ವಿಷಯದ ವಿವರಗಳಿಗೆ ದಾಟಿರಿ

Archive for

31
ಜನ

ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ…

– ಅಶೋಕ ಶೆಟ್ಟರ್

Bendre(ಇಂದು, ಅಂದರೆ ಜನವರಿ ಮೂವತ್ತೊಂದು., ದ.ರಾ ಬೇಂದ್ರೆ ಜನಿಸಿದ ದಿನ. ಬೇಂದ್ರೆ ಕಾವ್ಯ ಒಂದು ಕಣಜ. ಮೊಗೆದಷ್ಟೂ ಒಸರುವ ಒರತೆ. ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲ ಪ್ರತಿಭೆ.ಅವರು ಕನ್ನಡ ಕಾವ್ಯದ ಬಹುಮುಖ್ಯ ಧ್ವನಿ.ಅವರ ಕುರಿತಾಗಿ ಅಶೋಕ್ ಶೆಟ್ಟರ್ ಅವರು ೨ ವರ್ಷದ ಹಿಂದೆ ಬರೆದ ಈ ಲೇಖನ ಈಗ ಇಲ್ಲಿ, “ನಿಲುಮೆ”ಯ ಓದುಗರಿಗಾಗಿ – ನಿಲುಮೆ)

“ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು
ಮಾವು ಮಲ್ಲಿಗೆಯಿತ್ತು ಮನೆಯಿದುರು
ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು
ನಿಂಬಿಯ ಇಂಬಿತ್ತು ಎಡೆಎಡೆಗೆ
ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು
ಗುಡ್ಡದ ನೆರೆಯಿತ್ತು ಅದರಾಚೆಗೆ… …..”

“ಸಖಿಗೀತ”ದಲ್ಲಿ ಬರುವ ಈ ಸಾಲುಗಳು ಬೇಂದ್ರೆ ಕಂಡ ಸಾಧನಕೇರಿಯ ಶಬ್ದಚಿತ್ರಗಳು.ನಿನ್ನೆ ಅಂದರೆ ೨೯ ಜನವರಿ ೨೦೧೧ ರಂದು ಮಧ್ಯಾಹ್ನ ಒಂದೆರಡು ತಾಸು ಧಾರವಾಡದ ಬೇಂದ್ರೆ ಭವನದಲ್ಲಿ ಇದ್ದೆ. ಬೇಂದ್ರೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿಯವರೊಂದಿಗೆ ಮಾತಾಡಿ ಆಮೇಲೆ ಬೇಂದ್ರೆಯವರ ಮೂಲನಿವಾಸ “ಶ್ರೀಮಾತಾ”ದಲ್ಲೇ ಇರುವ ಅವರ ಪುತ್ರ ವಾಮನ ಬೇಂದ್ರೆಯವರ ಜೊತೆ ಸ್ವಲ್ಪ ಹೊತ್ತು ಕಳೆದೆ. ಬೇಂದ್ರೆ ಭವನದ ಮೇಲಂತಸ್ತಿನ ಬಾಲ್ಕನಿಯಿಂದ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನವೀಕೃತ ಸಾಧನಕೆರೆಗೆ ಹೋಗುವ ದಾರಿ,ಉದ್ದಕ್ಕೂ ಕಟಾಂಜನ ಇವನ್ನೆಲ್ಲ ನೋಡುತ್ತಿದ್ದಾಗ ನನ್ನ ಮನಸಿನಲ್ಲಿ ಅಚ್ಚೊತ್ತಿದಂತಿರುವ ಆ ಪರಿಸರದ ಬೇರೆಯದೇ ಚಿತ್ರದ ಮೇಲೆ ನಾನು ಇವುಗಳನ್ನು ಸುಪರಿಂಪೋಸ್ ಮಾಡಬೇಕಾಗಿ ಬಂತು.ನನ್ನ ಮನಸಿನಲ್ಲಿ ಸುಳಿಯುತ್ತಿದ್ದುದು ೩೦-೩೫ ವರ್ಷಗಳ ಹಿಂದೆ ಬೇಂದ್ರೆ ಮನೆ ಇರುವ ಸಾಲಿಗೆ ಎದುರಾಗಿ,ಗೋವಾಕ್ಕೆ ಹೋಗುವ ಮುಖ್ಯರಸ್ತೆಯಾಚೆ, ಸಾಧನಕೆರೆಯ ಒಂದು ಮೇರೆಯಾಗಿರುವ, ನಾನು ಪೋಲಿಸ್ ವಸತಿಗೃಹಗಳಿಗೆ ಸಾಗಿ ಹೋಗುತ್ತಿದ್ದ, ಕಿರಿದಾದ ಮಣ್ಣ ರಸ್ತೆ, ಸಾಧನಕೆರೆಯ ಇನ್ನೊಂದು ಮೇರೆಯಾಗಿ ಆ ಕೆರೆಯ ಏರಿ, ಅದರಾಚೆ ಭತ್ತದ ಗದ್ದೆ, ತೋಟ ಪಟ್ಟಿಗಳು,ಆಗೊಂದು ಈಗೊಂದರಂತೆ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಅಥವಾ ಸರಕಾರಿ ವಾಹನಗಳು,ಕೆಲಗೇರಿ ಹಾಗು ಮುಗದ ಗ್ರಾಮಗಳ ನಡುವಿನ ಕುರುಚಲು ಕಾಡುಗಳಲ್ಲಿ ಸಂಗ್ರಹಿಸಿದ ಕಟ್ಟಿಗೆಗಳ ಹೊರೆ ಹೊತ್ತು ಓಟದ ನಡಿಗೆಯಲ್ಲಿ ಧಾರವಾಡದತ್ತ ಹೋಗುತ್ತಿದ್ದ ಬಡಪಾಯಿ ಹೆಂಗಳೆಯರು, ಮುಕ್ತಾಯಗೊಳ್ಳಬೇಕು ಎಂಬ ಯಾವ ಧಾವಂತವೂ ಇಲ್ಲದೇ ನಿಷ್ಕಾರಣವೆಂಬಂತೆ ನಿಷ್ಕರುಣೆಯಿಂದ ಸುರಿಯುತ್ತಿದ್ದ ಜಿಡ್ಡುಮಳೆ,ಅಂಚಿನಲ್ಲೆಲ್ಲ ಜೊಂಡು ಬೆಳೆದಿದ್ದ ಚಿಕ್ಕದೂ ಅಲ್ಲದ ಬಹಳ ವಿಸ್ತಾರವೂ ಅಲ್ಲದ ಸಾದನಕೆರೆ..ಹಳೆ ಕಾಲದ ಕೆಂಪು ಹಂಚಿನ ಮನೆಗಳು,ಸುಶಿಕ್ಷಿತ ಜನ..ಆ ಪರಿಸರದಲ್ಲಿದ್ದಷ್ಟೂ ಹೊತ್ತು ಮನಸಿನಲ್ಲಿ ನೆನಪುಗಳ ಸಂತೆ ನೆರೆದಿತ್ತು. “ಸಾಧನಕೇರಿಯ ಸಂಜೆ ಮಳೆ ಸೆಳಕುಗಳು” ಎಂಬ ನನ್ನದೊಂದು ಕವಿತೆಯಲ್ಲಿ ಸಾದನಕೇರಿಯ ಇತರೆ ಚಿತ್ರಗಳೊಂದಿಗೆ ಬೇಂದ್ರೆ ನನ್ನ ಮನಸಿನಲ್ಲಿ ಮೂಡಿದ್ದು ಹೀಗೆ:
ಮತ್ತಷ್ಟು ಓದು »

31
ಜನ

‘ದಾಮಿನಿ’ಗೆ ಮಿಡಿದ ಹೃದಯಗಳು ’ಸೌಜನ್ಯ’ಳಿಗೂ ಮಿಡಿಯಲಾರವೇ?

– ಭುವಿತ್ ಶೆಟ್ಟಿ

ಪ್ರಿಯ ಮಂಗಳೂರಿನ ನಾಗರೀಕರೇ,

Kumari Soujanyaನಾವೇಕೆ ಈ ರೀತಿ? ನಮ್ಮ ಮನೆಯಲ್ಲಿ ಸೂತಕವಿದ್ದರೂ ಪರಮನೆಯ ಸಾವಿಗೆ ಕಣ್ಣೀರು ಸುರಿಸುವ ಹೃದಯ ವೈಶಾಲ್ಯತೆ ನಮಗೇಕೆ? ಊರ ಉಸಾಬರಿ ನಮಗ್ಯಾಕೆ ಅಂತ ಸುಮ್ಮನೆ ಕೂರುವಂಥ ಕಾಲ ಇದಲ್ಲ. ಅದನ್ನು ಒಪ್ಪಲೇ ಬೇಕು. ಆದರೆ, ಇತ್ತೀಚೆಗೆ ನಾವು ತೀರ ಸ್ವಂತಿಕೆಯ ಎಲ್ಲೆ ಮೀರಿ ಹೋಗುತ್ತಿದ್ದೇವೆ. ನೆರೆಮನೆ ಸುಡುತ್ತಿದ್ದರೂ ಮಾತಾಡದೆ, TV ಯಲ್ಲಿ ಕ್ರೈಂ ಸ್ಟೋರಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ. ಅಂಥ ಮನೋಸ್ಥಿಥಿ ನಮ್ಮದು. ಮಾನವೀಯತೆ ಎಂಬುದು ಮಾದ್ಯಮಗಳು ಬಿತ್ತರಿಸುವ ಸುದ್ದಿಯನ್ನು ನೋಡಿ ಉಕ್ಕಿ ಹರಿಯುತ್ತದೆ ಹೊರತು ವಾಸ್ತವತೆಯನ್ನರಿತಲ್ಲ. ಮಂಗಳೂರು ಖಂಡಿತವಾಗಿಯೂ ಬದಲಾಗಿದೆ ಎನ್ನಲು ಇತ್ತೀಚೆಗೆ ನಡೆದ Home Stay ಗಲಾಟೆ ಹಾಗೂ  ಸೌಜನ್ಯ ಸಾವಿನ ಪ್ರಕರಣದ ಬಗ್ಗೆ ಮಂಗಳೂರಿನ ಜನತೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯೇ ಸಾಕು.

ರಾಜಕೀಯ ಪ್ರೇರಿತ ‘ಮಂಗಳೂರು ರೆಸಾರ್ಟ್ ಗಲಾಟೆ’ಯಲ್ಲಿ ಸಿರಿವಂತ ಮನೆಯ ಹೆಣ್ಣುಮಕ್ಕಳಿಗಾದ ಅನ್ಯಾಯಕ್ಕೋಸ್ಕರ ಅದೆಷ್ಟು ಮಂದಿ ಬೀದಿಗಿಳಿಯಲಿಲ್ಲಾ? Facebook ತುಂಬಾ ಅದೇನೂ ಸ್ಟೇಟಸ್ Update ಗಳು, ಅದೇನೂ ಅಕ್ರೋಶ? ದಾಳಿ ಮಾಡಿದವರನ್ನು ಕೈಗೆ ಕೊಟ್ಟಿದ್ದರೆ ಕೊಂದು ಬಿಡುತ್ತಿದ್ದರೋ ಏನೋ… ಆ ರೀತಿ ಇತ್ತು ಪ್ರತಿಭಟನೆಯ ಜೋರು.

ಮತ್ತಷ್ಟು ಓದು »