ಕೇರಳ ವರ್ಮ ಪಳಸಿ ರಾಜ.
– ವರುಣ್ ಕುಮಾರ್
(ವಾರಕ್ಕೊಂದು ವೀರರು)
೧೭೯೭, ಕೇರಳದ ವಯನಾಡಿನ ಪೆರಿಯಪಾಸ್ ಎಂಬ ಪ್ರದೇಶವನ್ನು ಬ್ರಿಟೀಷ್ ಕರ್ನಲ್ ಡೋ ಮತ್ತು ತುಕಡಿಯು ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಕಾಡಿನ ಮಧ್ಯೆ ಪಯಣವನ್ನು ಮುಂದುವರೆಸಿದರು. ಆದರೆ ಅಂತಹ ದಟ್ಟ ಅರಣ್ಯವಾದಲ್ಲಿ ಒಂದು ಸಣ್ಣ ಶಬ್ದ ಕೇಳಿ ಬಂದರೂ ಎಂತಹವರ ಎದೆಯನ್ನು ಒಂದು ಕ್ಷಣ ನಡುಗಿಸದೇ ಬಿಡದು. ಅಂತಹ ಭಯ ಕರ್ನಲ್ ಡೋ ಅವನಲ್ಲಿಯೂ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಕೇರಳದ ಸಿಂಹದ ಬಗ್ಗೆ ಭಯವಿತ್ತು. ಇಂತಹ ಭಯದಲ್ಲಿ ಮುಂದುವರೆಯುತ್ತಿರುವಾಗ ಅನಿರೀಕ್ಷಿತವಾದ ದಾಳಿ ತನ್ನ ತಂಡದ ಮೇಲೆ ಶುರುವಾಯಿತು. ನೋಡನೋಡುತ್ತಿದ್ದಂತೆಯೇ ನೂರಕ್ಕೂ ಅಧಿಕ ತನ್ನ ಸೈನಿಕರನ್ನು ಕರ್ನಲ್ ಕಳೆದುಕೊಂಡನು. ಈ ಭಯಂಕರ ಕಾದಾಟದಲ್ಲಿ ೩೦೦ಕ್ಕೂ ಮಿಕ್ಕಿ ಸೈನಿಕರು ಗಾಯಾಳಾದರು. ದಾಳಿ ನಡೆಸಿದ ತಂಡ ಬ್ರಿಟೀಷರಿಗೆ ದಾಳಿ ಎಲ್ಲಿಂದ ನಡೆಯುತ್ತಿದೆ ಎಂಬ ಸಣ್ಣ ಊಹೆಯೂ ಸಿಗದ ರೀತಿಯಲ್ಲಿ ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿದ್ದರು. ದೇಶಾದ್ಯಂತ ಆನೆ ನಡೆದಿದ್ದೇ ಹಾದಿ ಎಂಬಂತೆ ಮೆರೆಯುತ್ತಿದ್ದ ಬ್ರಿಟೀಷ್ ಸಾಮ್ರಾಜ್ಯಕ್ಕೆ ದೊರೆತ ದೊಡ್ಡ ಮರ್ಮಾಘಾತವಾಗಿತ್ತು. ಈ ರೀತಿ ಗೆರಿಲ್ಲಾ ಮಾದರಿ ದಾಳಿಯನ್ನು ರೂಪಿಸಿ ಬ್ರಿಟೀಷರ ಬೆನ್ನೆಲುಬಲ್ಲಿ ಚಳುಕು ಹುಟ್ಟಿಸಿದ ವೀರ ಕೇರಳದ ಸಿಂಹ ಕೇರಳ ವರ್ಮ ಪಳಸಿ ರಾಜ. ಮತ್ತಷ್ಟು ಓದು 




