ಮರೆಯಾಯಿತೇ, ನಮ್ಮ ಕ್ರಿಯಾಶೀಲತೆ ?
–ಮಧುಚಂದ್ರ ಭದ್ರಾವತಿ
ಅಮೇರಿಕ ಖಂಡವನ್ನು ಅನ್ವೇಷಣೆ ಮಾಡಿದ ಸಲುವಾಗಿ ಸ್ಪೇನ್ ದೇಶದ ರಾಣಿ ಇಸಬೆಲ ಒಂದು ಕೂಟವನ್ನು ಏರ್ಪಡಿಸಿದ್ದಳು. ಅಲ್ಲಿಗೆ ಕೊಲಂಬಸ್ ಸಹ ಬಂದಿದ್ದನು. ಎಲ್ಲರೂ ಮೇಜಿನ ಮುಂದೆ ಕುಳಿತಿರುವಾಗ ಅಲ್ಲಿ ನೆರೆದಿದ್ದ ಅಮಂತ್ರಿತರನ್ನು ಕುರಿತು ” ಮೊಟ್ಟೆಯನ್ನು ಯಾರು ಮೇಜಿನ ಮೇಲೆ ನಿಲ್ಲಿಸುತ್ತಿರ ” ಎಂದು ಪ್ರಶ್ನೆಯನ್ನು ಇಟ್ಟಳು. ಅಲ್ಲಿದ್ದ ಮಹಾ ಜನರು ಅದೇನು ಮಹಾ ಎಂದು ಮೊಟ್ಟೆಯನ್ನು ಮೇಜಿನ ಮೇಲೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದರು. ಆಗ ಕೊಲಂಬಸ್ ಬೆಂದ ಮೊಟ್ಟೆಯನ್ನು ಕುಕ್ಕಿ ನಿಲ್ಲಿಸಿದಾಗ ಅಲ್ಲಿ ನೆರೆದಿದ್ದ ಕೆಲವರು ಹೊಗಳಿದರೆ, ಮತ್ತೆ ಕೆಲವರು ಇದನ್ನು ನಾನು ಮಾಡುತಿದ್ದೆ ಇದರಲ್ಲಿ ಏನು ಇದೆ ಎಂದು ತಿರಸ್ಕಾರದಿಂದ ತೆಗಳಿದರು.





