ವಿಷಯದ ವಿವರಗಳಿಗೆ ದಾಟಿರಿ

ಜನವರಿ 7, 2011

48

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?

‍ನಿಲುಮೆ ಮೂಲಕ

ವಸಂತ ಶೆಟ್ಟಿ

ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು.  ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ “ಸಂಸ್ಕೃತ ಭಾರತಿ”  ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು.

ಕನ್ನಡ ಒಂದು ದ್ರಾವಿಡ ನುಡಿ

ಈ ಮೇಳ ಶುರುವಾದ ನಿನ್ನೆ ದಿನ ಶಿಕ್ಷಣ ಮಂತ್ರಿ ಕಾಗೇರಿಯವರು ” ಸಂಸ್ಕೃತವೇ ಎಲ್ಲ ಭಾಷೆಗಳ ತಳಹದಿ” ಅನ್ನುವ ಹಸಿ ಸುಳ್ಳೊಂದನ್ನು ಹೇಳಿದ್ದಾರೆ. Linguistics ಅನ್ನುವ ವಿಜ್ಞಾನ ಗೊತ್ತಿರುವ ಯಾರಿಗಾದರೂ ಗೊತ್ತಿರುವ ಅಂಶವೆಂದರೆ ದಕ್ಷಿಣ ಭಾರತದ ಕನ್ನಡ,ತಮಿಳು,ತೆಲುಗು, ಮಲಯಾಳಂಗಳು ದ್ರಾವಿಡ ಭಾಷೆಗಳು ಅನ್ನುವುದು. ಹಾಗೆಯೇ ಸಂಸ್ಕೃತ ಅನ್ನುವುದು ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆ ಅನ್ನುವುದು. ಕನ್ನಡ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದಿದೆ ಎಂದ ಮಾತ್ರಕ್ಕೆ ಸಂಸ್ಕೃತ ಅದರ ತಾಯಿಯಾಗುವುದಿಲ್ಲ.

ಕನ್ನಡಿಗರ ಬದುಕಿನ ಭಾಷೆಯಾದ ಕನ್ನಡ ಅತ್ಯಂತ ತುರ್ತಾಗಿ ಗಮನ ಬೇಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಆದ್ಯತೆ ಕನ್ನಡದ ಉಳಿವು, ಬೆಳೆವಿನತ್ತ ಧಾವಿಸುವುದಾಗಬೇಕೆ ವಿನಹ “ಸಂಸ್ಕೃತ ಎಲ್ಲ ಭಾಷೆಗಳ ತಾಯಿ”, “ಸಂಸ್ಕೃತ = ಸಂಸ್ಕೃತಿ” ಅನ್ನುತ್ತ ತನ್ನ ideological pet themesಗಳನ್ನು ಪೋಷಿಸುವ ಕೆಲಸಗಳತ್ತ ಸರ್ಕಾರದ ಸಂಪನ್ಮೂಲವನ್ನು ಪೋಲು ಮಾಡುವುದಕ್ಕಲ್ಲ ಅನ್ನುವುದು ನನ್ನ ಅನಿಸಿಕೆ.

48 ಟಿಪ್ಪಣಿಗಳು Post a comment
  1. ಸಂಪನ್ಮೂಲಗಳನ್ನು ಪೋಲುಮಾಡುವ ಇಂಥ ಇಲಾಖೆಗಳು ಸಾಕಷ್ಟಿವೆ.
    ನೆಟ್ಟಗೆ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳು ಬೆರಳೆಣಿಕೆಗಳಷ್ಟೇ.
    “ಭಾಷೆ” ಇಲ್ಲದ ಈ ರಾಜಕೀಯ ಮುಖಂಡರುಗಳು (ಭ್ರಷ್ಟಾಚಾರಿಗಳು) ಭಾಷೆಯ ಬಗ್ಗೆ ಜ್ಞಾನಹೊಂದಿರಲು ಅಥವಾ ಅವರು ಮಾತಾಡುತ್ತಿರುವುದು ಸರಿಯಾಗಿರಲು ಹೇಗೆ ಸಾಧ್ಯ ಹೇಳಿ.
    ಅಧಿಕಾರಕ್ಕೇರುವುದೇ ಆದಷ್ಟು ಸಂಪತ್ತು ಅರ್ಜಿಸಿಕೊಳ್ಳಲು ಮತ್ತು ಸರಕಾರೀ ಹಣವನ್ನು ಪೋಲುಮಾಡಲು ಎನ್ನುವುದು ವೇದವಾಕ್ಯವಾಗಿದೆ ಇವರಿಗೆಲ್ಲಾ.

    ಉತ್ತರ
  2. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಜನ 8 2011

    ಈ ಥರದ ಲೇಖನಗಳು ಹೆಚ್ಚು ಹೆಚ್ಚು ಬಂದಲ್ಲಿ ನಿಧಾನಕ್ಕಾದರೂ ಈ ಥರ ಆಭಾಸಗಳು ನೆಟ್ಟಗಾದಾವು. ಈವರೆಗೆ ಇದ್ದ ಸಮಸ್ಯೆಯೆಂದರೆ ಕನ್ನಡ ಪರವಾಗಿ ಮಾತನಾಡುವವರು ಸಂಸ್ಕೃತ ಅಥವಾ ಇತರ ಭಾಷೆಗಳನ್ನು ಟೀಕಿಸುತ್ತಿದ್ದವರು. ಇದರಿಂದಾಗಿ ಸರಿಯಾದ ಸಂದೇಶ ರವಾನೆಯಾಗುತ್ತಿರಲಿಲ್ಲ.

    ಕನ್ನಡ ಪ್ರೇಮಿಯಾಗಿದ್ದೂ ಹೇಗೆ ಧರ್ಮಾಭಿಮಾನಿಯಾಗಿರಬಹುದು ಎಂಬುದಕ್ಕೆ ಚಿ.ಮೂ. ಒಬ್ಬ ಉದಾಹರಣೆ. ಕನ್ನಡಾಭಿಮಾನಿಯಾಗಿದ್ದ ಮಾತ್ರಕ್ಕೆ ಸಂಸ್ಕೃತ ಅಥವಾ ಧರ್ಮದ ವಿರೋಧಿಯಾಗಬೇಕಿಲ್ಲ ಎನ್ನುವುದನ್ನು ನಿಮ್ಮ ಲೇಖನವೂ ಸೂಕ್ಷ್ಮವಾಗಿ ತಿಳಿಸಿದೆ.

    ಮಂಗಳ ಕಾರ್ಯಗಳಲ್ಲಿ ಸಂಸ್ಕೃತದ ಮಂತ್ರಗಳ ಬದಲಾಗಿ ಕನ್ನಡದಲ್ಲೇ ಮಂತ್ರ ಪಠಣ ಮಾಡುವ ಪ್ರಯತ್ನವೊಂದನ್ನು ಯಾರೋ ಮಾಡಿದ್ದು ಕೇಳಿದೆ. ಯಾರೆಂದು ನೆನಪಿಲ್ಲ. ಬನ್ನಂಜೆ ಗೋವಿಂದಾಚಾರ್ಯರೋ? ಗೊತ್ತಿದ್ದರೆ ಹೇಳಿ. ಅಧ್ಯಾತ್ಮಿಕ ಸಾಧನೆ ಮಾಡಿದ ತಿಳುವಳಿಕೆಯುಳ್ಳವರು ಈ ಪ್ರಯತ್ನ ಮುಂದುವರೆಸಿದರೆ ಜನಸಾಮಾನ್ಯರಿಗೆ ಅರ್ಥವಾಗುವ ಪೂಜಾ ಪಧ್ಧತಿ ಬೆಳೆದು ಬರಲು ಸಾಧ್ಯ. ಈ ಬಗ್ಗೆ ಎಲ್ಲರೂ ಯೋಚಿಸಬೇಕು.

    ಉತ್ತರ
    • ಹಿರೇಮಲ್ಲೂರು ಕಣ್ಣನ್ ಅವರು – ಕನ್ನಡದಲ್ಲಿ ನಿತ್ಯ ಪೂಜೆ ಅಂತ ಪುಸ್ತಕ ಬಂದಿದೆ. ಕನ್ನಡದಲ್ಲಿ ಅವರು ಮಾಡುವ ದೇವರ ಪೂಜೆ ಉದಯ ಟೀವಿಯಲ್ಲಿ ಒಂದು ರಾಜ್ಯೋತ್ಸವದಂದು ಬಂದಿತ್ತು .

      ಹಾಗೇ ಇದನ್ನೂ ನೋಡಿ
      http://thatskannada.oneindia.in/column/nataraj/2007/090807kannada-pooje2.html

      ಉತ್ತರ
      • ಆತ ಹಿರೇಮಗಳೂರು ಕಣ್ಣನ್
        ಆಗಾಗ ಉದಯ ವಾಹಿಇನಿಯಲ್ಲಿ ಹೆಚ್ಚಾಗಿ ಪ್ರಸಾರವಾಗುವ ಹರಟೆ ಕಾರ್ಯಕ್ರಮಗಳ ಮಧ್ಯಸ್ತಿಕೆಯನ್ನೂ ವಹಿಸುತ್ತಾರೆ.

        ಉತ್ತರ
  3. ಶ್ರೀಕಾಂತ್,

    ‘ಹಿರೇಮಗಳೂರು ಕಣ್ಣನ್’ ಅನ್ನಿಸುತ್ತೆ ‘ಹಿರೇಮಲ್ಲೂರ್ ಕಣ್ಣನ್’ ಅಲ್ಲ 🙂
    ಈ ಬಾರಿ ರಾಜ್ಯೋತ್ಸವಕ್ಕೆ tv9 ಇವರ ಬಗ್ಗೆ ಪ್ರಸಾರ ಮಾಡಿತ್ತು.

    ರಾಕೇಶ್ ಶೆಟ್ಟಿ 🙂

    ಉತ್ತರ
  4. Kumara S's avatar
    Kumara S
    ಜನ 9 2011

    …Vasant…nimma Dravidian,Indo- Aryan bhashe bagge gottilla nimge andre…..modlu hogi “Shrikanta Shastri (Kumvempu avara gurugalu)” avaru barediruva “Bharathiya Samskruti” anno puskata na modlu odi…..aamele gottagatte Samksurta enu and adara vyapthi enu anta…..Yaaro barediro pustaka odi avara bagge prachara maadakke barabedi…Bere bhashe na virodisi Kannada beliyatte andre adu nimma murkhatana ashte…..

    ಉತ್ತರ
  5. Vasant's avatar
    ಜನ 9 2011

    @Kumara,

    ಎರಡು ಭಾಷೆಗಳ ಬಗ್ಗೆ “ಯಾರೋ’ ಬರೆದಿದ್ದನ್ನು ಇಲ್ಲಿ ಹೇಳುತ್ತಿಲ್ಲ. ಭಾಷಾ ವಿಜ್ಞಾನದ Language trees ಬಗ್ಗೆ ಓದಿಕೊಳ್ಳಿ. ಅಲ್ಲಿ ತಿಳಿಯುತ್ತೆ. ಎರಡು ಭಾಷೆಗಳ ಭಾಷಾ ಕುಟುಂಬ ಏನು ಎತ್ತ ಅಂಬುದರ ಬಗ್ಗೆ.

    ಬೇರೆ ಭಾಷೆ ವಿರೋಧಿಸಿ ಎಂದು ನಾನೆಲ್ಲೂ ಹೇಳಿಲ್ಲ. ಇನ್ನೊಮ್ಮೆ ನನ್ನ ಬರಹವನ್ನು ಓದಿ ಎಂದು ಹೇಳುವೆ. ಖಾಸಗಿ ಸಂಸ್ಕೃತ ಪುಸ್ತಕ ಮೇಳಕ್ಕೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ತೆರಿಗೆ ಹಣ ಕೊಟ್ಟಿದ್ದನ್ನಷ್ಟೇ ನಾನು ಪ್ರಶ್ನಿಸಿದ್ದು. ಸರ್ಕಾರದ ಆದ್ಯತೆ ಕನ್ನಡಿಗರ ಬದುಕಿನ ಭಾಷೆಯತ್ತ ಹರಿಯಬೇಕಿದೆಯೇ ವಿನಹ ತನ್ನ ಮನಸಿಗೆ ಇಷ್ಟವಾದ ವಿಷಯದತ್ತಲ್ಲ ಅಂದ ಕ್ಷಣ ಸಂಸ್ಕೃತ ವಿರೋಧಿ ಅಂತೆಲ್ಲ ಕಂಡರೆ ನಾನು ಅಸಹಾಯಕ ಸಾರ್ 🙂

    ಉತ್ತರ
    • Kumara S's avatar
      Kumara S
      ಜನ 10 2011

      …ನಾನು ಕೂಡ ಭಾಷಾ ವಿಜ್ಞಾನದ ಬಗ್ಗೆ ನೋಡಿನೆ ಹೇಳಿದ್ದು ವಸಂತ್… ಶ್ರೀಕಂಠ ಶಾಸ್ತ್ರೀ ಅವ್ರು ಇದರ ಬಗ್ಗೆನೇ ಹೇಳಿದಾರೆ…ಅವರ ಪುಸಕ್ತ ಸಿಕ್ಕರೆ ಓದಿ.. ಅದರಲ್ಲಿ ಭಾರತದ ಎಲ್ಲ ಭಾಷೆ ಬಗ್ಗೆನು ಬರ್ದಿದಾರೆ… ಹಾಗೇನೆ ಸಂಸ್ಕೃತ ಭಾಷೆ ಯಿಂದ ಭಾರತದ ಎಲ್ಲ ಭಾಷೆಗಳಿಗೆ ಆಗಿರುವ ಉಪಯೋಗ ಏನು ಮತ್ತು ಅದರ ಮಹತ್ವ ಏನು ಅಂತ…ನೀವು ಬರೆದಿರೋ ಪೂರ್ತಿ ವಿವರಣೆ ಯಲ್ಲಿ ೭೫% ಸಂಸ್ಕೃತ ಇದೆ…..
      …..ಸಂಸ್ಕೃತ ನಮ್ಮ ದೇಶದ ಸನಾತನ ಭಾಷೆ… ಅದಕ್ಕೆ ಪ್ರಪಂಚದ ಎಲ್ಲ ಕಡೆಯಿಂದ ಮತ್ತು ನಮ್ಮ ದೇಶದ ಎಲ್ಲ ರಾಜ್ಯಗಳ ಇಲಾಖೆಗಳು ಸಹಾಯ ಮಾಡಿವೆ ಹಾಗೆ ನಮ್ಮ ಇಲಾಖೆನು ಸಹಾಯ ಮಾಡಿದೆ ಅದರಲ್ಲಿ ಏನು ತಪ್ಪು…. ಕನ್ನಡ ಅಂತ ಹೇಳಿ ನಮ್ಮ ಸಂಸ್ಕೃತಿ ಇಲಾಖೆಯರು ದುಡ್ಡು ಮಾಡಲ್ವಾ ಅದನ್ನ ಯಾಕೆ ಪ್ರಶ್ನೆ ಮಾಡ್ತಾ ಇಲ್ಲ?….ಸಂಸ್ಕೃತ ಭಾಷೆ ನಮ್ಮ ದೇಶದ ಜನರ ಭಾಷೆ….ಅದು ಕನ್ನಡಿಗರಿಗೆ,ತಮಿಳರಿಗೆ,ಗುಜರಾತಿಗಳಿಗೆ,ಕಾಶ್ಮೀರಿಗಳಿಗೆ ಬೇರೆ ಅಂತ ಎಲ್ಲ…ಸಂಸ್ಕೃತ ಭಾಷೆ ಬಗ್ಗೆ ತಿಳ್ಕೊಬೇಕು ಅಂದ್ರೆ Dr.David Frawley ಅವರ ಲೇಖನಗಳನ್ನ ಓದಿ….

      ಉತ್ತರ
      • Vasant's avatar
        ಜನ 11 2011

        ಕುಮಾರ್,

        ಸಂಸ್ಕೃತದಿಂದ ಒಂದಿಷ್ಟು ಪಡೆದಿದ್ದೇವೆ.ಹಾಗೆಂದ ಮಾತ್ರಕ್ಕೆ ಕನ್ನಡದ ತಾಯಿ ಸಂಸ್ಕೃತವಲ್ಲ. ನಾನು ಕೊಟ್ಟಿರುವ ಲಿಂಕ್ ಯಾವುದೋ ವೈಯಕ್ತಿಕ ಲಿಂಕ್ ಅಲ್ಲ, ಅದು ವಿಕಿಪಿಡಿಯಾ ಲಿಂಕ್. ಅದರಲ್ಲಿ ರೆಫರನ್ಸ್ ಕೂಡಾ ನೋಡಿ. ಕನ್ನಡಕ್ಕೂ, ಸಂಸ್ಕೃತಕ್ಕೂ ಭಾಷಾ ವಿಜ್ಞಾನದ ದೃಷ್ಟಿಯಿಂದ ಯಾವುದೇ ಸಂಬಂಧವಿಲ್ಲ.

        ಸಂಸ್ಕೃತಕ್ಕೆ ಅಂತಲೇ ದೇಶದಲ್ಲ ಎಂಟು ವಿಶ್ವವಿದ್ಯಾಲಯವಿದೆ. ಕ್ಲಾಸಿಕಲ್ ಭಾಷೆಯಡಿ ಅದರ ಅಧ್ಯಯನಕ್ಕೆ ನೂರಾರು ಕೋಟಿ ಹಣ ಕೇಂದ್ರ ಸರ್ಕಾರ ನೀಡುತ್ತೆ. ಇಂತಹ luxury ಕನ್ನಡಕ್ಕಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ charter ಅಲ್ಲಿ ಏನಿದೆ ಅದಷ್ಟೇ ಮಾಡಲಿ, ಅದು ಬಿಟ್ಟು ಖಾಸಗಿ ಸಂಸ್ಥೆ ನಡೆಸುವ ಪುಸ್ತಕ ಮೇಳ ಪ್ರಾಯೋಜಿಸುವುದಲ್ಲ.

        ಕನ್ನಡ ಅಂತ ಹೇಳಿ ದುಡ್ಡು ತಿಂದ ಬಗ್ಗೆ ನಿಮ್ಮಲ್ಲಿ ಆಧಾರವಿದ್ದಲ್ಲಿ, ಈ ಕೂಡಲೇ ಪ್ರಕಟಿಸಿ, ನಾನು ನಿಮ್ಮ ಬೆಂಬಲಕ್ಕಿದ್ದೇನೆ.

        ಕನ್ನಡ ಕನ್ನಡಿಗರ ಬದುಕಿನ ಭಾಷೆ. ಅದು ಕಾಯಿಲೆ ಬಿದ್ದಿರುವ ಈ ದಿನದಲ್ಲಿ ಅದಕ್ಕೆ ಔಷಧಿ ಕೊಡಿಸುವತ್ತ ಸರ್ಕಾರದ ಗಮನವಿರಬೇಕೇ ವಿನಹ ಈ ರೀತಿ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸಿರದ ಕೆಲಸಕ್ಕೆ ತೆರಿಗೆದಾರರ ಹಣ ಹರಿಸುವುದಕ್ಕಲ್ಲ.

        ಉತ್ತರ
  6. Narendra Kumar.S.S's avatar
    Narendra Kumar.S.S
    ಜನ 12 2011

    ಕನ್ನಡದಿಂದ ಸಂಸ್ಕೃತವನ್ನು ಬೇರ್ಪಡಿಸಲು ಸಾಧ್ಯವೇ?
    ಅವೆರಡರ ಸಂಬಂಧವೂ ಅವಿನಾಭಾವ ಅಲ್ಲವೇ?
    ಕನ್ನಡಕ್ಕೆ ಇಂಗ್ಲಿಷಿನಿಂದ ಆಗಿರುವಷ್ಟು ಅಪಚಾರ ಇನ್ನಾವುದೇ ಭಾರತೀಯ ಭಾಷೆಯಿಂದ ಆಗಿಲ್ಲ, ಆಗುವುದೂ ಇಲ್ಲ.

    ಇಂದಿಗೂ “ಆರ್ಯ” ಪದವನ್ನು ಹಿಡಿದು ಜಗ್ಗಾಡುವುದು ನೋಡಿದರೆ ದುಃಖವಾಗುತ್ತದೆ.
    ತಮ್ಮ ಬೇಳೆ ಬೇಯಿಸಿಕೊಳ್ಳಲು ಬ್ರಿಟಿಷರು ಉಪಯೋಗಿಸಿಕೊಂಡ ಸವಕಲು, ಬುಡವಿಲ್ಲದ ವಾದ “ಆರ್ಯ-ದ್ರಾವಿಡ ವಾದ”.
    ಅದನ್ನು ಮೊದಲಿಗೆ ತಿಳಿಸಿದವನು ಮ್ಯಾಕ್ಸ್ ಮುಲ್ಲರ್.
    ಆತನೇ, ಕಡೆಗೆ ತನ್ನ ಈ ವಾದದಲ್ಲಿ ಹುರುಳಿಲ್ಲವೆಂದು ಬಿಟ್ಟ.
    ಆದರೆ, ಬ್ರಿಟಿಷರ ಒಡೆದು ಆಳುವ ನೀತಿಗೆ ಅನುಕೂಲವಾಗಿದ್ದ ಈ ವಾದವನ್ನು ಅವರು ಬಿಡಲಿಲ್ಲ.

    ಬ್ರಿಟಿಷರು ಹೋಗಿ ೭ ದಶಕಗಳಾಗುತ್ತಾ ಬಂದರೂ, ಇಂದಿಗೂ ಅದೇ ಗಿಣಿಪಾಠವನ್ನೇ ಹೇಳುತ್ತಿದ್ದೀವೆಂದರೆ, ಏನು ಹೇಳಬೇಕೋ ತಿಳಿಯುವುದಿಲ್ಲ.

    ಸಂಸ್ಕೃತದಿಂದ ಮತ್ತು ಅದಕ್ಕೆ ಸಂಬಂಧಿಸಿದ ಜ್ಞಾನ-ವಿಜ್ಞಾನದ ಶಾಖೆಗಳಿಂದ ಭಾರತದ ಪ್ರತಿಯೊಂದು ಭಾಗದ ಮೇಲೂ ಗಾಢವಾದ ಪ್ರಭಾವ ಬೀರಿದೆ.
    ಉದಾಹರಣೆಗೆ, ಈಗಿನ ಸಂಕ್ರಾಂತಿಯನ್ನೇ ತೆಗೆದುಕೊಳ್ಳಿ – ಆ ಹಬ್ಬದ ಮೂಲವೇನೂ ಕನ್ನಡವಲ್ಲ. ಅದಕ್ಕೆ ಉಪಯೋಗಿಸುವ ಸೌರಮಾನ ಪಂಚಾಂಗವೂ ಕನ್ನಡದ್ದಲ್ಲ.
    ಈ ರೀತಿ ಯಾವುದೇ ಶಾಖೆಗಳನ್ನು ತೆಗೆದುಕೊಳ್ಳಿ – ಆಯುರ್ವೇದ, ಯೋಗ, ಪ್ರಾಣಾಯಾಮ, ಖಗೋಳಶಾಸ್ತ್ರ, ಲೋಹಶಾಸ್ತ್ರ, ಸಂಗೀತ, ನೃತ್ಯ.
    ಪ್ರತಿಯೊಂದೂ ಸಂಸ್ಕೃತದ ಮೂಲದಿಂದಲೇ ಬಂದಿರುವುದು.
    ಹೀಗಿದ್ದಾಗ್ಯೂ ನಮಗದು ಪರಕೀಯವೆನಿಸುತ್ತಿಲ್ಲ – ಏಕೆಂದರೆ, ಸಂಸ್ಕೃತದ ಆಧಾರದ ಮೇಲೆಯೇ ನಮ್ಮೆಲ್ಲರ ಭಾಷೆ-ಸಂಸ್ಕೃತಿಗಳೂ ನಿಂತಿರುವುದು. ಸಂಸ್ಕೃತ ಕನ್ನಡಕ್ಕೆ ಪರಕೀಯವಲ್ಲ, ಕನ್ನಡಕ್ಕೆ ವಿರೋಧಿಯಲ್ಲ.
    ಸಂಸ್ಕೃತದ ಕೆಲಸ ಮಾಡುವುದರಿಂದ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆ.

    ಉತ್ತರ
    • Vasant's avatar
      ಜನ 12 2011

      >>> ಕನ್ನಡದಿಂದ ಸಂಸ್ಕೃತವನ್ನು ಬೇರ್ಪಡಿಸಲು ಸಾಧ್ಯವೇ? ಅವೆರಡರ ಸಂಬಂಧವೂ ಅವಿನಾಭಾವ ಅಲ್ಲವೇ? ಕನ್ನಡಕ್ಕೆ ಇಂಗ್ಲಿಷಿನಿಂದ ಆಗಿರುವಷ್ಟು ಅಪಚಾರ ಇನ್ನಾವುದೇ ಭಾರತೀಯ ಭಾಷೆಯಿಂದ ಆಗಿಲ್ಲ, ಆಗುವುದೂ ಇಲ್ಲ.
      -> ಕನ್ನಡಕ್ಕೆ ಇಂಗ್ಲಿಷ್ ಭಾಷೆಯಿಂದ ಯಾವ ರೀತಿಯ ಅಪಚಾರವಾಗಿದೆ ಅನ್ನುವುದನ್ನು ತಿಳಿಸಿ ಎಂದು ಕೇಳಿಕೊಳ್ಳುವೆ. ಜಾಗತೀಕರಣದ ಈ ದಿನದಲ್ಲಿ, ಇಂಗ್ಲಿಷ್ ಅನ್ನು ಜನ ಸುಮ್ ಸುಮ್ನೆ ಅಪ್ಪಿಕೊಂಡಿಲ್ಲ. ಅದು ಅನ್ನ ಕೊಡ್ತಿದೆ, ಒಳ್ಳೆ ಬದುಕು ಕೊಡ್ತಿದೆ ಅನ್ನೋ ಕಾರಣಕ್ಕೆ ಅದಕ್ಕೆ ಅಷ್ಟು ಜನಮನ್ನಣೆ ಸಿಗ್ತಿರೋದು. ಕನ್ನಡವೂ ಅಂತಹ ಸಾಧ್ಯತೆ ಕೊಡ ಮಾಡಿದಾಗ ಇಂಗ್ಲಿಷ್ ಮೇಲಿನ ಈ ಮಮಕಾರ ಕಮ್ಮಿ ಆದೀತು. ಇಂಗ್ಲಿಷ್ ಅಲ್ಲಿರುವ ಆ ಜ್ಞಾನ ಸಾಧ್ಯತೆಯನ್ನು ನಮ್ಮ ನಮ್ಮ ನುಡಿಯಲ್ಲಿ ಸಾಧ್ಯವಾಗಿಸಿದರೆ ಇಂಗ್ಲಿಷ್ ಮೇಲಿನ ವ್ಯಾಮೋಹ ತಾನೇ ತಾನಾಗಿ ಕಮ್ಮಿ ಆಗುತ್ತೆ. ನೀವು ಇವತ್ತು ಇಂಟರ್ ನೆಟ್ ಅಲ್ಲಿ ಕೂತು, ಕಂಪ್ಯೂಟರ್ ಬಳಸಿ ಇದನ್ನೆಲ್ಲ ಬರೆಯುತ್ತಿದ್ದರೆ ಆ ಸಾಧ್ಯತೆಯೂ ಇಂಗ್ಲಿಷ್ ನಿಂದಲೇ ಬಂದಿರುವುದು. ನಮ್ಮ ನುಡಿಗೆ ಆ ಯೋಗ್ಯತೆ ತಂದುಕೊಳ್ಳದೇ ಸುಮ್ಮನೆ ಇಂಗ್ಲಿಷ್ ಅನ್ನು ಬೈಯುವುದು ನಮ್ಮನ್ನು ಎಲ್ಲಿಯೂ ಒಯ್ಯುವುದಿಲ್ಲ. ಕನ್ನಡಕ್ಕೆ ಎದುರಾಗಿರುವ ಇಂಗ್ಲಿಷ್ ನ ಆತಂಕವೂ ಕಡಿಮೆಯಾಗುವುದಿಲ್ಲ.

      >>> ಇಂದಿಗೂ “ಆರ್ಯ” ಪದವನ್ನು ಹಿಡಿದು ಜಗ್ಗಾಡುವುದು ನೋಡಿದರೆ ದುಃಖವಾಗುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಬ್ರಿಟಿಷರು ಉಪಯೋಗಿಸಿಕೊಂಡ ಸವಕಲು, ಬುಡವಿಲ್ಲದ ವಾದ “ಆರ್ಯ-ದ್ರಾವಿಡ ವಾದ”. ಅದನ್ನು ಮೊದಲಿಗೆ ತಿಳಿಸಿದವನು ಮ್ಯಾಕ್ಸ್ ಮುಲ್ಲರ್.
      ಆತನೇ, ಕಡೆಗೆ ತನ್ನ ಈ ವಾದದಲ್ಲಿ ಹುರುಳಿಲ್ಲವೆಂದು ಬಿಟ್ಟ. ಆದರೆ, ಬ್ರಿಟಿಷರ ಒಡೆದು ಆಳುವ ನೀತಿಗೆ ಅನುಕೂಲವಾಗಿದ್ದ ಈ ವಾದವನ್ನು ಅವರು ಬಿಡಲಿಲ್ಲ. ಬ್ರಿಟಿಷರು ಹೋಗಿ ೭ ದಶಕಗಳಾಗುತ್ತಾ ಬಂದರೂ, ಇಂದಿಗೂ ಅದೇ ಗಿಣಿಪಾಠವನ್ನೇ ಹೇಳುತ್ತಿದ್ದೀವೆಂದರೆ, ಏನು ಹೇಳಬೇಕೋ ತಿಳಿಯುವುದಿಲ್ಲ.

      The Aryan invasion theory or its opposition doesn’t prove or disprove anything. Read and distribute http://purohita.blogspot.com/2007/01/aryan-invasion-theory-or-not-dravidian.html.
      It is foolish to forget clear and present differences in the languages of South and North India. Whether AIT is right or wrong, the linguistic fact that South Indian languages are markedly different from North Indian languages does not get disproved! Surely this didn’t come about because of the British! So – as far as my philosophy of India is concerned, the AIT is powerless in proving or disproving anything. All I say is – “There is undeniable linguistic proof that the languages of South and North India belong to two different families, and undeniable linguistic proof that Kannada is markedly different from other South Indian languages also

      >>> ಸಂಸ್ಕೃತದಿಂದ ಮತ್ತು ಅದಕ್ಕೆ ಸಂಬಂಧಿಸಿದ ಜ್ಞಾನ-ವಿಜ್ಞಾನದ ಶಾಖೆಗಳಿಂದ ಭಾರತದ ಪ್ರತಿಯೊಂದು ಭಾಗದ ಮೇಲೂ ಗಾಢವಾದ ಪ್ರಭಾವ ಬೀರಿದೆ. ಉದಾಹರಣೆಗೆ, ಈಗಿನ ಸಂಕ್ರಾಂತಿಯನ್ನೇ ತೆಗೆದುಕೊಳ್ಳಿ – ಆ ಹಬ್ಬದ ಮೂಲವೇನೂ ಕನ್ನಡವಲ್ಲ. ಅದಕ್ಕೆ ಉಪಯೋಗಿಸುವ ಸೌರಮಾನ ಪಂಚಾಂಗವೂ ಕನ್ನಡದ್ದಲ್ಲ. ಈ ರೀತಿ ಯಾವುದೇ ಶಾಖೆಗಳನ್ನು ತೆಗೆದುಕೊಳ್ಳಿ – ಆಯುರ್ವೇದ, ಯೋಗ, ಪ್ರಾಣಾಯಾಮ, ಖಗೋಳಶಾಸ್ತ್ರ, ಲೋಹಶಾಸ್ತ್ರ, ಸಂಗೀತ, ನೃತ್ಯ. ಪ್ರತಿಯೊಂದೂ ಸಂಸ್ಕೃತದ ಮೂಲದಿಂದಲೇ ಬಂದಿರುವುದು. ಹೀಗಿದ್ದಾಗ್ಯೂ ನಮಗದು ಪರಕೀಯವೆನಿಸುತ್ತಿಲ್ಲ – ಏಕೆಂದರೆ, ಸಂಸ್ಕೃತದ ಆಧಾರದ ಮೇಲೆಯೇ ನಮ್ಮೆಲ್ಲರ ಭಾಷೆ-ಸಂಸ್ಕೃತಿಗಳೂ ನಿಂತಿರುವುದು. ಸಂಸ್ಕೃತ ಕನ್ನಡಕ್ಕೆ ಪರಕೀಯವಲ್ಲ, ಕನ್ನಡಕ್ಕೆ ವಿರೋಧಿಯಲ್ಲ.

      ಸಂಸ್ಕೃತ ಪರಕೀಯವೂ ಅಲ್ಲ, ಕನ್ನಡ ವಿರೋಧಿಯೂ ಅಲ್ಲ. ಅದಕ್ಕೆ ಅದರದ್ದೇ ಆದ ಸ್ಥಾನ ಕನ್ನಡದಲ್ಲಿದೆ. ಅದರಲ್ಲಿರುವ ಜ್ಞಾನವನ್ನು ನಾನು ನಿರಾಕರಿಸಿಲ್ಲ. Infact, ಆ ಎಲ್ಲ ಸಾರ ಕನ್ನಡಿಗರಿಗೆ ಕನ್ನಡದಲ್ಲಿ ದೊರಕಲಿ ಎಂದೂ ಹೇಳಿದ್ದೇನೆ. ವಿರೋಧವಿರುವುದು misplaced priority ಬಗ್ಗೆಯಷ್ಟೇ. ಗಡಿ ಭಾಗದ ಕನ್ನಡಿಗರಾಗಿದ್ದು, ನೂರಾರು ಕಾಲದಿಂದ ಕನ್ನಡ ಮಾತನಾಡಿಕೊಂಡು ಬದುಕಿದ ಜನ ಇವತ್ತು ಅಲ್ಲಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸಲಾಗದಂತ ಕೆಟ್ಟ ಸ್ಥಿತಿ ಇದೆ. ಅಲ್ಲಿನ ಪರಭಾಷಿಕರ ಅಬ್ಬರದ ಮುಂದೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಕೆಲಸಕ್ಕೂ ಕೊರತೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇಲ್ಲಿ ಹಿರಿದಾದ ಕೆಲಸವಿದೆ. ಅದನ್ನು ಬದಿಗೊತ್ತಿ “”ಖಾಸಗಿ”” ಪುಸ್ತಕ ಮೇಳವನ್ನು ಪ್ರಾಯೋಜಿಸುವುದಲ್ಲ ಅನ್ನುವುದಷ್ಟೇ ನನ್ನ ಅನಿಸಿಕೆ.

      >>>ಸಂಸ್ಕೃತದ ಕೆಲಸ ಮಾಡುವುದರಿಂದ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆ.
      ಕನ್ನಡದಲ್ಲಿ ಬದುಕಿನ ವಿದ್ಯೆಗಳು ಬಂದು, ಕನ್ನಡ ಒಂದು ಅನ್ನ ಕೊಡುವ ಭಾಷೆಯಾದಾಗಲಷ್ಟೇ ಕನ್ನಡ, ಕನ್ನಡಿಗರು ಶ್ರೀಮಂತರಾಗುತ್ತಾರೆ.

      ಉತ್ತರ
  7. Kumara S's avatar
    Kumara S
    ಜನ 12 2011

    ವಸಂತ್,
    ಭಾರತದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ ಇದ್ದಂತೆ…..ಅಷ್ಟು ಜ್ಞಾನ ನಿಮಗೆ ಇಲ್ಲೇ ಅಂದ್ರೆ ಅದು ನಿಮ್ಮ ತಪ್ಪು…. ಅದಕ್ಕೂ ಕನ್ನಡಕ್ಕೂ ಸಂಬಂದ ಇಲ್ಲ ಅಂತ ಬೇಕಾದಷ್ಟು ಸುಳ್ಳು ಹೇಳ್ತಾರೆ ಬಿಡಿ..ನೀವು ಕೂಡ ಅದರಲ್ಲಿ ಒಬ್ಬರು… ಕನ್ನಡದ ಶ್ರೇಷ್ಠ ಲೇಖನಕಾರರು (ಭೈರಪ್ಪ,ಚಿದಾನಂದ ಮೂರ್ತಿ,ಬನ್ನಂಜೆ,ನವರತ್ನ ರಾಜಾರಾಮ್,ಶತಾವಧಾನಿ ಗಣೇಶ್ ) ಬೇಕಾದಷ್ಟು ಬರಿದಿದಾರೆ & ಬೇಕಾದಷ್ಟು ಪುರಾವೆ ಅನ್ನು ಕೊಟ್ಟಿದಾರೆ…ಅದಕ್ಕಿಂತ ಇನ್ನೇನು ಬೇಕು ….ಕನ್ನಡಕ್ಕೂ ಸಂಸ್ಕೃತಕ್ಕೂ ಸಂಬಂಧ ಇಲ್ಲದೆ ಇದ್ದಾರೆ ನೀವು ಬರೆದಿರು ಲೇಖನದಲ್ಲಿ ೭೦-೮೦% ಸಂಸ್ಕೃತ ಹೇಗೆ ಬರತ್ತೆ ಅದು ಹೇಳಿ?
    ಸಂಸ್ಕೃತ ದಿಂದ ಕನ್ನಡ ಭಾಷೆ ಆಗಿರುವ ಉಪಯೋಗ ಏನು ಅಂತ ತಿಳ್ಕೊಬೇಕು ಅಂದ್ರೆ ಮೇಲೆ ಹೇಳಿದ ಲೇಖಕರ ಪುಸ್ತಕಗಳನ್ನೂ ಓದಿ….ಅಷ್ಟೊಂದು ಉಪಯೋಗ ಆಗಿರುವಾಗ ಕನ್ನಡ ಇಲಾಖೆಯವರು ಅದಕ್ಕೆ ತಮ್ಮ ಪ್ರಯೋಜನ ಮಾದೊದ್ರಲಿ ಏನು ತಪ್ಪು?….ಅದು ಭಾರತದಲ್ಲಿ ಎಲ್ಲ ನಗರಗನಲ್ಲು ಹೊರೆತು ಪಡಿಸಿ ನಮ್ಮ ಬೆಂಗಳುರುನ್ನು ಆರಿಸಿಕೊಂಡರೆ ಅದು ನಮ್ಮ ಹೆಮ್ಮೆ ಅಲ್ಲವಾ?….ಬರಿ advertisement ನೋಡಿ ಅದರಿಂದ ದೂರ ಉಳದ್ರಿ ಅನ್ಸತ್ತೆ ತಮ್ಮ ಲೇಖನ ನೋಡಿರಿ…..ಅಲ್ಲಿಗೆ ಹೋಗಿ ನೋಡಿದಾಗ ಗೊತ್ತಾಗ್ತಿತ್ತು ಅದರ ಮಹತ್ವ ಏನು ಅಂಡ್ ಕನ್ನಡ & ಸಂಸ್ಕೃತ ಭಾಷೆಗಿರುವ ಸಂಬಂದ ಏನು ಅಂತ….ಕನ್ನಡ ಬಗ್ಗೆ ಸುಮಾರು ಕಾರ್ಯಕ್ರಮಗಳು ಖಾಸಗಿ ಯವರು ಮಾಡ್ತಾರೆ ಅದಕ್ಕೆ ಕನ್ನಡ ಇಲಾಖನು ದುಡ್ಡು ಕೊಡತ್ತೆ..ಹಾಗಾದ್ರೆ ಅದು ತಪ್ಪ? (ಅದು ಕನ್ನಡ ಅದಕ್ಕೆ support ಅಂತ ಹೇಳಕ್ಕೆ ಹೋಗಬೇಡಿ )….
    …KA.RA.VE ಥರದ ಗುಂಪುಗಳು ಅದೇ ತಾನೆ ಮಾಡ್ತಾ ಇರೋದು……ಕನ್ನಡ ಭಾಷೆ ಅನ್ನೋ ಕಾರ್ಡ್ ಉಪಯೋಗಿಸಿ ದುಡ್ಡು ತಿಂತ ಇಲ್ಲವಾ?… ಚಂಪಾ ಅಂತ ವ್ಯಕ್ತಿಗಳು ಎಷ್ಟು ದುಡ್ಡು ಮಾಡಿದರೆ ಕನ್ನಡ ಇಲಾಖೆಯಿಂದ ಅಂತ ಎಲ್ಲರಿಗು ಗೊತ್ತು..ನಿಮಗೆ ಗೊತ್ತು ಇಲ್ಲದೆ ಇದ್ದಾರೆ ಏನು ಮಾಡಕ್ಕೆ ಆಗಲ್ಲ…
    ….ಕನ್ನಡ ಒಂದೇ ಕನ್ನಡಿಗರ ಬದುಕಿನ ಭಾಷೆ ಅಂತ ಯಾರು ಹೇಳಿದ್ದು ನಿಮಗೆ…..ಹಾಗಿದ್ರೆ ನೀವು ಕನ್ನಡ ಬಿಟ್ಟು ಬೇರೆ ಭಾಷೆ ಉಸೇ ಮಾಡಬಾರದು…..ಅದು ನಿಮ್ಮಿಂದ ಸಧ್ಯ ಇಲ್ಲ ಬಿಡಿ !!! …. ತೆರಿಗೆದಾರನ ಹಣ ಭಾರತದಲ್ಲಿ ಬೇಕಾದಷ್ಟು political movements ಉಪಯಿಗಿದಾರೆ & ತಮ್ಮು ಜೇಬು ಬರ್ತಿ ಮಾಡ್ಕೊಂಡಿದಾರೆ….ಅದೆಲ್ಲ ತಪ್ಪು ಕಾನೊದಿಲ್ಲವಾ ನಿಮಗೆ?….. ಇಲ್ಲಿ ಯಾರು ದುಡ್ಡು ಮಾಡ್ಕೊಂಡಿದಾರೆ ಹೇಳಿ?
    ….ತಮಗೆ ಟೈಮ್ ಇದ್ರೆ personal ಆಗಿ ಚಿದಾನಂದ ಮೂರ್ತಿ ಅವರನ್ನೋ or S L ಭೈರಪ್ಪ or ಶತಾವಧಾನಿ ಗಣೇಶ್ ಅವರ ಮನೆಗೆ ಹೋಗಿ ಭೇಟಿ ಆಗಿ ಆಗ ನಿಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನ ಪರಿಹರಿಸ್ತಾರೆ….

    ಉತ್ತರ
    • Vasant's avatar
      ಜನ 12 2011

      ಕುಮಾರ್,
      >> ಭಾರತದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ ಇದ್ದಂತೆ…..ಅಷ್ಟು ಜ್ಞಾನ ನಿಮಗೆ ಇಲ್ಲೇ ಅಂದ್ರೆ ಅದು ನಿಮ್ಮ ತಪ್ಪು….
      ದಯವಿಟ್ಟು ಭಾರತದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ ಅನ್ನುವುದಕ್ಕೆ ಆಧಾರ ಕೊಡಿ.

      >>>ಅದಕ್ಕೂ ಕನ್ನಡಕ್ಕೂ ಸಂಬಂದ ಇಲ್ಲ ಅಂತ ಬೇಕಾದಷ್ಟು ಸುಳ್ಳು ಹೇಳ್ತಾರೆ ಬಿಡಿ..ನೀವು ಕೂಡ ಅದರಲ್ಲಿ ಒಬ್ಬರು…
      ->ಕನ್ನಡಕ್ಕೂ ಅದಕ್ಕೂ ಭಾಷಾ ವಿಜ್ಞಾನದ ನಂಟಿಲ್ಲ ಅಂದೆನೇ ಹೊರತು ಸಂಸ್ಕೃತದಿಂದ ನಾವೇನು ಪಡೆದಿಲ್ಲ ಎಂದಿಲ್ಲ. ಬರೆಯುವ ಮುನ್ನ ಸ್ವಲ್ಪ ಯೋಚಿಸಿ. ಮುಂದುವರೆದು ಸಂಸ್ಕೃತ-ಕನ್ನಡ ಎರಡು ಒಂದೇ ಭಾಷೆಯಾಗಿದ್ದಲ್ಲಿ ಅವುಗಳ ವ್ಯಾಕರಣದಲ್ಲಿ ಅಂತರವನ್ನು ಯಾವ ಕಾರಣ ಕೊಟ್ಟು ವಿವರಿಸುವಿರಿ ತಿಳಿಸಿ.

      >>>ಕನ್ನಡದ ಶ್ರೇಷ್ಠ ಲೇಖನಕಾರರು (ಭೈರಪ್ಪ,ಚಿದಾನಂದ ಮೂರ್ತಿ,ಬನ್ನಂಜೆ,ನವರತ್ನ ರಾಜಾರಾಮ್,ಶತಾವಧಾನಿ ಗಣೇಶ್ ) ಬೇಕಾದಷ್ಟು ಬರಿದಿದಾರೆ & ಬೇಕಾದಷ್ಟು ಪುರಾವೆ ಅನ್ನು ಕೊಟ್ಟಿದಾರೆ…ಅದಕ್ಕಿಂತ ಇನ್ನೇನು ಬೇಕು ….ಕನ್ನಡಕ್ಕೂ ಸಂಸ್ಕೃತಕ್ಕೂ ಸಂಬಂಧ ಇಲ್ಲದೆ ಇದ್ದಾರೆ ನೀವು ಬರೆದಿರು ಲೇಖನದಲ್ಲಿ ೭೦-೮೦% ಸಂಸ್ಕೃತ ಹೇಗೆ ಬರತ್ತೆ ಅದು ಹೇಳಿ?
      ->ಕನ್ನಡದ ಶ್ರೇಷ್ಟ ಲೇಖಕರು ಹೇಳಿದ ಮಾತ್ರಕ್ಕೆ ಯಾವ ಭಾಷೆ ಯಾರ ತಾಯಿಯು ಆಗಲ್ಲ. ಅದನ್ನು ವಿವರಿಸಲೆಂದೇ Linguistics ಅನ್ನುವ ವಿಜ್ಞಾನ ಇರುವುದು. ಕನ್ನಡದ ಆಡು ಭಾಷೆಗೂ, ಬರವಣಿಗೆಯ ಕನ್ನಡಕ್ಕೂ ದೊಡ್ಡ ಅಂತರವೇ ಇದೆ. ಕನ್ನಡ ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ಸಂಸ್ಕೃತ ಪದಗಳಿವೆ ಮತ್ತು ಅದಕ್ಕೆ ಐತಿಹಾಸಿಕ ಕಾರಣಗಳು ಇವೆ. ಇದರ ಬಗ್ಗೆ ಭಾಷಾ ವಿಜ್ಞಾನಿ ಡಾ.ಡಿ.ಎನ್.ಶಂಕರ್ ಭಟ್ ಅವರ ಹೊತ್ತಿಗೆಗಳನ್ನು ಓದಿ. ನಿಮ್ಮ ನಿಲುವು ಆಮೇಲೆ ತೆಗೆದುಕೊಳ್ಳಿ.

      >>> ಸಂಸ್ಕೃತ ದಿಂದ ಕನ್ನಡ ಭಾಷೆ ಆಗಿರುವ ಉಪಯೋಗ ಏನು ಅಂತ ತಿಳ್ಕೊಬೇಕು ಅಂದ್ರೆ ಮೇಲೆ ಹೇಳಿದ ಲೇಖಕರ ಪುಸ್ತಕಗಳನ್ನೂ ಓದಿ….ಅಷ್ಟೊಂದು ಉಪಯೋಗ ಆಗಿರುವಾಗ ಕನ್ನಡ ಇಲಾಖೆಯವರು ಅದಕ್ಕೆ ತಮ್ಮ ಪ್ರಯೋಜನ ಮಾದೊದ್ರಲಿ ಏನು ತಪ್ಪು?…
      ->ಸಂಸ್ಕೃತದ ಉಪಯೋಗದ ಬಗ್ಗೆ ಯಾರಿಂದಲೂ ತಿಳಿಯಬೇಕಿಲ್ಲ. ಅದರಲ್ಲಿರುವ ವೇದ, ಉಪನಿಷತ್ತು, ಆಯುರ್ವೇದ, ಮುಂತಾದ ವಿದ್ಯೆಗಳು ಜನಸಾಮಾನ್ಯರನ್ನು ತಲುಪಬೇಕು. ಅವರ ಬದುಕಿಗೆ ಆ ವಿದ್ಯೆಯ ಪ್ರಯೋಜನ ದೊರಕಬೇಕು ಅಂಬುದು ನನ್ನ ನಿಲುವು. ಅಂತಹ ವಿದ್ಯೆಗಳು ಕನ್ನಡಕ್ಕೆ ಅನುವಾದಗೊಂಡು ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರನ್ನು ತಲುಪಿವೆ ಕೂಡ. ಆ ಬಗ್ಗೆ ನನಗೆ ಗೌರವ ಇದೆ. ಆದ್ರೆ ಇವತ್ತು ಗಡಿ ಭಾಗದ ಸಾವಿರಾರು ಕನ್ನಡ ಶಾಲೆಗಳು ಅನುದಾನವಿಲ್ಲದೇ ಮುಚ್ಚುತ್ತಿರುವಾಗ, ಬೆಳಗಾವಿಯ ಕನ್ನಡಿಗರಲ್ಲಿ ಅತ್ಮ ವಿಶ್ವಾಸ ತುಂಬಬೇಕಾದ ವಿಶ್ವ ಸಮ್ಮೇಳನ ಆದ್ಯತೆ ಇಲ್ಲದೇ ಬರೀ ಮುಂದೆ ಹೋಗುತ್ತಿರುವಾಗ, ಸರ್ಕಾರ ಮತ್ತು ಕನ್ನಡ -ಸಂಸ್ಕೃತಿ ಇಲಾಖೆಯ ಗಮನ ಅದರತ್ತ ಮೊದಲು ಹರಿಯಬೇಕೇ ವಿನಹ “ಖಾಸಗಿ” ಸಂಸ್ಥೆಯೊಂದರ ಪುಸ್ತಕ ಮೇಳ ಪ್ರಾಯೋಜಿಸುವುದಕ್ಕಲ್ಲ.

      ಸಂಸ್ಕೃತಕ್ಕೂ ನಮಗೂ ಭಾಷಾ ವಿಜ್ಞಾನದ ನಂಟಿಲ್ಲ ಅಂದ್ರೆ ಅದನ್ನ ವಿರೋಧಿಸಿದಂಗಲ್ಲ. ಸಂಸ್ಕೃತ=ಸಂಸ್ಕೃತಿ ಅನ್ನೋದೂ ಸುಳ್ಳು. ಸಂಸ್ಕೃತದಿಂದ ಕಲೀಬೇಕಾದ್ದನ್ನ ಕಲಿಯೋದು ಬಿಟ್ಟು, ಗೋವಿಂದನ್ನ ಬಿಟ್ಟು ಬರೀ ಡುಕೃಂಕರಣೇಲೇ ಜೀವನ ಕಳೆಯೋದು ಸರಿಯೂ ಅಲ್ಲ.

      ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ |
      ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ ||

      ಬೇರೆ ಭಾಷೆಗಳಲ್ಲಿರೋ ಜ್ಞಾನ ಪಡ್ಕೋಬೇಕು. ಆದ್ರೆ ಅವುಗಳ್ಗೆ ಇಲ್ಲಸಲ್ಲದ ಪಟ್ಟ ಕಟ್ಟೋದು ಬಿಡಬೇಕು ಗುರು!”

      >>> ಅದು ಭಾರತದಲ್ಲಿ ಎಲ್ಲ ನಗರಗನಲ್ಲು ಹೊರೆತು ಪಡಿಸಿ ನಮ್ಮ ಬೆಂಗಳುರುನ್ನು ಆರಿಸಿಕೊಂಡರೆ ಅದು ನಮ್ಮ ಹೆಮ್ಮೆ ಅಲ್ಲವಾ?….ಬರಿ advertisement ನೋಡಿ ಅದರಿಂದ ದೂರ ಉಳದ್ರಿ ಅನ್ಸತ್ತೆ ತಮ್ಮ ಲೇಖನ ನೋಡಿರಿ…..ಅಲ್ಲಿಗೆ ಹೋಗಿ ನೋಡಿದಾಗ ಗೊತ್ತಾಗ್ತಿತ್ತು ಅದರ ಮಹತ್ವ ಏನು ಅಂಡ್ ಕನ್ನಡ & ಸಂಸ್ಕೃತ ಭಾಷೆಗಿರುವ ಸಂಬಂದ ಏನು ಅಂತ….ಕನ್ನಡ ಬಗ್ಗೆ ಸುಮಾರು ಕಾರ್ಯಕ್ರಮಗಳು ಖಾಸಗಿ ಯವರು ಮಾಡ್ತಾರೆ ಅದಕ್ಕೆ ಕನ್ನಡ ಇಲಾಖನು ದುಡ್ಡು ಕೊಡತ್ತೆ..ಹಾಗಾದ್ರೆ ಅದು ತಪ್ಪ? (ಅದು ಕನ್ನಡ ಅದಕ್ಕೆ support ಅಂತ ಹೇಳಕ್ಕೆ ಹೋಗಬೇಡಿ )….
      -> ನನ್ನ ಮೇಲಿನ ಕಮೆಂಟ್ ಇದಕ್ಕೆ ಉತ್ತರ ನೀಡಿದೆ ಅಂದುಕೊಳ್ಳುವೆ.

      >>>…KA.RA.VE ಥರದ ಗುಂಪುಗಳು ಅದೇ ತಾನೆ ಮಾಡ್ತಾ ಇರೋದು……ಕನ್ನಡ ಭಾಷೆ ಅನ್ನೋ ಕಾರ್ಡ್ ಉಪಯೋಗಿಸಿ ದುಡ್ಡು ತಿಂತ ಇಲ್ಲವಾ?… ಚಂಪಾ ಅಂತ ವ್ಯಕ್ತಿಗಳು ಎಷ್ಟು ದುಡ್ಡು ಮಾಡಿದರೆ ಕನ್ನಡ ಇಲಾಖೆಯಿಂದ ಅಂತ ಎಲ್ಲರಿಗು ಗೊತ್ತು..ನಿಮಗೆ ಗೊತ್ತು ಇಲ್ಲದೆ ಇದ್ದಾರೆ ಏನು ಮಾಡಕ್ಕೆ ಆಗಲ್ಲ…
      -> ದೊಡ್ಡ ಸಂಘಟನೆಯೊಂದರ ಮೇಲೆ ಮತ್ತು ವ್ಯಕ್ತಿಯೊಬ್ಬರ ಮೇಲೆ ನೀವು ಆರೋಪ ಮಾಡುತ್ತಿದ್ದಿರಿ. ಈ ಬಗ್ಗೆ ಆಧಾರವಿದ್ದರೆ ಇಲ್ಲಿ ಕೊಡಿ. ಆಧಾರವಿಲ್ಲದೇ ಈ ರೀತಿ ಆರೋಪ ಮಾಡುವುದು ಬಲು ಕೆಟ್ಟದ್ದು ಗೆಳೆಯ. ಈ ರೀತಿ ಸಾಕ್ಷಿ ಇಲ್ಲದೇ ಮಾತಾಡಿ ನಾಳೆ ಸುಖಾಸುಮ್ಮನೆ ಕೋರ್ಟು-ಕಾನೂನು ಅನ್ನುವ ಗೊಂದಲಕ್ಕೆ ಸಿಲುಕದಿರಿ ಎಂದು ಸಲಹೆ ನೀಡುವೆ. ಅಂತರ್ಜಾಲ ಇಂದು ಎಲ್ಲರೂ ಗಮನಿಸುತ್ತಿರುವ ಮಾಧ್ಯಮ ಅನ್ನುವುದು ನಿಮ್ಮ ಗಮನದಲ್ಲಿರಲಿ ಗೆಳೆಯ.

      ….ಕನ್ನಡ ಒಂದೇ ಕನ್ನಡಿಗರ ಬದುಕಿನ ಭಾಷೆ ಅಂತ ಯಾರು ಹೇಳಿದ್ದು ನಿಮಗೆ…..ಹಾಗಿದ್ರೆ ನೀವು ಕನ್ನಡ ಬಿಟ್ಟು ಬೇರೆ ಭಾಷೆ ಉಸೇ ಮಾಡಬಾರದು…..ಅದು ನಿಮ್ಮಿಂದ ಸಧ್ಯ ಇಲ್ಲ ಬಿಡಿ !!! …. ತೆರಿಗೆದಾರನ ಹಣ ಭಾರತದಲ್ಲಿ ಬೇಕಾದಷ್ಟು political movements ಉಪಯಿಗಿದಾರೆ & ತಮ್ಮು ಜೇಬು ಬರ್ತಿ ಮಾಡ್ಕೊಂಡಿದಾರೆ….ಅದೆಲ್ಲ ತಪ್ಪು ಕಾನೊದಿಲ್ಲವಾ ನಿಮಗೆ?….. ಇಲ್ಲಿ ಯಾರು ದುಡ್ಡು ಮಾಡ್ಕೊಂಡಿದಾರೆ ಹೇಳಿ?
      -> ಇಡೀ ಕರ್ನಾಟಕದ ಕನ್ನಡಿಗರೆಲ್ಲರೂ ನನ್ನವರು ಅನ್ನುವ ಭಾವ ನಿಮ್ಮಲ್ಲಿದ್ದಲ್ಲಿ ನಿಮಗೆ ಕನ್ನಡ ಕನ್ನಡಿಗರ ಬದುಕಿನ ಭಾಷೆ ಅನ್ನುವುದು ಅರ್ಥವಾಗುತ್ತಿತ್ತು. ಕರ್ನಾಟಕದ 83% ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಅವರಿಗೆ ಹೊಟ್ಟೆಗೆ ಹಿಟ್ಟು ಕೊಡುವ ಸಾಮರ್ಥ್ಯ ಕನ್ನಡಕ್ಕೆ ಬರಬೇಕಿದೆ. ಅದು ಪೂರ್ತಿಯಾಗಿ ಬದುಕಿನ ಭಾಷೆಯಾಗಬೇಕಿದೆ. ಅದರತ್ತ ಗಮನವಿದ್ದಾಗ ತಾನೇ ಅದಾಗುವುದು. ಬಿಡಿ, ಯಾವುದೊ ಸಾಫ್ಟ್ ವೇರ‍್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿರುವವರಿಗೆ ಹಳ್ಳಿಗಾಡಿನ ಕನ್ನಡಿಗರ ಸಂಕಟ ಅರ್ಥ ಆಗುವುದು ಕಷ್ಟ.

      ….ತಮಗೆ ಟೈಮ್ ಇದ್ರೆ personal ಆಗಿ ಚಿದಾನಂದ ಮೂರ್ತಿ ಅವರನ್ನೋ or S L ಭೈರಪ್ಪ or ಶತಾವಧಾನಿ ಗಣೇಶ್ ಅವರ ಮನೆಗೆ ಹೋಗಿ ಭೇಟಿ ಆಗಿ ಆಗ ನಿಮ್ಮಲ್ಲಿರುವ ಎಲ್ಲ ಸಮಸ್ಯೆಗಳನ್ನ ಪರಿಹರಿಸ್ತಾರೆ….
      –> ನೀವು ಹೇಳಿರುವ ಎಲ್ಲರನ್ನೂ ನಾನು ಓದಿಕೊಂಡಿದ್ದೇನೆ. ಯಾವುದನ್ನು ಒಪ್ಪಬೇಕೋ ಒಪ್ಪಿದ್ದೇನೆ. ಯಾವುದನ್ನು ಒಪ್ಪಲಾಗದೋ ಒಪ್ಪಿಲ್ಲ. ಸರಿ ತಪ್ಪುಗಳ ನಿರ್ಧಾರ ನಾವು ಸ್ವಂತವಾಗಿ ಮಾಡಬೇಕೇ ವಿನಹ ಯಾರೋ ಹೇಳಿದರು ಎಂದಲ್ಲ.

      ಉತ್ತರ
      • Kumara S's avatar
        Kumara S
        ಜನ 16 2011

        (ಸೂಚನೆ : ನಿಮ್ಮ ಪ್ರತಿಕ್ರಿಯೆಯಲ್ಲಿ ತಾವು ಗೆಳೆಯ ಅಂತ ಸಂಭೋದಿಸಿದ್ದು ನಾನು ಗೌರವಿಸುವೆ…ಹಾಗೆ ನಮ್ಮಿಬ್ಬರ ಚರ್ಚೆಯಲ್ಲಿ ನಡುವೆ ಇರುವುದು ಸೈದ್ಧಾಂತಿಕ ನಿಲುವಿನಲ್ಲಿ ಇರುವ ವ್ಯತ್ಯಾಸಗಳು ಹೊರತು ಪರಸ್ಪರ ದ್ವೇಷ ಇಲ್ಲ :)…ಸೊ ಹಾಗಾಗಿ ತಾವು ಕೋರ್ಟ್-ಕಚೇರಿ ಅಂತಹ ಮಾತುಗಳಿಗೆ ಆಸ್ಪದ ಕೊಡಿದಿಲ್ಲ ಅಂತ ಅನ್ಕೊಂಡಿದೀನಿ…)

        ವಸಂತ್,

        …ಸಂಸ್ಕೃತ ಭಾರತ ಎಲ್ಲಭಾಷೆಗಳಿಗು ತಾಯಿ ಅಲ್ಲ ಅನ್ನೋದಕ್ಕೆ ತಾವು ಕೂಡ ಆಧಾರ ಕೊಡಿ….

        …ಕನ್ನಡಕ್ಕೂ ಸಂಸ್ಕೃತಕ್ಕೂ ಭಾಷಾ ವಿಜ್ಞಾನದ ಸಂಭಂದ ಇಲ್ಲ ಅಂತ ಹೇಗೆ ಹೇಳ್ತಿರಿ ಸರ್….ಕನ್ನಡ ಮತ್ತು ಸಂಸ್ಕೃತ ಎರಡು ಒಂದೇ ಭಾಷೆ ಅಂತ ಹೇಳಿಲ್ಲ ….ನಾನು ಹೇಳಿದ್ದು ಕನ್ನಡ ಮೂಲ ಸಂಸ್ಕೃತ ಎಂದು…ಭಾಷೆಗಳು ಬೆಳೆಯುತ್ತ ತಮ್ಮದ ಆದೆ ಮಾರ್ಪಾಟು ಕೂಡ ಮಾಡಿಕೊಳ್ಳುತ್ತವೆ…ಕನ್ನಡ ಭಾಷೆನ ೧೦೦ ವರ್ಷದ ಹಿಂದೆ ಹೇಗಿತ್ತು ಅಂತ ನೋಡಿದ್ರೆ ಅದನ್ನು ಈಗ ಓದೋದಕ್ಕು ಆಗೋಲ್ಲ ನಮಗೆ !!

        …ಭೈರಪ್ಪ,ಗಣೇಶ್ & ಚಿದಾನಂದ ಮೂರ್ತಿ ಗಳು ಬರಿ ಲೇಖಕರಲ್ಲಿ ಅವ್ರು ದೊಡ್ಡ ಸಂಶೋದನೆ ವಿದ್ವಾಂಸರು ಕೂಡ… ಕನ್ನಡಕ್ಕೆ ಸಂಸ್ಕೃತದಿಂದ ಆಷ್ಟಾಗಿ ಉಪಯೋಗ ಇಲ್ಲ ಅಂತ ಹೇಳಿದ್ರೆ ಭೈರಪ್ಪ ನವರು ವಿಜಯ ಕರ್ನಾಟಕದಲ್ಲಿ “ಸಂಸ್ಕೃತ” ಲೇಖನಗಳ ಬಗ್ಗೆ ಒಂದು ತಿಂಗಳು ತನಕ ಚರ್ಚೆ ಆಗತಾನೆ ಇರಲಿಲ್ಲ…..ಭೈರಪ್ಪನವರು ಯಾವ್ದು ಒಂದು ವಿಷಯವನ್ನ ಸಂಶೋದನೆ ಮಾಡದೆ ಒಪ್ಪಿಕೊಲ್ಲೋವ್ರಲ್ಲ ಅಂತ ಕನ್ನಡ ಸಾಹಿತ್ಯ ಲೋಕದಲ್ಲಿ ಗೊತ್ತಿರುವ ಸತ್ಯ!…

        ….ಒಹ್….ತಾವು ಶನಕರ ಭಟ್ಟರ ಪುಸಕ್ತ ದಿಂದ ಹೇಳ್ತ ಇದಿರಿ ಅಂತ ಗೊತ್ತಿರಲಿಲ್ಲ…ನಾನು ಅವರ ಪುಸಕ್ತ ನೋಡಿಯೇ ನಿಮಗೆ ಹೇಳೋದು ಅಂದ್ರೆ ತಾವು “ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? “ ಅನ್ನೋ ಪುಸ್ತಕ ಓದಬೇಕು ಅನ್ನೋದು….ಅಜಕ್ಕಳ ಗಿರೀಶ್ ಭಟ್ಟ ಶಂಕರ ಭಟ್ಟರ ವಾದ ಯಾವ ತಪ್ಪಿಂದ ಕೂಡಿದೆ ಅನ್ನೋದು ನಿಮಗೆ ಗೊತ್ತಾಗತ್ತೆ…. ಹಾಗೇನೆ “ದೇಶಕಾಲ-೧೪ ರ ಸಂಚಿಕೆಯಲ್ಲಿ ಶತಾವಧಾನಿ ಗಣೇಶ್ & ತಿರುಮಲೇಶ್ ಬರಿದಿರುವ ಪ್ರತಿಕ್ರಿಯೆಯನ್ನು ನೋಡಿ…. ಶತಾವಧಾನಿ ಗಣೇಶ್ ಕೇಳಿದ ಯಾವ ಪ್ರಶ್ನೆಗಳಿಗೂ ಇಲ್ಲಿ ತನಕ ಅವರಿಂದ ಯಾವ ಉತ್ತರ ಬಂದಿಲ್ಲ & ಹಾಗು ಚರ್ಚೆಗೆ ಬನ್ನಿ ಅಂತ ಬೇಕಾದಷ್ಟು ಕಾರ್ಯಕ್ರಮಗಳಲ್ಲಿ ಗಣೇಶ್ ಹೇಳಿದಕ್ಕು ಇನ್ನು ಕೂಡ ಅವ್ರು ಬಂದಿಲ್ಲ…ಸೊ ವಿಷಯ ಹಾಗಿರುವಾಗ ಶಂಕರ ಭಟ್ಟರ ಪುಸ್ತಕದ ಬಗ್ಗೆ ಹೆಚ್ಚಿಗೆ ಸಮಯ ವ್ಯರ್ಥ ಮಾಡಲು ನಾನು ತಯಾರಿ ಇಲ್ಲ !

        …ವೇದ,ಉಪನಿಷತ್,ಆಯುರ್ವೇದ ಗಳ ಬಗ್ಗೆ ಸಂಸ್ಕೃತ – ಕನ್ನಡ ಭಾಷಾಂತರ ಪುಸ್ತಕಗಳು ಇವೆ…ಯಾಕೆ ಆಗಿಲ್ಲ ಕೆಲಸ…ಬರಿ ಕನ್ನಡ ಭಾಶೇನೆ ಓದಿ ಜೀವನ ನಡೆಸಿ ಅಂತ ಹೇಳಿದ್ರೆ ಯಾರು ಬರ್ತಾರೆ ಮುಂದೆ…..ಯಾರು ಬರಲ್ಲ…..ನೀವು ಬರಲ್ಲ….ಸಂಸ್ಕ್ರತ ಭಾಷೆಗೆ ಆ horizon ಇದೆ ಅದಕ್ಕೆ ಆ ಪ್ರಾಮುಖ್ಯತೆ… ಮಾವಿನ ಹಣ್ಣು ಬೇಕು ಆದ್ರೆ ಮಾವಿನ ಮರ ಬೇಡ ಅನ್ನೋ ಥರ ಇದೆ ನಿಮ್ಮ ವಾದ!…

        …ದೊಡ್ಡ ಸಂಘಟನೆ ಅಂತಿರಿ (ಒಂದೆರಡು ಘಟನೆನಲ್ಲಿ ಚೂರು ನಾನು ಒಪ್ಪಬಹುದು)… ಆದ್ರೆ ಭಾಷೆಗೆ ಬೇಕಾಗಿರೋದು ಸಾಹಿತ್ಯದಲ್ಲಿ ಆಗುವ ಕೃಷಿ ಹೊರತು ಕಲ್ಲು ಹೊಡಿಯೋದು,ಬೇರೆಯವರಿಗೆ ಕಪ್ಪು ಬಣ್ಣ ಹಚ್ಚೋದು ಅಲ್ಲ…ಹಾಗಿದ್ರೆ ನಮ್ಮ ಕುವೆಂಪು,ಬೇಂದ್ರೆ,ಭೈರಪ್ಪನವರು ಬರಿ ರಸ್ತೆಗಿಳುದು ಹೋರಾಟನೆ ಮಾಡಿರೋವ್ರು ಗುರು!…ತಾವು ಹೋದ ವರ್ಷ ವಿಜಯ ಕರ್ನಾಟಕ ಪತ್ರಿಕೆ ನೆ ಓದಿದರು ಅಲ್ಲಿ ಚಿದನಂದಮುರ್ತಿ-ಚಂಪಾ ನಡುವೆ ನಡೆದ debate ನಲ್ಲಿ ಸುಮಾರು ಜನ ಪ್ರೂಫ್ ಸಮೇತ ಹೇಳಿದ್ರು ಏನೇನು ಆಗಿದೆ ಅಂತ…ಅದನ್ನೇ ನಾನು ಇಲ್ಲಿ ಪ್ರಶ್ನಿಸಿದ್ದು ಅಷ್ಟೇ… ಅದನ್ನ ತಾವು ಕೋರ್ಟ್-ಕಾನುದು ಅಂದ್ರೆ ಏನ್ ಹೇಳೋದು ಸ್ವಾಮಿ…ನೀವು ಆ ಸಂಘಟನೆಯ spokesperson ಥರ ಮಾತಾಡ್ತಾ ಇದಿರಿ ಸರ್! …. (ಇಲ್ಲಿ ತಾವು ನನಗೆ ಗೆಳೆಯ ಅಂತ ಗೌರವದಿಂದ ಕಂಡಿದಕ್ಕೆ ನಾನು ನಿಮ್ಮಲ್ಲಿ ಅದೇ ಗೌರವದಿಂದ ಕೇಳ್ತಾ ಇರೋದು 🙂 )

        …ನಾನು ಈ ದೇಶಾನೆ ನಂದು ಅಂತ ಹೇಳೋ ವ್ಯಕ್ತಿ ಸರ್….ಅದರಲ್ಲಿ ಕರ್ನಾಟಕ ಇರೋದು …ಸೊ ಹಾಗಾಗಿ ಪ್ರತ್ಯೇಕವಾಗಿ ಹೇಳೋ ಅಗತ್ಯ ಇಲ್ಲ…ಸರಿ ಸ್ವಾಮಿ ನನ್ನ ಪಕ್ಕಾದ ಮನೆ ಇರೋವ್ನು ಕನ್ನಡಿಗನೇ….ಸೊ ಅವ್ನು ನನ್ನ ಆಸತಿ ಕೇಳ್ತಾನೆ ಅಂತ ಬರೆದು ಕೊಡಕ್ಕೆ ಆಗತ್ತ… ಜೀವನ ನಡೆಸಲು ಬೇಕಾಗಿರೋದು ಕೆಲಸದ ಮನೋಭಾವವೇ ಹೊರತು ಭಾಷೆ ಒಂದೇ ಅಲ್ಲ… ಒಬ್ಬ ಬಡವನಿಗೆ ಹೋಗಿ ಭಾಷೆ ಮುಕ್ಯನೋ ಹಣ ಮುಖ್ಯನೆ ಅಂತ ಕೇಳಿದ್ರೆ ಅವನು choose ಮಾಡೋದು ಯಾವ್ದು ಅನ್ನೋದು ನಿಮಗೂ ಗೊತ್ತು… ೮೩% ಮಕ್ಕಳು ಬರಿ ಕನ್ನಡ ಒಡತ ಇಲ್ಲ ಸರ್…ಅವ್ರು ಕನ್ನಡ ಭಾಷೆ ಮುಖಾಂತರ ವಿಜ್ಞಾನ,ಸಮಾಜ,ಭೂಗೋಳ,ಗಣಿತ ಎಲ್ಲಾನು ಒಡತ ಇದಾರೆ….. ಅದು ಎಲ್ಲಿ ತನಕ ಬರಿ ೧೦ನೆ ತರಗತಿ ತನಕ..ಆಮೇಲೆ ಓದೋದು ಎಲ್ಲ ಇಂಗ್ಲಿಷ್ ಭಾಶೆಯಲ್ಲೇ…ಯಾಕೆ ಅಂದ್ರೆ ಆಗ ಬೇಕಾಗೋದು ಜೀವನದ ಪ್ರಮುಖ್ಯತೇನೆ ಹೊರತು ಭಾಷೆ ಅಲ್ಲ!… ಜೀವನ ಪದ್ಧತಿ ಅರ್ತ ಆಗಬೇಕು ಅಂದ್ರೆ ಜೀವನ ನಡೆಸುವ ಆದ್ಯತೆ ಬೇಕೇ ಹೊರತು ಯಾವದೋ ಸಾಫ್ಟ್ವೇರ್ ಕಂಪನಿ ಯ cubicle ನಲ್ಲಿ ಕೂತು ಅಲ್ಲ ಅನೋ ಸತ್ಯ ನಮಗೂ ಗೊತ್ತು ಸ್ವಾಮಿ!…

        …ಸರಿ ನಿಮ್ಮ ಮಾತು ಒಪ್ಪೋಣ..ತಾವು ಎಲ್ಲರನ್ನು ಓದಿಕೊಂದಿದ್ರಿ ಅನ್ನೋದು….ತಾವು ಓದಿ ಕೊಂಡಿದ್ರೆ ಶಂಕರ ಭಟ್ಟರ ಪುಸ್ತಕ ಪ್ರಸ್ತಾಪ ಮಾಡ್ತಾ ಇರಲಿಲ್ಲ ಅನ್ಕೊತಿನಿ !!!… ಪ್ರಪಂಚದಲ್ಲಿ ಎಲ್ಲಾನು ನಾನೇ ಕಂಡು ಹೀಡಿತಿನಿ ಅಂತ ಹೋಗಕ್ಕೆ ಆಗೋಲ್ಲ…ಹಾಗೇನು ಎಲ್ಲಾನು ನಾನೇ ಓದ್ತೀನಿ ಅಂತ ಹೇಳೋಕ್ಕೆ ಆಗಲ್ಲ…ಕೆಲವೊಂದು ಸಲ ಬೇರೆಯವರ ನಿರ್ಧರಗಳನ್ನು ನಾವು ಒಪ್ಪಬೇಕಗತ್ತೆ…

        ಉತ್ತರ
    • Priyank's avatar
      Priyank
      ಜನ 13 2011

      ಕುಮಾರ ಅವರೇ,

      ಸಂಸ್ಕೃತವು “ಪ್ರೋಟೋ ಆರ್ಯನ್” ಭಾಷಾ ಕುಟುಂಬಕ್ಕೆ ಸೇರುತ್ತದೆ.
      ಕನ್ನಡವೂ “ಪ್ರೋಟೋ ದ್ರವೀಡಿಯನ್” ಭಾಷಾ ಕುಟುಂಬಕ್ಕೆ ಸೇರುತ್ತದೆ. ಇದನ್ನು, ಭಾಷಾ ವಿಜ್ನ್ಯಾನಿಗಳೆಲ್ಲರೂ ಒಪ್ಪುತ್ತಾರೆ.

      ಹಾಗೆಂದ ಮಾತ್ರಕ್ಕೆ, ಸಂಸ್ಕೃತದಿಂದ ಕನ್ನಡಕ್ಕೆ ಪದಗಳು ಬಂದಿಲ್ಲವೆಂದಲ್ಲ.
      ಸಂಸ್ಕೃತ, ತಮಿಳು, ಪರ್ಷಿಯನ್, ಇಂಗ್ಲೀಷು ಈ ಎಲ್ಲಾ ಭಾಷೆಗಳಿಂದ ಕನ್ನಡಕ್ಕೆ ಪದಗಳು ಬಂದಿವೆ.

      ವಸಂತ್ ಅವರ ಬರಹದಲ್ಲಿ ಹೇಳಿರುವಂತೆ, ಇಲ್ಲಿ ಸಂಸ್ಕೃತದ ಬಗ್ಗೆ ವಿರೋಧವಿಲ್ಲ.
      “ಕನ್ನಡ ಮತ್ತು ಸಂಸ್ಕೃತಿ” ಇಲಾಖೆಯ ಹಣ ಬಳಸಿ “ಸಂಸ್ಕೃತ ಪುಸ್ತಕ ಪ್ರದರ್ಶನ” ಏರ್ಪಡಿಸಿದರೆ, ಕನ್ನಡಕ್ಕೆ ಏನು ಉಪಯೋಗ ಆದಂತಾಯ್ತು?
      ಸಂಸ್ಕೃತದಲ್ಲಿರುವ ಜ್ನ್ಯಾನ ಕನ್ನಡಿಗರಿಗೆ ಸಿಗಬೇಕು, ಕನ್ನಡಕ್ಕೆ ಬರಬೇಕು ಎಂದಾದರೆ, ಅದಕ್ಕೆ ಬೇರೆ ರೀತಿಯ ಕೆಲಸಗಳು ನಡೆಯಬೇಕು.
      ಪುಸ್ತಕ ಪ್ರದರ್ಶನ ಏನೂ ಸಾಧಿಸುವುದಿಲ್ಲ. ಸಂಸ್ಕೃತ ಬಲ್ಲ ಕೆಲ ಕನ್ನಡಿಗರಿಗೆ ಓದಲು ಕೆಲವು ಸಂಸ್ಕೃತ ಪುಸ್ತಕಗಳು ದೊರೆಯುತ್ತವೆ, ಅಷ್ಟೇ. ಸಂಸ್ಕೃತ ಬಾರದ ಕನ್ನಡಿಗರಿಗೆ ಏನು ಸಿಕ್ಕಿದಂತಾಯ್ತು ಅಲ್ವಾ?

      “ಬೇರೆ ರೀತಿಯ ಕೆಲಸಗಳು ಏನು?” ಎಂದು ನೀವು ಕೇಳಬಹುದು.
      ಸಂಸ್ಕ್ರುತದಲ್ಲಿರೋ ಜ್ನ್ಯಾನದ ಬಗ್ಗೆ ಆಳವಾದ ಅಧ್ಯಯನ ನಡೆಯಬೇಕು. ಅದರಲ್ಲಿ ಕನ್ನಡಿಗರಿಗೆ ಉಪಯೋಗ ಆಗುವಂತದ್ದು ಏನಿದೆ, ಅವುಗಳನ್ನು ಕನ್ನಡಕ್ಕೆ ಅನುವಾದಿಸಬೇಕು.
      ಆ ಮೂಲಕ ಜ್ನ್ಯಾನವು ಎಲ್ಲಾ ಕನ್ನಡಿಗರಿಗೂ ಸಿಗುವಂತಾಗಬೇಕು. ಆಗ, ನಮ್ಮ ಎಳ್ಗೆಗೆ ಸಹಾಯವಾದಂತೆ.
      ಇದೇ ಉದ್ದೇಶದಿಂದ, ಗ್ರೀಸ್, ಅಮೇರಿಕಾ, ಇಟಲಿ ದೇಶಗಳಲ್ಲಿ ಸಂಸ್ಕೃತ ಅಧ್ಯಯನ ನಡೆಯುತ್ತಿರುವುದನ್ನು ನೀವು ನೋಡಬಹುದು.

      ಉತ್ತರ
      • Kumara S's avatar
        Kumara S
        ಜನ 16 2011

        Priyank,

        Thavu “Bharathiya Samskruti” by Shrikanta Shastri galu avara pustaka na odi…Aago thamge ee aryan-dravidian….Aryan Invasion theory anno goddu samshodane (so-called) bagge gottagatte…

        ..Thavu Sanskruta pustaka pradarshanakke bandidre thavu adarinda kannadakkenu upayoga aagide anno prashnene kelta iralilla…..yaake alli idda pustaka meladalli hechige pustakagalu iddiddu kannadalle….yaako thavu SAMSKRUTA anno pustaka mela anta hesru keline aa kade thale haakilla ansatte 🙂

        …Kannada naadinalli iddu kannada bareyalu odalu barde iruva eshtu jana iddare anno maahiti nimge gottillla… so aaga kannada pustaka pradarshana maadidre kannadakke enu upayoga anta naanu kelabahudalla… Pustaka pradarshanakke thavu bandidre alli KELA kannadigaru idaara athava BAHALA kannadigaru idaara anno proof gottagirodu !

        ಉತ್ತರ
  8. Ravi's avatar
    Ravi
    ಜನ 12 2011

    ವಸಂತ್ ರವರೆ , ನಿಮ್ಮಂತೆಯೇ ಎಲ್ಲರೂ ಯೋಚಿಸುವುದರಿಂದಲೇ ಈ ದೇಶ ಹಾಳಾಗಿರೊದು. ಉರ್ದು ಸಾಹಿತ್ಯಕ್ಕೆ ಪ್ರಾಯೋಜಕರಾದರೆ ನಿಮಗೆ ಕಾಣಿಸೋದಿಲ್ಲ ,ಆದರೆ ಸಂಸ್ಕೃತ (ಹೆಚ್ಚಿನ ಭಾಷೆಗಳ ತಾಯಿ, ಭಾರತದ ಅಂತರಾತ್ಮ) ದ ಬಗ್ಗೆ ಸ್ವಲ್ಪ ಹೋದ್ರೂ ನಿಮ್ಮಂಥವರಿಗೆ ಏನೋ ಒಂದು ಥರ ಅನಿಸತ್ತೆ ….ಭಾಷಾಭಿಮಾನ ವಿರಬೇಕು ದುರಭಿಮಾನ ಸಲ್ಲದು ……ಇದು ಹೇಗಾಯ್ತೆಂದರೆ ರಾಜಕಾರಣಿಗಳು ಜಾತ್ಯಾತೀತ ಅಂತ ಹೇಳಿ ಕೊಂಡು, ಬೇರೆ ಬೇರೆ ಜಾತಿಯವರನ್ನ ಒಲೈಸಕ್ಕೆ ಹೊರಡುತ್ತಾರಲ್ಲ ಓಟಿಗಾಗಿ ಹಾಗಾಯ್ತು ನಿಮ್ಮ ಕಥೆ !!!!!!!

    ಉತ್ತರ
    • ರವಿಯವರೆ,

      ವಸಂತರ ಲೇಖನದ ಧ್ವನಿ ’ಕನ್ನಡ ಮತ್ತು ಸಂಸ್ಕೃತಿ’ ಇಲಾಖೆಯ misplaced priority ಬಗ್ಗೆ. ಒಂದೆಡೆ ಗಡಿ ಪ್ರದೇಶದ ಕನ್ನಡ ಶಾಲೆಗಳು ಮುಚ್ಚುತ್ತಲಿವೆ,ಇನ್ನೊಂದೆಡೆ ವಿಶ್ವ ಕನ್ನಡ ಸಮ್ಮೇಳನದಂತ ಕಾರ್ಯಕ್ರಮಗಳ ಆಯೋಜನೆಗೆ ಮೀನಾ-ಮೇಷ ಎಣಿಸುತಿದ್ದಾರೆ.ಮಾಡಬೇಕಾದ ’ಸಂಸ್ಕೃತಿ’ಯ ಕೆಲಸ ಬಿಟ್ಟು ’ಸಂಸ್ಕೃತ’ದ ಹಿಂದೆ ಹೋಗಿದ್ಯಾಕೆ ಅನ್ನೋದಷ್ಟೆ ಹೊರತು ಸಂಸ್ಕೃತ ಭಾಷೆಯ ವಿರೋಧಿಸುವುದಲ್ಲ.

      ಇನ್ನ ಉರ್ದು ಕೊಟ್ರೆ ಸುಮ್ಮನಿರ್ತಿರಾ ಅನ್ನೋದೆಲ್ಲ ಬಲ-ಎಡ ಪಂಥದವರ ಮಾತಿಗೆ ಸರಿ.ಇಲ್ಲಿ ನಡೆಯುತ್ತಿರುವುದು ಪುಡಿ ವೋಟಿನ ಚರ್ಚೆಯಲ್ಲ ಸರ್ಕಾರದ ಸಂಸ್ಥೆಯೊಂದರ ಕಾರ್ಯ ವೈಖರಿಯ ಬಗೆಗಿನದು.

      ಸಂಸ್ಕೃತ ನಮ್ಮ ದೇಶದ್ದೆ ಒಂದು ಭಾಷೆ,ಅದಕ್ಕೆ ಸಹಾಯ ಮಾಡೋದು ತಪ್ಪಲ್ಲ,ಆದ್ರೆ ಯಾರು ಮತ್ತೆ ಯಾವಗ ಮಾಡ್ಬೇಕು ಅನ್ನೋದು ಪ್ರಶ್ನೆ

      ರಾಕೇಶ್ ಶೆಟ್ಟಿ

      ಉತ್ತರ
    • Vasant's avatar
      ಜನ 12 2011

      ರವಿ,

      ಕನ್ನಡಕ್ಕೆ ಮೀಸಲಾದ ಹಣ ಉರ್ದುಗೆ ಕೊಟ್ಟರೂ ತಪ್ಪೇ.

      ಸಾರಿಗೆ ಇಲಾಖೆಯ ಕೆಲಸ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು. ಅದನ್ನು ಬಿಟ್ಟು ಅವರು ಖಾಸಗಿ ಬಸ್ ಗಳ ಉದ್ಧಾರಕ್ಕೆ ತೆರಿಗೆ ಹಣ ಹಾಕಿದರೆ ಹೇಗೆ ಅದು misplaced priority ಆಗುವುದೋ ಇದು ಕೂಡ ಹಾಗೆಯೇ.
      ಒಮ್ಮೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ charter ಏನೆಂದು ಅರಿಯಿರಿ. ಅಷ್ಟಕ್ಕೂ ಖಾಸಗಿಯಾಗಿ ಯಾರೇ ಪುಸ್ತಕ ಮೇಳ ಮಾಡಲಿ, ಮೆರವಣಿಗೆ ಮಾಡಲಿ, ಸಭೆ ಮಾಡಲಿ ಯಾರ ವಿರೋಧವೂ ಇಲ್ಲ. ಕನ್ನಡವೂ ಅತ್ಯಂತ ತುರ್ತಾಗಿ ಗಮನ ಬೇಡುತ್ತಿರುವ ಹೊತ್ತಿನಲ್ಲಿ ಅದಕ್ಕೆ ಮೀಸಲಿಟ್ಟ ಹಣವನ್ನು ಖಾಸಗಿ ಸಂಸ್ಥೆಯೊಂದರ ಪುಸ್ತಕ ಮೇಳಕ್ಕೆ ಕೊಟ್ಟಿರುವುದನ್ನಷ್ಟೇ ನಾನು ಪ್ರಶ್ನಿಸಿರುವುದು. ವ್ಯತ್ಯಾಸವನ್ನು ಗಮನಿಸಿ ಎಂದು ಕೇಳಿಕೊಳ್ಳುವೆ

      ಉತ್ತರ
  9. Narendra's avatar
    Narendra
    ಜನ 13 2011

    >> ಭಾರತದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ ಇದ್ದಂತೆ…..ಅಷ್ಟು ಜ್ಞಾನ ನಿಮಗೆ ಇಲ್ಲೇ ಅಂದ್ರೆ ಅದು ನಿಮ್ಮ ತಪ್ಪು….
    >ದಯವಿಟ್ಟು ಭಾರತದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ ಅನ್ನುವುದಕ್ಕೆ ಆಧಾರ ಕೊಡಿ.
    ಕನ್ನಡದ ಅಕ್ಷರ ಮಾಲೆಯನ್ನೇ ನೋಡಿ. ಅದರಲ್ಲಿರುವ ಪ್ರತಿಯೊಂದು ಅಕ್ಷರವೂ ಸಂಸ್ಕೃತದ ಅಕ್ಷರವೇ ಅಲ್ಲವೇ?
    ನಾನಿಲ್ಲಿ ಅಕ್ಷರದ ಆಕಾರವನ್ನು ಚರ್ಚಿಸುತ್ತಿಲ್ಲ ಎನ್ನುವುದನ್ನು ನೆನಪಿಡಿ. ಅಕ್ಷರಮಾಲೆಯ ಸ್ವರೂಪವನ್ನು ಗಮನಿಸಿ.
    ಎರಡು ಅಕ್ಷರ ಮಾಲೆಗಳಲ್ಲಿ ಇಷ್ಟೊಂದು ಸಾಮ್ಯವಿದ್ದರೆ, ಅದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ – ಇದನ್ನೇ ತಾಯಿಯಂತೆ ಮಗಳು ಎನ್ನುವುದು.

    > ಕನ್ನಡಕ್ಕೆ ಇಂಗ್ಲಿಷ್ ಭಾಷೆಯಿಂದ ಯಾವ ರೀತಿಯ ಅಪಚಾರವಾಗಿದೆ ಅನ್ನುವುದನ್ನು ತಿಳಿಸಿ ಎಂದು ಕೇಳಿಕೊಳ್ಳುವೆ
    ಇಂದಿನ ಹೆಚ್ಚಿನ ಎಲ್ಲಾ ಮಕ್ಕಳು ಇಂಗ್ಲಿಷ್ ಶಾಲೆಗಳಿಗೆ ಹೋಗುತ್ತಾರೆ.
    ಇಂಗ್ಲಿಷ್‍ ಇಲ್ಲದಿದ್ದರೆ ಕೆಲಸ ಸಿಗುವುದಿಲ್ಲ, ಅದು ಅನ್ನವಿತ್ತಿದೆ, ಇತ್ಯಾದಿಗಳನ್ನೇ ಸಧ್ಯಕ್ಕೆ ಒಪ್ಪೋಣ.
    ಇಂಗ್ಲಿಷ್ ಭಾಷೆ ಶಾಲೆಗೇ ಸೀಮಿತವಾಗಿದ್ದರೆ ತೊಂದರೆ ಇರಲಿಲ್ಲ.
    ಆ ಮಕ್ಕಳು ಮನೆಗೆ ಬಂದ ನಂತರ ಪಕ್ಕದ ಮನೆಯ ಮಕ್ಕಳೊಡನೆ ಆಟವಾಡುವಾಗ ಉಪಯೋಗಿಸುವ ಭಾಷೆ ನೋಡಿ – ಅಲ್ಲೂ ಇಂಗ್ಲಿಷೇ!
    ಆ ಸಮಯದಲ್ಲಿ ನೀವೇನಾದರೂ ಹೋಗಿ ಅವರೊಡನೆ ಕನ್ನಡದಲ್ಲಿ ಮಾತನಾಡಿದರೆ ಅವರು ಅಪಮಾನಿತರಾದಂತೆ ವರ್ತಿಸುತ್ತಾರೆ.
    ಇದು ಹೀಗೇ ಮುಂದುವರೆದರೆ, ಇನ್ನು ೨೫ ವರ್ಷದಲ್ಲಿ ಬೆಂಗಳೂರಿನಂತಹ ಊರಿನಲ್ಲಿ ಕನ್ನಡವೂ “ಸತ್ತ ಭಾಷೆ”ಯೇ ಆದೀತು.
    ಕನ್ನಡದ ಈ ಸ್ಥಿತಿಗೆ ಇಂಗ್ಲಿಷ್ ಅಲ್ಲವೇ ಕಾರಣ?

    > ಅದು ಅನ್ನ ಕೊಡ್ತಿದೆ, ಒಳ್ಳೆ ಬದುಕು ಕೊಡ್ತಿದೆ ಅನ್ನೋ ಕಾರಣಕ್ಕೆ ಅದಕ್ಕೆ ಅಷ್ಟು ಜನಮನ್ನಣೆ ಸಿಗ್ತಿರೋದು.
    ಇದು ನಮ್ಮ ಭಾಷೆಯ ಕುರಿತಾದ ನಮ್ಮ ನಿರಭಿಮಾನದಿಂದಲೇ ಆಗಿರುವುದು.
    ಇಂಗ್ಲಿಷಿನಿಂದಲೇ ಉದ್ದಾರ, ಅದಿಲ್ಲದೆ ಬದುಕೇ ಸಾಧ್ಯವಿಲ್ಲ; ಇತ್ಯಾದಿ ಮೂಢನಂಬಿಕೆಗಳಿಂದಲೇ ಹೀಗಾಗಿರುವುದು.
    ಯೂರೋಪಿನಲ್ಲಿ ಇಂಗ್ಲೆಂಡ್ ಬಿಟ್ಟು ಉಳಿದ ಯಾವ ದೇಶಗಳೂ ಇಂಗ್ಲಿಷ್ ಉಪಯೋಗಿಸುವುದಿಲ್ಲ.
    ಅವರಿಗೆ ಅನ್ನ ಕೊಡುತ್ತಿರುವ ಭಾಷೆ ಯಾವುದು?
    ಫ಼್ರಾನ್ಸ್ ದೇಶಕ್ಕೆ ಫ಼್ರೆಂಚ್‍ನಿಂದ ಅನ್ನ ಸಿಗಬಹುದಾದರೆ, ಕರ್ನಾಟಕಕ್ಕೆ ಕನ್ನಡದಿಂದ ಅನ್ನ ಸಿಗಬಾರದೇಕೆ?
    ಇಂಗ್ಲಿಷನ್ನು ತಲೆಯ ಮೇಲೆ ಹೊತ್ತುಕೊಂಡಷ್ಟು ಸಮಯವೂ ಕನ್ನಡಕ್ಕೆ ಉಳಿಗಾಲವಿಲ್ಲ.

    > ನೀವು ಇವತ್ತು ಇಂಟರ್ ನೆಟ್ ಅಲ್ಲಿ ಕೂತು, ಕಂಪ್ಯೂಟರ್ ಬಳಸಿ ಇದನ್ನೆಲ್ಲ ಬರೆಯುತ್ತಿದ್ದರೆ ಆ ಸಾಧ್ಯತೆಯೂ ಇಂಗ್ಲಿಷ್ ನಿಂದಲೇ ಬಂದಿರುವುದು
    ಇದನ್ನು ಅಜ್ಞಾನವೆಂದೇ ಹೇಳಬೇಕು.
    ಇಂಗ್ಲಿಷ್‍ನಿಂದ ಕಂಪ್ಯೂಟರ್ ನಡೆಯುವಂತಿದ್ದರೆ, ಕಂಪ್ಯೂಟರ್ ಗೆ ಏಕೆ, ಕಮ್ಪ್ಯೂಟರ್ ಭಾಷೆ (C, Pascal, JAVA, C++, ಇತ್ಯಾದಿ)ಗಳು ಬೇಕಿದ್ದವು?
    ಇಂಗ್ಲಿಷ್ ಅತ್ಯಂತ ಅವೈಜ್ಞಾನಿಕ ಭಾಷೆ. ಅದನ್ನು ಕಂಪ್ಯೂಟರ‍್ಗೆ ಅಳವಡಿಸಲು ಸಾಧ್ಯವೇ ಇಲ್ಲ.
    ಆ ರೀತಿ ಮುಂದೊಂದು ದಿನ ಕಂಪ್ಯೂಟರ್ಗೆ ಆಡು ಭಾಷೆಯೊಂದನ್ನು ಅಳವಡಿಸಲು ಸಾಧ್ಯವಾಗಿದ್ದೇ ಆದರೆ, ಅದು ಸಂಸ್ಕೃತ ಮಾತ್ರ.

    > The Aryan invasion theory or its opposition doesn’t prove or disprove anything
    ಈ ರೀತಿಯ ಬರಹಗಳ ಆಧಾರಗಳನ್ನು ನಾನೂ ನೀಡಬಲ್ಲೆ.
    ಆರ್ಯ ಪದವನ್ನು ಜನಾಂಗವಾಚಕದ ಅರ್ಥದಲ್ಲಿ ಬಳಸಿದ ಒಂದೇ ಒಂದು ಉದಾಹರಣೆಯೂ ಇಲ್ಲ.
    ಆರ್ಯ ಎನ್ನುವುದು ಜನಾಂಗವಾಚಕವೇ ಆಗಿದ್ದರೆ, ದಕ್ಷಿಣದಲ್ಲಿದ್ದ, ದ್ರಾವಿಡನೆಂದು ಕರೆಸಿಕೊಳ್ಳುವ ರಾವಣನನ್ನು ಆತನ ಪತ್ನಿ ಮಂಡೋದರಿಯು “ಆರ್ಯಪುತ್ರ” ಎಂದು ಕರೆಯಲು ಹೇಗೆ ಸಾಧ್ಯ?
    ಆರ್ಯರೆಂಬವರು ಹೊರಗಿನಿಂದ ಬಂದದ್ದೇ ಆಗಿದ್ದರೆ, ಅವರ ಎಲ್ಲಾ ಸಾಹಿತ್ಯಗಳಲ್ಲಿ ಅಲ್ಲಿನ ಸ್ಥಳಗಳ ವರ್ಣನೆಯೇ ಇರಬೇಕಿತ್ತಲ್ಲವೇ? ಅವರಿಗೆ ಆ ದೇಶಗಳಲ್ಲೂ ಪುಣ್ಯಸ್ಥಳಗಳು ಇರಬೇಕಿತ್ತಲ್ಲವೇ? ಕೇವಲ ಹಿಮಾಲಯ, ಸರಸ್ವತಿ, ಗಂಗೆ, ಕಾಶಿ, ರಾಮೇಶ್ವರ ಇತ್ಯಾದಿಗಳು ಮಾತ್ರ ಅವರಿಗೆ ಪೂಜ್ಯವಾಗಲು ಹೇಗೆ ತಾನೆ ಸಾಧ್ಯವಿರುತ್ತಿತ್ತು?

    > ಗಡಿ ಭಾಗದ ಕನ್ನಡಿಗರಾಗಿದ್ದು, ನೂರಾರು ಕಾಲದಿಂದ ಕನ್ನಡ ಮಾತನಾಡಿಕೊಂಡು ಬದುಕಿದ ಜನ ಇವತ್ತು ಅಲ್ಲಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸಲಾಗದಂತ ಕೆಟ್ಟ ಸ್ಥಿತಿ ಇದೆ. ಅಲ್ಲಿನ ಪರಭಾಷಿಕರ ಅಬ್ಬರದ ಮುಂದೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಕೆಲಸಕ್ಕೂ ಕೊರತೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇಲ್ಲಿ ಹಿರಿದಾದ ಕೆಲಸವಿದೆ.
    ಗಡಿ ಭಾಗದ ಕನ್ನಡಿಗರ ಮಾತು ಹಾಗಿರಲಿ. ರಾಜಧಾನಿ ಬೆಂಗಳೂರಿನಲ್ಲೇ ಕನ್ನಡದ ಅವಸಾನವಾಗುತ್ತಿದೆ.
    ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುರ್ತಾಗಿ ಏನಾದರೂ ಮಾಡಲೇಬೇಕು.
    ಅವರು ಮಾತ್ರವಲ್ಲ; ಕನ್ನಡದ ಕುರಿತಾದ ಕಾಳಜಿ ಇರುವ ನಾವು-ನೀವೆಲ್ಲರೂ ಏನಾದರೂ ಮಾಡಬೇಕು.
    ಸಂಸ್ಕೃತದ ಕಾರ್ಯಕ್ರಮ ಮಾಡಿದ್ದರಿಂದ ಕನ್ನಡಕ್ಕೇನೂ ತೊಂದರೆಯಾಗಿಲ್ಲ.
    ನೀವು ಆ ಕಾರ್ಯಕ್ರಮಕ್ಕೆ ಹೋಗಿದ್ದಿರೋ ಇಲ್ಲವೋ ತಿಳಿದಿಲ್ಲ.
    ಅಲ್ಲಿ ಹೋಗಿ ನೋಡಿದ್ದರೆ ತಿಳಿಯುತ್ತಿತ್ತು, ಕನ್ನಡಕ್ಕೆ ಸಂಸ್ಕೃತದಿಂದ ಯಾವ ಮಟ್ಟದಲ್ಲಿ ಸಹಾಯವಾದೀತೆಂಬುದು ಮತ್ತು ಸಂಸ್ಕೃತ ಕನ್ನಡಕ್ಕೆ ಎಷ್ಟರಮಟ್ಟಿಗೆ ಪೂರಕವೆಂಬುದು.
    ಸಂಸ್ಕೃತದ ರಾಶಿರಾಶಿ ಗ್ರಂಥಗಳಿವೆ. ಅದೊಂದು ಜ್ಞಾನಭಂಡಾರವೇ ಹೌದು. ಅದೆಲ್ಲವೂ ಕನ್ನಡಿಗರಿಗೆ ಸಿಗುವಂತೆ ಮಾಡುವುದೂ ಕನ್ನಡದ ದೊಡ್ಡ ಸೇವೆಯೇ. ಆ ಎಲ್ಲಾ ಜ್ಞಾನವು ಕನ್ನಡಿಗರಿಗೂ ಅತ್ಯಾವಶ್ಯಕ.

    > ವಸಂತರ ಲೇಖನದ ಧ್ವನಿ ’ಕನ್ನಡ ಮತ್ತು ಸಂಸ್ಕೃತಿ’ ಇಲಾಖೆಯ misplaced priority ಬಗ್ಗೆ
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕೆನ್ನುವುದರಲ್ಲಿ ಎರಡು ಮಾತಿಲ್ಲ.
    ಸಂಸ್ಕೃತದ ಕಾರ್ಯಕ್ರಮ ನಿಲ್ಲಿಸಿ ಎನ್ನುವ ಬದಲು, ಕನ್ನಡಕ್ಕೆ ಸಂಬಂಧಿಸಿದಂತೆಯೂ ಈ ರೀತಿಯ ಅಥವಾ ಇದಕ್ಕಿಂತಲೂ ಉತ್ತಮ ಕಾರ್ಯಕ್ರಮ ಮಾಡಿ ಎಂದು ಬೇಡಿಕೆ ಇರಿಸೋಣ.
    ಆದರೆ, ಎಲ್ಲಾ ಜವಾಬ್ದಾರಿಯನ್ನೂ ಸರಕಾರಿ ಇಲಾಖೆಯ ಮೇಲೆ ಹೊರಿಸಿ, ನಾವು ಸುಮ್ಮನೆ ಕೂರುವುದು ಸರಿಯಲ್ಲ.
    ಸಂಸ್ಕೃತದ ಕಾರ್ಯಕ್ರಮವನ್ನೇ ನೋಡಿ.
    ೪ ದಿನದಲ್ಲಿ ಲಕ್ಷಾಂತರ ಮಂದಿ ಕಾರ್ಯಕ್ರಮಕ್ಕೆ ಬಂದು ಹೋದರು. ಕೋಟ್ಯಂತರ ರೂಗಳ ಪುಸ್ತಕ ಮಾರಾಟವಾಯಿತು.
    ಇದನ್ನು ನಡೆಸಿದ್ದು ಸಂಸ್ಕೃತ ಭಾರತಿ ಎಂಬ ಖಾಸಗಿ ಸಂಸ್ಥೆ.
    ಕನ್ನಡಕ್ಕೆ ಸಂಬಂಧಿಸಿದಂತೆ, ಅಲ್ಲಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಿಟ್ಟರೆ, ಕನ್ನಡದ ಯಾವ ಖಾಸಗೀ ಸಂಸ್ಥೆಯೂ ಇಷ್ಟೊಂದು ಕಾಳಜಿ ವಹಿಸಿ ಕಾರ್ಯಕ್ರಮ ನಡೆಸಿದ್ದು ನನಗಂತೂ ತಿಳಿದಿಲ್ಲ.
    ಕನ್ನಡದ ಕೆಲಸ ಎಂದರೆ ಕೇವಲ ಕನ್ನಡ ರಾಜ್ಯೋತ್ಸವ ನಡೆಸುವುದಷ್ಟೇ ಕೆಲಸವೇನು?
    ಕನ್ನಡಕ್ಕೆ ಸಂಬಂಧಿಸಿದಂತೆ ಯಾವುದೇ ರಚನಾತ್ಮಕ ಕಾರ್ಯಕ್ರಮವನ್ನು ಈ ಖಾಸಗೀ ಸಂಸ್ಥೆಗಳು ಏಕೆ ನಡೆಸುತ್ತಿಲ್ಲ?
    ಆ ರೀತಿಯ ಕಾರ್ಯಕ್ರಮ ನಡೆಸಿ, ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹ ನೀಡಲಿಲ್ಲ ಎಂದರೆ ನಾವೆಲ್ಲಾ ನಿಂತು ಪ್ರತಿಭಟಿಸೋಣ. ಯಾವುದಾದರೂ ಕನ್ನಡಪರ ಹೊರಾಟ ನಡೆಸುವ ಸಂಸ್ಥೆ, ಸಂಸ್ಕೃತ ಭಾರತಿಯ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯುವಂತೆ ಕಾರ್ಯಕ್ರಮ ನಡೆಸಲಿ. ನಾವೆಲ್ಲಾ ನಿಂತು ಅದನ್ನು ಮತ್ತಷ್ಟು ದೊಡ್ಡದು ಮಾಡೋಣ.

    ಉತ್ತರ
    • Sandeep's avatar
      Sandeep
      ಜನ 13 2011

      @Narendra
      >>ಕನ್ನಡದ ಅಕ್ಷರ ಮಾಲೆಯನ್ನೇ ನೋಡಿ. ಅದರಲ್ಲಿರುವ ಪ್ರತಿಯೊಂದು ಅಕ್ಷರವೂ ಸಂಸ್ಕೃತದ ಅಕ್ಷರವೇ ಅಲ್ಲವೇ?
      ನಾನಿಲ್ಲಿ ಅಕ್ಷರದ ಆಕಾರವನ್ನು ಚರ್ಚಿಸುತ್ತಿಲ್ಲ ಎನ್ನುವುದನ್ನು ನೆನಪಿಡಿ. ಅಕ್ಷರಮಾಲೆಯ ಸ್ವರೂಪವನ್ನು ಗಮನಿಸಿ.
      ಎರಡು ಅಕ್ಷರ ಮಾಲೆಗಳಲ್ಲಿ ಇಷ್ಟೊಂದು ಸಾಮ್ಯವಿದ್ದರೆ, ಅದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ – ಇದನ್ನೇ ತಾಯಿಯಂತೆ ಮಗಳು ಎನ್ನುವುದು

      ಭಾಷೆಗೂ ಮತ್ತು ಲಿಪಿಗೂ ಯಾವ ಸಂಬಂಧವೂ ಇಲ್ಲ. ಭಾಷೆಯು ಮನುಷ್ಯರಲ್ಲಿ ಸ್ವಾಭಾವಿಕವಾಗಿ ಹುಟ್ಟಿರುವಂತದ್ದು. ಆದರೆ ಲಿಪಿ ಎಂಬುದು ಸಂಸ್ಕೃತಿಗಳು ವಿಕಾಸಗೊಂಡು ಹಲವು ಲಕ್ಷ ವರ್ಷಗಳ ನಂತರ ಮನುಷ್ಯ ತನ್ನ ಪ್ರಯೋಜನಕ್ಕೆ invent ಮಾಡಿಕೊಂಡಿದ್ದು. ಒಂದು ಲಿಪಿಯಲ್ಲಿ, ಸ್ವಲ್ಪ ಮಾರ್ಪಾಡುಗಳನ್ನು ಮಾಡಿಕೊಂಡು, ನೀವು ಯಾವುದೇ ಭಾಷೆಯನ್ನು ಬರೆಯಬಹುದು. ಅಂದ್ರೆ ಕನ್ನಡ ಲಿಪಿಯನ್ನು ಬಳಸಿ ಇಂಗ್ಲಿಷ್ ಬರೆಯಬಹುದು. ಹಾಗೇ ರೋಮನ್ ಲಿಪಿಯನ್ನು ಬಳಸಿ ಕನ್ನಡವನ್ನೂ ಬರೆಯಬಹುದು. ಇಷ್ಟಕ್ಕೂ ಕನ್ನಡ, ದೇವನಾಗರಿ ಮುಂತಾದ ಇಂದಿನ ಎಲ್ಲ ಭಾರತೀಯ ಲಿಪಿಗಳು ಮೂಲವಾಗಿ ಬಂದುದು ಬ್ರಾಹ್ಮಿ ಲಿಪಿಯಿಂದ. ಹಾಗೂ ಬ್ರಾಹ್ಮೀ ಲಿಪಿ ಬಂದುದು ಮಧ್ಯ ಏಶಿಯದಿಂದ.

      ಹೀಗೆ ಮಧ್ಯ ಏಶಿಯದಿಂದ ಬಂದ ಲಿಪಿಯ ಪ್ರಯೋಜನ ಕಂಡುಕೊಂಡ ಭಾರತದ ಸಂಸ್ಕೃತದ ವಿದ್ವಾಂಸರು ಅದನ್ನು ಸಂಸ್ಕೃತ ಬರೆಯಲು ಮಾರ್ಪಾಡುಗಳನ್ನು ಮಾಡಿಕೊಂಡು ಬಳಸಿದಾಗ ಅದೇ ಬ್ರಾಹ್ಮಿ ಆಯಿತು. ನಂತರ ಇದು ಭಾರತದ ಎಲ್ಲೆಡೆ ಹರಡಿ ಆ ಆ ಪ್ರಾಂತ್ಯಗಳಲ್ಲಿ ನಿಧಾನವಾಗಿ ಬದಲಾಗ ತೊಡಗಿತು. ಕರ್ನಾಟಕದಲ್ಲಿ ಇದು ನಿಧಾನವಾಗಿ ಕದಂಬ ಲಿಪಿಯಾಗಿ ಪರಿವರ್ತನೆಗೊಂಡಿತು. ಆಗ ಕನ್ನಡವನ್ನು ಆಡಳಿತ ಭಾಷೆಯಾಗಿ ತಂದ ಕದಂಬರು ಅದೇ ಲಿಪಿಯನ್ನು ಕನ್ನಡಕ್ಕೆ ಬಳಸಿದರು.

      ಅಷ್ಟೇ ಅಲ್ಲ, ಅವರೂ ಸಹ ಕನ್ನಡವು ಸಂಸ್ಕೃತದಿಂದ ಬಂದಿದೆ ಎಂಬ ತಪ್ಪು ಕಲ್ಪನೆಯಿಂದ ಸಂಸ್ಕೃತದಲ್ಲಿರುವ ಎಲ್ಲ ಅಕ್ಷರಗಳನ್ನು ಉಳಿಸಿಕೊಂಡರು. ಮತ್ತು ಸಂಸ್ಕೃತದಲ್ಲಿ ಇಲ್ಲದ ಅಕ್ಷರಗಳಾದ ‘ಎ’, ‘ಒ’, ‘ಳ’, ‘ಱ’, ೞ’ – ಇವುಗಳನ್ನು ಹೊಸದಾಗಿ ಹುಟ್ಟು ಹಾಕಿದರು. ಈ ಸಾಮ್ಯ ಕಾಕತಾಳೀಯವಲ್ಲ, ಹಾಗೇ ಸ್ವಾಭಾವಿಕವೂ ಅಲ್ಲ. ಉದ್ದೇಶಪೂರ್ವಕ, ಆದರೆ ತಪ್ಪು ತಿಳಿವಳಿಕೆಯಿಂದ ಬಂದದ್ದು.

      ಉತ್ತರ
  10. Nesara Nagu's avatar
    Nesara Nagu
    ಜನ 13 2011

    ಕನ್ನಡ ನುಡಿ ಹಾಗು ಸಂಸ್ಕೃತ ನುಡಿ ಬೇರೆ ನುಡಿ ಕುಟುಂಬಗಳಿಗೆ ಸೇರಿರುವ ಬಗ್ಗೆ ನುಡಿಯರಿಮೆಯಲ್ಲಿ ಕೆಲಸ ಮಾಡುವರಿಗೆ ಚನ್ನಾಗಿ ಗೊತ್ತಿದ. ಕನ್ನಡ ನುಡಿಗೆ ಸಂಸ್ಕೃತದಿಂದ ಒರೆಗಳು ಬಂದಿರುವುದು ನಿಜ ಹಾಗಂತ ಸಂಸ್ಕೃತ ಎಲ್ಲಾ ನುಡಿಗಳಿಗೆ ತಾಯಿ ಅನ್ನುವ ಮಾತಲ್ಲಿ ನಿಜವಿಲ್ಲ. ಎಲ್ಲಾ ನುಡಿಗಳಿಗೆ ಅದರದರ ಸೊಗಡಿರುವುದು. ಇದು ಒಂದು

    ಮತ್ತೆ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಕೆಲಸ ಕನ್ನಡ ನುಡಿಯ ಸಲುವಾಗಿರುವುದು ಲೇಸು. ಸಂಸ್ಕೃತ ನುಡಿಯಿಂದ ನಾವು ಏನನ್ನು ಕಲಿಬೇಕು ಕಲಿಯುವುದರಲ್ಲಿ ತಪ್ಪಲ್ಲ. ಆದರೆ ಇಲ್ಲದೆರ ಸ್ಥಾನ ಕೊಡುವುದು ಬೇಕಿಲ್ಲ. ಕನ್ನಡಕ್ಕೆ ಮೀಸಲಿಟ್ಟಿರುವ ದುಡ್ಡು ಯಾಕೆ ಇತರ ಬಳಸುವರು. ಸಂಸ್ಕೃತ ನುಡಿಯಲ್ಲಿ ಆಸಕ್ತಿ ಇರುವರು ಸಂಸ್ಕೃತಕ್ಕೆ ಕೆಲಸ ಮಾಡುವುದು ತಪ್ಪಲ್ಲ. ಕರ್ನಾಟಕ ಸರಕಾರಕ್ಕೆ ಮೊದಲು ಯಾವ ಕೆಲಸ ಮಾಡಬೇಕೆಂಬ ಅರಿವು ತೀರಾ ಕಡಿಮೆ.

    ಉತ್ತರ
  11. Sandeep's avatar
    Sandeep
    ಜನ 13 2011

    ಮತ್ತೊಂದು ಕುತೂಹಲಕಾರಿ ವಿಷಯವೊಂದು ಹೇಳ ಬಯಸುವೆ. ಸಂಸ್ಕೃತದಿಂದ ಕನ್ನಡವು ಬಹಳ ಪಡೆದುಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಕೆಲವರಂತೂ ಸಂಸ್ಕೃತವು ಕನ್ನಡದ ತಾಯಿ ಎಂಬ ಕಲ್ಪನೆಯೂ ಹೊಂದಿದ್ದಾರೆ. ಇರಲಿ. ಆದರೆ ಕನ್ನಡದಂತಹ ದ್ರಾವಿಡ ಭಾಷೆಗಳಿಂದ ಸಂಸ್ಕೃತ ಮುಂತಾದ indo-aryan ಭಾಷೆಗಳು ಏನಾದರೂ ಪಡೆದುಕೊಂಡಿವೆಯೇ? ಹೌದು, ಅವು ಕೂಡ ಬಹಳಷ್ಟು ಪಡೆದುಕೊಂಡಿವೆ.

    ಸಂಸ್ಕೃತದಿಂದ ದ್ರಾವಿಡ ನುಡಿಗಳು ಪದಗಳನ್ನು ಪಡೆದಿವೆ. ಆದರೆ ಸಂಸ್ಕೃತದ ವ್ಯಾಕರಣದ ಪರಿಣಾಮ ಅಷ್ಟಾಗಿ ಅವುಗಳ ಮೇಲೆ ಆದಂತಿಲ್ಲ. ಆದರೆ ಸಂಸ್ಕೃತದ ಕೆಲವು ವ್ಯಂಜನಗಳು, ಅವುಗಳ ಉಲಿಕೆ, ಹಾಗೂ ಸಂಸ್ಕೃತದ ವ್ಯಾಕರಣದ ಮೇಲೆ ದ್ರಾವಿಡ ಭಾಷೆಗಳು (ಬಹುಷಃ ಕನ್ನಡ ಮತ್ತು ತೆಲುಗು) ಬಹಳ ಪರಿಣಾಮ ಬೀರಿವೆ. ಅಂದ್ರೆ ಸಂಸ್ಕೃತದ ಸ್ವರೂಪದ ಮೇಲೆಯೇ ಗಾಢವಾದ ಪರಿಣಾಮ ಬೀರಿವೆ. ಯೂರೋಪ್ ಮತ್ತು ಇರಾನಿನ ಭಾಷೆಗಳಲ್ಲಿ ಇಲ್ಲದ retroflexಗಳು (ಟ ವರ್ಗ) ದ್ರಾವಿಡ ಭಾಷೆಗಳ ಪ್ರಭಾವದಿಂದ ಸಂಸ್ಕೃತದಲ್ಲಿ ಬಂದಿವೆ. ವೇದಗಳ ಭಾಷೆಯಲ್ಲಿ ‘ಳ’ ಸಹ ಇತ್ತು ಅಂತ ಯಾರೋ ಹೇಳಿದ್ದು ಕೇಳಿದ್ದೆ. ಇದರ ಬಗ್ಗೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ: http://en.wikipedia.org/wiki/Dravidian_languages#Dravidian_substratum_influence_on_Sanskrit

    ಉತ್ತರ
  12. ಸಂಜೀವ's avatar
    ಸಂಜೀವ
    ಜನ 13 2011

    ಪ್ರಪಂಚದಲ್ಲಿ ಭಾಷೆಗಳು ಹೇಗೆ ಹರಡಿದೆ ಅಂತ ಇಲ್ಲಿ ಒಮ್ಮೆ ನೋಡಿ http://en.wikipedia.org/wiki/Language_family. ದಕ್ಷಿಣ ಭಾರತದ ಭಾಷೆಗಳು ದ್ರಾವಿಡ ಕುಟುಂಬಕ್ಕೆ ಸೇರಿದವು ಅನ್ನೋದು ತಿಳ್ಯತ್ತೆ. ಹಾಗೆಯೇ ಸಂಸ್ಕೃತ ಮತ್ತು ಕನ್ನಡಕ್ಕೆ ಇರುವ ನಂಟು ಎಂತದ್ದು ಅನ್ನೋದು ಊಹಿಸೋಕೆ ಸಾಧ್ಯ ಆಗತ್ತೆ.
    ಇನ್ನು ಕನ್ನಡದಲ್ಲಿ ಬಳಸುವ ಸಂಸ್ಕೃತ ಪದಗಳ ಬಗ್ಗೆ: ನಿಜ ಕನ್ನಡದಲ್ಲಿ ಹೆಚ್ಚು ಸಂಸ್ಕೃತ ಪದಗಳನ್ನು ಬಳಸುತ್ತೇವೆ…. ಆದರೆ ಎಲ್ಲಿ … ನಮ್ಮ ಬರವಣಿಗೆಯಲ್ಲಿ, ನಮ್ಮ ಭಾಷಣಗಳಲ್ಲಿ, ನಾಟಕಗಳಲ್ಲಿ, ಇತ್ಯಾದಿ. ಆದರೆ, ಒಂದು ಭಾಷೆ ಹುಟ್ಟುವುದು ಇದ್ಯಾವುದರಿಂದಲೂ ಅಲ್ಲ ಅಲ್ಲವೆ. ನಾವು ದಿನನಿತ್ಯ ಮಾತಾಡುವಾಗ ಎಷ್ಟು ಸಂಸ್ಕೃತ ಪದಗಳನ್ನು ಬಳಸ್ತೀವಿ? ಹಾಗೆ ನೋಡುದ್ರೆ ಬೆಂಗಳೂರು ನಗರದಲ್ಲಿ ಆಡುವ ಕನ್ನಡದಲ್ಲಿ ಇಂಗ್ಲೀಶ್ ಪದಗಳನ್ನು ಸಿಕ್ಕಾಪಟೆ ಬಳಸೋದು ಕಂಡು ಬರತ್ತೆ. ಹಾಗೆಂದ ಮಾತ್ರಕ್ಕೆ ಇಂಗ್ಲೀಶ್ ಕನ್ನಡ ಭಾಷೆಯ ತಾಯಿ? ಕೋಲಾರ, ಚಿಂತಾಮಣಿ, ಈ ಪ್ರದೇಶಗಳಲ್ಲಿ ತೆಲಗು ಪದಗಳು ಸೇರಿರುತ್ತೆ – ತೆಲಗು ಕನ್ನಡ ಭಾಷೆಯ ತಾಯಿ? ಹೊಸೂರು, ಕೆ.ಜಿ.ಎಫ್ ಇಲ್ಲಿ ತಮಿಳು – ತಮಿಳು ಕನ್ನಡ ಭಾಷೆಯ ತಾಯಿ? ಅಯ್ಯೋ!
    ಇನ್ನು ಸಂಸ್ಕೃತ ಭಾಷೆಯ ಉಪಯೋಗ.. ಸಂಸ್ಕೃತದಲ್ಲಿ ಆಗಿರುವ ಕೆಲಸಗಳ ಬಗ್ಗೆ ಎರಡು ಮಾತಿಲ್ಲ… ಅತ್ಯಂತ ಅದ್ಭುತವಾದ ಕೆಲಸಗಳು ಅದರಲ್ಲಿವೆ…. ಹಾಗಂದ ಮಾತ್ರಕ್ಕೆ ಅದನ್ನು ಪೂಜಿಸಲು ಸೀಮಿತವಾಗಿಡಬೇಕೆ? ಅದನ್ನು ಪರಿಣಾಮಕಾರಿಯಾಗಿ ಜನರು ಬಳಸುವಂತಾಗಬೇಕು…. ಅಲ್ಲಿ ಇರುವ ಅರಿವನ್ನು ಇತರೆ ಭಾಷೆಗಳಿಗೆ ಭಾಷಾಂತರಿಸಿ ಅದು ಎಲ್ಲರಿಗೂ ಸಿಗುವಂತಾಗಬೇಕ್ಕಾದ್ದೇ ನಿಜವಾಗಿಯೂ ಆಗಬೇಕಾಗಿರುವ ಕೆಲಸ………. ಇದು ಪ್ರಪಂಚದ ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆ ಅಲ್ಲವೆ? ಕನ್ನಡ, ಇಂಗ್ಲೀಶ್ ಒಳಗೊಂಡು.
    ಸರ್ಕಾರ ಈ ನಿಟ್ಟಿನಲ್ಲಿ ಏನು ಮಾಡುತ್ತಿದೆ ಅನ್ನೋದು ಒಂದು ದೊಡ್ಡ ಪ್ರಶ್ನೆ

    ಉತ್ತರ
    • Kumara S's avatar
      Kumara S
      ಜನ 16 2011

      ಸಂಜೀವ್,
      ಸರ್….ದಯವಿಟ್ಟು WIKI ಲಿಂಕ್ಸ್ ನೆಲ್ಲ ತೋರ್ಸಿ ನಿಜ ಇದೆ ನೋಡಿ ಅಂದ್ರೆ ನಂಬೋದು ಭಾರಿ ಕಷ್ಟ ಸರ್…. ಯಾಕೆ ಅಂದ್ರೆ ಅದೇನು ಸರ್ಕಾರಿ ದಾಖಲೆ ಅಲ್ಲ…ಅಲ್ಲಿ ಯಾರು ಬೇಕಾದರು ಹೋಗಿ ಬೇಕಾದಹಾಗೆ ಬರಿಬಹ್ದು….(ಹೊಗೆನಕಲ್ ಒಂದು ದಿನ ಕರ್ನಾಟಕ ದಲ್ಲಿ ಇರತ್ತೆ ಒಂದು ದಿನ ತಮಿಳ್ನಾಡಿನಲ್ಲಿ ಇರತ್ತೆ ಸರ್ !.. ಅದು ಎಲ್ಲಿದೆ ಅಂತ ತಮಗೂ ಗೊತ್ತು ಅನ್ಕೊಂಡಿದೀನಿ)
      …ಅದೇ ಸರ್ ನಾನು ಹೇಳಿದ್ದು…ನಾವು ಬರೆಯುವ ,ಮಾತನಾಡುವ ಭಾಷೇನಲ್ಲಿ ಸಂಸ್ಕೃತದ ಪದಗಳು ಹಾಸು ಹೊಕ್ಕಿವೆ… ಅದನ್ನ ಗುರುತಿಸುವ ಪ್ರಯತ್ನ ತಾವು ಮಾಡಿ…ನಾನು ಹೇಳಿದ್ದು ಸಂಸ್ಕೃತ ಭಾಷೆಯ ಪದಗಳು ಇರೋ ಸಂಖ್ಯೆ ಹೆಚಿಗೆ ಅಂತ…ಮತ್ತು ಅದರ ಮೂಲ ಕೂಡ ಸಂಸ್ಕೃತದ್ದು,,,,ಸೊ ಹಾಗಾಗಿ ಅದರ ಸಂಬಂದ ತಾಯಿಯ ಹಾಗೆ ಅಂತ ಹೇಳಿದ್ದು… ಅದು ನಾವು ಆ ಭಾಷೆಗೆ ಕೊಡತ ಇರೋ ಗೌರವ…ತೆಲಗು.ಮಲಯಾಳಂ ಭಾಷೆ ಕೂಡ ಸಂಸ್ಕೃತ ಬಗ್ಗೆನೇ ಹೇಳೋದು…“Shrikanta Shastri (Kumvempu avara gurugalu)” avaru barediruva “Bharathiya Samskruti” ಪುಸ್ತಕ ಓದಿ ಸರ್!…

      ಉತ್ತರ
  13. Deepak Rao's avatar
    Deepak Rao
    ಜನ 17 2011

    ಒಂದು ನುಡಿಯಿಂದ ಇನ್ನೊಂದು ನುಡಿಗೆ ಒರೆಗಳು ಹೋಗುವುದು ಸರಿ ಆದರೆ ಹಾಗಂತ ಆ ನುಡಿಗೆ ಆ ಇನ್ನೊಂದು ನುಡಿ ತಾಯಿ ಆಗುವುದಿಲ್ಲ. ಇಂಗ್ಲೀಶ್ ನುದಿಯಿಂದ ಕಾರ್, ಬಸ್ಸ್ ಒರೆ ಬಂದಿದೆ. ಕನ್ನಡಕ್ಕೆ ಇಂಗ್ಲೀಶ್ ನುಡಿ ತಾಯಿ ಆಗುವುದಿಲ್ಲ. ಸುಮ್ಮನೆ ಮಾತಿಗೊಸ್ಕರ ಮಾತಾಡಬಾರದು. ತಿಳಿವಿಲ್ಲದೆ ಮಂದಿ ಆಡುವ ಮಾತು ಸರಿಯಲ್ಲ. ಕನ್ನಡದ ” ನಾನು ” ಒರೆಗೆ ಯಾವ ಸಕ್ಕದ ( ಸಂಸ್ಕೃತ ) ಒರೆ ಅದರ ಬೇರು ? ಮಾತಾಡುವರು ಈ ಕೇಳ್ವಿಗೆ ಮರುಮಾತ ನೀಡಲ್ಲಿ. ಸುಮ್ಮನೆ ಇಲ್ಲಿ ಬಂದು ಇಲ್ಲದೆರ ಮಾತು ಬೇಕಿಲ್ಲ. ಕನ್ನಡಿಗರು ಮೊದಲು ಹಳಗನ್ನಡ ತಿಳಿವಳಿಕೆ ಬೆಳಸಿದರೆ ಇಂತ ಅರಿವಿಲ್ಲದ ಮಾತನ್ನಾಡುವುದಿಲ್ಲ.

    ಉತ್ತರ
    • Narendra Kumar.S.S's avatar
      Narendra Kumar.S.S
      ಜನ 17 2011

      ಯಾವ ಭಾಷೆ ಯಾವ ಭಾಷೆಯ ತಾಯಿ ಎನ್ನುವುದನ್ನು ತಿಳಿಯುವ ಮೊದಲು, ಒಂದು ಅನುಮಾನ ಪರಿಹಾರವಾಗಬೇಕು.
      ಒಂದು ಭಾಷೆ ಮತ್ತೊಂದು ಭಾಷೆಯ ತಾಯಿ ಅನ್ನಿಸಿಕೊಳ್ಳಲು ಇರಬೇಕಾದ ಅರ್ಹತೆಗಳಾವುವು?
      ಇದಕ್ಕೆ ಯಾವುದಾದರೂ ಸಮರ್ಪಕ ಉದಾಹರಣೆ ನೀಡಬಹುದೇ?

      ಕೆಲವರು ಇಲ್ಲಿ “ಆರ್ಯ”, “ದ್ರಾವಿಡ”, “ಇಂಡೋ-ಆರ್ಯನ್” ಇತ್ಯಾದಿ ಯಾರೋ ಯಾವ ಕಾರಣಕ್ಕೋ ಬಳಸಿದ ವಾದಗಳಿಗೇ ಜೋತುಕೊಂಡು ಮಾತನಾಡುತ್ತಿದ್ದಾರೆ.
      ಆರ್ಯ-ದ್ರಾವಿಡ ವಾದವೇ ತಪ್ಪೆಂದ ಮೇಲೆ, ಈ ಪದಗಳಿಗೆಲ್ಲಾ ಅರ್ಥವೇ ಇರುವುದಿಲ್ಲ.
      ಹೀಗಾಗಿ, ಕೇವಲ ಆ ಪದಗಳಿಗೆ ಅಂಟಿಕೊಂಡು ಮಾತನಾಡುವುದರ ಬದಲು, ಸರಿಯಾದ ಪುರಾವೆಗಳಿದ್ದರೆ, ಅದನ್ನು ಇಲ್ಲಿ ಎಲ್ಲರ ಮುಂದಿಟ್ಟು ವಾದಿಸುವುದು ಒಳ್ಳೆಯದು.

      ಉತ್ತರ
    • Narendra Kumar.S.S's avatar
      Narendra Kumar.S.S
      ಜನ 17 2011

      ಇಲ್ಲಿ ನಡೆಯುತ್ತಿರುವ ಚರ್ಚೆ ಜಿಜ್ಞಾಸೆಗಾಗೆಂದು ನಾನು ತಿಳಿದಿರುವೆ.

      > ಈ ರೀತಿ ಸಾಕ್ಷಿ ಇಲ್ಲದೇ ಮಾತಾಡಿ ನಾಳೆ ಸುಖಾಸುಮ್ಮನೆ ಕೋರ್ಟು-ಕಾನೂನು ಅನ್ನುವ ಗೊಂದಲಕ್ಕೆ ಸಿಲುಕದಿರಿ ಎಂದು ಸಲಹೆ ನೀಡುವೆ.
      ಈ ಮೇಲಿನ ಮಾತುಗಳು, ನನ್ನ ನಂಬಿಕೆ ಸುಳ್ಳೆಂದು ತಿಳಿಸುತ್ತಿದೆ.
      ಆರೋಗ್ಯವಂತ ಚರ್ಚೆ ನಡೆಯುವುದಾದರೆ ಮುಂದುವರೆಸೋಣ. ಕೇವಲ ಇನ್ನೊಬ್ಬರನ್ನು ವಾದದಲ್ಲಿ ಸೋಲಿಸುವುದು, ಅದಾಗದಿದ್ದರೆ ಅವರಿಗೆ ಹೆದರಿಸುವುದು, ಇತ್ಯಾದಿಗಳು ಇಲ್ಲಿನ ರೂಢಿಯಾದರೆ, ಚರ್ಚೆಗೆ ಅರ್ಥವಿಲ್ಲ.

      ಮತ್ತು ಕೆಲವರು ಇಲ್ಲಿ “ವಿಕಿ ಪೇಜಸ್”ಗಳ ಕೊಂಡಿಗಳನ್ನು ನೀಡಿ, ಅದನ್ನೇ ದೊಡ್ಡ ಪುರಾವೆ ಎಂಬಂತೆ ತೋರಿಸುತ್ತಿದ್ದಾರೆ.
      ಈ ರೀತಿಯ “ವಿಕಿ ಪೇಜಸ್” ಯಾರು ಬೇಕಾದರೂ ತಯಾರಿಸಬಹುದು. ಅದನ್ನು ಯಾರು ಬೇಕಾದರೂ ತಿದ್ದಬಹುದು.
      ಅದರಲ್ಲಿರುವುದೆಲ್ಲ ಸಂಶೋಧನೆಯ ಫಲವೆಂದು ನಂಬಿದರೆ ದೇವರೇ ಗತಿ, ಅಷ್ಟೇ!

      ವಾದ ಯಾವುದೇ ಇರಲಿ, ಸಿಧ್ಹ್ದಾಂತಗಳು ಏನೇ ಇರಲಿ – ನಮಗದು ಇಷ್ಟವಾಯಿತೆಂದೋ, ಅಥವಾ ತಾನು ಆ ಸಿದ್ಧಾಂತದ ಪಕ್ಷಕ್ಕೆ ಸೇರಿದವನೆಂಬ ಕಾರಣಕ್ಕೋ, ಅದೇ ಸಿದ್ದಾಂತವನ್ನು ಹಿಡಿದುಕೊಂಡು ಜಗ್ಗಾಡುವುದು ಒಳ್ಳೆಯದಲ್ಲ. ಬದಲಾಗಿ, ಸತ್ಯವೇನೆಂಬುದನ್ನು ಅನ್ವೇಶಿಸಬೇಕು. ಹಳೆಯ ಸಿದ್ಧಾಂತಗಳು, ವಾದಗಳು ಪಕ್ಕಕ್ಕೆ ಸರಿಯುತ್ತಿರುತ್ತವೆ; ಹೊಸ ಸಿದ್ಧಾಂತಗಳು ಮೇಲೇಳುತ್ತಿರುತ್ತವೆ. ಇವೆಲ್ಲಕ್ಕೂ ಸತ್ಯವೇ ಆಧಾರವಾಗಬೇಕು.

      ೧೯ನೇ ಶತಮಾನದ ಅಂತ್ಯ ಭಾಗದಲ್ಲಿ ಇಂಗ್ಲೆಂಡಿನ ರಾಯಲ್ ಸೊಸೈಟಿ (ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೋಚ್ಛ ಸಂಸ್ಥೆ)ಯು, ವಿಮಾನವೆಂಬ ಯಂತ್ರವನ್ನು ನಿರ್ಮಿಸಲು ಸಾಧ್ಯವಿಲ್ಲ. ಅದು ಗುರುತ್ವಾಕರ್ಷಣೆಗೆ ವಿರುದ್ಧ ಹೋಗುತ್ತದೆ, ಎಂಬ ಠರಾವನ್ನು ಸ್ವೀಕರಿಸಿತ್ತು. ಹೀಗೆ, ವಿಜ್ಞಾನ ಕ್ಷೇತ್ರದಲ್ಲೇ, ನಮ್ಮ ಕಣ್ಣಿಗೆ ಕಾಣುವ ಸಂಗತಿಗಳ ವಿಷಯದಲ್ಲೇ ಹೀಗಾಗುವಾಗ, ಭಾಷೆಯಂತ ವಿಷಯದಲ್ಲಿ ಏನೇನಾಗಬಹುದು ಎಂದು ಊಹಿಸಬಹುದು.
      ಹೀಗಾಗಿ, ಎಲ್ಲವನ್ನೂ ನಿಷ್ಕರ್ಷೆ ಮಾಡಲಾಗಿದೆ, ಇದಮಿತ್ತಂ ಎಂಬ ರೀತಿಯಲ್ಲಿ ಮಾತನಾಡಿದರೆ, ಚರ್ಚೆ ಮುಂದುವರೆಯುವುದಿಲ್ಲ ಮತ್ತು ಸತ್ಯವೂ ಗೋಚರಿಸುವುದಿಲ್ಲ.

      ಉತ್ತರ
      • Sandeep's avatar
        Sandeep
        ಜನ 18 2011

        @Narendra Kumar.S.S
        >>ಕೆಲವರು ಇಲ್ಲಿ “ಆರ್ಯ”, “ದ್ರಾವಿಡ”, “ಇಂಡೋ-ಆರ್ಯನ್”
        >> ಇತ್ಯಾದಿ ಯಾರೋ ಯಾವ ಕಾರಣಕ್ಕೋ ಬಳಸಿದ ವಾದಗಳಿಗೇ
        >> ಜೋತುಕೊಂಡು ಮಾತನಾಡುತ್ತಿದ್ದಾರೆ.
        ನಿಮ್ಮ ಈ ಮಾತು ಆರ್ಯ-ದ್ರಾವಿಡ ಎಂಬುದು ಎರಡು ಜನಾಗಗಳು ಎಂದು ಹೇಳುವ ಮಂದಿಗೆ ಅನ್ವಯಿಸುತ್ತದೆ. ನಿಜಕ್ಕೂ ಭಾರತೀಯರನ್ನು ಆರ್ಯ-ದ್ರಾವಿಡ ಎಂಬ ಎರಡು ಜನಾಂಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ನೀವು ಹೇಳಿದಂತೆ ಇದು ಯಾರೋ ಯಾವ ಕಾರಣಕ್ಕೋ ಬಳಸಿದ ವಾದಗಳಿರಬಹುದು.

        ಆದರೆ ಭಾಷೆಯ ವಿಷಯವಾಗಿ ಹಾಗೆ ಹೇಳಲು ಬರುವುದಿಲ್ಲ. ಆರ್ಯ-ದ್ರಾವಿಡ ಪದಗಳು ನಿಮಗೆ ಜನಾಂಗ ಸೂಚಿ ಎನಿಸಿದರೆ ಬೇಕಿದ್ದರೆ ಬೇರೆ ಹೆಸರುಗಳನ್ನು ಬಳಸಿ. ಆದರೆ ಈ ಎರಡು ಭಾಷಾ ಕುಟುಂಬಗಳು ಬೇರೆಯೇ ಆಗಿವೆ. ಉದಾಹರಣೆಗೆ ಈ ಕೊಂಡಿಯನ್ನು ನೋಡಿ: http://dsal.uchicago.edu/dictionaries/burrow/. ಇದು ದ್ರಾವಿಡ ಭಾಷೆಗಳ etymological ನಿಘಂಟು. ಈ ರೀತಿಯ ನಿಘಂಟು ತಯಾರಿಸಲು ಭಾಷೆಗಳ ನಡುವೆ etymological ಸಂಬಂಧ ಇದ್ದಾರೆ ಮಾತ್ರ ಸಾಧ್ಯ. ಹಾಗಾಗಿ ಇಲ್ಲಿ ಕನ್ನಡ, ತಮಿಳು, ಕೊಡವ, ತುಳು, ತೆಲುಗು ಮುಂತಾದ ದ್ರಾವಿಡ ಭಾಷೆಗಳ ಪದಗಳು, ಅವುಗಳ ಮೂಲಗಳು, ಮತ್ತು ಪರಸ್ಪರ etymological ಸಂಬಂಧಗಳು ಉಲ್ಲೇಖವಾಗಿವೆ. ಆದರೆ ಇದೆ ರೀತಿಯ, ಕನ್ನಡ, ಸಂಸ್ಕೃತ ಭಾಷೆಗಳನ್ನು ಒಳಗೊಂಡ, etymological ನಿಘಂಟನ್ನು ತಯಾರಿಸಲು ಸಾಧ್ಯವಿಲ್ಲ. ಏಕೆಂದರೆ ಇವೆರಡು ಭಾಷೆಗಳ ನಡುವೆ etymological ಸಂಬಂಧವೇ ಇಲ್ಲ.

        ಉತ್ತರ
  14. Vasant's avatar
    ಜನ 18 2011

    ವಸಂತ್,
    -> ಸಂಸ್ಕೃತ ಭಾರತ ಎಲ್ಲಭಾಷೆಗಳಿಗು ತಾಯಿ ಅಲ್ಲ ಅನ್ನೋದಕ್ಕೆ ತಾವು ಕೂಡ ಆಧಾರ ಕೊಡಿ….
    >> ಸಂಸ್ಕೃತದ ಹೆಚ್ಚು ಹೆಚ್ಚು ಪದಗಳು ಕನ್ನಡಕ್ಕೆ ಬಂದಿದ್ದೇ ಬರಹದ ಮೂಲಕ ಹೊರತು, ಮಾತಿನ ಮೂಲಕವಲ್ಲ. ಬರೀ ಮಾತಿನ ರೂಪದಲ್ಲಷ್ಟೇ ಭಾಷೆ ಹೆಚ್ಚು ಬಳಕೆಯಾಗುತ್ತಿದ್ದ ದಿನಗಳಲ್ಲಿ ಭಾಷೆಯ ಸ್ವರೂಪ ಏನಿತ್ತು? ತಂದೆ-ತಾಯಿ-ಅಣ್ಣ-ಅಕ್ಕ-ತಮ್ಮ-ತಂಗಿ, ಕೈ, ಬಾಯಿ, ಕಾಲು, ಊಟ, ತಿಂಡಿ, ನಿದ್ದೆ, ಹೀಗೆ ದಿನ ನಿತ್ಯದ ಬದುಕಿನಲ್ಲಿ ಬಳಕೆಯಾಗುತ್ತಿದ್ದ ಹೆಚ್ಚಿನ ಪದಗಳನ್ನು ಗಮನಿಸಿ. ಅವೆಲ್ಲ ಕನ್ನಡದ ಪದಗಳೇ ಆಗಿವೆ. ಯಾಕೆ ಸಂಸ್ಕೃತದ ಪಿತಾ- ಮಾತಾ-ಸಹೋದರ-ಸಹೋದರಿ-ಹಸ್ತ-ಪಾದ-ಭೋಜನ-ಉಪಹಾರ ಮುಂತಾದ ಸಂಸ್ಕೃತ equivalents ದಿನ ಬಳಕೆಯ ಪದಗಳಾಗಿ ಬಳಕೆಯಲ್ಲಿಲ್ಲ ? ಯಾಕೆ ಬರಹ ರೂಪದ formal ಕನ್ನಡದಲ್ಲಿ ಮಾತ್ರ ಇವುಗಳ ಬಳಕೆಯಾಗುತ್ತೆ? ಒಂದು ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿದೆ ಅನ್ನುವುದಕ್ಕೆ ಇರಬೇಕಾದ ದೊಡ್ಡ ಆಧಾರವೆಂದರೆ ಆ ಎರಡು ಭಾಷೆಗಳಲ್ಲಿರುವ ಸಾಮ್ಯತೆ ಗುರುತಿಸುವುದಲ್ಲ. ಆ ಎರಡು ಭಾಷೆಗಳಲ್ಲಿರುವ ವ್ಯತ್ಯಾಸಕ್ಕೆ ಲಾಜಿಕಲ್ ಆದ ಕಾರಣ ನೀಡುವುದು. ಸಂಸ್ಕೃತಕ್ಕೂ, ಕನ್ನಡಕ್ಕೂ ಇರುವ ವ್ಯತ್ಯಾಸಗಳನ್ನು ಹೇಗೆ ವಿವರಿಸುವಿರಿ?
    ತಮಿಳು-ತೆಲುಗು-ಕನ್ನಡ ದಲ್ಲೂ ಸಂಬಂಧ, ದಿನ ನಿತ್ಯದ ಬಳಕೆಯ ಪದಗಳನ್ನು ವಿವರಿಸುವ ಹೆಚ್ಚಿನ ಪದಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಇದೇ ಸಾಮ್ಯತೆ ಸಂಸ್ಕೃತದಿಂದ ಹುಟ್ಟಿದ ಭಾಷೆಗಳಿಗೂ ದ್ರಾವಿಡ ನುಡಿಗಳಿಗೂ ಖಂಡಿತ ಇಲ್ಲ. ಇದನ್ನು ಮೊದಲು ತಿಳಿಯುವ ಪ್ರಯತ್ನ ಮಾಡಿ, ಆಗ ಸತ್ಯ ಗೊತ್ತಾದೀತು.

    -> …ಕನ್ನಡಕ್ಕೂ ಸಂಸ್ಕೃತಕ್ಕೂ ಭಾಷಾ ವಿಜ್ಞಾನದ ಸಂಭಂದ ಇಲ್ಲ ಅಂತ ಹೇಗೆ ಹೇಳ್ತಿರಿ ಸರ್….ಕನ್ನಡ ಮತ್ತು ಸಂಸ್ಕೃತ ಎರಡು ಒಂದೇ ಭಾಷೆ ಅಂತ ಹೇಳಿಲ್ಲ ….ನಾನು ಹೇಳಿದ್ದು ಕನ್ನಡ ಮೂಲ ಸಂಸ್ಕೃತ ಎಂದು…ಭಾಷೆಗಳು ಬೆಳೆಯುತ್ತ ತಮ್ಮದ ಆದೆ ಮಾರ್ಪಾಟು ಕೂಡ್ಮಾಡಿಕೊಳ್ಳುತ್ತವೆ…ಕನ್ನಡ ಭಾಷೆನ ೧೦೦ ವರ್ಷದ ಹಿಂದೆ ಹೇಗಿತ್ತು ಅಂತ ನೋಡಿದ್ರೆ ಅದನ್ನು ಈಗ ಓದೋದಕ್ಕು ಆಗೋಲ್ಲ ನಮಗೆ !!
    >>> ಭಾಷೆಗಳು ಕಾಲದ ಜೊತೆ ಮಾರ್ಪಾಟು ಹೊಂದುತ್ತಲಿರುವುದರಿಂದಲೇ ಆದಿ ದ್ರಾವಿಡ ಅನ್ನುವ ಒಂದೇ ನುಡಿ ಇವತ್ತು ಕನ್ನಡ, ತಮಿಳು, ತೆಲುಗು, ಮಲಯಾಳಂ ರೂಪದಲ್ಲಿ ನಾಲ್ಕಾಗಿರುವುದು. ಈ ನಾಲ್ಕು ಭಾಷೆಗಳ ವ್ಯಾಕರಣದ ನಿಯಮಗಳಿಗೂ, ಸಂಸ್ಕೃತದ ನಿಯಮಕ್ಕೂ ವ್ಯತ್ಯಾಸವಿರುವುದನ್ನು ಗಮನಿಸಿ.

    -> ಭೈರಪ್ಪ,ಗಣೇಶ್ & ಚಿದಾನಂದ ಮೂರ್ತಿ ಗಳು ಬರಿ ಲೇಖಕರಲ್ಲಿ ಅವ್ರು ದೊಡ್ಡ ಸಂಶೋದನೆ ವಿದ್ವಾಂಸರು ಕೂಡ… ಕನ್ನಡಕ್ಕೆ ಸಂಸ್ಕೃತದಿಂದ ಆಷ್ಟಾಗಿ ಉಪಯೋಗ ಇಲ್ಲ ಅಂತ ಹೇಳಿದ್ರೆ ಭೈರಪ್ಪ ನವರು ವಿಜಯ ಕರ್ನಾಟಕದಲ್ಲಿ “ಸಂಸ್ಕೃತ” ಲೇಖನಗಳ ಬಗ್ಗೆ ಒಂದು ತಿಂಗಳು ತನಕ ಚರ್ಚೆ ಆಗತಾನೆ ಇರಲಿಲ್ಲ…..ಭೈರಪ್ಪನವರು ಯಾವ್ದು ಒಂದು ವಿಷಯವನ್ನ ಸಂಶೋದನೆ ಮಾಡದೆ ಒಪ್ಪಿಕೊಲ್ಲೋವ್ರಲ್ಲ ಅಂತ ಕನ್ನಡ ಸಾಹಿತ್ಯ ಲೋಕದಲ್ಲಿ ಗೊತ್ತಿರುವ ಸತ್ಯ!…
    >>> ಯಾರು ಏನೇ ಸಂಶೋಧನೆ ಮಾಡಲಿ, ಅದನ್ನು ಒಪ್ಪುವುದು ಬಿಡುವುದು ನಿಮ್ಮ ಸ್ವಂತ ಪರಿಶೀಲನೆಯ ನಂತರವಷ್ಟೇ ಆಗಬೇಕು.

    –> ಒಹ್….ತಾವು ಶನಕರ ಭಟ್ಟರ ಪುಸಕ್ತ ದಿಂದ ಹೇಳ್ತ ಇದಿರಿ ಅಂತ ಗೊತ್ತಿರಲಿಲ್ಲ…ನಾನು ಅವರ ಪುಸಕ್ತ ನೋಡಿಯೇ ನಿಮಗೆ ಹೇಳೋದು ಅಂದ್ರೆ ತಾವು “ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? “ ಅನ್ನೋ ಪುಸ್ತಕ ಓದಬೇಕು ಅನ್ನೋದು….ಅಜಕ್ಕಳ ಗಿರೀಶ್ ಭಟ್ಟ ಶಂಕರ ಭಟ್ಟರ ವಾದ ಯಾವ ತಪ್ಪಿಂದ ಕೂಡಿದೆ ಅನ್ನೋದು ನಿಮಗೆ ಗೊತ್ತಾಗತ್ತೆ…. ಹಾಗೇನೆ “ದೇಶಕಾಲ-೧೪ ರ ಸಂಚಿಕೆಯಲ್ಲಿ ಶತಾವಧಾನಿ ಗಣೇಶ್ & ತಿರುಮಲೇಶ್ ಬರಿದಿರುವ ಪ್ರತಿಕ್ರಿಯೆಯನ್ನು ನೋಡಿ…. ಶತಾವಧಾನಿ ಗಣೇಶ್ ಕೇಳಿದ ಯಾವ ಪ್ರಶ್ನೆಗಳಿಗೂ ಇಲ್ಲಿ ತನಕ ಅವರಿಂದ ಯಾವ ಉತ್ತರ ಬಂದಿಲ್ಲ & ಹಾಗು ಚರ್ಚೆಗೆ ಬನ್ನಿ ಅಂತ ಬೇಕಾದಷ್ಟು ಕಾರ್ಯಕ್ರಮಗಳಲ್ಲಿ ಗಣೇಶ್ ಹೇಳಿದಕ್ಕು ಇನ್ನು ಕೂಡ ಅವ್ರು ಬಂದಿಲ್ಲ…ಸೊ ವಿಷಯ ಹಾಗಿರುವಾಗ ಶಂಕರ ಭಟ್ಟರ ಪುಸ್ತಕದ ಬಗ್ಗೆ ಹೆಚ್ಚಿಗೆ ಸಮಯ ವ್ಯರ್ಥ ಮಾಡಲು ನಾನು ತಯಾರಿ ಇಲ್ಲ !
    >>> ದೇಶಕಾಲದಲ್ಲಿ ಶ.ಗಣೇಶ್ ಅವರಿಗೆ ಕಿರಣ್ ರಾವ್ ಕೊಟ್ಟ ಉತ್ತರಕ್ಕೆ ಗಣೇಶ್ ಅವರಿಂದಲೂ ಯಾವುದೇ ಉತ್ತರ ಬಂದಿಲ್ಲ. ಬಿಡಿ, ಶಂಕರ ಭಟ್ಟರು ಪ್ರತಿಪಾದಿಸುವ ಕಲಿಕೆಯಲ್ಲಿನ ತೊಂದರೆಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ನಿಮಗಾದಲ್ಲಿ ಸಂತೋಷ. ನಾನು ಓದಿದ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದ ಹೆಚ್ಚಿನವರು ಸಮಾಜದ ದೃಷ್ಟಿಯಲ್ಲಿ ಕೆಳ ಜಾತಿ ಅನ್ನಿಸಿಕೊಂಡಿರುವ ಹುಡುಗರು. ಅಲ್ಲಿ ಗಣಿತ, ವಿಜ್ಞಾನದ ವಿಷಯಗಳು ಅವರಿಗೆಲ್ಲ ಹೇಗೆ ಕಬ್ಬಿಣದ ಕಡೆಲೆಯಾಗಿತ್ತು ಅನ್ನುವುದು ನನಗೆ ಗೊತ್ತು.

    ಅತೀ ಸಂಸ್ಕೃತದ ಬಳಕೆಯಿಂದ ಕನ್ನಡ ಮಾಧ್ಯಮದ ಕಲಿಕೆ ನಿಜಕ್ಕೂ ಕಗ್ಗಂಟಾಗಿದೆ. ನನ್ನ ಬ್ಲಾಗ್ ನಲ್ಲಿ ನಡೆದ ಈ ಚರ್ಚೆಯನ್ನು ಗಮನಿಸಿ:
    My post:
    http://thatskannada.oneindia.in/literature/my-karnataka/2009/1024-solve-the-problem-and-win-prize.html

    Principal’s reply:
    http://thatskannada.oneindia.in/literature/my-karnataka/2009/1026-god-save-kannada-medium-students.html
    And My reply to Principal:
    http://vasantabanda.blogspot.com/2009/10/thatskannada-dalli-nadeda-charchege.html

    -> …ವೇದ,ಉಪನಿಷತ್,ಆಯುರ್ವೇದ ಗಳ ಬಗ್ಗೆ ಸಂಸ್ಕೃತ – ಕನ್ನಡ ಭಾಷಾಂತರ ಪುಸ್ತಕಗಳು ಇವೆ…ಯಾಕೆ ಆಗಿಲ್ಲ ಕೆಲಸ…ಬರಿ ಕನ್ನಡ ಭಾಶೇನೆ ಓದಿ ಜೀವನ ನಡೆಸಿ ಅಂತ ಹೇಳಿದ್ರೆ ಯಾರು ಬರ್ತಾರೆ ಮುಂದೆ…..ಯಾರು ಬರಲ್ಲ…..ನೀವು ಬರಲ್ಲ….ಸಂಸ್ಕ್ರತ ಭಾಷೆಗೆ ಆ horizon ಇದೆ ಅದಕ್ಕೆ ಆ ಪ್ರಾಮುಖ್ಯತೆ… ಮಾವಿನ ಹಣ್ಣು ಬೇಕು ಆದ್ರೆ ಮಾವಿನ ಮರ ಬೇಡ ಅನ್ನೋ ಥರ ಇದೆ ನಿಮ್ಮ ವಾದ!…
    >>> ವೇದ, ಉಪನಿಷತ್ ನಂತಹ ಬಿಡುಗಡೆಯ ವಿದ್ಯೆಗಳು ಕನ್ನಡಕ್ಕೆ ಸಾಕಷ್ಟು ಅನುವಾದವಾಗಿದೆ. ಸಂತೋಷ. ಆದ್ರೆ ಕನ್ನಡದಲ್ಲಿ ಬದುಕಿನ ವಿದ್ಯೆಯೊಂದೂ ಇಲ್ಲದಿರುವುದು ತಮ್ಮ ಕಣ್ಣಿಗೆ ಕಾಣಿಸದಿರುವುದು ದುರಂತ. ಸಂಸ್ಕೃತವನ್ನು ಹೊಗಳುವ ಭರದಲ್ಲಿ ನಿಮ್ಮದೇ ತಾಯ್ನುಡಿಯಾದ ಕನ್ನಡ paralysed ಅನ್ನುವ ತೀರ್ಮಾನಕ್ಕೆ ಬರದಿರಿ. ಈ ದಿನದ ಬದುಕಿನ ವಿದ್ಯೆಗಳಾವುದು ಸಂಸ್ಕೃತದಲ್ಲೂ ಇಲ್ಲ. ಅದು ಇರುವುದು ತಕ್ಕ ಮಟ್ಟಗೆ ಇಂಗ್ಲಿಷ್ ನಲ್ಲಿ, ಆ ಶಕ್ತಿ ಕನ್ನಡಕ್ಕೆ ಕೊಡಿಸುವುದು ಕನ್ನಡಿಗರ ಸರ್ಕಾರದ ಆದ್ಯತೆಯಾಗಬೇಕೇ ವಿನಹ ಖಾಸಗಿ ಪುಸ್ತಕ ಮೇಳ ಪ್ರಾಯೋಜಿಸಲಲ್ಲ ಅನ್ನುವ ನನ್ನ ಮಾತಿಗೆ ನಾನು ಈಗಲೂ ಬದ್ಧ.

    -> …ದೊಡ್ಡ ಸಂಘಟನೆ ಅಂತಿರಿ (ಒಂದೆರಡು ಘಟನೆನಲ್ಲಿ ಚೂರು ನಾನು ಒಪ್ಪಬಹುದು)… ಆದ್ರೆ ಭಾಷೆಗೆ ಬೇಕಾಗಿರೋದು ಸಾಹಿತ್ಯದಲ್ಲಿ ಆಗುವ ಕೃಷಿ ಹೊರತು ಕಲ್ಲು ಹೊಡಿಯೋದು,ಬೇರೆಯವರಿಗೆ ಕಪ್ಪು ಬಣ್ಣ ಹಚ್ಚೋದು ಅಲ್ಲ…ಹಾಗಿದ್ರೆ ನಮ್ಮ ಕುವೆಂಪು,ಬೇಂದ್ರೆ,ಭೈರಪ್ಪನವರು ಬರಿ ರಸ್ತೆಗಿಳುದು ಹೋರಾಟನೆ ಮಾಡಿರೋವ್ರು ಗುರು!…ತಾವು ಹೋದ ವರ್ಷ ವಿಜಯ ಕರ್ನಾಟಕ ಪತ್ರಿಕೆ ನೆ ಓದಿದರು ಅಲ್ಲಿ ಚಿದನಂದಮುರ್ತಿ-ಚಂಪಾ ನಡುವೆ ನಡೆದ debate ನಲ್ಲಿ ಸುಮಾರು ಜನ ಪ್ರೂಫ್ ಸಮೇತ ಹೇಳಿದ್ರು ಏನೇನು ಆಗಿದೆ ಅಂತ…ಅದನ್ನೇ ನಾನು ಇಲ್ಲಿ ಪ್ರಶ್ನಿಸಿದ್ದು ಅಷ್ಟೇ… ಅದನ್ನ ತಾವು ಕೋರ್ಟ್-ಕಾನುದು ಅಂದ್ರೆ ಏನ್ ಹೇಳೋದು ಸ್ವಾಮಿ…ನೀವು ಆ ಸಂಘಟನೆಯ spokesperson ಥರ ಮಾತಾಡ್ತಾ ಇದಿರಿ ಸರ್! …. (ಇಲ್ಲಿ ತಾವು ನನಗೆ ಗೆಳೆಯ ಅಂತ ಗೌರವದಿಂದ ಕಂಡಿದಕ್ಕೆ ನಾನು ನಿಮ್ಮಲ್ಲಿ ಅದೇ ಗೌರವದಿಂದ ಕೇಳ್ತಾ ಇರೋದು 🙂 )
    >>> ಕುವೆಂಪು, ಬೈರಪ್ಪ ಬರೆದಿರೋದ್ರಿಂದ ಕನ್ನಡದ ಗಡಿ, ನೆಲ, ಜಲ, ಸಾರ್ವಭೌಮತ್ವದ ಸಮಸ್ಯೆಗಳು ಬಗೆಹರಿದಿಲ್ಲ. ಅದು ತಕ್ಕ ಮಟ್ಟಿಗಾದರೂ ಬದಲಾಗಿದೆ ಅಂದರೆ ಅದು ಕನ್ನಡ ಪರ ಸಂಘಟನೆಗಳ ಬೀದಿ ಹೋರಾಟದಿಂದಲೇ ಅನ್ನುವುದನ್ನು ಮರೆಯದಿರಿ. ನಾನು ಯಾವ ಸಂಘಟನೆಯ ಪ್ರತಿನಿಧಿಯೂ ಅಲ್ಲ. ಯಾರ ಮೇಲೆಯೇ ಆಗಲಿ ಆರೋಪ ಮಾಡುವ ಮುನ್ನ ಆಧಾರಗಳನ್ನಿಟ್ಟುಕೊಂಡು ಮಾಡುವುದು ಸರಿಯಾದದ್ದು ಅನ್ನುವುದನ್ನು ನಂಬಿರೋನು. ಇವತ್ತು ಕುವೆಂಪು, ಬೇಂದ್ರೆನೂ ಬೇಕು, ಕನ್ನಡ, ಕನ್ನಡಿಗರ ಬದುಕಿನ ಸಮಸ್ಯೆಗಳಿಗಾಗಿ ಬೀದಿ ಹೋರಾಟಗಳು ಬೇಕು. ಸಾಹಿತ್ಯದಿಂದ ಎಲ್ಲ ಆಗ್ ಬಿಡುತ್ತೆ ಅನ್ನೋ ಭ್ರಮೆ ಬೇಡ ಗೆಳೆಯ.

    -> ನಾನು ಈ ದೇಶಾನೆ ನಂದು ಅಂತ ಹೇಳೋ ವ್ಯಕ್ತಿ ಸರ್….ಅದರಲ್ಲಿ ಕರ್ನಾಟಕ ಇರೋದು …
    >> ದೇಶಕ್ಕೆ ಯಾಕೆ ನಿಲ್ತಿರಾ? ಇಡೀ ಪ್ರಪಂಚಾನೇ ನಮ್ಮದು ಅನ್ನಬೇಕು ರೀ. ವಿಶ್ವ ಮಾನವರಾಗಿ ಅಂತ ನಮ್ಮ ಕುವೆಂಪು ಹೇಳಿಲ್ವಾ? ಅದ್ಯಾಕೆ ದೇಶಕ್ಕೆ ನಿಂತು ಬಿಟ್ರಿ..

    -> ಸೊ ಹಾಗಾಗಿ ಪ್ರತ್ಯೇಕವಾಗಿ ಹೇಳೋ ಅಗತ್ಯ ಇಲ್ಲ…ಸರಿ ಸ್ವಾಮಿ ನನ್ನ ಪಕ್ಕಾದ ಮನೆ ಇರೋವ್ನು ಕನ್ನಡಿಗನೇ….ಸೊ ಅವ್ನು ನನ್ನ ಆಸತಿ ಕೇಳ್ತಾನೆ ಅಂತ ಬರೆದು ಕೊಡಕ್ಕೆ ಆಗತ್ತ… ಜೀವನ ನಡೆಸಲು ಬೇಕಾಗಿರೋದು ಕೆಲಸದ ಮನೋಭಾವವೇ ಹೊರತು ಭಾಷೆ ಒಂದೇ ಅಲ್ಲ… ಒಬ್ಬ ಬಡವನಿಗೆ ಹೋಗಿ ಭಾಷೆ ಮುಕ್ಯನೋ ಹಣ ಮುಖ್ಯನೆ ಅಂತ ಕೇಳಿದ್ರೆ ಅವನು choose ಮಾಡೋದು ಯಾವ್ದು ಅನ್ನೋದು ನಿಮಗೂ ಗೊತ್ತು…
    >> ನಿಮಗೆ ನಾನು ಹೇಳಿದ್ದು ಅರ್ಥ ಆಗಿಲ್ಲ. ಜೀವನ ನಡೆಸೊದಕ್ಕೆ ಬೇಕಿರೋ ವಿದ್ಯೆ ಕನ್ನಡದಲ್ಲಿ ತರುವ ಪ್ರಯತ್ನ ಆಗಬೇಕು, ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಅಂದೆ. ಭಾಷೆ ಮುಖ್ಯಾನೇ ಹಣ ಮುಖ್ಯಾನೋ ಅನ್ನೋ ಪ್ರಶ್ನೆನೇ irrelevant ಇಲ್ಲಿ.

    -> ೮೩% ಮಕ್ಕಳು ಬರಿ ಕನ್ನಡ ಒಡತ ಇಲ್ಲ ಸರ್…ಅವ್ರು ಕನ್ನಡ ಭಾಷೆ ಮುಖಾಂತರ ವಿಜ್ಞಾನ,ಸಮಾಜ,ಭೂಗೋಳ,ಗಣಿತ ಎಲ್ಲಾನು ಒಡತ ಇದಾರೆ….. ಅದು ಎಲ್ಲಿ ತನಕ ಬರಿ ೧೦ನೆ ತರಗತಿ ತನಕ..ಆಮೇಲೆ ಓದೋದು ಎಲ್ಲ ಇಂಗ್ಲಿಷ್ ಭಾಶೆಯಲ್ಲೇ…ಯಾಕೆ ಅಂದ್ರೆ ಆಗ ಬೇಕಾಗೋದು ಜೀವನದ ಪ್ರಮುಖ್ಯತೇನೆ ಹೊರತು ಭಾಷೆ ಅಲ್ಲ!… ಜೀವನ ಪದ್ಧತಿ ಅರ್ತ ಆಗಬೇಕು ಅಂದ್ರೆ ಜೀವನ ನಡೆಸುವ ಆದ್ಯತೆ ಬೇಕೇ ಹೊರತು ಯಾವದೋ ಸಾಫ್ಟ್ವೇರ್ ಕಂಪನಿ ಯ cubicle ನಲ್ಲಿ ಕೂತು ಅಲ್ಲ ಅನೋ ಸತ್ಯ ನಮಗೂ ಗೊತ್ತು ಸ್ವಾಮಿ!…
    >>> ೮೩% ಮಕ್ಕಳು ಕನ್ನಡ ಓದೋದಲ್ಲ ಗೆಳೆಯ. ಕನ್ನಡ ಮಾಧ್ಯಮದಲ್ಲಿ ಓದ್ತಾ ಇರೋದು ಅಂದಿದ್ದು. ಸ್ವಲ್ಪ ಸಮಾಧಾನದಿಂದ, ನಿಧಾನಕ್ಕೆ ನನ್ ಮಾತು ಓದಿದ್ರೆ ಒಳ್ಳೆದು. ಜೀವನಕ್ಕೆ ಇಂಗ್ಲಿಷ್ ಬೇಕಿರೋದು ಹೌದು, ಆದ್ರೆ ಅದು ನಾಡಿನ ಎಲ್ಲ ಮಕ್ಕಳಿಗೂ ಕೊಳ್ಳೊಕಾಗೋ ಟಿಕೇಟು ಅಂದುಕೊಂಡ್ರಾ?

    -> …ಸರಿ ನಿಮ್ಮ ಮಾತು ಒಪ್ಪೋಣ..ತಾವು ಎಲ್ಲರನ್ನು ಓದಿಕೊಂದಿದ್ರಿ ಅನ್ನೋದು….ತಾವು ಓದಿ ಕೊಂಡಿದ್ರೆ ಶಂಕರ ಭಟ್ಟರ ಪುಸ್ತಕ ಪ್ರಸ್ತಾಪ ಮಾಡ್ತಾ ಇರಲಿಲ್ಲ ಅನ್ಕೊತಿನಿ !!!… ಪ್ರಪಂಚದಲ್ಲಿ ಎಲ್ಲಾನು ನಾನೇ ಕಂಡು ಹೀಡಿತಿನಿ ಅಂತ ಹೋಗಕ್ಕೆ ಆಗೋಲ್ಲ…ಹಾಗೇನು ಎಲ್ಲಾನು ನಾನೇ ಓದ್ತೀನಿ ಅಂತ ಹೇಳೋಕ್ಕೆ ಆಗಲ್ಲ…ಕೆಲವೊಂದು ಸಲ ಬೇರೆಯವರ ನಿರ್ಧರಗಳನ್ನು ನಾವು ಒಪ್ಪಬೇಕಗತ್ತೆ…
    >> ಮತ್ತದೇ ತಪ್ಪು. ಯಾರನ್ನೇ ಓದಿಕೊಂಡರೂ ಕುರುಡಾಗಿ ಯಾರನ್ನು ಹಿಂಬಾಲಿಸಬೇಡಿ. ನಿಮಗೆ ನಿಮ್ಮದೇ ಆದ ಸ್ವಂತ ಅಭಿಪ್ರಾಯವಿರಲಿ. ನಾನು ಎಲ್ಲೂ ಎಲ್ಲಾನೂ ಓದಿಕೊಂಡಿದೀನಿ ಎಂದು ಹೇಳಿಲ್ಲ. ನೀವು ಯಾರನ್ನು ಹೆಸರಿಸಿದಿರೋ, ಅವರ ಸಾಹಿತ್ಯ ಓದಿದ್ದೇನೆ. ಯಾವುದು ಒಪ್ಪಬೇಕೋ ಒಪ್ಪಿದ್ದೇನೆ. ಯಾವುದು ಒಪ್ಪಲಾಗಲಿಲ್ಲವೋ ಅದನ್ನು ಒಪ್ಪಿಲ್ಲ.

    ಉತ್ತರ
    • Kuamara S's avatar
      Kuamara S
      ಜನ 26 2011

      >> ಸೇಡಿಯಾಪು ಕೃಷ್ಣ ಭಟ್ಟರ ಪುಸ್ತಕ ಓದಿದರೆ ಅದರಲ್ಲಿ ಸಂಸ್ಕೃತಕ್ಕೂ ಮತ್ತು ಭಾರತದ ಭಾಷೆಗಳಿಗೂ ಇರುವ ಸಂಭಂದ ಏನು ಅಂತ ತಮಗೆ ತಿಳಿಯತ್ತೆ…

      >>ಈ ತಮಿಳ್ನಾಡಿನಲ್ಲಿ ಹುಟ್ಟಿ ಬಂದ ಚಳುವಳಿ by ಪೆರಿಯಾರ್ ನಿಂದ ಈ ಆರ್ಯನ್ & ದ್ರಾವಿಡಿಯನ್ ಅನ್ನೋ ಹುಟ್ಟಿತು…..ಅಲ್ಲಿತನಕ ಯಾವ್ದಿತ್ತು?…

      >> ಮೊದಲು ನಿಮ್ಮ dravidan movement theory iro ಮಾತು ಬಿಡಿ ಆಗ ಗೊತ್ತಾಗತ್ತೆ ಸಂಸ್ಕೃತಕ್ಕೂ ಮತ್ತು ಭಾರತದ ಬೇರೆ ಭಾಷೆಗಳಿಗೂ ಇರುವ ಸಂಭಂದ…

      >> ನೀವು ಹೇಳಿದ ಮಹಾನುಭಾವ ಲೇಖಕರ ಸಂಶೋದನೆ ಯಾರು ಒಪ್ಪಿಕೊಳಕ್ಕೆ ಸಾಧ್ಯ ಇಲ್ಲ ಸರ್….ಕರ್ನಾಟಕ ದಲ್ಲಿ ಚಿದಾನಂದ ಮೂರ್ತಿ ಅವರಿಗಿಂತ ಕನ್ನಡಲ್ಲಿ ಬೇರೆ ಸಂಶೋಧಕರು ಬೇಕಾ?

      >> ಸ್ವಾಮಿ ನಾನು ಹೇಳಿದ್ದು ನಿಮ್ಮ ಗುರುಗಳಾದ ಸಂಕರ ಬಟರ ಬಗ್ಗೆ ಹೊರತು ಬ ರ ಕಿರಣ್ ಅಲ್ಲ…ಕಿರಣ್ ಮಾಡಿದ್ದು ಬರಿ ವೈಯಕ್ತಿಕ ನಿಂದನೆ ಹೊರತು ಗಣೇಶ್ ಕೇಳಿದ ಯಾವದೇ ಪ್ರಶ್ನೆಗೂ ಉತ್ತರ ನೀಡಿಲ್ಲ… Its just spit & run !….ಅದರ ಬಗ್ಗೆ ಹೆಚ್ಚಿನ ಉತ್ತರ ಬೇಕಾದರೆ ಗಣೇಶ್ ಬರೆದಿರುವ “ಹಾಸು-ಬೀಸು” ಪುಸ್ತಕ ಓದಿ..ಅಲ್ಲಿ ನಿಮ್ಮ ಗುರುಗಳ ಸಂಶೋದನೆ ಬಗ್ಗೆ & ಕಿರಣ್ ಗೆ (ದೇಶ-ಕಾಲ ೧೫ ನೆ ಸಂಚಿಕೆ ) ಬಗ್ಗೆ ಸರಿಯಾಗೇ ಹೇಳಿದಾರೆ…..

      >>ಕನ್ನಡದಿಂದ ಮಾತ್ರ ಬದುಕಿನ ವಿದ್ಯೆ ಬರತ್ತೆ ಅನ್ನೋದು ನಿಮ್ಮ ಬ್ರಹ್ಮೆ… ಎಷ್ಟು ಜನ ಕನ್ನಡ ಮೀಡಿಯಂ ಒಡತ ಇದಾರೆ ಈಗ…. ಒಂದು ಕಾಲದಲ್ಲಿ ಅತಿ ಹೆಚ್ಚು ಕನ್ನಡ ಮಾಧ್ಯಮಕ್ಕೆ ಸೇರ್ತ ಇರೋ ಉತ್ತರ ಕರ್ನಾಟಕ ಜನ ಕೂಡ ಈಗ ತಮ್ಮ ಮಕ್ಕಳಿಗೆ ಇಂಗ್ಲಿಸ್ ಮಾಧ್ಯಮಕ್ಕೆ ಸೇರಿಸ್ತ ಇದಾರೆ….. ಸಂಸ್ಕ್ರೃತ ದಲ್ಲಿ ಈ ದಿನದ ಬದುಕಿನ ಯಾವದೇ ವಿದ್ಯೆಗಳು ಇಲ್ಲ ಅನ್ನೋದು ಅದು ನಿಮ್ಮ ಅಭಿಪ್ರಾಯ ಅಷ್ಟೇ…ಸಂಸ್ಕೃತ ಮೇಳಕ್ಕೆ ಬಂದಿದ್ರೆ ಗೊತ್ತಾಗಿರೋದು ಅದರ ವ್ಯಾಪ್ತಿ ಏನು ಅಂತ…..ಅದರ ಹತ್ತಿರನೇ ಸುಳಿಯದೇ ಹೇಳೋದು ನೋಡಿದ್ರೆ ನಗಬೇಕು ಅಷ್ಟೇ ನಿಮ್ಮ ಮಾತಿಗೆ !

      …. ಯಾರು ತಮಗೆ ಈ logic ಹೇಳಿದ್ದು …ಭಾಷೆಯಿಂದ ಅರ್ಥ ಮಾಡ್ಕೊಳಕ್ಕೆ ಗಣಿತ, ವಿಜ್ಞಾನ ಅನ್ನೋದು ಕಷ್ಟ ಆಗಿದೆ ಅಂತ…..ನೀವು ಯಾರು ಒಂದು ಇಬ್ಬರನ್ನ ಕೇಳಿದ್ರೆ…. ಅಲ್ಲಿ ಮುಖ್ಯ ವಾಗಿರೋದು logical/reasoning skills ಹೊರತು ಭಾಷೆ ಅಲ್ಲ… …ನಿಮ್ಮ ಗುರುಗಳು ಹೇಳಿರುವ ಪ್ರಖರ ಅದನ್ನ ಮಾಡಿದ್ರೆ ಅದರಿಂದ ಮಕ್ಕಳಿಗೆ ಯಾವದೇ ಪ್ರಯೋಜನ ಆಗೋಲ್ಲ !

      >>….ಸಾಹಿತ್ಯದ ಕೃಷಿ ಇಂದ ತಾನೆ ಭಾಷೆ ಬೆಳಿಯೋದು… ಅದು ಬರಿ ಕಲ್ಲು ಎಸಿಯೋದು,ಮುಖಕ್ಕೆ ಮಸಿ
      ಮಸಿ ಬಳಿಯೋದ್ರಿಂದ ಅಲ್ಲ…ಕನ್ನಡಕ್ಕೆ classical status ಸಿಗಬೇಕಾದರೆ ಅದಕ್ಕೆ ಸಹಾಯ ಆಗಿದ್ದು ಸಂಶೋದನೆ ಹೊರತು ಬಿಡಿ ರಂಪ ಅಲ್ಲ…classical status ಕೊಡಬೇಕಾದರೆ ಅವ್ರು ಕೇಳೋದು ಸಂಶೋದನೆಯ ಪುರಾವೆಗಳನ್ನೇ ಹೊರತು ಎಷ್ಟು ಹೊತ್ತು ಬಂದು ಬಿಡಿನಲ್ಲಿ ಗಲಾಟೆ ಮಾಡಿದ್ರಿ ಅಂತ…ನೀವು ಹೇಳಿರುವ ಸಂಘಟನೆಯ ಬಗ್ಗೆ ಪುಅರವೇ ಬೇಕು ಅಂದ್ರೆ news channels ನೋಡಿದ್ರೆ ಸಾಕಲ್ಲ… ಅಲ್ಲಿ ಪ್ರವೀನ್ ಶೆಟ್ಟಿ ಬಳಗ ಇನ್ನೊಂದು ಕರವೇ ಸಂಘಟನೆಯ ಅಧ್ಯಕ್ಷರ ಬಗ್ಗೆ ಅವ್ರು ಮಾಡಿರುವ ರಾಡಿ ಹೇಳ್ತಾರಲ್ಲ…. ಅದೆಲ್ಲ ನಾವು ನೋಡಿರೋದೆ ಸ್ವಾಮಿ ಟಿವಿ ನಲ್ಲಿ ಅದನ್ನೇ ನಾನು ಹೇಳಿದ್ದು ನಿಮಗೆ…..

      >>…ನಾವು ದೇಶಾಭಿಮಾನಿಗಳು ಸ್ವಾಮಿ…ನಮಗೆ ಅಷ್ಟೇ ಸಾಕು….atleast ನಮ್ಮ ಯೋಚನೆ ಬರಿ ರಾಜ್ಯಕ್ಕೆ ಸೀಮಿತ ಆಗಿಲ್ಲ ಅನ್ನೋ ಖುಶಿ ಇದೆ….. ಪ್ರಪಂಚಾನ ನೀವೇ ಇಟ್ಕೊಳ್ಳಿ !

      –> ತಾವು ಹೇಳಿರೋದು ಅರ್ಥ ಮಾಡಿಕೊಂಡೆ ಅದನ್ನ ಹೇಳಿದ್ದು… ಕನ್ನಡ ಭಾಷೆ ಇಂದಾನೆ ಎಲ್ಲ ಸಿಗೋ ಹಾಗಿದ್ರೆ ಪಾಪ ಆ ಉತ್ತರ ಕರ್ನಾಟಕದ ರೈತ ಜನ ಯಾಕೆ ಬಂದು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ಇದ್ದರು?

      –>ಎಲ್ಲಿ ಸ್ವಾಮಿ ೮೩% ಹುಡಗರು ಕನ್ನಡ ಮಾಧ್ಯಮದಲ್ಲಿ ಓದ್ತಾ ಇದಾರೆ…ನಿಮ್ಮಲ್ಲಿ ಪುರಾವೆ ಇದ್ದಾರೆ ಕೊಡಿ….ಎಲ್ಲ ಕಡೇನೂ ಬರಿ ಇಂಗ್ಲಿಷ್ ಮಯಾ ಆಗಿದೆ… ಒಂದು ಕಾಲದಲ್ಲಿ ರೈತರು ತಮ್ಮ ಮಕ್ಕಳನ್ನ ಕನ್ನಡ ಮೀಡಿಯಂ ಗೆ ಕಲ್ಸ್ತ ಇರೋವ್ರು ಈಗ ಇಂಗ್ಲಿಷ್ ಮೀಡಿಯಂ(convent)ಗೆ ಕಳಸ್ತ ಇದಾರೆ….

      –> ಬೇರೆಯವರು ಹೇಳಿರೋದನ್ನ ಕುರುಡಾಗಿ ಒಪ್ಪೋ ಜಾಯಮಾನ ನಂದು ಅಲ್ಲ ಸ್ವಾಮಿ….ಅವ್ರು ಮಾಡಿರುವ ಆಳವಾದ ಸಂಶೋದನೆ ಇಂದ ಹಾಗು ಅವ್ರು ತಮ್ಮ ಸಂಶೋದನೆಯನ್ನ ಬೇರೆ critics ಹತ್ತಿರ ಸಾಧಿಸಿ ತೋರಿಸದಗ್ಲೆ ಅದನ್ನ ಒಪ್ಪಿರೋದು… ನೀವು ಸಂಕರ ಬಟರ ಪುಸ್ತನ ಓದಿ ಅದನ್ನೇ ಸಂಶೋಧನೆ ಅಂತ ಹೇಳೋಕ್ಕೆ ಹೊರಟಾಗ ನಾನು ಕೂಡ ನಿಮಗೆ ಅದನ್ನೇ ಹೇಳೋದು ” ಯಾರನ್ನೇ ಓದಿಕೊಂಡರೂ ಕುರುಡಾಗಿ ಯಾರನ್ನು ಹಿಂಬಾಲಿಸಬೇಡಿ” !

      ಉತ್ತರ
      • ವಸಂತ's avatar
        ಜನ 27 2011

        >> ಸೇಡಿಯಾಪು ಕೃಷ್ಣ ಭಟ್ಟರ ಪುಸ್ತಕ ಓದಿದರೆ ಅದರಲ್ಲಿ ಸಂಸ್ಕೃತಕ್ಕೂ ಮತ್ತು ಭಾರತದ ಭಾಷೆಗಳಿಗೂ ಇರುವ ಸಂಭಂದ ಏನು ಅಂತ ತಮಗೆ ತಿಳಿಯತ್ತೆ…
        >>ಈ ತಮಿಳ್ನಾಡಿನಲ್ಲಿ ಹುಟ್ಟಿ ಬಂದ ಚಳುವಳಿ by ಪೆರಿಯಾರ್ ನಿಂದ ಈ ಆರ್ಯನ್ & ದ್ರಾವಿಡಿಯನ್ ಅನ್ನೋ ಹುಟ್ಟಿತು…..ಅಲ್ಲಿತನಕ ಯಾವ್ದಿತ್ತು?…

        ==> ನಾನು ಈ ಮೊದಲೇ ಹೇಳಿದಂತೆ ಆರ್ಯನ್ ದಾಳಿ ಥಿಯೇರಿ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ಕನ್ನಡ, ತಮಿಳು, ತೆಲುಗು,ಮಲಯಾಳಂ,ತುಳು ಒಂದು ನುಡಿ ವರ್ಗಕ್ಕೆ ಸೇರಿದ್ದು ಅನ್ನೋದ್ರ ಬಗ್ಗೆ ಯಾರಿಗೂ ಸಂದೇಹವಿಲ್ಲ. ಸಂಸ್ಕೃತದ ಹೆಚ್ಚು ಹೆಚ್ಚು ಪದಗಳು ಕನ್ನಡಕ್ಕೆ ಬಂದಿದ್ದೇ ಬರಹದ ಮೂಲಕ ಹೊರತು, ಮಾತಿನ ಮೂಲಕವಲ್ಲ. ಬರೀ ಮಾತಿನ ರೂಪದಲ್ಲಷ್ಟೇ ಭಾಷೆ ಹೆಚ್ಚು ಬಳಕೆಯಾಗುತ್ತಿದ್ದ ದಿನಗಳಲ್ಲಿ ಭಾಷೆಯ ಸ್ವರೂಪ ಏನಿತ್ತು? ತಂದೆ-ತಾಯಿ-ಅಣ್ಣ-ಅಕ್ಕ-ತಮ್ಮ-ತಂಗಿ, ಕೈ, ಬಾಯಿ, ಕಾಲು, ಊಟ, ತಿಂಡಿ, ನಿದ್ದೆ, ನಾಯಿ, ಬೆಕ್ಕು, ಕುದುರೆ ಹೀಗೆ ದಿನ ನಿತ್ಯದ ಬದುಕಿನಲ್ಲಿ ಬಳಕೆಯಾಗುತ್ತಿದ್ದ ಹೆಚ್ಚಿನ ಪದಗಳನ್ನು ಗಮನಿಸಿ. ಅವೆಲ್ಲ ಕನ್ನಡದ ಪದಗಳೇ ಆಗಿವೆ. ಯಾಕೆ ಸಂಸ್ಕೃತದ ಪಿತಾ- ಮಾತಾ-ಸಹೋದರ-ಸಹೋದರಿ-ಹಸ್ತ-ಪಾದ-ಭೋಜನ-ಉಪಹಾರ-ಶ್ವಾನ-ಮಾರ್ಜಾಲ, ಆಶ್ವ ಮುಂತಾದ ಸಂಸ್ಕೃತ equivalents ದಿನ ಬಳಕೆಯ ಪದಗಳಾಗಿ ಬಳಕೆಯಲ್ಲಿಲ್ಲ ? ಯಾಕೆ ಬರಹ ರೂಪದ formal ಕನ್ನಡದಲ್ಲಿ ಮಾತ್ರ ಇವುಗಳ ಬಳಕೆಯಾಗುತ್ತೆ? ಒಂದು ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿದೆ ಅನ್ನುವುದಕ್ಕೆ ಇರಬೇಕಾದ ದೊಡ್ಡ ಆಧಾರವೆಂದರೆ ಆ ಎರಡು ಭಾಷೆಗಳಲ್ಲಿರುವ ಸಾಮ್ಯತೆ ಗುರುತಿಸುವುದಲ್ಲ. ಆ ಎರಡು ಭಾಷೆಗಳಲ್ಲಿರುವ ವ್ಯತ್ಯಾಸಕ್ಕೆ ಲಾಜಿಕಲ್ ಆದ ಕಾರಣ ನೀಡುವುದು. ಸಂಸ್ಕೃತಕ್ಕೂ, ಕನ್ನಡಕ್ಕೂ ಇರುವ ವ್ಯತ್ಯಾಸಗಳನ್ನು ಹೇಗೆ ವಿವರಿಸುವಿರಿ?
        ತಮಿಳು-ತೆಲುಗು-ಕನ್ನಡ ದಲ್ಲೂ ಸಂಬಂಧ, ದಿನ ನಿತ್ಯದ ಬಳಕೆಯ ಪದಗಳನ್ನು ವಿವರಿಸುವ ಹೆಚ್ಚಿನ ಪದಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಇದೇ ಸಾಮ್ಯತೆ ಸಂಸ್ಕೃತದಿಂದ ಹುಟ್ಟಿದ ಭಾಷೆಗಳಿಗೂ ದ್ರಾವಿಡ ನುಡಿಗಳಿಗೂ ಖಂಡಿತ ಇಲ್ಲ. ಇದನ್ನು ಮೊದಲು ತಿಳಿಯುವ ಪ್ರಯತ್ನ ಮಾಡಿ, ಆಗ ಸತ್ಯ ಗೊತ್ತಾದೀತು.

        >> ಸ್ವಾಮಿ ನಾನು ಹೇಳಿದ್ದು ನಿಮ್ಮ ಗುರುಗಳಾದ ಸಂಕರ ಬಟರ ಬಗ್ಗೆ ಹೊರತು ಬ ರ ಕಿರಣ್ ಅಲ್ಲ…ಕಿರಣ್ ಮಾಡಿದ್ದು ಬರಿ ವೈಯಕ್ತಿಕ ನಿಂದನೆ ಹೊರತು ಗಣೇಶ್ ಕೇಳಿದ ಯಾವದೇ ಪ್ರಶ್ನೆಗೂ ಉತ್ತರ ನೀಡಿಲ್ಲ… Its just spit & run !….ಅದರ ಬಗ್ಗೆ ಹೆಚ್ಚಿನ ಉತ್ತರ ಬೇಕಾದರೆ ಗಣೇಶ್ ಬರೆದಿರುವ “ಹಾಸು-ಬೀಸು” ಪುಸ್ತಕ ಓದಿ..ಅಲ್ಲಿ ನಿಮ್ಮ ಗುರುಗಳ ಸಂಶೋದನೆ ಬಗ್ಗೆ & ಕಿರಣ್ ಗೆ (ದೇಶ-ಕಾಲ ೧೫ ನೆ ಸಂಚಿಕೆ ) ಬಗ್ಗೆ ಸರಿಯಾಗೇ ಹೇಳಿದಾರೆ…..
        ==> ದೇಶ ಕಾಲ ೧೫ನೇ ಸಂಚಿಕೆ ಓದಿದ್ದೇನೆ. ಅಲ್ಲಿ ಕೊಟ್ಟ ಉತ್ತರವೆಲ್ಲ ಹಾರಿಕೆಯದ್ದು. ಬರೀ ೩% ಮೇಲ್ವರ್ಗದ ಜನರ ಅಭಿಪ್ರಾಯ, ಹಿತಾಸಕ್ತಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಉಳಿದ ೯೭% ಜನರ ಭಾಷೆಯ ಬಗ್ಗೆ ವ್ಯಾಖ್ಯಾನಿಸುವ ಮುನ್ನ ಒಮ್ಮೆ ಹಳ್ಳಿಗಳಿಗೆ ಹೋಗಿ ಬನ್ನಿ. ಅಲ್ಲಿನ ಹಳ್ಳಿಗರ ನುಡಿ ಗಮನಿಸಿ. ಅದರಲ್ಲಿ ಎಷ್ಟು ಸಂಸ್ಕೃತ ಇದೆ, ಎಷ್ಟು ಕನ್ನಡವಿದೆ ಅನ್ನುವುದನ್ನು ಗಮನಿಸಿ. ಆಮೇಲೆ ಇನ್ನಷ್ಟು ಮಾತನಾಡೋಣ.

        >>ಕನ್ನಡದಿಂದ ಮಾತ್ರ ಬದುಕಿನ ವಿದ್ಯೆ ಬರತ್ತೆ ಅನ್ನೋದು ನಿಮ್ಮ ಬ್ರಹ್ಮೆ… ಎಷ್ಟು ಜನ ಕನ್ನಡ ಮೀಡಿಯಂ ಒಡತ ಇದಾರೆ ಈಗ…. ಒಂದು ಕಾಲದಲ್ಲಿ ಅತಿ ಹೆಚ್ಚು ಕನ್ನಡ ಮಾಧ್ಯಮಕ್ಕೆ ಸೇರ್ತ ಇರೋ ಉತ್ತರ ಕರ್ನಾಟಕ ಜನ ಕೂಡ ಈಗ ತಮ್ಮ ಮಕ್ಕಳಿಗೆ ಇಂಗ್ಲಿಸ್ ಮಾಧ್ಯಮಕ್ಕೆ ಸೇರಿಸ್ತ ಇದಾರೆ….. ಸಂಸ್ಕ್ರೃತ ದಲ್ಲಿ ಈ ದಿನದ ಬದುಕಿನ ಯಾವದೇ ವಿದ್ಯೆಗಳು ಇಲ್ಲ ಅನ್ನೋದು ಅದು ನಿಮ್ಮ ಅಭಿಪ್ರಾಯ ಅಷ್ಟೇ…ಸಂಸ್ಕೃತ ಮೇಳಕ್ಕೆ ಬಂದಿದ್ರೆ ಗೊತ್ತಾಗಿರೋದು ಅದರ ವ್ಯಾಪ್ತಿ ಏನು ಅಂತ…..ಅದರ ಹತ್ತಿರನೇ ಸುಳಿಯದೇ ಹೇಳೋದು ನೋಡಿದ್ರೆ ನಗಬೇಕು ಅಷ್ಟೇ ನಿಮ್ಮ ಮಾತಿಗೆ !
        ==> ಕನ್ನಡದಿಂದ ಬದುಕಿನ ವಿದ್ಯೆ ಬರುತ್ತೆ ಆದ್ರೆ ಅದಕ್ಕೆ ಮೊದಲು ಕೆಲ್ಸ ಮಾಡಬೇಕು. ಈಗಂತೂ ಕನ್ನಡದಿಂದ ಒಳ್ಳೆಯ ಅನ್ನ ಹುಟ್ಟುತ್ತಿಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಇಂಗ್ಲಿಷ್ ಮಾಧ್ಯಮಕ್ಕೆ ಯಾಕೆ ಸೇರುತ್ತಿದ್ದಾರೆ ಹೇಳಿ ? ಕನ್ನಡಕ್ಕೆ ಯೋಗ್ಯತೆ ಇಲ್ಲ ಅಂತ ತಾನೇ? ಇವತ್ತಿನ ದಿನದ ಜ್ಞಾನ-ವಿಜ್ಞಾನ ಸಂಸ್ಕೃತದಲ್ಲಿದ್ದರೆ ಯಾಕೆ ಪಾಲಕರು ತಮ್ಮ ಮಕ್ಕಳನ್ನು ಸಂಸ್ಕೃತ ಶಾಲೆಗೆ ಕಳಿಸುತ್ತಿಲ್ಲ, ಯಾಕೆ ಇಂಗ್ಲಿಷ್ ಶಾಲೆಗೆ ಕಳಿಸುತ್ತಾರೆ? ಇಂಗ್ಲಿಷ್ ಅಲ್ಲಿರೊ ಬದುಕಿನ ವಿದ್ಯೆ ಕನ್ನಡಕ್ಕೆ ತನ್ನಿ, ಆಗ ಕನ್ನಡಕ್ಕೂ ಬರ್ತಾರೆ. ನನ್ನ ಅನಿಸಿಕೆ ಓದುವ ಕಷ್ಟ ತೆಗೆದುಕೊಳ್ಳಿ, ಸಂಸ್ಕೃತದಲ್ಲಿ ಏನು ಇಲ್ಲ ಎಂದು ನಾನೆಲ್ಲೂ ಹೇಳಿಲ್ಲ. ಏನಿದೆಯೋ, ಅದೆಲ್ಲವೂ ಕನ್ನಡಿಗರಿಗೆ ಕನ್ನಡದಲ್ಲಿ ತಲುಪಲೂ ಬೇಕು ಅಂದಿದ್ದೇನೆ. ಕಾಮಾಲೆ ಕಣ್ಣಿಂದ ನೋಡಿದಾಗ ಎಲ್ಲರೂ ಸಂಸ್ಕೃತ ವಿರೋಧಿಗಳಾಗೇ ಕಾಣುತ್ತಾರೆ.

        …. ಯಾರು ತಮಗೆ ಈ logic ಹೇಳಿದ್ದು …ಭಾಷೆಯಿಂದ ಅರ್ಥ ಮಾಡ್ಕೊಳಕ್ಕೆ ಗಣಿತ, ವಿಜ್ಞಾನ ಅನ್ನೋದು ಕಷ್ಟ ಆಗಿದೆ ಅಂತ…..ನೀವು ಯಾರು ಒಂದು ಇಬ್ಬರನ್ನ ಕೇಳಿದ್ರೆ…. ಅಲ್ಲಿ ಮುಖ್ಯ ವಾಗಿರೋದು logical/reasoning skills ಹೊರತು ಭಾಷೆ ಅಲ್ಲ… …ನಿಮ್ಮ ಗುರುಗಳು ಹೇಳಿರುವ ಪ್ರಖರ ಅದನ್ನ ಮಾಡಿದ್ರೆ ಅದರಿಂದ ಮಕ್ಕಳಿಗೆ ಯಾವದೇ ಪ್ರಯೋಜನ ಆಗೋಲ್ಲ !
        ===> ಗುರುಗಳೇ, ಇದಕ್ಕಿಂತ ಒಳ್ಳೆ ಜೋಕ್ ಸಧ್ಯದಲ್ಲಿ ಕೇಳಿಲ್ಲ. ಇಡೀ ಜಗತ್ತೇ ಕಲಿಕೆಗೆ ತಾಯ್ನುಡಿಗಿಂತ ಒಳ್ಳೆಯ ಸಾಧನವಿಲ್ಲ ಅನ್ನುವುದನ್ನು ಒಪ್ಪಿದೆ. ನೀವು ಹೇಳುವ logical reasoning ಒಬ್ಬ ಮನುಷ್ಯನಿಗೆ ಅವನ ತಾಯ್ನುಡಿಯಲ್ಲಿ ಕಲಿತಾಗ ಹೆಚ್ಚು ಸುಲಭವಾಗಿ ಅರ್ಥ ಆಗುತ್ತೆ ಅನ್ನುವ ಬೇಸಿಕ್ ನಿಮಗೆ ಅರ್ಥವಾಗಿಲ್ಲ. ನನ್ನ ಗುರುಗಳು ಅಂತ ಸಂಬೋಧಿಸುವ ಅಗತ್ಯವಿಲ್ಲ. ಅವರೊಬ್ಬ ಭಾಷಾ ವಿಜ್ಞಾನಿ, ಒಂದಿಷ್ಟು ವಿಷ್ಯಗಳನ್ನು ಹೇಳಿದ್ದಾರೆ. ಅದರ ಸರಿ ತಪ್ಪುಗಳನ್ನು ಕಾಲ, ಜನ ನಿರ್ಧರಿಸಲಿ. ಅವರ ವಯಸ್ಸಿಗೂ ಮರ್ಯಾದೆ ಕೊಡದೇ ಅವರ ಬಗ್ಗೆ ಕೇವಲವಾಗಿ ಮಾತನಾಡುವುದು ಯಾವ ಸಂಸ್ಕೃತಿ ಎಂದು ಅರಿವಾಗಲಿಲ್ಲ.

        >>….ಸಾಹಿತ್ಯದ ಕೃಷಿ ಇಂದ ತಾನೆ ಭಾಷೆ ಬೆಳಿಯೋದು… ಅದು ಬರಿ ಕಲ್ಲು ಎಸಿಯೋದು,ಮುಖಕ್ಕೆ ಮಸಿ
        ಮಸಿ ಬಳಿಯೋದ್ರಿಂದ ಅಲ್ಲ…ಕನ್ನಡಕ್ಕೆ classical status ಸಿಗಬೇಕಾದರೆ ಅದಕ್ಕೆ ಸಹಾಯ ಆಗಿದ್ದು ಸಂಶೋದನೆ ಹೊರತು ಬಿಡಿ ರಂಪ ಅಲ್ಲ…classical status ಕೊಡಬೇಕಾದರೆ ಅವ್ರು ಕೇಳೋದು ಸಂಶೋದನೆಯ ಪುರಾವೆಗಳನ್ನೇ ಹೊರತು ಎಷ್ಟು ಹೊತ್ತು ಬಂದು ಬಿಡಿನಲ್ಲಿ ಗಲಾಟೆ ಮಾಡಿದ್ರಿ ಅಂತ…ನೀವು ಹೇಳಿರುವ ಸಂಘಟನೆಯ ಬಗ್ಗೆ ಪುಅರವೇ ಬೇಕು ಅಂದ್ರೆ news channels ನೋಡಿದ್ರೆ ಸಾಕಲ್ಲ… ಅಲ್ಲಿ ಪ್ರವೀನ್ ಶೆಟ್ಟಿ ಬಳಗ ಇನ್ನೊಂದು ಕರವೇ ಸಂಘಟನೆಯ ಅಧ್ಯಕ್ಷರ ಬಗ್ಗೆ ಅವ್ರು ಮಾಡಿರುವ ರಾಡಿ ಹೇಳ್ತಾರಲ್ಲ…. ಅದೆಲ್ಲ ನಾವು ನೋಡಿರೋದೆ ಸ್ವಾಮಿ ಟಿವಿ ನಲ್ಲಿ ಅದನ್ನೇ ನಾನು ಹೇಳಿದ್ದು ನಿಮಗೆ…..
        ===> ಟಿವಿಯಲ್ಲಿ ಬಿಜೆಪಿ ಬಗ್ಗೆ ಕುಮಾರ್ ಸ್ವಾಮಿನೂ ಅಪವಾದ ಮಾಡ್ತಾನೆ, ಹಾಗಂದ ತಕ್ಷಣ ಬಿಜೆಪಿಯವರೆಲ್ಲ ಕ್ರಿಮಿನಲ್ಸ್ ಆಗಲ್ಲ. ಹಾಗೆಯೇ ಯಾರ ವಿರುದ್ಧ ಆರೋಪ ಮಾಡುವಾಗಲೂ ಸರಿಯಾದ ಆಧಾರವಿಟ್ಟುಕೊಂಡು ಮಾತನಾಡಿ ಎಂದಷ್ಟೇ ಹೇಳುವೆ.

        >>…ನಾವು ದೇಶಾಭಿಮಾನಿಗಳು ಸ್ವಾಮಿ…ನಮಗೆ ಅಷ್ಟೇ ಸಾಕು….atleast ನಮ್ಮ ಯೋಚನೆ ಬರಿ ರಾಜ್ಯಕ್ಕೆ ಸೀಮಿತ ಆಗಿಲ್ಲ ಅನ್ನೋ ಖುಶಿ ಇದೆ….. ಪ್ರಪಂಚಾನ ನೀವೇ ಇಟ್ಕೊಳ್ಳಿ !
        ==> ಕರ್ನಾಟಕದ ನೆಲ, ಜಲ, ಸಂಪತ್ತು ಯಾರ್ ಬಂದು ಕೊಳ್ಳೆ ಹೊಡೆದ್ರೂ ನೀವು ಇದನ್ನೇ ಹೇಳ್ತಿರಾ. ಬಿಡಿ ನಿಮಗೆ ದೇಶಾನೇ ದೊಡ್ಡದು. ಕರ್ನಾಟಕದ ಜನ ತಮ್ಮದೆಲ್ಲ ತ್ಯಾಗ ಮಾಡಿ ಬೀದಿಗೆ ಬಂದ್ರೂ ನಿಮಗದು ಓಕೆ. ಯಾಕಂದ್ರೆ ನಿಮಗೆ ದೇಶಾನೇ ದೊಡ್ಡದು.

        –> ತಾವು ಹೇಳಿರೋದು ಅರ್ಥ ಮಾಡಿಕೊಂಡೆ ಅದನ್ನ ಹೇಳಿದ್ದು… ಕನ್ನಡ ಭಾಷೆ ಇಂದಾನೆ ಎಲ್ಲ ಸಿಗೋ ಹಾಗಿದ್ರೆ ಪಾಪ ಆ ಉತ್ತರ ಕರ್ನಾಟಕದ ರೈತ ಜನ ಯಾಕೆ ಬಂದು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ಇದ್ದರು?
        ==> ಕನ್ನಡದಿಂದ ಎಲ್ಲ ಸಿಗೋ ಹಾಗಾಗಲಿ ಅಂದಿದ್ದು ನಿಮಗೆ ಅರ್ಥಾನೇ ಆಗಿಲ್ಲ. ಹೇಳಿದ್ದನ್ನೇ ಪದೇ ಪದೇ ಹೇಳಬೇಕಲ್ಲ ಅಂತ ಬೇಸರವಾಗ್ತಿದೆ.

        –>ಎಲ್ಲಿ ಸ್ವಾಮಿ ೮೩% ಹುಡಗರು ಕನ್ನಡ ಮಾಧ್ಯಮದಲ್ಲಿ ಓದ್ತಾ ಇದಾರೆ…ನಿಮ್ಮಲ್ಲಿ ಪುರಾವೆ ಇದ್ದಾರೆ ಕೊಡಿ….ಎಲ್ಲ ಕಡೇನೂ ಬರಿ ಇಂಗ್ಲಿಷ್ ಮಯಾ ಆಗಿದೆ… ಒಂದು ಕಾಲದಲ್ಲಿ ರೈತರು ತಮ್ಮ ಮಕ್ಕಳನ್ನ ಕನ್ನಡ ಮೀಡಿಯಂ ಗೆ ಕಲ್ಸ್ತ ಇರೋವ್ರು ಈಗ ಇಂಗ್ಲಿಷ್ ಮೀಡಿಯಂ(convent)ಗೆ ಕಳಸ್ತ ಇದಾರೆ….
        ===> ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವೆಬ್ ಸೈಟ್ ನೋಡಿ. ಸುಮಾರು ೬೬% ಶಾಲೆಗಳನ್ನು ಸರ್ಕಾರವೇ ನಡೆಸುತ್ತಿದೆ. ಸುಮಾರು ೧೭% ಶಾಲೆಗಳು ಸರ್ಕಾರಿ ಅನುದಾನಿತ ಶಾಲೆಗಳಾಗಿವೆ ಮತ್ತು ಅವೆಲ್ಲವೂ ಕನ್ನಡ ಮಾಧ್ಯಮ ಶಾಲೆಗಳು. ಬರೀ ಬೆಂಗಳೂರು ಮತ್ತು ಕೆಲವು ದೊಡ್ಡ ಊರುಗಳನ್ನು ನೋಡಿದವರಿಗೆ ಎಲ್ಲೆಡೆ ಇಂಗ್ಲಿಷ್ ಹಾವಳಿ ಅನ್ನಿಸುವುದು ಸಹಜ.

        –> ಬೇರೆಯವರು ಹೇಳಿರೋದನ್ನ ಕುರುಡಾಗಿ ಒಪ್ಪೋ ಜಾಯಮಾನ ನಂದು ಅಲ್ಲ ಸ್ವಾಮಿ….ಅವ್ರು ಮಾಡಿರುವ ಆಳವಾದ ಸಂಶೋದನೆ ಇಂದ ಹಾಗು ಅವ್ರು ತಮ್ಮ ಸಂಶೋದನೆಯನ್ನ ಬೇರೆ critics ಹತ್ತಿರ ಸಾಧಿಸಿ ತೋರಿಸದಗ್ಲೆ ಅದನ್ನ ಒಪ್ಪಿರೋದು… ನೀವು ಸಂಕರ ಬಟರ ಪುಸ್ತನ ಓದಿ ಅದನ್ನೇ ಸಂಶೋಧನೆ ಅಂತ ಹೇಳೋಕ್ಕೆ ಹೊರಟಾಗ ನಾನು ಕೂಡ ನಿಮಗೆ ಅದನ್ನೇ ಹೇಳೋದು ” ಯಾರನ್ನೇ ಓದಿಕೊಂಡರೂ ಕುರುಡಾಗಿ ಯಾರನ್ನು ಹಿಂಬಾಲಿಸಬೇಡಿ” !
        ===> ಶಂಕರ್ ಭಟ್ಟರ ಪುಸ್ತಕ ಓದಿ ನನ್ನ ಅಭಿಪ್ರಾಯ ಮಂಡಿಸಿದ್ದೇನೆ ಎಂದು ಎಲ್ಲಿ ಹೇಳಿದ್ದೇನೆ ತೋರಿಸಿ. ನಾನು ಓದಿ ಕಲಿತ ಶಾಲೆಯೂ ಸೇರಿ ಕರ್ನಾಟಕದ ಹಲವು ಭಾಗದ ಶಾಲೆಗಳನ್ನು ಈ ನಿಟ್ಟಿನಲ್ಲಿ ಹೋಗಿ ಭೇಟಿಯಾಗಿ, ಮಾತನಾಡಿಸಿದ್ದೇನೆ. ಅದೆಲ್ಲ ಬಿಡಿ, ನಾನೇ ಒಂದು ಹಳ್ಳಿಗಾಡಿನ ಶಾಲೆಯಲ್ಲಿ ೧೦ ವರ್ಷ ಕನ್ನಡ ಮಾಧ್ಯಮ ಓದಿದ್ದೇನೆ. ಅಲ್ಲಿ ಹಳ್ಳಿಯ ಕೆಳ ವರ್ಗದ ಜನರು ವಿಜ್ಞಾನ,ಗಣಿತದ ವಿಷಯದಲ್ಲಿ ಪಡುತ್ತಿದ್ದ ಪಾಡೂ ನೋಡಿದ್ದೇನೆ. ಅಷ್ಟೇ ಆಸಕ್ತಿ ಇದ್ದರೆ ಬನ್ನಿ ಕರೆದುಕೊಂಡು ಹೋಗುವೆ ಉಡುಪಿ, ಧಾರವಾಡ, ಬಾಗಲಕೋಟೆಯ ಹಳ್ಳಿ ಶಾಲೆಗಳಿಗೆ.

        ಕೊನೆಯಲ್ಲಿ ಒಂದೇ ಮಾತು..
        ಶಂಕರ್ ಭಟ್ಟರ ಅನಿಸಿಕೆಗಳು ಅವರದ್ದು, ನಿಮ್ಮ ಅನಿಸಿಕೆ ನಿಮ್ಮದ್ದು. ಎರಡಕ್ಕೂ ಡೆಮಾಕ್ರಸಿಯಲ್ಲಿ ಜಾಗವಿದೆ. ಎರಡೂ ಮಾರುಕಟ್ಟೆಗೆ ಹೋಗಲಿ. ಜನ ಮತ್ತು ಕಾಲ ಯಾವುದು ಸರಿ ಅಂಬುದನ್ನು ನಿರ್ಧರಿಸುತ್ತಾರೆ. ಇನ್ನೊಬ್ಬರ ವಾದ ಸರಿಯಿಲ್ಲ, ಅದಕ್ಕೆ ಆ ವಾದವೇ ಇರಬಾರದು, ಆ ವಾದ ನಂಬುವವರೆಲ್ಲ ಎಡಪಂಥೀಯರು, ದೇಶದ್ರೋಹಿಗಳು ಅಂತ ಮಾತನಾಡುವುದು fascism ಅನ್ನಿಸಿಕೊಳ್ಳುತ್ತೆ ಹೊರತು ಡಿಮಾಕ್ರಸಿಯಲ್ಲಿ ನಂಬಿಕೆಯುಳ್ಳವರು ಅನ್ನಿಸಿಕೊಳ್ಳಲ್ಲ.

        ಉತ್ತರ
  15. Ravi's avatar
    Ravi
    ಜನ 18 2011

    ದೊಡ್ಡ ಸಂಘಟನೆ ಅಂತಿರಿ (ಒಂದೆರಡು ಘಟನೆನಲ್ಲಿ ಚೂರು ನಾನು ಒಪ್ಪಬಹುದು)… ಆದ್ರೆ ಭಾಷೆಗೆ ಬೇಕಾಗಿರೋದು ಸಾಹಿತ್ಯದಲ್ಲಿ ಆಗುವ ಕೃಷಿ ಹೊರತು ಕಲ್ಲು ಹೊಡಿಯೋದು,ಬೇರೆಯವರಿಗೆ ಕಪ್ಪು ಬಣ್ಣ ಹಚ್ಚೋದು ಅಲ್ಲ…
    >>”ಕ ರ ವೇ” ಒಂದು ಕನ್ನಡ ಕ್ಕಾಗಿರುವ ಸಂಘಟನೆಯಲ್ಲ ನೆನಪಿರಲಿ. ಅದೊಂದು ಪ್ರಚಾರ(ಸ್ವ) ಕ್ಕಾಗಿರುವ ಸಂಘಟನೆ… ಅದೊಂದು ರಾಜಕೀಯ ಸಂಘಟನೆ ಅಂದರೂ ತಪ್ಪಿಲ್ಲ (ಯಾಕಂದರೆ ಅದು ಮಾಡುವ ಕೆಲಸವೇ ಅಂತಹುದು ‘ಮುಖಕ್ಕೆ ಮಸಿ , ಬಂದ್ , ಇತ್ಯಾದಿ ಇತ್ಯಾದಿ).
    ನಾನು ನೋಡಿದ್ದು ಮತ್ತು ಕೇಳಿದ್ದು ” ಬಹಳ ಜನ ಕ ರ ವೇ ಗೆ ಸೇರೋದು ತಮ್ಮ ತಪ್ಪುಗಳನ್ನ ಮುಚ್ಚಿ ಹಾಕಿಕೊಳ್ಲೋಕೆ” ಅಸ್ಟೇ, ಅದು ಬಿಡಿ ಈಗ………..

    ಒಂದೆಡೆ ಗಡಿ ಪ್ರದೇಶದ ಕನ್ನಡ ಶಾಲೆಗಳು ಮುಚ್ಚುತ್ತಲಿವೆ,ಇನ್ನೊಂದೆಡೆ ವಿಶ್ವ ಕನ್ನಡ ಸಮ್ಮೇಳನದಂತ ಕಾರ್ಯಕ್ರಮಗಳ ಆಯೋಜನೆಗೆ ಮೀನಾ-ಮೇಷ ಎಣಿಸುತಿದ್ದಾರೆ.ಮಾಡಬೇಕಾದ ’ಸಂಸ್ಕೃತಿ’ಯ ಕೆಲಸ ಬಿಟ್ಟು ’ಸಂಸ್ಕೃತ’ದ ಹಿಂದೆ ಹೋಗಿದ್ಯಾಕೆ ಅನ್ನೋದಷ್ಟೆ ಹೊರತು ಸಂಸ್ಕೃತ ಭಾಷೆಯ ವಿರೋಧಿಸುವುದಲ್ಲ.

    -> ಮೀನಾ ಮೇಷ ಏಣಿ ಸುತ್ತಿಲ್ಲ ..ಅಲ್ಲಿರೋದು ಒಗ್ಗಟ್ಟಿನ ಕೊರತೆ ….. ನಾವು ಬಲ-ಎಡ ಅಂತ ವಾದಿಸುತ್ತ ಕೂರುತ್ತೆವೆಯೇ ಹೊರತು, ಹಾಗೆ ಮಾಡಿದ್ದು ತಪ್ಪು ಹೀಗೆ ಮಾಡಿದ್ದು ತಪ್ಪು ಯೆನ್ನುತ್ತೆವೆಯೇ ಹೊರತು, ಹೀಗೆ ಮಾಡಿ ನಾವು ಸಹಕರಿಸುತ್ತೇವೆ ಎನ್ನೋದಿಲ್ಲ ……

    ಇಲ್ಲೂ ಕೂಡ ಇಲಾಖೆ ಹಾಗೆ ಮಾಡ ಬರದಿತ್ತು ಹೀಗೆ ಮಾಡಬಾರದಿತ್ತು ಅನ್ನುತ್ತಿದ್ದಾರೆಯೇ ಹೊರತು. ಹೀಗೆ ಮಾಡಬಹುದು ಅನ್ನೋದಿಲ್ಲ ……….ಯಾಕಂದ್ರೆ ತಪ್ಪು ಹುಡುಕೋದು ಮತ್ತು ಉಪದೇಶ ಕೊಡೋದು ಸುಲಭ ಆದರೆ ಆಚರಣೆಗೆ ತರೋದು ಕಷ್ಟ …ಹಾಗಾಗಿ ಎಲ್ಲರೂ ಕೇವಲ ಉಪದೇಶವೇ ಮಾಡ್ತಾರೆ ……

    ಉತ್ತರ
    • Vasant's avatar
      ಜನ 18 2011

      >>”ಕ ರ ವೇ” ಒಂದು ಕನ್ನಡ ಕ್ಕಾಗಿರುವ ಸಂಘಟನೆಯಲ್ಲ ನೆನಪಿರಲಿ. ಅದೊಂದು ಪ್ರಚಾರ(ಸ್ವ) ಕ್ಕಾಗಿರುವ ಸಂಘಟನೆ… ಅದೊಂದು ರಾಜಕೀಯ ಸಂಘಟನೆ ಅಂದರೂ ತಪ್ಪಿಲ್ಲ (ಯಾಕಂದರೆ ಅದು ಮಾಡುವ ಕೆಲಸವೇ ಅಂತಹುದು ‘ಮುಖಕ್ಕೆ ಮಸಿ , ಬಂದ್ , ಇತ್ಯಾದಿ ಇತ್ಯಾದಿ).
      ನಾನು ನೋಡಿದ್ದು ಮತ್ತು ಕೇಳಿದ್ದು ” ಬಹಳ ಜನ ಕ ರ ವೇ ಗೆ ಸೇರೋದು ತಮ್ಮ ತಪ್ಪುಗಳನ್ನ ಮುಚ್ಚಿ ಹಾಕಿಕೊಳ್ಲೋಕೆ” ಅಸ್ಟೇ, ಅದು ಬಿಡಿ ಈಗ………..
      -> ತಮ್ಮ ತಪ್ಪು ಮುಚ್ಚಿಕೊಳ್ಳಲು ಕರವೇ ಸೇರುತ್ತಾರೆ ಅನ್ನುವುದಕ್ಕೆ ಆಧಾರವಿದ್ದಲ್ಲಿ ಅದನ್ನು ಪ್ರಕಟಿಸಿ ರವಿ. ಅಷ್ಟು sure ಆಗಿರೋರು ಅದ್ಯಾಕೆ ಈ ರೀತಿ spit and run ಅನ್ನೋ ರೀತಿ ಆರೋಪ ಮಾಡುತ್ತೀರಿ ತಿಳಿಯಲಿಲ್ಲ. ಕರವೇ ಮುಖಕ್ಕೆ ಮಸಿ ಬಳಿಯದೇ ಇದ್ದಿದ್ದರೆ ಬೆಳಗಾವಿಯಲ್ಲಿ ಎಮ್.ಈ,ಎಸ್ ಪುಂಡರ‍ ಹಾವಳಿ ಎಂದಿಗೂ ಕಮ್ಮಿಯಾಗುತ್ತಿರಲಿಲ್ಲ. ಬೆಳಗಾವಿಯನ್ನು ಹತ್ತಿರದಿಂದ ನೋಡಿರುವ ನನಗೆ ಗೊತ್ತು ಅಲ್ಲಿನ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಕನ್ನಡ ಪರ ಸಂಘಟನೆಗಳ ಪಾತ್ರವೇನು ಅಂಬುದು. ಬಂದ್, ಮುಷ್ಕರ ಅನ್ನುವುದನ್ನು ವ್ಯವಸ್ಥೆ ಜನ ಸಾಮಾನ್ಯರ ಕೂಗಿಗೆ ಸ್ಪಂದಿಸದಿದ್ದಾಗ ಎಲ್ಲ ರಾಜಕೀಯ ಪಕ್ಷ, ಸಂಘಟನೆಗಳು ಮಾಡುತ್ತವೆ. ಬಿಜೆಪಿ, ಕಾಂಗ್ರೆಸ್, ಜೆಡಿ ಎಸ್ ಗಳು ನೆಟ್ಟಗೆ ಇದ್ದಿದ್ದರೆ ಒಂದು ಸಾಮಾಜಿಕ ಸಂಘಟನೆ ಈ ರೀತಿ ಬೀದಿಗಿಳಿದು ಹೋರಾಡಬೇಕಿರಲಿಲ್ಲ. ಅಂತಹದೊಂದ ಸ್ಥಿತಿ ಕರ್ನಾಟಕದಲ್ಲಿ ಬಂದಿರುವುದೇ ನಮ್ಮ ಆಳುವ ವ್ಯವಸ್ಥೆಯ ವೈಫಲ್ಯದಿಂದ ಅನ್ನುವುದನ್ನು ಮೊದಲು ಮನಗಾಣಿರಿ.

      -> ಮೀನಾ ಮೇಷ ಏಣಿ ಸುತ್ತಿಲ್ಲ ..ಅಲ್ಲಿರೋದು ಒಗ್ಗಟ್ಟಿನ ಕೊರತೆ ….. ನಾವು ಬಲ-ಎಡ ಅಂತ ವಾದಿಸುತ್ತ ಕೂರುತ್ತೆವೆಯೇ ಹೊರತು, ಹಾಗೆ ಮಾಡಿದ್ದು ತಪ್ಪು ಹೀಗೆ ಮಾಡಿದ್ದು ತಪ್ಪು ಯೆನ್ನುತ್ತೆವೆಯೇ ಹೊರತು, ಹೀಗೆ ಮಾಡಿ ನಾವು ಸಹಕರಿಸುತ್ತೇವೆ ಎನ್ನೋದಿಲ್ಲ. ಇಲ್ಲೂ ಕೂಡ ಇಲಾಖೆ ಹಾಗೆ ಮಾಡ ಬರದಿತ್ತು ಹೀಗೆ ಮಾಡಬಾರದಿತ್ತು ಅನ್ನುತ್ತಿದ್ದಾರೆಯೇ ಹೊರತು. ಹೀಗೆ ಮಾಡಬಹುದು ಅನ್ನೋದಿಲ್ಲ ……….ಯಾಕಂದ್ರೆ ತಪ್ಪು ಹುಡುಕೋದು ಮತ್ತು ಉಪದೇಶ ಕೊಡೋದು ಸುಲಭ ಆದರೆ ಆಚರಣೆಗೆ ತರೋದು ಕಷ್ಟ …ಹಾಗಾಗಿ ಎಲ್ಲರೂ ಕೇವಲ ಉಪದೇಶವೇ ಮಾಡ್ತಾರೆ
      >>> ಇದು ವಿತಂಡವಾದವಷ್ಟೇ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ, ಕನ್ನಡಿಗರ ಹಿತಕ್ಕೆ ಟೊಂಕ ಕಟ್ಟಿ ಕೆಲಸ ಮಾಡಬೇಕು ಅನ್ನುವುದು ಕಾಮನ್ ಸೆನ್ಸ್. ಅದು ತನ್ನ ಕಾರ್ಯವ್ಯಾಪ್ತಿಯ ಕೆಲಸ ಬಿಟ್ಟು ಖಾಸಗಿ ಪುಸ್ತಕ ಮೇಳ ಪ್ರಾಯೋಜಿಸುವುದು ಸರಿಯಲ್ಲ ಅಂತ ಹೇಳಿದ್ರೆ ಅದು ಉಪದೇಶ ಹೇಗಾದೀತು? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದೇ ಅಲ್ಲ, ಸರ್ಕಾರದ ಎಲ್ಲ ವಿಭಾಗಗಳು ಎಲ್ಲಿ ಎಡವಿವೆ, ಎಲ್ಲಿ ಸರಿಯಾಗಬೇಕು, ಏನು ಸರಿಯಾಗಬೇಕು ಅನ್ನುವುದನ್ನು ತಿಳಿ ಹೇಳಲು ಇವತ್ತು ಕರ್ನಾಟಕದಲ್ಲಿ ಒಂದು ಡಜನ್ ಗೂ ಹೆಚ್ಚು ಕನ್ನಡ, ಇಂಗ್ಲಿಷ್ ಪತ್ರಿಕೆಗಳಿವೆ. ಮೂರು 24X7 ಸುದ್ದಿ ವಾಹಿನಿಗಳಿವೆ. ಅವು ತಮ್ಮ ಕೆಲಸವನ್ನು ಮಾಡುತ್ತಲೂ ಇವೆ. misplaced priorities, ಸ್ವಜನಪಕ್ಷಪಾತ, ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವ ಆಡಳಿತ ಮತ್ತು ವಿರೋಧ ಪಕ್ಷದ ವ್ಯವಸ್ಥೆ ಏನನ್ನು ಮಾಡದೇ ನಿದ್ದೆ ಮಾಡುತ್ತಿದ್ದರೆ, ಅದನ್ನು ಯಾವುದೇ ಚಿಕ್ಕ ಮಾಧ್ಯಮದ ಮೂಲಕವಾದರೂ ಪ್ರಶ್ನಿಸುವುದು ತಮ್ಮ ಕಣ್ಣಿಗೆ ಉಪದೇಶ ಅನ್ನಿಸುತ್ತೆ. ನನಗೆ ಯಾವ ಎಡವೂ ಇಲ್ಲ, ಬಲವೂ ಇಲ್ಲ. ಕರ್ನಾಟಕದ ನನ್ನ ನಾಡು, ನನ್ನ ಜನ, ನನ್ನ ಭಾಷೆಯ ಏಳಿಗೆ, ಉಳಿವು, ಬೆಳೆವೊಂದೇ ನನ್ನ ಕಾಳಜಿ.

      ಉತ್ತರ
  16. Ravi's avatar
    Ravi
    ಜನ 19 2011

    ಅದು ನಿಮ್ಮ ಹವ್ಯಾಸ ಇರಬಹುದು …..ಆದರೆ ಇಲ್ಲಿರೋದು, ನಾವು ಮತಾಡುತ್ತಿರೋದು ಬೇರೆ ..ಕೆಲವೊಂದು ಸಾರಿ ಇನ್ನೊಂದು ಪುಂಡರ ಸಂಘ ದಿಂದ ಸಮಾಜಕ್ಕೆ ಲಾಭವಗೋದು ಇದೆ ಉದಾಹರಣೆಗೆ ಒಂದು ರೌಡಿ ಪಡೆ ಇನ್ನೊಂದರ ಮೇಲೆರಗಿ ಅವನ್ನು ಮುಗಿಸಿದಾಗ ಲಾಭ ಆಗೋದು ಸಮಾಜಕ್ಕೆಯೇ !!!! ಯಾಕೆ ನಾನು ಹಾಗೆಂದೇ ಅಂದರೆ ಕ ರ ವೇ ಅಂತ ಬೋರ್ಡು ತಗುಲಿಸಿಕೊಂಡು ಎಲ್ಲಾ ವ್ಯವಹಾರ ಮಾಡೋದು …” ಬೆರಳೆಣಿಕೆ ಯಷ್ಟು ಮಂದಿಯನ್ನು ಹೊರತು ಪಡಿಸಿ ” ಕಣ್ಣಾರೆ ನೋಡಿರೋ ವಿಚಾರಾನೆ.

    ಯಾಕೆ ಇಸ್ಟೊಂದು ಮಾಡೋ ನಮ್ಮ ನಿಮ್ಮಂಥವರಿಗೆ ಅಸ್ಟೂ ಮಾದೊಕಾಗಲ್ವ? ಅದರ ಅರ್ಥ ಹಾಗೆ ಮಾಡೋದು ಬೇಕಾಗಿಲ್ಲ …ಕೇವಲ ಇನ್ನೊಬ್ಬರನ್ನು ದೂಶಿಸೋದೆ ಕಾಯಕ ಅಸ್ಟೇ..ಸಲಹೆ ಕೊಡಿ ಸರಿ ಮಾಡಲು ಪ್ರಯತ್ನಿಸಿ ಅಂದರೆ …ಅದಕ್ಕೆ ಬೇರೆಯವರನ್ನು ಬೆಟ್ಟು ಮಾಡುತ್ತೀರಿ ….ಕ್ಷಮಿಸಿ ನಿಮ್ಮನ್ನು ಮಾತ್ರ ಹೇಳುತ್ತಿಲ್ಲ ..ಇಲ್ಲಿ ಎಲ್ಲರೂ ಹಾಗೆಯೇ …..

    ದಯವಿಟ್ಟು ಸರಿಯಾಗಿ ಯೋಚಿಸಿ ಕಾರ್ಯೋನ್ಮುಖರಾಗಿ ” ವಿರೋದಕ್ಕಾಗಿ ವಿರೋದ ಬೇಡ …. ನ್ಯಾಯಕ್ಕಾಗಿ ವಿರೋದ ವಿರಲಿ ” ಒಂದು ಸಾಹಿತ್ಯ ಸಮ್ಮೇಳನ ಅಥವಾ ಒಂದು ಪುಸ್ತಕ ಮೇಳ ಮಾಡಿದ ಕೂಡಲೇ ಎಲ್ಲಾ ಉದ್ದಾರ ವಾಗತ್ತೆ ಅನ್ನೋದು ತಪ್ಪು ಕಲ್ಪನೆ . ನಮ್ಮ ನಿಮ್ಮಂತಹವರು ಬೋದಿಸುವುದನ್ನು ಬಿಟ್ಟು, ಪಕ್ಷಾತೀತವಾಗಿ, ಜಾತ್ಯಾತೀಥವಾಗಿ ವ್ಯವಹರಿಸಿದಾಗ ಸ್ಟೇ ಉದ್ದಾರ ಸಾದ್ಯ . ಸುಮ್ಮನೆ ವಿರೋದಕ್ಕಾಗಿ ವಿರೋದದಿಂದ ಲಾಭವಿಲ್ಲ .

    ಮಾದ್ಯಮದವರೂ ಇದಕ್ಕೆ ಹೊರತಾಗಿಲ್ಲ …. ಅವರು ಮಾಡ್ತಾರೆ ಇವರು ಮಾಡ್ತಾರೆ ಅಂತ ಕುಳಿತು ಕುಳಿತು ಕಾದು ಕಾದು, ಅವರು ಮಾತ್ರ ಉದ್ದಾರವಾದರು , ನಾವು ಇನ್ನೂ ಹೀಗಂತೆ ಹಾಗಂತೆ ಅಂದುಕೊಳ್ಳುತ್ತ, ಬೇರೆಯವರತ್ತ ಬೆಟ್ಟು ಮಾಡುತ್ತಾ ,ಎಲ್ಲರನ್ನು ದೂರುತ್ತಾ ಹಾಗೆಯೇ ಇದ್ದೇವೆ..ಇನ್ನೂ ಇರುತ್ತೇವೆ ಕೂಡ….ಅಬಿವ್ರುದ್ದಿಯಂತೂ ಆಗಲ್ಲ,ಆಗಲೂ ಬಿಡಲ್ಲ ಹಾಗಾಯ್ತು ನಮ್ಮ ಕಥೆ… ಏನೂ ಮಾಡೋಕ್ಕಾಗಲ್ಲ ಬಿಡಿ …
    ನೀವು ನಿಮ್ಮ ವಾದ ಬಿಡಲ್ಲ ,ನಾನೂ ..ಉಳಿದವರು ಬಿಡಲು ತಯಾರಿಲ್ಲ ..ಕೇವಲ ವಾದ ಮಾತ್ರ ಕಾರ್ಯರೂಪಕ್ಕೆ ತರೋದು ಮಾತಾಡಿದ್ರೆ ನಾವು ನಿಮ್ಮ ಮೇಲೆ ನೀವು ನಮ್ಮ ಮೇಲೆ ಬೆಟ್ಟು ಮಾಡೋದು ಅಸ್ಟೇ …ಬೇರೇನೂ ಆಗದು ಇಲ್ಲಿ!!!!!

    ಉತ್ತರ
  17. ಕನ್ನಡಾಭಿಮಾನಿ's avatar
    ಕನ್ನಡಾಭಿಮಾನಿ
    ಜನ 19 2011

    ರವಿ ಅವರೇ,

    ವಿರೋಧಕ್ಕಾಗಿ ವಿರೋಧ ಬೇಡ ಅಂದ ತಾವೇ ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಮೇಲೆ ಆಕ್ರೋಶ ವ್ಯಕ್ತ ಪಡಿಸಿರೋದು ತಮಾಷೆಯಾಗಿದೆ.
    ಕರವೇ ಅಂತ ಬೋರ್ಡು ತಗಲಿಸಿಕೊಂಡಿ ಏನು ವ್ಯವಹಾರ ಮಾಡಿದ್ದಾರೆ ಸ್ವಾಮಿ?
    ಕನ್ನಡಿಗರಿಗೆ ರೈಲ್ವೆ ಇಲಾಖೆಯ “ಡಿ” ದರ್ಜೆಯ ಉದ್ಯೋಗಾವಕಾಶಗಳು ಬಿಹಾರಿಗಳ ಪಾಲಾಗುತ್ತಿದ್ದಾಗ ಬೀದಿಗಿಳಿದು ಪೋಲೀಸರ ಲಾಠಿ ಏಟು ತಿಂದು ಹೋರಾಟ ಮಾದಿದರಲ್ಲ, ಅದು ವ್ಯವಹಾರವಾ?
    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದ ಟ್ಯಾಕ್ಸಿ ಚಾಲಕರನ್ನು ಕೆಲಸದಿಂದ ತೆಗೆದು ಹಾಕಿ ಕನ್ನಡೇತರರನ್ನು ನೇಮಕ ಮಾಡಿದ್ದಾಗ ಪೋಲೀಸರಿಂದ ಹಿಗ್ಗಾ ಮುಗ್ಗಾ ಥಳಿಸಿಕೊಂಡರಲ್ಲ, ಅದು ವ್ಯವಹಾರವೇ?
    ಕನ್ನಡ ನಾಡಿನ ರೈತರಿಗೆ ನೀರಿನ ಅಭಾವವಿದ್ದು ಕಾವೇರಿ ನ್ಯಾಯಾಧಿಕರಣದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದಾಗ ಕಾವೇರಿ ಕಣಿವೆಯ ಲಕ್ಷಗಟ್ಟಲೆ ರೈತರನ್ನು ಸಂಘಟಿಸಿ ಕಾವೇರಿ ರಥಯಾತ್ರೆ ಮಾಡಿದರಲ್ಲಾ, ಅದು ಯಾವ ವ್ಯವಹಾರ?
    ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕನ್ನಡಿಗರ ಮೇಲೆ ವಿಷ ಕಾರುತ್ತಾ ನಾಡ ದ್ರೋಹಿ ಕೆಲಸ ಮಾಡುತ್ತಿದ್ದಾಗ ಕನ್ನಡ ದ್ರೋಹಿಗಳನ್ನು ಸದೆಬಡೆದದ್ದು ವ್ಯವಹಾರವಾ?
    ಉದಾಹರಣೆ ಕೊಡುತ್ತಾ ಹೋದರೆ, ನೂರಾರು ಕೊಡಬಲ್ಲೆ.
    ಸುಮ್ಮನೆ ಆರೋಪಾ ಮಾಡೋದು ಸುಲಭ..ಇಷ್ಟಕ್ಕೂ ತಮ್ಮ ಬಳಿ ಕರವೇ ಅಕ್ರಮ ಮಾಡಿದೆ ಅಂತ ಖಚಿತವಾದ ಮಾಹಿತಿ ಇದ್ದರೆ, ನ್ಯಾಯಯುತವಾಗಿ ಹೋರಾಟ ಮಾಡಿ..ನಿಮ್ಮ ಆರೋಪಗಳು ನೀರಿನ ಮೇಲಿನ ಗುಳ್ಳೆಯಂತಿವೆ ಅಷ್ಟೇ..

    ಉತ್ತರ
  18. ಅರುಣ್'s avatar
    ಅರುಣ್
    ಜನ 19 2011

    ರವಿ ಯವರೆ,
    ಭಾಷೆಗೆ ಬರಿ ಸಾಹಿತ್ಯದಲ್ಲಿ ಆಗುವ ಕೃಷಿ ಮಾತ್ರ ಸಾಲದು. ಸಾಹಿತ್ಯ ಜುಟ್ಟಿಗೆ ಮಲ್ಲಿಗೆ ಹೂವು ಹೊರೆತು, ಹೊತ್ತೆಗೆ ಅನ್ನ ಅಲ್ಲ. ಬೆಳಗಾವಿಯನ್ನ ಮಹರಾಷ್ಟ್ರಾಕ್ಕೆ ಸೇರಿಸಬೇಕು ಅಂತ MES ನವರ ಕೂಗಟವನ್ನ ಯಾರಿಂದಲು ನಿಲ್ಲಿಸಲು ಅಗಿರಲಿಲ್ಲ ಅನ್ನೊದು ನೆನಪಿದೆಯೆ. ಆ ಸಮಯದಲಿ ಕರವೇ ನಡೆಸಿದ ಹೊರಟದಿಂದ MES ನ ಕೂಗಟ ಕಡಿಮೆಯಾಗಿದೆ. ಇದು ಅಷ್ಟೆ ಅಲ್ಲ ಸರಕಾರ ಬೆಳಗಾವಿಯಲ್ಲಿ ವಿಧಾನ ಸಭೆ ನಡೆಸಲು ಮತ್ತು ವಿಧಾನ ಸೌಧ ನಿರ್ಮಿಸಲು ಹೊರೆಟಿರುವುದಕ್ಕೆ ಕರವೇ ನದೆಸಿ್ದ ಹೊರಟನೆ ಕಾರಣ ಎನ್ನಬಹುದು. ಇದಲ್ಲದೆ ರೈಲ್ವೆ ಯಲ್ಲಿ ಕನ್ನಡಿಗರಿಗೆ ಅನ್ಯಾಯವಾದ ಸಮಯದಲ್ಲಿ ಅನ್ಯಾಯದ ವಿರುಧ ಹೊರಡಿದ ಫಲವಾಗಿ ಇಂದು ಭಾರತದ ಇತರ ಭಾಷೆಯ ಜನರಿಗೂ ಕೂಡ ಲಾಭವಾಗಿದೆ. ಈ ತರಹದ ಹೊರಾಟಗಳು ಬಹಳಷ್ಟಿವೆ ಕರವೇ ಬಗ್ಗೆ ಮಾತನಡುವ ಮೊದಲು ಅವರು ನಡೆಸಿರುವ ಹೊರಟಗಳ ಬಗ್ಗೆ ತಿಳಿಯಿರಿ.

    ಕರವೇ ಹೋರಾಟಗಳ ಬಗ್ಗೆ ಗೊತ್ತಿಲ್ಲದಿದ್ದರೆ ಈ ಕೊಂಡಿನ ನೋಡಿ-
    http://www.karnatakarakshanavedike.org/modes/categories/2

    ನೀವು ಹೇಳಿದಂತೆ ಮುಖಕ್ಕೆ ಮಸಿ ಬಳಿಯೊದು, ಬಂದ್ ಮಾಡೊದು ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದೆ ಹೊರೆತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಇದು ಪ್ರಚಾರ(ಸ್ವ)ಕ್ಕಾಗಿ ಇರುವ ಸಂಘಟನೆಯಾಗಿದ್ದಲ್ಲಿ ಇಂದು ಕರವೇ ಇಷ್ಟು ದೊಡ್ಡದಾಗಿ ಬೆಳೆಯುತ್ತಲೂ ಇರುತ್ತಿರಲಿಲ್ಲ.

    ಕರವೇ ಕಳೆದ ಹತ್ತು ವರ್ಷದಲ್ಲಿ ಎಷ್ಟ್ಯು ದೊಡ್ಡದಾಗಿ ಬೆಳೆದಿದೆ ಅನ್ನೋದು ಗೊತ್ತಿಲ್ಲದಿದ್ದರೆ ಈ ಲೇಖನ ನೋಡಿ-
    http://www.karnatakarakshanavedike.org/modes/view/116/about-krv.html

    ಇಷ್ಟೆಲ್ಲ ಸುಳ್ಳು ಆಪಾದನೆಯ ಜೊತೆ ಒಂದು ಸತ್ಯ ಹೇಳಿದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ, ಅದೇನೆಂದರೆ ಕರವೇ ಒಂದು ರಾಜಕೀಯ ಸಂಘಟನೆ ಅಂತ ಹೇಳಿರೋದು. ಇದು ಸಧ್ಯಕ್ಕೆ ನಿಜವಲ್ಲದಿದ್ದರೂ ಮುಂದೆ ಒಂದು ದಿನ ನಿಜ ಆಗುತ್ತೆ. ಕರವೇ ರಾಜಕೀಯ ಪ್ರವೇಶ ಸಮಸ್ತ ಕರ್ನಾಟಕದ ಅಭಿವೃದ್ಧಿಗೆ ಹೊರೆತು ರಾಷ್ಟ್ರೀಯ ಪಕ್ಷಗಳ ರೀತಿ ಸ್ವಾರ್ಥ ಸಾಧನೆಗಾಗಿ ಅಲ್ಲ.

    ಕರವೇ ಬಗ್ಗೆ ಆಪಾಧನೆ ಮಾಡುವ ಮೊದಲು ನಿಮ್ಮ ಬಳಿ ಏನಾದರು ನಿಮ್ಮ ಆ ಆಪಾಧನೆಗೆ ಆಧಾರವಿದ್ದರೆ ಆ ಆಧಾರದ ಮೇಲೆ ಆಪಾಧನೆ ಮಾಡಿದರೆ ನಿಮ್ಮ ಮಾತಿಗೆ ಬೆಲೆಯಿರುತ್ತದೆ, ಸುಮ್ನೆ ಅಲ್ಲಿ ಕೇಳಿದ್ದೆ, ಇಲ್ಲಿ ನೋಡಿಡ್ಡೆ, ಅವರು ಹೇಳಿದ್ರು ನಾನು ಕೇಳಿದ್ದೆ ಅಂತ ಗಾಳಿಲಿ ಮಾತಾದಿದ್ರೆ ವಾದ ಮಾಡ್ಬೇಕು ಅಂತ ಮಾಡ್ತಿದ್ದಿರ ಅಂತ ಆಗುತ್ತೆ. ನಿಮ್ಮ ವಾದಮಾಡುವ ಉದ್ದೇಶಕ್ಕಾಗಿಯೇ ಕರವೇಯ ಮೇಲೆ ಇಲ್ಲದ ಆಪಾಧನೆ ಮಾಡಿದರೆ ಅಪರಾಧವಾದೀತು ನೆನಪಿರಲಿ.

    ಉತ್ತರ
  19. Madhu Bhat's avatar
    Madhu Bhat
    ಜನ 19 2011

    ರವಿ ಅವರೇ,

    ನೀವು ಕೂಡ ಸನಾತನಿಯೇ ಇರಬೇಕು, ಯಾಕೆಂದರೆ ಮೊದಲಿಗೆ ನಿಮಗೆ ಅನಿಸುವುದು ಯಾರು ಸಂಸ್ಕೃತವನ್ನು ವಿರೋಧ ಮಾಡುತ್ತ ಇದ್ದಾರೋ ಅವರು ಇತರೆ ಧರ್ಮಿಯರು ಇರಬೇಕೆಂದು. ನಮ್ಮ ಹೆಸರಲ್ಲಿ ಅದು ಕಂಡು ಬಂದಿದ್ದರೆ ನೀವು ಇಷ್ಟು ಹೊತ್ತಿಗೆ ಮಿಷನರಿ, ಬುರ್ಕಾ,ಮತಾಂತರ ಅನ್ನೋ ಪದಪುಂಜಗಳನ್ನು ಬಳಸಿ ನಿಮ್ಮ ವಿತಂಡವಾದವನ್ನು ಮುಂದಿಡುತ್ತ ಇದ್ದೀರಿ. ಅದು ಆಗದೇ ಇರೋವಾಗ ನೀವು ಬಳಸುವ ಮತ್ತೊಂದು ಅಸ್ತ್ರ ಅಂದರೆ ನೀವು ನಮ್ಮನ್ನು ಎಡಪಂತೀಯರಿಗೋ ಇಲ್ಲ ಬುದ್ದೀಜೀವಿಗಳನ್ನು ಸೇರಿಸಿ ಜಾಡಿಸುವುದು,ಅದು ಆಗದೇ ಇದ್ದಾಗ ನಿಮಗೆ ನಿಮ್ಮ ವಾದವನ್ನು ಮುಂದಿಟ್ಟುಕೊಳ್ಳಲು ಸಿಗುವ ಸುಲಭ ಅಸ್ತ್ರ ಕನ್ನಡ ಸಂಘಟನೆಗಳು. ಅವರನ್ನು ಬೈದರೆ ವಾದ್ ಬೇರೆಡೆ ಹೊರಳಿ ನೀವು ನೆಮ್ಮದಿಯಾಗಿ ನಿರಾಳವಾಗಿ ಬೀಗಬಹುದು ಎಂದು. ಎಷ್ಟು ದಿನ ಅದೇ ಹಳೆಯದಾಗ ಕಿತ್ತುಹೋದ ಚಡ್ಡಿ ಬುದ್ದಿಯನ್ನು ಸವೆಸುತ್ತ ಇದ್ದೀರಾ.

    ಕನ್ನಡಕ್ಕೆ ಸಂಸ್ಕ್ರುತವೂ ಅಮ್ಮ ಅಲ್ಲ ಇಲ್ಲ ಉರ್ದುನು ಅಲ್ಲ.
    ಸಂಸ್ಕೃತ ಒಂದು ದೊಡ್ಡ ಸತ್ತ ಭಾಷೆ, ಸುಮ್ಮನೆ ನೀವು ನೂರು ಸಭೆ ಮಾಡಿದರೂ, ಅದರಲ್ಲಿ ಇದು ಇದೆ ಅದು ಇದೆ ಅಂತ ಬೂಸಿ ಬಿಟ್ಟರು ಇಲ್ಲ ಮುಂದಿನ ವರುಷದಲ್ಲಿ ಎಲ್ಲ( ಜನಿವಾರಗಳು) ಮನೆಯಲ್ಲಿ ಸಂಸ್ಕೃತ ಮಾತನಾಡುತ್ತೆವೆ ಎಂದು ವೀರಸಂಕಲ್ಪ ಮಾಡಿದರೂ ಅದು ಹಾಗೇಯೆ ಇರುತ್ತದೆ. ಎನೋ ಮ್ಯಾಜಿಕ್ ಆಗುವದಿಲ್ಲ. ಕನ್ನಡ ಯಾವ ರೀತಿಯಲ್ಲಿ ಈಗ ಸಂಶ್ಕ್ರುತವನ್ನು ಆಶ್ರಯಿಸಿಲ್ಲ. ಅದ್ದರಿಂಗ ಸಂಶ್ಕ್ರುತಕ್ಕೆ ಮಾಡಿದರೆ ಅದು ಕನ್ನಡಕ್ಕೆ ಆಗುತ್ತದೆ ಎಂದು ಒಪ್ಪಲು ಸಾಧ್ಯವಿಲ್ಲ.

    ಉತ್ತರ
  20. shati shanti's avatar
    shati shanti
    ಜನ 19 2011

    ಕನ್ನಡಾಭಿಮಾನಿ ಶಾಂತಿ ಶಾಂತಿ,,
    ರವಿ ಯವರೇ ,
    ದಯವಿಟ್ಟು ಹೇಳುವಾಗ ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ಬರುವಂತೆ ಹೇಳಬೇಡಿ, ನೀವು ಹೇಳಿದ್ದು ಸರಿ(ಒಂದು ವೇಳೆ) ಇದ್ದರೂ ಹೇಳುವ ರೀತಿ ಇನ್ನೊಬ್ಬರನ್ನು ಕೆರಳಿಸುವನ್ತದ್ದು…

    ಕನ್ನಡಿಗರಿಗೆ ರೈಲ್ವೆ ಇಲಾಖೆಯ “ಡಿ” ದರ್ಜೆಯ ಉದ್ಯೋಗಾವಕಾಶಗಳು ಬಿಹಾರಿಗಳ ಪಾಲಾಗುತ್ತಿದ್ದಾಗ ಬೀದಿಗಿಳಿದು ಪೋಲೀಸರ ಲಾಠಿ ಏಟು ತಿಂದು ಹೋರಾಟ ಮಾದಿದರಲ್ಲ, ಅದು ವ್ಯವಹಾರವಾ?

    ಸರಿಯಾಗಿಯೇ ಮಾಡಿದ್ದಾರೆ ಕ ರ ವೇ ಯವರು …ಆದರೆ ಪಾಪ ಏಟು ತಿಂದಿದ್ದು ಅಮಾಯಕ ಬಿಹಾರಿಗಳು …

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದ ಟ್ಯಾಕ್ಸಿ ಚಾಲಕರನ್ನು ಕೆಲಸದಿಂದ ತೆಗೆದು ಹಾಕಿ ಕನ್ನಡೇತರರನ್ನು ನೇಮಕ ಮಾಡಿದ್ದಾಗ ಪೋಲೀಸರಿಂದ ಹಿಗ್ಗಾ ಮುಗ್ಗಾ ಥಳಿಸಿಕೊಂಡರಲ್ಲ, ಅದು ವ್ಯವಹಾರವೇ?
    ಇಲ್ಲೂ ಅದೇ ಆಗಿದ್ದು…

    ಮಾಡಿದ್ದು ಯಾರೋ ಶಿಕ್ಷಿ ಸಿದ್ದು ಇನ್ಯಾರನ್ನೋ!!!!!!
    ಅಭಿಮಾನ ಜಾಸ್ತಿಯಾಗಿ ಮಾಡಿದ್ದು ಮಾತ್ರ ಕಂಡರೆ ಹೆದರೋ ತರಹ !!!!!!!!

    ಆದರೂ ಒಪ್ಪಿಕೊಳ್ತೇನೆ ಕೆಲವುಸಲ ಹೆದರಿಸಿಯೇ ಕಾರ್ಯ ಮಾಡಬೇಕಾಗತ್ತೆ ಆದರೆ ಪ್ರತಿ ಸಾರಿಯೂ ಅಲ್ಲ …
    ಮತ್ತೂ ಒಂದಿದೆ ಕ ರ ವೇ ಒಳ್ಳೆ ಕೆಲಸವೂ ಮಾಡಿದೆ ಇಲ್ಲವೆಂದಲ್ಲ , ಆದರೆ ಹಿಂಸಾತ್ಮಕ ಮಾರ್ಗ ದಿಂದ ಎಲ್ಲರೂ ಹೆದರುವಂತೆ ಮಾಡಿಕೊಂಡಿದ್ದಾರೆ ಅಸ್ಟೇ…

    ಉತ್ತರ
  21. Madhu Bhat's avatar
    Madhu Bhat
    ಜನ 19 2011

    ಶಾಂತಿ,
    ಕನ್ನಡ ಹೋರಾಟಗಳು ಅಲ್ಲ ಯಾವುದೇ ಸಾಮಾಜಿಕ ಹೋರಾಟಗಳು ಹೀಗೆ ನಡೆಯಬೇಕು ಎಂದು ಎಲ್ಲೂ ಶಾಸನ ಬರೆದಿಲ್ಲವಲ್ಲ. ಮಾತಿನಲ್ಲಿ, ಕೊಟ್ಟು-ತೆಗೆದುಕೋ, ಪಟ್ಟಿನಲ್ಲಿ ಕೆಲವೊಮ್ಮೆ ವ್ಯವಹರಿಸಬೇಕಾಗುತ್ತದೆ. ನೀವು ಕೊಟ್ಟಿರುವ ಉದಾಹರಣೆಗಳು ಅವರು ಯಾವಾಗ ಮಾಡಿದ್ದು ಎಂದು ಅವರ ತಾಣಕ್ಕೆ ಹೋಗಿ ನೋಡಿದರೆ ನಿಮಗೆ ಗೊತ್ತಾಗಬೇಕು, ಆ ಪ್ರಕರಣಗಳು ನಡೆದ ಮೇಲೆ ೧೦೦ ಹೊರ‍ಾಟಾ ಆಗಿವೆ, ಮತ್ತು ಮೇಲೆ ಹೇಳಿದ ಹಾಗೆ ಅನೇಕವು ಶಾಂತಿಯಲ್ಲೇ ಆಗಿದೆ ಮತ್ತು ಆಗುತ್ತ ಇವೆ.
    ಭಯ ಮತ್ತು ಹಿಂಸೆಯಿಂದ ಎನನ್ನು ಗೆಲ್ಲಲು ಆಗುವದಿಲ್ಲ ಎಂದು ಎಲ್ಲ ದೊಡ್ಡ ಸಂಘಟನೆಗಳಿಗೆ ಗೊತ್ತು, ಆದರೆ ಗೊಡ್ಸೆಯನ್ನು ಬೆಂಬಲಿಸುವ ಜನ ಕನ್ನಡ ಸಂಘಟನೆಗಳ ಶಾಂತಿ ಬಗ್ಗೆ ಪ್ರಶ್ನೆ ಮಾಡುವುದು ನಮ್ಮ ವಿಪರ್ಯಾಸ.

    ಉತ್ತರ
  22. Ravi's avatar
    Ravi
    ಜನ 20 2011

    ಕನ್ನಡಾಭಿಮಾನಿ,ಮಧು ಭಟ್ ,ಅರುಣ್,

    ನಿಮಗೆಲ್ಲರಿಗೂ ಅನಂತಾನಂತ ವಂದನೆಗಳು, ಸಾಕಸ್ಟು ಸಾಕ್ಷಿ ಪುರಾವೆಗಳನ್ನು ಒದಗಿಸಿದ್ದಕ್ಕಾಗಿ , ಪ್ರಜ್ನಾವಂತರಿಗೆ ಇಷ್ಟು ಸಾಕೆಂದು ಅಂದುಕೊಳ್ಳುವೆ.

    ಧನ್ಯವಾದ .

    ಉತ್ತರ
  23. Narendra Kumar.S.S's avatar
    Narendra Kumar.S.S
    ಜನ 20 2011

    > ಮಧು ಭಟ್: ಆದರೆ ಗೊಡ್ಸೆಯನ್ನು ಬೆಂಬಲಿಸುವ ಜನ ಕನ್ನಡ ಸಂಘಟನೆಗಳ ಶಾಂತಿ ಬಗ್ಗೆ ಪ್ರಶ್ನೆ ಮಾಡುವುದು ನಮ್ಮ ವಿಪರ್ಯಾಸ.
    > ಮಧು ಭಟ್: ನಮ್ಮ ಹೆಸರಲ್ಲಿ ಅದು ಕಂಡು ಬಂದಿದ್ದರೆ ನೀವು ಇಷ್ಟು ಹೊತ್ತಿಗೆ ಮಿಷನರಿ, ಬುರ್ಕಾ,ಮತಾಂತರ ಅನ್ನೋ ಪದಪುಂಜಗಳನ್ನು ಬಳಸಿ ನಿಮ್ಮ ವಿತಂಡವಾದವನ್ನು ಮುಂದಿಡುತ್ತ ಇದ್ದೀರಿ.
    > ಮಧು ಭಟ್: ಎಷ್ಟು ದಿನ ಅದೇ ಹಳೆಯದಾಗ ಕಿತ್ತುಹೋದ ಚಡ್ಡಿ ಬುದ್ದಿಯನ್ನು ಸವೆಸುತ್ತ ಇದ್ದೀರಾ
    > ಮಧು ಭಟ್: ಸಂಸ್ಕೃತ ಒಂದು ದೊಡ್ಡ ಸತ್ತ ಭಾಷೆ
    > ಮಧು ಭಟ್: ಅದ್ದರಿಂಗ ಸಂಶ್ಕ್ರುತಕ್ಕೆ ಮಾಡಿದರೆ ಅದು ಕನ್ನಡಕ್ಕೆ ಆಗುತ್ತದೆ ಎಂದು ಒಪ್ಪಲು ಸಾಧ್ಯವಿಲ್ಲ

    ನೀವು ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಮಟ್ಟದ ಪ್ರಬುದ್ಧರೆಂಬುದು ತಿಳಿಯದೇ ಹೋಯಿತು.
    ನಿಮ್ಮ ಮೇಲಿನ “ನುಡಿ ಮುತ್ತು”ಗಳನ್ನು ಕಂಡ ನಂತರವೇ ನಿಮ್ಮ “ಪ್ರಬುದ್ಧತೆಯ ಮಟ್ಟ”, ನಿಮಗೆ ಸಿಕ್ಕಿರುವ “ಸಂಸ್ಕಾರ”, ನಿಮ್ಮ “ಸಂಶ್ಕ್ರುತಿ” ನನ್ನ ಮಂಕುಬುದ್ಧಿಗೆ ನಿಮ್ಮ ಮಹೋನ್ನತೆ ಗೋಚರವಾದದ್ದು.
    ಅದಕ್ಕಾಗಿ ದಯವಿಟ್ಟು ನನ್ನನ್ನು ಕ್ಷಮಿಸಿ.
    ರಾಹುಲ್ ಗಾಂಧಿಯವರ ಮಟ್ಟವೂ ನಿಮಗೆ ಕಡಿಮೆಯಾಯಿತೇನೋ ಎಂದು ಅನುಮಾನ.
    ಪ್ರಾಯಶಃ ನೀವು ಸುಭಾಷ್ ಚಂದ್ರ ಬೋಸರನ್ನು ವಿರೋಧಿಸಿದವರ, ೧೯೬೨ರಲ್ಲಿ ಚೈನಾದವರನ್ನು ಸ್ವಾಗತಿಸಿದವರ ಮಟ್ಟದ, ಅಥವಾ ಅವರಿಗಿಂತಲೂ ಮೇಲ್ಮಟ್ಟದ ಪ್ರಬುದ್ಧರಿದ್ದರೂ ಇರಬಹುದು.
    ನನ್ನ ಹತ್ತಿರವಿರುವ ಬೂದುಗಾಜುಗಳು, ಸೂಕ್ಷ್ಮದರ್ಶಕ ಯಂತ್ರಗಳು, ದೂರದರ್ಶಕ ಯಂತ್ರಗಳು, ನಿಮ್ಮ ಆಳ-ಎತ್ತರ-ಘನತೆಗಳನ್ನು ತೋರಿಸುವಲ್ಲಿ ಸೋಲುತ್ತಿವೆ ಎಂದ ಮೇಲೆ, ನನ್ನಂತಹ “ಹುಲುಮಾನವ” ಏನು ಮಾಡಬಹುದು ಹೇಳಿ ಸ್ವಾಮಿ!?

    > ವಸಂತ್: ದೇಶಕಾಲದಲ್ಲಿ ಶ.ಗಣೇಶ್ ಅವರಿಗೆ ಕಿರಣ್ ರಾವ್ ಕೊಟ್ಟ ಉತ್ತರಕ್ಕೆ ಗಣೇಶ್ ಅವರಿಂದಲೂ ಯಾವುದೇ ಉತ್ತರ ಬಂದಿಲ್ಲ. ಬಿಡಿ,

    ಈ ಚರ್ಚೆ ನಡೆದ ಕೊಂಡಿಯನ್ನು ನೀಡಿದರೆ, ನಾನು ಕೂಡಾ ಆ ಚರ್ಚೆಯನ್ನು ಓದಿ, ನನ್ನ ಅಜ್ಞಾನವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬಹುದು.

    ಉತ್ತರ
  24. Madhu Bhat's avatar
    Madhu Bhat
    ಜನ 20 2011

    ನರೇಂದ್ರ,

    ಮೇಲೆ ನಾನು ಹೇಳಿದ ಹಾಗೆ ನಿಮ್ಮ ಕೇಸರಿ ಪ್ರೇಮವನ್ನು ತಂದು ರಾಹುಲ್ ಮತ್ತು ದಿಗ್ವಿಜಯ್ ಸಿಂಗ ಅವರನ್ನು ತಂದಿರಿ. ಯಾಕೆ ಎಂದರೆ ನಿಮ್ಗೆ ಇಲ್ಲ ಇಂದಿರಾ ಬ್ರಿಗೇಡಗಳಿಗೆ ಚರ್ಚೆಯ್ವ ವಿಷಯ ಕೇವಲ ಎಡ-ಬಲದಲ್ಲಿ ಇರುತ್ತದೆ. ನೀವು ಅವರನ್ನು ಇಟಲಿ,ರಾಹುಲ್,ದಿಗ್ವಿಜಯ ಅಂತ ಹಂಗಿಸುವುದು, ಅವರು ನಿಮ್ಮನ್ನು ಮತೀಯರು, ಕೋಮುಗಲಭೇ ಸೃಷ್ಟಿ ಮಾಡುವವರು, ಜಾತಿವಾದಿಗಳು, ಮನು ಎಂದು ಹಂಗಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ. ಈಗಾಗಲೇ ಒಬ್ಬರ ಪರ ಮತ್ತು ವಿರುದ್ದ ತೆಗಳಲು ಹೊಗಳಲು ಅನೇಕ ಸಾಮಗ್ರಿ ಸಿಗುತ್ತದೆ. ಒಂದು ವಿಶ್ವವಿದ್ಯ್ಲಾಯಲವೇ ಮಾಡಬಹುದು.
    ನಿಮಗೆ ನನ್ನನ್ನು ಇಲ್ಲ ನನ್ನ ಪ್ರಭುದ್ದತೆಯನ್ನು ಅಳೆಯುವ ಮಾಪನವೇ ರಾಹುಲ್ ಗಾಂಧಿ ಆಗುತ್ತಾರೆ, ಅದು ನಿಮಗೆ ಸುಲಭ ಕೂಡ. ಒಂದು ವಸ್ತು ಇದರ ತರ ಇದೆ ಎಂದು ಮೊದಲು ಬ್ರಾಂಡ್ ಮಾಡಿದರೆ ಅದರ ಬಗ್ಗೆ ತೆಗಳಲು-ಹೊಗಳಲು ಸುಲಬ ಆಗುತ್ತದೆ. ನಾನು ಎಡವೂ ಅಲ್ಲ ಬಲವೂ ಅಲ್ಲ ಎಂಬ ಒಕ್ಕಣೆಯೊಂದಿಗೆ ನನ್ನ ವಿಚಾರವನ್ನು ಮುಂದುವರುಸುತ್ತ ಇದ್ದೆನೆ.

    ಮೇಲೆ ಹೇಳಿರುವ ವಿಚಾರದಲ್ಲೇ ಮುಂದುವರೆಯೋಣ ಸಂಸ್ಕೃತಕ್ಕೆ ಮಾಡಿದರೆ ಕನ್ನಡಕ್ಕೆ ಆಗುತ್ತದೆ ಎನ್ನುವುದು ಹೇಗಿದೆ ಎಂದರೆ ಪಕ್ಕದ ಮನೆಯವರಿಗೆ ಮಗು ಆದರೆ ಮನೆಯಲ್ಲಿ ತೊಟ್ಟಿಲ್ಲು ಕಟ್ಟಿ ಸಂಭ್ರಮಿಸಿದ ಹಾಗೆ. ಸಂಸ್ಕೃತ ಹಿಂದೆ ಪ್ರಭಲ ಆಗಿತ್ತು, ಅನೇಕರು ಮಾತನಾಡುತ್ತ ಇದ್ದರೂ, ಆಗಿನ ಕಾಲದಲ್ಲಿ ಸ್ವ್ಗಾಭಾವಿಕ ಭಾಷೆಯಾಗಿ ಹೊಮ್ಮಿ ಅಂದಿನ ಅನೇಕ ಜ್ಞಾನ ಅದರಲ್ಲಿ ಬಂದಿದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೆ ಕಾಲ ಬದಲಾಗಿದೆ ಮತ್ತು ಅದು ಸತ್ತಿದೆ ಎನ್ನುವುದು ಕೂಡ. ಹಿಂದೆ ಅಲೆಕ್ಸಾಂಡರ್ ವಿಶ್ವವನ್ನು ಗೆದ್ದಿದ್ದ ಅಂತ, ಇಘ ಅವನ ವಂಶದವರು ಭೂಮಿ ಬಿಟ್ಟುಕೊಡಿ ಎಂದರೆ ನಿಮಗೆ ಅನಿಸುವ ಅಭಾಸದಷ್ಟೇ. ಅನೇಕ ಸಂಶ್ಕ್ರುತದಲ್ಲಿ ಇರುವ ಜ್ಞಾನ ಕನ್ನಡಕ್ಕೆ ಬಂದಿದೆ, ಅದನ್ನು ಎರಡು ಭಾಷೆ ಬಂದಿರುವರು ತಂದಿದ್ದಾರೆ. ಕನ್ನಡದಲ್ಲಿ ಇದ್ದರೂ ಇಲ್ಲ ಸಂಸ್ಕೃತದಲ್ಳೇ ಓದಬೇಕು ಅನ್ನುವ ಪರಿ, ಇಲ್ಲ ೯೯% ಜನರಿಗೆ ಅರ್ಥ ಆಗುವ ಭಾಷೆ ಬಿಟ್ಟು ಕೇವಲ ಒಂದು ವರ್ಗದ ಜನರಿಗೆ ಅರ್ಥ ಆಗುವ ಭಾಷೆಗೆ ಹಣ ಸುರಿಯಬೇಕೆ .

    ಕನ್ನಡದಲ್ಲಿ ಆ ಜ್ಞಾನ ಬಂದ ಮಾತ್ರಕ್ಕೆ ಅದು ನಮ್ಮ ತಾಯಿ ಆಗುವದಿಲ್ಲ ಅಲ್ಲ ಅಲ್ಲವೇ ?

    ಉತ್ತರ
  25. Narendra Kumar.S.S's avatar
    Narendra Kumar.S.S
    ಜನ 20 2011

    ಮಧು ಭಟ್ ಅವರೇ,

    ಈ ಚರ್ಚೆಯ ಮೊದಲಿನಿಂದ ಕಡೆಯವರೆಗೆ ಇರುವ ನನ್ನ ಪ್ರತಿಕ್ರಿಯೆಗಳನ್ನೊಮ್ಮೆ ನೋಡಿ.
    ನಾನೆಲ್ಲೂ ಯಾರ ಕಾಲನ್ನೂ ಎಳೆಯುವ ಪ್ರಯತ್ನ ನಡೆಸಿಲ್ಲ, ವ್ಯಂಗ್ಯವನ್ನೂ ಉಪಯೋಗಿಸಿಲ್ಲ.

    ನೀವು ಉಪಯೋಗಿಸಿದ ಗೋಡ್ಸೆ, ಚಡ್ಡಿ, ಬುರ್ಖಾ, ಮುಂತಾದ ಪದಪ್ರಯೋಗಗಳು, ಚರ್ಚೆಯ ದಿಕ್ಕು ತಪ್ಪಿಸುವ ಪ್ರಯತ್ನವಲ್ಲದೆ ಮತ್ತೇನು?
    ಚರ್ಚಿಸುವವನ ಬಳಿ ಇರುವ ಸರಕು ಮುಗಿದು ಹೋದಾಗ, ಆತ ಈ ರೀತಿಯ ಪ್ರಯತ್ನಗಳಿಗೆ ತೊಡಗುತ್ತಾನಷ್ಟೇ!

    > ಮೇಲೆ ನಾನು ಹೇಳಿದ ಹಾಗೆ ನಿಮ್ಮ ಕೇಸರಿ ಪ್ರೇಮವನ್ನು
    ಇಲ್ಲು ಕೂಡಾ ನಿಮ್ಮ ಬಾಲಿಷ ಚರ್ಚೆಯನ್ನೇ ಮುಂದುವರೆಸುತ್ತಿರುವಿರಿ – “ಕೇಸರಿ ಪ್ರೇಮ” ಎಂಬ ಪದ ಪ್ರಯೋಗವೇ ನಿಮ್ಮ ಪೂರ್ವಾಗ್ರಹಕ್ಕೆ ಸಾಕ್ಷಿ. ನನ್ನ ಚರ್ಚೆಯ ಯಾವ ಭಾಗದಲ್ಲಿ “ಕೇಸರಿ ಪ್ರೇಮ” ಇಣುಕಿದೆ ಹೇಳಿ?
    ಈ ರೀತಿಯ ಪೂರ್ವಾಗ್ರಹದಿಂದ ಆರೋಗ್ಯಕರ ಚರ್ಚೆ ಸಾಧ್ಯವಿಲ್ಲ – ಅದು ಕೇವಲ ವಾದ-ವಿತ್ತಂಡವಾದಗಳಿಗೆ ಎಡೆ ಮಾಡಬಹುದಷ್ಟೇ.

    > ನೀವು ಅವರನ್ನು ಇಟಲಿ,ರಾಹುಲ್,ದಿಗ್ವಿಜಯ ಅಂತ ಹಂಗಿಸುವುದು, ಅವರು ನಿಮ್ಮನ್ನು ಮತೀಯರು, ಕೋಮುಗಲಭೇ ಸೃಷ್ಟಿ
    > ಮಾಡುವವರು, ಜಾತಿವಾದಿಗಳು, ಮನು ಎಂದು ಹಂಗಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ.
    ನೀವು ನಿಮಗನಿಸಿದ ಹಾಗೆ ವಾದಿಸಬಹುದು. ಈ ಚರ್ಚೆಗೆ ಯಾವ ರೀತಿಯಲ್ಲೂ ಸಂಬಂಧಿಸದ ಗೋಡ್ಸೆ, ಚಡ್ಡಿಗಳನ್ನು ನಿಮಗೆ ಬೇಕಾದ ಸಮಯದಲ್ಲಿ ಎಳೆದು ತರಬಹುದು. ಆದರೆ, ಬೇರೆಯವರು ಆ ರೀತಿ ಮಾಡಿದ ಕೂಡಲೇ, ಅವರನ್ನು ಛೇಡಿಸುವುದು.
    ನಿಮ್ಮ ಈ ಬುದ್ಧಿಯನ್ನು ತೋರಿಸಲೋಸುಗವೇ ನಾನು “ರಾಹುಲ್, ದಿಗ್ವಿಜಯ್” ಬಳಸಿದ್ದು.

    > ನಾನು ಎಡವೂ ಅಲ್ಲ ಬಲವೂ ಅಲ್ಲ ಎಂಬ ಒಕ್ಕಣೆಯೊಂದಿಗೆ ನನ್ನ ವಿಚಾರವನ್ನು ಮುಂದುವರುಸುತ್ತ ಇದ್ದೆನೆ.
    ಈ ಚರ್ಚೆಯಲ್ಲಿ ನಿಮ್ಮ ಯಾವ ಪ್ರತಿಕ್ರಿಯೆಯೂ ನಿಮ್ಮ ಈ ಹೊಸ ಘೋಷಣೆಯನ್ನು ಬೆಂಬಲಿಸುತ್ತಿಲ್ಲ.

    > ಅದು ಸತ್ತಿದೆ ಎನ್ನುವುದು ಕೂಡ
    ಇಸ್ರೇಲಿಗಳ (ಯಹೂದ್ಯರ) ಸ್ವಾಭಿಮಾನದಿಂದಾಗಿ ಸತ್ತು ಹೋಗಿದ್ದ ಹೀಬ್ರೂ ಭಾಷೆ ಇಂದು ಜೀವಂತವಾಗಿದೆ. ಅವರ ಸಮಸ್ತವೂ ಹೀಬ್ರೂ ಭಾಷೆಯಲ್ಲೇ ನಡೆಯುತ್ತದೆ. ಸ್ವಾಭಿಮಾನ ಸತ್ತ ಜನರಿದ್ದರೆ ಸಂಸ್ಕೃತವಿರಲಿ, ಕನ್ನಡವೂ ಸತ್ತ ಭಾಷೆಯಾಗುವ ದಿನ ದೂರವಿಲ್ಲ ಎಂಬುದು ತಿಳಿದಿರಲಿ.

    > ಹಿಂದೆ ಅಲೆಕ್ಸಾಂಡರ್ ವಿಶ್ವವನ್ನು ಗೆದ್ದಿದ್ದ ಅಂತ, ಇಘ ಅವನ ವಂಶದವರು ಭೂಮಿ ಬಿಟ್ಟುಕೊಡಿ ಎಂದರೆ ನಿಮಗೆ ಅನಿಸುವ
    > ಅಭಾಸದಷ್ಟೇ.
    ಇಲ್ಲಿ ಚರ್ಚೆ ಪ್ರಾರಂಭವಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬ ವಿಷಯದ ಮೇಲೆ.
    ಅದನ್ನು ತಿಳಿಸುವಾಗ “ಸಂಸ್ಕೃತ ಕನ್ನಡದ ತಾಯಿ” ಎನ್ನುವ ವಿಷಯ ಪ್ರಸ್ತಾಪವಾಯಿತು.
    ಸಂಸ್ಕೃತ ಕನ್ನಡದ ತಾಯಿಯಲ್ಲ – ಹೀಗಾಗಿ ನಮ್ಮ ಇಲಾಖೆ ಸಂಸ್ಕೃತಕ್ಕೆ ಉತ್ತೇಜನ ನೀಡಬಾರದು ಎಂದು ಕೆಲವರು ತಿಳಿಸಿದರು.
    ಸಂಸ್ಕೃತ ಕನ್ನಡದ ತಾಯಿ ಹೌದೇ/ಅಲ್ಲವೇ ಎನ್ನುವುದು ಚರ್ಚಾಸ್ಪದವಾದರೂ, ಈ ಚರ್ಚೆಯ ಎಳೆ ಒಪ್ಪಬಹುದಾದದ್ದೇ.
    ಆದರೆ, ನೀವೀಗ ಹೊಸ ರೀತಿಯ ವಾದವನ್ನೇ ಮುಂದಿಡುತ್ತಿದ್ದೀರಿ.
    “ಹಿಂದೆಂದೋ ಇದ್ದ ಭಾಷೆ; ಇಂದು ಉಪಯೋಗಿಸದ ಭಾಷೆ; ಸತ್ತ ಭಾಷೆ; ಇತ್ಯಾದಿ” ಕಾರಣದಿಂದಾಗಿ ಸಂಸ್ಕೃತ ಬೇಡ ಎಂದು.
    ನಮ್ಮ ಚಿಂತನೆ ದಿಕ್ಕು ತಪ್ಪಿದರೆ ಈ ರೀತಿ ಚರ್ಚೆಯೂ ದಿಕ್ಕು ತಪ್ಪುತ್ತದೆ.
    ಸಂಸ್ಕೃತ ಜೀವಂತವಿದೆಯೋ ಇಲ್ಲವೋ ಎನ್ನುವುದು ಚರ್ಚೆಯ ವಿಷಯವೇ ಅಲ್ಲ; ಅದು ಇಲ್ಲಿ ಅಪ್ರಸ್ತುತ.

    > ಕೇವಲ ಒಂದು ವರ್ಗದ ಜನರಿಗೆ ಅರ್ಥ ಆಗುವ ಭಾಷೆಗೆ ಹಣ ಸುರಿಯಬೇಕೆ
    ಮತ್ತೆ ನಿಮ್ಮ ಪೂರ್ವಾಗ್ರಹ ಇಲ್ಲಿ ಗೋಚರವಾಗುತ್ತಿದೆ.
    ಯಾವುದೇ ಒಂದು ಭಾಷೆಯನ್ನು ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿಸುವುದು ಸಂಕುಚಿತ ಮನೋಭಾವವಷ್ಟೇ!
    ಯಾವ ವರ್ಗಕ್ಕೆ ಸಂಸ್ಕೃತ ಸೀಮಿತವಾಗಿದೆ?
    ಸಂಸ್ಕೃತದ ಮಹಾನ್ ಕವಿ ಕಾಳಿದಾಸ ಯಾವ ವರ್ಗಕ್ಕೆ ಸೇರಿದವನು?
    ಜ್ಞಾನಕೋಶವಾದ ವೇದ-ಉಪನಿಷತ್ತುಗಳನ್ನು ನಮಗೆ ನೀಡಿದ ವ್ಯಾಸರು ಯಾವ ವರ್ಗಕ್ಕೆ ಸೇರಿದವರು?
    ಜಗತ್ತಿನ ಪ್ರಪ್ರಥಮ ಕಾವ್ಯವಾದ ರಾಮಾಯಣವನ್ನು ನೀಡಿದ ವಾಲ್ಮೀಕಿ ಯಾವ ವರ್ಗಕ್ಕೆ ಸೇರಿದವರು.
    ಮಹಾಭಾರತವು ದೇವರ ಮಟ್ಟಕ್ಕೆ ಏರಿಸಿರುವ ಕೃಷ್ಣ ಯಾವ ವರ್ಗದವನು?
    ರಾಮಾಯಣದ ನಾಯಕ ರಾಮ, ಅವನ ಭಂಟ ಹನುಮ, ಇವರುಗಳು ಯಾವ ವರ್ಗಕ್ಕೆ ಸೇರಿದವರು?
    ಸಂಸ್ಕೃತದ ರಾಮಾಯಣವನ್ನು ಕನ್ನಡಕ್ಕೆ “ರಾಮಾಯಣ ದರ್ಶನಂ” ಆಗಿ ತಂದ ಕುವೆಂಪು ಅವರು ಯಾವ ವರ್ಗಕ್ಕೆ ಸೇರಿದವರು?
    ಈ ರೀತಿಯ ಅಸಂಖ್ಯಾತ ಉದಾಹರಣೆಗಳನ್ನು ನೀಡುತ್ತಾ ಹೋಗಬಹುದು.
    ಸಂಸ್ಕೃತ ಯಾವ ಒಂದು ವರ್ಗಕ್ಕೂ ಸೇರಿಲ್ಲ ಎನ್ನುವುದು ಬೆಳಕಿನಷ್ಟೇ ಸ್ಪಷ್ಟ.
    ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲಾ ಹಳದಿ ಎಂಬಂತೆ, ಪೂರ್ವಾಗ್ರಹ ಪೀಡಿತರಾಗಿದ್ದರೆ, ಸಂಸ್ಕೃತವೂ ಒಂದು ವರ್ಗಕ್ಕೆ ಮಾತ್ರ ಸೇರಿದಂತೆ ಕಾಣುತ್ತದೆ, ಎದುರು ಚರ್ಚಿಸುತ್ತಿರುವವರೂ ಚಡ್ಡಿ ತೊಟ್ಟವರಂತೆಯೋ, ಕೇಸರಿ ಪ್ರೇಮದವರಂತೆಯೋ ಕಾಣುತ್ತಾರೆ.

    ಉತ್ತರ
  26. Narendra Kumar.S.S's avatar
    Narendra Kumar.S.S
    ಜನ 20 2011

    ನಾನೊಂದು ಮೂಲಭೂತ ಪ್ರಶ್ನೆಯನ್ನು ಎತ್ತಿದ್ದೆ.
    ಇಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿ, ಇಲ್ಲಿ ಉತ್ತರಿಸುತ್ತಿರುವವರು ಭಾಷೆಯ ಕುರಿತಾಗಿ ಸಂಶೋಧನೆಗಳನ್ನು ನಡೆಸಿ, “ಇದಮಿತ್ಥಂ” ಎಂಬ ನಿಶ್ಕರ್ಷೆಗೆ ಬಂದಿರುವಿರೆಂದು ತಿಳಿದಿದ್ದೆ.
    ಇಲ್ಲಿ ಯಾರೋ ಒಂದು ಪ್ರತಿಕ್ರಿಯೆಯಲ್ಲಿ ಅದನ್ನೇ ಹೇಳಿದ್ದರು – ನಾವು ಯಾರೋ ಹೇಳಿದ್ದನ್ನು, ಬರೆದಿದ್ದನ್ನು ನಂಬಿಲ್ಲ; ಸ್ವತಃ ಅದನ್ನು ಪರಾಮರ್ಶಿಸಿ ಸತ್ಯವನ್ನು ತಿಳಿದು ಬರೆದಿರುವೆವು; ಎಂಬುದಾಗಿ.
    ಇಂತಹ ಪಂಡಿತರು “ಕೇಸರಿ ಪ್ರೇಮ”, ಕಿತ್ತುಹೋದ ಚಡ್ಡಿ, ಜನಿವಾರ, ಬುರ್ಖಾ, ಗೋಡ್ಸೆಗಳನ್ನು ಎಳೆದು ತರುವ ಬದಲು, ಆ ಪ್ರಶ್ನೆಗೆ ಉತ್ತರಿಸಬಹುದಿತ್ತಲ್ಲವೇ?

    ಇರಲಿ, ನೀವು ಆ ಪ್ರಶ್ನೆಯನ್ನು ಓದದೇ ಹೋಗಿರಬಹುದೆಂದು ಭಾವಿಸುವೆ.
    ಮತ್ತೊಮ್ಮೆ ಅದನ್ನೇ ಇಲ್ಲಿ ಪುನರ್ ಪ್ರಸ್ತಾಪಿಸುವೆ:

    ಯಾವ ಭಾಷೆ ಯಾವ ಭಾಷೆಯ ತಾಯಿ ಎನ್ನುವುದನ್ನು ತಿಳಿಯುವ ಮೊದಲು, ಒಂದು ಅನುಮಾನ ಪರಿಹಾರವಾಗಬೇಕು.
    ಒಂದು ಭಾಷೆ ಮತ್ತೊಂದು ಭಾಷೆಯ ತಾಯಿ ಅನ್ನಿಸಿಕೊಳ್ಳಲು ಇರಬೇಕಾದ ಅರ್ಹತೆಗಳಾವುವು?
    ಇದಕ್ಕೆ ಯಾವುದಾದರೂ ಸಮರ್ಪಕ ಉದಾಹರಣೆ ನೀಡಬಹುದೇ?

    ಈ ಪ್ರಶ್ನೆಗೂ ಮತ್ತೆ ಯಾವುದೋ ಕೊಳೆತು ಹೋದ “Wiki pages” ಕೊಂಡಿ ಕೊಟ್ಟು ಕೈತೊಳೆದುಕೊಳ್ಳುವುದಿಲ್ಲ ಎಂದು ಭಾವಿಸುವೆ.

    ಉತ್ತರ
  27. Vasant's avatar
    ಜನ 21 2011

    ಕನ್ನಡ ಮತ್ತು ಸಂಸ್ಕೃತದ ನಡುವೆ ಸಂಬಂಧವೇನು?
    http://hamsanada.blogspot.com/2011/01/blog-post_18.html

    ಉತ್ತರ
  28. ಮಾಯ್ಸ's avatar
    ಮಾಯ್ಸ
    ಜನ 26 2011

    ಬರಹಗಾರರೇ,

    ನಿಮ್ಮೀ ಬರಹವೂ ಬಲು ಚನ್ನಾಗಿಯೂ ಹಾಗೂ ಅರಿವುತುಂಬಿಕೊಂಡೂ ಇದೆ. ಕನ್ನಡ ಒಂದು ದ್ರಾವಿಡ ನುಡಿ ಹಾಗೂ ಅದು ಸಂಸ್ಕೃತದಿಂದ ಬಂದಿಲ್ಲ. ಸಂಸ್ಕೃತದಿಂದ ಕನ್ನಡಕ್ಕೆ ಪದಗಳು ಬಂದಿದೆ ಹಾಗೇ ಕನ್ನಡದಿಂದ ಸಂಸ್ಕೃತಕ್ಕೆ ಪದಗಳು ಹೋಗಿದೆ ( ಕಿಟ್ಟಲ್ ಪಟ್ಟಿ ನೋಡಿ ), ಕನ್ನಡದಿಂದ ಮರಾಟಿಗೂ ಪದಗಳು ಹೋಗಿವೆ ( ತುಪ್ ) ಹಾಗೇ ಮರಾಟಿಯಿಂದ ಕನ್ನಡಕ್ಕೆ ಪದಗಳೂ ಬಂದಿವೆ (ಗಾದೆ). ಕನ್ನಡದಿಂದ ಉರ್ದು, ತೆಲುಗು, ತಮಿಳು ಹಾಗು ತುಳು ನುಡಿಗಳಿಗೆ ಪದಗಳು ಹೋಗಿವೆ ಹಾಗೇ ಅವುಗಳಿ ಕನ್ನಡಕ್ಕೆ ಪದಗಳು ಬಂದಿವೆ.

    ಅಕ್ಕಪಕ್ಕದ ನುಡಿಗಳಿಗೆ ಪದಗಳು ಬರುವುದು ಹೋಗುವುದಲ್ಲಿ ಯಾವ ನಿಬ್ಬರವಾಗಲೀ ದೊಡ್ಡಸ್ತಿಕೆಯಾಗಲಿ ಇಲ್ಲ. ಹೀಗೆ ಮಾಮೂಲಿ ಸಂಗತಿಯನ್ನು ಏನೋ ಒಂದು ಅಗುಂದಲೆಯೆಂದು ಅಬ್ಬರಿಸುವುದು, ಅರಿವಿನ ಅಳವಿನ ಕೊರತೆ.

    ಇನ್ನೂ ಕನ್ನಡದ ವಚನಗಳನ್ನೂ, ಹಳ್ಳಿಹಾಡುಗಳನ್ನು ಹಾಗೂ ಶಿವರಾಮಕಾರಂತ ಮುಂತಾದವರ ಬರಹಗಳಲ್ಲಿ ಸಂಸ್ಕೃತವೇನು, ಕನ್ನಡವಲ್ಲದ ಪದಗಳು ಬಲು ಕಡಮೆ. ಹಾಗೇ ನೋಡಿದರೆ.. ಒಂದು ಬಗೆಯಲ್ಲಿ ಬರೀ ಅರಸರ ಆಳುಗಳು ಹೊಗಳಬಟ್ಟರುಗಳು ಬರೆದ ‘ಸಾಹಿತ್ಯ’ದಲ್ಲಿ ಸಂಸ್ಕೃತದ ಅಬ್ಬರ.. ಅದೇ ಮಾಮೂಲಿ ಮಂದಿಯು, ಮಾಮೂಲಿ ಮಂದಿಗಾಗಿ ಬರೆದ ಬರಹಗಳಲ್ಲಿ ಇಂದಿಗೂ ಕನ್ನಡಪದಗಳೇ ಹೆಚ್ಚು..

    ಈ ಸಂಸ್ಕೃತ ಹಾಗು ಅದರ ಕುರುಡುಊಳಿಗರೇ ಗದ್ದಲ ಇಂದಿನದಲ್ಲ.. ಕವಿರಾಜಮಾರ್ಗ, ನಯಸೇನ, ಬಿ.ಎಂ.ಶ್ರೀ ಹಾಗು ಇತ್ತೀಚೆಗೆ ಶಂಕರಬಟ್ಟ ಹೀಗೆ ಹಲವು ದೊಡ್ಡ ಹಾಗು ತಿಳಿದ ಮಂದಿ ಅದರ ಬಗ್ಗೆ ತಮ್ಮ ಮುನಿಸು ತೋಡಿಕೊಂಡಿದ್ದಾರೆ.

    ಸಂಸ್ಕೃತಕ್ಕೂ ಹಿಂದು ಆಯತಕ್ಕೂ ಹಾಗು ಇಂಡಿಯತನ/ಭಾರತೀಯತೆಗೂ ಒಂದು ಏನೋ ಇರದ ಬೆಸೆಗೆ ಹುಟ್ಟಿಸಿ, ಆ ಓಸುಗ ನಮ್ಮೀ ‘ಭಾರತೀಯ ಜನತಾ ಪಕ್ಷ’ದ ಸರಕಾರ ಸಂಸ್ಕೃತಕ್ಕೆ ಕನ್ನಡಿಗರ ತೆರಿಗೆ ಹಣ ಸುರಿದಿದೆ. ಆದರೆ.. ಹೆಚ್ಚಿನ ಹಿಂದೂ ಕನ್ನಡಿಗರಿಗೆ ಪುರಂದರ ದಾಸ, ಬಸವಣ್ಣ, ಹಾಗು ಮಲೆಯ ಮಹದೇವನ ಹಾಡುಗಳು ಬರುವುವು ತಿಳಿಯುವುವು ಹೊರತು ಭಗವದ್ಗೀತೆಯೋ, ವೇದವೋ ಅಲ್ಲ. ಅಂದರೆ ಹಿಂದೂ ಆಯತ ಕನ್ನಡಿಗರಲ್ಲಿ ಕನ್ನಡದಿಂದೇ ಬೇರೂರಿವುದು.

    ಹಾಗೇ ನಾವೆಲ್ಲ ಕನ್ನಡಿಗರು, ಇಂಡಿಯದವರು ಯಾಕೆಂದರೆ, ನಾವೆಲ್ಲ ಕನ್ನಡಿಗರು ಅದಿಕ್ಕೆ. ನಮ್ಮ ಇಂಡಿಯತನ/ಭಾರತೀಯತೆಯ ಬೇರೇ ಕನ್ನಡ ತಾನೆ. ನಾವು ಕನ್ನಡಿಗರಲ್ಲದೇ ಸಿಂಗಳಿಗಳಾಗಿದ್ದರೆ ನಾವು ಇಂಡಿಯದವರೂ ಆಗಿರುತ್ತಿರಲಿಲ್ಲ.

    ಉತ್ತರ
  29. ವಸಂತ's avatar
    ಜನ 27 2011

    ಕರ್ನಾಟಕದ ೮೩% ಮಕ್ಕಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದಾರೆ
    http://schooleducation.kar.nic.in/sch0708.html

    ಉತ್ತರ

Leave a reply to Narendra Kumar.S.S ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments