‘ಅನ್ ಎಥಿಕಲ್ ’ ಸಂಸ್ಥೆಗಳು
-ಬಿಂದು ಮಾಧವಿ,ಹೈದರಾಬಾದ್
ನನಗೆ ethical ಎಂಬ ಪದಕ್ಕೆ ನೀತಿ, ಸಿದ್ಧಾಂತ ಎಂಬ ಅರ್ಥಗಳು ಕನ್ನಡಕಸ್ತೂರಿ.ಕಾಮ್ ನಲ್ಲಿ ಸಿಕ್ಕವು. ಆದರೆ ಏಕೋ Ethics ಅಂದರೆ ಅಷ್ಟೇ ಅಲ್ಲ ಎನ್ನಿಸಿತು, ಹಾಗಾಗಿ ಈ ಬರಹಕ್ಕೆ ಆಂಗ್ಲ ನಾಮಧೇಯವನ್ನೇ ಇಟ್ಟಿದ್ದೇನೆ.
ಮೊನ್ನೆ ಮೊನ್ನೆ ಓಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಅನ್ಯಾಯದ ವಿರುದ್ದ ಪ್ರತಿಭಟಿಸಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದರು ಎಂದು ಓದಿದ್ದೆ. ಹೀಗೇ ಅನೇಕ ವಿಷಯಗಳನ್ನು ಓದಿದಾಗ, ಏಕೆ ಹಾಗೆ ಅನಾಗರೀಕರಂತೆ ವರ್ತಿಸಬೇಕು? ಅನ್ಯಾಯದ ವಿರುದ್ದ ಪ್ರತಿಭಟಿಸುವುದೇ ಆದರೆ ಸರಿಯಾದ ಮಾರ್ಗವಿಲ್ಲವೇ ಎಂದೆನಿಸುತ್ತದೆ. ಆದರೆ ನಾವುಗಳೇ ಅನ್ಯಾಯದ ಬಲಿಪಶುಗಳಾದಾಗ, ನಾವುಗಳೇ ’ಕುರಿ ಕುರಿ’ ಆದೆವು ಎಂದು ತಿಳಿದಾಗ, ಸಂಯಮದಿಂದಿರುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಇಲ್ಲೇ ಇವರಿಗೆ ಕೆನ್ನೆಗೆ ಬಾರಿಸಿದರೆ ಏನು ತಪ್ಪು ಎಂದು ಎನಿಸುತ್ತದೆ.
ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!
– ಚಕ್ರವರ್ತಿ ಸೂಲಿಬೆಲೆ
‘ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್…!ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ ಅವಳಿಗೆ ಹದಿನಾಲ್ಕು ವರ್ಷ ಮಾತ್ರ. ತಾಲಿಬಾನ್ ಎನ್ನುವ ಪದ ಕ್ರೌರ್ಯಕ್ಕೆ ಪರ್ಯಾಯವಾಗಿ ನಿಂತಿರುವುದು ಇಂದೇನಲ್ಲ. ಆಪ್ಘಾನಿಸ್ತಾನದ ಪುಷ್ತೂನ್ ಬುಡಕಟ್ಟಿನ ಜನರ ಮಹತ್ವಾಕಾಂಕ್ಷೆಯ ಭಾಗವಾಗಿ ಹುಟ್ಟಿದ ದಿನದಿಂದ ಅದು ಹಾಗೆಯೇ. ಅಫ್ಘಾನಿಸ್ತಾನ ಗಾಂಧಾರ ದೇಶವಾಗಿದ್ದ ಕಾಲದಿಂದಲೂ ಭಿನ್ನಭಿನ್ನ ಬುಡಕಟ್ಟುಗಳ ಭೂಪ್ರದೇಶ. ಅದರಲ್ಲಿ ಸೂರ್ಯಚಂದ್ರರನ್ನು ಆರಾಧಿಸುವ ಪ್ರಕೃತಿ ಪೂಜಕರಿಂದ ಹಿಡಿದು ಸಗುಣ ಸಾಕಾರ ಮೂರ್ತಿಪೂಜಕರೂ ಇದ್ದರು. ನಡುವಲ್ಲಿ ಒಂದಷ್ಟು ಕಾಲ ಬುದ್ಧನ ಅನುಯಾಯಿಗಳ ಶಾಂತಿಯ ಪ್ರಭೆಯಿಂದಲೂ ಬೆಳಗಿತು ಆಫ್ಘಾನಿಸ್ತಾನ. ಆನಂತರದ ದಿನಗಳಲ್ಲಿ ದಾಳಿಗೆ ಒಳಗಾಗಿ ಕ್ರಮೇಣ ಇಸ್ಲಾಮ್ ವ್ಯಾಪ್ತಗೊಂಡಿತು. ಹಾಗಂತ ಇಸ್ಲಾಮ್ ಕೂಡ ಏಕಪ್ರಕಾರವಾಗಿರಲಿಲ್ಲ. ಆಯಾ ಬುಡಕಟ್ಟುಗಳು ತಮ್ಮದೇ ಆದ ಆಚರಣೆಗಳೊಂದಿಗೆ ಬದುಕಿದ್ದವು. ಸೂಫಿಸಂತರುಗಳು ಹೊಸ ಪರಂಪರೆಯನ್ನು ಹುಟ್ಟುಹಾಕಿದ್ದರು. ತಮ್ಮ ರೀತಿಯೇ ಸರಿ ಎನ್ನುವ ಕಾದಾಟಗಳು ಆಗೀಗ ನಡೆಯುತ್ತಲೇ ಇದ್ದವು. ಮೇಲುಗೈ ಸಾಧಿಸಿ ಇಡಿಯ ಪ್ರಾಂತವನ್ನು ಆಳಬೇಕೆಂಬ ತಹತಹವೂ ಸಹಜವಾಗೇ ಇತ್ತು. ಈ ಹಂತದಲ್ಲಿ ಪುಷ್ತೂನ್ ಬುಡಕಟ್ಟಿನ ಜನ ವಹಾಬಿಗಳ, ದಿಯೋಬಂದಿಗಳ ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಕಟ್ಟರ್ ಇಸ್ಲಾಮೀಪಂಥ ’ತಾಲಿಬಾನ್’. ಮುಲ್ಲಾ ಮುಹಮ್ಮದ್ ಓಮರ್‌ನ ನೇತೃತ್ವ ಅದಕ್ಕೆ ದೊರೆಯಿತು. ಸೌದಿಯ ಹಣ, ಪಾಕಿಸ್ತಾನದ ಜನ ಎರಡೂ ವಿಪುಲವಾಗಿ ಹರಿಯಿತು. ೧೯೯೬ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನ್ ಚುಕ್ಕಾಣಿಯನ್ನೆ ಹಿಡಿದುಬಿಟ್ಟಿತು.
ಮಲಾಳ ಯೂಸುಫ್ ಝಾಯಿಯ ಡೈರಿಯಿಂದ
– ಡಾ ಅಶೋಕ್ ಕೆ ಆರ್
ಕನ್ನಡದಲ್ಲಿ ಉನ್ನತ ವ್ಯಾಸಾಂಗ
– ಬಿಂದುಮಾಧವಿ ಪಿ,ಹೈದರಾಬಾದ್
ನಮ್ಮ ದೇಶವು ವಿದ್ಯೆಯಲ್ಲಿ ಯಾವ ದೇಶಕ್ಕೂ ಕಡಿಮೆಯಿಲ್ಲ. ವಿದ್ಯಾವಂತರಿಗೆ ಬರವಿಲ್ಲ. ಹಾಗಿದ್ದರೂ ನಮ್ಮ ದೇಶದಿಂದ ಹೊಸ ಹೊಸ ಸಂಶೋಧನೆಗಳು ವಿರಳವಾಗಿವೆ. ಸಿ.ವಿ ರಾಮನ್, ಹರಗೋವಿಂದ ಖೊರಾನ ಇವರುಗಳ ಹೆಸರನ್ನೇ ಅನೇಕ ದಶಕಗಳಿಂದ ಹೇಳುತ್ತಿದ್ದೇವೆ. ಇದೇಕೆ ಹೀಗೆ?
ಗಣಿತದಲ್ಲಿ ಭಾರತೀಯರು ಎಂದೂ ಮುಂದು.ಅಮೇರಿಕದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾರತೀಯ ಮೂಲದ ಬಾಲಕರೇ ಮೊದಲ ಸ್ಥಾನ ಗಳಿಸುತ್ತಾರೆ. ಹಾಗಿರುವಾಗ Inventions and Discoveries ಪಟ್ಟಿಯಲ್ಲಿ ನಮ್ಮ ದೇಶದ ಹೆಸರು ಏಕೆ ಕಾಣುವುದಿಲ್ಲ?
ಇದಕ್ಕೆ ಉತ್ತರ ನಮ್ಮ ಮಾಧ್ಯಮ. ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಾನು, ಅಲ್ಲಿಯವರೆಗೆ ಯಾವತ್ತೂ ತರಗತಿಯಲ್ಲಿ ಮೊದಲಿಗಳಾಗಿರುತ್ತಿದ್ದೆ. ನಂತರ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಅದೂ ಮರಿಮಲ್ಲಪ್ಪ ಶಾಲೆಯಲ್ಲಿ. ಅಲ್ಲಿ ಅಪರೂಪಕ್ಕೆ ಮೂರನೇ ಅಥವಾ ನಾಲ್ಕನೆಯ ಸ್ಥಾನ ಬಂದರೆ ಅದೇ ಹೆಚ್ಚು. ಪದವಿ ಪೂರ್ವ ಕಾಲೇಜಿನಲ್ಲಿ, ನಂತರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಹೀಗೂ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗುವುದೇ ಹೆಚ್ಚಾಯಿತು. ಏಕೆ ಹೀಗೆ? ಬಹುಶ: ನಾನು ಕನ್ನಡ ಮಾಧ್ಯಮದಲ್ಲೇ ಮುಂದುವರೆದಿದ್ದರೆ ಎಂದಿಗೂ ಮೊದಲ ಸ್ಥಾನದಲ್ಲಿ ಇರುತ್ತಿದ್ದೆನೇನೊ?
ಮತ್ತಷ್ಟು ಓದು 
ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ
– ಪಂಡಿತಾರಾಧ್ಯ,ಮೈಸೂರು
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).
ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.
ಕನ್ನಡ/ಇಂಗ್ಲೀಷ್ ಮಾಧ್ಯಮದ ಜೊತೆಗೆ ಏಕರೂಪ ಶಿಕ್ಷಣದ ಬಗ್ಗೆಯೂ ಚರ್ಚೆ ಆಗಬೇಕಲ್ಲವೇ?
– ರಾಕೇಶ್ ಶೆಟ್ಟಿ
ಕಡೆಗೂ ‘ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು’ ಅನ್ನುವ ಮಾತುಗಳನ್ನು ಕಸಪಾ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.ಕಳೆದ ಹಲವು ದಿನಗಳಿಂದ ಇಂಗ್ಲೀಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು “ಏಕರೂಪ ಶಿಕ್ಷಣ”ದ ಬಗ್ಗೆ.ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ,ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ,ಸಾಮಾಜಿಕ ನ್ಯಾಯ,ಭಾಷೆ,ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?
೧೦ನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ,ಆನಂದದ ವಿಷಯ ಅನ್ನುವುದರ ಅರಿವಿದೆ ಹಾಗೆಯೇ ೧೦ರ ನಂತರ ಇಂಗ್ಲೀಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ,ಕೀಳರಿಮೆಯ ಅನುಭವಗಳು ಇವೆ.ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲೀಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.
ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲೀಷ್ ಲೋಕಕ್ಕೆ ಕಾಲಿಟ್ಟು ಅರ್ಧಕರ್ಧ ಜನ ಕೀಳರಿಮೆ,ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.
ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನ ನಾವು ಗಮನಕ್ಕೆ ತೆಗೆದುಕೊಳ್ಳಬೇಕು.ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲೀಷ್ ಮೀಡಿಯಂ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ,ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲ್ಲಬಸ್ಸೋ,ಐ.ಸಿ.ಎಸ್.ಈ ಸಿಲ್ಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ.ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ,ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏನು ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?
ಪ್ರಜಾಪ್ರಭುತ್ವದ ಶಿಕ್ಷಣ
-ರಾವ್ ಎವಿಜಿ
ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್ ಮತದಾರನ ವಿವೇಕವನ್ನು ಆಧರಿಸಿರುತ್ತದೆ.
- ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
- ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ ? ಮತ್ತಷ್ಟು ಓದು

ಜನರೆಂದರೆ ಯಾರ್ ಯಾರು ಕಾಗೇರಿಯವರೇ?
ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ “ಬುಲೆಟ್ ಸಂದರ್ಶನ“ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.
ಸಾಹಿತಿಗಳಷ್ಟೇ… ಜನತೆಯಲ್ಲ!
ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ… ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ… ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ “ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?” ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ… ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.
ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ
– ಶ್ರೀ ಹರ್ಷ ಸಾಲಿಮಠ
ಇದೊಂದು ಮಾತನ್ನು ಅತ್ಯಂತ ತೀವ್ರ ಸಂಕಟದಿಂದ ಹೇಳುತ್ತಿದ್ದೇನೆ. ಕಾಲಿಗೆ ಗ್ಯಾಂಗ್ರಿನ್ ಆದಾಗ ಕಾಲನ್ನು ಕತ್ತರಿಸುತ್ತಾರಲ್ಲ ಹಾಗೆ. ನೋವಾಗುತ್ತದೆ ಆದರೆ ಬದುಕಲು ಅದು ಅನಿವಾರ್ಯ. ಕನ್ನಡ/ಕರುನಾಡು ಉಳಿಯಬೇಕೆಂದರೆ ಈ ಕೆಲಸ ಆಗಬೇಕಾಗಿದೆ.
ಬೆಂಗಳೂರಲ್ಲಿ ಕನ್ನಡ ಸಿಗುವುದಿಲ್ಲ.ಕನ್ನಡಿಗರು ಕಾಣೆಯಾಗುತ್ತಿದ್ದಾರೆ ಎಂಬ ಮಾತನ್ನು ಅತಿಶಯೋಕ್ತಿ ಎಂದುಕೊಂಡಿದ್ದೆ.ಇತ್ತೀಚಿನ ನನ್ನ ಕೆಲ ಅನುಭವಗಳು ಇದು ಸತ್ಯವೆಂದು ಬಿಂಬಿಸಿವೆ. ನಾನು ಎರಡು ಕಂಪನಿಗಳಿಗೆ ಇಂಟರ್ ವ್ಯೂ ಪ್ಯಾನೆಲಿಸ್ಟ್ ಆಗಿದ್ದೇನೆ. ಎರಡು ಕಾಲೇಜುಗಳಿಗೆ ಅಕಡೆಮಿಕ್ ಕನ್ಸಲ್ಟಂಟ್ ಆಗಿದ್ದೇನೆ. ನನ್ನ ಅನುಭವ ಮತ್ತು ವಿಶ್ಲೇಷಣೆಯಿಂದ ಇದೊಂದು ಅಭಿಪ್ರಾಯವನ್ನು ಮುಂದಿಡುತ್ತಿದ್ದೇನೆ.
ಇಲ್ಲಿಯವರೆಗೆ ಕಂಪನಿಗಳಿಗಾಗಿ ಸುಮಾರು ಸೂರು ಜನರ ಸಂದರ್ಶನ ನಡೆಸಿದ್ದೇನೆ. ದಯವಿಟ್ಟು ನಂಬಿ. ಇಲ್ಲಿಯವರೆಗೆ ಒಬ್ಬನೇ ಒಬ್ಬ ಕನ್ನಡಿಗ ಸಂದರ್ಶನಕ್ಕಾಗಿ ಬಂದಿಲ್ಲ! ನಾನು ಮತ್ತು ಪ್ಯಾನೆಲ್ ನಲ್ಲಿರುವ ಕೆಲವರು ಕನ್ನಡಿಗ ಗೆಳೆಯರು ಕನ್ನಡದ ಹುಡುಗರು ಬಂದರೆ ಕೊಂಚ ದಡ್ಡರಿದ್ದರೂ ಸರಿ ಶತಾಯಗತಾಯ ಮುಂದಕ್ಕೆ ತಳ್ಳಬೇಕೆಂದು ಯೋಜಿಸಿಕೊಂಡಿದ್ದೆವು. ಆದರೆ ಕನ್ನಡದ ಒಬ್ಬ ಹುಡುಗನಾದರೂ ಬಂದರೆ ತಾನೆ? ಬಂದವರು ಬಹುತೇಕರು ತೆಲುಗರು ಮತ್ತು ಬಿಹಾರಿಗಳು! ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲ್ಲಿ ಬಿಎಎಸ್ಸಿ ಪದವಿ ಮುಗಿಸಿ ಎರಡು ವರುಷಗಳ ಸುಳ್ಳು ಅನುಭವ ಹಾಕಿಕೊಂಡು ಬರುತ್ತಾರೆ. ಕಂಪನಿಗಳಾದರೋ ಇವರು ಸುಳ್ಳರು ಎಂದು ತಿಳಿದೂ ತೆಗೆದುಕೊಳ್ಳುತ್ತವೆ. ಏಕೆಂದರೆ ಈಗ ಬಹುತೇಕ ಕಂಪನಿಗಳು ಸರ್ವಿಸ್ ಮತ್ತು ಮೇಂಟೆನೆನ್ಸ್ ಕೆಲಸಗಳನ್ನು ನಡೆಸುತ್ತಿವೆ. ಈ ಕೆಲಸಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯವಿಲ್ಲ. ಒಂದೆರಡು ತಿಂಗಳಲ್ಲಿ ಯಾರಾದರೂ ಕಲಿಯಬಹುದು. ಗಿರಾಕಿಗಳಿಗೆ ತೋರಿಸಲು ಬಿಲ್ಲಿಂಗಿಗಾಗಿ ಕೆಲವು ನೌಕರರ ಅವಶ್ಯಕತೆ ಇರುತ್ತದೆ. ಹಾಗಾಗಿ ಕೌಶಲ್ಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಕಂಪನಿಗಳು ಇವರನ್ನು ಕೊಳ್ಳುತ್ತವೆ. ಇವರು ಕಡಿಮೆ ಸಂಬಳಕ್ಕೆ ರಾತ್ರಿ ಪಾಳಿಗೂ ಕೆಲಸ ಮಾಡಲು ತಯಾರಿರುವುದರಿಂದ ಕಂಪನಿಗಳಿಗೂ ಲಾಭ!
ಮತ್ತಷ್ಟು ಓದು 
ಶಿಕ್ಷಣ ಎಂಬ ವ್ಯಾಪಾರದ ಕುರಿತು…..
ಅರೆಹೊಳೆ ಸದಾಶಿವರಾವ್
ಈಗ ಎಲ್ಲಿ ನೋಡಿದರೂ ಶೈಕ್ಷಣಿಕ ವರ್ಷದ ಪುನರಾರಂಭದ ಕಾಲ. ಇತ್ತೀಚೆಗೆ ಶಿಕ್ಷಣದ ಕೆಲವು ಮಹತ್ವದ ಫಲಿತಾಂಶಗಳು ಹೊರಬಿದ್ದುವು. ಯಾಕೋ ಇವುಗಳನ್ನು ಗಮನಿಸಿದಾಗ ಕೆಲವು ಪ್ರಶ್ನೆಗಳು ಏಳುತ್ತವೆ. ಹೀಗೇ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಗಮನಿಸುತ್ತಿದ್ದಾಗ, ನನಗೆ ತಿಳಿದ ಕೆಲವು ಶಾಲೆಗಳು ನೂರು ಶೇಕಡಾ ಬಂದದ್ದನ್ನು ಓದಿದೆ. ಆದರೆ ಆ ಶಾಲೆಗಳು ವಾಸ್ತವಿಕವಾಗಿ ಆ ರೀತಿಯ ಗುಣಮಟ್ಟದ ಶಿಕ್ಷಣವನ್ನು ಕೊಟ್ಟ ಬಗ್ಗೆ ಅನುಮಾನಗಳಿದ್ದುವು. ಕೊನೆಗೆ ಈ ನೂರು ಶೇಕಡಾದ ಮರ್ಮವನ್ನು ತಿಳಿಯಹೋದರ ಅಚ್ಚರಿ ಹುಟ್ಟಿದ ಅಂಶವೆಂದರೆ, ಅಲ್ಲಿಂದ ಈ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು ಕೇವಲ ೧೩ಎಂಬುದು! ಮತ್ತೊಂದು ಶಾಲೆಯ ಪರಿಚಿತ ಮುಖ್ಯೋಪಾದ್ಯಾಯರು ತಮ್ಮ ಶಾಲೆಯ ಫಲಿತಾಂಶವನ್ನು ನೂರು ಶೇಕಡಾ ನಿರೀಕ್ಷಿಸಿದ್ದೆ. ಆದರೆ ಕೇವಲ ೮೭ ಶೇಕಡಾ ಬಂತೆಂದು ಅಳಲು ತೋಡಿಕೊಂಡಾಗ ಅವರ ಶಾಲೆಯಲ್ಲೆಷ್ಟು ವಿದ್ಯಾರ್ಥಿಗಳು ಕುಳಿತಿದ್ದರು ಎಂದು ಪ್ರಶ್ನಿಸಿದರೆ ಆಶ್ಚರ್ಯ ಕಾದಿತ್ತು. ಒಟ್ಟೂ ಕುಳಿತ ನೂರು ಮಕ್ಕಳಲ್ಲಿ ೮೭ ಜನ ಮಕ್ಕಳು ಉನ್ನತ ದರ್ಜೆಯಲ್ಲಿ ಪಾಸಾಗಿದ್ದರು!. ಆದರೆ ಪತ್ರಿಕೆಯಲ್ಲಿ ಹಾಕಿಕೊಳ್ಳಲು ಅವರ ಫಲಿತಾಂಶದ ಶೇಕಡಾವಾರು ೮೭ ಮಾತ್ರ!. ಮತ್ತಷ್ಟು ಓದು 






