ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬಾಬಾ ರಾಮ್ ದೇವ್’

30
ನವೆಂ

ಸ್ವದೇಶೀ ಆಂದೋಲನದ ಭಗೀರಥ: ರಾಜೀವ ದೀಕ್ಷಿತ!

– ತುರುವೇಕೆರೆ ಪ್ರಸಾದ್

ಕಂಪ್ಯೂಟರ್ ಇಂಜನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಒಬ್ಬ ಪ್ರತಿಭಾವಂತ ಯುವಕ, ಇಲೆಕ್ಟ್ರಾನಿಕ್ ಹಾಗೂ ಟೆಲಿಕಮ್ಯುನಿಕೇಶನ್‍ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಒಬ್ಬ ಮೇಧಾವಿ,ಹೆಸರಾಂತ ಸಂಶೋಧನಾ ಸಂಸ್ಥೆ ಸಿ.ಎಸ್.ಐ.ಆರ್‍ನಲ್ಲಿ ಸೆಟೆಲೈಟ್ ಕಮ್ಯುನಿಕೇಶನ್‍ನಲ್ಲಿ ವಿಜ್ಞಾನಿಯಾಗಿ ದುಡಿದಿದ್ದವರು, ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಶಾರಾಮಿ ಜೀವನ ನಡೆಸಬಹುದಾಗಿದ್ದ ಒಬ್ಬ ಯುವಕ ಈ ದೇಶದ ದುರ್ಘಟನೆಯೊಂದರ ಸಂತ್ರಸ್ತರಿಗಾಗಿ ತನ್ನ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡುತ್ತಾರೆ. ಸಂತ್ರಸ್ತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಒಂದು ಅಂದೋಲನವನ್ನೇ ಆರಂಭಿಸಿ ತನ್ನ ಜೀವನವನ್ನೇ ಅದಕ್ಕಾಗಿ ಮೀಸಲಿಡುತ್ತಾರೆ. ಭಾರತ ಎದೆಂದಿಗೂ ಎದೆಯುಬ್ಬಿಸಿ, ತಲೆಎತ್ತಿ ಹೆಮ್ಮೆಯಿಂದ ಕೂಗಿ ಹೇಳಿಕೊಳ್ಳಬಹುದಾದ ಆ ಅದಮ್ಯ ಚೇತನವೇ ದೇಶಭಕ್ತ ರಾಜೀವ್ ದೀಕ್ಷಿತ್, ಅವರು ಪ್ರಾರಂಭಿಸಿದ ಆಂದೋಲನವೇ ‘ಆಜಾದಿ ಬಚಾವೋ’ ಆಂದೋಲನ. ಮತ್ತಷ್ಟು ಓದು »

19
ಆಗಸ್ಟ್

ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!

– ರಾಕೇಶ್ ಶೆಟ್ಟಿ

ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.

’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.

ಮತ್ತಷ್ಟು ಓದು »

19
ಆಗಸ್ಟ್

ಈ ಎಡವಟ್ಟುಗಳು ಯಾಕೆ ಹೀಗೆ ಅಂತ?

– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.

ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.

ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.

ಮತ್ತಷ್ಟು ಓದು »

11
ಜೂನ್

ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!

– ಕೆ.ಎಸ್ ರಾಘವೇಂದ್ರ ನಾವಡ

ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!

ಭರತ ಭೂಮಿಯಲ್ಲಿ  ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು  ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ  ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!

ಮತ್ತಷ್ಟು ಓದು »

7
ಜೂನ್

ನಾವಿನ್ನೂ ಬ್ರಿಟಿಷರ ಆಳ್ವಿಕೆಯಲ್ಲಿದ್ದೇವೆಯೇ?

– ಸಂಪತ್ ಕುಮಾರ್

ಸ್ವತಂತ್ರ, ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವ  ದೇಶದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವೇ!? ಜೂನ್ ೪ ರ ಘಟನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ.ಪ್ರಜೆಗಳ ಮೂಲಭೂತ ಹಕ್ಕುಗಳ ಕಗ್ಗೊಲೆಯಾಗಿದೆ. ಗಾಂಧಿಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರ ಬೆಲೆ ಕಳೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದಂತಾಗಿದೆ.
ಪ್ರಜೆಗಳ ದನಿಯನ್ನು ಹತ್ತಿಕ್ಕಲು ಹೊಸ ವಿಧಾನವನ್ನು ಸರಕಾರ ಹೇಳಿಕೊಟ್ಟಿದೆ. ಬಾಬಾ ರಾಮದೇವ್ ಅವರ ಅಹಿಸಾತ್ಮಕ ಪ್ರತಿಭಟನೆಗೆ ಹಿಂಸಾತ್ಮಕ ಉತ್ತರ ನೀಡಿ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

ಏಪ್ರಿಲ್ ೧೨ ರಂದು ನಾನು ನಿಲುಮೆಯಲ್ಲಿ ಬರೆದ ಲೇಖನ “ಇನ್ನೊಂದು ಸಮರಕ್ಕೆ ಸಿದ್ದರಾಗಿ” ಸದಾಶಯದಂತೆ ಬಾಬಾ ರಾಮದೇವ್ ಅವರು ಸತ್ಯಾಗ್ರಹಕ್ಕೆ ಕುಳಿತದ್ದು ಸಂತೋಷದ ವಿಚಾರವಾಗಿರುತ್ತದೆ. ಲೋಕಪಾಲದಂತಹ ಬಹು ಆಯಾಮದ ಸಮಸ್ಯೆಯನ್ನು ಎದುರಿಸುವ ಬದಲು, “ಕಪ್ಪು ಹಣ” ದಂತಹ ಒಂದೇ ಸಮಸ್ಯೆಯನ್ನು ಎದುರಿಸಿ ಬಾಬಾ ಯಶಸ್ಸನ್ನು ಪಡೆಯುವ ಹಂತದಲ್ಲಿರುವಾಗಲೇ ಹೀಗೆ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸರಕಾರದ ಸರ್ವಾಧೀಕಾರದ ಧೋರಣೆ ಎಂದಿಗೂ ಸಲ್ಲ.

ಮತ್ತಷ್ಟು ಓದು »

5
ಜೂನ್

ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!

– ರಾಕೇಶ್ ಶೆಟ್ಟಿ

ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.

ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.

ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?

ಮತ್ತಷ್ಟು ಓದು »

5
ಜೂನ್

ಹನುಮಪ್ಪನೆ ಆಗಿರಲಿ ಇಮಾಂ ಸಾಬಿಯೇ ಆಗಿರಲಿ…!

– ಪವನ್‍ ಪಾರುಪತ್ತೇದಾರ‍್, ಬೆಂಗಳೂರು

ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ. ಎರಡು ಗ್ರೇಟ್‍  ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ. ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531 ಕಿ.ಮೀ. ಓಟ ಮುಗಿಸಿದ್ದಾರೆ.ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ. ಆದರೆ ,ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ  ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ ” ಟೈಮ್ಸ್ ನೌ” ಅರ್ನಬ್ ಗೋಸ್ವಾಮಿ ಇರಬಹುದು ಅಥವಾ “ಸಿಎನ್‍ಎನ್‍”  ನ ರಾಜ್ದೀಪ್ ಸರ್ದೇಸಾಯಿ ಇರಬಹುದು, ಶಾರುಕ್ ಖಾನ್, ಸಲ್ಮಾನ್ ಖಾನ್ ,ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು, ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಈ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಗಂಟೆಗೊಂದು ಹೇಳಿಕೆ ರಾಮದೇವ್ ವಿರುದ್ದ ನೀಡುತಿದ್ದಾರೆ  ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ ಕಾಂಪ್ರಮೈಸ್‍ ಅಗೋ ತಂತ್ರ ಹೆಣೆಯುತಿದ್ದಾರೆ .

ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು ? ಮರದ ಚಪ್ಪಲಿ ಅದರೇನು ADIDAS ಶೂ ಅದರೇನು? ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50 ರೂಪಾಯಿ ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಈ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಾಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಈ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಾಭವಂತು ಇಲ್ಲ.ಈ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು. ಈಗ ಬೆಂಬಲ ಸೂಚಿಸಿದೆ. ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ ಬಿಜೆಪಿ ಏಜೆಂಟ್ ಆಗಿದ್ದಾರೆ.

ಮತ್ತಷ್ಟು ಓದು »

5
ಜೂನ್

ರಾಮದೇವ್,ಮೀಡಿಯಾ ಮತ್ತು ಸಂಪಾದಕೀಯ

– ಮಹೇಶ ಪ್ರಸಾದ ನೀರ್ಕಜೆ

ಸಂಪಾದಕೀಯ ತಂಡ ಬರೆದ “ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ” ಈ ಲೇಖನದ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ಇವು ಒಟ್ಟಾರೆಯಾಗಿ ಮಾಧ್ಯಮಗಳ ಬೇಜವಾಬ್ದಾರಿತನದ ಬಗ್ಗೆ ನನ್ನ ಕೆಲವು ಟಿಪ್ಪಣಿಗಳು ಕೂಡ ಹೌದು. ಸದಾ ಮಾಧ್ಯಮದ ತಪ್ಪು ಒಪ್ಪುಗಳನ್ನು ಪ್ರಕಟಿಸುವ ತಂಡ ಅದರ ಜೊತೆಜೊತೆಗೆ ಬೇರೆ ಕೆಲವು ವಿಚಾರಗಳನ್ನು ಕೂಡ ಬರೆಯುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸಂಪ್ರದಾಯವಾದಿಗಳ ಬಗ್ಗೆ, ಮೂಢ ನಂಬಿಕೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಯತ್ನಗಳ ಬಗೆಗೆ ನನಗೆ ಹೆಮ್ಮೆಯಿದೆ. ಅದರಲ್ಲೂ ಜಿ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದ ಬಗೆಗಿನ ವಿರೋಧ ಎಲ್ಲರ ಗಮನ ಸೆಳೆದಿತ್ತು. ಆದರೆ ಮೊದಲಿನಿಂದಲೂ ಕೂಡ ನನಗೆ ಸಂಪಾದಕೀಯ ತಂಡದ ಬಗೆಗೆ ಕೆಲವು ಅನುಮಾನಗಳಿವೆ. ಮೊದಲನೆಯದಾಗಿ ತನ್ನ TRP ಹೆಚ್ಚಿಸಿ ಕೊಳ್ಳಲೋ ಎಂಬಂತೆ ಬ್ಲಾಗಿನಲ್ಲಿ ಎಲ್ಲೆಂದರಲ್ಲಿ ಅನಾಮಿಕ ಪ್ರತಿಕ್ರಿಯಗಳ ಮಹಾಪೂರ. ಈ ಪ್ರತಿಕ್ರಿಯೆಗಳನ್ನು ಯಾರು ಬರೆಯುತ್ತಾರೆ, ಅವರ ಪ್ರತಿಕ್ರಿಯೆಗಳಲ್ಲಿ ಏನಾದರು ಕುತ್ಸಿತ ಉದ್ದೇಶಗಳಿವೆಯೇ ಇತ್ಯಾದಿ ಪ್ರಶ್ನೆಗಳು ನನಗೆ ಮೊದಲಿನಿಂದಲೂ ಇವೆ. ಅಲ್ಲದೆ ಮೂಢ ನಂಬಿಕೆಯನ್ನು ವಿರೋಧಿಸುವ ನೆಪದಲ್ಲಿ ಎಲ್ಲಾ ಅಧ್ಯಾತ್ಮಿಕ ವ್ಯಕ್ತಿಗಳನ್ನು ಟೀಕಿಸುವ ಹುನ್ನಾರವೋ ಎಂದು ಕೂಡ ಸಂಶಯವಿದೆ. ಆದರೆ ಕೆಲವು ಬರಹಗಳಲ್ಲಿ ಉತ್ತಮ ಅಧ್ಯಾತ್ಮಿಕ ಮೌಲ್ಯಗಳನ್ನು ಅದರಲ್ಲೂ ವಿವೇಕಾನಂದ, ಬುಧ್ಧ ಗಾಂಧೀಜಿ ಬಗ್ಗೆ ಬರೆದಿದ್ದೂ ಹೌದು. ಒಟ್ಟಿನಲ್ಲಿ ನನ್ನ ಮಟ್ಟಿಗೆ ಸಂಪಾದಕೀಯ ವಿರೋಧಾಭಾಸಗಳ ಗೂಡು. ಇರಲಿ, ಈಗ ಪ್ರಸ್ತುತ ಲೇಖನದ ಬಗ್ಗೆ ಹೇಳುವುದಾದರೆ ನನ್ನ ಪ್ರಕಾರ ಇದರಲ್ಲಿ ಹಲವಾರು ತಪ್ಪುಗ್ರಹಿಕೆಗಳು, ಮತ್ತು ತಪ್ಪು ಮಾಹಿತಿಗಳು ಕಾಣಸಿಗುತ್ತವೆ. ಅವುಗಳನ್ನು ಪಟ್ಟಿ ಮಾಡಿ, ನಿಜ ಸಂಗತಿಯನ್ನು ಹೊರಗೆಡಹುವ ಒಂದು ಪ್ರಯತ್ನ ಇದು.

ಮತ್ತಷ್ಟು ಓದು »