ಸುಳ್ಸುದ್ದಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿವಾದಕ್ಕೆ ಅನಿರೀಕ್ಷಿತ ತಿರುವು
– ಪ್ರವೀಣ್ ಕುಮಾರ್ ಮಾವಿನಕಾಡು
ಸೂರ್ಯ ನಮಸ್ಕಾರವನ್ನು ಮಾಡಿಯೇ ತೀರುತ್ತೇವೆ:ಅಸಾದುದ್ದೀನ್ ಒವೈಸಿ
ನವದೆಹಲಿ: ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಭಾನುವಾರ ರಜೆ ದಿನದಂದು ಕಡ್ಡಾಯವಾಗಿ ಉರ್ದು ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳು ತೆರೆದಿದ್ದು, ಅಂದು ಬೆಳಗ್ಗೆ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂಬ ಸರ್ಕಾರದ ಆದೇಶಕ್ಕೆ ಹಲವಾರು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ವಿಶ್ವಹಿಂದೂ ಪರಿಷತ್,ಅಖಿಲ ಭಾರತೀಯ ಹಿಂದೂ ಮಹಾ ಸಭಾ,ಶ್ರೀರಾಮ ಸೇನೆ ಮೊದಲಾದ ಸಂಘಟನೆಗಳ ಮುಖಂಡರು ಸರಕಾರದ ಈ ಆದೇಶವು ನಮ್ಮ ಧಾರ್ಮಿಕ ನಂಬಿಕೆಗಳನ್ನು ಇತರ ಧರ್ಮದವರು ದುರುಪಯೋಗಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇತರ ಧರ್ಮದವರು ಏಕೇಶ್ವರವಾದಿಗಳಾಗಿದ್ದು, ಅವರುಗಳು ಕೇವಲ ಆ ದೇವರ ಎದುರು ಮಾತ್ರ ಬಾಗುತ್ತಾರೆ. ಆದ್ದರಿಂದ ನಾವು ದೇವರೆಂದು ಭಾವಿಸುವ ಸೂರ್ಯದೇವರಿಗೆ ಇತರ ಧರ್ಮದವರು ನಮಸ್ಕಾರ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಎದುರು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ರವರು, ಹಿಂದೂಗಳಲ್ಲದವರು ಸೂರ್ಯ ನಮಸ್ಕಾರ ಮಾಡುವುದನ್ನು ನಾವೆಂದಿಗೂ ಸಹಿಸಲು ಸಾಧ್ಯವಿಲ್ಲ ಎಂದರು.
ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಹಿಂದೂಗಳು ಮಾತ್ರ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ಓದು 
ನಾಡು-ನುಡಿ ಮರುಚಿಂತನೆ : ಹಿಂದೂ ಧರ್ಮ ಇಲ್ಲದಿದ್ದರೆ ಬಹುಸಂಖ್ಯಾತರು ಯಾರು?
– ರಾಜಾರಾಮ ಹೆಗಡೆ
ಇತ್ತೀಚೆಗೆ ಲಿಂಗಾಯತ ಮಠಾಧೀಶರೊಬ್ಬರು ‘ಹಿಂದೂ ಧರ್ಮ ಇಲ್ಲ ಏಕೆಂದರೆ ಹಿಂದೂಗಳು ಸಾವಿರಾರು ದೇವತೆಗಳನ್ನು ಪೂಜಿಸುತ್ತಾರೆ, ಹಾಗಾಗಿ ವೀರಶೈವರು ಹಿಂದೂಗಳಲ್ಲ, ವೀರಶೈವರು ಒಬ್ಬನೇ ದೇವತೆಯನ್ನು ಪೂಜಿಸುತ್ತಾರೆ ಹಾಗಾಗಿ ಅವರದು ಪ್ರತ್ಯೇಕ ಧರ್ಮ’ ಎಂಬ ಹೇಳಿಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ ಮಠಾಧೀಶರೊಬ್ಬರು ‘ಹಿಂದೂಗಳು ಪೂಜಿಸುವ ಶಿವ ಹಾಗೂ ಲಿಂಗಾಯತರ ಶಿವ ಒಂದೇ ಆಗಿರುವುದರಿಂದ ಅವರೂ ಹಿಂದೂ ಧರ್ಮಕ್ಕೆ ಸೇರಿದ್ದಾರೆ’ ಎಂದರು. ಇವರೆಲ್ಲ ದೇವತೆಗಳನ್ನು ಹಾಗೂ ಧರ್ಮವನ್ನು ಸಮೀಕರಿಸುತ್ತ ತಮ್ಮ ವಾದವನ್ನು ಮಂಡಿಸುತ್ತಿರುವುದು ಕುತೂಹಲಕಾರಿಯಾಗಿದೆ. ನಮ್ಮ ಇತಿಹಾಸ ಪುರಾಣಾದಿಗಳಲ್ಲಿ ಧರ್ಮದ ಕುರಿತು ಎಷ್ಟೊಂದು ಜಿಜ್ಞಾಸೆಗಳಿವೆಯಾದರೂ ಅದರ ನಿರ್ಣಯಕ್ಕೆ ದೇವತೆಗಳನ್ನು ಯಾರೂ ಕರೆದು ತಂದಿಲ್ಲ. ಹಾಗಾದರೆ ನಮ್ಮ ಮಠಾಧೀಶರುಗಳೆಲ್ಲ ನಡೆಸುತ್ತಿರುವ ಚರ್ಚೆ ಏನು?
ನಾವು ಧರ್ಮ ಎಂಬ ಶಬ್ದವನ್ನು ಇಂಗ್ಲೀಷಿನ ರಿಲಿಜನ್ ಎಂಬ ಶಬ್ದದ ಭಾಷಾಂತರವಾಗಿ ಬಳಸುತ್ತೇವೆ. ಜ್ಯೂಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂಗಳು ಮಾತ್ರವೇ ರಿಲಿಜನ್ನುಗಳು. ಅವರಿಗೆ ಈ ಪ್ರಪಂಚವನ್ನು ಹಾಗೂ ಮನುಷ್ಯರನ್ನು ಸೃಷ್ಟಿಸಿದ ತಂತಮ್ಮ ದೇವನು ಒಬ್ಬನೇ ಸತ್ಯ. ಅವನ ಆಜ್ಞೆಯನ್ನು ಉಲ್ಲಂಘಿಸಿದ ಪಾಪಕ್ಕಾಗಿ ಅವನಿಂದ ಅಭಿಶಪ್ತರಾಗಿ ಮನುಷ್ಯರೆಲ್ಲ ಅವನ ಲೋಕದಿಂದ ಭೂಮಿಗೆ ಬಿದ್ದರು, ಇಂಥ ಮನುಷ್ಯರು ತಮ್ಮ ಪಾಪವನ್ನು ಕಳೆದುಕೊಂಡು ಮರಳಿ ದೇವನ ಲೋಕವನ್ನು ಸೇರುವ ಮಾರ್ಗವೇ ರಿಲಿಜನ್ನು. ಈ ಸಂಗತಿಯನ್ನು ಸತ್ಯದೇವನು ಸ್ವತಃ ಆಯಾ ರಿಲಿಜನ್ನಿನ ಒಬ್ಬ ಪ್ರವಾದಿಗೆ ತಿಳಿಸಿದ್ದಾನೆ ಹಾಗೂ ಅದನ್ನಾಧರಿಸಿ ಅವರ ಪವಿತ್ರ ಗ್ರಂಥ ರೂಪುಗೊಂಡಿದೆ. ಈ ಗ್ರಂಥಗಳ ವಾಕ್ಯಗಳು ಆಯಾ ರಿಲಿಜನ್ನಿನ ಅನುಯಾಯಿಗಳ ಕ್ರಿಯೆಗಳಿಗೆ ಆಧಾರವಾಗಿರುತ್ತವೆ.
ಯೋಗದಿನಕ್ಕಾಗಿ ಮೋದಿ ಸರಕಾರದ ವಿಶೇಷ ಶವಾಸನ
– ರೋಹಿತ್ ಚಕ್ರತೀರ್ಥ
ನಮ್ಮ ದೇಶ ಜಾತ್ಯತೀತ ದೇಶ. ಆದರೆ ಹೆಜ್ಜೆಹೆಜ್ಜೆಗೂ ನಿಮಗಿಲ್ಲಿ ನಿಮ್ಮ ಜಾತಿಯ ನೆನಪು ಅಳಿಯದಂತೆ ನೋಡಿಕೊಳ್ಳಲಾಗುತ್ತದೆ. ಶಾಲೆಗೆ ಸೇರುವ ಮೊದಲ ದಿನ ಅಡ್ಮಿಷನ್ ಮಾಡಿಕೊಳ್ಳುವ ಮುಖ್ಯೋಪಾಧ್ಯಾಯರು ಹೆಸರು, ಅಪ್ಪನ ಹೆಸರು, ಜಾತಿ ಎಂದು ಬರೆದ ಅಪ್ಲಿಕೇಶನ್ನನ್ನು ಕಣ್ಣಮುಂದೆ ಹಿಡಿಯುತ್ತಾರೆ. ಪರೀಕ್ಷೆ ಬರೆಯಲು ಅರ್ಜಿ ತುಂಬುವಾಗ ಯಾವ ಜಾತಿ ಎಂದು ಕೆದಕಿ ವಿಚಾರಿಸಿಕೊಂಡು ನೀವು ಕಟ್ಟಬೇಕಾದ ಫೀಸು ನಿರ್ಧರಿಸುತ್ತಾರೆ. ಕೆಲಸಕ್ಕೆ ಹೋಗುವಾಗ ನಿಮ್ಮ ಪದವಿ ಸರ್ಟಿಫಿಕೇಟು ಯಾರಿಗೆ ಬೇಕು ಸ್ವಾಮಿ! ನಾಯಿಯೂ ಮೂಸುವುದಿಲ್ಲ ಅದನ್ನು! ನೀವು ಯಾವ ಜಾತಿ ಹೇಳಿ, ಅದರ ಆಧಾರದ ಮೇಲೆ ನಿಮಗೆ ಕೆಲಸ ಸಿಗುತ್ತದೋ ಇಲ್ಲವೋ ಎನ್ನುವುದು ನಿರ್ಧಾರಿತವಾಗುತ್ತದೆ. ಈ ದೇಶದಲ್ಲಿ ಶಿಕ್ಷಣ, ಉದ್ಯೋಗ, ಮದುವೆ, ಮುಂಜಿ, ಸಾವು, ತಿಥಿಗಳೆಲ್ಲ ನಿರ್ಧಾರವಾಗುವುದು ನಿಮ್ಮ ಜಾತಿಯ ಮೇಲೆ. ಯಾಕೆಂದರೆ ನಾವು ಬದುಕುತ್ತಿರುವುದು ಜಾತ್ಯತೀತ ದೇಶದಲ್ಲಿ ನೋಡಿ!
ಜೂನ್ 21ರಂದು ವಿಶ್ವ ಯೋಗದಿನ ಆಚರಿಸಬೇಕು ಎಂದು ನಮ್ಮ ದೇಶದ ಪ್ರಧಾನಿ ಕರೆಕೊಟ್ಟರು. ಅವರು ಅಲ್ಲಿ ಅದನ್ನು ಹೇಳಿ ಮುಗಿಸಿದ್ದರೋ ಇಲ್ಲವೋ ಇತ್ತ ಜಾತ್ಯತೀತ ಕೋಮುಸೌಹಾರ್ದ ಬಳಗದ ಬುಜೀಗಳಿಗೆ ಕಡಿತ ಶುರುವಾಯಿತು. ಈ ಮೋದಿ ಮಹಾ ಜಾತೀವಾದಿ. ಹಿಂದೂಗಳ ಯೋಗವನ್ನು ಸನಾತನಿಗಳಂತೆಯೇ ಜಾತಿಧರ್ಮಗಳಿಗೆ ಅತೀತರಾದ ಪ್ರಗತಿಪರ ಅಲ್ಪಸಂಖ್ಯಾಕ ಪಂಗಡಗಳಿಗೂ ವಿಸ್ತರಿಸುವ ಯೋಜನೆ ಹಾಕಿದ್ದಾರೆ ಎಂದು ಅವರಿಗೆ ಗುಮಾನಿ ಬಂತು. ಅಷ್ಟಲ್ಲದೆ ಜೂನ್ ಇಪ್ಪತ್ತೊಂದು – ಮುಸ್ಲಿಮರ ಹಬ್ಬ ಬೇರೆ. ಹೋಗಿಹೋಗಿ ಆ ದಿನ ಯೋಗ ಮಾಡುವುದೇ? ಸಾಧ್ಯವೇ ಇಲ್ಲ ಎಂದು ಈ ಅಲ್ಪಸಂಖ್ಯಾತ ಮತದ ನಾಯಕ ಓವೈಸಿ ಕೂಗಿದ. ಅವನ ಹಿಂದೆ ಅವನ ಇಡೀ ಗಾಂಪರ ಗುಂಪೇ ಎದ್ದುನಿಲ್ಲುವ ಸೂಚನೆ ಸಿಕ್ಕಿತು. ಕೇಂದ್ರ ಸರಕಾರ ಈಗ ನಿಜವಾಗಿಯೂ ಇಲ್ಲದ ಇಕ್ಕಳದಲ್ಲಿ ತಲೆ ಸಿಕ್ಕಿಸಿಕೊಂಡಿದ್ದೇನೆಂದು ಸುಳ್ಳೇ ಭಾವಿಸಿ ನಡುಗಿತು. ಯೋಗದಿನ ಮಾಡೋಣ, ಆದರೆ ಸೂರ್ಯನಮಸ್ಕಾರ ಕೈಬಿಡೋಣ ಎಂದು ಠರಾವು ಮಂಡಿಸಿತು. ಮೋದಿ ಹೇಳಿಕೊಟ್ಟಂತೆ ಅವರ ಸರಕಾರದ ಎಲ್ಲ ಮಂತ್ರಿಗಳೂ “ಸೂರ್ಯನಮಸ್ಕಾರ ಕಠಿಣ ಆಸನ. ಹಾಗಾಗಿ, ಅದನ್ನು ಬಿಟ್ಟು ಮಿಕ್ಕಿದ್ದನ್ನು ಮಾಡಲು ಚಿಂತನೆ ನಡೆಸಿದ್ದೇವೆ” ಎಂದು ತಿಪ್ಪೆ ಸಾರಿಸಿದರು.
ಮತ್ತಷ್ಟು ಓದು 
ನಿಜಕ್ಕೂ ಮನುಷ್ಯನಿಗಿರುವುದು ಸಾವಿನೆಡೆಗಿನ ಭಯವಲ್ಲ….
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ನಿಮಗೊ೦ದು ಕತೆಯನ್ನು ಹೇಳುತ್ತೇನೆ ಕೇಳಿ.ಯುವಜನತೆಯ ದಾರಿ ತಪ್ಪಿಸುತ್ತಿದ್ದಾನೆ೦ಬ ಕಾರಣಕ್ಕೆ,ಜನಮಾನಸದಲ್ಲಿ ಭದ್ರವಾಗಿ ತಳವೂರಿರುವ ನ೦ಬಿಕೆಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾನೆ೦ಬ ಕಾರಣಕ್ಕೆ ಅಥೆನ್ಸಿನ ನ್ಯಾಯಾಧೀಶರು ದಾರ್ಶನಿಕ ಸಾಕ್ರಟೀಸ್ ನಿಗೆ ಮರಣದ೦ಡನೆಯನ್ನು ವಿಧಿಸಿದರು.ಆತನಿಗೆ ’ಹೆಮ್ಲಾಕ್’ ಎನ್ನುವ ಸಸ್ಯಜನ್ಯ ವಿಷವನ್ನುಣಿಸಿ ಆತನನ್ನು ಕೊಲ್ಲಬೇಕೆ೦ದು ತೀರ್ಪು ನೀಡಲಾಗಿತ್ತು.ಹೆಮ್ಲಾಕ್ ಒ೦ದು ವಿಚಿತ್ರ ಬಗೆಯ ವಿಷ.ಕುಡಿದಾಕ್ಷಣ ಒಮ್ಮೆಲೆ ಕೊಲ್ಲುವ ಸೈನೈಡಿನ೦ತಹ ವಿಷವಲ್ಲವದು.ಸೇವಿಸಿದವನ ಒ೦ದೊ೦ದೇ ಅ೦ಗವನ್ನು ನಿಧಾನಗತಿಯಲ್ಲಿ ಕಬಳಿಸುತ್ತ ಅವನನ್ನು ಸ೦ಪೂರ್ಣವಾಗಿ ನಿಷ್ಕ್ರ್ರಿಯಗೊಳಿಸುವ ಹೆಬ್ಬಾವಿನ೦ತಹ ನಿಧಾನಪಾಷಾಣ.ಶಿಕ್ಷೆ ಜಾರಿಯಾದ ದಿನದ೦ದು ಚೂರೇ ಚೂರು ಹಿ೦ಜರಿಕೆಯಿಲ್ಲದೆ ಹೆಮ್ಲಾಕ್ ಎನ್ನುವ ನ೦ಜನ್ನು ನ೦ಜು೦ಡನ೦ತೇ ಗಟಗಟನೇ ಹೀರಿಬಿಟ್ಟಿದ್ದ ಸಾಕ್ರಟೀಸ್.ಅದರೆ ಆತನ ಸುತ್ತ ಕುಳಿತಿದ್ದ ಶಿಷ್ಯ೦ದಿರ ದು:ಖ ಮಾತ್ರ ಹೇಳತೀರದು.ಅದು ಸಹಜವೇ ಬಿಡಿ.ನೆಚ್ಚಿನ ಗುರು ಕಣ್ಣೆದುರೇ ಮರಣಶಯ್ಯೆಯಲ್ಲಿರುವಾಗ ಯಾರಿಗೆ ತಾನೇ ದು:ಖ ಉಮ್ಮಳಿಸದಿದ್ದೀತು?
ವಿಚಿತ್ರವೆ೦ದರೆ ತನ್ನ ಸಾವಿನ ಬಗ್ಗೆ ಸ್ವತ: ಸಾಕ್ರೆಟಿಸ್ ನದು ನಿರ್ವಿಕಾರ ಭಾವ.ಆಗೊಮ್ಮೆ ಈಗೊಮ್ಮೆ ಚಿಕ್ಕದೊ೦ದು ಮ೦ದಹಾಸ.ಕೆಲವೇ ಕ್ಷಣಗಳಲ್ಲಿ ಇಹಲೋಕವನ್ನು ತ್ಯಜಿಸಲಿರುವ ವ್ಯಕ್ತಿಯೊಬ್ಬನ ಮುಖದಲ್ಲಿ ಕ೦ಡುಬರುವ ಸಹಜ ಆತ೦ಕದ ಎಳೆಗಳೂ ಸಹ ಸಾಕ್ರೆಟಿಸ್ ನ ಮುಖದಲ್ಲಿ ಕಾಣುತ್ತಿರಲಿಲ್ಲ. ಬದಲಾಗಿ ಪಕ್ಕದಲ್ಲಿ ಕುಳಿತು ಕಣ್ಣೀರಾಗುತ್ತಿದ್ದ ತನ್ನ ಶಿಷ್ಯವೃ೦ದವನ್ನು ಆತ ಮೃದುವಾಗಿ ಗದರಿಕೊ೦ಡ.’ಸುಮ್ಮನಿರಿ ಹುಚ್ಚರೇ..!! ಏಕೆ ಅಳುತ್ತಿರುವಿರಿ? ಏಕಿಷ್ಟು ದು:ಖ ನಿಮಗೆ? ಬದುಕಿದ್ದಷ್ಟೂ ಕಾಲ ನಾನು ನನ್ನ ಜೀವನವನ್ನು ಸ೦ಪೂರ್ಣವಾಗಿ ಬದುಕಿದ್ದೇನೆ.ಉತ್ಕಟ ಬಾಳು ಸವೆಸಿದ ಅದ್ಭುತ ತೃಪ್ತಿ ನನ್ನಲ್ಲಿದೆ.ಹಾಗಾಗಿ ಈಗ ನಾನು ಸಾವನ್ನು ಎದುರುಗೊಳ್ಳಲು ಕಾತುರನಾಗಿದ್ದೇನೆ.ಅತ್ಯ೦ತ ಗೌರವದಿ೦ದ,ಪ್ರೀತಿಯಿ೦ದ ನಾನು ಸಾವನ್ನು ಬರಮಾಡಿಕೊಳ್ಳಲು ಬಯಸುತ್ತಿದ್ದೇನೆ.ಇನ್ನೇನು ಕೆಲವೇ ಕ್ಷಣಗಳಲ್ಲಿ ಜೀವನದ ಮಗದೊ೦ದು ಪರಮ ರಹಸ್ಯದ ಉತ್ತರ ನನಗೆ ಸಿಗಲಿದೆ ಎನ್ನುವ ಸ೦ತಸ ನನಗಿದೆ’ ಎ೦ದು ನುಡಿದ ಸಾಕ್ರೆಟಿಸನ ಮಾತುಗಳಿಗೆ ಬೆರಗಾಗುವ ಸರದಿ ಆತನ ಶಿಷ್ಯ೦ದಿರದ್ದು.ಸಾವನ್ನು ಸಹ ಹೀಗೆ ಸ೦ತಸದಿ೦ದ ಬರಮಾಡಿಕೊಳ್ಳುತ್ತಿರುವ ವ್ಯಕ್ತಿಯನ್ನು ಅವರೆ೦ದೂ ಕ೦ಡಿರಲಿಲ್ಲ. ಕುತೂಹಲ ತಡೆಯಲಾಗದೇ ’ಗುರುಗಳೇ, ಇನ್ನೆನು ಕೆಲವೇ ಕ್ಷಣಗಳಲ್ಲಿ ನೀವು ಮರಣವನ್ನಪ್ಪಲಿದ್ದೀರಿ.ಆದರೂ ನಿಮ್ಮ ಮುಖದಲ್ಲೊ೦ದು ಸ೦ತಸವಿದೆ.ಎ೦ದಿನ ಮ೦ದಹಾಸವಿದೆ.ಇದು ಹೇಗೆ ಸಾಧ್ಯ?ನಿಮಗೆ ಸಾವೆ೦ದರೇ ಭಯವೇ ಇಲ್ಲವೇ’? ಎ೦ದೊಬ್ಬ ಶಿಷ್ಯ ಕೇಳಿಯೇ ಬಿಟ್ಟ ಸಾಕ್ರೆಟಿಸ್ ನನ್ನು.
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨
– ವಿನಾಯಕ ಹಂಪಿಹೊಳಿ
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
ರಿಲಿಜನ್ನುಗಳಲ್ಲಿ ತರ್ಕಕ್ಕೆ ನಂಬಿಕೆಯ ನಂತರದ ಸ್ಥಾನವಿದೆ. ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ. ನಂಬಿಕೆಗೂ ತರ್ಕಕ್ಕೂ ವಿರೋಧಾಭಾಸವಿದ್ದಲ್ಲಿ ನಂಬಿಕೆಯೇ ಸತ್ಯ. ತರ್ಕಕ್ಕೆ ಅಲ್ಲಿ ಜಾಗವಿಲ್ಲ. ತರ್ಕದಿಂದ ಭಗವಂತನ ದರ್ಶನವೂ ಆಗುವದಿಲ್ಲ ಮತ್ತು ತರ್ಕದಿಂದ ಸ್ವರ್ಗಪ್ರಾಪ್ತಿಯೂ ಇಲ್ಲ. ತರ್ಕವೇನಿದ್ದರೂ, ಉಳಿದ ರಿಲಿಜನ್ನುಗಳಿಗಿಂತ ತಮ್ಮ ರಿಲಿಜನ್ನು ಹೇಗೆ ಶ್ರೇಷ್ಠ ಎಂಬುದನ್ನು ತೋರಿಸಲು, ಮತ್ತು ತಮ್ಮ ರಿಲಿಜನ್ನುಗಳ ಮೂಲ ಕಲ್ಪನೆಗಳು ಮಾತ್ರ ಪರಮ ಸತ್ಯ ಎಂದು ಸಾಬೀತು ಪಡಿಸಲು ಅಷ್ಟೇ. ಉದಾಹರಣೆಗಾಗಿ ದೇವನು ಒಬ್ಬನೇ ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ನಂಬುತ್ತವೆ. ಮತ್ತು ಅದಕ್ಕೆ ಸಾಕಷ್ಟು ತರ್ಕಗಳನ್ನೂ ನೀಡುತ್ತವೆ. ಆದರೆ ದೇವನ ನಾಮ ಮತ್ತು ಗುಣಗಳ ಬಗ್ಗೆ ವಿರೋಧಾಭಾಸಗಳಿವೆ. ಪ್ರತಿಯೊಂದು ರಿಲಿಜನ್ನೂ ತಮ್ಮ ಪ್ರವಾದಿಗಳೇ ಸತ್ಯ ಎಂದು ಸಾರುತ್ತವೆ. ಮತ್ತು ಉಳಿದ ರಿಲಿಜನ್ನುಗಳ ಮುಂದೆ ಅದನ್ನೇ ತರ್ಕಬದ್ಧವಾಗಿ ಸಾಧಿಸುತ್ತವೆ.
ಆದರೂ ರಿಲಿಜನ್ನಿನ ಅನುಯಾಯಿಗಳು ತರ್ಕವನ್ನು ತಮ್ಮ ರಿಲಿಜನ್ನಿನ ಗ್ರಂಥಗಳ ಮೇಲೆ ಬಿಟ್ಟುಕೊಳ್ಳುವದಿಲ್ಲ. ಉದಾಹರಣೆಗೆ ಹಳೇ ಒಡಂಬಡಿಕೆಯೇ ಸತ್ಯ ಎಂಬುದು ಯಹೂದಿಗಳು ನಂಬುತ್ತಾರೆ ಅದಕ್ಕೆ ಅವರು ತರ್ಕವನ್ನು ಬೇಡುವದಿಲ್ಲ. ಆದರೆ ಹೊಸ ಒಡಂಬಡಿಕೆಯನ್ನು ಒಪ್ಪಿಕೊಳ್ಳಲು ತರ್ಕದ ಸಾಧನೆಯನ್ನು ಅಪೇಕ್ಷಿಸುತ್ತಾರೆ. ಮೊಹಮದ್ ಪೈಗಂಬರ್ ಅಂತಿಮ ಪ್ರವಾದಿ ಎಂಬುದನ್ನು ಮುಸ್ಲಿಮರು ತಮ್ಮ ಗ್ರಂಥದಿಂದಲೇ ಒಪ್ಪಿರುತ್ತಾರೆ. ಆದರೆ ಉಳಿದ ರಿಲಿಜನ್ನಿನವರಿಗೂ ಅದನ್ನು ಮನವರಿಕೆ ಮಾಡಲು ತರ್ಕವನ್ನಾಶ್ರಯಿಸುತ್ತಾರೆ. ಉಳಿದ ಗ್ರಂಥಗಳಲ್ಲಿನ ಇತಿಮಿತಿಗಳನ್ನು ತೋರಿಸಲು ತರ್ಕವನ್ನು ಹಿಡಿಯುತ್ತಾರೆ. ಆದರೆ ತಮ್ಮ ಗ್ರಂಥಗಳ ಇತಿಮಿತಿಗಳನ್ನು ತೋರಿಸುವ ಅದೇ ತರ್ಕವನ್ನು ಅಲ್ಲಗೆಳೆದು ತಮ್ಮ ಗ್ರಂಥವು ತರ್ಕಾತೀತವೆಂದು ಸಾರುತ್ತಾರೆ.
ಗಾಂಧಿ ಮತ್ತು ದೇವನೂರ
– ರಾಜಕುಮಾರ.ವ್ಹಿ.ಕುಲಕರ್ಣಿ, ಬಾಗಲಕೋಟ
ಮೊನ್ನೆ ಗಾಂಧಿ ನೆನಪಾದರು. ನೆನಪಾದರು ಎನ್ನುವುದು ಅವರು ಮರೆತುಹೋಗಿರಬಹುದು ಎಂದೂ ಧ್ವನಿಸಬಹುದು. ನೆನಪು ಮತ್ತು ಮರೆತುಹೋಗುವಿಕೆ ಈ ಎರಡೂ ಸ್ಥಿತಿಗಳಲ್ಲಿ ಗಾಂಧಿ ಜೀವಂತವಾಗಿದ್ದು ನಮ್ಮನ್ನು ಕಾಡುತ್ತಲೇ ಇರುವರು. ಇದು ಗಾಂಧಿಯಂಥ ಗಾಂಧಿಯಿಂದ ಮಾತ್ರ ಸಾಧ್ಯವಾಗುವಂತಹದ್ದು. ಏಕೆಂದರೆ ಗಾಂಧಿ ಸೂಟು ಬೂಟು ಧರಿಸಿ, ಪಂಚೆ ಉಟ್ಟುಕೊಂಡು ಮತ್ತು ಲಂಗೋಟಿ ಸಿಕ್ಕಿಸಿಕೊಂಡು ಭಾರತೀಯ ಜೀವನಕ್ರಮದ ಎಲ್ಲ ವರ್ಗಗಳನ್ನು ತಮ್ಮೊಳಗೆ ಅಂತರ್ಗತಗೊಳಿಸಿಕೊಂಡವರು. ಒಬ್ಬನೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಭಾರತೀಯ ಜೀವನ ಕ್ರಮದ ಎಲ್ಲ ವರ್ಗಗಳನ್ನು ಪ್ರತಿನಿಧಿಸುವುದು ಅದು ಗಾಂಧೀಜಿಯಂಥ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗುವ ಬಹುದೊಡ್ಡ ಸಾಮಾಜಿಕ ಪಲ್ಲಟ.
ಇನ್ನು ಗಾಂಧಿ ಏಕೆ ನೆನಪಾದರು ಎನ್ನುವ ವಿಷಯಕ್ಕೆ ಬರುತ್ತೇನೆ. ಆವತ್ತು ದಲಿತ ಸಂಘರ್ಷ ಸಮಿತಿಯವರ ಮೆರವಣಿಗೆ ರಸ್ತೆಯ ಮೇಲೆ ನಡೆದು ಹೋಗುತ್ತಿತ್ತು. ಬುದ್ಧ, ಬಸವ, ಅಂಬೇಡ್ಕರ್ ಎನ್ನುವ ಜಯಘೋಷ ಅಲ್ಲಿ ಮೊಳಗುತ್ತಿತ್ತು. ಜೊತೆಗೆ ಬುದ್ಧ-ಬಸವ-ಅಂಬೇಡ್ಕರರ ಆಳೆತ್ತರದ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದ ಮನೆಮಾಡಿಕೊಂಡಿದ್ದ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಈ ಮೂವರು ಮಾಡಿದ ಪ್ರಯತ್ನ ಮತ್ತು ಹೋರಾಟ ಅದು ಚರಿತ್ರೆಯ ಪುಟಗಳಲ್ಲಿ ಸದಾಕಾಲ ಅಳಿಸಲಾಗದ ಐತಿಹಾಸಿಕ ಪ್ರಯತ್ನವಾಗಿ ದಾಖಲಾಗಿ ಉಳಿದಿದೆ. ಆದರೆ ಆ ಸಂದರ್ಭ ಅಲ್ಲಿನ ಭಾವಚಿತ್ರಗಳಲ್ಲಿ ಮತ್ತು ಅವರು ಮೊಳಗಿಸುತ್ತಿದ್ದ ಜಯಘೋಷಗಳಲ್ಲಿ ಗಾಂಧಿ ಅನುಪಸ್ಥಿತಿ ನನಗೆ ಬಹುಮುಖ್ಯ ಕೊರತೆಯಾಗಿ ಕಾಣಿಸಿತು.
ವಚನ ಸಾರ: 2 (ದಕ್ಕಿದಷ್ಟು)
– ಡಾ. ಸಂತೋಷ್ ಕುಮಾರ್ ಪಿ.ಕೆ
ನಾನೇನು ಮಾಡಲಿ ಬಡವನಯ್ಯ?
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ!
ಕೂಡಲಸಂಗಮ ದೇವ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ! (ಬಸವಣ್ಣ)
ಬಸವಣ್ಣನವರ ಈ ವಚನವು ತುಂಬಾ ಸುಪ್ರಸಿದ್ಧವಾದುದು, ಪ್ರಾಥಮಿಕ ಶಾಲಾ ತರಗತಿಯಿಂದ ಓದುತ್ತಾ ಬಂದಿರುವುದು ಎಲ್ಲರಿಗೂ ನೆನೆಪಿರಬಹುದು. ಇದಕ್ಕೆ ಸಂಬಂಧಿಸಿದಂತೆ ಎರಡು ರೀತಿಯ ವಿವರಣೆಯನ್ನು ಸಾಮಾನ್ಯವಾಗಿ ನೀಡುತ್ತಾ ಬರಲಾಗುತ್ತಿದೆ. ಮೊದಲನೆಯದಾಗಿ, ಬಸವಣ್ಣ ತೀರಾ ಬಡವರಾಗಿದ್ದರಿಂದ ದೇವಾಲಯವನ್ನು ನಿರ್ಮಿಸುವ ಶಕ್ತಿ ಅವರಿಗಿರಲಿಲ್ಲ, ಆದ್ದರಿಂದ ತಮ್ಮ ಅಸಹಾಯಕತೆಯನ್ನು ವಚನದ ಮೂಲಕ ಹೊರಹಾಕಿದ್ದಾರೆ. ಎರಡನೆಯದಾಗಿ, ಬಸವಣ್ಣ ಮತ್ತು ಇಡೀ ವಚನಕಾರರ ಸಮುದಾಯವು ಮೇಲ್ಜಾತಿಗಳನ್ನು ಹಲವಾರು ಆಯಾಮಗಳಲ್ಲಿ ವಿರೋಧಿಸುತ್ತಿದ್ದರು, ಹಾಗಾಗಿ ಅವರಿಗೆ ಸಂಬಂಧಪಟ್ಟ ದೇವಾಲಯ, ಗ್ರಂಥಗಳು ಹಾಗೂ ಅವರ ಸಂಸ್ಕೃತಿಗಳನ್ನು ವಿರೋಧಿಸಿ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದರು ಎಂಬುದು ಮತ್ತೊಂದು ವಿವರಣೆಯಾಗಿದೆ.
ಮೊದಲನೆಯ ವಿವರಣೆ ಆರ್ಥಿಕ ಚೌಕಟ್ಟಿನಿಂದ ಕೂಡಿದ್ದರೆ, ಎರಡನೆ ವಿವರಣೆ ಒಂದು ರೀತಿಯ ಪೂರ್ವಾಗ್ರಹದಿಂದ ಕೂಡಿದೆ ಎಂದು ಹೇಳಬಹುದು. ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಈ ಎರಡೂ ವಿವರಣೆಗಳು ಅಪ್ಯಾಯಮಾನವಾಗುತ್ತವೆಯೇ ಎಂಬುದನ್ನು ಒಮ್ಮೆ ನೋಡಬೇಕಾಗುತ್ತದೆ. ಬಸವಣ್ಣನವರು ಬಡವರೇ ಆಗಿದ್ದರು ಎಂಬುದನ್ನು ಒಂದು ಕ್ಷಣಕ್ಕೆ ಒಪ್ಪಿಕೊಂಡರೂ ಸಹ, ಅವರೇಕೆ ದೇವಾಲಯವನ್ನು ಕಟ್ಟಲಾಗಲಿಲ್ಲ ಎಂಬ ಅಂಬೋಣವನ್ನು ಹೊರಹಾಕಬೇಕು? ಸೇವಿಸಲು ಆಹಾರ, ಇರಲು ವಸತಿ ಇಲ್ಲ ಎಂದು ಒಂದು ಪಕ್ಷ ಹೇಳಿದ್ದರೆ, ಬಡತನದ ಬೇಯ್ಗೆಯಿಂದ ಹಾಗೆ ಹೇಳುತ್ತಿದ್ದಾರೆ ಎಂದು ಅಂದಾಜಿಸಬಹುದಿತ್ತು. ಆದರೆ ಅಂತಹ ವಿಷಯಗಳನ್ನು ಹೇಳದೆ ದೇವಾಲಯವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿರುವುದು ಮತ್ತೆ ಅದಕ್ಕೆ ಪರ್ಯಾಯವಾಗಿ ತನ್ನ ದೇಹವೇ ಅಂತಹ ರಚನೆಯನ್ನು ಹೊಂದಿದೆ ಎನ್ನುವುದರಲ್ಲಿ ಬಡತನದ ಪ್ರಸ್ತಾಪ ಇಲ್ಲದಿರುವುದು ಗೋಚರಿಸುತ್ತದೆ. ಹಾಗಾದರೆ ಎರಡನೇ ವಿವರಣೆಯಾದರೂ ಇದಕ್ಕೆ ಆಪ್ತವಾಗುತ್ತದೆಯೆ? ಮತ್ತಷ್ಟು ಓದು 
ನಾಡು-ನುಡಿ ಮರುಚಿಂತನೆ : ಸಾಹಿತಿಗಳು ಮತ್ತು ಸಮಾಜದ ಕುರಿತ ಜ್ಞಾನ
– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ನನ್ನ ಅಣ್ಣ ಒಮ್ಮೆ ನನ್ನಲ್ಲಿ ಕುತೂಹಲದಿಂದ ವಿಚಾರಿಸಿದ್ದರು.‘ಅಲ್ಲ, ಈ ಜ್ಞಾನಪೀಠ ಪ್ರಶಸ್ತಿ ಯಾವಾಗಲೂ ಸಾಹಿತಿಗಳಿಗೇ ಬರುತ್ತದೆಯಲ್ಲ. ಅಂದರೆ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂದು ಅದನ್ನು ನೀಡುವವರ ಅಭಿಪ್ರಾಯವೆ?’. ನಾನು ಸಮಜಾಯಷಿ ನೀಡಿದ್ದೆ, ‘ಹಾಗಲ್ಲ, ಮೂಲತಃ ಅದು ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಪ್ರಶಸ್ತಿಗೆ ಒಂದು ಹೆಸರಿಡಬೇಕಲ್ಲ. ಜ್ಞಾನಪೀಠ ಅಂತ ಹೆಸರಿಟ್ಟಿದ್ದಾರೆ. ಆ ಪ್ರಶಸ್ತಿಯನ್ನು ಪಡೆದವರನ್ನು ಜ್ಞಾನಪೀಠ ಪುರಸ್ಕೃತರು ಎನ್ನುತ್ತಾರೆಯೇ ವಿನಃ ಜ್ಞಾನಿಗಳು ಎಂದೇನೂ ಕರೆಯುವುದಿಲ್ಲವಲ್ಲ?’. ನನ್ನ ಉತ್ತರ ಸರಿ ಎಂದೇ ನನಗೆ ಇನ್ನೂ ಅನಿಸುತ್ತದೆ. ಆದರೆ ಕೆಲವೊಮ್ಮೆ ನನ್ನ ಅಣ್ಣ ಹೇಳಿದ ಹಾಗೇ ಸಾಹಿತಿಗಳು ಮಾತ್ರವೇ ಜ್ಞಾನಿಗಳು ಎಂಬುದಾಗಿ ಕೆಲವು ಸಾಹಿತಿಗಳೂ ಭಾವಿಸಿಕೊಂಡಿದ್ದಾರೇನೋ ಎಂದೂ ಅನ್ನಿಸುತ್ತದೆ. ಅದು ನನ್ನ ಅನುಭವಕ್ಕೆ ಬಂದದ್ದು ಇತ್ತೀಚಿನ ವರ್ಷಗಳಲ್ಲಿ. ನಾವು ಮಾಡುತ್ತಿರುವ ಸಮಾಜಶಾಸ್ತ್ರೀಯ ಸಂಶೋಧನೆಗಳನ್ನು ನಿಲ್ಲಿಸಬೇಕೆಂದು ಈ ಸಾಹಿತಿಗಳು ಸರ್ಕಾರದ ಮೇಲೆ ಒತ್ತಡ ಹೇರಿದರು. ನಾವು ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಏನೇನು ಸಂಶೋಧನಾ ಚಟುವಟಿಕೆಗಳನ್ನು ನಡೆಸಿದ್ದೇವೆ ಎಂದು ಗೂಢಚರ್ಯೆಯನ್ನು ನಡೆಸಿ, ನಮ್ಮನ್ನು ನಿಯಂತ್ರಿಸಿ ನಾವು ಏನನ್ನು ಹೇಳಬೇಕೆಂದು ಅಪ್ಪಣೆ ಕೊಡಿಸುವ ಮಟ್ಟಕ್ಕೆ ಕೂಡ ಹೋದರು.ಇವರಿಗೆಲ್ಲ ತಾವು ಎಲ್ಲಾ ಕ್ಷೇತ್ರಗಳಲ್ಲೂ ಜ್ಞಾನಿಗಳೆಂಬ ಭ್ರಮೆಯು ನೆತ್ತಿಗೇರಿರದಿದ್ದರೆ ಇಷ್ಟು ಅಸಭ್ಯವಾಗಿ ವರ್ತಿಸಲು ಕಾರಣಗಳಿರಲಿಲ್ಲ.
ಕಳೆದ ಕೆಲವು ವರ್ಷಗಳಿಂದ ನನಗೆ ಇದು ಅಭ್ಯಾಸವಾಗಿ ಬಿಟ್ಟಿದೆ. ಹಾಗೇ ಕೆಲವು ಹೇಳಿಕೆಗಳು ಕೂಡಾ. ‘ಈ ರಾಜಾರಾಮ ಹೆಗಡೆಯವರು ಬಾಲಗಂಗಾಧರರನ್ನು ಸೇರಿ ಹಾಳಾಗಿ ಹೋದರು’ ಎಂಬ ತೀರ್ಪನ್ನು ಇವರು ಸುಪ್ರೀಂ ಕೋರ್ಟಿನ ಜಡ್ಜುಗಳಿಗಿಂತ ಆತ್ಮ ವಿಶ್ವಾಸಪೂರ್ವಕವಾಗಿ ಕೊಡಬಲ್ಲರು. ಹಾಗಂತ ಇಂಥ ತೀರ್ಮಾನವನ್ನು ಕೊಡುವವರಲ್ಲಿ ಯಾರೂ ಬಾಲಗಂಗಾಧರರನ್ನು ಓದಿಯೇ ಇಲ್ಲ, ಓದಿದರೂ ಚೂರುಪಾರು ಓದಿರುತ್ತಾರೆ. ಸಮಾಜ ಶಾಸ್ತ್ರಜ್ಞರ ಕುರಿತು ಇಂಥ ಹೇಳಿಕೆಗಳನ್ನು ಉದುರಿಸಲಿಕ್ಕೆ ಅವರ ಕೃತಿಗಳನ್ನು ಓದುವ ಅಗತ್ಯವಿಲ್ಲ, ಬದಲಾಗಿ ನೀವು ಒಂದಷ್ಟು ಕಥೆ ಕವನಗಳನ್ನು ಅಥವಾ ಅವುಗಳ ಕುರಿತ ವಿಮರ್ಶಾ ಲೇಖನಗಳನ್ನು ಬರೆದಿದ್ದರೆ ಸಾಕು. ಈ ಧೋರಣೆ ಎಲ್ಲಿಂದ ಹುಟ್ಟುತ್ತದೆ? ಅದೇ ರೀತಿ ‘ ನಾನು ಬಾಲಗಂಗಾಧರರ ವಾದವನ್ನು ಒಪ್ಪುವುದಿಲ್ಲ.’ ‘ಬಾಲಗಂಗಾಧರರ ವಾದಗಳ ಕುರಿತು ನನಗೆ ನನ್ನದೇ ಅನುಮಾನಗಳಿವೆ’, ಎಂಬುದು ಮತ್ತೊಂದು ಪ್ರಕಾರದ ವರಸೆ. ಇವರೂ ಕೂಡ ಬಾಲಗಂಗಾಧರರನ್ನು ಓದಬೇಕೆಂದಿಲ್ಲ. ‘ಏನು ಅನುಮಾನಗಳಿವೆ?’ ಎಂದು ಮರು ಪ್ರಶ್ನಿಸಿದರೆ ಚಾಲ್ತಿಯಲ್ಲಿರುವ ಐಡಿಯಾಲಜಿಗಳ ಕ್ಲೀಷೆಗಳನ್ನು ತಿಳಿಸುತ್ತಿರುತ್ತಾರೆ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ವಾಕ್ಯದಲ್ಲಿ ಮೊದಲನೆಯ ಶಬ್ದವನ್ನು ಇವರೆಲ್ಲ ಗಂಭೀರವಾಗಿಯೇ ಅಳವಡಿಸಿಕೊಂಡಂತಿದೆ.
ಮತ್ತಷ್ಟು ಓದು 
ಗೀತೆಯನ್ನು ಅರ್ಥೈಸಿಕೊಳ್ಳಲಾಗದವರು ಬದುಕಿನ ವಾಸ್ತವಗಳನ್ನು ಅರಗಿಸಿಕೊಳ್ಳಲಾರರು
– ಮಯೂರ ಲಕ್ಷ್ಮಿ
“ಈ ಜಗತ್ತು ಭಗವಂತನ ಸೃಷ್ಟಿ ಎನ್ನುವ ವಿಚಾರವು ಭಗವದ್ಗೀತೆಯನ್ನು ಓದಿದಾಗ ಅರಿವಾಯಿತು… ಈ ವಿಚಾರದ ಮುಂದೆ ಇನ್ನೆಲ್ಲಾ ಆಲೋಚನೆಗಳೂ ಗೌಣವೆನಿಸಿತು” – ಆಲ್ಬರ್ಟ್ ಐನ್ ಸ್ಟೀನ್
ಭಗವದ್ಗೀತೆಯನ್ನು ಉದಾತ್ತ ಮನಸ್ಸುಗಳಿಂದ ವಿಶಾಲ ಹೃದಯಗಳಿಂದ ಅರ್ಥಮಾಡಿಕೊಳ್ಳುವವರಿಗೆ ಅದು ಸಕ್ಕರೆಯಂತೆ ಸಿಹಿ, ಅತ್ಯಂತ ಸರಳವಾದ ರೀತಿಯಲ್ಲಿ ಮನುಷ್ಯನು ಈ ಭೂಮಿಯಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ತಿಳಿಸುವ ಸುಲಭ ಸಾಧನ, ಸಂಕುಚಿತ ಮನಸ್ಸುಗಳಿಂದ ಅದರ ವ್ಯಾಪ್ತಿಯನ್ನು ಪೂರ್ವಾಗ್ರಹಪೀಡಿತರಾಗಿ ತಪ್ಪುಗಳನ್ನೇ ಹುಡುಕಿ ನೋಡುವವರಿಗೆ ಅದು ಅರ್ಥವಾಗದ ಕ್ಲಿಷ್ಟ ಗ್ರಂಥವೇ ಸರಿ! ಇನ್ನು ಗೀತೆ ಎಂದರೆ ಕೋಮುವಾದಿ ಗ್ರಂಥ ಶ್ರೀಕೃಷ್ಣನೆಂದರೆ ಸ್ತ್ರೀಲೋಲ ಎಂಬ ಭಾವನೆಯಿಂದಲೇ ನೋಡುವವರಿಗೆ ಇದು ಅರ್ಥವಾದೀತಾದರೂ ಹೇಗೆ? ಕೃಷ್ಣನ ರಾಜನೀತಿಯ ನೈಪುಣ್ಯತೆಯನ್ನು ಮುತ್ಸದ್ದಿತನವನ್ನೂ ಅವನ ಸಮಾಜ ಪರಿವರ್ತನೆಯ ಮತ್ತು ಧರ್ಮರಕ್ಷಣೆಯ ಸಂಕಲ್ಪವನ್ನು ಒಪ್ಪದವರು ಅವನ ವಾಣಿಯಾದ ಗೀತೆಯನ್ನು ಸ್ವೀಕರಿಸುವುದು ಸಾಧ್ಯವಿಲ್ಲಾ. ಹಿಂದೂ ಧರ್ಮಗ್ರಂಥಗಳನ್ನು ಟೀಕಿಸಿ ಬುದ್ಧಿವಂತರೆನಿಸಿಕೊಳ್ಳುವುದು ಕೆಲವರ ಹವ್ಯಾಸ.
ಪ್ರಪಂಚದ ಎಲ್ಲಾ ಮಹನೀಯರೂ ದಾರ್ಶನಿಕರೂ ಗೀತೆಯನ್ನು ಕೋಮುವಾದವನ್ನು ಪ್ರಚೋದಿಸುವ ಗ್ರಂಥವೆಂದೇ ನೋಡಿದ್ದಲ್ಲಿ ಭಗವದ್ಗೀತೆ ವಿಶ್ವವ್ಯಾಪಿ ಎನಿಸಿಕೊಳ್ಳುತ್ತಿತ್ತೇ? ಸಾಹಿತ್ಯವೆಂದರೆ ಜ್ಞಾನದ ಸಾಧನಗಳು,ಜಾಗೃತಿಯ ಚೇತನಗಳು.. ಇಂತಹ ಪುಸ್ತಕಗಳನ್ನೋದಿ ವಿವೇಕಿಗಳಾಗಲೂ ಬಹುದು, ವಿಮರ್ಶಕರಾಗಲೂಬಹುದು.ಪುಸ್ತಕಗಳ ವಿಮರ್ಶೆ ಓದುಗರಿಗೆ ಬಿಟ್ಟದ್ದು, ಅಭಿವ್ಯಕ್ತಿ ಸ್ವಾತಂತ್ರ ಎಲ್ಲರಿಗೂ ಇದೆ ಎನ್ನವುದು ನಿಜವಾದರೂ ಅಭಿವ್ಯಕ್ತಿಯ ಹೆಸರಲ್ಲಿ ಮನಬಂದಂತೆ ಹೇಳಿಕೆಗಳನ್ನು ನೀಡಿ ಪುಸ್ತಕಗಳನ್ನು ಸುಡುವುದು ಪರಿಹಾರವೆಂದು ವಾದಿಸುವುದು ಭ್ರಮೆಯಲ್ಲದೇ ಇನ್ನೇನು? ಪ್ರತಿಯೊಂದನ್ನೂ ತಾರ್ಕಿಕ ಮಟ್ಟದಲ್ಲೇ ವಿಮರ್ಶಿಸುತ್ತಾ ಹೋದರೆ ಹೊಸ ಹೊಸ ರೀತಿಯ ‘ಇಸಂ’ಗಳ ಸೃಷ್ಟಿಯಾಗುತ್ತಾ ಹೋಗುವುದೇ ಹೊರತು ಬೌದ್ಧಿಕ ಪರಾಮರ್ಶೆಯಾಗದು.
ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧
– ವಿನಾಯಕ ಹಂಪಿಹೊಳಿ
ತರ್ಕ ಮನುಷ್ಯನಿಗಿರುವ ಒಂದು ಅತ್ಯುತ್ತಮ ಸಾಧನ. ಇದನ್ನು ಆಧರಿಸಿ ಮಾನವ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ವಿಜ್ಞಾನವಂತೂ ತರ್ಕದ ಆಧಾರದ ಮೇಲೆಯೇ ಬೆಳೆದಿರುವಂಥದ್ದು. ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕಕ್ಕೆ ವಿಜ್ಞಾನದಂತೆ ಮೊದಲನೇ ಪ್ರಾಶಸ್ತ್ಯವಿಲ್ಲವಾದರೂ, ತರ್ಕವನ್ನು ಸಂಪೂರ್ಣವಾಗಿ ಬಿಟ್ಟು ನಿಂತಿಲ್ಲ. ಪಾಶ್ಚಿಮಾತ್ಯ ರಿಲಿಜನ್ನುಗಳಿಗೂ ಭಾರತೀಯ ದರ್ಶನಗಳಿಗೂ ಇರುವ ಮುಖ್ಯ ವ್ಯತ್ಯಾಸ ಈಗಾಗಲೇ ನಿಲುಮೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಹೀಗಾಗಿ ಅವುಗಳ ವ್ಯತ್ಯಾಸದ ಕಡೆಗೆ ಹೆಚ್ಚು ಗಮನ ಕೊಡದೇ ಇವೆರಡರಲ್ಲೂ ತರ್ಕದ ಸ್ಥಾನವೇನು ಎಂಬುದರ ಬಗ್ಗೆ ಚರ್ಚಿಸೋಣ.
ವಿಜ್ಞಾನದಲ್ಲಿ ತರ್ಕ:
ಗಣಿತೀಯ ತರ್ಕ ಪದ್ಧತಿಯನ್ನು ವಿಜ್ಞಾನ ಅಳವಡಿಸಿಕೊಂಡಿದೆ. ಗಣಿತೀಯ ತರ್ಕದಲ್ಲಿ ’ಅಥವಾ’, ’ಮತ್ತು’, ’ಆದರೆ’ ಮುಂತಾದ ಸಂಬಂಧಗಳು ಮುಖ್ಯವಾಗಿರುತ್ತವೆ. ಎಲ್ಲ ವೈಜ್ಞಾನಿಕ ಸಿದ್ಧಾಂತಗಳೂ ಒಂದು ಗಣಿತೀಯ ತರ್ಕವೊಂದನ್ನು ಸಾಧಿಸಲು ಪ್ರಯತ್ನಿಸುತ್ತವೆ. ಕಾರಣ ಗಣಿತೀಯ ತರ್ಕದಿಂದ ಸಾಧಿಸಲ್ಪಟ್ಟ ಸಿದ್ಧಾಂತಗಳಲ್ಲಿ ಮೂಲ ಊಹೆಯು ತಪ್ಪಾಗಿಲ್ಲದಿದ್ದ ಪಕ್ಷದಲ್ಲಿ ಸಿದ್ಧಾಂತವು ಎಂದಿಗೂ ಸುಳ್ಳಾಗದು. ಐನ್ಸ್ಟೈನರ ಮಾತುಗಳಲ್ಲಿ ಹೇಳುವದಾದರೆ “ವೈಜ್ಞಾನಿಕ ಸಿದ್ಧಾಂತವೆಂಬುದು ಕೇವಲ ಕೆಲವೇ ಊಹೆಗಳನ್ನಾಧರಿಸಿ ನಿರ್ಮಿಸಿದ ಗಣಿತೀಯ ಮಾದರಿ”. ಉದಾಹರಣೆಗಾಗಿ ಅವರ ಸಾಪೇಕ್ಷತಾ ಸಿದ್ಧಾಂತವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಅವರು ಮಾಡಿದ ಊಹೆಗಳು ಎರಡೇ. ಮೊದಲನೇಯದು ಭೌತಿಕ ಕ್ರಿಯೆಗಳು ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ತೆರನಾಗಿ ಅನ್ವಯವಾಗುತ್ತವೆ. ಎರಡನೇಯದು ಬೆಳಕಿನ ವೇಗ ಆ ಎಲ್ಲ ರೀತಿಯ ಕಲ್ಪಿತ ಚೌಕಟ್ಟುಗಳಲ್ಲಿ ಒಂದೇ ಆಗಿರುತ್ತದೆ. ಎಲ್ಲಿಯವರೆಗೆ ಈ ಊಹೆಗಳನ್ನು ನಿರಾಕರಿಸುವ ಪ್ರಕರಣಗಳು ಬೆಳಕಿಗೆ ಬರುವದಿಲ್ಲವೋ ಅಲ್ಲಿಯವರೆಗೂ ಸಾಪೇಕ್ಷತಾ ಸಿದ್ಧಾಂತ ಸತ್ಯವೇ.





