ವಿಷಯದ ವಿವರಗಳಿಗೆ ದಾಟಿರಿ

Archive for

16
ಫೆಬ್ರ

ಮನದಾಳದ ಮೌನ ಮಾತಾದಾಗ : ಬಾಲ್ಯದ ಮುಗ್ಧ ಭಾವಗಳು -೧

– ರಂಜಿತಾ

mugdteಮುಗ್ಧ ಮನಸ್ಸುಗಳ ಆ ನಮ್ಮ ಮುಗ್ಧತೆಯ ದಿನಗಳನ್ನು ನೆನಪಿಸಿಕೊಂಡರೆ ಎದೆಯಾಳದ ಕಡಲಲ್ಲಿ ಅವಿತಿರುವ ಆ ಸುಂದರ ಮುಗುಳ್ನಗೆಯು ನಮಗೆ ಅರಿವಿಲ್ಲದೆ ತುಟಿಯಂಚಿನಲ್ಲಿ , ಅಮಾವಾಸೆಯ ಕತ್ತಲಲ್ಲೂ ಚಂದ್ರನನ್ನು ಕಂಡಂತೆ ಮೂಡಿಬರುವುದು.ಆಗಿದ್ದ ಆ ನಿಷ್ಕಲ್ಮಶ ಹೃದಯಕ್ಕೆ ಈಗಿನ ಕೋಟ್ಯಂತರ ಬೆಲೆಬಾಳುವ ಸಾವಿರಾರು ಕೋಹಿನುರು ವಜ್ರಗಳ ಬೆಲೆಯೂ ಸಹ ಸರಿಸಾಟಿ ಆಗದು….
ನಕ್ಷತ್ರಗಳಂತೆ ಮಿಂಚುವ ಆ ಕಣ್ಣುಗಳ ಕಾಂತಿಯು ಪ್ರತಿಯೊಂದು ವಸ್ತುವಿನಲ್ಲು ವಿಶೇಷತೆ ಕಂಡು ಅದರ ಸೌಂಧರ್ಯವ ಆಸ್ವಾದಿಸುತಿತ್ತು.. ಅದರ ವಿಷಶತೆಯನ್ನು ಅರಿಯಲು ಮನಸ್ಸು ಚಡಪಡಿಸುತಿತ್ತು… ಆದರೆ ಇಂದಿನ ಈ ದಿನಗಳಲ್ಲಿ ವಿಶೇಷತೆಯ  ವಸ್ತುವನ್ನು ಕಂಡರೂ ಕೇವಲ ಅಥವಾ ಸಹಜ ವೆಂಬ ಪ್ರತಿಕ್ರಿಯೆ ನೀಡುತ್ತೇವೆ..

ಅಂದು ಮಾತಡುತಿದ್ದ ಆ ಮಾತುಗಳಲ್ಲಿ ಸ್ಪಷ್ಟತೆ ಕಾಣದಿದ್ದರೂ , ತೊದಲು ನುಡಿಯ ಮಾತಲ್ಲೇ ಎಲ್ಲರ ಮನ ಗೆಲ್ಲುತಿದ್ದೆವು..ಎಲ್ಲರ ಮುಗುಳ್ನಗೆಗೂ ಕಾರಣವಾಗಿರುತ್ತಿದ್ದೆವು …ತತ್ ಕ್ಷಣಕ್ಕೆ ಅವರ ಎಲ್ಲ ನೋವುಗಳನ್ನು ಮರೆತು ನಮ್ಮ ತುಂಟಾಟಗಳ ಜೊತೆ ಬೆರೆತು ನಗುವಿನ ರಥದಲ್ಲಿ ಸಂಚರಿಸುತ್ತಿದ್ದರು.. ಆದರೆ ಇಂದಿನ ನಮ್ಮ ಈ ಸ್ಪಷ್ಟವಾದ ಮಾತುಗಳು ಒಬ್ಬರಿಗೆ ಹಿತವೆನಿಸಿದರೆ ಮತ್ತೊಬ್ಬರಿಗೆ ಕಹಿ ಬೇವಿನ ರುಚಿಯನ್ನು ಪರಿಚಯಿಸುತ್ತದೆ .. ಒಬ್ಬರಿಗೆ ಸರಿ ಎನ್ಸಿದರೆ ಮತ್ತೊಬ್ಬರಿಗೆ ಆ ಸ್ಪಷ್ಟವಾದ ಮಾತಲ್ಲೂ ತಪ್ಪನ್ನು ಹುಡುಕುವ ತವಕ..

ಅಂದು ನಮ್ಮದು , ನನ್ನವರು ಎಂಬ ನಮ್ಮೊಳಗಿನ ” ಅಹಂ ವೆಂಬ ಪುಟ್ಟ ಮಾನವ ” ತನಗೆ ಹಾಗು ತನ್ನನ್ನು ಇರಿಸಿಕೊಂದವರಿಗೆ ಎಷ್ಟು ಬೇಕೋ ಅಷ್ಟಕ್ಕೇ ಮಾತ್ರ ಸೀಮಿತವಾಗಿದ್ದ ಅವನು ” ಆರೋಗ್ಯಕರ ಅಹಂ ” ಎಂಬ ಬಿರುದಿಗೆ ಮಾತ್ರ ಪಾತ್ರನಾಗಿದ್ದ , ತನ್ನ ಬೇಲಿಯೊಳಗೆ ಮಾತ್ರ ಸಂಚಾರಿಸುತಿದ್ದ.. ಆದರೆ ಇಂದು ಅದೇ ಅಹಂ ಎಂಬ ಮಾನವ ಬೆಳೆದು ದೊಡ್ಡವನಾಗಿ ನಾನು , ನನ್ನದು , ನನಗೆ ಮಾತ್ರ , ನನ್ನ ಸಂತೋಷ , ನನ್ನ ಇಷ್ಟ ಎಂಬ ಇತ್ಯಾದಿ ಗುಣಗಳನ್ನು ಬೆಳೆಸಿಕೊಂಡು ” ಆರೋಗ್ಯ ಹಾನಿಕಾರ ಅಹಂ ” ಎಂಬ ಛೀಮಾರಿ ಹಾಕಿಸಿಕೊಂಡು , ತನ್ನ ತಪ್ಪನ್ನು ತಿಳಿದಿದ್ದರೂ ತಿದ್ದಿಕೊಳ್ಳದೆ , ತನ್ನನ್ನು ಇರಿಸಿಕೊಂದವರಿಗೆ ಹಾಗು ಸುತ್ತಮುತ್ತಲಿನವರಿಗೂ ಸದಾಕಾಲ ಕೇಡು ಬಯುಸುವವನಾಗಿದ್ದಾನೆ.. ತನ್ನ ಬೇಲಿಯನ್ನು ದಾಟಿ , ಇತರರ ಬೇಲಿಯೋಲಗು  ಪ್ರವೇಶಿಸಿ ತನ್ನ ಅಟ್ಟಹಾಸವ  ಮೆರೆದು , ಕೊಪಾಗ್ನಿಯಲ್ಲಿ ಮಿಂದು ಇತರರ ಸಂತಸಕ್ಕೆ ಯಮನಾಗಿದ್ದಾನೆ….

Read more »