ಕೇಸರಿಕರಣ ಅಂದರೆ ಕೇಸರಿ ಬಣ್ಣದ ಪುಸ್ತಕವೇ?
– ಅಶ್ವಿನ್ ಅಮೀನ್
ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ ‘ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್’ ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ.
ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ ‘ಕೇಸರೀಕರಣ’ ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ ‘ಕೇಸರಿ’ ಎಂಬ ಕಲರ್ ಕೋಡ್ ಕೊಟ್ಟವರು ಯಾರು?… ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ ‘ಭಾರತೀಯ’ ದೊರೆ ‘ಪೌರವ’ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಔರಂಗಜೇಬನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ ‘ಹಸಿರೀಕರಣ’ವಾಗದೆ?!!!! ಅದಕ್ಕೇಕೆ ನೀವು ‘ಹಸಿರು’ ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೇಸರೀಕರಣವಾಗುತ್ತದೆ?
ಮಾಧ್ಯಮಗಳೇಕೆ ಹೀಗೆ ?
ನಟನೆಗೆ ಚೌಕಟ್ಟು ಇದೆಯೇ……..?
ಪ್ರೇಮ, ಯುದ್ಧ ಮತ್ತು ಚುನಾವಣೆಯಲ್ಲಿ ಎಲ್ಲವೂ ನ್ಯಾಯವೇ
-ಚಾಮರಾಜ ಸವಡಿ
ಕೆಲವೊಬ್ಬರು ಏನು ಮಾಡಿದರೂ ವಿವಾದವಾಗುತ್ತದೆ. ಅವರು ಸೃಜನಶೀಲ ಕ್ಷೇತ್ರದಲ್ಲಿದ್ದರಂತೂ ವಿವಾದ ಇನ್ನಷ್ಟು ತೀವ್ರ. ಕನ್ನಡದ ಮಟ್ಟಿಗೆ ಆ ಕೀರ್ತಿ ಎಸ್.ಎಲ್. ಭೈರಪ್ಪ ಅವರದಾದರೆ, ಭಾರತೀಯ ಇಂಗ್ಲಿಷ್ ಬರಹಗಾರರ ಪೈಕಿ ಆ ಪಟ್ಟ ಸಲ್ಮಾನ್ ರಶ್ದಿಗೆ.ಪ್ರಜಾಪ್ರಭುತ್ವದ ಶಿಕ್ಷಣ
-ರಾವ್ ಎವಿಜಿ
ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್ ಮತದಾರನ ವಿವೇಕವನ್ನು ಆಧರಿಸಿರುತ್ತದೆ.
- ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
- ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ ? ಮತ್ತಷ್ಟು ಓದು

ಶ್ರಾದ್ಧ … ಆಚರಣೆ
-ಪ್ರಕಾಶ್ ನರಸಿಂಹಯ್ಯ
ಹುಟ್ಟು ಅಂದಮೇಲೆ ಸಾವು ನಿಶ್ಚಿತ. ಹುಟ್ಟಿನೊಂದಿಗೆ ಪ್ರಾರಂಭವಾಗುವ ಜೀವನ ಯಾತ್ರೆ ಮರಣದೊಂದಿಗೆ ಮುಗಿಯುತ್ತವೆ. ಅಂತ್ಯಸಂಸ್ಕಾರ ನಡೆಯುತ್ತವೆ . ನಂತರದಲ್ಲಿ ಮೃತ ವ್ಯಕ್ತಿಗೆ ಹಲವಾರು ಸಂಸ್ಕಾರಗಳು ನಡೆಯುತ್ತವೆ. ಸತ್ತ ದಿನದಿಂದ ಹದಿನಾಲ್ಕು ದಿನಗಳವರೆಗೆ ಹಲವಾರು ರೀತಿಯ ಕರ್ಮಗಳನ್ನು ಅವರವರ ಪದ್ದತಿಗನುಸಾರವಾಗಿ ಮತ್ತು ಸಂಪ್ರದಾಯದಂತೆ ಮಾಡುತ್ತಾರೆ. ಮೃತ ವ್ಯಕ್ತಿಯ ಮಕ್ಕಳು ಸಾಮಾನ್ಯವಾಗಿ ಈ ಕರ್ಮವನ್ನು ಮಾಡುತ್ತಾರೆ.ನಂತರದಲ್ಲಿ ಪ್ರತಿ ವರ್ಷ ಮೃತರ ನೆನಪಿನಲ್ಲಿ ಶ್ರಾದ್ಧ ಕರ್ಮಅಥವಾ ತಿಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡುವುದು ರೂಡಿಯಲ್ಲಿದೆ.
ಸಂಸ್ಕೃತಿ ಸಂಕಥನ – 19 – ವಿಚಾರಕ್ಕೂ ಆಚಾರಕ್ಕೂ ಏನು ಸಂಬಂಧ ?
-ರಮಾನಂದ ಐನಕೈ
ನಮ್ಮೂರಿನಲ್ಲಿ ಒಬ್ಬರು ವಿಚಾರವಂತರಿದ್ದಾರೆ. ನಿಜವಾಗಲೂ ಅವರು ಚಿಂತಕರೆ, ನಾವೆಲ್ಲ ತಮಾಷೆಗಾಗಿ ಅವರನ್ನು ಸೆಕ್ಯುಲರ್ ಚಿಂತಕರು ಎಂದು ಕರೆಯುತ್ತೇವೆ. ಯಾವತ್ತೂ ವೇದಿಕೆಯ ಮೇಲೆ ಅವರು ನಾಸ್ತಿಕತೆಯ ಕುರಿತಾಗಿ ಮಾತನಾಡುತ್ತಾರೆ. ದೇವರುಗಳನ್ನು ಟೀಕಿಸುತ್ತಾರೆ. ಗ್ರಾಮೀಣ ಜನರ ಆಚಾರಗಳು ಮೌಢ್ಯವೆಂದು ಗುರುತಿಸುತ್ತಾರೆ. ಹೊರಗೆ ಬಂದಾಗ ಹೆಂಡ, ಸಿಗರೇಟುಗಳೆಲ್ಲ ಅವರ ಆಪ್ತ ಸಂಗಾತಿಗಳು. ಆದರೆ ಆ ವ್ಯಕ್ತಿ ಅವರ ಊರಿನಲ್ಲಿ ಒಬ್ಬ ಪೂಜಾರಿ. ಮನೆಯಲ್ಲಿ ಕರ್ಮಠ ಆಸ್ತಿಕರು. ಜಪ-ತಪ, ಮಡಿ-ಮೈಲಿಗೆ ಮುಂತಾದವುಗೆಳೆಲ್ಲವೂ ಅವರ ನಿತ್ಯಕರ್ಮಗಳು. ಜ್ಯೋತಿಷ್ಯ, ಶಕುನ ಮುಂತಾದವುಗಳೆಲ್ಲದರಲ್ಲೂ ಪ್ರವೀಣರು. ಶನಿವಾರ ಅವರ ಮನೆ ಮುಂದೆ ಜನರ ಸರದಿ ಇರುತ್ತದೆ. ಈ ವ್ಯಕ್ತಿಯನ್ನು ನಾವು ಯಾವ ರೀತಿ ಅರ್ಥೈಸೋಣ? ಸಾರ್ವಜನಿಕವಾಗಿ ಅವರು ವ್ಯಕ್ತಪಡಿಸುವ ವಿಚಾರಗಳು ನಿಜವೇ ಇರುತ್ತದೆ. ವೈಯಕ್ತಿಕವಾಗಿ ಅವರು ವ್ಯಕ್ತಪಡಿಸುವ ವಿಚಾರಗಳು ನಿಜವೇ ಇರುತ್ತದೆ. ವೈಯಕ್ತಿಕವಾದ ಅವರ ಆಚರಣೆಯೂ ಶುದ್ಧವಾಗಿರುತ್ತದೆ. ಇವೆರಡರಲ್ಲಿ ಯಾವುದು ತಪ್ಪು ಅನ್ನಲು ಸಾಧ್ಯ? ಇದೇ ಭಾರತದ ಆಧುನಿಕ ವಿಚಾರವಾದಿಗಳ ಸಮಸ್ಯೆ.
ವಿಜ್ಞಾನಿಯೊಬ್ಬರು ದೇವರ ಫೋಟೋ ಪೂಜಿಸುವುದು, ದೇವಸ್ಥಾನಕ್ಕೆ ಹೋಗುವುದು ಹಾಸ್ಯಾಸ್ಪದ ಅನಿಸುತ್ತದೆ. ಲಕ್ಷ್ಮೀ ಪೂಜೆಯ ದಿನ ಕಂಪ್ಯೂಟರಿಗೆ ಬಿಳಿಪಟ್ಟೆ ಎಳೆದು ಪೂಜಿಸಿದರೆ ನಗು ಬರುತ್ತದೆ. ಸೂರ್ಯ, ಚಂದ್ರ ಭೂಮಿಯ ಪರ್ಯಟನದಿಂದಾಗಿ ಗ್ರಹಣವಾಗುತ್ತದೆ ಎಂಬ ವೈಜ್ಞಾನಿಕ ಸತ್ಯ ನಮಗೆ ಗೊತ್ತಿದೆ. ಆದರೂ ಉಪವಾಸ ಇರುತ್ತೇವೆ. ದೇವರನ್ನು ಮುಳುಗಿಸಿಬಿಡುತ್ತೇವೆ. ಮನೆಯ ಬಿಟ್ಟು ರಸ್ತೆಗೇ ಬರುವುದಿಲ್ಲ. ಗ್ರಹಣದ ನಂತರ ಸ್ನಾನ ಮಾಡುತ್ತೇವೆ. ಯಾಕೆ? ತಿಳಿದಿರುವುದೊಂದು ಮಾಡುವುದೊಂದು, ಹೇಳುವುದೊಂದು ಮಾಡುವುದೊಂದು. ಇದನ್ನೇ ಸೋಗಲಾಡಿತನ ಎಂದು ಟೀಕಿಸುತ್ತೇವೆ.
ಭಗವಾನ್ ರಮಣ ಮಹರ್ಷಿಗಳ ಸಂದೇಶ – 2
–ಪ್ರಕಾಶ್ ನರಸಿಂಹಯ್ಯ
ತನ್ನ ತಾನು ಅರಿಯಲು ಬ್ರಹ್ಮಜ್ಞಾನ ಪ್ರಾಪ್ತಿಯಾಗಬೇಕೆ?. ಈ ಬ್ರಹ್ಮಜ್ಞಾನ ಪಡೆಯಲು ಸಾಮಾನ್ಯರಿಗೆ ಸಾಧ್ಯವೇ? ಈ ಪ್ರಶ್ನೆಯನ್ನು ಭಗವಾನ್ ರಮಣ ಮಹರ್ಷಿಗಳಲ್ಲಿ ಒಬ್ಬ ವಿದೇಶಿ ಭಕ್ತ ನಿವೇದಿಸಿಕೊಂಡ.
ಆಗ ಮಹಷಿಗಳು ಕೊಟ್ಟ ಸ್ಪಷ್ಟ ಉತ್ತರ ಏನೆಂದರೆ “ಬ್ರಹ್ಮಜ್ಞಾನವೆಂಬುದು ಸಂಪಾದಿಸುವ ವಿದ್ಯೆಯಲ್ಲ; ಬ್ರಹ್ಮಜ್ಞಾನ ಪಡೆಯುವುದರಿಂದ ಸಂತೋಷ ವಾಗಿರಬಹುದೆಂದು ಆಶಿಸಿದರೆ ಇದೊಂದು ತಪ್ಪು ಗ್ರಹಿಕೆ. ನಿಮ್ಮೊಳಗಿರಬಹುದಾದ ಈ ತಪ್ಪುಗ್ರಹಿಕೆ ಹೇಗಿದೆಯೆಂದರೆ ಹತ್ತು ಜನ ಧಡ್ಡರು ನದಿದಾಟಿದಂತಿದೆ.” ಎಂದು ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದರು. ” ಹತ್ತು ಜನ ಧಡ್ಡರು ನದಿ ದಾಟಲು ಸಿದ್ದರಾದರು. ಎಲ್ಲರೂ ಈಜಿ ದಡವನ್ನು ಸೇರಿದರು. ದಡ ಸೇರಿದ ನಂತರ ಎಲ್ಲರೂ ಬಂದು ತಲುಪಿರವರೆ, ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕೆಂದು ತಂಡದ ನಾಯಕನು ಎಲ್ಲರ ತಲೆಯನ್ನು ಎಣಿಸಿದ. ಒಂಬತ್ತು ಜನ ಮಾತ್ರ ಲೆಕ್ಕಕ್ಕೆ ಸಿಕ್ಕಿದರು. ಪುನಃ ಎಣಿಸಿದ, ಆಗಲು ಅಷ್ಟೇ! ಮತ್ತೊಬ್ಬನನ್ನು ಕರೆದು ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಣಿಸಲು ಹೇಳಿದ. ಆಗಲೂ ಒಂಬತ್ತು ಜನರೇ! ನಾಯಕನಿಗೆ ಗಾಭರಿ ಆಯ್ತು. ಏನೂ ತೋಚದೆ ಎಲ್ಲರು ಅಳಲು ಪ್ರಾರಂಭಿಸಿದರು. ಇವರ ಅಳುವನ್ನು ಕೇಳಿ ದಾರಿಯಲ್ಲಿ ಬರುತ್ತಿದ್ದ ದಾರಿಹೋಕ ಏನೆಂದು ವಿಚಾರಿಸಿದ. ನಾಯಕ ಎಲ್ಲವನ್ನು ವಿಸ್ತಾರವಾಗಿ ವಿವರಿಸಿದ. ದಾರಿಹೋಕ ಸುಮ್ಮನೆ ಎಣಿಸಿನೋಡುವಾಗ ಸರಿಯಾಗಿ ಹತ್ತು ಜನರಿದ್ದರು. ಆಗ ಎಲ್ಲರನ್ನು ಸಾಲಾಗಿ ನಿಲ್ಲಿಸಿ ಎಲ್ಲರ ಬೆನ್ನು ಮೇಲೆ ಒಂದೊಂದು ಪೆಟ್ಟು ಕೊಡುತ್ತ ಎಣಿಸಿದ. ಎಲ್ಲರು ಸೇರಿ ಹತ್ತು ಜನರಾದರೆಂದು ತಿಳಿದಮೇಲೆ ಸಂತೋಷಗೊಂಡ ದಡ್ಡರು ದಾರಿಹೋಕನನ್ನು ಕೊಂಡಾಡಿದರು. ಹತ್ತೂ ಜನರು ತಮ್ಮ ಪ್ರಯಾಣವನ್ನು ಮುದುವರೆಸಿದರು.” ಕಥೆಯನ್ನು ಮುಗಿಸಿ ಒಂದು ಕ್ಷಣ ಸುಮ್ಮನಾದರು.
ಕನ್ನಡ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಆಸೆಯೇ?
–ಓಂ ಶಿವಪ್ರಕಾಶ್
ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಂತೂ, ಅದನ್ನು ಬಳಸುವ ಸಾಮಾನ್ಯನಿಂದ ಹಿಡಿದು, ತಂತ್ರಜ್ಞಾನದ ಜೊತೆಗೇ ದಿನದೂಡುವ ತಂತ್ರಜ್ಞನವರೆಗೂ ಎಲ್ಲರಿಗೂ ಕನ್ನಡ ಬಳಸುವ ಮತ್ತು ಬೆಳೆಸುವ ಆಸೆ ಖಂಡಿತ ಇರುತ್ತದೆ. ಅಂತಹ ಆಸೆಗಳನ್ನು ಮತ್ತೆ ಚಿಗುರಿಸಿ, ಮಾಹಿತಿ ತಂತ್ರಜ್ಞಾನದ ಬಳಕೆದಾರನ ದಿನನಿತ್ಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, ಕನ್ನಡದ ತಾಂತ್ರಿಕ ಬೆಳವಣಿಗೆಗೆ ನಾಂದಿಯಾಗಲು ನಾವು ಇಡಬೇಕಾದ ‘ಹೆಜ್ಜೆಗಳು” ಅನೇಕ.
ದೈನಂದಿನ ಬದುಕಿನಲ್ಲಿ ತಂತ್ರಜ್ಞಾನದ ಮುಖೇನ ಕನ್ನಡದಲ್ಲೇ ವ್ಯವಹರಿಸಬಹುದೇ? ಕನ್ನಡದ ತಾಂತ್ರಿಕ ಬೆಳವಣಿಗೆ ಹೇಗೆ ಸಾಧ್ಯ? ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ ಹೇಗೆ? ಕನ್ನಡ ಭಾಷಾ ತಂತ್ರಜ್ಞಾನ ಬೆಳವಣಿಗೆಯ ತೊಡಕುಗಳ ನಿವಾರಣೆ ಸಾಧ್ಯವೇ? ತಂತ್ರಾಂಶಗಳು ನಡೆಯಬೇಕಿರುವ ಹಾದಿಯ ಕಿರು ಪರಿಚಯ ಎಲ್ಲಿ ಸಿಗಬಹುದು? ಇದಕ್ಕೊಂದು ಸಮುದಾಯವಿದೆಯೇ? ಈ ಸಮುದಾಯ ಅಭಿವೃದ್ದಿಯ ಪರಿಕಲ್ಪನೆ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ‘ಹೆಜ್ಜೆ’ ರೂಪಿತಗೊಂಡಿದೆ.
ಮಾಹಿತಿ ತಂತ್ರಜ್ಞಾನದ ವಿವಿಧ ಸ್ತರಗಳಲ್ಲಿ ಕನ್ನಡದ ಬೆಳವಣಿಗೆಗೆ ಬೇಕಾದ ವಿಷಯಗಳ ಬಗ್ಗೆ ಅನುಭವಿ ತಜ್ಞರು, ತಂತ್ರಜ್ಞರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಪ್ರಾರಂಭವಾಗುವ ಈ ಕಾರ್ಯಕ್ರಮ, ಮೇಲೆ ಹೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳುವ ‘ಹೆಜ್ಜೆ’ಗಳ ಹಾದಿಯನ್ನು ನಿಮ್ಮ ಮುಂದೆ ತೆರೆಯಲಿದೆ.
ಬನ್ನಿ ನಮ್ಮೊಡನೆ ಜೊತೆಜೊತೆಯಾಗಿ ಹೆಜ್ಜೆ ಹಾಕಿ, ನಿಮ್ಮ ಬರುವಿಕೆಯನ್ನು ಇಂದೇ ಕಾಯ್ದಿರಿಸಿ
* * * * * *
ಚಿತ್ರಕೃಪೆ : hejje.sanchaya.net
ಭಾಷಾ ಆಯಾಮದಲ್ಲಿ “Consumer Protection Act”
ಒಬ್ಬ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಮೋಸವಾಗದಂತೆ ರಕ್ಷಣೆ ಕೊಡಲು “Consumer Protection Act” ಮಸೂದೆಯನ್ನು 1986 ನಲ್ಲಿ ಅಂಗೀಕರಿಸಲಾಯಿತು. ಒಬ್ಬ ಕನ್ನಡಿಗನಿಗೆ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ಪಡೆಯಲು ಈ ಮಸೂದೆ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ.ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು (ವ್ಯಾಲ್ಯೂಸ್) ಕಲಿಸುವುದು ಹೇಗೆ?
-ರಾವ್ ಎವಿಜಿ
ಮೌಲ್ಯಗಳು ಎಂದರೇನು ಎಂಬ ಪ್ರಶ್ನೆಗೆ ‘ನಿರ್ದಿಷ್ಟ ವಸ್ತು, ಕ್ರಿಯೆ ಮತ್ತು ಸನ್ನಿವೇಶಗಳಿಗೆ ವ್ಯಕ್ತಿಗಳು ನೀಡುವ ಬೆಲೆಗೆ ಸಂಬಂಧಿಸಿದ ಅದ್ವಿತೀಯ ಶಾಬ್ದಿಕ ಪರಿಕಲ್ಪನೆಗಳು’ ಎಂಬ ಸೈದ್ಧಾಂತಿಕ ಉತ್ತರ ನೀಡಬಹುದಾದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಸರ್ವಸಮ್ಮತ ಉತ್ತರ ನೀಡುವುದು ಕಷ್ಟ. ಕೆಲವು ವಿಶೇಷಜ್ಞರು ವ್ಯಕ್ತಿಯ ಮನೋಧರ್ಮಗಳ (ಆಟಿಟ್ಯೂಡ್) ಸಂಘಟನೆಯನ್ನು ಮೌಲ್ಯ ಎಂದು ಉಲ್ಲೇಖಿಸುವುದೂ ಉಂಟು. ಅದೇನೇ ಇರಲಿ ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ ಯಾವುದು ತಪ್ಪು, ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಬಹುತೇಕ ಸನ್ನಿವೇಶಗಳಲ್ಲಿ ನಾವು ಕೈಗೊಳ್ಳುವ ಮೌಲ್ಯಾಧಾರಿತ ತೀರ್ಮಾನಗಳು ವ್ಯಕ್ತಿನಿಷ್ಠವೂ ಸಾಪೇಕ್ಷವೂ ಆಗಿರುತ್ತವೆ. (ಅ) ನಿರ್ದಿಷ್ಟ ಅಂಶಕ್ಕೆ ನಾವು ಎಷ್ಟು ಬೆಲೆ ಕೊಡುತ್ತೇವೆ ಎಂಬುದನ್ನು ಸೂಚಿಸುವ ಪರಿಮಾಣಾತ್ಮಕ ಆಯಾಮ, (ಆ) ನಿರ್ದಿಷ್ಟ ಮೌಲ್ಯಕ್ಕೆ ನಾವು ಎಷ್ಟು ಬದ್ಧರಾಗಿರುತ್ತೇವೆ ಎಂಬುದನ್ನು ಸೂಚಿಸುವ ಗುಣಾತ್ಮಕ ಆಯಾಮ ಮತ್ತು (ಇ) ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳ ನಡುವಿನ ಸಂಬಂಧವನ್ನು ಸೂಚಿಸುವ ಅಂತರ್- ಸಂಬಂಧ ಆಯಾಮ – ಈ ಮೂರು ಆಯಾಮಗಳು ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳಿಗೆ ಇರುತ್ತವೆ.




