ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕ್ರಿಶ್ಚಿಯಾನಿಟಿ’

14
ಮೇ

ನಾಡು-ನುಡಿ : ಮರುಚಿಂತನೆ – ಮೂಲಭೂತವಾದದ ಒಂದು ಸೆಕ್ಯುಲರ್ ಅವತಾರ

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಮೂಲಭೂತವಾದಿ ಸೆಕ್ಯುಲರಿಸಂಪ್ರಗತಿಪರರು ಕ್ರೈಸ್ತ ಹಾಗೂ ಮುಸ್ಲಿಂ ಸಮಾಜಗಳನ್ನು ಟೀಕಿಸುವ ಕ್ರಮಕ್ಕೂ ಹಿಂದೂ ಸಮಾಜವನ್ನು ಟೀಕಿಸುವ ಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ಸಮಾಜಗಳಲ್ಲಿ ಯಾವುದಾದರೂ ತಪ್ಪು ಆಚರಣೆಯ ಕುರಿತು ಚರ್ಚೆ ಎದ್ದರೆ ಅವನ್ನು ಅವರ ಪವಿತ್ರಗ್ರಂಥಗಳು ಸಮರ್ಥಿಸಲು ಸಾಧ್ಯವೇ ಇಲ್ಲ ಎಂಬುದು ಇವರ ಧೃಡ ನಂಬಿಕೆ. ಅವು ಏನಿದ್ದರೂ ಇಂದಿನ ಅನುಯಾಯಿಗಳ ಅಜ್ಞಾನಕ್ಕೆ ಸಂಬಂಧಿಸಿದ್ದು ಅಷ್ಟೆ. ಉದಾಹರಣೆಗೆ, ಇಂದು ಭಯೋತ್ಪಾದನೆಯ ಕುರಿತು ನಡೆಯುವ ಚರ್ಚೆಗಳನ್ನು ಗಮನಿಸಿ. ಪ್ರತಿಯೊಬ್ಬರೂ ಕೂಡ ಅವು ಇಸ್ಲಾಂನ ಪವಿತ್ರಗ್ರಂಥಗಳಿಗೆ ವಿರುದ್ಧವಾಗಿವೆ ಎಂಬ ತರ್ಕವನ್ನಿಟ್ಟೇ ಅವುಗಳನ್ನು ಖಂಡಿಸುತ್ತಾರೆ. ಅಂದರೆ ಅವರ ಕೃತ್ಯಗಳನ್ನು ಇಸ್ಲಾಂನ ನಿರ್ದೇಶನಗಳಲ್ಲ ಎಂಬುದಾಗಿ ನೋಡುವುದು ಅತ್ಯಂತ ನಿರ್ಣಾಯಕವಾಗಿದೆ. ಜಿಹಾದಿಗೆ ಸಂಬಂಧಿಸಿದಂತೆ, ಬುರ್ಖಾಕ್ಕೆ ಸಂಬಂಧಿಸಿದಂತೆ, ತಲಾಖ್‍ಗೆ ಸಂಬಂಧಿಸಿದಂತೆ, ಹೀಗೆ ಇದುವರೆಗೆ ಎಷ್ಟು ಚರ್ಚೆಗಳು ಎದ್ದಿವೆಯೋ ಅವುಗಳಲ್ಲೆಲ್ಲ ಎಲ್ಲೂ ಕೂಡ ಪವಿತ್ರ ಗ್ರಂಥದ ನಿಂದನೆ ಆಗದಂತೇ ಎಚ್ಚರವಹಿಸಿ ವಾದಗಳನ್ನು ಬೆಳೆಸಲಾಗುತ್ತದೆ. ಅಂದರೆ ಇಸ್ಲಾಂ ರಿಲಿಜನ್ನು ಮೂಲತಃ ಒಳ್ಳೆಯದು, ಇಂದಿನ ದುಷ್ಪರಿಣಾಮಕ್ಕೆ ಅದು ಹೊಣೆಯಲ್ಲ ಎಂಬುದು ಇವರ ವಾದ.

ಇದರಲ್ಲೇನು ಸ್ವಾರಸ್ಯ? ಎಂದು ನೀವು ಹುಬ್ಬೇರಿಸಬಹುದು. ಪ್ರತಿಯೊಂದು ಮತಾನುಯಾಯಿಗಳಿಗೂ ತಮ್ಮ ಮತದ ಕುರಿತು ನಂಬಿಕೆ ಇರುವುದು ಸ್ವಾಭಾವಿಕ. ಆದರೆ ನಾನು ಹೇಳುತ್ತಿರುವುದು ಶ್ರದ್ಧಾವಂತ ಮುಸ್ಲಿಮರ ಕಥೆಯಲ್ಲ, ಬದಲಾಗಿ ತಾವು ಪ್ರಗತಿಪರರೆಂದು, ಸೆಕ್ಯುಲರ್‍ವಾದಿಗಳು ಅಥವಾ ಬುದ್ಧಿಜೀವಿಗಳೆಂದು ಕರೆದುಕೊಂಡ ಮುಸ್ಲಿಮರ ಕಥೆ. ಇದು ಮುಸ್ಲಿಂ ಬುದ್ಧಿಜೀವಿಗಳದೊಂದೇ ಕಥೆಯಲ್ಲ, ಸೆಕ್ಯುಲರ್ ಎಂದು ಕರೆದುಕೊಂಡ ಹಿಂದೂ ಬುದ್ಧಿಜೀವಿಗಳ ಕಥೆ ಕೂಡಾ ಹೌದು.  ಅಂದರೆ ಯಾವ ರಿಲಿಜನ್ನುಗಳಿಗೂ ಸೇರದೇ ತಟಸ್ಥವಾಗಿ ಚಿಂತನೆ ನಡೆಸಬೇಕೆಂದು ಪ್ರತಿಪಾದಿಸುವವರು. ಇದುವರೆಗೆ ಮುಸ್ಲಿಮರ ಪವಿತ್ರಗ್ರಂಥವೇ ಸರಿಯಿಲ್ಲ ಎಂದು ಯಾವ ಮುಸ್ಲಿಂ ಅಥವಾ ಹಿಂದೂ ಸೆಕ್ಯುಲರ್ ಬುದ್ಧಿಜೀವಿ ಕೂಡ ಹೇಳಿದ್ದು ನಾನು ಕೇಳಿಲ್ಲ. ಹಾಗಂತ ಅವರು ಹಾಗೆ ಹೇಳಬೇಕಿತ್ತು ಅಂತಾಗಲೀ, ಯಾರದಾದರೂ ಪವಿತ್ರಗ್ರಂಥವನ್ನು ನಿಂದಿಸುವುದು ಸರಿಯೆಂದಾಗಲೀ ನಾನಿಲ್ಲಿ ಸೂಚಿಸುತ್ತಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತೇನೆ. ನಾನು ನಿಮ್ಮ ಗಮನ ಸೆಳೆಯಲೆತ್ನಿಸುವುದು ನಮ್ಮ ಬುದ್ಧಿಜೀವಿಗಳ ಈ ಧೋರಣೆಯ ಕುರಿತು. ಅವರು ಅಪ್ರಾಮಾಣಿಕರು ಅಂತ ನನ್ನ ಹೇಳಿಕೆಯಲ್ಲ. ಅವರಿಗೆ ನಿಜವಾಗಿಯೂ ಹಾಗೇ ಅನಿಸುತ್ತದೆ ಅಂತಲೇ ಇಟ್ಟುಕೊಳ್ಳೋಣ.
ಮತ್ತಷ್ಟು ಓದು »

2
ಏಪ್ರಿಲ್

“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು

 – ರಾಕೇಶ್ ಶೆಟ್ಟಿ

Chimu Kalburgiಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದುಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.

ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ಹಿಂದೂ ಎಂಬ ಧರ್ಮವೇ ಇಲ್ಲಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆಎನ್ನುತ್ತಾ ಮುಂದುವರೆದೂ ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನುಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ಹಿಂದು ಧರ್ಮಕ್ಕೆ ಸೇರಿದ ಮಠಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ಸನಾತನಿ ಹಿಂದೂಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ಹಿಂದುಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.

ಮತ್ತಷ್ಟು ಓದು »

29
ಡಿಸೆ

ಮತಾಂತರ ಸರಿಯಾದರೇ ,ಮರುಮತಾಂತರವೇಕೆ ತಪ್ಪು?

– ರಾಕೇಶ್ ಶೆಟ್ಟಿ

Conversionಹೀಗೆ ಹತ್ತು ದಿನಗಳ ಹಿಂದೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಹತ್ತಿರ ಒಂದು ಜಾಹೀರಾತು ಓದಿದ್ದೆ.”೧೫ ಕಥೆಗಳು ನಿಮ್ಮ ಜೀವನವನ್ನೇ ಬದಲಾಯಿಸುವವು” ಅಂತ ಬರೆದಿತ್ತು.ಇದ್ಯಾವುದೋ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಜಾಹೀರಾತು ಎಂದುಕೊಂಡೆ.ಆದರೆ,ಇತ್ತೀಚೆಗೆ ದಿನ ಪತ್ರಿಕೆಗಳ ಮುಖಪುಟದಲ್ಲೂ ದೊಡ್ಡದಾಗಿ ಇದೇ ಜಾಹೀರಾತು “ಅನುಭವಿಸಿ ಬದಲಾಯಿಸುವ ಶಕ್ತಿ – ೧೫ ಕಥೆಗಳು ನಿಮ್ಮ ಜೀವನವನ್ನು ಬದಲಾಯಿಸುವುದು” ಎಂದು ಕಾಣಿಸಲಾರಂಭಿಸಿತು. ಪ್ರತಿದಿನ ಜಾಹೀರಾತು ಕೊಡುವಂತದ್ದು ಈ ಪುಸ್ತಕದಲ್ಲಿ ಅಂತದ್ದೇನಿದೆ ಎಂದು ಓದುವ ಕೂತುಹಲವಾಗಿ ಓದಿದೆ.ಮೂರ್ನಾಲ್ಕು ಪುಟ ಓದಿದಂತೆ ಪುಸ್ತಕದ ಮುಂದಿನ ಪುಟಗಳಲ್ಲಿ ಏನಿರಬಹುದು ಮತ್ತು ಈ ಪುಸ್ತಕ ಓದಿದವರು ಏನಾಗಿ ಬದಲಾಗಬೇಕು ಎಂಬ ಉದ್ದೇಶವಿದೆಯೆಂದು ಖುದ್ದು ಅನುಭವಿಸಿದೆ!

ಆ ಪುಸ್ತಕದಲ್ಲಿ ಬಾಲಿವುಡ್ ನಟ ಜಾನಿಲಿವರ್,ನಟಿ ನಗ್ಮಾ ಇನ್ನೂ ಹಲವರು ತಮ್ಮ ತಮ್ಮ ಕತೆಗಳನ್ನು ಹೇಳಿ ಕೊಂಡಿದ್ದಾರೆ.ಈ ಪುಸ್ತಕದ ಸರಳ ಸಾರಾಂಶವೇನೆಂದರೆ,”ಬೈಬಲ್ ಮತ್ತು ಜೀಸಸ್” ಮಾತ್ರ ಸತ್ಯ ಮತ್ತು ಅವು ಮಾತ್ರವೇ “ಪಾಪಿ”ಗಳಾದ ಮನುಷ್ಯ ಬದುಕಿನ ಬಿಡುಗಡೆಯ ಹಾದಿ ಎಂಬುದು!.ಅದೊಂದೇ ಮಾತ್ರ ಸತ್ಯವೆಂದಾದರೆ,ಉಳಿದ ರಿಲಿಜನ್ನುಗಳು, ಸಂಪ್ರದಾಯಗಳು ಮತ್ತು ಭಿನ್ನ ಹಾದಿಗಳೆಲ್ಲವೂ ಸುಳ್ಳು ಅಂತಾಯಿತಲ್ಲ! ಈ ಪುಸ್ತಕದ ಉದ್ದೇಶವನ್ನು ಇನ್ನೂ ಸರಳ ಮಾಡುವುದಾದರೆ ಅಥವಾ ಸಾಮಾನ್ಯಜನರ ಭಾಷೆಯಲ್ಲಿ ಹೇಳುವುದಾದರೆ,ಜನರನ್ನು ಕ್ರಿಸ್ತ ಮತಕ್ಕೆ ಬನ್ನಿ ಎಂದು ಕರೆಯುವ ಮತಾಂತರದ ಹೊಸ ತಂತ್ರವಷ್ಟೇ.ಈ ಬಗ್ಗೆ ಯಾವ ಮೀಡಿಯಾಗಳು,ಯಾವ ಸೆಕ್ಯುಲರ್ ನಾಯಕನೂ ಅಬ್ಬರಿಸಿ ಬೊಬ್ಬಿರಿಯಲಿಲ್ಲ,ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಮೊಸಳೆ ಕಣ್ಣೀರೂ ಸುರಿಸಲಿಲ್ಲ.

ಮತ್ತಷ್ಟು ಓದು »

7
ಆಗಸ್ಟ್

ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೇಕೆ ಇವರಿಗೆ ಈ ಪರಿ ಕೋಪ?”

– ರಾಕೇಶ್ ಶೆಟ್ಟಿ

ಗಂಗಾ ಪೂಜೆಫೇಸ್ಬುಕಿನಲ್ಲಿ ದಿನಕ್ಕೆ ಅದೆಷ್ಟು ಲಕ್ಷ ಸ್ಟೇಟಸ್ ಅಪ್ಡೇಟ್ ಗಳು ಬರುತ್ತವೆಯೋ ಗೊತ್ತಿಲ್ಲ.ಅವುಗಳಲ್ಲಿ ಜೊಳ್ಳು-ಕಾಳು ಎಲ್ಲವೂ ಇರುತ್ತವೆ.ಇತ್ತೀಚೆಗೆ ನಮ್ಮ ಮೀಡಿಯಾಗಳಲ್ಲಿ “ಪ್ರಭಾ” ಎನ್ನುವವರ ಫೇಸ್ಬುಕ್ ಟಿಪ್ಪಣಿಯ ಮೇಲೆ “ವಿ.ಆರ್ ಭಟ್” ಅವರು ಮಾಡಿದ ಪ್ರತಿಕ್ರಿಯೆ ದೊಡ್ಡ ವಿವಾದವನ್ನೇ ಸೃಷ್ಟಿಸಿ, ಭಟ್ಟರ ಮೇಲೆ ಕೇಸು ದಾಖಲಾಗಿ ಅವರ ಬಂಧನವೂ ಆಯಿತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಆ ಸ್ಟೇಟಸ್ಸಿನಲ್ಲಿ,ಪ್ರಭಾ ಅವರು “ಪುರೋಹಿತಶಾಹಿ” ಗಳನ್ನು ಟೀಕಿಸಿ ಅವರ ಮೇಲೆ ಸಿಟ್ಟು ಮಾಡಿಕೊಂಡು ಬರೆದಿದ್ದರು. ಭಟ್ಟರ ಕಮೆಂಟಿನ ಗಲಾಟೆಯಲ್ಲಿ ಕಳೆದು ಹೋಗಿದ್ದು, ಪ್ರಭಾ ಅವರು ಬರೆದ ಸ್ಟೇಟಸ್ಸಿನಲ್ಲಿದ್ದ “ಪುರೋಹಿತಶಾಹಿ”ಯ ಬಗ್ಗೆ ಆಗಬೇಕಿದ್ದ ಚರ್ಚೆ.

ಈ ಲೇಖನವನ್ನು ಓದುತ್ತಿರುವ ಬಹುತೇಕ ಜನ ಸಾಮಾನ್ಯರಿಗೆ “ಪುರೋಹಿತಶಾಹಿ” ಎಂದರೇನು ಎನ್ನುವ ಪ್ರಶ್ನೆ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಹಾಗಾಗಿ ಪುರೋಹಿತಶಾಹಿಯನ್ನು ಅರ್ಥವೇನು ನೋಡೋಣ.

ಪುರೋಹಿತರು ಎಂದರೆ ದೇವರು ಮತ್ತು ಮಾನವನ ನಡುವಿನ ಮಧ್ಯವರ್ತಿಗಳು ಹಾಗೂ ಧರ್ಮದ ಏಕಸ್ವಾಮ್ಯ (ಒಂದರ್ಥದಲ್ಲಿ Copy Rights) ವನ್ನು ಹೊಂದಿದ್ದಾರೆ. ಶಾಹಿ ಎಂದರೆ ಆಳ್ವಿಕೆ ಎಂದರ್ಥ. ಪುರೋಹಿತರ ಆಳ್ವಿಕೆಯೇ “ಪುರೋಹಿತಶಾಹಿ”.

ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೆಕೆ ಇವರಿಗೆ ಈ ಪರಿ ಕೋಪ?”

ಬುದ್ಧಿಜೀವಿಗಳ Definitionನ ಪ್ರಕಾರ “ಪುರೋಹಿತಶಾಹಿ”ಯೆಂದರೆ ದೇವರ ಬಗ್ಗೆ ಭಯ ಮೂಡಿಸಿ ಜನರನ್ನು ಮೂರ್ತಿ ಪೂಜೆಗಳಲ್ಲಿ ತೊಡಗಿಸಿ,ನೆಪ ಹೇಳಿ ಜೇಬು ತುಂಬಿಸಿಕೊಳ್ಳುವವರು ಮತ್ತು ಭವಿಷ್ಯ ಇತ್ಯಾದಿ ನೆಪದಲ್ಲಿ ಮೋಸ ಮಾಡುವವರು” ಅನ್ನುವ ಧಾಟಿಯಲ್ಲಿರುತ್ತದೆ. (ಬಹುಷಃ ಇದಕ್ಕಿಂತ ಉತ್ತಮ Definition ಇದ್ದರೂ ಇರಬಹುದು)

ಒಟ್ಟಾರೆಯಾಗಿ ಬುದ್ಧಿಜೀವಿಗಳ ಈ ಪುರೋಹಿತಶಾಹಿಯ ಕುರಿತ ಮೇಲಿನ Definition ಅನ್ನು ಅರ್ಥಮಾಡಿಕೊಂಡಾಗ ತಿಳಿಯುವುದೇನೆಂದರೆ, ದೇವರು ಮತ್ತು ಜನ ನಡುವಿನ ಮಧ್ಯವರ್ತಿಗಳಾದ ಈ ಪುರೋಹಿತರು ಜನರನ್ನು ನಮ್ಮ ಧರ್ಮ ಗ್ರಂಥಗಳು ಮತ್ತು ಆಚರಣೆಗಳಿಂದ ದೂರವಿರಿಸಿ ಮೂರ್ತಿ ಪೂಜೆಯ ಮೂಲಕ ಮೋಸ ಮಾಡಿ ಸಮಾಜವನ್ನು/ಧರ್ಮವನ್ನು ಹಾಳು ಮಾಡುತಿದ್ದಾರೆ”

ನಮ್ಮ ಬುದ್ಧಿಜೀವಿಗಳ ಈ ವಾದದ ಮೂಲವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.ಆಗ ನಮಗೆ ಮುಂದಿನ ಚರ್ಚೆಯ ಹಾದಿ ಸುಲಭವಾಗಾಹುದು.

ಮತ್ತಷ್ಟು ಓದು »

19
ಜೂನ್

ಕಲ್ಬುರ್ಗಿ,ಕಲ್ಲು ಮತ್ತು Colonial Consciousness

– ರಾಕೇಶ್ ಶೆಟ್ಟಿ

consciousnessಬೆಂಗಳೂರಿನ ವಿಜ್ಞಾನ ಭವನದಲ್ಲಿ ಜೂನ್ ೯ರ ಸೋಮವಾರ ನಡೆದ ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ವಯಸ್ಸಿನಲ್ಲಿ ಹಿರಿಯರಾದ (ಕೇವಲ ವಯಸ್ಸಿನಲ್ಲಷ್ಟೇ) ಪ್ರೊ.ಎಂ.ಎಂ. ಕಲ್ಬುರ್ಗಿಯವರು, ” ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು. ಅವುಗಳಿಗೆ ಕಾಯುವ ಶಕ್ತಿಯೂ ಇಲ್ಲ, ಕಾಡುವ ಶಕ್ತಿಯೂ ಇಲ್ಲ. ದೇವತೆ, ದೇವಾಲಯಗಳ ವಿರುದ್ಧ ಚಳವಳಿ ನಡೆಯಬೇಕು.” ಅಂತೆಲ್ಲ ಬಡಬಡಿಸಿ ಎಲ್ಲರಿಂದ ತಪರಾಕಿ ಹಾಕಿಸಿಕೊಂಡ ಮೇಲೆ “ನಾ ಹಂಗೇ ಹೇಳೇ ಇಲ್ಲಾರೀ, ನಾನು ಹಿಂದೂ ಇದ್ದೀನಿ, ನಾನ್ಯಾಕೇ ಮೂತ್ರ ಮಾಡಿ ಅಂತ ಹೇಳ್ತೀರ್ರೀ… ಅನಂತಮೂರ್ತಿ ಹಿಂಗ್ ಬರ್ದಾರಾ ಅಂತ ನಾನ್ ಸಭಿಯೋಳಗ ಹೇಳಿನ್ರೀ… ತಪ್ಪ್ ತಿಳಿ ಬ್ಯಾಡರ್ರೀ…” ಅಂತೆಲ್ಲ ಸೃಷ್ಟೀಕರಣ ಕೊಟ್ಟರು.

ನಿಜವಾಗಿ ಕಲ್ಬುರ್ಗಿಯವರ ಮನಸ್ಸಿನಲ್ಲಿದ್ದಿದ್ದು “ಮೂರ್ತಿ”ಗಳ ಮೇಲೆ ಮೂತ್ರ ಮಾಡಿದ ಹೊರೆ ಹೊರಿಸಿ ಅದರ ಜೊತೆಗೆ ಮೂರ್ತಿ ಪೂಜೆ ಮಾಡುವ ಜನರ “ಮೌಢ್ಯ” (ಅವರ ಮಂದ ಬುದ್ದಿಯ ಪ್ರಕಾರ) ನಿವಾರಿಸುವುದಾಗಿತ್ತು ಅನ್ನಿಸುತ್ತದೆ.ಕಲ್ಬುರ್ಗಿಯವರು ಹೀಗೆ ಹೇಳಿಕೆ ಕೊಡುವುದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ (“ಮೂರ್ತಿ” ಮತ್ತು “ಮೌಢ್ಯ”) ಹೊಡೆಯುವ ಆಲೋಚನೆಯಲ್ಲಿದ್ದರೇನೋ.ಪಾಪ!

“ಮೂರ್ತಿ”ಗಳ ಮೇಲೆ ಕಲ್ಬುರ್ಗಿಯವರಿಗೆ ಈ ವಿಶೇಷ ಮಮತೆ ಯಾಕೆ? ಪ್ರಜಾವಾಣಿಯಲ್ಲಿ “ಮೂರ್ತಿ”ಗಳಿಗೆ ೧೦ ಲಕ್ಷ ಸರ್ಕಾರಿ ಕಾಣಿಕೆ ಕೊಟ್ಟದ್ದನ್ನು ವಿರೋಧಿಸಿ ಸೋತುಹೋಗಿದ್ದ ಕಲ್ಬುರ್ಗಿಗಳು,”ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ” ಅನ್ನುವ ಮೂಲಕ ಸೇಡು ತೀರಿಸಿಕೊಂಡರು, ಅನ್ನುವಲ್ಲಿಗೆ ಅವರ ಹೇಳಿಕೆಯ ಮೊದಲನೇ “ಹಕ್ಕಿ” ಯಾವುದೆಂದು ಹೊಳೆಯುತ್ತದೆ.

ಅಸಲಿಗೆ ತಪ್ಪೆಲ್ಲ ಆಯ್ಕೆ ಸಮಿತಿಯದ್ದು!
“ಪರಾವಲಂಬಿ ಜೀವಿ”ಗಳ ನಡುವೆ “ಪ್ರಶಸ್ತಿ/ಹಣ”ವನ್ನು ಸಮನಾಗಿ ಹಂಚಿದ್ದರೆ ಮೂತ್ರ,ಮೂರ್ತಿ ಇತ್ಯಾದಿ ವಿವಾದಗಳೇ ಆಗ್ತಿರ್ಲಿಲ್ಲ ಮಾರ್ರೆ. ಎಲ್ಲವನ್ನೂ ಒಬ್ಬರಿಗೆ ಕೊಟ್ಟರೆ.ಇನ್ನೊಬ್ಬರಿಗೆ (ತಮಗಾದ) ಅನ್ಯಾಯವನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ(!) ಇದ್ದೇ ಇರುತ್ತದಪ್ಪ… (ಸೂ : “ಪರಾವಲಂಬಿ ಜೀವಿ”ಗಳನ್ನು ಕೆಲವರು “ಬುದ್ಧಿಜೀವಿ”ಗಳು ಅನ್ನುತ್ತಾರೆ.ನಾನು ಇನ್ಮುಂದೆ ಪ್ರೀತಿಯಿಂದ “ಪರಾವಲಂಬಿ ಜೀವಿ” ಎನ್ನುತ್ತೇನೆ)

ಮತ್ತಷ್ಟು ಓದು »