ವಿಷಯದ ವಿವರಗಳಿಗೆ ದಾಟಿರಿ

Archive for

14
ಫೆಬ್ರ

ವ್ಯಾಲೆಂಟೈನ್ಸ್ ಡೇ ಮತ್ತು ಅದರ ಒಳ ಸುಳಿಗಳು

ಮಹೇಶ್ ಪ್ರಸಾದ್ ನೀರ್ಕಜೆ

ವ್ಯಾಲೆಂಟೈನ್ಸ್ ಡೇಹೌದ್ರೀ, ನಾನು ಕನ್ನಡ ಪ್ರೇಮಿಯೇ. ಇಂಗ್ಲಿಷ್ ವ್ಯಾಮೋಹದಿಂದ ಶೀರ್ಷಿಕೆಯಲ್ಲಿ ‘ಪ್ರೇಮಿಗಳ ದಿನ’ ಅನ್ನದೇ ವ್ಯಾಲೆಂಟೈನ್ಸ್ ಡೇ ಅಂದಿದ್ದಲ್ಲ. ಪ್ರೇಮಿಗಳ ದಿನ ಅಂತ ಹೇಳದೇ ಇದ್ದಿದ್ದಕ್ಕೆ ಕಾರಣ ತುಂಬಾ ಇದೆ. ಯಾಕೆಂದರೆ ವ್ಯಾಲೆಂಟೈನ್ಸ್ ಡೇ ಎನ್ನುವುದರ ಅರ್ಥ ನಾವೆಲ್ಲರು ತಿಳಿದಿರುವಂತೆ ಪ್ರೇಮಿಗಳ ದಿನ ಅಲ್ಲ! ಅದು ಹೇಗೆ ಅಂತ ಹೇಳುವ ಮೊದಲು ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಸಾಮಾನ್ಯವಾಗಿ ವ್ಯಾಲ್ಲೆಂಟೈನ್ಸ್ ಡೇ ವಿರೋಧಿಸುವ ಬಲ ಪಂಥೀಯರಿಗೂ, ಅಥವಾ ಏನೇ ಇದ್ದರೂ ವ್ಯಾಲೆಂಟೈನ್ಸ್ ಡೇ ಎನ್ನುವುದನ್ನು ಮಾನವತೆಯ ಮಟ್ಟಕ್ಕೆ ಎತ್ತರಿಸಿ ಸಮರ್ಥಿಸುವ ಎಡ ಪಂಥೀಯರಿಗೂ (ಕೆಲ ಎಡಪಂಥೀಯರು ಕೂಡ ಬೇರೆ ಕಾರಣಕ್ಕೆ ವ್ಯಾಲೆಂಟೈನ್ಸ್ ಡೇ ವಿರೋಧಿಸುತ್ತಾರೆ) ಈ ಬರಹ ಅಪಥ್ಯವಾಗಬಹುದು. ನನ್ನ ಪ್ರಯತ್ನವೇನಿದ್ದರೂ ಇವೆರಡನ್ನು ಬಿಟ್ಟು ಅವುಗಳಿಗಿಂತಲೂ ಮೇಲಿನ ಮಟ್ಟದಲ್ಲಿ ಮೂರನೇ ದೃಷ್ಟಿಕೋನವೊಂದನ್ನು ಅನ್ವೇಷಿಸುವುದು.

ಮೊದಲನೆಯದಾಗಿ ವ್ಯಾಲೆಂಟೈನ್ಸ್ ಡೇ ಮೂಲ ಕೆದಕಿದರೆ ನಮಗೆ ಇತಿಹಾಸದಲ್ಲಿ ಸಿಗುವುದು ಒಬ್ಬ ಪ್ರೇಮಿಯೋ ರಸಿಕನೋ ಅಥವಾ ಒಂದು ಪೌರಾಣಿಕ ಕಥೆಯ ಜನಪ್ರಿಯ ಪಾತ್ರವೋ ಅಲ್ಲ. ವ್ಯಾಲೆಂಟೈನ್ಸ್ ಎಂಬುದು ಮೂಲತಹ ಒಬ್ಬ ಸಂತನ ಹೆಸರು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕ್ರಿಶ್ಚಿಯಾನಿಟಿ ಇನ್ನೂ ಪಸರಿಸುತ್ತಿದ್ದ ಕಾಲದಲ್ಲಿ ಪೆಗನರ (ಶಬ್ದಾರ್ಥ : ಅನಾಗರಿಕ) ಕೈಯಲ್ಲಿ ಸಾಯುತ್ತಿದ್ದ ಕ್ರೈಸ್ತ ಸಂತರನ್ನು ವ್ಯಾಲೆಂಟೈನ್ ಎಂದು ಕರೆಯಲಾಗುತ್ತಿತ್ತಂತೆ. Read more »