ದಿನೇ ದಿನೇ ಹೆಚ್ಚುತ್ತಿರುವ ‘ಮೋದಿ ಜಪ’
– ನರೇಂದ್ರ ಕುಮಾರ ಎಸ್.ಎಸ್
ದಿನಗಳೆದಂತೆ, ೨೦೧೪ರ ಮಹಾ ಚುನಾವಣೆಯು ಹತ್ತಿರ ಬಂದಂತೆ ಭಾರತದಾದ್ಯಂತ ‘ಮೋದಿ ಜಪ’ ಹೆಚ್ಚುತ್ತಿದೆ. ಇದನ್ನು ಕೆಲವರು ‘ಮೋದಿ ಜ್ವರ’, ‘ಮೋದಿತ್ವ’ ಎಂದೂ ಬಣ್ಣಿಸುತ್ತಿರುವರು. ಯಾರು ಏನೇ ಹೇಳಲಿ, ಭಾರತದಾದ್ಯಂತ ನಿತ್ಯವೂ ಚರ್ಚಿಸಲ್ಪಡುತ್ತಿರುವ ಒಂದು ವಿಷಯವೆಂದರೆ “ನರೇಂದ್ರ ಮೋದಿ”. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಾದ ಟ್ವಿಟ್ಟರ್ ಹಾಗೂ ಪೇಸ್^ಬುಕ್ ಗಳಲ್ಲಿ, ಯುವಕರು ನಡೆಸುವ ಚರ್ಚೆಗಳಲ್ಲಿ, ಕ್ಷೌರಿಕನ ಅಂಗಡಿಯಲ್ಲಿ ನಡೆಯುವ ವಾರ್ತಾಲಾಪಗಳಲ್ಲಿ, ಹಳ್ಳಿಗಳಲ್ಲಿ ನಡೆಯುವ ಸಂಭಾಷಣೆಗಳಲ್ಲಿ – ಎಲ್ಲರೂ ಮೋದಿಯ ಕುರಿತು ಮಾತನಾಡುತ್ತಿದ್ದಾರೆ! ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಜನರ ಚರ್ಚೆಗಳಲ್ಲಿ ಇಷ್ಟರಮಟ್ಟಿಗೆ ಹೊಕ್ಕಿರುವ ಮತ್ತೊಂದು ಹೆಸರಿಲ್ಲ.
ನಾನು ಕೆಲವು ದಿನಗಳ ಹಿಂದೆ, ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದೆ. ರಸ್ತೆಗಳೆಲ್ಲ ಗುಂಡಿಗಳಿಂದ ಗಬ್ಬೆದ್ದು ಹೋಗಿದ್ದವು. ಈ ರೀತಿ ಸ್ವಲ್ಪ ಹೊತ್ತು ಪ್ರಯಾಣಿಸಿದ ನಂತರ, ನನಗೆ ನಾನೇ “ಯಾವಾಗ ಸರಿ ಹೋಗುತ್ತೋ ನಮ್ಮ ಬೆಂಗಳೂರು” ಎಂದು ಸ್ವಲ್ಪ ಗಟ್ಟಿಯಾಗಿ ಹೇಳಿಕೊಂಡೆ. ಕೂಡಲೇ, ಆಟೋ ರಿಕ್ಷಾದ ಚಾಲಕ, “ಸಾರ್, ನರೇಂದ್ರ ಮೋದಿಯವರಿಗೆ ಒಂದು ಚಾನ್ಸ್ ಕೊಟ್ಟು ನೋಡಿ, ಎಲ್ಲಾ ಸರಿ ಹೋಗುತ್ತೆ” ಎಂದು ಬಿಡೋದೇ!?
ಮೂರ್ತಿಗಳೇ,ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು.ಆದರೆ,ಗೆದ್ದಿದ್ದು ಕಳಿಂಗ …!
– ರಾಕೇಶ್ ಶೆಟ್ಟಿ
ಭಾರತ ಬಿಡದಿರಲು ನಿರ್ಧರಿಸಿದ ಮೇಲೆ ನಮ್ಮ ಅನಂತ ಮೂರ್ತಿಯವರು, ಕಳೆದ ವಾರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮೋದಿಯಂತೆ ಸೈಬರ್ ಸೈನ್ಯ ಕಟ್ಟಲು ಹೇಳಿ ಮತ್ತೊಮ್ಮೆ ಸುದ್ದಿಯಾದರು.
ಭಾರತದ ದೇಶ ಕಂಡ ಬೃಹತ್ ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು ಮೂರ್ತಿಗಳೇ.ಆದರೆ ಅವನೆದುರು ಸೋತು ಗೆದ್ದಿದ್ದು ’ಕಳಿಂಗ’ …! ಸಾಮ್ರಾಟ ಅಶೋಕನ ಸೈನ್ಯದೆದುರಿಗೆ ಕಳಿಂಗ ಅನ್ನುವ ಪುಟ್ಟ ರಾಷ್ಟ್ರ ಏನೇಂದರೇ ಏನು ಆಗಿರಲಿಲ್ಲ.ಅವರಲ್ಲಿ ಅಶೋಕನ ಬಳಿಯಿದ್ದಷ್ಟು ಶಸ್ತ್ರ-ಅಸ್ತ್ರಗಳಿರಲಿಲ್ಲ,ಸೈನ್ಯವೂ ಇರಲಿಲ್ಲ.ಅವರಲ್ಲಿ ಇದ್ದಿದ್ದು ಸ್ವಾಭಿಮಾನ ಮತ್ತು ಧೈರ್ಯ. ಸಾಮ್ರಾಟ ಅಶೋಕನ ಸೈನ್ಯಕ್ಕೆ ಎದೆಯೊಡ್ಡಿ ಅವರು ಹೇಳಿದ್ದು “ನೀನು ಮಹಾನ್ ಸಾಮ್ರಾಟನಿರಬಹುದು,ನಿನ್ನ ಶಕ್ತಿ ಅಸಾಧಾರಣವಿರಬಹುದು.ಆದರೆ,ನಮಗೆ ಕನಿಷ್ಟ ಆತ್ಮಾಭಿಮಾನದಿಂದ ಸಾಯುವ ಅಧಿಕಾರವಾದರೂ ಇದೆ- ನೀನದನ್ನು ನಮ್ಮಿಂದ ಕಿತ್ತುಕೊಳ್ಳಲಾರೆ” ಅನ್ನುವುದೇ ಆಗಿತ್ತು.
ನೀವು ದುಡ್ಡು ಕೊಟ್ಟು,ಏನು ಮಾಡಬೇಕು ಅಂತ ಹೇಳಿಕೊಟ್ಟು ಕಟ್ಟಬಹುದಾದ ಸೈಬರ್ ಸೈನ್ಯ ಸಾಮ್ರಾಟ ಅಶೋಕನ ಸೈನ್ಯದಂತೆಯೇ ಅಗಾಧವಾಗಿರಬಹುದು.ಆದರೆ ಅದಕ್ಕೆದುರಾಗಿ ನಿಂತಿರುವುದು ಸ್ವಾಭಿಮಾನಿ ’ಕಳಿಂಗ’ದಂತಹ ಸೈನ್ಯ. ಈ ಸೈನಿಕರು ದುಡ್ಡಿಗಾಗಿ,ಅಧಿಕಾರಕ್ಕಾಗಿ,ಆಯ್ಕೆ ಸಮಿತಿಗಳ ಸ್ಥಾನಗಳಿಗಾಗಿ,ವಿವಿಗಳ ನಾಮಫಲಕಗಳಲ್ಲಷ್ಟೇ ರಾರಾಜಿಸುವ, ವಿವಿಗಳ ಕುರ್ಚಿ ಬಿಸಿ ಮಾಡುವ ಹುದ್ದೆಗಳಿಗಾಗಿಯೋ ಇಲ್ಲ ಪ್ರಶಸ್ತಿಗಳಿಗಾಗಿಯೋ ಕಾದು ಕುಳಿತಿರುವ ಅವಕಾಶವಾದಿಗಳಲ್ಲ.ಇವರೆಲ್ಲ ಕೇಂದ್ರ ಸರ್ಕಾರದ ಭ್ರಷ್ಟಚಾರದ ವಿರುದ್ಧ ಜೊತೆಯಾದವರು. ನಿಮ್ಮ ಸೆಕ್ಯುಲರ್ ಬ್ರಿಗೇಡ್ ಕಳೆದ ೧೧ ವರ್ಷಗಳಲ್ಲಿ ಮೋದಿ ಅನ್ನುವವನ ಮೇಲೆ ಏಕಪಕ್ಷೀಯವಾಗಿ ಕಟ್ಟುತ್ತ ಬಂದ ಸುಳ್ಳಿನ ಕೋಟೆಯನ್ನು ಕಂಡು ರೋಸಿ ಹೋಗಿ, ಆ ಸುಳ್ಳಿನ ಕೋಟೆಯ ಭೇಧಿಸಲು ತಾನಾಗೇ ಹುಟ್ಟಿಕೊಂಡ ಸೈನ್ಯ. ನಿಮ್ಮ ಸೆಕ್ಯುಲರ್ ಬ್ರಿಗೇಡಿನ ಸುಳ್ಳುಗಳಿಗೆ ಸಾಕ್ಷಿ ಬೇಕಾದರೇ, ನಿಮ್ಮದೇ ಹೇಳಿಕೆಯ ಸುತ್ತ ತಿರುಗೋಣ ಬನ್ನಿ ಮೂರ್ತಿಗಳೇ,
ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಯಾರ ಸ್ವತ್ತು ಅನಂತ ಮೂರ್ತಿಗಳೇ?
– ನವೀನ್ ನಾಯಕ್
ಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಅನಂತ ಮೂರ್ತಿಯವರು ” ನರೇಂದ್ರ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಬದುಕಿರಲು ಇಷ್ಟಪಡುವುದಿಲ್ಲ ” ಎಂಬ ಹೇಳಿಕೆ ನೀಡಿ ಮೋದಿ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು.ತದನಂತರ ನಡೆದ ಸಂದರ್ಶನದಲ್ಲಿ ಅನಂತ ಮೂರ್ತಿಯವರು ” ಮೋದಿ ಪ್ರಧಾನಿಯಾಗಬಾರದೆಂದು ” ಎಂಬ ಉದ್ದೇಶದಿಂದ ಹಾಗೆ ಹೇಳಿದೆ. ಯೌವನದಲ್ಲಿಯಾಗಿದ್ದರೆ ಮೋದಿ ಪ್ರಧಾನಿಯಾಗಗೊಡವುದಿಲ್ಲ ಅಂತ ಹೇಳುತ್ತಿದ್ದೆ ಈಗ ವಯಸ್ಸಾಗಿದೆ ಅದಕ್ಕೆ ಹಾಗೆ ಹೇಳಿದೆ,ನನ್ನ ನಿಲುವೊಂದೆ ಮೋದಿ ಈ ದೇಶದ ಪ್ರಧಾನಿಯಾಗಬಾರದು. ಇದರರ್ಥ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಅರ್ಥವಲ್ಲ ವೆಂದು ಸಮಜಾಯಿಸಿ ನೀಡಿದರು.
ಹಾಗೆ ಮೋದಿ ಅಭಿಮಾನಿಗಳು ನೀಡುತ್ತಿರುವ ಉತ್ತರ ಮತ್ತು ಅವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ ಅಧಿಕಾರವಿಲ್ಲದೇನೇ ಹೀಗೆ ಇನ್ನು ಮೋದಿ ಅಧಿಕಾರವಹಿಸಿಕೊಂಡ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಇರೋದೇ ಇಲ್ಲ, ಇದು ನಿಜವಾದ ಅಪಾಯವೆಂದಿದ್ದಾರೆ. ಅದೇ ಸಂದರ್ಶನದಲ್ಲಿ ಪ್ರಜಾಪ್ರಭುತ್ವವಾದಿಗೆ ಪ್ರಜಾಪ್ರಭುತ್ವವನ್ನು ಸಂಶಯದಿಂದ ನೋಡುವ ಶಕ್ತಿಯಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಮರುಳು ಮಾಡುವ ವಿಧಾನದಿಂದ ಆಯ್ಕೆಯಾಗಿ ಬರುವವರನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
ಅನಂತ ಮೂರ್ತಿಯವರಿಗೆ ಮಾತ್ರವೇ ಅಥವಾ ಅವರನ್ನು ಬೆಂಬಲಿಸುವವರಿಗೆ ಮಾತ್ರವೇ ಇರುವುದಾ ಆಭಿವ್ಯಕ್ತಿ ಸ್ವಾತಂತ್ರ್ಯ? ಇಲ್ಲಿ ಒಬ್ಬರ ಉದ್ದೇಶ ಮಾತ್ರ ಸ್ಪಷ್ಟಪಡಿಸಿಕೊಂಡರೆ ಅದು ಫ್ಯಾಸಿಸ್ಷ್ ಧೋರಣೆಯಾಗುತ್ತದೆ. ಕೇವಲ ಅನಂತಮೂರ್ತಿಯವರ ಹೇಳಿಕೆಗೆ ಅಥವ ಅವರನ್ನು ಸಮರ್ಥಿಸುವ ಹಿಂಬಾಲಕರಿಗೆ ಮಾತ್ರವಾ ಹಿಂದೆ ಉದ್ದೇಶವಿರುವುದು. ಆ ಹೇಳಿಕೆಯನ್ನು ಟೀಕಿಸುವವರಿಗೆ ಉದ್ದೇಶವಿಲ್ಲವೇ. ಅನಂತಮೂರ್ತಿಯವರು ನಾನು ಮೋದಿ ಪ್ರಧಾನಿಯಾದರೆ ಬದುಕಿರಲು ಇಷ್ಟಪಡುವುದಿಲ್ಲ ಎಂಬ ಹೇಳಿಕೆಗೆ ಅದಕ್ಕೆ ವಿರೋಧವಾಗಿ ನೀವು ಸಾಯಿರಿ ಎಂಬ ಹೇಳಿಕೆಯನ್ನು ಮೋದಿ ಅಭಿಮಾನಿಗಳು ಕೊಟ್ಟಿದ್ದಾರೆ. ಇಲ್ಲಿ ಮೋದಿ ಅಭಿಮಾನಿಗಳು ಕತ್ತಿ ಕುಡಾರಿ ಹಿಡಿದುಕೊಂಡು ಅನಂತಮೂರ್ತಿಯವರ ಹಿಂದೆ ಬಿದ್ದಿದ್ದಾರಾ, ಇಲ್ಲವಲ್ಲ. ಅವರ ಹೇಳಿಕೆಗೆ ಇದು ವಿರೋಧವಾಗುತ್ತೆ ವಿನಃ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಹೇಳಿಕೆಯ ಹಿಂದಿರುವ ಉದ್ದೇಶ ಎರಡೂ ಕಡೆ ಗಮನಿಸುವುದು ಉತ್ತಮ.
ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’
– ರಾಕೇಶ್ ಶೆಟ್ಟಿ
ಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.
೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!
ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,
“ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”
‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?
– ಪ್ರವೀಣ್ ಪಟವರ್ಧನ್
ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.
ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.
ಜಾನ್ ಮೆಕೇನ್ ಸ್ಪರ್ಧಿಯಾಗುವ ಮುನ್ನವೇ ಗೆದ್ದಿದ್ದರು ಒಬಾಮಾ, ಹಾಗೆಯೇ ಮೋದಿಯೂ!
– ಗೋಪಾಲ ಕೃಷ್ಣ
ಅದು 2008ರ ನವೆಂಬರ್ 04ನೇ ತಾರೀಖು. ಹಲವು ಕಾರಣಗಳಿಗೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವಿಶೇಷತೆ ಪಡೆದುಕೊಂಡಿತ್ತು. ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಬರಾಕ್ ಒಬಾಮಾ. ಎಲ್ಲಾ ಅಡೆತಡೆಗಳನ್ನು ದಾಟಿ ಚುನಾವಣೆಯ ಹೊಸ್ತಿಲಲ್ಲಿ ನಿಂತ ಒಬಾಮಾಗೆ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ಪ್ರತಿಸ್ಪರ್ಧಿಯಾಗಿದ್ದರು. ಒಬಾಮಾ ಅವರೇ ಗೆಲ್ಲುತ್ತಾರೆ ಎನ್ನುವುದು ಚುನಾವಣೆಗೂ ಮುನ್ನವೆ ಅಮೇರಿಕಾದಲ್ಲಿ ಮಾತ್ರವಲ್ಲ ಇಡಿ ವಿಶ್ವದಲ್ಲೇ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಆ ಪರಿಯ ಸಂಚಲನ ಮೂಡಿಸಿದ್ದರು ಒಬಾಮಾ. ಅವರ ಪ್ರಚಾರ ವೈಖರಿ, ಬದಲಾವಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದು, ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡದ್ದು ಎಲ್ಲವೂ ಒಬಾಮಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದವು. ಅಂತೆಯೇ ಗೆದ್ದು, ಅಧ್ಯಕ್ಷರಾದರು.
ಒಬಾಮಾ ಗೆಲುವಿನ ಹಾದಿಗೆ ಸಾಮ್ಯತೆ ಎನಿಸುವಂತಹ ಬೆಳವಣಿಗೆಗಳು ಭಾರತದಲ್ಲಿಯೂ ಗೋಚರಿಸುತ್ತಿವೆ, ಅದು ಮುಂದಿನ ಲೋಕಸಭಾ ಚುನಾವಣೆಗೆ. ಇದಕ್ಕೆ ಕಾರಣವಾಗಿರುವುದು ನರೇಂದ್ರ ಮೋದಿಯವರ ನಡೆಗಳು ಮತ್ತು ಅವರ ವಿರೋಧಿಗಳ ಅಡ್ಡಗಾಲುಗಳು.
ಒಬಾಮಾ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗುವುದು ಸುಲಭವಾಗಿರಲಿಲ್ಲ. ಜಾನ್ ಎಡ್ವಡ್ರ್ಸ್ ಮತ್ತು ಹಿಲರಿ ಕ್ಲಿಂಟನ್ ಅವರಿಂದ ಭಾರೀ ಸ್ಪರ್ಧೆಯನ್ನೇ ಎದುರಿಸಬೇಕಾಯಿತು. ಅದರಲ್ಲೂ ಹಿಲರಿ ಕ್ಲಿಂಟನ್ ಕೊನೆಯ ಕ್ಷಣದವರೆಗೂ ಒಬಾಮಾ ಹಾದಿಗೆ ಮುಳ್ಳಾಗುತ್ತಲೇ ಇದ್ದರು. ಅಧ್ಯಕ್ಷೀಯ ಚುನಾವಣೆಗಿಂತಲೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಅಮೇರಿಕಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿತ್ತು. ‘We ಓeeಜ ಅhಚಿಟಿge’ ‘ಅಊಂಓಉಇ, ತಿe ಛಿಚಿಟಿ’ ಎಂಬ ಘೋಷವಾಕ್ಯಗಳೊಂದಿಗೆ ಒಬಾಮಾ ಜನರ ಬಳಿಗೆ ಹೋದರು. ಹಿಲರಿ ಕ್ಲಿಂಟನ್ ‘ಇxಠಿeಡಿieಟಿಛಿe’ ಬಗ್ಗೆ ಮಾತನಾಡುತ್ತ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದರು. ಮೊದಮೊದಲು ಜನರ ಭಾವನೆಗಳು ಅನುಭವಿ ಎಂಬ ಕಾರಣಕ್ಕೆ ಹಿಲರಿಯತ್ತ ವಾಲುತ್ತಿದ್ದವು. ಒಬಾಮಾರಾದರೂ ಹೊಸಬರು, ಇನ್ನು ಕಲಿಯಬೇಕಾದ್ದು ಬಹಳಷ್ಟಿದೆ ಎಂಬ ಅಭಿಪ್ರಾಯವೂ ಮೂಡಿತ್ತು. ಆದರೆ ವಾಸ್ತವವನ್ನರಿತು ಬದಲಾವಣೆ ತರಲು ತನ್ನಲ್ಲಿರುವ ಸಾಮಥ್ರ್ಯವನ್ನು ಜನರಿಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟರು ಒಬಾಮಾ. ಹಿಲರಿ ತಮ್ಮ ಅನುಭವದ ಬಗ್ಗೆ ಹೇಳಿದರೆ ಹೊರತು, ಬದಲಾವಣೆಯ ಬಗ್ಗೆ ಜನರನ್ನು ಸೆಳೆಯಲಿಲ್ಲ. ಅಭ್ಯರ್ಥಿ ಆಯ್ಕೆಯಲ್ಲಿ ಒಬಾಮಾಗೆ ಶೇ.52ರಷ್ಟು ಮತ ಬಂದಿದ್ದರೆ, ಹಿಲರಿ ಶೇ.42 ಮತಗಳಿಗೆ ತೃಪ್ತಿಪಡಬೇಕಾಯಿತು. ಹಿರಿತನಕ್ಕಿಂತಲೂ ಇಚ್ಛಾಶಕ್ತಿಯೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದರು. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶವನ್ನು ಒಬಾಮಾಗೆ ತಂದಿತ್ತಿತು.
‘ಕುಮಾರ’ ಮುಖ್ಯಮಂತ್ರಿ ಗಾದಿಗೆ! ‘ಮೋದಿ’ ಪ್ರಧಾನಿ ಹುದ್ದೆಗೆ!
– ಗೋಪಾಲಕೃಷ್ಣ
ಅಭಿವೃದ್ಧಿಯೇ ಮಾತನಾಡುವುದಾದರೆ; ‘ಕುಮಾರಣ್ಣ’ ಮುಖ್ಯಮಂತ್ರಿ ಗಾದಿಗೆ! ‘ಮೋದಿಜಿ’ ಪ್ರಧಾನಿ ಹುದ್ದೆಗೆ!
ಅರವತ್ತಾರು ವಸಂತಗಳ ಬಂಧಮುಕ್ತ ಬದುಕು.ಈ ನಡುವೆ ದೇಶ ಕಂಡದ್ದು 13 ಮಂದಿ ಪ್ರಧಾನಮಂತ್ರಿಗಳನ್ನು. ರಾಜ್ಯವನ್ನಾಳಿದ್ದು 21 ಮುಖ್ಯಮಂತ್ರಿಗಳು. ಇವರೆಲ್ಲರಲ್ಲಿಯೂ; ದೇಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿಯವರನ್ನು ಮತ್ತೆ ಮತ್ತೆ ನೆನದರೆ, ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಮಾಜಿಕ ಪರಿಕಲ್ಪನೆ, ರಾಮಕೃಷ್ಣ ಹೆಗಡೆ ಅವಧಿಯ ಜನಪರ ಕಾರ್ಯಕ್ರಮಗಳು, ಎಸ್.ಎಂ.ಕೃಷ್ಣ ಅವರ ಲಯ ತಪ್ಪದ ಆಡಳಿತ, ಹೆಚ್.ಡಿ.ಕುಮಾರಸ್ವಾಮಿಯವರ ಇಪ್ಪತ್ತೇ ತಿಂಗಳ ಆಡಳಿತವನ್ನು ಮಾತ್ರ ಇಂದಿಗೂ ಮೆಲುಕು ಹಾಕುವಂತಾಗಿದೆ.
ಭಾರತದ ಜನಸಂಖ್ಯೆ 121 ಕೋಟಿಯನ್ನು ದಾಟಿರಬಹುದು. ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸುಮಾರು 5400 ಮಂದಿಯಷ್ಟೇ. ಆದರೆ, ಇಷ್ಟು ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಆಶಯಗಳಿಗೆ ತಕ್ಕಂತೆ ನಡೆಯುವುದು ಅಪರೂಪ. ಅವರುಗಳ ನಿಷ್ಠೆಯೇನಿದ್ದರೂ ದೇಶವಾದರೆ ಪ್ರಧಾನಿಗೆ! ರಾಜ್ಯವಾದರೆ ಮುಖ್ಯಮಂತ್ರಿಗೆ ಮೀಸಲು ಎಂಬಂತಿರುತ್ತದೆ. ಸಂವಿಧಾನದ ಪ್ರಕಾರ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯನ್ನು ಶಾಸಕರು, ಲೋಕಸಭಾ ಸದಸ್ಯರು ಆಯ್ಕೆ ಮಾಡಬೇಕು. ಆ ಪರಿಪಾಠ ಮುರಿದು ಬಿದ್ದು ಎಷ್ಟೋ ವರ್ಷಗಳು ಆಗಿವೆ. ಈಗೇನಿದ್ದರೂ ಚುನಾವಣಾ ಪೂರ್ವದಲ್ಲಿಯೇ ನಾಯಕನ ಆಯ್ಕೆ ಇಲ್ಲವೇ ಹೈಕಮಾಂಡ್ ಹೇಳಿದವರು ಅತ್ಯುನ್ನತ ಹುದ್ದೆಯಲ್ಲಿ ಕೂರುತ್ತಾರೆ.
ನರೇಂದ್ರ ಮೋದಿ v /s ರಾಹುಲ್ ಗಾಂಧಿ …ಅನುಭವಿ v /s ಅನನುಭವಿ
– ಅಜಿತ್ ಶೆಟ್ಟಿ,ಉಡುಪಿ
೨೦೧೪ ರ ಲೋಕಸಭೆ ಮಹಾಸಮರ ಇನ್ನೇನು ಬಂದೇ ಬಿಡುತ್ತೆ.ಎರಡು ಪ್ರಮುಖ ಒಕ್ಕೂಟಗಳಾದ ಎನ್.ಡಿ.ಎ ಹಾಗೂ ಯು.ಪಿ.ಎ ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಅಧಿಕೃತವಾಗಿ ಘೋಷಿಸದಿದ್ದರೂ, ತಮ್ಮ ಪ್ರಧಾನಿ ಅಭ್ಯರ್ಥಿಗೆ ಸಕಲ ವೇಷ-ಭೂಷಣ ತೊಡಿಸಿ ರಂಗಕ್ಕೆ ಇಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿವೆ. ನೆಹರು ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಚಿಂತನಾ ಶಿಬಿರ ದಲ್ಲಿ ಆ ವಂಶದ ಕುಡಿ , ನಲವತ್ತು ಮೀರಿದ ಯುವಕ ರಾಹುಲ್ ಗಾಂಧಿ ಯವರಿಗೆ ಪಕ್ಷದಲ್ಲಿ “ನಂಬರ್ ಟೂ” ಸ್ಥಾನ ಕೊಟ್ಟು ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ವೀರಪ್ಪ ಮೊಯಿಲಿ, ದಿಗ್ವಿಜಯ್ ಸಿಂಗ್ , ಜಿತೀನ್ ಪ್ರಸಾದ್ ರಂತವರು ರಾಹುಲ್ ಗುಣಗಾನದಲ್ಲೇ ತೊಡಗಿ ಬಹಿರಂಗವಾಗೇ ಅವರನ್ನು ಪ್ರಧಾನಿ ಅಭ್ಯರ್ಥಿಎಂದಿದ್ದಾರೆ.ಎನ್.ಡಿ.ಎಯ ಪ್ರಮುಖ ಪಕ್ಷ ಬಿಜೆಪಿ ಇತ್ತೀಚಿಗೆ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಗುಜರಾತ್ ನ ಮೂರುಬಾರಿಯ ಜನಪ್ರಿಯ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ಆದ್ಯತೆ ನೀಡಿದೆ . ಪಕ್ಷದಲ್ಲಿ ಏನೇ ಗೊಂದಲ ಇದ್ದರೂ, ಕಾರ್ಯಕಾರಿ ಸಭೆಯಲ್ಲಿ ಮೋದಿಗೆ ಕೊಟ್ಟ ಪ್ರಾಮುಖ್ಯತೆ ಸೂಚ್ಯವಾಗಿ ಮೋದಿನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನುವಂತಿತ್ತು.ಹಾಗೇ ಪಕ್ಷದ ರಾಷ್ಟೀಯ ಅಧ್ಯಕ್ಷ ರಾಜನಾಥ್ ಸಿಂಗ್ ರ ಹೇಳಿಕೆಗಳು ಕೂಡ ಇದಕ್ಕೆ ಪುಷ್ಟಿ ನೀಡುತಿತ್ತು .
ಒಂದು ವೇಳೆ ಈವರಿರ್ವರು ಪ್ರಧಾನಿ ಅಭ್ಯರ್ಥಿಗಳಾದರೆ, ಮೋದಿ ಮುಂದೆ ರಾಹುಲ್ ಎನ್ನುವುದು ಅನುಭವಿ ಭೀಷ್ಮನ ಮುಂದೆ ಅನನುಭವಿ ಬಡಾಯಿ ಉತ್ತರ ಕುಮಾರನನ್ನು ತಂದು ನಿಲ್ಲಿಸಿದಂತೆ.ಇದು ನಿಸ್ಸಂಶಯವಾಗಿ ಅನುಭವಿ v /s ಅನನುಭವಿ ನಡುವಿನ ಸಮರ.ಹೌದು ಮೇಷ್ಟ್ರ ಮಗ ಮೇಷ್ಟ್ರು ಅಗಬಾರದು, ಡಾಕ್ಟರ್ ಮಗ ಡಾಕ್ಟರ್ ಆಗಬಾರದು ಅಂತೇನು ಇಲ್ಲಾ ಹಾಗೇ ತಲತಲಾಂತರದಿಂದ ರಾಜಕೀಯ ವಂಶದಿಂದ ಬಂದ ರಾಜಕಾರಣಿ ಮಗ ಪ್ರದಾನಿ ಆಗಬಾರದಂತೆನೂ ಇಲ್ಲ.ಆದರೆ, ಅವನು ತನ್ನ ಸ್ವಂತ ಅರ್ಹತೆಯಿಂದ ಆ ಪದವಿ ಪಡೆಯಬೇಕೇ ವಿನಹ , ತನ್ನ ತಂದೆ ಅನುಭವಿಸಿದ ಹುದ್ದೆ, ತಂದೆ ಹೆಸರು , ಕುಟುಂಬದ ಹೆಸರು ಇವನ ಅರ್ಹತೆ ಆಗಬಾರದು. ರಾಹುಲ್ ತನ್ನ ಕುಟುಂಬ ನಡೆಸಿದ ಅಧಿಕಾರ ನೋಡಿದ್ದಾನೆ ಹೊರತು ಅಧಿಕಾರ ನಡೆಸಿ ಗೊತ್ತಿಲ್ಲ . ರಾಹುಲ್ ಈ ತನಕ ಉಸ್ತುವಾರಿ ವಹಿಸಿಕೊಂಡ ಬಿಹಾರ್ , ಗುಜರಾತ್ , ತಮಿಳುನಾಡು , ಮತ್ತು ಆತನ ಸ್ವಕ್ಷೇತ್ರ ಅಮೇಥಿಯನ್ನು ಹೊಂದಿರುವ ಉತ್ತರ ಪ್ರದೇಶದ ಚುನಾವಣೆ ಎಲ್ಲಾ ಕಡೆ ಕಾಂಗ್ರೆಸ್ ಮಕಾಡೆ ಮಲಗಿತ್ತು.ಉತ್ತರ ಪ್ರದೇಶದ ಚುನಾವಣೆಯಂತು ರಾಹುಲ್ v /s ಅಕಿಲೇಶ್ ಅಂತಾನೇ ಬಿಂಬಿತ ವಾಗಿತ್ತು.ಅಲ್ಲೂ ಕಾಂಗ್ರೆಸ್ಗೆ ಸೋಲು.ರಾಹುಲ್ ನ ಸ್ವಕ್ಷೇತ್ರ ಅಮೇಥಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ತೀವ್ರ ಮುಖ ಭಂಗ ಅನುಭವಿಸಿತ್ತು.ಜನ ಸ್ಪಷ್ಟವಾಗಿ ರಾಹುಲ್ ರ ನಾಯಕತ್ವವನ್ನು ನಿರಾಕರಿಸಿದ್ದು ಎದ್ದು ಕಾಣುತ್ತಿತ್ತು.
ಮತ್ತಷ್ಟು ಓದು 
‘ಮಾನವ ಹಕ್ಕು ಉಲ್ಲಂಘನೆ’ ಅನ್ನುವುದು ಮೋದಿಗೆ ಮಾತ್ರ ಅನ್ವಯವೇ?
– ರಾಕೇಶ್ ಶೆಟ್ಟಿ
ಕಳ್ಳಬೆಕ್ಕು ತೀರ್ಥಯಾತ್ರೆಗೆ ಹೊರಟು ನಿಂತ ಕತೆ ಗೊತ್ತಿದೆಯಲ್ವಾ! ಅಮೇರಿಕಾದ ವಾರ್ಟನ್-ಇಂಡಿಯಾ ಎಕಾನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಭಾಷಣ ಮಾಡಲು ಆಹಾನ ಕೊಟ್ಟು ಕಡೆಗೆ ಎಡಪಂಥೀಯರ ಒತ್ತಾಯಕ್ಕೆ ಮಣಿದು ಅದನ್ನು ರದ್ದುಗೊಳಿಸಿ ಭಾರತದ ಸಂವಿಧಾನದಡಿ ಜನರಿಂದ ಚುನಾಯಿಸಿ ಬಂದ ಮುಖ್ಯಮಂತ್ರಿಯೊಬ್ಬರಿಗೆ ಅವಮಾನ ಮಾಡುವುದಿದೆಯಲ್ಲ ಅದು ಮೋದಿಗಾದ ಅವಮಾನವಲ್ಲ.ಬದಲಿಗೆ ಆ ರಾಜ್ಯಕ್ಕಾದ ಅವಮಾನ ಕೂಡ ಹೌದು.ಗುಜರಾತ್ ಗಲಭೆಯ ನಂತರ ಮೋದಿಯೆಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಐರೋಪ್ಯ ಒಕ್ಕೂಟ ಇವತ್ತು ಸ್ನೇಹ ಹಸ್ತಚಾಚಿ ನಿಂತಿದೆ.ಆದರೆ ತೀರ್ಥಯಾತ್ರೆಗೆ ಹೊರಟು ನಿಂತ ಕಳ್ಳಬೆಕ್ಕು ಅಮೇರಿಕಾ ಮಾತ್ರ ಇನ್ನು ಹುಸಿ ಧ್ಯಾನದಲ್ಲಿದ್ದಂತಿದೆ.ಮೋದಿಯ ವಿಷಯದಲ್ಲಿ ಅದೂ ಈಗಲೂ ಹಟಮಾರಿ ಧೋರಣೆಯನ್ನು ಮುಂದುವರೆಸಿಕೊಂಡು ಬಂದಿದೆ.
“ನೀವು ಬಯಸುವ ಬದಲಾವಣೆ ನೀವೆ ಆಗಿ ತೋರಿಸಿ” ಅಂದಿದ್ದರು ಗಾಂಧೀಜಿ.ಆದರೆ ಅಮೇರಿಕಾದ ವರಸೆ ಸಲ್ಪ ಉಲ್ಟಾ ಈ ವಿಷಯದಲ್ಲಿ “ತಾನು ಬಯಸುವ ಬದಲಾವಣೆ ಬೇರೆಡೆಯಲ್ಲಿ,ಬೇರಯವರಿಂದ ಆಗಬೇಕು.ತಾನು ಮಾತ್ರ ತನ್ನ ಚಾಳಿ ಬಿಡಲಾರೆ” ಅನ್ನುವಂತೆ.ಮೋದಿಯ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಭಾಷಣ ಬಿಗಿಯುವ ಈ ಅಮೇರಿಕಾ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದೇನು?




