್ನು ಅಳಿಸುವುದು ಬಹುಷ ಕ್ರೈಸ್ತ ಮಿಷನರಿಗಳಿಗೆ ದೊಡ್ಡದೆನು ಆಗಿರಲಿಲ್ಲ…
    ” ಹಿಂದು ದರ್ಮವನು ಒಂದು ವೃಕ್ಷವಾಗಿ ನೋಡಿದರೆ ಬ್ರಾಹ್ಮಣರು,ಮೆಲ್ವರ್ಗದವರು ಅಂದು ಕೊಳ್ಳುವವರು ವೃಕ್ಷದ ಮೆಲ್ಬಾಗವೆ ಅಂದರೆ ಹಣ್ಣು,ಹೊ,ಎಲೆ,ರಂಬೆ,ಕೊಂಬೆಗಳು ಅಂದುಕೊಳ್ಳಿ ಅದರೆ ಕೆಳವರ್ಗದಲ್ಲಿ ಅತಿ ದೊಡ್ಡ ವರ್ಗ ದಲಿತ ವರ್ಗ ಇದೆ ವೃಕ್ಷದ ಬೇರು ಕ್ರೈಸ್ತರು,ಮುಸ್ಲಿಂ ದರ್ಮಗಳು ಕಣ್ಣಿತ್ತಿರುವುದು ಇದೆ ಬುಡಕ್ಕೆ ಇಗಾಗಲೆ ಈ ಬೆರಿನ ಒಂದೊಂದೇ ಬಾಗಗಳು ಕಡಿಯುತಿದ್ದಾರೆ ಮುಂದೆ ವೃಕ್ಷದ ಮೆಲ್ಬಾಗ ಏನಾಗುತದೆ ಅನೊದು ವಿವರಿಸೊದು ಬೇಡ ಅನ್ಕೊತಿನಿ ”
    ಸೊ ಪೂರಾ ಕಡಿಯುವುದಕ್ಕೆ ಮುಂಚ್ಚೆ ಹಿಂದು ದರ್ಮದ ಎಲ್ಲಜಾತಿಗಳು ಹೆಚ್ಚೆತು ಕೊಂಡರೆ ಒಳ್ಳೆಯದು ಅದು ಬಿಟ್ಟು ಇನ್ನು ನಾವು ಬ್ರಾಹ್ಮಣರು,ಲಿಂಗಾಯಿತರು,ಗೌಡರು,ದಲಿತರು,ನಾಯಕರು ಅಂತ ಜಾಗಳವಾಡುತ್ತಲೆ ಕೂತರೆ ಇದು ಬೆರೆ ದರ್ಮಗಳಿಗೆ ನಾವೆ ಅನುಕೂಲ್ ಮಾಡಿ ಕೊಟ್ಟಂತೆ …..
    ಜಾತಿಗಳು ಬೇಡ ಅಂತ ತಡೆಯಲು ಯಾರಿಗೂ ಸಾದ್ಯವಿಲ್ಲ,ಅದಿಕಾರವು ಇಲ್ಲ ಆದ್ದರಿಂದ ಜಾತಿಗಳು ನಮ್ಮ ಮನೆಯ ಒಳಗಡೆ ಅದು ದೇವರ್ ಮನೆಗೆ ಸಿಮಿತವಿರಲಿ ಹೊರಗೆ ಎಲ್ಲಾರು ಒಟ್ಟಿಗೆ ಹಿಂದುಗಳು ಅನೊಬಾವನೆ ಯನ್ನು ಜನರಲ್ಲಿ ಮೂಡಿಸಿ ಅದು ಬಿಟ್ಟಿ ಕೇವಲ ಈ ಜಾತಿಗೆ ಸಂಬಂದ ಪಟ್ಟಂತೆ ಹೇಳಿದರೆ ಅದನು ಕೇಳಲು 1800 ವರ್ಷದ ಜನರಲ್ಲ ಆವಾಗ ಕೇವಲ ಬ್ರಾಹ್ಮಣರು ಇನ್ನಿತರರು ವಿದ್ಯಾವಂತರಾಗಿದ್ದರು ನಿಮ್ಮ ಎಲ್ಲ ಮಾತುಗಳನು ಕೆಳುತಿದ್ದರು ಅದರೆ ಇದು 2011 ಇಲ್ಲಿ ಎಲ್ಲ ವರ್ಗಗಳು ಜನರು ವಿದ್ಯಾವಂತರೆ ಅದರಲ್ಲೂ ದಲಿತರು ಶೊಷಣೆಗೆ ಒಳಗಾದವರು ಊಟ ಬಿಡ್ತಿವಿ ವಿದ್ಯಾಬ್ಯಾಸ ಬಿಡ್ಡಲ್ಲ ಅನೊ ತಾರಾ ಹಾಗಿದ್ದರೆ ಇಂತಾ ಸಮಾಜದಲ್ಲಿ ಈ ಗಿನಾ ನಿಮ್ಮ ಈ ಮಾತು ಗಳನ್ನು ಒಪ್ಪುತಾರ ಅನೊದನು ನೀವೇ ಆತ್ಮಾವಲೋಕನ ಮಾಡಿಕೊಳ್ಳಿ…………ಜೈ ಹಿಂದ್ ಜೈ ಕರ್ನಾಟಕ

    ಉತ್ತರ
  5. Madhu Kumara
    ನವೆಂ 17 2011

    ಮೇಲು ಕೀಳು ಎಂಬುದು ಮನುಷ್ಯನ ಗುಣಗಳ ಪ್ರಕಾರವೇ ಹೊರತು,ಮನುಷ್ಯರೇ ಕೀಳಲ್ಲ,ಉದಾ: ‘ಬ್ರಹ್ಮ’ ಎನ್ನು ಎಂದರೆ ಕೆಲವರು, ‘ ಅಬ್ರಹಾಮ್ ‘ಎನ್ನುತ್ತಾರೆ,ಕೆಲವರು ‘ ಇಬ್ರಾಹಿಮ್ ‘ ಎನ್ನುತ್ತಾರೆ ಇಷ್ಟೇ…. ಸರಿಯಾಗಿ ಹೇಳಿದ್ದರೆ ಇರುತ್ತಿತ್ತೇ….ಅದಕ್ಕೇ ಮೇಲು ಕೀಳು ಎಲ್ಲಾ….

    ಉತ್ತರ
    • ನವೆಂ 20 2011

      UDUPIYALLIRUVUDU SHREEMANTHA SWAMIGALA AADALITHAVE HORATHU BADABRAHMANARADDALLA. SHREEMANTHARINDA BADAVARA SHOSHANE ENDIGOO NADEYUTTHIDE. HAAGAAGI SHOSHANEGE JAATHI SAMBANDHAVILLA IDU ARTHIKA ASAMANATHE.

      ಉತ್ತರ
  6. krishnappa
    ನವೆಂ 18 2011

    ಬ್ರಾಹ್ಮಣರನ್ನು ಹಾಗೂ ಮೇಲ್ಜಾತಿಯವರನ್ನು ಮತಾಂತರಗೊಳಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಅವರು ಶೋಷಣೆಗೆ ಒಳಗಾಗಿರಲಿಲ್ಲ. ಶೋಷಣೆಗೆ ಒಳಗಾದವರಿಗೆ ತಾನೆ ಅದರ ನೋವು ಗೊತ್ತಾಗುವುದು. ಶೋಷಣೆ ಹಾಗೂ ಅವಮಾನದಿಂದ ಮುಕ್ತಿ ಪಡೆಯಲು ದಲಿತರು ಹಾಗೂ ಹಿಂದುಳಿದ ಜಾತಿಗಳು ಮತಾಂತರಗೊಂಡಿರುವುದು ಹಾಗೂ ಮತಾಂತರಗೊಳ್ಳುತ್ತಿರುವುದು. ಇದನ್ನು ಮೇಲ್ಜಾತಿಯವರು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ? ಇಂದಿಗೂ ಕೆಲವು ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದೆ, ಅವರಿಗೆ ಪಾಯಸ, ಸಿಹಿಯೂ ಇರುತ್ತದೆ. ಹೀಗೇಕೆ? ಉಳಿದವರಿಗೆ ಒಂದು ಸಾರಿನಂಥ ಸಾಂಬಾರು ಮತ್ತು ಮಜ್ಜಿಗೆನೀರು, ಒಂದು ಪಲ್ಯ ಮಾತ್ರ. ಉದಾಹರಣೆಗೆ ಧರ್ಮಸ್ಥಳ, ಕಟೀಲು, ಉಡುಪಿ ಇತ್ಯಾದಿ ದೇವಸ್ಥಾನಗಳು.

    ಉತ್ತರ
  7. x
    ನವೆಂ 18 2011

    ಧರ್ಮಸ್ಥಳದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದೆಯೇ? ಇಲ್ಲಿಯವರೆಗೆ ಕೇಳಿದ ನೆನಪಿಲ್ಲ.

    ಉತ್ತರ
    • krishnappa
      ನವೆಂ 18 2011

      ಧರ್ಮಸ್ಥಳದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದೆ. ಇದಕ್ಕಾಗಿ ಪ್ರತ್ಯೇಕ ಹಾಲ್ ಒಂದು ದೇವಸ್ಥಾನದ ಪಕ್ಕದಲ್ಲಿದೆ. ಇಲ್ಲಿ ಬ್ರಾಹ್ಮಣರ ಊಟಕ್ಕೆ ಹಲವು ಪದಾರ್ಥಗಳು ಇರುತ್ತವೆ ಹಾಗೂ ಪಾಯಸ, ಸಿಹಿಯೂ ಇರುತ್ತದೆ ಎಂದು ನನ್ನ ಬ್ರಾಹ್ಮಣ ಮಿತ್ರರಿಂದ ಕೇಳಿ ತಿಳಿದಿದ್ದೇನೆ. ಇಲ್ಲಿ ಊಟ ಮಾಡಬೇಕಾದರೆ ಅಂಗಿ ತೆಗೆದು ಜನಿವಾರ ತೋರಿಸಿ ತಾನು ಬ್ರಾಹ್ಮಣ ಎಂದು ತೋರಿಸಬೇಕು ಎಂದೂ ಕೇಳಿ ತಿಳಿದಿದ್ದೇನೆ.

      ಉತ್ತರ
      • ನವೆಂ 18 2011

        anthe kanthe yakilli?

        ಉತ್ತರ
        • hariprasad
          ನವೆಂ 18 2011

          ಕೃಷ್ಣಪ್ಪನವರು ಹೇಳಿದ್ದು ಸತ್ಯ, ಇದು ಅಂತೆ ಕಂತೆಯೇನೂ ಅಲ್ಲ. ಓರ್ವ ಬ್ರಾಹ್ಮಣನಾಗಿ ನಾನು ಧರ್ಮಸ್ಥಳದಲ್ಲಿ ಪ್ರತ್ಯೇಕ ಊಟದ ವ್ಯವಸ್ಥೆಯಲ್ಲಿ ಕುಳಿತು ಊಟ ಮಾಡಿದ್ದೇನೆ. ಇದೇ ರೀತಿಯ ಊಟದ ವ್ಯವಸ್ಥೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲೂ ಇದೆ. ನಾನು ಓರ್ವ ಬ್ರಾಹ್ಮಣನಾದರೂ ಇಂಥ ತಾರತಮ್ಯ ನನಗೆ ಸರಿಯೆಂದು ಕಾಣುವುದಿಲ್ಲ.

          ಉತ್ತರ
      • Nagshetty Shetkar
        ಜನ 16 2015
  8. GOWDA
    ನವೆಂ 18 2011

    ರಮಾನಂದ್ ರವರು ತಮ್ಮ ಲೇಖನದಲ್ಲಿ ಪ್ರಗತಿಪರರಲ್ಲಿ ಚಾಲ್ತಿಯಲ್ಲಿರುವ ಬ್ರಾಹ್ಮಣ ಪುರೋಹಿತಶಾಹಿ ಜಾತಿವ್ಯವಸ್ತೆ ಯನ್ನು ಸೃಷ್ಠಿಸಿ ಭಾರತೀಯ ಸಮಾಜದಲ್ಲಿ ಶೋಷಣೆಯನ್ನು ಸೃಷ್ಠಿಸಿತು ಎಂಬ ವಾದಕ್ಕೆ ಪ್ರತಿಯಾಗಿ ಅದಕ್ಕೆ ಪುರವೆಗಳನ್ನು ಕೇಳುತ್ತಾರೆ ಹಾಗು ಮುಂದುವರೆದು ಈ ವಾದವು ಹೇಗೆ ಬಂದಿತು ಎಂಬುದನ್ನು ಸುಸಂಬದ್ದವಾಗಿವಿವರಿಸುತ್ತಾರೆ, ಜೊತೆಗೆ ಇಂದಿನ ಬೌದ್ದಿಕ ವಲಯವು ಹೇಗೆ ಪಾಶ್ಚ್ಯಾತ್ಯರ ಅನುಭವವನ್ನು ಹಂಚಿಕೊಂಡಿದೆ ಎಂಬುದನ್ನು ತಿಳಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ರಾಮಕೃಷ್ಣ ರವರು ಬ್ರಾಹ್ಮಣ ಪುರೊಹಿತಶಾಹಿ ನೇರವಾಗಿ ಆಳ್ವಿಕೆ ನೆಡಸಿಲ್ಲ ಪರೋಕ್ಷವಾಗಿ ವ್ಯವಸ್ತೆ ಯನ್ನು ಹುಟ್ಟುಹಾಕಿ ಅದನ್ನು ಕಾಯ್ದಕೊಂಡುಬರುತ್ತಿದ್ದಾರೆ ಎಂದು ಹೇಳಿದ್ದಾರೆ,,,, ಜಾತಿವ್ಯವಸ್ಥೆ ಹಾಗು ಪುರೋಹಿತಶಾಹಿ ಶೋಷಣೆಗಳಿಗೆ ಎಂಪಿರಿಕಲ್ ಆದ ಆಧಾರಗಳನ್ನು ಹುಡುಕುವಾಗಲೆಲ್ಲ ಈ ಉತ್ತರವು ಬಂದಿದೆ ಸಾವಿರಾರು ವರ್ಷ ಗಳಿಂದ ಶೋಷಣಾತ್ಮಕ ವ್ಯವಸ್ತೆಯೊಂದು ನಮ್ಮ ಸಮಾಜದಲ್ಲಿ ಮುಂದುವರೆದುಕೊಂಡು ಬಂದಿದ್ದರೆ ನಮ್ಮ ಅನುಭವದಲ್ಲಿ ನಿಲುಕಬೇಕಲ್ಲವೆ ಪರೊಕ್ಷವಾಗಿದೆ ಎಂದು ಏಕೆಹೇಳಬೇಕು..?

    ಉತ್ತರ
  9. jagadish
    ನವೆಂ 18 2011

    ಜಾತಿ ಎಂಬುದು ಪ್ರಕ್ರತಿ ದತ್ತವಾದದ್ದು.ಅದನ್ನು ಎಂದಿಗೂ ಹೋಗಲಾಡಿಸಲು ಸಾಧ್ಯವಿಲ್ಲ .ಆದರೆ ಅಸ್ಪ್ರಶ್ಯತೆ ಎಂಬುದು ಮಾನವ ಸ್ರಷ್ಟಿ ಎಂಬುದೂ ಅಷ್ಟೇ ಸತ್ಯ . ಅಸ್ಪ್ರಶ್ಯತೆ ಎಂದಾಕ್ಷಣ ಅದು ಬ್ರಾಹ್ಮಣರೇ ಸ್ರಷ್ಟಿಸಿದ್ದು ಎಂಬುದು ಶುದ್ದ ಸುಳ್ಳು.ಇದಕ್ಕೆ ಎಲ್ಲರೂ ಉತ್ತರದಾಯಿತ್ವವನ್ನು ಹೊಂದಿದ್ದಾರೆ.ಇಂದಿನ ಸರ್ಕಾರಿ ದಾಖಲೆಗಳ ಪ್ರಕಾರ ಜಾತಿ ವಿಂಗಡಣೆಯನ್ನು ಒಮ್ಮೆ ಅವಲೋಕಿಸಿ. ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ. ಈ ಪೈಕಿ ಸಾಮಾನ್ಯ ವರ್ಗ (ಬ್ರಾಹ್ಮಣ) ಹಾಗೂ ಪರಿಶಿಷ್ಟ ಜಾತಿಗಳ ನಡುವೆ ಎಷ್ಟರ ಮಟ್ಟಿಗೆ ಅಸ್ಪ್ರಶ್ಯತೆ ಇದೆಯೋ, ಅಷ್ಟೇ ಅಸ್ಪ್ರಶ್ಯತೆ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಗಳ ನಡುವೆಯೂ ಇದೆ. ಆದರೆ ಆರೋಪ ಮಾತ್ರ ಕೇವಲ ಬ್ರಾಹ್ಮಣರ ಮೇಲೆ. ಎಲ್ಲ ಸಮಾಜದವರೂ ಸೇರಿ ಮಾಡಿದ ತಪ್ಪನ್ನು ಕೇವಲ ಬ್ರಾಹ್ಮಣರ ಮೇಲೆ ಹೊರಿಸುವ ಪ್ರಯತ್ನವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ.ಇಂತಹ ಸಮಾಜ ವಿಭಜನೆಯ ಕಾರ್ಯಕ್ಕೆ ಇಂದಿನ ಬುದ್ಧಿಜೀವಿಗಳೇ ಮುಂದಾಗಿರುವುದು ತೀರಾ ವಿಷಾದನೀಯ.ಬ್ರಾಹ್ಮಣ ವಿರೋಧೀ ಹೇಳಿಕೆಗಳು ರಾಜಕಾರಾಣಿಗಳ ಓಟು ಗಳಿಸುವ ಮಾರ್ಗಗಳಾಗಿವೆ.ಇದೆ ರೀತಿ ಮುಂದುವರಿದರೆ ಯಾರಿಗೂ ನೆಮ್ಮದಿಯಿಲ್ಲ.ಇನ್ನಾದರೂ ಎಲ್ಲ ಸಮಾಜದ ವಿದ್ಯಾವಂತರು ಸೇರಿ ನಮ್ಮಲ್ಲಿರುವ ದೋಷಗಳನ್ನು ನಿವಾರಿಸಿಕೊಂಡು ದೇಶ ಕಟ್ಟುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಆಶಿಸೋಣ.

    ಉತ್ತರ
    • ಗಿರೀಶ್
      ನವೆಂ 22 2011

      jagadish :
      ಜಾತಿ ಎಂಬುದು ಪ್ರಕ್ರತಿ ದತ್ತವಾದದ್ದು.ಅದನ್ನು ಎಂದಿಗೂ ಹೋಗಲಾಡಿಸಲು ಸಾಧ್ಯವಿಲ್ಲ .ಆದರೆ ಅಸ್ಪ್ರಶ್ಯತೆ ಎಂಬುದು ಮಾನವ ಸ್ರಷ್ಟಿ ಎಂಬುದೂ ಅಷ್ಟೇ ಸತ್ಯ . ಅಸ್ಪ್ರಶ್ಯತೆ ಎಂದಾಕ್ಷಣ ಅದು ಬ್ರಾಹ್ಮಣರೇ ಸ್ರಷ್ಟಿಸಿದ್ದು ಎಂಬುದು ಶುದ್ದ ಸುಳ್ಳು.ಇದಕ್ಕೆ ಎಲ್ಲರೂ ಉತ್ತರದಾಯಿತ್ವವನ್ನು ಹೊಂದಿದ್ದಾರೆ.ಇಂದಿನ ಸರ್ಕಾರಿ ದಾಖಲೆಗಳ ಪ್ರಕಾರ ಜಾತಿ ವಿಂಗಡಣೆಯನ್ನು ಒಮ್ಮೆ ಅವಲೋಕಿಸಿ. ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ. ಈ ಪೈಕಿ ಸಾಮಾನ್ಯ ವರ್ಗ (ಬ್ರಾಹ್ಮಣ) ಹಾಗೂ ಪರಿಶಿಷ್ಟ ಜಾತಿಗಳ ನಡುವೆ ಎಷ್ಟರ ಮಟ್ಟಿಗೆ ಅಸ್ಪ್ರಶ್ಯತೆ ಇದೆಯೋ, ಅಷ್ಟೇ ಅಸ್ಪ್ರಶ್ಯತೆ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಗಳ ನಡುವೆಯೂ ಇದೆ. ಆದರೆ ಆರೋಪ ಮಾತ್ರ ಕೇವಲ ಬ್ರಾಹ್ಮಣರ ಮೇಲೆ. ಎಲ್ಲ ಸಮಾಜದವರೂ ಸೇರಿ ಮಾಡಿದ ತಪ್ಪನ್ನು ಕೇವಲ ಬ್ರಾಹ್ಮಣರ ಮೇಲೆ ಹೊರಿಸುವ ಪ್ರಯತ್ನವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ.ಇಂತಹ ಸಮಾಜ ವಿಭಜನೆಯ ಕಾರ್ಯಕ್ಕೆ ಇಂದಿನ ಬುದ್ಧಿಜೀವಿಗಳೇ ಮುಂದಾಗಿರುವುದು ತೀರಾ ವಿಷಾದನೀಯ.ಬ್ರಾಹ್ಮಣ ವಿರೋಧೀ ಹೇಳಿಕೆಗಳು ರಾಜಕಾರಾಣಿಗಳ ಓಟು ಗಳಿಸುವ ಮಾರ್ಗಗಳಾಗಿವೆ.ಇದೆ ರೀತಿ ಮುಂದುವರಿದರೆ ಯಾರಿಗೂ ನೆಮ್ಮದಿಯಿಲ್ಲ.ಇನ್ನಾದರೂ ಎಲ್ಲ ಸಮಾಜದ ವಿದ್ಯಾವಂತರು ಸೇರಿ ನಮ್ಮಲ್ಲಿರುವ ದೋಷಗಳನ್ನು ನಿವಾರಿಸಿಕೊಂಡು ದೇಶ ಕಟ್ಟುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಆಶಿಸೋಣ.

      ನಿಮ್ಮ ಮಾತು ಅಕ್ಷರಸಹ ಸತ್ಯ. ನಾನು ಬೆಳೆದ ಹಳ್ಳಿಯಲ್ಲಿ. ಮಾದಿಗರಿಗೆ ಹೊಲೆಯ ಅಸ್ಪೃಷ್ಯ. ಕ್ಷೌರಿಕರಿಗೆ ಮಾದಿಗ ಒಕ್ಕಲಿಗರಿಗೆ ಕ್ಷೌರಿಕ. ಮಾದಿಗರಲ್ಲೇ ಎಡಗೈ ಬಲಗೈ ಹೀಗೆ ಇಲ್ಲಿ ಬ್ರಾಹ್ಮಣರೆಲ್ಲಿಂದ ಬಂದರು? ಬ್ರಾಹ್ಮಣರು ಏನು ನಿಂದಿಸಿದರು ಸುಮ್ನಿರ್ತರೆ ಅದಕ್ಕೆ ಹೀಗೆಲ್ಲ.

      ಉತ್ತರ
  10. krishnappa
    ನವೆಂ 19 2011

    ಬ್ರಾಹ್ಮಣರು ಶೋಷಣೆಗೆ ಹೇಗೆ ಕಾರಣ ಎಂಬುದನ್ನು ಕೆ.ಎಸ್. ಭಗವಾನ್ ಬರೆದ ‘ಶಂಕರಾಚಾರ್ಯನ ಗೂಂಡಾಗಿರಿ’ ಎಂಬ ಕೃತಿ ಸಮರ್ಪಕವಾಗಿ ತಿಳಿಸಿಕೊಡುತ್ತದೆ. ಈ ಪುಸ್ತಕದ ಪ್ರಕಾಶಕರು ನವಕರ್ನಾಟಕ ಪ್ರಕಾಶನ. ಈ ಪುಸ್ತಕ ಹಲವರು ಆವೃತ್ತಿಗಳನ್ನು ಕಂಡಿದೆ.

    ಉತ್ತರ
    • ಗಿರೀಶ್
      ನವೆಂ 21 2011

      ನವ ಕರ್ನಾಟಕದವರು ಪ್ರಕಟಿಸುವ ಎಲ್ಲ ಕೃತಿಗಳು ಹಾಗೆ ಇರುತ್ತವೆ. ಇನ್ನು ಭಗವಾನ್ ರ ಬಗ್ಗೆ ಹೇಳುವುದೇ ಬೇಡ.

      ಉತ್ತರ
    • Nagshetty Shetkar
      ಜನ 16 2015
  11. Bhargav G N
    ನವೆಂ 19 2011

    ಬ್ರಾಹ್ಮಣರನ್ನ, ಪೂಜಾರಿಗಳನ್ನ ಬೈದು ಹೊಟ್ಟೆ ತುಂಬಿಸಿ ಕೊಳ್ಳೋ ಜನ ಇದನ್ನ ನೋಡಿ ಕಲಿ ಬೇಕು..
    ಹೋಮ, ಹವನ , ಅಗ್ನಿಹೋತ್ರ ಎಲ್ಲ ಗೊಡ್ಡು ಕಂದಾಚಾರ ಅಂತಾ ಬೊಗಳೆ ಬಿಡೋರು ಇದನ್ನ ನೋಡ್ಬೇಕು. .ಹೋಮ , ಹವನ , ಅಗ್ನಿಹೊತ್ರದಿಂದ ಕೃಷಿ, ಸಸ್ಯದ ಮೇಲೆ ಇರುವ ಉಪಯೋಗ ನಮ್ಮ so-called ಬುದ್ಧಿಜೀವಿಗಳಿಗೆ ಕಾಣಿಸೋದೆ ಇಲ್ಲಾ ಅನ್ಸುತ್ತೆ !!

    (Disclaimer :- ನಾನಂತೂ ಬ್ರಾಹ್ಮಣ ಅಲ್ಲ, ನಂಗೆ ವೇದ, ಪುರೋಹಿತಿಕೆ ಇದರ ಬಗ್ಗೆ ಗಂಧ-ಗಾಳಿ ಕೂಡ ಇಲ್ಲ )

    http://www.indianexpress.com/news/dharwad-varsity-has-a-hit-pestcontrol-therapy-homa/754415/0

    ಉತ್ತರ
  12. ನವೆಂ 19 2011

    ಜಾತಿ ಹಾಗೂ ದೇವರ ವಿಚಾರ ಪ್ರಸ್ಥಾಪ ವಾದಾಗಲೆಲ್ಲಾ ಒಂದಿಷ್ಟು ಚರ್ಚೆ ನಡೆಯುತ್ತೆ. ಆದರೆ ಸತ್ಯವನ್ನು ಒಪ್ಪಿಕೊಳ್ಲಲು ಯಾರೂ ಸಿದ್ಧರಿರುವುದಿಲ್ಲ. ನನ್ನ ಅನಿಸಿಕೆಯಂತೆ ಸತ್ಯ ಏನೆಂದರೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣ ಅಥವಾ ಶೂದ್ರ ಎಂಬುದು ಜಾತಿಯಾಗಿರಲಿಲ್ಲ. ಅದು ತಾನು ಮಾಡುವ ಕಾಯಕದ ಮೇಲೆ ವರ್ಗೀಕರಣ. ಒಂದು ಉತ್ತಮ ಸಾಮಾಜಿಕ ಬದುಕಿಗೆ ಬೇಕಾದ ವ್ಯವಸ್ಹೆ. ವೈದ್ಯರ ಮಗ ವೈದ್ಯ ನಾಗಲು ಸಾಧ್ಯವೇ? ಅಪ್ಪ ವೈದ್ಯನಾದರೂ ಮಗನೂ ವದ್ಯಕೀಯ ಶಾಸ್ತ್ರ ಓದಿದರೆ ಮಾತ್ರ ವೈದ್ಯ ನಾಗಲು ಸಾಧ್ಯ. ಅದರಂತೆ ಬ್ರಾಹ್ಮಣನ ಮಗನಾದ ಮಾತ್ರಕ್ಕೆ ಅವನು ಬ್ರಾಹ್ಮಣ ನಾಗ ಬೇಕಿರಲಿಲ್ಲ. ಅವನು ಹೋರಾಟ ಪ್ರವೃತ್ತಿ ಇದ್ದರೆ ಕ್ಷತ್ರಿಯನಾಗಬಹುದಿತ್ತು. ಅಥವಾ ವೈಶ್ಯ ,ಶೂದ್ರ ಕಾಯಕ ಮಾಡಿದರೆ ಆ ವೃತ್ತಿ ಯಲ್ಲಿ ಕರೆಸಿಕೊಳ್ಲಬಹುದಿತ್ತು. ಒಂದು ಮನೆಯಲ್ಲೇ ಬ್ರಾಹ್ಮ ಣ , ವೈಶ್ಯ, ಕ್ಷತ್ರಿಯ, ಶೂದ್ರ ಎಲ್ಲರೂ ಇರಬಹುದಿತ್ತು. ಆದರೆ ಎಲ್ಲೋ ಏನೋ ತಪ್ಪಾಗಿರಲೇ ಬೇಕು.ಗುಣ ಕರ್ಮ ದಂತೆ ಆರಂಭವಾದ ಚಾತುರ್ವರ್ಣ ಅದು ಜಾತಿಯಾಗಿ ಹಣೆ ಪಟ್ತಿ ಕಟ್ಟಿಕೊಂಡು ಹಾಗೆಯೇ ಮುಂದುವರೆದ ಪರಿಣಾಮವೇ ಈಗಿನ ಆಭಾಸಗಳು. ಇದರ ಪರಿಣಾಮ ಸಮಾಜದ ಮೇಲೆ ಆಗಿಲ್ಲವೇ? ಖಂಡಿತಾ ಆಗಿದೆ. ಇದನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳು ನಡೆಯದೆ ಇಲ್ಲ. ಆದರೆ ಸಾವಿರಾರು ವರ್ಷಗಳ ವ್ಯವಸ್ಥೆ ಬದಲಾಗಬೇಕಾದರೆ ತನ್ನದೇ ಆದ ಕಾಲವನ್ನು ತೆಗೆದುಕೊಳ್ಳುತ್ತದೆ. ಕಾಲಗತಿಯಲ್ಲಿ ಎಲ್ಲವೂ ಸರಿಯಾಗುತ್ತಾ ಬಂದಿದೆ. ಈಗ ಜಾತಿ ವ್ಯವಸ್ಥೆಗೆ ಅರ್ಥ ವಿಲ್ಲ. ತನ್ನ ಬದುಕನ್ನು ಎಲ್ಲರೂ ಸುಂದರ ಗೊಳಿಸಿಕೊಳ್ಲಲು ಎಲ್ಲಾ ಸಾಧ್ಯತೆಗಳೂ ಇದ್ದೇ ಇದೆ. ಅಂತರ್ಜಾಲದ ಕಾಲದಲ್ಲೂ ಅಂತರ್ಜಾಲದಲ್ಲೂ ಹಿಂದಿನ ತಪ್ಪು ಒಪ್ಪುಗಳ ಬಗ್ಗೆಯೇ ಚರ್ಚೆ ಮಾಡುವ ಬದಲು ತಮ್ಮ ತಮ್ಮ ಸುಂದರ ಬದುಕನ್ನು ಸೃಷ್ಟಿಸಿಕೊಳ್ಳಲು ಕಾಲ ಮಿಂಚಿಲ್ಲ. ಅನಗತ್ಯ ಚರ್ಚೆಯಲ್ಲಿ ಯಾವ ಉಪಯೋಗವೂ ಇಲ್ಲ.

    ಉತ್ತರ
  13. venugopala
    ನವೆಂ 19 2011

    ವೃತ್ತಿಯ ಮೇಲೆ ವರ್ಣ ವ್ಯವಸ್ಥೆ ಇದ್ದರೂ ಈ ವರ್ಣಗಳಲ್ಲೇ ಯಾಕೆ ಮೇಲು ಕೀಳು ಎಂಬ ಭೇದ ಮಾಡಲಾಗಿದೆ? ಶೂದ್ರ ಯಾಕೆ ಕೀಳು? ದೈಹಿಕ ಶ್ರಮದ ಕೆಲಸ ಮಾಡುವಾತ ಶೂದ್ರ ಎಂದು ಹೇಳುವಾಗ ಆತ ಕೀಳು ಹೇಗಾಗುತ್ತಾನೆ? ಎಲ್ಲರನ್ನೂ ಏಕೆ ಸಮಾನ ಗೌರವದಿಂದ ನೋಡಬಾರದು? ಹಿಂದೂ ಧರ್ಮದ ಪ್ರಧಾನ ದೋಷವೇ ಇದು. ಎಲ್ಲ ಕೆಲಸಗಳೂ ಗೌರವದಿಂದ ಕೂಡಿರಬೇಕಲ್ಲವೇ? ಶ್ರಮದ ಕೆಲಸ ಮಾಡಿದ ಕೂಡಲೇ ವ್ಯಕ್ತಿಯೊಬ್ಬ ಕೀಳು ಎಂದು ನಮ್ಮ ಹಿಂದೂ ಧರ್ಮದಲ್ಲಿ ಪರಿಗಣಿಸುವುದು ಇಂದಿಗೂ ನಡೆಯುತ್ತಿದೆ. ಇಂದಿಗೂ ದೈಹಿಕ ಶ್ರಮದ ಕೆಲಸ ಮಾಡುವವರನ್ನು ಏಕವಚನದಲ್ಲಿ ಕರೆಯುವುದು ನಡೆಯುತ್ತಿದೆ. ಇಂದಿಗೂ ದಲಿತರಿಗೆ ಕೆಲವು ಕಡೆ ದೌರ್ಜನ್ಯ ನಡೆಸುವುದು ಕಂಡುಬರುತ್ತದೆ. ಹೀಗಿರುವಾಗ ಈ ಕುರಿತು ಅಂತರ್ಜಾಲದಲ್ಲಿ ಚರ್ಚೆ ಯಾಕೆ ಬೇಡ? ಈ ಚರ್ಚೆ ಅಗತ್ಯವಾಗಿ ನಡೆಯಬೇಕು ಮತ್ತು ನಮ್ಮ ತಪ್ಪುಗಳನ್ನು ತಿದ್ದಿಕೊಂಡು ನಾವು ಮಾನವರಾಗಬೇಕಾಗಿದೆ.

    ಉತ್ತರ
    • ani
      ಜನ 16 2015

      ವೇಣುಗೋಪಾಲರೆ ನಿಮ್ಮ ಮಾತು ಸತ್ಯ. ಇಂದು ದಲಿತರನ್ನು ಜಾತಿ ನೋಡಿ ಏಕವಚನದಲ್ಲಿ ಕರೆಯುವದು ಹಳ್ಳಿಗಳಲ್ಲಿ ಮಾತ್ರವಿರಬಹುದು. ಆದರೆ ನಗರಗಳಲ್ಲಿ ಸ್ವಲ್ಪನೋಡಿ. ಇಲ್ಲಿ ಜಾತಿಯಿಂದ ದಲಿತನಾದ ಅಧಿಕಾರಿ ಮೇಲುಜಾತಿಯ ತನ್ನ ಪಿಯೂನ್ ನನ್ನು ಏಕವಚನದಲ್ಲೆ ಕರೆಯುತ್ತಾನೆ. ಅಷ್ಟೇ ಅಲ್ಲ ಶ್ರಮಜೀವಿಗಳನ್ನು ನಾವು ಎಂದು ಗೌರವಿಸಿದ್ದೇವೆ? ಇವತ್ತೂ ಕೂಡ ಬೌದ್ಧಿಕವಾಗಿ ಹೆಚ್ಚು ಓದಿಕೊಂಡು ಕೆಲಸ ಮಾಡುವಂಥವನು ಹೆಚ್ಚಿನ ವೇತನ ಹಾಗೂ ಸೌಲಭ್ಯ ಪಡೆಯುತ್ತಾನೆ. ಹಾಗೆ ದೈಹಿಕ ಶ್ರಮ ಮಾಡುವ ಪಿಯೂನ್ ಎಲ್ಲಾರಿಗಿಂತ ಕಡಿಮೆ ಸಂಬಳ ಪಡೆಯುತ್ತಾನೆ? ಇದನ್ನೇಕೆ ನಾವು ಪ್ರಶ್ನಿಸಬಾರದು? ಹಾಗೆನೇ ಒಂದು ಸಮಾರಂಭ ನಡೆದರೆ ಒಬ್ಬರಾದರೂ ಆ ಸಮಾರಂಭಕ್ಕೆ ಲೈಟ್ ಮಾಡಿದವನನ್ನು, ನೀರು ಸರಬರಾಜು ಮಾಡಿದವನನ್ನು ಅಡಿಗೆ ಮಾಡಿದವರನ್ನ, ಉತ್ತಮ ವೇದಿಕೆ ನಿರ್ಮಿಸಿದ ಶ್ರಮಜೀವಿಯನ್ನು ನೆನಪಿಸಿ ವಂದನಾರ್ಪಣೆ ಅರ್ಪಿಸುತ್ತೇವೆಯೇ? ಹಾಗೇನೆ ಒಂದಾದರೂ ದಿನ ಆಫೀಸಿನ ಪಿಯೂನನೊಬ್ಬ ವೇದಿಕೆಯ ಮೇಲೆ ಮುಖ್ಯಾಧಿಕಾರಿಯ ಜೊತೆ ಕುಳಿತುಕೊಳ್ಲಲು ಸಾಧ್ಯವೆ? ನಮ್ಮ ಮನೆಗೆ ಪೇಪರ್ ಹಾಕಲು ಬರುವ ವ್ಯಕ್ತಿಯನ್ನು, ಹಾಲಿನವನನ್ನು, ತರಕಾರಿ ಮಾರಲು ಬರುವವನನ್ನು, ನಾವು ಹೋಗಲಿ ಅವರಿಗಿಂತ ಚಿಕ್ಕವರಾದ ನಮ್ಮ ಮಕ್ಕಳಾದರೂ ಬಹುವಚನದಿಂದ ಮಾತನಾಡುತ್ತಾರಾ? ಕಾರ್ಪೋರೇಷನ್ ಕಸ ಹೊಡೆಯುವನನ್ನು ನಾನು ಬಹುವಚನದಲ್ಲಿ ಮಾತನಾಡಿಸಿದರೆ ನನ್ನ ಸಹೋದ್ಯೋಗಿಗಳೇ ಆಡಿಕೊಂಡು ನಕ್ಕಿದ್ದಾರೆ. ಇಷ್ಟೋಂದು ನಮ್ಮ ವಿಚಾರಗಳಲ್ಲಿ ವ್ಯಕ್ತಿತ್ವದಲ್ಲಿ ಬದಲಾವಣೆಗಳು ಬಂದ ಇಂದಿನ ಸಂದರ್ಭದಲ್ಲೆ ನಾವು ಹೀಗಿದ್ದೇವೆ. ಹಿಂದಿನ ಹಳೆಯ ಹಳವಂಡಗಳನ್ನು ಬಿಡಿ. ಇಂದು ನಾವು ನಮ್ಮ ಕಾರ್ಪೋರೇಷನ್ ಕಾರ್ಮಿಕರಿಗೆ ಎಲ್ಲರಿಗಿಂತ ಹೆಚ್ಚು ಸೌಲಭ್ಯ ಸಿಗಬೇಕೆಂದು ನಾವೇಕೆ ಹೋರಾಡಬಾರದು? ಅವರನ್ನು ಏ ವರ್ಗದ ನೌಕರರೆಂದು ಪರಿಗಣಿಸಿ ಅದಕ್ಕೆ ತಕ್ಕಂತೆ ಸಂಬಳ ಸೌಲಭ್ಯ ನಾವೇಕೆ ನೀಡಬಾರದು? ನೀವೂ ಕೂಡ ಆ ನಿಟ್ಟಿನಲ್ಲಿ ಯಾಕೆ ಕಾರ್ಯ ಪ್ರವೃತ್ತ ರಾಗಬಾರದು?

      ಉತ್ತರ
  14. ನವೆಂ 19 2011

    ಎಂದೋ ಯಾರೋ ಮಾಡಿದರು ಎಂದು ಹಲುಬುತ್ತಾ ಈಗಿರುವವರಲ್ಲಿ ದ್ವೇಷಬೀಜವ ಬಿತ್ತಿ, ಮನಸುಗಳನ್ನೊಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಬುದ್ದಿಜೀವಿಗಳಿಗೆ ಧಿಕ್ಕಾರವಿರಲಿ . ಒಳ್ಳೆಯ ಲೇಖನ 🙂

    ಉತ್ತರ
    • ನವೆಂ 20 2011

      ಎಂದೋ ಯಾರೋ ಮಾಡಿದ್ದು ನಿಜಾ… ಆದರೆ ಅದನ್ನ ಕೆಲವರು ಇಂದಿನವರೆಗೂ ಪೋಷಿಶಿಕೊಂಡು ಬಂದಿದ್ದಾರಲ್ಲ ಅದು ತಪ್ಪು..
      ಮಡಿ ಏನೆಯಿದ್ದರು ಮನೆಯಲ್ಲಿದ್ದರೆ ಚೆನ್ನ! ಸಾರ್ವಜನಿಕ ಸ್ಥಳಗಳಾದ ಮಠ, ಮಂದಿರಗಳಲ್ಲಿ ಸಲ್ಲ!

      ಉತ್ತರ
      • ಜನ 7 2012

        eradoo kai seridare chappale allave?? obbare poshisikondu baralu agalla.. kelavarige dwesha bittodrindane hotte tumbatte… anatvara bagge prashasti avaru heliddu andkotini..

        ಉತ್ತರ
  15. ramananda ainkai
    ನವೆಂ 19 2011

    ಧನ್ಯವಾದಗಳು.ನನ್ಮ ಲೇಖನ ಅಪಾರ ಚಚೆ೯ಗೆ ಗ್ರಾಸವಾಗಿದೆ.ಈ ದೇಶದಲ್ಲಿ ಜಾತಿ ಮತ್ತು ಧಮ೯ಕ್ಕೆ ಸಂಬಂಧಪಟ್ಟಂತೆ ಎಲ್ಲ್ರೂ ಹೊಡೆದಾಟಕ್ಕೆ ಸಿದ್ಧರಾಗಿರುತ್ತಾರೆ.ಏಕೆಂದ್ರೆ ಕಳೆದ ಮೂರುನೂರು ವ‍‍ಷ್೯ಗಳಿಂದ ನಮ್ಮ್ ಪರಂಪರೆಯ ಕುರಿತು ಅಂತಹ ಒಂದು ತಪ್ಪುತಿಳುವಳಿಕೆಯನ್ನು ಕಟ್ಟಿಕೊಂಡು ಬಂದಿದ್ದೇವೆ.ಈಗಿನ ನಮ್ಮ ಸಮಥ೯ನೆಗೆ ನೂರಾರು ವಷ೯ಗಳೀಚಿನ ಯಾವುದೇ ಆಕರಗಳು ಪ್ರಮಾಣಆಗಲಾರವು.ಏಕೆಂದರೆ ಅವೆಲ್ಲವುಗಳೂ ಪಾಶ್ಚಾತ್ಯ ಹೇಳಿಕೆಗಳ ಪುನರುತ್ಪಾದನೆಗಳು.ನಮಗೆ ಗ್ರಂಥಗಳ ಪ್ರಮಾಣಬೇಡ.ಅನುಭವಗಳನ್ನ ಒರೆಗೆ ಹಚ್ಚುವಾ.ಅನುಭವಕ್ಕೆ ನಮ್ಮ ಹೃದಯ ತೆರೆದುಕೊಳ್ಳಬೇಕು.ಕೇವಲ ಚಿಂತನಾಪ್ರಪಂಚ ನಮ್ಮ ಅನುಭವವಲ್ಲ.ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಅಲ್ಲ.ಅದರ ಹಿಂದೆ ಇನ್ನೂ ಅಸಂಖ್ಯಾತ ಸತ್ಯಗಳಿರುತ್ತವೆ.ಅದನ್ನೇ ಸಂಸ್ಕ್ರತಿ ಅನ್ನುವುದು.ಅವು ಹೃದಯಕ್ಕೆಕಾಣುವ ಸತ್ಯಗಳು.ಅನ್ಯಥಾ ಭಾವಿಸಬೇಡಿ.ಈ ದೇಶದಲ್ಲಿ ಬ್ರಾಹ್ನಣರನ್ನು ಸಮಥಿ೯ಸಿ ಯಾರಿಗೂ ಏನೂ ಆಗಬೇಕಿಲ್ಲ.ಆದರೆ ಸತ್ಯವನ್ನುಮರೆಮಾಚುವುದರಿಂದ ಅಶಾಂತಿ ಮತ್ತು ಹಿಂಸೆಯಲ್ಲಿ ನರಳಬೇಕಾಗುತ್ತದೆ.ಮನುಷತ್ವ ಅನ್ನುವುದು ಭಾಷಣ ಅಲ್ಲ,ಅನುಭವ.ಬೇರೆಯವರ ಅನುಭವಗಳನ್ನು ನಾವು ಕಲ್ಹ್ಪಿಸುವುದು ಎಷ್ತು ಸಮಂಜಸ?

    ಉತ್ತರ
  16. ನವೆಂ 22 2011

    ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ, ಅಥವಾ ಪಂಡಿತರು ಸಾಮಾನ್ಯರಿಗೆ ವೇದದ ವಿಚಾರವನ್ನು ಸರಿಯಾಗಿ ತಿಳಿಸದೆ ಇದ್ದುದೇ ಇವೆಲ್ಲಾ ಅಚಾತುರ್ಯಕ್ಕೆ, ಅವಸ್ಥೆಗೆ ನಿಜವಾದ ಕಾರಣ. ಸಮಾಜವು ಪರಿವರ್ತನೆಯ ಹಾದಿಯಲ್ಲಂತೂ ಇದೆ. ಈಗಲಾದರೂ ವೇದದ ನಿಜಾರ್ಥವನ್ನು ಅರಿತರೆ ಮನುಷ್ಯ -ಮನುಷ್ಯನಲ್ಲಿ ದ್ವೇಷವು ಕಡಿಮೆಯಾದೀತು. ಕೆಳಗಿನ ಕೊಂಡಿಯಲ್ಲಿ ಉಪಉಕ್ತ ಮಾಹಿತಿ ಲಭ್ಯ.

    http://vedasudhe.blogspot.com/2010/10/blog-post.html

    http://vedasudhe.blogspot.com/2010/10/blog-post_05.html

    ಉತ್ತರ
    • ರವಿ ಕುಮಾರ್ ಜಿ ಬಿ
      ನವೆಂ 25 2011

      @hariharapurasridhar,

      ನೀವು ಹೇಳಿದ್ದು ಸರಿಯಾಗೇ ಇದೆ ,ಆದರೆ ಇಲ್ಲೊಂದು ಪ್ರಾಬ್ಲಮ್ ಇದೆ,ನೀವು ವೇದದ ನಿಜಾರ್ಥ ಕಲಿಸ ಹೊರಟ ಕೂಡಲೇ ನಿಮಗೆ ಪುರೋಹಿತಶಾಹಿ,ವೈದಿಕಶಾಹಿ,ದಲಿತ ವಿರೋಧಿ ಇತ್ಯಾದಿ ಹಣೆಪಟ್ಟಿ ಕಟ್ಟಿ,ದೊಡ್ಡ ಗುಲ್ಲೆಬ್ಬಿಸುತ್ತಾರೆ ! ಅವಾಗ ಏನು ಮಾಡುತ್ತೀರಿ?
      ನಾನು ಹೇಳುವುದು ಇಸ್ಟೇ ,ನಮ್ಮ ದೇಶದಲ್ಲಿ ಯಾವತ್ತಿಗೂ ಕೂಡ ವಿಶೇಷವಾಗಿ ಯೋಚಿಸುವವರನ್ನ ದೂಶಿಸಿಲ್ಲ , ಗಲ್ಲಿಗೆರಿಸಿಲ್ಲ ! ಎಲ್ಲರನ್ನೂ ಗೌರವದಿಂದ ನಡೆಸಿಕೊಂಡಿದ್ದೇವೆ. ಅಂತಹ ಅನಾದರಗಳು ಶೋಷಣೆ ಗಳು ಶುರು ಆಗುತ್ತಿರೋದು ಈಗಿನ ಕಾಲದಲ್ಲೇ.(ಸ್ವ ಘೋಷಿತ ಬುದ್ದಿಜೀವಿಗಳಿಂದ ! )

      ಉತ್ತರ
  17. Pranesh Katti
    ನವೆಂ 23 2011

    Look.. First of all It is Kaliyuga. Here asatya and adharma is going on rampage. Whether it is from Brahmins or other castes. Yes it is vedas and smruthis which says that, There is Varnashrama Dharma. Which should be followed strictly. Varna : Brahmana, Kshatriya, Vaishya and Shudra. All by birth. Aashrama – Sanyasi, Vaanaprasta, Gruhasta and Brahmachari. As per veda and purana in kaliyuga the two varnas i.e., Ksatriya and Vaishya will be vanished. Only Brahmana and Shudra will remain and it is a true fact now. These harijanas are not outside people. These people are kept outside because of their habit of eating meat, drinking of alchohal and other non-ritual acts. But in a now a days many of the people from Brahmins and shudras are doing the same. Now it is said that Henda kudiyuvavane Holeya. It is perfectly right. Because some brahmins the harijans were in trouble. But should not blame the whole brahmin community for the same.

    ಉತ್ತರ
  18. ರವಿ ಕುಮಾರ್ ಜಿ ಬಿ
    ನವೆಂ 25 2011

    ಈ ಚರ್ಚೆ ಚೆನ್ನಾಗಿ ಸಾಗಿದೆ. ಹೀಗೆ ಸಾಗಲಿ. ಇಲ್ಲಿ ಹಿಂದೆ ನಡೆದಿದ್ದ ಶೋಷ ಣೆ ಗಳಿಗೆ ಕಾರಣ ವಗಿರಬಹುದಾದ ಒಂದು ಅಂಶವನ್ನ ನನ್ನದೇ ಭಾಷೆಯಲ್ಲಿ ಹೇಳಲು ಇಚ್ಚಿಸುತ್ತೇನೆ, ಇಂತಹುದಕ್ಕೆ ಕರನವಗಿರೋದು ಎಲ್ಲರೂ ಅವರವರಿಗೆ ಅನಿಸಿದ್ದನ್ನು ಅವರವರಿಗೆ ತೋಚಿದಂತೆ ಹೇಳಿ ಸಮರ್ಥಿಸುತ್ತಾ ಬಂದರು , ಅದನ್ನೇ ವಿಮರ್ಶಿಸದೇ ನಿಜ ಎಂದು ನಂಬುವಂತೆ ಮಾಡಿದರು (ಬಲಾತ್ಕಾರದಿಂದ ಕೂಡ ). ಒಂದು ಉದಾಹರಣೆ ಈಗಿನ ಕಾಲದಲ್ಲೂ ಸಿಗುತ್ತದೆ ! ಇತ್ತೀಚಿಗೆ ನಮ್ಮ ಮಹಾನ್ ಲೇಖಕ ವೇಣು ರವರು ವಿಜಯಕರ್ನಾಟಕ ಪೇಪರ್ ನಲ್ಲಿ ಭಗವದ್ಗೀತೆ ಬಗ್ಗೆ ಒಂದು ಚರ್ಚೆಯಲ್ಲಿ , ಭಗವದ್ಗೀತೆ ದಲಿತ ವಿರೋಧಿ ಅನ್ನೋದಿಕ್ಕೆ ಕೊಟ್ಟ ಕಾರಣ ಮಾತ್ರ ವಿಚಿತ್ರ ಮತ್ತು ಹಾಸ್ಯಾಸ್ಪದ ಅದು ಏನೆಂದರೆ ” ಅಲ್ಲಿ ಹೇಳಿರುವ ಸ್ಲೋಕ ‘ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ ಅಂದರೆ ಕೆಲಸ ಮಾಡು ಸಂಬಳ ಕೊಡಬೇಡ ಅಂತ ಅರ್ಥವಂತೆ !’ ಹಾಗಾಗಿ ಅದು ದಲಿತ ವಿರೋಧಿ ಅಂತಾರೆ ಆ ಮಹಾಶಯರು ! ಅದನ್ನ ಅವರ ಅನುಯಾಯಿಗಳು ಸಮರ್ಥಿಸಿದ್ದೂ ಆಯಿತು ಪತ್ರಿಕೆ ಪ್ರಕಟಿಸಿದ್ದೂ ಆಯಿತು. ಅದೃಷ್ಟವಶಾತ್ ಹೆಚ್ಚಿನವರು ಅದಕ್ಕೆ ಅಷ್ಟು ಮಹತ್ವ ಕೊಡಲಿಲ್ಲ ,ನಮ್ಮ ಪುಣ್ಯ.! (ಯಾವನೇ ಅವಿವೆಕಿಯಲ್ಲಿ ಕೇಳಿದರೂ ಕೂಡ ಗೀತೆಯ ಆ ಶ್ಲೋಕದ ನಿಜವಾದ ಅರ್ಥ ಹೇಳುತ್ತಾರೆ ಬಿಡಿ)

    ಇಸ್ಟೆಲ್ಲಾ ಯಾಕೆ ಹೇಳಿದೆನೆಂದರೆ ಬ್ರಾಹ್ಮಣರ ದೂಷಿಸುವ ಈಗಿನ ಕ್ರಿಯೆಗೆ ಇಂತಹ ಮಹಾನ್ ವ್ಯಕ್ತಿಗಳು ಮಾಡಿದ ಅಹಮಿಕೆಗಳಿಂದ ಒಳಗೊಂಡ ಅರ್ಥೈಸುವಿಕೆ (ತಪ್ಪಾಗಿ) ಕೂಡಾ ಕಾರಣವಿರಬಹುದು. ಏನಂತೀರಿ?

    ಉತ್ತರ
  19. Purushottam Bhat
    ನವೆಂ 27 2011

    Excellant critics

    ಉತ್ತರ
  20. ramakrishna hosabettu
    ಡಿಸೆ 1 2011

    ನಿಮ್ಮ ಻ನಿಸಿಕೆ ತುಂಬಾ ಚೆನ್ನಾಗಿದೆ , ಆದರೆ ಒಂದು ವರ್ಗವನ್ನು ಮಾತ್ರ ಕೀಳಾಗಿ ಕಾಣುವುದು ಸರಿಯಲ್ಲ . If u start hating one Caste & highlight every thing in their name is no at all correct .

    ಉತ್ತರ
  21. Neetha
    ಡಿಸೆ 3 2011

    Probably I would have said this caste system is bullshit. Probably I would have also somehow agreed with the illogical argument that 1-2% of Indian population (read as Brahmins) exploited rest of the population all the time throughout history. But now that other so called backward castes have been availing reservation based on caste for over 60 years I ain’t gonna feel pity anyway for these so called backward castes.

    ಉತ್ತರ
  22. Neetha
    ಡಿಸೆ 3 2011

    While I completely disagree and hate public expression of caste-ism by so called upper castes, I also hate govt. sponsored caste-ism called reservation. By the way if a brahmin girl e.g. wants to marry a brahmin boy how’s it caste-ism? What do you call if a fair Dalit girl wants a fair boy as husband? Personal preference, isn’t it? Skin color, physical traits etc.. etc.. So better if Dalit leaders than cribbing about Brahmins or upper castes, enlighten their community to make best use of the opportunities govt. has provided. Should not preach so called upper castes what they should do in their private life. BTW if I was not allowed into a private Math or temple e.g., I (I as in my community) would establish a pvt religious place only meant for our community. serves as a stern message of self-respect.

    ಉತ್ತರ
  23. Neetha
    ಡಿಸೆ 3 2011

    Previous message was for someone who was saying something about Krishna Mutt of Udupi. It’s not a temple per se. Even Konkani Brahmins have their own Mutts and also so many other communities. They’ve their own set of rules inside their places. You wouldn’t say anything right? because they are not “Brahmins”? Get over this “Anti-Brahmin” obsession folks. It has not gotten you anywhere while it has not stopped Brahmins from prospering either (without any supplements from the govt. mind u).

    ಉತ್ತರ
  24. Neetha
    ಡಿಸೆ 3 2011

    It should have all ended when Indira Gandhi distributed land among all the lower class people no? Many atrocious upper class folks lost their lands back then. They are not the ruling class either in today Indian political scenario. But still that hasn’t stopped people from cribbing!!! Guess what it’s plain jealous I suppose, of not having been able to pull down Brahmins to utter ruin. BTW a word of consolation. UP has got huge % of Brahmins and their social indices are horrible. So celebrate that “anti-Brahmin” ranting folks.

    ಉತ್ತರ
  25. ಡಿಸೆ 12 2011

    hare raama

    ಉತ್ತರ
  26. shivappa
    ಡಿಸೆ 31 2017

    ಈ ರೀತಿ ವಿಚಾರಗಳು ದೇಶದ ಓಳಿತಿಗೆ ಸಹಾಕವಲ್ಲ. ಜಾತಿ ಜಾತಿಗಳನ್ನು ಎತ್ತುಕಟ್ಟುವ ರಾಜಕಾರಣಿಗಳಿಗೆ ಹೇಳಿಸಿದ ಭಾಷೆ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments