ಗುಡಿಯಿಂದ ಮನೆಕಾಯುವವನು ದೇವರಾದರೆ ಗಡಿಯಿಂದ ದೇಶ ಕಾಯುವವನು ..
– ಸುಜಿತ್ ಕುಮಾರ್
ಉರಿಯುವ ಬಿಸಿಲಾಗಲಿ ಅಥವಾ ಕೊರೆಯುವ ಚಳಿಯಾಗಲಿ, ಹಸಿವು ಕೂಗುತ್ತಿರಲಿ ಅಥವಾ ದುಃಖ ಮಡುಗಟ್ಟಿರಲಿ, ದೇಹ ಸಾಕೆನ್ನುತ್ತಿರಲಿ ಅಥವಾ ಭಯ ಮನೆಮಾಡಿರಲಿ, ಹಗಲಿರಲಿ, ಇರುಳಿರಲಿ, ಕೇವಲ ದೇಶ ದೇಶ ದೇಶವೆನುತ ಜೀವ ತೆತ್ತುವ ಆ ಹುಚ್ಚು ಪ್ರೇಮಿಗಳಿಗೆ ಅರ್ಥಾತ್ ನಮ್ಮ ಧೀರ ಸೈನಿಕರನ್ನು ಸ್ಮರಿಸುತ್ತಾ, ಗೌರವಿಸುತ್ತಾ ಹಾಗು ಶ್ರದ್ದಾಂಜಲಿಯನ್ನು ಅರ್ಪಿಸುತ್ತಾ… ಜೊತೆಗೆ ನೆನ್ನೆ ಇಡೀ ದೇಶಕ್ಕೆ ಸರ್ಪ್ರೈಸ್ ನೀಡಿ ಭಾರತದ ವಿರಾಟ್ ರೂಪವನ್ನು ವಿಶ್ವಕ್ಕೆ ಪರಿಚಯಿಸಿದ ಸೈನಿಕರಿಗೆ ಮತ್ತು ಸದಾ ಕಾಲ ನಮ್ಮ ಸೈನಿಕರಿಗೆ ಹಿರಿಯಣ್ಣನಂತೆ ಜೊತೆ ನೀಡುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಸೆಲ್ಯೂಟ್.. ಮತ್ತಷ್ಟು ಓದು
ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ
ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪಕನ್ನಡಅಧ್ಯಯನಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಶ್ರೀಪಾದರಾಜರು (1404-1502) ಹರಿದಾಸ ಸಾಹಿತ್ಯದ ಪ್ರಮುಖ ಕೀರ್ತನಕಾರರಲ್ಲಿ ಒಬ್ಬರು. ಚನ್ನಪಟ್ಟಣ ಬಳಿಯ ಅಬ್ಬೂರಿನವರಾದ ಇವರನ್ನುಪುರಾಣೋಕ್ತ ಹರಿಭಕ್ತಧ್ರುವನ ಅವತಾರ ಎಂದು ಹೇಳಲಾಗುತ್ತದೆ. ವಿಜಯನಗರ ಅರಸರ ರಾಜಗುರುಗಳಾಗಿದ್ದ ಇವರು ಪುರಂದರ, ಕನಕರ ಗುರುಗಳಾಗಿದ್ದ ವ್ಯಾಸತೀರ್ಥರ ಗುರುಗಳೂ ಹೌದು. ಭ್ರಮರಗೀತ, ವೇಣುಗೀತ, ಗೋಪಿಗೀತ, ಮಧ್ವನಾಮ ಇವರ ಪ್ರಮುಖರಚನೆಗಳು. ರಂಗವಿಠಲ ಎಂಬ ಅಂಕಿತದಲ್ಲಿ ಇವರು ಕೀರ್ತನೆಗಳನ್ನೂ ರಚಿಸಿದ್ದಾರೆ. ‘ನೀ ಇಟ್ಟ ಹಂಗೆ ಇರುವೆನೋ ಹರಿಯೇ’;‘ಕಣ್‍ಗಳಿದ್ಯಾತಕೋ ಕಾವೇರಿರಂಗನ ನೋಡದಾ’;‘ಭೂಷಣಕೆ ಭೂಷಣ…’ ಮೊದಲಾದವು ಅವರ ಅತ್ಯಂತ ಜನಪ್ರಿಯ ಕೀರ್ತನೆಗಳಾಗಿ ಜನಮನದಲ್ಲಿ ನೆಲೆನಿಂತಿವೆ. ‘ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ’ ಎಂಬುದು ಅವರ ಅನೇಕಾನೇಕ ಕೀರ್ತನೆಗಳಲ್ಲೊಂದು. ಮತ್ತಷ್ಟು ಓದು
ಮಾಧ್ಯಮಗಳೇ ಸಾಕು ನಿಲ್ಲಿಸಿ ನಿಮ್ಮ ಬೂಟಾಟಿಕೆಯ..
– ವರುಣ್ ಕುಮಾರ್
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇವು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೊಂದು ಅಂಗ ನಿಷ್ಕ್ರೀಯಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳಿರುತ್ತದೆ. ಇಂತಹ ನಿಷ್ಕ್ರೀಯ ವ್ಯವಸ್ಥೆಗಳಿಗೆ ಚುರುಕು ಮುಟ್ಟಿಸಲು, ನಿದ್ದೆಯಲ್ಲಿರುವ ಅಧಿಕಾರಿಗಳನ್ನು ಎಬ್ಬಿಸಲು ಜನತೆ ಹಾಗೂ ಆಡಳಿತ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲು ಸುದ್ದಿ ಮಾದ್ಯಮಗಳ ಪಾತ್ರ ಬಹುಮುಖ್ಯವಾದುದು. ಅದಕ್ಕಾಗಿ ಮಾದ್ಯಮಕ್ಕೆ ೪ ನೇ ಆಧಾರಸ್ತಂಭವೆಂಬ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ.
ಈ ಸ್ಥಾನವನ್ನು ಮಾದ್ಯಮ ರಂಗದವರು ಕಾಪಾಡಿಕೊಂಡಿದ್ದಾರೆಯೇ?, ಇವರ ಕಾರ್ಯಶೈಲಿ, ನಿರ್ವಹಣೆ ಹಾಗೂ ಅವರ ನಡವಳಿಕೆಗಳು ಇದರ ಬಗ್ಗೆ ಸಣ್ಣ ವಿಶ್ಲೇಷಣೆಯನ್ನು ನಡೆಸೋಣ.
ಕೆಲ ದಶಕಗಳ ಹಿಂದೆ ಹೋದರೆ ಸುದ್ದಿ ವಾಹಿನಿಗಳ ಆರ್ಭಟ ಇಷ್ಟೊಂದಿರಲಿಲ್ಲ. ಆಯಾ ದಿನಗಳಲ್ಲಿ ನಡೆದಂತಹ ಸುದ್ದಿಗಳನ್ನು ಕೇವಲ ೨೦ ಅಥವಾ ೩೦ ನಿಮಿಷಗಳಲ್ಲಿ ಎಲ್ಲ ಪ್ರಮುಖ ವಾರ್ತೆಗಳನ್ನು ಪ್ರಸಾರ ಮಾಡುತ್ತಿದ್ದವು. ಆದರೆ ಯಾವಾಗ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಭಾರತ ಸಾಧಿಸಿದಾಗ ಎಲ್ಲ ವಿಭಾಗಗಳಲ್ಲಿ ಮಹತ್ತರ ಬದಲಾವಣೆಗಳು ಕಾಣಲಾರಂಭಿಸಿದರು. ಒಂದೆರಡು ವಾಹಿನಿಗಳಿದ್ದಲ್ಲಿ ನೂರಾರು ವಾಹಿನಿಗಳು ಟಿ.ವಿ.ಪರದೆಯಲ್ಲಿ ಕಾಣತೊಡಗಿಸಿದವು. ಅದರಲ್ಲೂ ಮುಖ್ಯವಾಗಿ ೨೪*೭ ಘಂಟೆ ಸುದ್ದಿಗಳನ್ನು ಬಿತ್ತರಿಸುವ ವಾಹಿನಿಗಳೆಂದರೆ ಅದೊಂದು ಪ್ರತಿಷ್ಠೆಯ ವಿಷಯವೇ ಆಗಿತ್ತು. ಇಲ್ಲಿಂದ ಸುದ್ದಿಗಳನ್ನು ಕೊಡುವ ವ್ಯಾಖ್ಯೆಯೇ ಬದಲಾಗತೊಡಗಿತು, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್ ಈ ರೀತಿಯಾಗಿ ಪ್ರತಿ ಕ್ಷಣದಲ್ಲೂ ಸುದ್ದಿಯನ್ನು ಬಿತ್ತರಿಸುವ ರೀತಿಯಲ್ಲಿ ವಾಹಿನಿಗಳು ಬಂದುಬಿಟ್ಟವು. ಆದರೆ ಯಾವಾಗ ತಮ್ಮ ಲಾಭಕ್ಕೋಸ್ಕರ, ವಾಣಿಜ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹಿನಿಗಳು ಕೆಲಸ ಮಾಡತೊಡಗಿದಾಗ ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಅಲುಗಾಡುವ ಪರಿಸ್ಥಿತಿಗೆ ಬರತೊಡಗಿತು. ಮತ್ತಷ್ಟು ಓದು
ಪುಲ್ವಾಮ ದಾಳಿ: ಭಾರತ ಕಲಿತ ಪಾಠ
– ವರುಣ್ ಕುಮಾರ್
ಫೆಬ್ರವರಿ ೧೪ನೇ ತಾರೀಖು ಭಾರತದ ಸೈನಿಕರ ಪಾಲಿಗೆ ಅತ್ಯಂತ ಕರಾಳ ದಿನ. ಕಳೆದ ದಶಕದಲ್ಲಿಯೇ ನಡೆದ ಅತ್ಯಂತ ಘೋರ ಉಗ್ರರ ದಾಳಿ ಅಮಾಯಕ ಸೈನಿಕರ ಸಾವಿಗೆ ಕಾರಣವಾಗಿ ಇಡೀ ದೇಶವೇ ಮಮ್ಮಲ ಮರುಗಿತು. ಪ್ರಪಂಚದೆಲ್ಲೆಡೆಯಿಂದ ಈ ಘಟನೆಯ ಬಗ್ಗೆ ಖಂಡನೆ ವ್ಯಕ್ತವಾಗಿ ಭಾರತದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ಈ ದಾಳಿಯ ಬಳಿಕ ಭಾರತದಲ್ಲಿ ನಡೆದ ಬೆಳವಣಿಗೆಗಳ ಹಾಗೂ ಈ ದಾಳಿಯಿಂದ ಭಾರತ ಕಲಿಯಬೇಕಾದ ಪಾಠಗಳೇನು ಎಂಬುದಾಗಿ ವಿಶ್ಲೇಷಿಸೋಣ.
ಭಾರತದೊಳಗಿನ ಉಗ್ರರು:
ಹೌದಲ್ಲವೇ, ನಮಗೆ ಈ ಉಗ್ರರದಾಳಿಯ ಬಳಿಕ ಹಲವಾರು ಉಗ್ರರು ನಮ್ಮ ದೇಶದೊಳಗೆ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದರು. ಪಾಕಿಸ್ತಾನ್ ಜಿಂದಾಬಾದ್, ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿ ಬರಹಗಳನ್ನು ಒಳಗೊಂಡ ಅನೇಕ ದೇಶದ್ರೋಹಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾರಂಭಿಸಿದರು. ಪಂಜಾಬ್ ಎಂದಿಗೂ ದೇಶಪ್ರೇಮಿಗಳನ್ನು ಕೊಟ್ಟಂತಹ ರಾಜ್ಯ ಆದರೆ ಅದೇ ರಾಜ್ಯದ ಸಚಿವನಾದ ಸಿಧುರವರು ಪಾಕಿಸ್ತಾನದ ಜೊತೆ ಮಾತುಕತೆ ಭಾರತ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದರ ಬೆನ್ನಿಗೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಕಾಶ್ ರೈ ಒಂದು ಹಂತದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಬೆಂಬಲ ನೀಡಿದರು. ಆದರೆ ಮರುದಿನ ಬಿಜೆಪಿಯ ಬಗ್ಗೆ ಮೋದಿಯವರ ಬಗ್ಗೆ ಟೀಕಿಸಿ ಘಟನೆಯನ್ನು ರಾಜಕೀಯಗೊಳಿಸಿದರು. ಕಮಲ್ ಹಾಸನ್ ಅಂತಹ ಸ್ವಯಂಘೋಷಿತ ನಾಯಕರು ಸೈನಿಕರು ಸಾಯಲೆಂದೇ ಸೇನೆಗೆ ಸೇರುತ್ತಾರೆ ಎಂದು ಹೇಳಿಕೆಗಳನ್ನು ಕೊಟ್ಟಾಗ ಇದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾವ ರೀತಿ ನೋವಾಗಬಹುದು ಎಂಬ ಕಾಳಜಿಯಿಲ್ಲದೆ ಮಾತನಾಡಿದರು. ಮತ್ತಷ್ಟು ಓದು
ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ – ಶ್ರೀ ಶಿವಕುಮಾರ ಸ್ವಾಮೀಜಿ.
– ಡಾ.ಸುದರ್ಶನ ಗುರುರಾಜರಾವ್
ಸರಿ ಸುಮಾರು ನೂರಾಹನ್ನೊಂದು ವರ್ಷಗಳ ಕಾಲ ದೇಶಸೇವೆಯೇ ಈಶಸೇವೆ ಎಂದೆನ್ನುತ್ತಾ, ಜನತೆಯಲ್ಲಿಯೇ ಜನಾರ್ದನನನ್ನು ಕಂಡು ನಮ್ಮನ್ನಗಲಿದ ಯುಗಪುರುಷ, ನಡೆದಾಡುವ ದೇವರೆಂದೇ ಜನಮಾನಸಗಳಲ್ಲಿ ನೆಲೆಯಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ನಮ್ಮನ್ನು ತೊರೆದು ನೈತಿಕವಾಗಿ ದಿನೇ ದಿನೇ ಅಧೋಗತಿಗಿಳಿಯುತ್ತಿರುವ ನಮ್ಮ ಸಮಾಜವನ್ನು ಆ ಮೂಲಕವಾಗಿ ಸಾತ್ವಿಕ ಸಮುದಾಯವನ್ನು ಅನಾಥರನ್ನಾಗಿ ಮಾಡಿ ಹೋದದ್ದು ದುಃಖಕರವಾದ ಸಂಗತಿಯೇ ಸರಿ. ಕಾಲನ ಕರೆಗೆ ಓಗೊಡದವರಾರು?
ಸ್ವಾಮೀಜಿಗಳ ಬಗ್ಗೆ ಅವರು ಹಗಲಿರುಳು ದುಡಿದು ಕಾಯಾ ವಾಚಾ ಮನಸಾ ದೀನರ ಕರೆಗೆ ಓಗೊಟ್ಟದ್ದು, ಏನೂ ಇದ್ದಿಲ್ಲದ ಒಂದು ಬಿಡಿ ಮಠವನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದ್ದು, ಆ ಮೂಲಕವಾಗಿ ಲಕ್ಷಾಂತರ ಜೀವಗಳ ಅಭಿವೃದ್ಧಿಗೆ ಕಾರಣರಾದದ್ದು , ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ಸರಕಾರಗಳ ಅನೀತಿಯ ಕಾಕದೃಷ್ಟಿಗೆ ಬಿದ್ದು ಕಷ್ಟ ಅನುಭವಿಸಿದರೂ ಒಂದೇ ಒಂದು ಮಾತನಾಡದೆ ಮಠದ ಮಕ್ಕಳಿಗೆ ಅನ್ನಪೋಷಣೆ ವಿದ್ಯಾದಾನಗಳನ್ನು ಅವಿರತವಾಗಿ ಮುಂದುವರಿಸಿದ್ದು ಎಲ್ಲವನ್ನು ಕೇಳಿ, ಓದಿ ತಿಳಿದಿದ್ದೇವೆ. ಇವೆಲ್ಲದರ ನಡುವೆ ತುಮಕೂರಿನ ಆಸುಪಾಸಿನಲ್ಲಿ ನಾನಾ ಕಾರಣಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಸಮಾನತೆಯ ಹರಿಕಾರ ಶ್ರೀ ಸ್ವಾಮೀಜಿಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ.
ಸಿದ್ಧಗಂಗಾ ಮಠದ ಶಾಲೆಯ ಮೊತ್ತ ಮೊದಲ ವಿದ್ಯಾರ್ಥಿನಿಯಾದ ನನ್ನ ತಾಯಿಯ ಅನುಭವದ ಪರಿಚಯ ಈ ಲೇಖನದ ಉದ್ದೇಶ. ಇದನ್ನು ಹೇಳುವಾಗ, ಬರೆಯುವಾಗ ಭಕ್ತಿ, ಕೃತಜ್ಞತೆಗಳು ಎದೆತುಂಬಿ ನಿಂತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ. ಮತ್ತಷ್ಟು ಓದು
ತೊತ್ತೋಚಾನ್ (ಪುಸ್ತಕ ಪರಿಚಯ)
– ವಲವಿ ವಿಜಯಪುರ
“ಕನಸುಗಳನ್ನು ಕಾಣಬೇಕು. ಉನ್ನತೋನ್ನತವಾದ ಹಗಲು ಕನಸು ಕಾಣಿರಿ.”
ಇದು ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿ| ಶ್ರೀ ಅಬ್ದುಲ್ ಕಲಾಂ ಅವರ ಅಮೃತ ನುಡಿ.
ಹೌದು, ಕನಸು ಕಾಣಬೇಕು. ಉನ್ನತೋನ್ನತವಾದ ಕನಸನ್ನೇ ಕಾಣಬೇಕು. ಮತ್ತು ಅದನ್ನು ನನಸಾಗಿಸುವತ್ತ ಸತತ ಪ್ರಯತ್ನಿಸಬೇಕು. ಅಂಥ ಉನ್ನತ ಕನಸನ್ನು ಕಂಡು ಅದನ್ನು ನನಸಾಗಿಸಲು ಹಗಲಿರುಳು ಶ್ರಮಿಸಿದ, ಖ್ಯಾತ ಶಿಕ್ಷಣ ಪ್ರೇಮಿ, ಮಕ್ಕಳ ಪ್ರೇಮಿ, ಪ್ರಯೋಗಶೀಲ ವ್ಯಕ್ತಿತ್ವದ ಶ್ರೀ ಸೋಸಾಕು ಕೊಬಾಯಾಶಿ ಅವರ ಪ್ರಾಯೋಗಿಕ ಶಾಲೆ ತೊಮೆಯೆ ಗಾಕುಯೆನ್ ಹೇಗಿತ್ತು ಎಂದು ತಿಳಿಸುವ ಪ್ರಯತ್ನವನ್ನು ಆ ಶಾಲೆಯ ಹಾಗೂ ಕೊಬಾಯಾಶಿ ಅವರ ಪ್ರಯೋಗದ ನೇರ ಭಾಗೀದಾರಳಾದ ತೊಮೆಯೆ ಶಾಲೆಯ ಮಾಜಿ ವಿದ್ಯಾರ್ಥಿನಿ ಶ್ರೀಮತಿ ತೆತ್ಸುಕೋ ಕುರೊಯಾನಾಗಿ ಬರೆದ ಪುಸ್ತಕವೇ ಈ ‘ತೊತ್ತೋ ಚಾನ್’ ಮತ್ತಷ್ಟು ಓದು
ನಮೋ ಶಿವಕುಮಾರ ಸ್ವಾಮಿ: ಶರಣಂ ಗಚ್ಛಾಮಿ!
~ ತುರುವೇಕೆರೆ ಪ್ರಸಾದ್
ಗಾಂಧಿನಗರ
ತುರುವೇಕೆರೆ-572227
ಸಿದ್ಧಗಂಗೆಯ ಐಸಿರಿ, ತಾನಾಗಬಲ್ಲನಿಲ್ಲಿ ನರನು ನಾರಾಯಣನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಸುಮಾರು 9 ದಶಕಗಳ ಕಾಲ ಅವರು ಮನುಕುಲಕ್ಕೆ ಸಲ್ಲಿಸಿದ ಸೇವೆ ಅನುಪಮವಾದದು, ಅನನ್ಯವಾದದು, ಮಾನವೀಯತೆಯ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿ ‘ನಭೂತೋ ನಭವಿಷ್ಯತ್’ ಎನ್ನುವಂತೆ ದಾಖಲಾಗುವಂತಾದ್ದು. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗ್ದರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ ಬಹುಮುಖಿ ದಾಸೋಹದ ವೈಖರಿಯೇ ಅನನ್ಯ! ಮತ್ತಷ್ಟು ಓದು