ಮಾನವೀಯತೆಯ ಹೊಸ ಮುಖವಾಡ – #notinmyname
– ಪಲ್ಲವಿ ಭಟ್, ಬೆಂಗಳೂರು
ಕಳೆದೊಂದೆರಡು ದಿನಗಳಿಂದ ಫೇಸ್ಬುಕ್ ವಾಲ್ ಗಳಲ್ಲಿ ಹರಿದಾಡುತ್ತಿರುವ ಒಂದು ಹ್ಯಾಷ್ ಟ್ಯಾಗ್ ಬೇಡ ಬೇಡವೆಂದರೂ ನನ್ನ ಗಮನ ಸೆಳೆಯತೊಡಗಿತು. ಕೇರಳದ ಖ್ಯಾತ ನಟಿಯೊಬ್ಬರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿದ್ದು ಹೀಗೆ “ಸಾಮೂಹಿಕ ಹಿಂಸಾಚಾರ ಮತ್ತು ನಿಮ್ಮ ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಮೌನವನ್ನು ಮುರಿಯುವ ಸಮಯ ಇದು. #notinmyname”. ಯಾರ ಮೇಲೆಯೇ ಆಗಲಿ ದೌರ್ಜನ್ಯ ಒಂದು ನಡೆದರೆ ಅದನ್ನು ಖಂಡಿಸುವವರು ನಾವು ಭಾರತೀಯರು. ಅದು ನಮ್ಮ ಧರ್ಮ ಎಂಬುವುದು ನಮ್ಮ ನಂಬಿಕೆ. ಆದರೆ ಇದೇನಿದು “ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲಿನ ದಾಳಿ” ?? . ಹಿಂಸಾಚಾರವನ್ನು ಖಂಡಿಸುವ ಒಳ್ಳೆ ಮನಸ್ಸಾಗಿದ್ದರೆ “ಅಲ್ಪಸಂಖ್ಯಾತರು” ಎಂಬ ಈ ಪದದ ಅಗತ್ಯವಿಲ್ಲ. ನಾವು ಹಿಂಸಾಚಾರದ ವಿರುದ್ಧ ಎಂದರಷ್ಟೇ ಸಾಕು. ಅಥವಾ ಹಿಂಸಾಚಾರವು ಬರೀ ಅಲ್ಪಸಂಖ್ಯಾತರ ಮೇಲಷ್ಟೇ ನಡೆಯಲು ಸಾಧ್ಯವೇ? ಹಾಗನಿಸುವಂತಿದೆ ಆ ಹೇಳಿಕೆ. ಮತ್ತಷ್ಟು ಓದು