ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 26, 2013

16

ಯು ಟರ್ನ್ ತೆಗೆದುಕೊಂಡ ಸ್ತ್ರೀ ವಾದಿಗಳು !

‍ನಿಲುಮೆ ಮೂಲಕ

– ಮು . ಅ . ಶ್ರೀರಂಗ  ಯಲಹಂಕ  ಬೆಂಗಳೂರು

Kavalu - SL Bhairappaಎಸ್ ಎಲ್ ಭೈರಪ್ಪ ಅವರ “ಕವಲು” ಕಾದಂಬರಿ ಪ್ರಕಟವಾದಾಗ ಸುಮಾರು ಎರಡು ಮೂರು ತಿಂಗಳು ಪತ್ರಿಕೆಗಳಲ್ಲಿ ಎಡಬಿಡದೆ ವಾದ-ವಿವಾದಗಳ ಸುನಾಮಿ! ಜತೆಗೆ ಸ್ತ್ರೀ-ಪುರುಷ ಎಂಬ ಭೇದ ಭಾವ ಇಲ್ಲದೆ ಎಲ್ಲಾ ಸ್ತ್ರೀವಾದಿ ಸಾಹಿತಿಗಳು “ಕವಲು”ಕಾದಂಬರಿ ಸ್ತ್ರೀ ವಿರೋಧಿ ಎಂದು ಟೀಕಿಸಿದ್ದೆ ಟೀಕಿಸಿದ್ದು. ಭೈರಪ್ಪನವರ ವಿರೋಧಿ ಬಣಕ್ಕಂತೂ ಹೊಸ ಅಸ್ತ್ರ ಸಿಕ್ಕಿತು. ಸುಮಾರು ೫೦ ವರ್ಷಗಳಿಂದ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಾ ಬಂದಿರುವ ಕಾದಂಬರಿಯಿಂದ ಕಾದಂಬರಿಗೆ ಬೆಳೆಯುತ್ತಿರುವ ಭೈರಪ್ಪನವರನ್ನು ನಮ್ಮ ಅಕಾಡೆಮಿಕ್ ವಲಯದ ಧೀಮಂತರುಗಳು ತಮ್ಮ ಪರಿಧಿಯಿಂದ ಹೊರಗೆ ಇಟ್ಟಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯವೇ ಆಗಿದೆ. ನನ್ನ ಹಿರಿಯ ಸ್ನೇಹಿತರೂ ವಿಮರ್ಶಕರೂ ಮತ್ತು ಕಾಲೇಜೊಂದರಲ್ಲಿ ಕನ್ನಡದ ಪ್ರಾಧ್ಯಾಪಕರೂ ಆಗಿರುವ ಒಬ್ಬರು ಸ್ನಾತಕೋತ್ತರ ಕನ್ನಡದ ಸಿಲಬಸ್ಸಿನಲ್ಲಿ ಭೈರಪ್ಪನವರ ಬಗ್ಗೆ ಒಂದು ಪುಟದಷ್ಟೂ ಮಾಹಿತಿಗಳಿಲ್ಲ ಎಂದು ತಿಳಿಸಿದ್ದರು.ಈ ಮಾತು ಹೇಳಿ ಮೂರ್ನಾಲಕ್ಕು ವರ್ಷಗಳು ಕಳೆಯಿತು. ಈಗ ಪರಿಸ್ಥಿತಿ ಬದಲಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಗೊತ್ತಿರುವವರು ಹೇಳಬೇಕು.

ಈ ಪೀಠಿಕೆಗೆ ಮುಖ್ಯ ಕಾರಣ ೨೬ ಆಗಷ್ಟ್ ೨೦೧೩ರ  ಕನ್ನಡಪ್ರಭ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ “ಪುರುಷರ ಆತ್ಮಹತ್ಯೆಗೆ ಮಹಿಳೆಯರೇ ಕಾರಣ” ಎಂಬ ಸುದ್ದಿ. ಇದೇನೂ ಮುದ್ರಾರಾಕ್ಷಸನ ಹಾವಳಿಯಿಂದಾದ ತಪ್ಪು ಸುದ್ದಿಯಲ್ಲ. ಕರ್ನಾಟಕ ರಾಜ್ಯ ಪುರುಷ ರಕ್ಷಣಾ ಸಮಿತಿ ಸದಸ್ಯರ ಪ್ರತಿಭಟನೆಯ ಸುದ್ದಿ. ಈ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್ ಅವರು ಎಲ್ಲಾ ವರ್ಗದ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚಲು ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ  ಕಾರಣ ಎಂದಿದ್ದಾರೆ. ರಾಜ್ಯ ಅಪರಾಧ ಮಾಹಿತಿ ಸಂಗ್ರಹ ಘಟಕದಲ್ಲಿ ದಾಖಲಾಗಿರುವ ಅಂಕಿ ಅಂಶಗಳೇ ಇದಕ್ಕೆ ಉದಾಹರಣೆ ಎಂದೂ ಹೇಳಿದ್ದಾರೆ.

ಕವಲು ಕಾದಂಬರಿಯ ಮುಖ್ಯ ಅಂಶ ಇದೇ ಅಲ್ಲವೇ?

ಅದೇ ದಿನದ ಪತ್ರಿಕೆಯ ಇನ್ನೊಂದು ಸುದ್ದಿ –ಮೈಸೂರಿನಲ್ಲಿ ಪುಸ್ತಕ ಬಿಡುಗಡೆ ಒಂದರ ಸಮಾರಂಭದಲ್ಲಿ ಮಾತನಾಡುತ್ತಾ ಭೈರಪ್ಪನವರು ಸಮಾಜದಲ್ಲಿ ಹೀಗೂ ನಡೆಯುತ್ತದೆ ಎಂಬ ಘಟನೆಗಳನ್ನು ಪಾತ್ರಗಳ ಹಾಗೂ ಭಾವನೆಗಳ ಮೂಲಕ ಕಾದಂಬರಿಗಳಲ್ಲಿ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ………… ಕವಲು ಕಾದಂಬರಿಯು ಸ್ತ್ರೀ ವಿರೋಧಿಯೆಂದು ಗಲಾಟೆ ಮಾಡಿದರು ……….. ಎಂದಿದ್ದಾರೆ.

ಇದು preplaned ಎಂದು ವಾದಿಸುವವರೂ ಇರಬಹುದೇನೋ?!

ಚಿತ್ರ ಕೃಪೆ : en.wikipedia.org

16 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ಆಗಸ್ಟ್ 27 2013

    May be dowry laws have been abused here and there. But women empowerment shouldn’t stop because of the abuse. Neither this article nor Bhyrappaji have provided any answers on the best way of empowering women.

    ಉತ್ತರ
    • Nagshetty Shetkar's avatar
      Nagshetty Shetkar
      ಆಗಸ್ಟ್ 30 2013

      ಶ್ರೀರಂಗ ಅವರ ಮೌನ ಸ್ತ್ರೀ ಸಬಲೀಕರಣದ ವಿಷಯದಲ್ಲಿ ಅವರ ವಿಚಾರಶೂನ್ಯತೆಯನ್ನು ಸಾರಿದೆ.

      ಉತ್ತರ
      • M A Sriranga's avatar
        M A Sriranga
        ಆಗಸ್ಟ್ 31 2013

        Please wait for a detailed article on Bhyrappa’s views about saahitya and samaaja sudhaarane.I am already making some notes on this subject.So I couldnot reply soon.

        Sriranga

        ಉತ್ತರ
        • Nagshetty Shetkar's avatar
          Nagshetty Shetkar
          ಸೆಪ್ಟೆಂ 2 2013

          ಸರಿ, ಕಾದುನೋಡೋಣ ತಾವು ಏನು ಹೇಳುತ್ತೀರಿ ಸ್ತ್ರೀ ಸಬಲೀಕರಣದ ಬಗ್ಗೆ ಅಂತ.

          ಉತ್ತರ
    • Ramasesha's avatar
      Ramasesha
      ಸೆಪ್ಟೆಂ 9 2013

      Yes; Bbhyrappa does not give solution to the problem of femenine enpowerment. So what, The solution given by his opponents are proven to be worthless and does he not have right to expose that. All said and done, Mr. Bhyrappa is a writer and not a social reformer. His job is to reflect the happenings in our society in an artistic way, not providing solutions.

      ಉತ್ತರ
      • Nagshetty Shetkar's avatar
        Nagshetty Shetkar
        ಸೆಪ್ಟೆಂ 9 2013

        Bhyrappa is a debater. He is not an artist.

        ಉತ್ತರ
        • M.A.Sriranga's avatar
          M.A.Sriranga
          ಸೆಪ್ಟೆಂ 9 2013

          Before coming to a conclusion, you have to read all the novels without any prejudices. Then only you can tell. Bhyrappa is famous in Hindi and Marati also by his translated novels. Mr, Ramasesha has correctly said that Bhyrappa is a writer and not a social reformer.

          ಉತ್ತರ
          • Nagshetty Shetkar's avatar
            Nagshetty Shetkar
            ಸೆಪ್ಟೆಂ 9 2013

            Mr,. Sriranga, what makes you believe that those who call Bhyrappa a debater have not read his novels? URA has definitely read all of Bhyrappa’s novels. What has Bhyrappa being popular in other languages got to do with emancipation of women? Indian men are chauvinists. No wonder they like Bhyrappa’s portrayal of weak women.

            ಉತ್ತರ
            • ನವೀನ's avatar
              ನವೀನ
              ಸೆಪ್ಟೆಂ 19 2013

              Mr.Shetkar,

              >> Indian men are chauvinists <<

              it applies to u also.. is it?

              ಉತ್ತರ
  2. ravikiranhvavikiran's avatar
    ಸೆಪ್ಟೆಂ 18 2013

    @Nagashetty: Question is whether u read his novels or not….? Wether URA read it or not doesnt matter here!! Your last comments force us to assume that u havnt read his novels!!

    ಉತ್ತರ
    • Nagshetty Shetkar's avatar
      Nagshetty Shetkar
      ಸೆಪ್ಟೆಂ 19 2013

      Mr. Ravi, I made a point. “May be dowry laws have been abused here and there. But women empowerment shouldn’t stop because of the abuse. Neither this article nor Bhyrappaji have provided any answers on the best way of empowering women.” Do you have any response?

      ಉತ್ತರ
      • M.A.Sriranga's avatar
        M.A.Sriranga
        ಸೆಪ್ಟೆಂ 20 2013

        Mr Shetkar I think you are in some confusion about sahitya sahiti and sarkara. Sahiti and sahitya tells that this is happening in the society. . Making rules for empowering women is the duty of Govt. and its law makers.. I think your Basavanna and and other vachanakaras also done the samething.
        They wrote. Since Basavanna was a minister for some years he has done some rules; ; but the last word for taking action was with Bijjala only. Am I right? Today also including your ADHUNIKA VACHANAKARAS are doing the same thing.They writes;rule makers are in govt. Ask them.

        ಉತ್ತರ
        • Nagshetty Shetkar's avatar
          Nagshetty Shetkar
          ಸೆಪ್ಟೆಂ 20 2013

          Mr. Sriranga, why are you bringing Vachanakaras into the debate on Bhyrappa? What is the calibre of Basavanna, Allama, Akka and others? And what is the calibre of Bhyrappa? What commitment did Vachanakaras have for society and what commitments does Bhyrappa have? Please read some Vachanas before talking about them.

          ಉತ್ತರ
          • M.A.Sriranga's avatar
            M.A.Sriranga
            ಸೆಪ್ಟೆಂ 20 2013

            When you want a sahiti and his sahitya to make some rules I have to bring the Vachana Chaluvali into picture,because you believe that it has done something for reforming the society,removal of disparity in society, etc and etc.I am using your own words thats all.

            ಉತ್ತರ
  3. vidya's avatar
    vidya
    ಫೆಬ್ರ 2 2014

    ಮೊದಲೇ ಹೇಳಿ ಬಿಡುತ್ತೇನೆ. ನಾನು ಮಾನ್ಯ ಭೈರಪ್ಪನವರ ಅಭಿಮಾನಿ. ಆದರೆ ಅವರ ಕವಲು ಕಾದಂಬರಿ ಮಾತ್ರ ನಾನು ಒಪ್ಪಲಾರೆ. ಏಕೆಂದರೆ ಕವಲುವಿನಲ್ಲಿ ಹೇಳಲ್ಪಟ್ಟ ಘಟನೆಗಳು ನಡೆಯುವದಿಲ್ಲ ಎಂದು ನಾನು ವಾದಿಸುವದಿಲ್ಲ. ಆದರೆ ಇಡೀ ಭಾರತಿಯ ಸಮಾಜದ ಸ್ತ್ರೀಯರ ಸಂಸ್ಕೃತಿಯನ್ನು ಕವಲು ಪ್ರತಿನಿಧಿಸುವದಿಲ್ಲ. ಎಲ್ಲೋ ಒಬ್ಬರು ಇಬ್ಬರು ಕವಲುವಿನಲ್ಲಿ ಹೇಳಿದಂಥ ಸ್ತ್ರೀಯರು ಬೆಂಗಳೂರಿನಂಥ ದೊಡ್ಡ ಪಟ್ಟಣಗಳಲ್ಲಿ ಇರಬಹುದಾದರೂ ಇಡೀ ಭಾರತ ಅವಲೋಕಿಸಿದಾಗ ಸ್ತ್ರೀಯರ ಶೋಷಣೆ ಇನ್ನೂ ನಿರಂತರವಾಗಿ ನಡೆದಿರುವದು ನನ್ನ ನಿತ್ಯ ಅನುಭವಕ್ಕೆ ಬರುತ್ತಿದೆ. ಶಾಲೆ ಕಲಿತ ಸ್ತ್ರೀಯರು ಹೆಚ್ಚು ಕಠಿಣರಾಗುತ್ತಾರೆಂದು ಪೋಲೀಸರಿಂದ ಭೈರಪ್ಪ ಹೇಳಿಸಿದ್ದಾರೆ. ಆದರೆ ನಿಜವಾಗಿ ಎರಡೆರಡು ಕಡೆಗಳಿಂದ ಶಾಲೆ ಕಲಿತು ನೌಕರಿ ಮಾಡುವ ಮಹಿಳೆಯರು ಶೋಷಣೆಗೆ ಒಳಗಾಗುತ್ತಾರೆ. ಒಂದು ಆಫೀಸಿನಲ್ಲಿ ಕೆಲಸದ ಒತ್ತಡ. ಇನ್ನೋಂದು ಮನೆಯಲ್ಲಿ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ. ಶಾಲೆ ಕಲಿತ ಮಹಿಳೆ ತನ್ನ ಸಂಸಾರದ ಜಗಳ ಇತ್ಯಾದಿ ಬೀದಿಗೆ ಬರಬಾರದೆಂದು ಬಹಳಷ್ಟ್ಟು ಶೊಷಣೆ ಸಹಿಸಿಕೊಳ್ಳುತ್ತಲೇ ಹೋಗುತ್ತಾಳೆ. ಇಲ್ಲಿನ ಅವಳ ಬವಣೆ ಯಾರಿಗೂ ಕೊನೆಗೆ ಆಕೆಯ ಹೆತ್ತವರಿಗೂ ಕೂಡ ಗೊತ್ತಾಗುವದಿಲ್ಲ. ಅಷ್ಟೊಂದು ಈ ಮಹಿಳೆಯರು ಮರ್ಯಾದೆಗೆ ಅಂಜಿ ಶೋಷಿತರಾಗುತ್ತಾರೆ. ಹೆಚ್ಚು ಕಲಿತ ಮಹಿಳೆಯರೇ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ. ನಾನು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಆಗಿದ್ದೇನೆ. ನನ್ನ ಸಹೋದ್ಯೋಗಿಗಳು ಹೆಗಿದ್ದಾರೆಂದರೆ ಸುಮಾರು 80% ಹೆಣ್ಣು ಮಕ್ಕಳಿಗೆ ತಮ್ಮ ಮೂಲವೇತನ ಎಷ್ಟಿದೆ ಅಂತಲೇ ಗೊತ್ತಿಲ್ಲ. ತಮ್ಮ ATM ಕಾರ್ಡ್ ನಂಬರು ಗೊತ್ತಿಲ್ಲ . ತಿಂಗಳಿಗೆ 35000 ರೂ ವೆತನ ಪಡೆಯುವ ಇವರು ತಮ್ಮ ಗಂಡಂದಿರಿಂದ ಪಾಕೆಟ ಮನಿ ಇಸಿದುಕೊಂಡು ಬಸಚಾರ್ಜ್ ಇತ್ತ್ಯಾದಿಗಳಿಗೆ ಖರ್ಚು ಮಾಡಿ ಲೆಕ್ಕ ಒಪ್ಪಿಸಬೇಕಾದ ಪರಿಸ್ತಿತಿಯಲ್ಲಿದ್ದಾರೆ. ಡಿ. ಎ ಹೆಚ್ಚಾದರೂ ವೇತನ ಪರಿಷ್ಕರಣೆ ಆದರೂ ಇವರಿಗೆ ತಮ್ಮ ವೇತನ ಎಷ್ಟು ಹೆಚ್ಚಾಯಿತೆಂದು ಗೊತ್ತಾಗುವದಿಲ್ಲ. ಎಲ್ಲದಕ್ಕೂ ಗಂಡಂದಿರನ್ನೇ ಅವಲಂಬಿಸಿದ್ದಾರೆ. ಶ್ರೀ ಭೈರಪ್ಪ ಹೇಳುವಂತೆ ಇವರೇನು ಶಾಲೆ ಕಲಿಯದವರಲ್ಲ. ಇವರ ಗಂಡಂದಿರು ಸಹ ಶಾಲೆ ಕಲಿಯದವರಲ್ಲ. ಅನೇಕರು ಎಮ್. ಎ. ವರೆಗೆ ಓದಿದ್ದಾರೆ. ಬಿ.ಎಸ್ಸಿ ಬಿ.ಎಡ್ ಸಾಮಾನ್ಯ್ವವಾಗಿ ಎಲ್ಲಾರೂ ಕಲಿತವರೇ . ಇನ್ನೂ ಚೋದ್ಯವೆಂದರೆ ಈ ಹೆಣ್ಣುಮಕ್ಕಳು ತಮಗೆ ತಮ್ಮ ವೇತನ ಎಷ್ಟಿದೆ ಎಂದು ಗೊತ್ತಿಲ್ಲದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿನಗೆಷ್ಟು ರೊಕ್ಕ ಬೇಕು ಹಿಡಿ ಎಂದು ನನ್ನ ಗಂಡ ಕೊಡುತ್ತಾನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ!!! ಇಂಥ ಹೆಣ್ಣುಮಕ್ಕಳನ್ನು ಏನೆಂದು ಕರಿಯೋಣ ?? ಮುಗ್ಧರೆನ್ನೋಣವೆ?? ಮೂರ್ಖರೆನ್ನೋಣವೆ?? ಇದು ಕೇವಲ ನಾನು ಕೆಲಸ ಮಾಡುವ ಪರಿಸರದ ಊರಿನ ಪರಿಸ್ತಿತಿಯಲ್ಲ. ಎಲ್ಲ ಕಡೆಗೂ ಇದೆ ಪರಿಸ್ಥಿತಿ ಇದೆ. ಸಮಾನ ದುಡಿಮೆ ಸಮಾನ ವೇತನ ಎಲ್ಲಿಯವರೆಗೆಂದರೆ ಕೇವಲ ಮನೆಗೆ ಬರುವವರೆಗೆ ಮಾತ್ರ. ಮನೆಗೆ ಬಂದ ನಂತರ ಗಂಡ ಪೇಪರ್ ಹಿಡಿದು ಕುಳಿತರೆ ಹೆಂಡತಿ ಅಢಿಗೆ ನೋಡಿಕೊಳ್ಳಬೇಕಾಗುತ್ತದೆ. ಮಗುವಿನ ಜವಾಬ್ದಾರಿಯೂ ಮಹಿಳೆಯದೇ. ಮಗುವಿನ 1,2, ಮಾಡಿದ ಬಟ್ಟೆಯನ್ನು ಗಂಡಸು ತೆಗೆದರೆ ಮೊದಲು ತಕರಾರು ತೆಗಿಯುವವರೇ ಹೆಂಗಸರು. ಇಂಥಾ ವಾತಾವರಣದಲ್ಲಿರುವ ಹೆಣ್ಣುಮಕ್ಕಳು ಕಾನೂನು ದುರುಪಯೋಗಪಡಿಸಿಕೊಳ್ಳುವದು ಸಾಧ್ಯವಿಲ್ಲಾ. ಆದರೆ ಪ್ರತಿ ಹೆಂಗಸರೂ ಮುಗ್ಧರೆ ಎಂದು ನಾನು ಹೇಳುವದಿಲ್ಲ. ಕಾನೂನಿನ ದುರ್ಬಳಕೆ ಆಗಿಲ್ಲವೆಂದೂ ಹೇಳುವದಿಲ್ಲ. ಒಂದೆರಡು ಅಪವಾದಗಳನ್ನು ಗಣಿಸಿ ಇಡೀ ಕಾನೂನೆ ಸರಿ ಇಲ್ಲವೆಂದು ವಾದಿಸುವದನ್ನು ನಾನು ಅಲ್ಲಗಳೆಯುತ್ತೇನೆ. ಮಾನ್ಯ ಭೈರಪ್ಪನವರು ಏನನ್ನೇ ಬರೆದರೂ ವಿಚಾರ ಮಾಡಿ ಬಹಳಷ್ಟು ಸಾಕ್ಷಿ ಆಧಾರ ಪರಿಗಣಿಸಿ ಬರೆಯುತ್ತಾರೆಂದು ಪ್ರತೀತಿ. ಆದರೆ ಕವಲು ಬರೆಯಲು ಅವರು ಈ ರೀತಿ ಸಮೀಕ್ಷೆ ಮಾಡಿಲ್ಲವೆನಿಸುತ್ತದೆ. ಅವಸರದ ನಿರ್ಧಾರವೆನಿಸುತ್ತದೆ. ಇದು ನನ್ನ ಅಭಿಪ್ರಾಯವಗಿದೆ ಒಪ್ಪುವದು ಬಿಡುವದು ನಿಮ್ಮ ಇಷ್ಟ.

    ಉತ್ತರ
  4. M.A.Sriranga's avatar
    M.A.Sriranga
    ಫೆಬ್ರ 3 2014

    ವಿದ್ಯಾ ಅವರಿಗೆ— ತಾವು ‘ಕವಲು’ ಕಾದಂಬರಿಯ ಬಗ್ಗೆ ಪ್ರತಿಕ್ರಿಯಿಸಿರುವುದಕ್ಕೆ ಈಗ ವಿವರವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾನು ಎರಡು ಮೂರು ತಿಂಗಳುಗಳಿಂದ ನಿಲುಮೆಯಲ್ಲಿ ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ಎಂಬ ಲೇಖನ ಮಾಲೆ ಬರೆಯುತ್ತಿರುವುದನ್ನು ತಾವು ಗಮನಿಸಿರಬಹುದು. ಆ ಸರಣಿಯಲ್ಲಿ ಈಗ “ಆವರಣ” ಕಾದಂಬರಿಯ ಬಗ್ಗೆ ಬರೆಯಬೇಕಾಗಿದೆ. ಆವರಣ ಕಾದಂಬರಿ ಕುರಿತಂತೆ ನಾಲ್ಕೈದು ವಿಮರ್ಶೆಯ ಕೃತಿಗಳು ಪ್ರಕಟವಾಗಿರುವುದರಿಂದ ಅವುಗಳ ಮರು ಓದಿನಲ್ಲಿ ನಾನು ನಿರತನಾಗಿದ್ದೇನೆ. “ಕವಲು”ಕಾದಂಬರಿಯ ಬಗ್ಗೆ ಬರೆಯುವಾಗ ತಮ್ಮ ಪ್ರತಿಕ್ರಿಯೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.

    ಉತ್ತರ

Leave a reply to ravikiranhvavikiran ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments