ಯಥಾ ಗುರು ಹಾಗೆ ಶಿಷ್ಯ
ಪವನ್ ಪಾರುಪತ್ತೇದಾರ
ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.
ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು. ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಇದ್ದೇ ಇವೆ. ಮತ್ತಷ್ಟು ಓದು 




