ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕಮ್ಯುನಿಸಂ’

6
ಜೂನ್

ಕಮ್ಯೂನಿಸ್ಟರು ಕಮ್ಯೂನಿಸಂನನ್ನು ಕೊಂದದ್ದು ಹೀಗೆ (ಭಾಗ – ೨)

– ಪ್ರೇಮಶೇಖರ

ಸುಂದರ ಕನಸೊಂದು ಹಳವಂಡವಾದ ದುರಂತಕ್ಕೆ ಮರುಗುತ್ತಾ…

ಥಾಮಸ್ ಹಾಬ್ಸ್, ಜಾನ್ ಲಾಕ್, ಜೀನ್ ಯಾಕ್ಸ್ ರೂಸೂ ಮುಂತಾದ ಸಾಮಾಜಿಕ ಒಪ್ಪಂದ ಸಿದ್ಧಾಂತದ ಪ್ರತಿಪಾದಕರ ಪ್ರಕಾರ ‘ಬಲವೇ ಹಕ್ಕು’ ಎಂಬ ಮಾನವತಾವಿರೋಧಿ ಅರಣ್ಯ ಕಾನೂನಿನಿಂದ ಅಶಕ್ತರನ್ನು ರಕ್ಷಿಸಿ, ಸಮಾಜದ ಎಲ್ಲರ ನಡುವೆ ಸಮಾನ ನ್ಯಾಯಹಂಚಿಕೆಗಾಗಿ ರಾಜ್ಯ ಸ್ಥಾಪನೆಗೊಂಡಿತಂತೆ. ಆದರೆ ಮಾನವಜನಾಂಗ ಮುಂದೆ ಹಿಡಿದ ದಾರಿಯಲ್ಲಿ ರಾಜ್ಯವೇ ಶೋಷಕನಾಗಿ ಬದಲಾದದ್ದನ್ನು ಇತಿಹಾಸ ಹೇಳುತ್ತದೆ. ಸಾಮಾಜಿಕ ಒಪ್ಪಂದಗಳ ಮೂಲಕ ಸಮಾನನ್ಯಾಯ ಹಂಚಿಕಾವ್ಯವಸ್ಥೆ ಸಾಧ್ಯವಾಗದೇ ಹೋದಾಗ, ಬಲವಂತದ ಮೂಲಕ, ರಕ್ತಪಾತದ ಮೂಲಕ ಅದು ಅಸ್ತಿತ್ವಕ್ಕೆ ಬರುತ್ತದೆಂದು ಭವಿಷ್ಯ ನುಡಿದ ಕಾರ್ಲ್ ಮಾರ್ಕ್ಸ್ ಒಬ್ಬ ವಾಸ್ತವವಾದಿ. ಅಂತಹ ವ್ಯವಸ್ಥೆಯನ್ನು ಚಿತ್ರಿಸಿದ ಕಮ್ಯೂನಿಸಂ ಒಂದು ಉದಾತ್ತ ಮಾನವಪರ ಚಿಂತನೆ. ಆದರೆ ವಾಸ್ತವವಾದಿ ರೂಪಿಸಿದ ಉದಾತ್ತ ಮಾನವಪರ ಸಿದ್ಧಾಂತ ತನ್ನ ಅವಾಸ್ತವವಾದಿ ಹಾಗೂ ಮಾನವವಿರೋಧಿ ಹಿಂಬಾಲಕರಿಂದಲೇ ಕಳಂಕ ಹಚ್ಚಿಸಿಕೊಂಡದ್ದೊಂದು ದುರಂತ. ಈ ಪ್ರಕ್ರಿಯೆ ಭಾರತದಲ್ಲಿ ಅನಾವರಣಗೊಂಡ ಬಗೆಯನ್ನು ಸಂಕ್ಷಿಪ್ತವಾಗಿ ಈಗಿಲ್ಲಿ ಹೇಳುತ್ತೇನೆ. ಮತ್ತಷ್ಟು ಓದು »

19
ಸೆಪ್ಟೆಂ

ದ್ವೇಷ ಕಾರುವುದನ್ನೇ ವಿಚಾರವಾದ ಎನ್ನುವುದಾದರೆ…

– ಅಜಿತ್ ಶೆಟ್ಟಿ ಹೆರಾಂಜೆ

ಗೌರಿ ಲಂಕೇಶ್ ಕೊಲೆಯಾದಾಗ ನಾನು ಮುಖಪುಟದಲ್ಲಿ ಒಂದು ಸ್ಟೇಟಸ್ ಹಾಕಿದ್ದೆ.. ಅಕಾಲಿಕ ಮರಣ ಯಾರದ್ದೇ ಆಗಿರಲಿ ಅದು ಘೋರ. ಅದು ಗೌರಿ ಲಂಕೇಶರಂತಾ ಖ್ಯಾತ ನಾಮರದ್ದೆ ಆಗಿರಲಿ ಅಥವಾ ಶರತ್, ರುದ್ರೇಶ್, ಕಟ್ಟಪ್ಪ, ರವಿಯರಂತ ಶ್ರೀ ಸಾಮಾನ್ಯರದ್ದೇ ಆಗಿರಿಲಿ..!! ಮತ್ತಷ್ಟು ಓದು »

14
ಏಪ್ರಿಲ್

ಕಮ್ಯುನಿಸಂ ಎಂಬ ಕಾಡಿನ ಬೆಂಕಿಗೆ ಅಂಬೇಡ್ಕರ್ ಸುಟ್ಟು ಹೋಗಬೇಕೆ?

ಡಾ. ರೋಹಿಣಾಕ್ಷ ಶಿರ್ಲಾಲು,ಸಹಾಯಕ ಪ್ರಾಧ್ಯಾಪಕ
  ಕನ್ನಡ ವಿಭಾಗ, ವಿವೇಕಾನಂದ ಕಾಲೇಜು,ಪುತ್ತೂರು.

ಒಂದೆಡೆ ರಕ್ತಕ್ರಾಂತಿಯನ್ನು ಆಹ್ವಾನಿಸುವ ಕಮ್ಯುನಿಸಂ, ಇನ್ನೊಂದಡೆ ರಕ್ತರಹಿತ ಬದಲಾವಣೆಯನ್ನು ನಿರೀಕ್ಷಿಸುವ ಬೌದ್ಧ ತತ್ವ. ಒಂದೆಡೆ ನೂರಾರು ವರ್ಷಗಳಿಂದ ಶೋಷಣೆ, ಅನ್ಯಾಯಗಳಿಗೆ ಒಳಗಾದ ದಲಿತ ಸಮಾಜ, ಇನ್ನೊಂದೆಡೆ ದಲಿತರೊಳಗೆ ಕಾಣಿಸಿಕೊಳ್ಳಲಾರಂಭಿಸಿದ  ಎಚ್ಚರ , ಆವೇಶಗಳು ಸುಲಭದಲ್ಲಿ ಕಮ್ಯೂನಿಸಂನ ತೋಪಿಗೆ ಸಿಡಿಮದ್ದಾಗುವ ಅಪಾಯ, ಇದು ಅಂಬೇಡ್ಕರ್ ಮುಂದಿದ್ದ ಸನ್ನಿವೇಶದ ಕಿರು ಚಿತ್ರಣ. ಒಂದು ಬುದ್ಧನ ಮಾರ್ಗ , ಇನ್ನೊಂದು ಕಾರ್ಲ್ ಮಾರ್ಕ್ಸ್ ನ ಮಾರ್ಗ. ವಿಶ್ವ ತನ್ನ ಮಾರ್ಗವನ್ನು ಈಗ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಲೇ ಬೌದ್ಧಧರ್ಮದ ಮಾರ್ಗದಲ್ಲೇ ಉನ್ನತಿಯನ್ನು ಸಾಧಿಸಲು ಸಾಧ್ಯವೆಂದು ಆತ್ಮವಿಶ್ವಾಸದಿಂದ ನುಡಿದ, ನಡೆದ ಅಂಬೇಡ್ಕರ್. ಇದು ಅಂಬೇಡ್ಕರ್ ಮುಂದಿದ್ದ ಕವಲು ದಾರಿ ಮಾತ್ರವಲ್ಲ, ವರ್ತಮಾನದಲ್ಲಿನ ದಲಿತ ಚಳವಳಿಗಳ, ವಿಚಾರವಾದಿಗಳ ಮುಂದಿನ ಕವಲು ದಾರಿಯೂ ಹೌದು. ಅಂಬೇಡ್ಕರ್ ಅವರ ಅಂತಿಮ ಆಯ್ಕೆ ಬುದ್ಧನೋ? ಕಾರ್ಲ್‍ಮಾಕ್ರ್ಸೋ? ಈ ಪ್ರಶ್ನೆ ಬಹಳ ಮುಖ್ಯವಾದುದು ಕೂಡ. ಒಂದೆಡೆ ಮಾರ್ಕ್ಸ್ ವಾದಿಗಳು ಮರೆಯಿಂದ ಅಂಬೇಡ್ಕರ್ ವಿಚಾರಗಳನ್ನು ಮಾತನಾಡುತ್ತಾ , ಕಾರ್ಲ್ ಮಾರ್ಕ್ಸ್ನ ವಿಚಾರಗಳೇ ಅಂಬೇಡ್ಕರ್ ವಿಚಾರವೂ ಆಗಿತ್ತು ಎಂಬಂತೆ ತೋರಿಸುತ್ತಿದ್ದಾರೆ. ಇನ್ನೊಂದೆಡೆ ಕರ್ನಾಟಕವೂ ಸೇರಿದಂತೆ ದೇಶದೆಲ್ಲೇಡೆ ದಲಿತ ಚಳವಳಿಗಳು ಹುಟ್ಟಿ , ಉತ್ಕರ್ಷಕ್ಕೆ ತಲುಪಿ , ಹತ್ತಾರು ಚೂರುಗಳಾಗಿ ಒಡೆದು ಈ ಚಳವಳಿಗಳ ಮುಖ ಅಂಬೇಡ್ಕರ್ ಬದಲು ಮಾರ್ಕ್ಸ್, ಲೆನಿನ್‍ಗಳಾಗಿ, ಕ್ರಾಂತಿ, ಬೆಂಕಿಯ ವಿಚಾರಕ್ಕೆ ಅಂಬೇಡ್ಕರ್ ಮುಖವಾಡವನ್ನು ತೊಡಿಸುತ್ತಿದ್ದಾರೆ.  ಹಾಗಾದರೆ ಸ್ವತಃ ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್, ಕಮ್ಯುನಿಸಂ ಬಗೆಗೆ ತಳೆದಿದ್ದ  ನಿಲುವು ಏನು? ಎನ್ನುವುದನ್ನು ಪರಿಶೀಲಿಸುತ್ತಾ, ನಮ್ಮ ಬೌದ್ಧಿಕ ವಲಯ ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡ ಬಗೆಯನ್ನು ಚರ್ಚಿಸುವುದೇ ಈ ಬರವಣಿಗೆಯ ಉದ್ದೇಶ.

ಮತ್ತಷ್ಟು ಓದು »

20
ಸೆಪ್ಟೆಂ

ಸಿದ್ಧಾಂತಗಳ ಚರಿತ್ರೆ – 3 ಕಮ್ಯುನಿಸಂ: ( ಅಪ್ರಸ್ತುತ ಸಿದ್ಧಾಂತ, ಅವಾಸ್ತವಿಕ ಪರಿಹಾರ )

– ರೋಹಿತ್ ಚಕ್ರತೀರ್ಥ
ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)
ಸಿದ್ಧಾಂತಗಳ ಚರಿತ್ರೆ – 2 ( ಆತನ ಚಿಂತನೆ ಅರ್ಧ ಭೂಗೋಲವನ್ನು ನಿಯಂತ್ರಿಸಿತು! )
karl-marx-wikimedia-commonsಕಮ್ಯುನಿಸ್ಟ್ ಚಿಂತನೆಯನ್ನು ಕಾರ್ಲ್ ಮಾರ್ಕ್ಸ್ ಪ್ರಾರಂಭಿಸಿದವನಲ್ಲ; ಆದರೆ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವನು ಆತ. ಮಾರ್ಕ್ಸ್ ತೀರಿಕೊಂಡ ಮೂವತ್ತು ವರ್ಷಗಳ ನಂತರ ರಷ್ಯದಲ್ಲಿ ಕ್ರಾಂತಿಯಾಗಿ ಲೆನಿನ್ ಅಧಿಪತ್ಯ ಬಂತು. ಮಾರ್ಕ್ಸ್ ನ ಅದುವರೆಗಿನ ಅಪ್ರಕಟಿತ ಕೃತಿಗಳೆಲ್ಲ ಒಂದರ ಮೇಲೊಂದರಂತೆ ಸಾಲಾಗಿ ಪ್ರಕಟವಾಗಿ ಜಗತ್ತಿನ ಹಲವು ದೇಶಗಳಲ್ಲಿ, ಹಲವು ಯುವಕರ ಕೈಗೆ ಬಂದು, ಅವರೆಲ್ಲ ತಮ್ಮ ಸುತ್ತಲಿನ ಹಳೆಯ ವ್ಯವಸ್ಥೆಯನ್ನು ಕಿತ್ತೊಗೆಯುವ ಸಂಕಲ್ಪ ತೊಡುವಂತಾಯಿತು. 1920ರಿಂದ 1960ರವರೆಗಿನ ಅವಧಿ ಕಮ್ಯುನಿಸಂ ಮತ್ತು ಮಾಕ್ರ್ಸಿಸಂಗಳ ಉಚ್ಛ್ರಾಯಕಾಲ. ರಷ್ಯ, ಚೀನಾ, ಕೊರಿಯ, ಕಾಂಬೋಡಿಯಾ, ಜರ್ಮನಿ, ಗ್ರೇಟ್ ಬ್ರಿಟನ್, ಫ್ರಾನ್ಸ್, ಕ್ಯೂಬಾದಂಥ ಹಲವು ದೇಶಗಳು ಮಾಕ್ರ್ಸ್ ಚಿಂತನೆಯ ಪ್ರಯೋಗ ಶಾಲೆಗಳಾದವು. ಸ್ವಾತಂತ್ರ್ಯಾ ನಂತರದ ಮೊದಲ ಮೂರು ದಶಕಗಳಲ್ಲಿ ಭಾರತ ಕೈಗೊಂಡ ಹತ್ತುಹಲವು ಯೋಜನೆಗಳಲ್ಲಿ ಸೋವಿಯೆಟ್ ರಷ್ಯಾ ಪ್ರಣೀತ ಕಮ್ಯುನಿಸಂನ ದಟ್ಟ ಛಾಯೆಯಿದ್ದದ್ದು ಸುಸ್ಪಷ್ಟ. ಆದರೆ 1970ರ ನಂತರ ರಷ್ಯಾ ಹಲವು ಹೋಳುಗಳಾಗಿ ಒಡೆದುಹೋಗಿ ಶೀತಲಸಮರ ಅಘೋಷಿತ ಅಂತ್ಯ ಕಂಡಿದ್ದರಿಂದ ಕಮ್ಯುನಿಸಂ ಹಿನ್ನಡೆಯನುಭವಿಸಿತು. ಅಲ್ಲದೆ ಕಮ್ಯುನಿಸಂನ್ನು ಅಪ್ಪಿಕೊಂಡ ದೇಶಗಳೆಲ್ಲ ಸರ್ವಾಧಿಕಾರಿಗಳ ನಿಯಂತ್ರಣಕ್ಕೊಳಪಟ್ಟು ಬೃಹತ್ ಪ್ರಮಾಣದ ಹತ್ಯಾಕಾಂಡಗಳಿಗೆ ಸಾಕ್ಷಿಯಾದ್ದರಿಂದ, ಮಾರ್ಕ್ಸ್ ನ ಚಿಂತನೆಗಳ ಮೇಲಿದ್ದ ಭರವಸೆಗಳೆಲ್ಲ ಕಮರಿಹೋದವು. ಕಮ್ಯುನಿಸಂನ ಮೆಕ್ಕಾ ಎಂದೇ ಕರೆಸಿಕೊಳ್ಳುತ್ತಿದ್ದ ರಷ್ಯಾದೊಳಗಿನ ಬಡತನ, ಶೋಷಣೆ, ಸ್ವಾತಂತ್ರ್ಯಹರಣ, ಹಿಂಸಾಚಾರಗಳ ಕಟು ಕತೆಗಳು ಹೊರಜಗತ್ತಿಗೆ ತಿಳಿಯತೊಡಗಿದ್ದು 70ರ ದಶಕದ ನಂತರ; ಅದೂ ತುಣುಕು ತುಣುಕಾಗಿ. ಮತ್ತಷ್ಟು ಓದು »

11
ಸೆಪ್ಟೆಂ

ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)

– ರೋಹಿತ್ ಚಕ್ರತೀರ್ಥ

karl-marx-wikimedia-commonsಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದ ಪ್ರಪಂಚವನ್ನು ಹೆಚ್ಚು ಪ್ರಭಾವಿಸಿದ, ಬದಲಾಯಿಸಿದ ಸಿದ್ಧಾಂತಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಕಮ್ಯುನಿಸಂ. ಇಪ್ಪತ್ತನೇ ಶತಮಾನದಲ್ಲಿ ನಡೆದ ಹಲವು ಮಹತ್ವದ ರಾಜಕೀಯ ಚಳುವಳಿಗೆ ಕಮ್ಯುನಿಸಂ ಮೂಲದ್ರವ್ಯವಾಗಿ ಒದಗಿಬಂತು. ಕಮ್ಯುನಿಸಂ ಎಂದರೇನು, ಅದು ಜಗತ್ತನ್ನು ಪ್ರಭಾವಿಸಿದ ಬಗೆ ಹೇಗೆ, 1970ರ ನಂತರ ಅದು ಅವನತಿಯತ್ತ ಸಾಗಲು ಕಾರಣವಾದ ಸನ್ನಿವೇಶಗಳೇನು, ಇಂದಿನ ಯುಗಕ್ಕೆ ಕಮ್ಯುನಿಸಂ ಪ್ರಸ್ತುತವೇ ಎಂಬ ವಿಚಾರಗಳನ್ನು ತಿಳಿದುಕೊಳ್ಳಲು, ಮೊದಲಿಗೆ ನಾವು ಅದರ ಹುಟ್ಟಿನ ದಿನಗಳ ಅವಲೋಕನ ಮಾಡಬೇಕಾಗುತ್ತದೆ. ಮತ್ತಷ್ಟು ಓದು »

1
ಜುಲೈ

ಕ್ಯೂಬಾದಂತೆ ಕಾಣುವ ಪಿಣರಾಯಿ

– ಸಂತೋಷ್ ತಮ್ಮಯ್ಯ

skulls communism russians 1920x1200 wallpaper_www.wallpapername.com_18

ನಾಳೆ ಸಮಸ್ತ ಕೇರಳಕ್ಕೂ ಇದೇ ಗತಿ
ಬಹುಶಃ ಇದುವರೆಗೆ ಇಷ್ಟೊಂದು ಕಡಿಮೆ ಅವಧಿಯಲ್ಲಿ ಯಾವ ಸರ್ಕಾರಗಳೂ ಇಷ್ಟೊಂದು ಸಾಧನೆಯನ್ನು ಮಾಡಿರಲಾರರು. ಅದೂ ಒಂದು ತಿಂಗಳೊಳಗಾಗಿ ತನ್ನ ಕೆಲಸವನ್ನು ಅಷ್ಟೊಂದು ಶೀಘ್ರವಾಗಿ, ಅಚ್ಚುಕಟ್ಟಾಗಿ ಮಾಡಲು ಸಾಧ್ಯವಾಗುವುದು ಕಮ್ಯುನಿಸ್ಟರಿಗೆ ಮಾತ್ರ. ಕೇರಳದಲ್ಲಿ ಅವರ ಈ ಒಂದು ತಿಂಗಳಿನ ಸಾಧನೆಯನ್ನು ನೋಡಿದರೆ ಮುಂದಿನ ಐದು ವರ್ಷಗಳ ‘ಸಾಧನೆ’ ಇನ್ನೆಷ್ಟಿರಬಹುದು ಎಂಬ ಅಂದಾಜು ಸಿಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಕೇರಳ ಕೇರಳವಾಗಿಯೇ ಉಳಿಯುತ್ತದೆಯೋ ಎಂಬ ಸಂಶಯವೂ ಬರುತ್ತದೆ.
ಕೇರಳದಲ್ಲಿ ಕಮ್ಯುನಿಸ್ಟರು ಅಡಳಿತ ಆರಂಭಿಸಿ ನಿನ್ನೆಗೆ ಒಂದು ತಿಂಗಳಾಯಿತು. ಈ ಒಂದು ತಿಂಗಳಿನಲ್ಲಿ ಎದೆ ನಡುಗಿಸುವ ಹಲವು ಘಟನೆಗಳು ನಡೆದವು. ಆದರೂ ಬಿಜೆಪಿ ಆಡಳಿತವನ್ನು ಎರಡೇ ದಿನಗಳಲ್ಲಿ ವಿಮರ್ಶೆಗೆ ಒಡ್ಡುವಂತೆ ಯಾರೂ ಕಮ್ಯುನಿಸ್ಟ್ ಅಡಳಿತವನ್ನು ವಿಮರ್ಶೆ ಮಾಡಲಿಲ್ಲ. ಅಚ್ಯುತಾನಂದರನ್ನು ಪಿಣರಾಯಿ ವಿಜಯನ್ ಮೂಲೆಗುಂಪು ಮಾಡಿದ ಎಂಬ ಎಂಬ ಒಂದು ಸಂಗತಿಯನ್ನು ಮಾಧ್ಯಮಗಳು ಇನ್ನೂ ಗುನುಗುತ್ತಿವೆ. ಈ ಒಂದು ತಿಂಗಳಲ್ಲಿ ನಡೆದ ಘಟನೆಗಳನ್ನು ಯಾವ ಚಿತ್ರನಟನೂ ಅಸಹಿಷ್ಣುತೆ ಎಂದು ಕರೆಯಲಿಲ್ಲ, ಯಾವ ಪತ್ರಕರ್ತನೂ ಅರಾಜಕತೆ ಎಂದು ಬಣ್ಣಿಸಲಿಲ್ಲ. ಹಾಗಾದರೆ ಕೇರಳ ಕಮ್ಯುನಿಸ್ಟರ ತಿಂಗಳ ಸಾಧನೆ ಏನು? ಮತ್ತಷ್ಟು ಓದು »

25
ಮಾರ್ಚ್

ಕಾಂಗ್ರೆಸ್-ಕಮ್ಯುನಿಷ್ಟರ ಮೈತ್ರಿ, ಬಂಗಾಳಕ್ಕೆ ಸಿಕ್ಕಿದ್ದು ಕರಾಳ ರಾತ್ರಿ

-ಶ್ರೀನಿವಾಸ ರಾವ್

bengalಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಕೊಲೆ, ದಾಳಿ – ಭಯೋತ್ಪಾದನೆಗೆ ಧರ್ಮವಿಲ್ಲ- ಕಮ್ಯುನಿಷ್ಟರು
26/11ರ ಮುಂಬೈ ದಾಳಿ, ದಾಳಿ ಮಾಡಿದ್ದು ಇಸ್ಲಾಮ್ ನ ಭಯೋತ್ಪಾದಕರು -ಭಯೋತ್ಪಾದನೆಗೆ ಧರ್ಮವಿಲ್ಲ- ಬುದ್ಧಿಜೀವಿಗಳು, ಕಮ್ಯುನಿಷ್ಟರು. ಉಗ್ರ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆ – ಭಯೋತ್ಪಾದನೆಗೆ ಧರ್ಮವಿಲ್ಲ!

ಭಾರತದಲ್ಲಾಗಲೀ ಅಥವಾ ವಿದೇಶಗಳಲ್ಲಿ ಇಸ್ಲಾಂ ನ ಮೂಲಭೂತವಾದಿಗಳು, ಮತಾಂಧ ಉಗ್ರರು ದಾಳಿ ನಡೆಸಿದಾಗಲೆಲ್ಲಾ ’ಭಯೋತ್ಪಾದನೆಗೆ ಧರ್ಮವಿಲ್ಲ’ವೆಂಬ ಹೇಳಿಕೆ (ready made statement) ಸಿದ್ಧವಾಗಿರುತ್ತದೆ. ಇಂಥದ್ದೊಂದು ಹೇಳಿಕೆಯನ್ನು coin(ಪರಿಚಯಿಸಿದ್ದೇ)ಮಾಡಿದ್ದೇ ಈ ಕಮ್ಯುನಿಷ್ಟರು ಹಾಗೂ ಕಮ್ಯುನಿಷ್ಟರ ಕೃಪಾಪೋಷಿತ ಬುದ್ಧಿಜೀವಿಗಳು. ಭಯೋತ್ಪಾದಕರ ದಾಳಿ ನಡೆದಾಗಲೆಲ್ಲಾ ಇವರಿಂದ ಇಂಥಹ ಹೇಳಿಕೆ ಬರುವುದಾದರೂ ಯಾಕೆ ಅಂದುಕೊಂಡಿದ್ದೀರಿ? ಇಸ್ಲಾಮ್ ಗೆ ಪರ್ಯಾಯವಾದ, ಅಂಥಹದ್ದೇ ಒಂದು ಭಯೋತ್ಪಾದನೆಯನ್ನು ಇವರೂ ಪರಿಚಯಿಸಿದ್ದಾರೆ ಆದ್ದರಿಂದ…
ಮತ್ತಷ್ಟು ಓದು »

18
ಮೇ

ಜಗತ್ತಿನ ಪ್ರಶ್ನೆಗಳಿಗೆ ನಿರುತ್ತರ ಕೊರಿಯ

– ರೋಹಿತ್ ಚಕ್ರತೀರ್ಥ

ಉತ್ತರ ಕೊರಿಯಾಫೆಬ್ರವರಿ 12, 2013. ಮಂಗಳವಾರ. ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಒಬಾಮ ಟಿವಿಗಳಲ್ಲಿ ಕಾಣಿಸಿಕೊಂಡು, “ಈ ಪ್ರಯತ್ನ ಕೂಡಲೇ ನಿಲ್ಲಬೇಕು. ಇಲ್ಲವಾದರೆ ತಕ್ಕ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ” ಅಂತ ಘೋಷಿಸಿದ್ದೇ ತಡ, ಒಂದರ ಹಿಂದೊಂದರಂತೆ ಘೋಷಣೆ, ಬೆದರಿಕೆಗಳ ಸುರಿಮಳೆ. ಜಪಾನ್, ದಕ್ಷಿಣ ಕೊರಿಯ, ರಷ್ಯ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ, ಮಲೇಷಿಯಾದಂತಹ ಹತ್ತುಹಲವಾರು ದೇಶಗಳ ಅಧ್ಯಕ್ಷರುಗಳು ತಮ್ಮ ಹೇಳಿಕೆಗಳನ್ನು ತಾರಕಸ್ವರದಲ್ಲಿ ಕೂಗಿ ಹೇಳಲು ಕ್ಯೂ ನಿಂತುಬಿಟ್ಟರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾ ಕಿ ಮೂನ್ ಕೂಡ, “ನಿಮ್ಮ ಪ್ರಯೋಗಗಳನ್ನು ಕೂಡಲೇ ಸ್ಥಗಿತಗೊಳಿಸಿ. ಇಲ್ಲವಾದರೆ ಪ್ರತಿರೋಧ ಎದುರಿಸಿ” ಅಂತ ಘಂಟಾಘೋಷವಾಗಿ ಹೇಳಿದರು. ಹೆಗಲಿಗೆ ಕೈಹಾಕಿ ಕುಶಲ ಕೇಳುವ ಗೆಳೆಯ ಚೀನಾ ಕೂಡ (ಒಳಗೊಳಗೆ ಬೆಂಬಲಿಸಿದರೂ), ಈ ಪರೀಕ್ಷೆಗಳನ್ನೆಲ್ಲ ಕೈಬಿಟ್ಟು ಸುಮ್ಮನಿದ್ದರೆ ಏನು ನಷ್ಟ? ಅಂತ ಆಪ್ತಸಲಹೆ ಕೊಟ್ಟು ಕೈತೊಳೆದುಕೊಂಡಿತು.

ಇಷ್ಟೆಲ್ಲ ಅಧ್ವಾನಕ್ಕೆ ಕಾರಣವಾಗಿದ್ದು ಉತ್ತರ ಕೊರಿಯ ಎಂಬ ದೇಶ, ತಾನೇ ಹೇಳಿಕೊಂಡಂತೆ – ಬಹಳ ಸಣ್ಣಪ್ರಮಾಣದಲ್ಲಿ ನಡೆಸಿದ, ಮಾಪಕಗಳಲ್ಲಿ 4.9ರಷ್ಟು ದಾಖಲಾದ ನ್ಯೂಕ್ಲಿಯರ್ ಪರೀಕ್ಷೆ. 2006ರ ಪರೀಕ್ಷೆಯ ಹತ್ತುಪಟ್ಟು, 2009ರ ಪರೀಕ್ಷೆಯ ಎರಡು ಪಟ್ಟು ಶಕ್ತಿಶಾಲಿಯಾಗಿದ್ದ ಈ ಪರೀಕ್ಷೆಯಿಂದ ಉತ್ತರ ಕೊರಿಯ ಅಮೆರಿಕೆಗೆ ತನ್ನ ತಾಕತ್ತು ತೋರಿಸಲು ಹೊರಟಿತ್ತು. ಗಾಯದ ಮೇಲೆ ಗೀರೆಳೆದಂತೆ, ಪರೀಕ್ಷೆ ನಡೆಸಿದ ಮೇಲೆ, “ನಮ್ಮ ವ್ಯವಹಾರಗಳಲ್ಲಿ ಪದೇಪದೇ ಮೂಗು ತೂರಿಸುವ ಅಮೆರಿಕಕ್ಕೆ ನಾವು ಕೊಡುತ್ತಿರುವ ಎಚ್ಚರಿಕೆ ಇದು. ಅದರ ಹಸ್ತಕ್ಷೇಪ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರೀಕ್ಷೆಗಳನ್ನು ನಡೆಸುತ್ತ ಹೋಗುತ್ತೇವೆ” ಅಂತ ಹೇಳಿಕೆ ಕೂಡ ಬಿಡುಗಡೆ ಮಾಡಿತು. ಅಚ್ಚರಿಯ ಮಾತೆಂದರೆ “ಜಗತ್ತಿನ ಸೂಪರ್ ಪವರ್ ನಾಯಕನಾಗಿ ಹೊರಹೊಮ್ಮುತ್ತಿರುವ ನಮ್ಮ ದೇಶದ ಯುದ್ಧ ಸಿದ್ಧತೆಗೆ ಹೆದರಿ ಬಾಲಮುದುರಿ ಕುಂಯ್‍ಗುಡುತ್ತಿರುವ ಅಮೆರಿಕ” ಅಂತ ರಾಷ್ಟ್ರೀಯ ಚಾನೆಲ್‍ನಲ್ಲಿ ಬಂದ ಸುದ್ದಿಯನ್ನು ನೋಡಿ ಪ್ಯೊಂಗ್‍ಯಾಂಗಿನ ಬೀದಿಗಳಲ್ಲಿ ಜನ ಸಂಭ್ರಮಿಸಿ ಕುಣಿದರು! ದೇಶಪ್ರೇಮ ಎನ್ನುತ್ತೀರೋ, ಹಿಸ್ಟೀರಿಯ ಎನ್ನುತ್ತೀರೋ!

ಈ ಎಲ್ಲ ರಾಜಕೀಯ ಪ್ರೇರಿತ ರಾದ್ಧಾಂತ, ಗೊಂದಲಗಳನ್ನು ಬದಿಗಿಟ್ಟು ಈ ಕತೆಯ ಸುತ್ತ ಹಬ್ಬಿಬೆಳೆದ ಹುತ್ತವನ್ನು ತಡವುತ್ತ ಹೋದರೆ, ಕೊನೆಗೆ ನಮಗೆ ಹಾವು ಗೋಚರಿಸಬಹುದೋ ಏನೋ! ಹಾಗಾಗಿ, ಉತ್ತರ ಕೊರಿಯದ ಸುತ್ತ ಸುಮ್ಮನೆ ನಿಷ್ಪಕ್ಷಪಾತವಾಗಿ ಒಂದು ಸುತ್ತು ಹಾಕ್ಕೊಂಡು ಬರೋಣ, ಬನ್ನಿ. ಮತ್ತಷ್ಟು ಓದು »