ಒಂದು ರುಪಾಯಿ ಚಿಲ್ರೆ ತಗೋಬೇಕ???
– ಸೂರ್ಯ ಅವಿ
“ನನಗು ನಿನಗು ಕಣ್ಣಲ್ಲೆ ಪರಿಚಯ, ಸನಿಹ ಸುಳಿವ ಮನದಾಸೆ ಅತಿಶಯ, ಏನೋ ಆಗಿದೆ ನನಗಂತು ಸಂಶಯ” ಅರಮನೆ ಚಿತ್ರದ ಈ song ಅಲ್ಲಿ ಹೀರೋ ಜಾಗದಲಿ ನಾನಿದೆ, ಇನ್ ಏನು ನಟಿ ರೋಮ ಅವರಿಗೆ ಐ ಲವ್ ಯು ಚಿನ್ನ ಎಂದು ಹೇಳಬೇಕು!! ಅದೇ ಸಮಯಕ್ಕೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಸಮಯ ಆಗಲೇ ಮುಂಜಾನೆ 4.30 !! ಮೈಸೂರಿಗೆ ಯಾವುದೊ ಕೆಲಸದ ವಿಚಾರವಾಗಿ ಬೇಗ ಹೊರಡಬೇಕಿತ್ತು, ಛೆ.. ಎರಡು ನಿಮಿಷ ಇದಿದ್ರೆ ಚೆನಾಗಿತ್ತು ಅನ್ಕೊತ, ನಿದ್ದೆ ಮಂಪರಲಿ ದಿನನಿತ್ಯದ ಕ್ರಿಯೆ ಮುಗಿಸಿ ,ಗಡಿಬಿಡಿಯಲಿ ಯಾವುದೊ ಎರಡು ಪುಸ್ತಕ, ಕ್ಯಾಮೆರಾ ಮತ್ತು ಕ್ಯಾಮೆರಾ ಸ್ಟ್ಯಾಂಡ್ ಹೆಗಲಿಗೆ ಸಿಗಿಸಿಕೊಂಡು ಹೊರಡುವುದಕ್ಕೆ ಸಿದ್ದನಾದೆ.
ತಕ್ಷಣಕ್ಕೆ ಹೊರಡುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ನನ್ನ ಮುಂದೆ? ಒಂದು ಕ್ಷಣ ಗಾಬರಿಗೊಂಡೆ ಸಮಯ ಇನ್ನು ಮುಂಜಾನೆ 5.೦೦ ಗಂಟೆ, ಈ ಸಮಯಕ್ಕೆ ಯಾವ BMTC ಬಸ್ ಸಿಗುವುದಿಲ್ಲ, ಗಾಡಿಯಲ್ಲಿ ಹೋದರೆ ಅದನ್ನು ಎಲ್ಲಿ ನಿಲಿಸುವುದು? ಸರಿ ಅಪ್ಪನನು ನಿದ್ರೆಯಿಂದ ಎಚ್ಹರಿಸಿ nayandalli ಗೆ ಡ್ರಾಪ್ ಮಾಡಿಸಿಕೊಂಡೆ. ಮಗನಿಗೆ ‘ಕ್ಷೇಮವಾಗಿ ಹೋಗಿ ಬಾ’ ಎಂದು ಹೇಳದೆ ಗಾಡಿ ವಾಪಾಸ್ ತಿರುಗಿಸಿ ಗುರ್ರ್…. ಎಂದು ಮನೆ ಕಡೆ ಹೊರಟರು. ಆ ಸಮಯದಲ್ಲೂ ಸುಮಾರು ಜನ ಬಸ್ ಗಾಗಿ ಕಾಯುತ್ತ ಕುಳಿತಿದರು,ಒಬ್ಬೊಬ್ರು ಒಂದೊಂದು ಬಂಗಿಯಲ್ಲಿ ನಿಂತಿದರು, ಒಬ್ಬ ಆಕಾಶ ನೋಡುತ ಬೀಡಿ ಸೇದುತ್ತಿದ, ಚಿಕ್ಕ ಮಗುವೊಂದು ತನ್ನ ಅಪ್ಪನ ಕಾಲನು ತಬ್ಬಿ ನಿಂತು, ಆ ಮುಗ್ದ ಕಣ್ಣುಗಳಿಂದ ಆಗೊಂದು ಹೀಗೊಂದು ಬರುವ ಗಾಡಿಯನು ದಿಟ್ಟಿಸಿ ನೋಡುತ್ತಿತ್ತು. ಇದನೆಲ್ಲ ಗಮನಿಸುತ್ತಿದ್ದ ಹಾಗೆ ಬಸ್ ಬಂತ್ತು ನೋಡಿ!





