ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪಾಕಿಸ್ತಾನ’

14
ನವೆಂ

ಚಾಚಾ… Oh My God… !!!

– ಅಶ್ವಿನ್ ಅಮೀನ್

Neharu Gandhijiನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಖುಷಿಯ ದಿನ..  ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ಮನೋರಂಜನಾ ಕಾರ್ಯಕ್ರಮಗಳು, ಆಟೋಟ, ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಆಹಾ ಮಕ್ಕಳಿಗೆ ಅದೇ ಚಂದ.. ಅಂದು ನಾವೆಲ್ಲಾ ‘ಚಾಚಾ…’ ಎನ್ನುತ್ತಾ ಶಿಕ್ಷಕರು ಕೊಟ್ಟ ಸಿಹಿ ತಿನ್ನುತ್ತಾ ಖುಷಿಪಡುತ್ತಿದ್ದೆವು.

ಆದರೆ…

ಆ ಸಿಹಿ ತಿನ್ನುತ್ತಿದ್ದ ಬಾಯಿ ಯಾಕೋ ಇಂದು ಕಹಿಯೆನಿಸುತ್ತಿದೆ.ಮತ್ತೆ ‘ಚಾಚಾ…’ ಎಂದು ಕೂಗಲು ಮನಸ್ಸೇ ಬರುತ್ತಿಲ್ಲ. ನೆಹರೂ ಹೆಸರು ಕೇಳಿದರೇನೇ ಏನೋ ಒಂದು ಆಕ್ರೋಶ, ಅಸಹ್ಯತನ…!ಅಂತಹ ಒಬ್ಬ ದುರ್ಬಲ ಪ್ರಧಾನಿಯನ್ನು ಭಾರತ ಹೊಂದಿತ್ತಾ ಎಂಬ ಬಗ್ಗೆ ಅನುಮಾನ.ಖಂಡಿತಾ ನಾನು ಬದಲಾಗಿಲ್ಲ.ನಾನು ಈಗಲೂ ಅದೇ ದೇಶ ಪ್ರೇಮಿ.ಆದರೆ ನನ್ನ ಜ್ಞಾನ ಬದಲಾಯಿತು.ನನ್ನ ಮುಂದಿದ್ದ ಸುಳ್ಳಿನ ಇತಿಹಾಸ ಕರಗುತ್ತಾ ಹೋದಂತೆ ನೆಹರೂ ಬಗೆಗಿನ ತೆರೆಮರೆಯ ರಹಸ್ಯಗಳು ಒಂದೊಂದಾಗಿ ಗೋಚರಿಸತೊಡಗಿದವು.ಆ ತೆರೆಯ ಹಿಂದೆ ಕಂಡದ್ದೆಲ್ಲ ಸ್ವಾರ್ಥದ,ನಾಚಿಕೆಗೇಡಿನ,ಅಸಹ್ಯಕರ,ಹೇಡಿ ಹಾಗೂ  ಮೂರ್ಖತನದ ಪರಮಾವಧಿ…!

ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಮೋತಿಲಾಲರು ತನ್ನ ಮಗ ನೆಹರೂರವರನ್ನು ತನ್ನ ನಂತರ ಕಾಂಗ್ರೆಸ್ಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಗಾಂಧೀಯ ಬೆನ್ನು ಬಿದ್ದಿದ್ದ ಕಾಲವದು.ಹಲವು ವರ್ಷಗಳ ಒತ್ತಡದ ನಂತರ ಗಾಂಧೀ ಮೊತಿಲಾಲರ ಹಠಕ್ಕೆ ಬಗ್ಗಲೇಬೇಕಾಯಿತು. ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲರಿಗೆ ಬಹುಮತ ಇದ್ದ ಹೊರತಾಗಿಯೂ ಪಟೇಲ್ ಅವರನ್ನು ತಣ್ಣಗಾಗಿಸಿ ನೆಹರೂರವರನ್ನು ಕಾಂಗ್ರೆಸ್ಸ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಿಯೇ ಬಿಟ್ಟರು.

ಮತ್ತಷ್ಟು ಓದು »

21
ಆಕ್ಟೋ

ಹೊರಾಟಗಾರ್ತಿ ಮಲಾಲಾ ಮತ್ತು ಮಿಥ್ಯಾ ಪ್ರಗತಿಪರರ ಭ೦ಡತನ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Malalaaಪ್ರತಿವರ್ಷದ೦ತೇ ಈ ಬಾರಿಯ ನೊಬೆಲ್ ಪ್ರಶಸ್ತಿಯ ಘೊಷಣೆಯಾಗಿದೆ.ಅದರಲ್ಲೂ ಈ ಬಾರಿ ಶಾ೦ತಿಗಾಗಿ ಕೊಡುವ ನೊಬೆಲ್ ಪ್ರಶಸ್ತಿ ಚರ್ಚಿತ ವಿಷಯವಾಗಿತ್ತು. .ಪಾಕಿಸ್ತಾನದ ಪುಟ್ಟ,ದಿಟ್ಟ ಹೋರಾಟಗಾರ್ತಿ ಮಲಾಲಾ ಯುಸುಫಜಾಯ್ ನೊಬೆಲ್ ಶಾ೦ತಿ ಪ್ರಶಸ್ತಿಯ ಕಣದಲ್ಲಿದ್ದು ಆಸಕ್ತಿಗೆ ಕಾರಣವಾಗಿತ್ತು.ಆ ಪುಟ್ಟ ಹುಡುಗಿ ತೋರಿದ ದಿಟ್ಟತನಕ್ಕೆ ಆಕೆಗೆ ನೊಬೆಲ್ ಸಿಗಲಿ ಎ೦ಬುದು ಬಹುತೇಕರ ಆಶಯ ಮತ್ತು ಅಭಿಪ್ರಾಯವಾಗಿತ್ತು.ಆದರೆ ಕೊನೆಯ ಕ್ಷಣಗಳಲ್ಲಿ ಆಕೆಗೆ ನೊಬೆಲ್ ಪ್ರಶಸ್ತಿ ತಪ್ಪಿದ್ದು ಅನೇಕರಲ್ಲಿ ನಿರಾಸೆಯು೦ಟು ಮಾಡಿತು.ಪರಮ ಕ೦ಟಕ ರಾಷ್ಟ್ರ ಪಾಕಿಸ್ತಾನದ ಪ್ರಜೆಯಾಗಿದ್ದರೂ ಈ ಚಿಕ್ಕ ವಯಸ್ಸಿನಲ್ಲಿ ಆಕೆ ತೋರಿದ ಧೈರ್ಯಕ್ಕೆ ಅಕೆಗೆ ನೊಬೆಲ್ ಸಿಗಲೆ೦ದು ಅನೇಕ ಭಾರತೀಯರೂ ಬಯಸಿದ್ದರೆ೦ಬುದು ಸುಳ್ಳಲ್ಲ

ಈಗಾಗಲೇ ಮಲಾಲಾ ವಿಶ್ವದಾದ್ಯ೦ತ ಮನೆಮಾತಾಗಿದ್ದರೂ ಆಕೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದಿದ್ದವರಿಗೆ ಕೊ೦ಚ ಮಾಹಿತಿ ನೀಡುತ್ತಿದ್ದೇನೆ.ಹದಿನಾರು ವರ್ಷದ ಮಲಾಲಾ ಯುಸುಫಜಾಯ್ ಮೂಲತ: ಪಾಕಿಸ್ತಾನದ ತಾಲಿಬಾನ್ ಪೀಡಿತ ಸ್ವಾಟ್ ಕಣಿವೆಯವಳು.ತಾಲಿಬಾನಿ ಆಡಳಿತದಲ್ಲಿನ ಈ ಪ್ರದೇಶದಲ್ಲಿ ತಾಲಿಬಾನ್ ಕರ್ಮಠ ಇಸ್ಲಾ೦ ಸ೦ಪ್ರದಾಯಗಳನ್ನು ,ಕಾನೂನುಗಳನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದೆ.ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ ಎ೦ಬ ಕಾನೂನನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದ್ದರು.ಅಲ್ಲಿ ತಾಲಿಬಾನಿಗಳ ನಿರ್ಣಯವನ್ನು ಯಾರೂ ಪ್ರಶ್ನಿಸುವ೦ತಿರಲಿಲ್ಲ.ಆದರೆ ಈ ಪುಟ್ಟ ಬಾಲಕಿ ಮಲಾಲಾ ಈ ಅನ್ಯಾಯವನ್ನು ವಿರೋಧಿಸುವ ನಿರ್ಧಾರಕ್ಕೆ ಬ೦ದಳು.ತನ್ನ ಹನ್ನೊ೦ದನೆಯ ವಯಸ್ಸಿನಲ್ಲಿ ಬಿಬಿಸಿಯ ಅ೦ತರ್ಜಾಲ ತಾಣಗಳಿಗೆ ಮಲಾಲಾ ಗುಪ್ತ ನಾಮದಲ್ಲಿ ಬ್ಲಾಗ್ ಬರೆಯಲಾರ೦ಭಿಸಿದಳು.ಬಿಬಿಸಿಯ೦ತಹ ವಿಶ್ವಮಾನ್ಯ ಸ೦ಸ್ಥೆಗೆ ,ಸ್ವಾಟ್ ನಲ್ಲಿ ತಾಲಿಬಾನಿಗಳ ಅರಾಜಕತೆ,ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿವರಿಸುವ ಪ್ರಯತ್ನ ಮಾಡಿದಳು. ಮಹಿಳಾ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯವನ್ನು ವಿಶ್ವಕ್ಕೆ ಅರುಹಿದಳು.ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ವೈಚಾರಿಕತೆಗೆ ತಲೆದೂಗಿದ ನ್ಯೂಯಾರ್ಕ್ ಟೈಮ್ಸ್ ಆಕೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿತು.ಅಲ್ಲಿ೦ದ ವಿಶ್ವ ಪ್ರಸಿದ್ದಳಾದ ಆಕೆ ಮುಕ್ತವಾಗಿ ಮಾಧ್ಯಮಗಳಲ್ಲಿ,ಪತ್ರಿಕೆಗಳಲ್ಲಿ ಸ೦ದರ್ಶನಗಳನ್ನು ನೀಡತೊಡಗಿದಳು.ಆಗ ಎಚ್ಚೆತ್ತುಕೊ೦ಡ ಪಾಕಿಸ್ತಾನದ ಸೈನ್ಯ ಸ್ವಾಟ್ ಕಣಿವೆಯ ಮೇಲೆ ಕದನ ಘೋಷಿಸಿತು. ’ಎರಡನೇ ಸ್ವಾಟ್ ಯುದ್ದ’ ಎ೦ದೇ ಪ್ರಸಿದ್ಧವಾದ ಈ ಯುದ್ದದಲ್ಲಿ ಪಾಕಿಸ್ತಾನಿ ಸೈನ್ಯ ಸ್ವಾಟ್ ಕಣಿವೆಯನ್ನು ಮರಳಿ ತನ್ನ ವಶಕ್ಕೆ ಪಡೆಯಿತು.ಅನೇಕ ತಾಲಿಬಾನಿ ಕಮಾ೦ಡರಗಳ ಬ೦ಧನವಾಯ್ತು.

ಮತ್ತಷ್ಟು ಓದು »

19
ಆಕ್ಟೋ

ಮಲಾಲಾ ~ ನಿಜವಾದ ಕಥೆ(ಪುರಾವೆಗಳ ಸಹಿತ)

ಮೂಲ : ನದೀಂ ಎಫ್ ಪರಾಚ

ಅನುವಾದ : ನಿವೇದಿತ ಥಾಡಣಿ

Malalaಸೆಪ್ಟೆಂಬರ್ 2012 ರಲ್ಲಿ, ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಒಬ್ಬ ತಾಲಿಬಾನ್ ಕಾರ್ಯಕರ್ತ  15 ವರ್ಷದ ಶಾಲಾ ಹುಡುಗಿಯ ಮುಖ ಮತ್ತು ತಲೆಗೆ  ಗುಂಡು ಹಾರಿಸಿದ್ದಾನೆ  ಎಂದು ವರದಿಯಾಯಿತು.ಈ ದಾಳಿ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಈ ಸುದ್ದಿಗೆ  ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತುಂಬಾ ಮಹತ್ವ ನೀಡಲಾಯಿತು.

ಅವಳೇ ಮಲಾಲಾ.

ಪಾಕಿಸ್ತಾನದಲ್ಲಿ ನಂತರ ಇಂಗ್ಲೆಂಡ್ ನಲ್ಲಿ  ವೈದ್ಯರು ಮಲಾಲಾಳ  ಮುಖ ಮತ್ತು ತಲೆಯ ಮೇಲೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದರೂ ಅವಳು ಉಳಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿತ್ತು.

ಇಂದು ಮಲಾಲಾ ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಮಹಿಳೆಯರ ಶಿಕ್ಷಣದ ಸಲುವಾಗಿ ಅದರಲ್ಲೂ ವಿಶೇಷವಾಗಿ ತೀವ್ರವಾದಿಗಳು ಮತ್ತು ಉಗ್ರಗಾಮಿಗಳು ಬಾಲಕಿಯರ ಶಾಲೆಗಳನ್ನು ಹಾರಿಸಿದ ಪ್ರದೇಶಗಳಲ್ಲಿ ಕೆಲಸ ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಇದು ಪೂರ್ತಿ ಕಥೆಯ ಕೇವಲ ಒಂದು ಭಾಗ ಮಾತ್ರ. ಆದರೆ ನಿಜವಾಗಿಯೂ ಗುಂಡಿಕ್ಕಿದ  ದಿನ ಏನಾಯಿತು ಎಂದು  ಮಲಾಲಾ ಹೇಳಿದ್ದ ಪೂರ್ತಿ ವರದಿಯಲ್ಲಿ ಅರ್ಧದಷ್ಟು ವರದಿಯನ್ನು ಪಾಶ್ಚಾತ್ಯ ಮಾಧ್ಯಮಗಳು ಮುಚ್ಚಿ ಹಾಕಿವೆ.

ಮತ್ತಷ್ಟು ಓದು »

20
ಆಗಸ್ಟ್

“ಕೈ”ಲಾಗದ ಸರ್ಕಾರ ಮತ್ತು ನಮ್ಮ ಕಾಶ್ಮೀರ

–     ರಾಕೇಶ್ ಶೆಟ್ಟಿ

Kashmiraಬಡ ಬೆಸ್ತನೊಬ್ಬನ ಕತ್ತನ್ನು ಸೀಳಿ ಅವನದೇ ಬೋಟನ್ನೇರಿ ೧೦ ಜನರ ಪಾಕಿಸ್ತಾನದ ಸೈತಾನರ ತಂಡ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈಗೆ ವಕ್ಕರಿಸಿಕೊಳ್ಳುತ್ತದೆ.೧೦ ಜನರಿಂದ ಬೇರ್ಪಟ್ಟ ಇಬ್ಬರು ಮೊದಲಿಗೆ ದಾಳಿಯಿಡುವುದು ’ಲಿಯೋಫೋಲ್ಡ್ ಕೆಫೆ”ಗೆ ಅಲ್ಲಿ ಕಂಡ ಕಂಡಂತೆ ಗುಂಡಿನ ಮಳೆ ಸುರಿಸಿದ ಆ ಇಬ್ಬರು ಪಾಕಿ ಉಗ್ರರು ಅಲ್ಲಿಂದ ರಾಜಾರೋಷವಾಗಿ ಹೊರಡುತ್ತಾರೆ.ಉಗ್ರರ ಕಣ್ಣಿಗೆ ಬೀಳದೆ ಅವಿತು ಕುಳಿತಿದ್ದವನೊಬ್ಬ ಮೆಲ್ಲಗೆ ಬಾಗಿಲ ಸಂದಿಯಿಂದ ರಾಕ್ಷಸರು ಇದ್ದಾರೋ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಇಣುಕಿದಾಗ ಬಾಗಿಲಿಗೆ ಕಲ್ಲೊಂದು ಬಡಿಯುತ್ತದೆ.ಮತ್ತೆ ನೋಡುತ್ತಾನೆ ಊಹೂಂ “ಗುಂಡಲ್ಲ… ಕಲ್ಲು…!”

ಉಗ್ರರು ಅಮಾಯಕರ ರಕ್ತ ಹರಿಸಿ ಅಲ್ಲಿಂದ ರಾಜಾರೋಷವಾಗಿ ಹೊರಟ ಮೇಲೆ ಬೀಟ್ ನಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಗಳು  ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ಕಲ್ಲು ಎಸೆದು ಒಳಗಿನಿಂದ “ಗುಂಡು” ಬರುತ್ತಿಲ್ಲ ಅನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಬರುತ್ತಾರೆ. ಹೇಗಿದೆ ನೋಡಿ ಉಗ್ರನ ಕೈಯಲ್ಲಿ “ಎ.ಕೆ ೪೭” ಅವನೆದುರಿಸಲು ಬಂದ ಪೋಲಿಸಣ್ಣನ ಕೈಯಲ್ಲಿ “ಕಲ್ಲು”…! ಇದು ನಮ್ಮ ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆಯ ಸ್ಥಿತಿ.ಭಾರತದ ಬಂಡವಾಳವನ್ನು ಸರಿಯಾಗಿಯೇ ಅರಿತಿದ್ದ ಪಾಪಿ ಪಾಕಿಗಳು ಆ ೧೦ ಜನರ ತಂಡವನ್ನು ನುಗ್ಗಿಸಿ ಒಂದಿಡಿ ಭಾರತವನ್ನು ದಿನಗಳ ಮಟ್ಟಿಗೆ ಗಾಬರಿ ಬೀಳಿಸಿದ್ದರು. ಮುಂಬೈ ಮಾರಣ ಹೋಮದ ನಂತರ ಆಗಿದ್ದಾದರೂ ಏನು? ಭಾರತ-ಪಾಕಿಸ್ತಾನಗಳು ಸಮರದಂಚಿಗೆ ಬಂದು ನಿಂತವು.ನಮ್ಮ ಸರ್ಕಾರ “ಹೊಡಿಬೇಡಿ.ಹೊಡೆದ್ರೆ ನೋವಾಗುತ್ತೆ” ಅನ್ನುವಂತೆಯೇ ವರ್ತಿಸಿದ್ದಲ್ಲವೇ? ಅದಕ್ಕಿಂತ ಹೆಚ್ಚೆಂದರೆ “ಹೋಗಿ.ನಾವು ನಿಮ್ಮೊಂದಿಗೆ ನಾವು ಕ್ರಿಕೆಟ್ ಆಡುವುದಿಲ್ಲ” ಅಂದರು ಅಷ್ಟೇ…!

ಮತ್ತಷ್ಟು ಓದು »

5
ಆಗಸ್ಟ್

ಭಯೋತ್ಪಾದನೆ, ರಾಜಕೀಯ ನೇತಾರರು ಮತ್ತು ಮಾಧ್ಯಮಗಳು

– ಪ್ರೇಮಶೇಖರ
Terrorismತೀರಾ ಇತ್ತೀಚಿನವರೆಗೂ ಭಯೋತ್ಪಾದನಾ ಧಾಳಿಗಳಿಗೆ ಸಂಬಂಧಿಸಿದಂತೆ ಇರಾಕ್ ಮತ್ತು ಪಾಕಿಸ್ತಾನಗಳ ನಂತರ ಭಾರತ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿತ್ತು.  ಈಗಲೂ ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳೇನೂ ಗಮನಾರ್ಹವಾಗಿ ತಗ್ಗಿಲ್ಲ.  ಆಂತರ್ಯುದ್ಧದ ದಳ್ಳುರಿಗೆ ಸಿಲುಕಿರುವ ಸಿರಿಯಾ, ಲಿಬಿಯಾಗಳು ಭಾರತವನ್ನು ಕೆಳಕ್ಕೆ ತಳ್ಳಿವೆ ಅಷ್ಟೆ.  ಅಂಕಿಅಂಶಗಳ ಪ್ರಕಾರ ೧೯೮೧ರಲ್ಲಿ ಖಲಿಸ್ತಾನ್ ಚಳುವಳಿ ಆರಂಭವಾದಂದಿನಿಂದ ಈ ದೇಶದಲ್ಲಿ ನಾಲ್ಕುಸಾವಿರ್ವಕ್ಕೂ ಅಧಿಕ ಭಯೊತ್ಪಾದನಾ ಧಾಳಿಗಳಾಗಿವೆ ಮತ್ತು ಈ ಪಿಡುಗಿಗೆ ದಿನಕ್ಕೆ ಸರಾಸರಿ ನಾಲ್ವರು ಭಾರತೀಯರು ಬಲಿಯಾಗುತ್ತಿದ್ದಾರೆ.
ಭಯೋತ್ಪಾದನೆ ಹೀಗೆ ಅವ್ಯಾಹತವಾಗಿ ಘಟಿಸುತ್ತಲೇ ಇರುವುದಕ್ಕೆ ಭಯೋತ್ಪಾದಕರ ರಕ್ತದಾಹದಷ್ಟೇ ನಮ್ಮ ರಾಜಕೀಯ ನೇತಾರರ ಹಾಗೂ ಮಾಧ್ಯಮಗಳ ಸ್ವಾರ್ಥಪರ ಬೇಜವಾದ್ದಾರಿಯುತ ವರ್ತನೆಯೂ ಕಾರಣ.  ಈ ಬಗೆಗಿನ ವಿಶ್ಲೇಷಣೆಯನ್ನು, ಪುಣೆ ಸ್ಫೋಟಗಳಿಗೆ ಸಂಬಂಧಿಸಿದಂತೆ ಅಪಾದಿತನಾಗಿರುವ ಸೈಯದ್ ಮಖ್ಬೂಲ್ ದೆಹಲಿ ಪೊಲೀಸರಿಗೆ ನೀಡಿದ ಈ ಹೇಳಿಕೆಯಿಂದ ಪ್ರಾರಂಭಿಸೋಣ:
ಪ್ರತಿಯೊಂದು ಧಾಳಿಯ ನಂತರವೂ ರಾಜಕೀಯ ಹೇಳಿಕೆಗಳು ಹೊರಬರುತ್ತವೆ ಮತ್ತು ಇವು ಆ ರಾಜಕೀಯ ನೇತಾರರ ಒತ್ತಡಕ್ಕೆ ಸಿಲುಕುವ ತನಿಖಾದಿಕಾರಿಗಳನ್ನು ಅಂತಿಮವಾಗಿ ಗೊಂದಲಕ್ಕೀಡುಮಾಡುತ್ತವೆ.  ಪ್ರತಿಕ್ರಿಯಿಸಲು ಇವರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ ಮತ್ತು ನಮಗೆ ಸಿಗುವ ಈ ಹೆಚ್ಚುವರಿ ಸಮಯ ತಪ್ಪಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ.
31
ಜುಲೈ

ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು

– ಸಂತೋಷ್ ತಮ್ಮಯ್ಯ

Milkha Singh೧೯೪೭. ಹಳೆಯ ದೆಹಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಬಂದು ಅತ್ತ ಲಾಲ್ ಕಿಲಾದಲ್ಲಿ ತಿರಂಗಾ ಹಾರಿ ಜನರು ಕುಣಿಯುತ್ತಿದ್ದರೆ  ಪುರಾನಾ ಕಿಲಾಕ್ಕೆ ಆ ಭಾಗ್ಯವಿರಲಿಲ್ಲ. ಏಕೆಂದರೆ ಅದೇ ಹೊತ್ತಿಗೆ ದೇಶವೂ ತುಂಡಾಗಿ, ಪಾಕಿಸ್ಥಾನದಿಂದ ರಾಶಿರಾಶಿ ಹೆಣಗಳೂ , ಹಿಂಡುಹಿಂಡಾಗಿ ನಿರ್ವಸಿತರೂ ದಿಕ್ಕಿಲ್ಲದೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆಯನ್ನು ಕೊಟ್ಟಿದ್ದು ಈ ಪುರಾನಾ ಕಿಲಾ. ಹಳೆಯ ಕೋಟೆ. ಧ್ವಜ ಹಾರದ ಕೋಟೆ. ಹಾರಿಸಿದರೂ ಯಾರೂ ಸಂತೋಷ ಪಡದಿರುವಂಥ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್‌ಗಳಿಂದ ಬಂದವರೆಲ್ಲಾ ಅಲ್ಲಿ ನೆರೆದು ಬೇರೆಯೇ ಆದ ಒಂದು ಭಾರತ ಅಲ್ಲಿ ನಿರ್ಮಾಣವಾಗಿತ್ತು. ಪುನರ್ವಸತಿ ಆಗುವವರೆಗೆ ಅವರಿಗೆಲ್ಲಾ ಅದೇ ಮನೆ. ಅದೇ ನೆಲೆ. ಅಂಥ ಒಂದು ದಿನ ಸಂಘಟನೆಯೊಂದು ನಿರ್ವಸಿತರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿತ್ತು. ಅಲ್ಲಿ ಹನ್ನೆರಡು ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ಪೊಟ್ಟಣಗಳು ಎಟುಕುತ್ತಿರಲಿಲ್ಲ. ದೊಡ್ಡ ಕೈಗಳು ಸಂತ್ರಪ್ತವಾದ ಮೇಲೆ ಹಸಿದಿದ್ದ ಆ ಬಾಲಕನಿಗೂ ಆಹಾರದ ಪೊಟ್ಟಣ ಸಿಕ್ಕಿತ್ತು.

ಆ ಬಾಲಕ ಮುಂದೆ ಫ್ಲೈಯಿಂಗ್ ಸಿಕ್ಖ್ ಎಂದೇ ಹೆಸರಾದ ಖ್ಯಾತ ಅಥ್ಲೆಟ್ ಮಿಲ್ಖಾ ಸಿಂಗ್. ಪುರಾನಾ ಕಿಲಾದಲ್ಲಿ ಆಹಾರದ ಪೊಟ್ಟಣವನ್ನು ವಿತರಿಸಿದ ಆ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸ್ಸೆಸ್ಸ್. ಆ ಬಾಲಕ ಫ್ಲೈಯಿಂಗ್ ಸಿಕ್ಖ್ ಆಗುವಲ್ಲಿ ಆ ಆಹಾರ ಪೊಟ್ಟಣದ ಪಾತ್ರವೂ ಇದೆ. ಯಾರೂ ಹೇಳದಿದ್ದರೂ, ಯಾರೂ ಬರೆಯದಿದ್ದರೂ, ಯಾರೂ ತೋರಿಸದಿದ್ದರೂ ಅದರ ಪಾತ್ರವನ್ನು, ಅಂದಿನ ಸತ್ಯವನ್ನು ಅಲ್ಲಗೆಳೆಯಲಾಗದು. ದೇಶವಿಭಜನೆಯ ಮಹಾದುರಂತದ ಒಂದು ಉಳಿಕೆ, ಒಂದು ಚಿಹ್ನೆ, ಒಂದು ಜೀವಂತ ಸ್ಮಾರಕವಾದವರು ಸರ್ದಾರ್ ಮಿಲ್ಖಾ ಸಿಂಗ್. ದೇಶ ವಿಭಜನೆಯ ಹೊತ್ತಲ್ಲಿ ಪಾಕಿಸ್ಥಾನದಿಂದ ಓಡಿ ಭಾರತಕ್ಕೆ ಬಂದವರಿಗೆಲ್ಲಾ ಲಾಲ್ ಕೃಷ್ಣ ಅಧ್ವಾನಿ, ಸರ್ದಾರ್ ಮನಮೋಹನ ಸಿಂಗರಾಗುವ ಅದೃಷ್ಟವಿರಲಿಲ್ಲ. ಅಂಥವರಲ್ಲಿ ಮಿಲ್ಖಾ ಸಿಂಗ್‌ರಂಥವರೇ ಹೆಚ್ಚಿದ್ದರೆಂಬುದು ಇತಿಹಾಸದ ವಾಸ್ತವ. ಅದು ತಿಳಿಯುವುದು ಮಿಲ್ಖಾ ಸಿಂಗನ The Race of my life ನಂಥ ಆತ್ಮ ಕಥೆಗಳಿಂದ.

ಮತ್ತಷ್ಟು ಓದು »

18
ಜುಲೈ

ಮುಸ್ಲಿಂ ಸಮುದಾಯದ ಉತ್ಪ್ರೇಕ್ಷಿತ ಕೊರಗುಗಳು

– ಪ್ರೇಮ ಶೇಖರ

Bharatiya Muslimaru“ಇಂದು ಈ ದೇಶದಲ್ಲಿ ಹಿಂಸೆ, ಹತ್ಯಾಕಾಂಡಗಳು ನಡೆದಿರುವುದು ಜಾತಿ ಸಮಾವೇಶ, ರ‍್ಯಾಲಿಗಳಿಂದಲ್ಲ. ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ಏರ್ಪಡಿಸಿಕೊಂಡು ಬಂದ ಹಿಂದೂ ಸಮಾಜೋತ್ಸವದಂತಹ ಸಮಾವೇಶಗಳು, ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ್ದವು.  ಹಲವು ಕೋಮುಗಲಭೆಗಳಿಗೆ, ಹಿಂಸೆಗಳಿಗೆ ಬಿಜೆಪಿ ಮತ್ತು ಆರೆಸ್ಸೆಸ್‌ನ ರ‍್ಯಾಲಿಗಳು ಕಾರಣವಾಗಿವೆ.  ಅವು ಸಮಾಜವನ್ನು, ದೇಶವನ್ನು ಒಡೆದಿವೆ.”

ಉತ್ತರ ಪ್ರದೇಶದಲ್ಲಿ ಜಾತಿಯಾಧಾರಿತ ರ‍್ಯಾಲಿಗಳನ್ನು ನಿರ್ಬಂಧಿಸಿ ಕಳೆದ ಗುರುವಾರ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮರುದಿನವೇ ಅಂದರೆ ಶುಕ್ರವಾರ ಪ್ರಕಟವಾದ ಕನ್ನಡ ದೈನಿಕವೊಂದರ ಸಂಪಾದಕೀಯದಲ್ಲಿ ಕಂಡುಬಂದ ಸಾಲುಗಳಿವು.  ಪ್ರವೀಣ್ ತೊಗಾಡಿಯಾರಂತಹ ಮಂದಿಗಳು ದೇಶಾದ್ಯಂತ ನಡೆಸಿಕೊಂಡು ಬಂದ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಹೇಳುವ ಈ ಸಂಪಾದಕೀಯ ಅಕ್ಬರುದ್ದೀನ್ ಒವೈಸಿಯಂತಹ ಮಂದಿಗಳು ಹದಿನೈದು ನಿಮಿಷಗಳಲ್ಲಿ ಹಿಂದೂಗಳನ್ನು ಮಟ್ಟಹಾಕುತ್ತೇವೆಂದು ಘೋಷಿಸುವ ರ‍್ಯಾಲಿಗಳು ದೇಶವನ್ನು ಕಂಗೆಡಿಸಿದ ಬಗ್ಗೆ ಮೌನವಾಗಿದೆ.

ನನ್ನ ಅರಿವಿನ ಪ್ರಕಾರ ಈ ದೇಶ “ಒಡೆದದ್ದು” ೧೯೪೭ರಲ್ಲಿ ಮತ್ತು ಅದಕ್ಕೆ ಆರೆಸ್ಸೆಸ್ ಆಗಲೀ, ಬಿಜೆಪಿಯಾಗಲೀ ಏರ್ಪಡಿಸಿದ ರ‍್ಯಾಲಿಗಳು ಕಾರಣವಾಗಿರಲಿಲ್ಲ.  ಬ್ರಿಟಿಷ್ ವಸಾಹತುಶಾಹಿ ಆಳರಸರ ಕೈಗೊಂಬೆಯಾಗಿ, ಅವರ ಸಕ್ರಿಯ ಸಹಕಾರದಿಂದ ಮುಸ್ಲಿಂ ಲೀಗ್ ನಡೆಸಿದ ರ‍್ಯಾಲಿಗಳು ಸಮಾಜವನ್ನು ಒಡೆದವು ಮತ್ತು ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಮುಸ್ಲಿಂ ಲೀಗ್ ಆಗಸ್ಟ್ ೧೬, ೧೯೪೬ರಂದು ಕಲ್ಕತ್ತಾ ನಗರದಲ್ಲಿ ಆಯೋಜಿಸಿದ “ಡೈರೆಕ್ಟ್ ಆಕ್ಷನ್ ಡೇ” ಎಂಬ ಕೋಮುವಾದಿ ರ‍್ಯಾಲಿ ಮತ್ತದು ಬಲಿತೆಗೆದುಕೊಂಡ ಸುಮಾರು ನಾಲ್ಕುಸಾವಿರ ಜೀವಗಳು ದೇಶದ ಐಕ್ಯತೆಗೆ ಅಂತಿಮ ಹೊಡೆತ ನೀಡಿ ಭಾರತ ಇಬ್ಬಾಗವಾಗಲು ಕಾರಣವಾದವು.  ಭಾರತವಷ್ಟೇ ಇಬ್ಬಾಗವಾಗಲಿಲ್ಲ, ಮುಸ್ಲಿಂ ಲೀಗ್‌ನ ಮೂರ್ಖತನದಿಂದಾಗಿ ಉಪಖಂಡದ ಬಲಿಷ್ಟ ಮುಸ್ಲಿಂ ಸಮುದಾಯವೂ ಇಬ್ಬಾಗವಾಯಿತು. ೧೯೭೧ರಲ್ಲಿ ಅದು ಮೂರು ಭಾಗಗಳಾಗಿ ಹೋಳಾಗಿ ಮತ್ತಷ್ಟು ಕೃಶವಾಯಿತು.  ಈ ಒಡೆಯುವಿಕೆಗೂ ಬಿಜೆಪಿಯಾಗಲೀ, ಆರೆಸ್ಸೆಸ್ ಆಗಲೀ ಕಾರಣವಾಗಿರಲಿಲ್ಲ.
ಮತ್ತಷ್ಟು ಓದು »

29
ಮಾರ್ಚ್

ಉಪಖಂಡದಲ್ಲಿ ಏಕಾಂಗಿ ಭಾರತ?

– ಡಾ ಅಶೋಕ್ ಕೆ ಆರ್

ISPCತೀರ ಹಿಂದಿನ ಮಾತಲ್ಲ. ಕೆಲವೇ ದಿನಗಳ ಹಿಂದೆ ಅಫ್ಜಲ್ ಗುರುವನ್ನು ನೇಣಿಗೇರಿಸಿ ಅವನ ದೇಹವನ್ನು ಆತನ ಮನೆಯವರಿಗೆ ನೀಡದೆ ಜೈಲಿನಲ್ಲೇ ಮಣ್ಣು ಮಾಡಲಾಗಿತ್ತು. ಕಾಶ್ಮೀರದಲ್ಲಿ ಪ್ರತಿಭಟನೆಗಳಾದವು, ಅಫ್ಜಲ್ ಗುರು ಅಲ್ಲಿಯವನಾಗಿದ್ದರಿಂದ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅಫ್ಜಲ್ ಗುರುವಿನ ದೇಹವನ್ನು ಆತನ ಮನೆಯವರಿಗೆ ಹಿಂದಿರುಗಿಸಬೇಕು ಎಂಬ ನಿರ್ಣಯ ತೆಗೆದುಕೊಂಡವು, ನಿರ್ಣಯ ಮಾಡಿದ್ದು ಹಾದಿಬೀದಿಯಲ್ಲಾಗಿರದೆ ಸಂಸತ್ತಿನಲ್ಲಾಗಿತ್ತು.ಈ ಕಾರಣದಿಂದ ನಿರ್ಣಯಕ್ಕೆ ಅಧಿಕೃತತೆಯ ಮುದ್ರೆ ಲಭಿಸಿತ್ತು. ಪಾಕಿಸ್ತಾನದ ಈ ನಡೆಗೆ ಭಾರತದಲ್ಲಿ ಅಗಾಧ ವಿರೋಧ  ವ್ಯಕ್ತವಾಗಿದ್ದು ಸಹಜ ಪ್ರತಿಕ್ರಿಯೆಯಾಗಿತ್ತು. ನಮ್ಮ ಮನೆಯ ವಿಷಯದಲ್ಲಿ ಅನ್ಯರು ಮೂಗು ತೂರಿಸುವುದು ಕೋಪ ತರಿಸುವ  ವಿಷಯವೇ ಸರಿ.

ಶ್ರೀಲಂಕಾದ ಎಲ್ ಟಿ ಟಿ ಇ ಸಂಘಟನೆಯ ಹುಟ್ಟಿಗೆ ಅನೇಕ ಐತಿಹಾಸಿಕ ಕಾರಣಗಳಿವೆ.ಶ್ರೀಲಂಕಾದ ಈ ಆಂತರಿಕ ಸಮಸ್ಯೆಯ ಉದ್ಭವವಾಗಿದ್ದು ಬ್ರೀಟೀಷರ ಆಡಳಿತದ ಕಾರಣದಿಂದ ಎಂದರೆ ತಪ್ಪಾಗಲಾರದು.ಶ್ರೀಲಂಕಾದ ಎಸ್ಟೇಟುಗಳಲ್ಲಿ ಕೆಲಸ ಮಾಡಲೆಂದು ಶ್ರಮಜೀವಿಗಳಾದ ತಮಿಳರನ್ನು ಕರೆದುಕೊಂಡು ಹೋಗಿತ್ತು ಅಂದಿನ ಬ್ರಿಟೀಷ್ ಆಡಳಿತ. ಬ್ರಿಟೀಷರು ಶ್ರೀಲಂಕ ತೊರೆದ ನಂತರ ಅಲ್ಲಿನ ಬಹುಸಂಖ್ಯಾತರಾದ ಸಿಂಹಳೀಯರು ಲಂಕ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಕಲಾರಂಭಿಸಿದ್ದರು.

ಮತ್ತಷ್ಟು ಓದು »

1
ಮಾರ್ಚ್

ಪಾಕಿಸ್ತಾನದಲ್ಲಿ ಹಿಂದೂ ವಿವಾಹಕ್ಕೆ ಮಾನ್ಯತೆಯಿಲ್ಲ

-ಕ.ವೆಂ.ನಾಗರಾಜ್

Pak Hindu Maduveನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಅವರುಗಳು, ವಿಶೇಷವಾಗಿ ಸ್ತ್ರೀಯರು, ಸಿಲುಕಿದ್ದಾರೆ. ರಾಷ್ಟ್ರೀಯತೆಯ ಸಮಸ್ಯೆ, ಪಾಸ್ ಪೋರ್ಟ್ ಪಡೆಯಲು ಸಮಸ್ಯೆ, ಆಸ್ತಿ-ಪಾಸ್ತಿಗಳ ಹಕ್ಕು ವರ್ಗಾವಣೆ ಸಮಸ್ಯೆ, ದೇಶದೊಳಗೆಯೇ ಪ್ರಯಾಣ ಮಾಡಲೂ ಸಮಸ್ಯೆ, ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಘೋರ ಸಮಸ್ಯೆ ಎಂದರೆ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಅಪಹರಿಸಿ, ಮತಾಂತರಿಸಿ, ಬಲವಂತ ವಿವಾಹಗಳನ್ನೂ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಿಂದೂ ಸ್ತ್ರೀಯರ ರಕ್ಷಣೆಗೆ ಅಲ್ಲಿ ಸೂಕ್ತ ಕಾನೂನುಗಳೇ ಇರದಿರುವುದು.

ಭಾರತದಲ್ಲಿ ಎಲ್ಲರಿಗೂ ಜಾತಿ-ಮತ ಭೇದವಿಲ್ಲದೆ ಸಮಾನ ಸಿವಿಲ್ ಮತ್ತು ಕ್ರಿಮಿನಲ್ ಕಾಯದೆಗಳಿರಬೇಕೆಂಬ ಒತ್ತಾಯಕ್ಕೆ ವಿರೋಧವಿರುವುದು ಮುಸಲ್ಮಾನರಿಂದಲೇ ಮತ್ತು ಅವರನ್ನು ಬೆಂಬಲಿಸುವ ಬುದ್ಧೂಜೀವಿಗಳು ಮತ್ತು ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಿಂದಲೇ. ಭಾರತದಲ್ಲಿ ಮುಸ್ಲಿಮರ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಅವರಿಗೇ ಪ್ರತ್ಯೇಕ ಕಾನೂನು-ಕಾಯದೆಗಳನ್ನು ಅವರ ಶರೀಯತ್ ಪ್ರಕಾರವೇ ರಚಿಸಲಾಗಿದೆ. ನೂರಾರು ಜನರ ಬಲಿ ತೆಗೆದುಕೊಂಡ/ತೆಗೆದುಕೊಳ್ಳುವ ಉಗ್ರರಿಗೂ ಇಲ್ಲಿ ರಕ್ಷಣೆಯಿದೆ. ಆದರೆ ಅಮಾಯಕ ಅತ್ಯಂತ ಅಲ್ಪಸಂಖ್ಯಾತರೆನಿಸಿರುವ ಹಿಂದೂಗಳಿಗೆ ಕನಿಷ್ಠ ಮೂಲಭೂತ ಸ್ವಾತಂತ್ರ್ಯವನ್ನೂ ಪಾಕಿಸ್ತಾನದಲ್ಲಿ ನಿರಾಕರಿಸಲಾಗಿದೆ. ಹಿಂದೂ ವಿವಾಹಗಳನ್ನು ಮಾನ್ಯ ಮಾಡಲು ಸೂಕ್ತ ಕಾನೂನು ರಚಿಸಬೇಕೆಂಬ ಒಟ್ಟು ಜನಸಂಖ್ಯೆಯ ಕೇವಲ ಶೇ. 3ರಷ್ಟು ಮಾತ್ರ ಉಳಿದಿರುವ ಹಿಂದೂಗಳ ಕೂಗು ಅಲ್ಲಿನ ಸರ್ಕಾರದ ಕಿವುಡು ಕಿವಿಗಳಿಗೆ ಇದುವರೆವಿಗೂ ಮುಟ್ಟಿಲ್ಲ. ಮಾನವ ಹಕ್ಕುಗಳ ಆಯೋಗದವರು, ಬುದ್ಧಿಜೀವಿಗಳೆನಿಸಿಕೊಂಡವರು, ಮುಂತಾದವರಿಗೆ ಇದು ಯೋಚಿಸಬೇಕಾದ ಸಂಗತಿಯೇ ಆಗಿಲ್ಲ.
ಮತ್ತಷ್ಟು ಓದು »

16
ಆಕ್ಟೋ

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

– ಚಕ್ರವರ್ತಿ ಸೂಲಿಬೆಲೆ

‘ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್…!ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ ಎನ್ನುವ ಪದ ಕ್ರೌರ್ಯಕ್ಕೆ ಪರ್ಯಾಯವಾಗಿ ನಿಂತಿರುವುದು ಇಂದೇನಲ್ಲ. ಆಪ್ಘಾನಿಸ್ತಾನದ ಪುಷ್ತೂನ್ ಬುಡಕಟ್ಟಿನ ಜನರ ಮಹತ್ವಾಕಾಂಕ್ಷೆಯ ಭಾಗವಾಗಿ ಹುಟ್ಟಿದ ದಿನದಿಂದ ಅದು ಹಾಗೆಯೇ. ಅಫ್ಘಾನಿಸ್ತಾನ ಗಾಂಧಾರ ದೇಶವಾಗಿದ್ದ ಕಾಲದಿಂದಲೂ ಭಿನ್ನಭಿನ್ನ ಬುಡಕಟ್ಟುಗಳ ಭೂಪ್ರದೇಶ. ಅದರಲ್ಲಿ ಸೂರ್ಯಚಂದ್ರರನ್ನು ಆರಾಧಿಸುವ ಪ್ರಕೃತಿ ಪೂಜಕರಿಂದ ಹಿಡಿದು ಸಗುಣ ಸಾಕಾರ ಮೂರ್ತಿಪೂಜಕರೂ ಇದ್ದರು. ನಡುವಲ್ಲಿ ಒಂದಷ್ಟು ಕಾಲ ಬುದ್ಧನ ಅನುಯಾಯಿಗಳ ಶಾಂತಿಯ ಪ್ರಭೆಯಿಂದಲೂ ಬೆಳಗಿತು ಆಫ್ಘಾನಿಸ್ತಾನ. ಆನಂತರದ ದಿನಗಳಲ್ಲಿ ದಾಳಿಗೆ ಒಳಗಾಗಿ ಕ್ರಮೇಣ ಇಸ್ಲಾಮ್ ವ್ಯಾಪ್ತಗೊಂಡಿತು. ಹಾಗಂತ ಇಸ್ಲಾಮ್ ಕೂಡ ಏಕಪ್ರಕಾರವಾಗಿರಲಿಲ್ಲ. ಆಯಾ ಬುಡಕಟ್ಟುಗಳು ತಮ್ಮದೇ ಆದ ಆಚರಣೆಗಳೊಂದಿಗೆ ಬದುಕಿದ್ದವು. ಸೂಫಿಸಂತರುಗಳು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ತಮ್ಮ ರೀತಿಯೇ ಸರಿ ಎನ್ನುವ ಕಾದಾಟಗಳು ಆಗೀಗ ನಡೆಯುತ್ತಲೇ ಇದ್ದವು. ಮೇಲುಗೈ ಸಾಧಿಸಿ ಇಡಿಯ ಪ್ರಾಂತವನ್ನು ಆಳಬೇಕೆಂಬ ತಹತಹವೂ ಸಹಜವಾಗೇ ಇತ್ತು. ಈ ಹಂತದಲ್ಲಿ ಪುಷ್ತೂನ್ ಬುಡಕಟ್ಟಿನ ಜನ ವಹಾಬಿಗಳ, ದಿಯೋಬಂದಿಗಳ ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಕಟ್ಟರ್ ಇಸ್ಲಾಮೀಪಂಥ ’ತಾಲಿಬಾನ್’. ಮುಲ್ಲಾ ಮುಹಮ್ಮದ್ ಓಮರ್‌ನ ನೇತೃತ್ವ ಅದಕ್ಕೆ ದೊರೆಯಿತು. ಸೌದಿಯ ಹಣ, ಪಾಕಿಸ್ತಾನದ ಜನ ಎರಡೂ ವಿಪುಲವಾಗಿ ಹರಿಯಿತು. ೧೯೯೬ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನ್ ಚುಕ್ಕಾಣಿಯನ್ನೆ ಹಿಡಿದುಬಿಟ್ಟಿತು.

ಮತ್ತಷ್ಟು ಓದು »