ವಿಷಯದ ವಿವರಗಳಿಗೆ ದಾಟಿರಿ

Recent Articles

10
ಜೂನ್

ಪಂಚ ಭೂತಗಳಲ್ಲಿ ಲೀನವಾದ ವಿಚಾರವಾದ! (ಸುಳ್ಸುದ್ದಿ)

-ಪ್ರವೀಣ್ ಕುಮಾರ್, ಮಾವಿನಕಾಡು

sulsuddi (2)ಖ್ಯಾತ ವಿಚಾರವಾದಿ, ಸಾಹಿತಿ, ಬುದ್ಧಿಜೀವಿ, ಹಿಂದೇ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದ ಹಿಂದೂಪುರ ದೇವಮೂರ್ತಿಯವರು ವಯೋಸಹಜ ಖಾಯಿಲೆಗಳ ಪರಿಣಾಮ ನಿನ್ನೆ ತಮ್ಮ ಸ್ವಗೃಹ ‘ದೇವಿ ಕೃಪಾ’ ದಲ್ಲಿ ಮೃತರಾದರು. ಅವರಿಗೆ ಎಪ್ಪತ್ಮೂರು ವರ್ಷ ವಯಸ್ಸಾಗಿತ್ತು. ಅವರು ಮುಜರಾಯಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅರುಣ್ ಜೋಸೆಫ್ ಮತ್ತು ಮಗಳು ದೇವಿಶ್ರೀ, ಅಳಿಯ ಅಮೆರಿಕಾದಲ್ಲಿ ಖ್ಯಾತ ಪುರೋಹಿತರಾಗಿರುವ ಕ್ರಿಷ್ ಭಟ್ ಮತ್ತು ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮತ್ತಷ್ಟು ಓದು »

9
ಜೂನ್

“ನೆಟ್ಟಿ”ಗೇರಿದ ಪಠ್ಯ @ ನೆತ್ತಿಗೇರುವುದೇ?

-ಸುದರ್ಶನ ರಾವ್

385-h_main-wಅಂತರ್ಜಾಲದಲ್ಲಿ ಕನ್ನಡ ಮಾಧ್ಯಮ ಶಾಲಾ ಪಠ್ಯಗಳು

ನಾವು ಶಾಲೆಯಲ್ಲಿ ಓದುತ್ತಿರುವಾಗ ಒಂದು ತರಗತಿಯಿಂದ  ಉತ್ತೀರ್ಣರಾಗಿ ಇನ್ನೊಂದು ತರಗತಿಗೆ ಹೋಗುವುದರ ಜೊತೆಗೆ ಮುಂದಿನ ತರಗತಿಯ ಪಠ್ಯ ಪುಸ್ತಕಗಳ ಬೇಟೆಯೂ ಶುರುವಾಗುತ್ತಿತ್ತು. ಏಪ್ರಿಲ್ ಹತ್ತನೇ ತಾರೀಖು ನಮ್ಮ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ಅಧಿಕೃತವಾಗಿ ಪಾಸಾಗಿದ್ದೇವೆಂದು ಘೋಷಣೆಯಾಗುತ್ತಿದ್ದಂತೆ ನಮಗಿಂತ  ಒಂದು ವರ್ಷ ಮುಂದಿನ ವಿದ್ಯಾರ್ಥಿಗಳೊಂದಿಗೆ ನಮ್ಮ ಮಾತುಕತೆ ಶಾಲಾ ಆವರಣದಲ್ಲೇ ಶುರುವಾಗುತ್ತಿತ್ತು. . ಮತ್ತಷ್ಟು ಓದು »

8
ಜೂನ್

ಸಾಮಾಜಿಕ ಪ್ರಜ್ಞೆ ಮತ್ತು ನಾವು

-ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

logo_world_conferenceಒಮ್ಮೆ ಹೀಗಾಯ್ತು, ಮನೆಗೆ ಬರುತ್ತಿರುವಾಗ ದಾರಿಯಲ್ಲಿ ನನ್ನ ಸ್ನೇಹಿತ ಜಗಳವಾಡಿದ. ಅವನ ಜಗಳಕ್ಕೂ ಕಾರಣವಿತ್ತು. ಮನೆಕಟ್ಟಿಸುತ್ತಿದ್ದ ಯಜಮಾನರೊಬ್ಬರು ರಸ್ತೆ ಬದಿಯ ಚರಂಡಿಗೆ ಮರಳು, ಜಲ್ಲಿಕಲ್ಲುಗಳನ್ನು ತುಂಬಿಬಿಟ್ಟಿದ್ದರು. ಕೊಳಚೆ ನೀರು ಹರಿದು ಹೋಗದೆ ಚರಂಡಿ ತುಂಬಿ ನಿಂತಿತ್ತು. ಅಂಥದ್ದೊಂದು ಘಟನೆ ಅವನ ಆಕ್ರೋಶಕ್ಕೆ ಕಾರಣವಾಗಿತ್ತು. ಚರಂಡಿಯಲ್ಲಿ ತುಂಬಿರುವ ಮರಳು ಮತ್ತು ಜಲ್ಲಿಕಲ್ಲುಗಳನ್ನು ಕೂಡಲೇ ತೆಗೆದುಹಾಕುವಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹೇಳಿದ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಯಜಮಾನರು ಮನೆ ಕೆಲಸ ಪೂರ್ಣಗೊಳ್ಳುವವರೆಗೆ ಅದು ಸಾಧ್ಯವಿಲ್ಲವೆಂದು ಬಿರುಸಾಗಿಯೇ ನುಡಿದರು. ಮಾತಿಗೆ ಮಾತು ಬೆಳೆಯಿತು. ಗಲಾಟೆ ಕೇಳಿ ಸುತ್ತಮುತ್ತಲಿನ ಮನೆಯವರು ಹೊರಗೆ ಬಂದರು. ಆಶ್ಚರ್ಯವೆಂದರೆ ಯಾರೊಬ್ಬರೂ ನನ್ನ ಗೆಳೆಯನ ಬೆಂಬಲಕ್ಕೆ ನಿಲ್ಲಲಿಲ್ಲ. ಅವನನ್ನೆ ವಿಚಿತ್ರ ಎನ್ನುವಂತೆ ನೋಡಿದರು. ಆದ ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಅಲ್ಲಿದ್ದ ಯಾರೊಬ್ಬರಲ್ಲೂ ಇರಲಿಲ್ಲ. ಅಷ್ಟಕ್ಕೂ ಅದು ತಪ್ಪೆಂದು ಜಗಳಕ್ಕೆ ನಿಂತವನು ಅಸಲಿಗೆ ಆ ಕಾಲೋನಿಯವನೂ ಆಗಿರಲಿಲ್ಲ. ಆ ನಿಂತ ನೀರಿನ ಪಕ್ಕದ ಮನೆಯೂ ಅವನದಾಗಿರಲಿಲ್ಲ. ಆದರೂ ಆ ಸಂದರ್ಭ ಅವನಲ್ಲಿನ ಸಾಮಾಜಿಕ ಪ್ರಜ್ಞೆ ಜಾಗೃತಗೊಂಡಿತ್ತು. ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದ. ಯಾರು ಸಮಸ್ಯೆಯ ಸಮೀಪದಲ್ಲಿದ್ದರೋ ಅವರಲ್ಲಿ ಮಾತ್ರ ಸಾಮಾಜಿಕ ಸಮಸ್ಯೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು. ಆದರೆ ಅದೇ ಜನ ಅಣ್ಣಾ ಹಜಾರೆ ಹೆಸರಿನ ಟೊಪ್ಪಿಗೆ ಧರಿಸಿ ಭೃಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದು ವ್ಯವಸ್ಥೆಯೊಂದರ ವ್ಯಂಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಮತ್ತಷ್ಟು ಓದು »

6
ಜೂನ್

ಶಂಕರಾಚಾರ್ಯರ ಕುರಿತು ವಿವೇಕಾನಂದರ ಧೋರಣೆಗಳು.

-ಚೈತನ್ಯ ಮಜಲುಕೋಡಿ

shankaracharya_new

ಶಂಕರರ ಕುರಿತು ಹಲವು ಬುದ್ಧಿಜೀವಿಗಳು ಅನುಸರಿಸಿರುವ ಏಕಮುಖ ಮತ್ತು ಛಿದ್ರಾನ್ವೇಷಣ ಮನಸ್ಥಿತಿಯ ಧೋರಣೆಯಲ್ಲಿ ಶಂಕರರೆಂದರೆ ವಿವೇಕಾನಂದರಿಗೆ ಅಲರ್ಜಿ ಎಂಬಂತೆ ಬಿಂಬಿಸಿಬಿಟ್ಟಿದ್ದಾರೆ. ಅಂತಹವರಿಂದಾಗಿ ನಮ್ಮಲ್ಲಿ ಯಾರು ಏನು ಬರೆದಿದ್ದಾರೆಂದು ಪೂರ್ತಿಯಾಗಿ ಅವಲೋಕಿಸುವ ಜಿಜ್ಞಾಸೆಯ ಆಸಕ್ತಿ ಮತ್ತೂ ಕಡಿಮೆಯಾಗಿಬಿಟ್ಟಿದೆ. ಪ್ರಸ್ತುತ ನಮಗೆ ವಿವೇಕಾನಂದರು ತಮ್ಮ ವಿಚಾರಗಳಲ್ಲಿ ಶಂಕರರ ಬಗ್ಗೆ ಯಾವ ರೀತಿಯ ಮನೋಭಾವ ಹೊಂದಿದ್ದರೆಂದು ಸಮಗ್ರವಾಗಿ ಅರಿಯಬೇಕಾದ್ದು ಮುಖ್ಯವಾದ ಕೆಲಸ. ತಮ್ಮ ಪ್ರಖರ ವಿದ್ವತ್ತಿನ ಸ್ವರೂಪದಿಂದ ಇಂದಿಗೂ ಈ ಆಚಾರ್ಯದ್ವಯರು ದೇದೀಪ್ಯಮಾನರಾಗಿ ಬೆಳಗುತ್ತಿದ್ದಾರೆ. ಸಾವಿರವಿವೇಕಾನಂದರು ಸೇರಿದರೆ ಒಬ್ಬರು ಶಂಕರಾಚಾರ್ಯರಾಗಬಹುದು ಎಂದು ಅವರ ಪಟ್ಟಶಿಷ್ಯೆ ಸಿಸ್ಟರ್ ನಿವೇದಿತಾ ಅವರೇ ಒಂದೆಡೆ ಹೇಳಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರು ಯಾವ ಸಂದರ್ಭಗಳಲ್ಲಿ ಏನೆಲ್ಲ ನುಡಿದಿದ್ದಾರೆ/ಬರೆದಿದ್ದಾರೆ ಎಂಬ ಹಿನ್ನೆಲೆ, ಶಂಕರರ ಬಗ್ಗೆ ಅವರಿಗೆ ದೊರಕಿರಬಹುದಾದ ಅಂಶಗಳು, ಅವರ ವೈಚಾರಿಕ ತುಲನೆ ಮತ್ತು ಧೋರಣೆ, ಶಂಕರಾಚಾರ್ಯರ ಬರವಣಿಗೆ ಮತ್ತು ಜೀವನ ಇವುಗಳ ಬಗ್ಗೆ ವಿವೇಕಾನಂದರ ವಿಚಾರಗಳೇನಿದ್ದವು ಎಂಬುದನ್ನ ನೋಡೋಣ. ಮತ್ತಷ್ಟು ಓದು »

5
ಜೂನ್

ಜೀವಮಾನದ ಸಿದ್ಧಿ ಮತ್ತು ಹದಿನೈದು ನಿಮಿಷಗಳ ಪ್ರಸಿದ್ಧಿ

– ರೋಹಿತ್ ಚಕ್ರತೀರ್ಥ
startup-pr-media-publicity1966ರಲ್ಲಿ ನಡೆದ ಸಣ್ಣ ಘಟನೆ ಅದು. ಆಂಡಿ ವಾರ್ಹಲ್ ಎಂಬ ಪ್ರಸಿದ್ಧ ಅಮೆರಿಕನ್ ಕಲಾವಿದನನ್ನು ನ್ಯಾಟ್ ಫಿಂಕಲ್‍ಸ್ಟೀನ್ ಎಂಬ ಫೋಟೋಗ್ರಾಫರ್ ಸೆರೆ ಹಿಡಿಯುತ್ತಿದ್ದಾಗ, ಆಂಡಿಯ ನೂರಾರು ಅಭಿಮಾನಿಗಳು ತಾವೂ ಕ್ಯಾಮೆರಾ ಫ್ರೇಮಿನಲ್ಲಿ ಬರಬೇಕೆಂದು ಆತನ ಹಿಂಬದಿಯಲ್ಲಿ ಮುಖ ತೂರಿಸುವುದೋ ಸುಮ್ಮಸುಮ್ಮನೆ ಅಡ್ಡ ಹಾಯುವುದೋ ಮಾಡುತ್ತಿದ್ದರಂತೆ. ಆಗ ಆಂಡಿ ನ್ಯಾಟ್‍ಗೆ “ನೋಡಯ್ಯ, ಪ್ರತಿಯೊಬ್ಬರೂ ಪ್ರಸಿದ್ಧರಾಗಲು ಬಯಸುತ್ತಿದ್ದಾರೆ” ಎಂದ. ನ್ಯಾಟ್, “ಹೌದು ಆಂಡಿ! ಹದಿನೈದು ನಿಮಿಷಗಳ ಪ್ರಸಿದ್ಧಿಗಾಗಿ!” ಎಂದುತ್ತರಿಸಿದ. ಹಾಗೆ ಅಕಸ್ಮಾತ್ತಾಗಿ ಹುಟ್ಟಿದ ಈ “ಹದಿನೈದು ನಿಮಿಷಗಳ ಪ್ರಸಿದ್ಧಿ” ಎಂಬ ಪಡೆನುಡಿ ಅಮೆರಿಕನ್ ಸಂಸ್ಕೃತಿಯಲ್ಲಿ ಹದಿನೈದು ನಿಮಿಷಗಳಲ್ಲ, ಹಲವು ವರ್ಷಗಳ ಕಾಲ ಪ್ರಸಿದ್ಧವಾಗಿ ಚಾಲ್ತಿಯಲ್ಲಿತ್ತು. ಜಗತ್ತಿನಲ್ಲಿ ಮೊದಲೆಲ್ಲ ದೇಶದ ರಾಜರಾಣಿಯರು ಮತ್ತು ಬೆರಳೆಣಿಕೆಯಷ್ಟು ಸಚಿವರನ್ನು ಬಿಟ್ಟರೆ ಬೇರಾರೂ ಪ್ರಸಿದ್ಧಿಯ ಉತ್ತುಂಗಕ್ಕೆ ಏರುತ್ತಿರಲಿಲ್ಲ. ರಾಜಕೀಯದ ಸೋಂಕಿಲ್ಲದೆ ಪ್ರಸಿದ್ಧಿಗೆ ಬರಬೇಕೆಂದರೆ ಒಂದೋ ಸಾಹಿತಿ/ಕಲಾವಿದನಾಗಬೇಕಿತ್ತು ಇಲ್ಲವೇ ವಿಜ್ಞಾನಿಯಾಗಬೇಕಿತ್ತು. ಎರಡೂ ಹತ್ತುಹಲವು ವರ್ಷಗಳ ಕಠಿಣ ಪರಿಶ್ರಮ, ತಪಸ್ಸುಗಳನ್ನು ಬೇಡುವ ಕೆಲಸಗಳು. ದಿನಬೆಳಗಾಗುವುದರಲ್ಲಿ ಪ್ರಸಿದ್ಧರಾದರು ಎಂದು ಹೇಳುವ ವ್ಯಕ್ತಿಗಳು ಕೂಡ ಅಂಥದೊಂದು ಪ್ರಸಿದ್ಧಿಗಾಗಿ ಹಲವು ವರ್ಷಗಳ ದಿನ-ರಾತ್ರಿಗಳನ್ನು ವ್ಯಯ ಮಾಡುತ್ತಿದ್ದರು. ಕಾಲ ಮುಂದುವರಿದಂತೆ, ಪತ್ರಿಕೆ ರೇಡಿಯೋ ಟಿವಿ ಸಿನೆಮ ಇತ್ಯಾದಿ ಹಲವು ಮಾಧ್ಯಮಗಳು ಬಂದವು. ಇಂಥ ಹಲವು ಆಯ್ಕೆಗಳು ಸುಲಭಸಾಧ್ಯವಾದ ಮೇಲೆ ಯೇನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವ ಎಂಬ ಧ್ಯೇಯಮಾರ್ಗದಲ್ಲಿ ನಡೆಯುವವರೂ ಹೆಚ್ಚಾದರು. ಶಾಶ್ವತ ಸಿದ್ಧಿ ಬಯಸುವವರಿಗಿಂತ ಇಂದೋ ಈ ವಾರವೋ ತಪ್ಪಿದರೆ ಈ ಒಂದು ತಿಂಗಳು ಚಲಾವಣೆಯಲ್ಲಿದ್ದರೆ ಸಾಕು ಎಂಬ ಮನೋಭಾವದವರು ಹೆಚ್ಚಾದರು. ಇವೆಲ್ಲವನ್ನು ಮುಂಚಿತವಾಗಿ ಊಹಿಸಿಯೇ “ಮುಂದೊಂದು ದಿನ ಜನ ಕೇವಲ ಹದಿನೈದು ನಿಮಿಷಗಳ ಪ್ರಸಿದ್ಧಿಯನ್ನಷ್ಟೇ ಪಡೆಯುವ ಸಂದರ್ಭ ಬರಬಹುದು” ಎಂಬರ್ಥದಲ್ಲಿ ನ್ಯಾಟ್ ಆ ಮಾತುಗಳನ್ನು ಹೇಳಿದ್ದ. ಮತ್ತಷ್ಟು ಓದು »

4
ಜೂನ್

ಕಾಗೆ ಮೇಲೆ ಎಸ್ಮಾಸ್ತ್ರ!

– ರಾಕೇಶ್ ಶೆಟ್ಟಿ

FB_IMG_1464857174666ಮೊನ್ನೆ ಮಟ ಮಟ ಮಧ್ಯಾಹ್ನ ಮುಖ್ಯಮಂತ್ರಿಗಳ ಕಾರಿನ ಮೇಲೆ ಕಾಗೆ ಕುಳಿತಿದ್ದು ಬ್ರೇಕಿಂಗ್ ನ್ಯೂಸ್ ಆಗಿ ಚಾನೆಲ್ಲುಗಳು ಕಾಕಾ ಪಂಡಿತರು,ತಜ್ಞರನ್ನೆಲ್ಲ ಕರೆಸಿ ಪಾನೆಲ್ ಡಿಸ್ಕಶನ್ನುಗಳನ್ನು ಮಾಡಿದರು.ಈ ಬಗ್ಗೆ ನಮ್ಮ ಸುಳ್ಸುದ್ದಿ ತಂಡ ಗಣ್ಯರ ಅಭಿಪ್ರಾಯ ಕೇಳಿದಾಗ ಸಿಕ್ಕಿದ್ದಿಷ್ಟು…

ಸುಳ್ಸುದ್ದಿ ತಂಡ ಮೊದಲಿಗೆ ಮುಖ್ಯಮಂತಿಗಳ ಬಳಿಯೇ ಅಭಿಪ್ರಾಯ ಕೇಳಿತು.
ಸುಳ್ಸುದ್ದಿ ಟೀಂ : ಸರ್, ನಿಮ್ಮ ಕಾರಿನ ಮೇಲೆ ಕಾಗೆ ಕುಳಿತಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮುಮಂ : ಆ ಕಾಗೆಗೆ ಮಾನ ಮರ್ಯಾದೆ ಇದೆಯೇನ್ರಿ? ಅದು ಪದ್ಮನಾಭನಗರದ ಹೆಡ್ಡಾಫೀಸಿನಿಂದ ಬಂದಿದ್ದೋ,ಮಲ್ಲೇಶ್ವರದ ಆಫೀಸಿನವರು ಹಾರಿಸಿದ್ದೋ ಎಂಬ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ.

ಸುಳ್ಸುದ್ದಿ ಟೀಂ : ತನಿಖೆ ನಡೆಸುವವರು ಯಾರು ಸರ್? ಅವರೇ ಪ್ರತಿಭಟನೆಗೆ ಇಳಿಯುವವರಿದ್ದರಲ್ಲಾ? ಇನ್ನು ಕಾಗೆ ಕೇಸ್ ಗತಿ ಏನು?
ಮುಮಂ : ಯಾರು ಪ್ರತಿಭಟನೆ ಮಾಡಲ್ಲ ಕಣ್ರಿ.ಅವರ ಮೇಲೆ ಎಸ್ಮಾಸ್ತ್ರ ಪ್ರಯೋಗಿಸಲು ಅಪ್ಪಣೆ ಕೊಡಿಸಿಲ್ವೇನ್ರಿ.ಈಗ ಅದನ್ನು ಕಾಗೆಯ ಮೇಲೂ ಬಳಸುವಂತೆ ಹೇಳುತ್ತೇನೆ.ಇಷ್ಟು ದಿನ ನೀವೆಲ್ಲ ವೈದಿಕರಿಂದ ಕಲಿತ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಅಂತ ಬಳಸ್ತಾ ಇದ್ರಿ.ಇನ್ಮುಂದೆ “ಕಾಗೆ ಮೇಲೆ ಎಸ್ಮಾಸ್ತ್ರ” ಅಂತ ಬಳಸ್ಕೊಳ್ರಿ.

ಸುಳ್ಸುದ್ದಿ : ಸರ್,ಕಾಗೆ ಮೇಲೆ ಎಸ್ಮಾಸ್ತ್ರನಾ!?
ಮುಮಂ : ಜಾಸ್ತಿ ಹಾರಾಡಿದ್ರೆ,ನಿಮ್ ಮೇಲೆ ಲೋಕಾಯುಕ್ತದ ಮೇಲೆ ಪ್ರಯೋಗಿಸಿದ “ಭಸ್ಮಾಸ್ತ್ರ” ಪ್ರಯೋಗಿಸಲಾಗುವುದು.

ಮತ್ತಷ್ಟು ಓದು »

4
ಜೂನ್

“ಚಪ್ಪಟೆ ಪಾದದ ಕನ್ನಡಿಗರು”

-ದೀಕ್ಷಿತ್ ಪೊಯ್ಯೆಕಂಡ
indian-airport“100 ಮೀಟರ್ ಓಟವನ್ನು 15 ಸೆಕೆಂಡುಗಳಲ್ಲಿ ಮುಗಿಸಬಹುದು ಬಿಡು ಮತ್ತೆ ಹಗ್ಗ ಹತ್ತೋದು ಕಂಬ ಹತ್ತೋದು ಕಷ್ಟ ಬಿಡು” ಎಂದು ಮಂಜು ವೈದ್ಯಕೀಯ ಪರೀಕ್ಷೆಯ ಬಳಿಕ ಕೊಚ್ಚಿಕೊಳ್ಳತೊಡಗಿದ. ನನ್ನದೇನೂ ಹೊರತಾಗಿರಲಿಲ್ಲ, “ಅಯ್ಯೋ ಮೆಡಿಕಲ್ ಹೆಂಗೂ ಆಯ್ತು ಇನ್ನು ಫಿಸಿಕಲ್ ಟೆಸ್ಟ್ ಹೇಗೆ ಪಾಸ್ ಮಾಡೊದಪ್ಪಾ” ಅನ್ನುತ್ತಾ ಜೊತೆಗಿದ್ದವರೊಂದಿಗೆ ಮಾತಿಗಿಳಿದೆ. ಮತ್ತೊಬ್ಬನದೂ ಅದೇ ರಾಗ. ನಮಗಿದ್ದ ಸಂತೋಷದ ವಿಷಯವೆಂದರೆ ಆ ದಿನ 8 ಮಂದಿ ಕನ್ನಡಿಗರು ಅಲ್ಲಿದ್ದೆವು. ಸರಿಸುಮಾರು ಮೂರು ಗಂಟೆ ಕಾದ ಬಳಿಕ ಮೆಡಿಕಲ್ ರಿಸಲ್ಟ್ ಬಂತು. ಅದನ್ನು ಹಿಡಿದುಕೊಂಡು ಬಂದ ಏರ್ಪೋರ್ಟ್ ಮುಖ್ಯಸ್ಥ “ನಾನು ರಿಜೆಕ್ಟ್ ಆದ ಅಭ್ಯರ್ಥಿಗಳ ಹೆಸರು ಮಾತ್ರ ಕರೆಯುತ್ತಿದ್ದೇನೆ’ ಎಂದು ಮಲಯಾಳಿ ಮಿಶ್ರಿತ ಆಂಗ್ಲ ಭಾಷೆಯಲ್ಲಿ ಓದತೊಡಗಿದ. ರಮೇಶ್.. ಸುರೇಶ್.. ಹೀಗೆ ಹೆಸರು ಕೇಳಿದಾಗ, ನನಗೇನೋ ಫೈವ್ ಸ್ಟಾರ್ ಜಾಹೀರಾತು ಕೇಳಿದಂತಾಗುತಿತ್ತು. ಉಫ್ ಅದೇನೋ ಎದೆಯಲಿ ಡವ ಡವ! ವರುಷಗಳ ಕನಸು. ಲಿಖಿತ ಪರೀಕ್ಷೆಯ ಬಳಿಕದ ತಯಾರಿ, ಬಯಲಲ್ಲಿ ಪಟ್ಟ ಕಷ್ಟ ಎಲ್ಲವೂ ನೆನಪಾಗುತಿದ್ದವು. ಒಂದೊಂದೇ ಹೆಸರನ್ನು ಕೇಳಿಸಿಕೊಳ್ಳುತ್ತಾ ಹೋದಂತೆ ಸಿಡಿಲು ಬಡಿದಂತೆ ದೀಕ್ಷಿತ್ ಕುಮಾರ್ ಅಂತ ಹೆಸರನ್ನೂ ಕೇಳಿಬಿಟ್ಟೆ. ಆಯ್ತು ನನ್ನ ಕನ್ನಂಬಾಡಿ ಕಟ್ಟೆ ಒಡೆದೋಯ್ತು. ಕಣ್ಣು ಮಂಜಾಗತೊಡಗಿತು. ನನ್ನ ಹೆಸರನ್ನೂ ಹೇಳಿಯೇಬಿಟ್ಟರು. ಈ ಕೆಲಸಕ್ಕಾಗಿ ಇನ್ನಿಲ್ಲದಂತೆ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗಿ ಹೋಯಿತು. ಮತ್ತೆ ಮಂಜು, ತ್ರಿಭುವನ್ ಹೀಗೇ ಮುಂದುವರಿದಿತ್ತು. ಅಷ್ಟೂ ಕನ್ನಡಿಗರ ಯಾತ್ರೆ ಮುಗಿದಿತ್ತು. ಕಾರಣ ಕೇಳಿದ್ರೆ, ನಮ್ಮದು ಚಪ್ಪಟೆ ಪಾದ ಅಂತೆ ! ಮತ್ತಷ್ಟು ಓದು »

3
ಜೂನ್

ನೋವ ಬಿತ್ತಿ ನಲಿವ ಬೆಳೆವ ವ್ಯವಸಾಯ !

– ನಾಗೇಶ ಮೈಸೂರು

sad-crying-boy-in-love-4ಅಲ್ಲಾ ಈ ನೋವು ಎನ್ನುವುದು ಎಂತಹ ವಿಚಿತ್ರ ಸರಕು ಅಂತೀನಿ ? ಬಡವ, ಬಲ್ಲಿದ ಅನ್ನದೇ ಎಲ್ಲರನ್ನು ಕಾಡೋ ಇದರ ಅಂತರ್ದರ್ಶನದ ಪರಿಚಯ ಎಲ್ಲರಿಗೂ ಇದ್ದರು ಯಾಕೋ ಇದರ ಪ್ರತ್ಯಕ್ಷ್ಯ ಸ್ವರೂಪ ದರ್ಶನ ಭಾಗ್ಯ ಯಾರಿಗೂ ಇದ್ದಂತಿಲ್ಲ. ಏನಾದರು ಏಟು ಬಿದ್ದು ಎಡವಟ್ಟಾದಾಗ ಕಣ್ಣಿಗೆ ಕಾಣಿಸಿಕೊಳ್ಳೊದು ಗಾಯ, ರಕ್ತ; ಕಾಣಿಸಿಕೊಳ್ಳದೆ ಅನುಭವಕ್ಕೆ ಮಾತ್ರ ನಿಲುಕೋದು ನೋವು. ಯಾರಾದರು ಮನಸಿಗೆ ಘಾಸಿ ಮಾಡಿದಾಗಲು ಅಷ್ಟೆ, ಮಾಡಿದವರು ಹಾಗು ಮಾಡಿದ ಘಟನೆಯನ್ನು ಕಾಣಬಹುದೇ ಹೊರತು ಅದುಂಟು ಮಾಡುವ ನೋವನ್ನಲ್ಲ. ಅದನ್ನು ಬರಿ ಅನುಭವಿಸಿಯೇ ತೀರಬೇಕು. ಹೋಗಲಿ ಬೇರೆಯವರಿಗೆ ಬೇಡಾ, ಅದನ್ನು ಅನುಭವಿಸುತ್ತಿರುವವರ ಕಣ್ಣಿಗಾದರೂ ಈ ನೋವು ಕಾಣಿಸಿಕೊಳ್ಳುತ್ತದೆಯೆ ? ಎಂದರೆ ಅದೂ ಇಲ್ಲ. ಬರಿ ಅನುಭವಗಮ್ಯ ಅಮೂರ್ತ ರೂಪಿ ಅಸ್ತಿತ್ವ ಈ ನೋವಿನದು. ಮತ್ತಷ್ಟು ಓದು »

1
ಜೂನ್

ಇಂದಿನವರೆಗೂ ಬುದ್ದಿಜೀವಿಗಳ ಬುದ್ಧಿ ನೆಟ್ಟಗಾಗಿಲ್ಲ. ಮುಂದಾದರೂ ಆದೀತಾ?

-ಶ್ರೀಕಾಂತ್ ಆಚಾರ್ಯ

1ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಈ ದೇಶದ ಅಷ್ಟೂ ಸವಲತ್ತನ್ನ ಚಪ್ಪರಿಸಿಕೊಂಡು ಅನುಭವಿಸಿದವರಿಂದ ಭಾರತದ ‘ಬರ್ಬಾದಿಗೆ’ ಜಂಗ್(?) ಶುರುವಾಯ್ತಲ್ಲ. ಆಶ್ಚರ್ಯ ಅನ್ನಿಸಿತಾ? ಬಹುಶಃ ಇರಲಿಕ್ಕಿಲ್ಲ. ಈ ದೊಂಬರಾಟಗಳನ್ನ ನಾವೆಲ್ಲಾ ಕಂಡವರೇ. ಬದುಕಿನಲ್ಲಿ ತನಗೊಂದು ‘ಐಡೆಂಟಿಟಿ’ಯೇ ಇಲ್ಲದೇ ಪರಿತಪಿಸುವ ಮಂದಿ ಬಹಳಷ್ಟು ಬಾರಿ ಹೀಗೆಲ್ಲ ಮಾಡಿಯೇ ಹೆಸರಿಗೆ ಬರೋದಿದೆ. ಹಾಗಂತ ಇವರನ್ನ ಅಸಡ್ಡೆ ಮಾಡಿ ಬದಿಗಿಡುವಂತಿಲ್ಲ. ಯಾಕೆಂದರೆ ಇವರೆಲ್ಲರ ಹೋರಾಟ ಇರೋದು ಕೆಟ್ಟದರ ಬಗ್ಗೆಯಲ್ಲ, ಈ ದೇಶಕ್ಯಾವುದೋ ಮಾರಕವಾಗಿದ್ದರೆ ಅದರ ಬಗ್ಗೆಯೂ ಅಲ್ಲ. ಇವರ ‘ಜಂಗ್’ ಇರೋದು ಈ ದೇಶದ ಸಮಗ್ರತೆಯ ಬಗ್ಗೆ. ಈ ದೇಶದ ಸನಾತನತೆಯ ಬಗ್ಗೆ. ಒಟ್ನಲ್ಲಿ ಈ ದೇಶದ ಬಗ್ಗೆಯೇ. ಇವೆಲ್ಲಾ ‘ಬುದ್ಧಿಮಾಂದ್ಯ’ ಜೀವಗಳಿಗೆ ಹೆಗಲಾಗಿ ನಿಂತು ಪೋಷಿಸುತ್ತಿರುವುದು ಇಲ್ಲಿನ ಬುದ್ಧಿ ಜೀವಿಗಳೆಂಬ ಅಡಕಸುಬಿಗಳು. ಅದಲ್ಲದೇ ಇನ್ನೇನು? ಮತಿ ತಪ್ಪಿದವ ಮಾಡಿದ ತಪ್ಪನ್ನ, ತಪ್ಪು ಅನ್ನೋದು ಬಿಟ್ಟು ಅವರೊಲ್ಲಬ್ಬರಾಗಿ ನಿಂತು ಗುರಾಣಿ ಹಿಡಿದು ಮತ್ತಷ್ಟು ಇನ್ನಷ್ಟು ಪ್ರಪಾತಕ್ಕೆ ಇಳಿಯೋಕೆ, ಎಳೆಯೋಕೆ ತಯಾರಾದರೆ? ಮತ್ತಷ್ಟು ಓದು »

31
ಮೇ

ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

12MPPATRICIATHOMAS_547728e“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ ಗುಡುಗು ಸಿಡಿಲುಗಳಿಲ್ಲದ ಮಳೆಯನ್ನು ಬಯಸುವವರು. ಇವರಿಗೆ ಸಾಗರದ ಸಂಪತ್ತು ಬೇಕು, ಅದರೊಳಗಿನ ಉಪ್ಪುನೀರು, ಅಲೆಗಳ ಅಬ್ಬರ ಬೇಕಿಲ್ಲ. ಬದುಕಿನ ಸಂಘರ್ಷವೆನ್ನುವುದು ನೈತಿಕವಾಗಿರಬಹುದು, ದೈಹಿಕವಾಗಿರಬಹುದು ಅಥವಾ ಇವೆರಡರ ಮಿಶ್ರಣವೂ ಆಗಿರಬಹುದು. ಆದರೆ ಬದುಕಿನ ಅಭಿವೃದ್ಧಿಗೆ ಸಂಘರ್ಷವಂತೂ ಬೇಕೇ ಬೇಕು” ಎಂದು ಭಾವುಕವಾಗಿ ನುಡಿಯುತ್ತಾನೆ ಆಫ್ರೋ ಅಮೇರಿಕನ್ ಸಮಾಜ ಸುಧಾರಕ ಮತ್ತು ಲೇಖಕ ಫ್ರೆಡ್ರಿಕ್ ಡಗ್ಲಾಸ್. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ ನಮ್ಮ ಕಣ್ಣಿಗೆ ಬೀಳದ ಅಗೋಚರವಾದ ಹೋರಾಟವೊಂದಿರುತ್ತದೆ. ಸಾಧನೆಯ ಶಿಖರದ ಶೃಂಗದಲ್ಲಿ ನಿಂತ ಸಾಧಕನ ಚಿತ್ರ ನಮ್ಮೆದುರಿಗೆ ಕಾಣುತ್ತದೆ. ಆದರೆ ಅಂಥದ್ದೊಂದು ಶಿಖರದ ತುತ್ತ ತುದಿಗೆರಲು ಆತ ಪಟ್ಟ ಶ್ರಮ ನಮ್ಮೆದುರಿಗಿರುವುದಿಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಏಟು ತಿಂದವರೇ, ಆದರೆ ಬಿದ್ದ ಏಟಿನಿಂದ ವಿಚಲಿತರಾಗದೇ ಮುನ್ನುಗ್ಗುವವರು ಮಾತ್ರ ಸಾಧಕರಾಗಲು ಸಾಧ್ಯ. ಹಾಗೆ ಬದುಕಿನ ಪ್ರತಿಕ್ಷಣವೂ ಪೆಟ್ಟುತಿನ್ನುತ್ತಲೇ ಬಂದಿದ್ದರೂ, ಸಾಧನೆಯ ಶಿಖರವನ್ನೇರಿ ನಿಂತ ಪೆಟ್ರಿಶಿಯಾ ನಾರಾಯಣ ಎನ್ನುವ ದಿಟ್ಟ ತಮಿಳರ ಹೆಣ್ಣುಮಗಳ ಕತೆಯನ್ನು ಇಂದು ನಿಮಗೆ ಹೇಳಲು ಹೊರಟಿದ್ದೇನೆ. ಮತ್ತಷ್ಟು ಓದು »