ಹೊಸ ವರ್ಷಕ್ಕಿರಲಿ ಕನ್ನಡದ ಸ್ಪರ್ಶ – ಕನ್ನಡ ದಿನದರ್ಶಿ – ೨೦೧೩
– ಮಧುಚಂದ್ರ ಭದ್ರಾವತಿ
ಇತ್ತೀಚೆಗೆ ಯುವಜನರಿಗೆ ಕನ್ನಡ ಭಾಷೆಯ ಮೇಲೆ ಒಲವು ಕಡಿಮೆ ಆಗುತ್ತಾ ಇದೆ. ಪಾಶ್ಚಾತ್ಯ ದೇಶದ ಸಾಧಕರ ಬಗ್ಗೆ ಇರುವ ಅರಿವು ನಮ್ಮ ಕನ್ನಡದ ಸಾಧಕರ ಮೇಲೆ ಇಲ್ಲ. ಅಂತರ್ಜಾಲದಲ್ಲಿ ಸಹ ಒಬ್ಬ ಪಶ್ಚಿಮ ದೇಶದ ಸಾಧಕರ ಬಗ್ಗೆ ಹುಡುಕಿದರೆ ಹೇರಳವಾದ ಮಾಹಿತಿ ಸಿಗುತ್ತದೆ. ನಮ್ಮವರಿಗೆ ಜಿ ಪಿ ರಾಜರತ್ನಂರವರ ಭಾವ ಚಿತ್ರ ತೋರಿಸಿ ಇವರಾರು? ಇವರ ಸಾಧನೆ ಏನು ? ಎಂದು ಕೇಳಿದರೆ ತಡಬಡಾಯಿಸುತ್ತಾರೆ. ಕಾರಣ ಇಷ್ಟೇ ಇವರಿಗೆಲ್ಲ ಅಭಿಮಾನ ಮತ್ತು ಮಾಹಿತಿಯ ಕೊರತೆ. ಇದನ್ನು ಹೋಗಲಾಡಿಸಲು ಕನ್ನಡ ಲರ್ನಿಂಗ್ ಸ್ಕೂಲ್ ನವರು ‘ ಹೊಸ ವರ್ಷಕ್ಕಿರಲಿ ಕನ್ನಡದ ಸ್ಪರ್ಶ ‘ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ತಂದಿರುವ ೨೦೧೩ ಕನ್ನಡದ ದಿನದರ್ಶಿ ಕನ್ನಡಿಗರಿಗೆ ಉಪಯುಕ್ತ ಮಾಹಿತಿಯನ್ನು ನೀಡಿ. ಕನ್ನಡಿಗರು ಕನ್ನಡದ ಸಾಧಕರ ಬಗ್ಗೆ ವರ್ಷ ಪೂರ್ತಿ ಸ್ಮರಿಸಲಿ ಎಂಬ ನಿಲುಮೆಯಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
೨೦೧೩ ಕನ್ನಡ ದಿನದರ್ಶಿಯ ವಿಶೇಷತೆಗಳು :
೧. ಕನ್ನಡ ಅಂಕಿಗಳು
೨. ಶತಮಾನದ ಸಾಧಕರ ಭಾವಚಿತ್ರಗಳು
೩. ಜನ್ಮ ದಿನಾಂಕದ ವಿವರ
೪. ಮಹನೀಯರ ನುಡಿಮುತ್ತುಗಳು
ಕನ್ನಡ ದಿನದರ್ಶಿಗಾಗಿ ಸಂಪರ್ಕಿಸಿ
ದೊರವಾಣಿ ಸಂಖ್ಯೆ : ೯೯೦೦೫೭೭೨೨೫
ಅಂತರ್ಜಾಲದ ಕೊಂಡಿ : http://kannadalearningschool.com/product.aspx
ಹಾಗು ಪ್ರತಿಷ್ಟಿತ ಪುಸ್ತಕ ಮಳಿಗೆಗಳಾದ ಬೆಳೆಗೆರೆ ಬುಕ್ಸ್, ಟೋಟಲ್ ಕನ್ನಡ ಮತ್ತು ಮುನ್ನುಡಿಯಲ್ಲಿ ಸಹ ಲಭ್ಯವಿದೆ.





ಅತ್ಯುತ್ತಮ ಕಾರ್ಯ.ಖಂಡಿತ ಖರೀದಿಸುತ್ತೇನೆ.. ಯಾರನ್ನು ಸಂಪರ್ಕಿಸಬೇಕು.. ತರಿಸಿಕೊಳ್ಳುವ ಬಗೆ ಹೇಗೆ.?
ಮಾನ್ಯರೇ ,
ಕೆಳಕಂಡ ಅಂತರ್ಜಾಲದ ಕೊಂಡಿಯಲ್ಲಿ ಸಿಗುತ್ತದೆ ಹಾಗು ಬೆಳೆಗೆರೆ ಬುಕ್ಸ್ ಅಂಡ್ ಕಾಫಿ , ಮುನ್ನುಡಿ ಹಾಗು ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ಪಡೆಯಬಹುದು.
http://kannadalearningschool.com/product.aspx
– ಮಧುಚಂದ್ರ