ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ – ಶ್ರೀ ಶಿವಕುಮಾರ ಸ್ವಾಮೀಜಿ.
– ಡಾ.ಸುದರ್ಶನ ಗುರುರಾಜರಾವ್
ಸರಿ ಸುಮಾರು ನೂರಾಹನ್ನೊಂದು ವರ್ಷಗಳ ಕಾಲ ದೇಶಸೇವೆಯೇ ಈಶಸೇವೆ ಎಂದೆನ್ನುತ್ತಾ, ಜನತೆಯಲ್ಲಿಯೇ ಜನಾರ್ದನನನ್ನು ಕಂಡು ನಮ್ಮನ್ನಗಲಿದ ಯುಗಪುರುಷ, ನಡೆದಾಡುವ ದೇವರೆಂದೇ ಜನಮಾನಸಗಳಲ್ಲಿ ನೆಲೆಯಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ನಮ್ಮನ್ನು ತೊರೆದು ನೈತಿಕವಾಗಿ ದಿನೇ ದಿನೇ ಅಧೋಗತಿಗಿಳಿಯುತ್ತಿರುವ ನಮ್ಮ ಸಮಾಜವನ್ನು ಆ ಮೂಲಕವಾಗಿ ಸಾತ್ವಿಕ ಸಮುದಾಯವನ್ನು ಅನಾಥರನ್ನಾಗಿ ಮಾಡಿ ಹೋದದ್ದು ದುಃಖಕರವಾದ ಸಂಗತಿಯೇ ಸರಿ. ಕಾಲನ ಕರೆಗೆ ಓಗೊಡದವರಾರು?
ಸ್ವಾಮೀಜಿಗಳ ಬಗ್ಗೆ ಅವರು ಹಗಲಿರುಳು ದುಡಿದು ಕಾಯಾ ವಾಚಾ ಮನಸಾ ದೀನರ ಕರೆಗೆ ಓಗೊಟ್ಟದ್ದು, ಏನೂ ಇದ್ದಿಲ್ಲದ ಒಂದು ಬಿಡಿ ಮಠವನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದ್ದು, ಆ ಮೂಲಕವಾಗಿ ಲಕ್ಷಾಂತರ ಜೀವಗಳ ಅಭಿವೃದ್ಧಿಗೆ ಕಾರಣರಾದದ್ದು , ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ಸರಕಾರಗಳ ಅನೀತಿಯ ಕಾಕದೃಷ್ಟಿಗೆ ಬಿದ್ದು ಕಷ್ಟ ಅನುಭವಿಸಿದರೂ ಒಂದೇ ಒಂದು ಮಾತನಾಡದೆ ಮಠದ ಮಕ್ಕಳಿಗೆ ಅನ್ನಪೋಷಣೆ ವಿದ್ಯಾದಾನಗಳನ್ನು ಅವಿರತವಾಗಿ ಮುಂದುವರಿಸಿದ್ದು ಎಲ್ಲವನ್ನು ಕೇಳಿ, ಓದಿ ತಿಳಿದಿದ್ದೇವೆ. ಇವೆಲ್ಲದರ ನಡುವೆ ತುಮಕೂರಿನ ಆಸುಪಾಸಿನಲ್ಲಿ ನಾನಾ ಕಾರಣಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಸಮಾನತೆಯ ಹರಿಕಾರ ಶ್ರೀ ಸ್ವಾಮೀಜಿಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ.
ಸಿದ್ಧಗಂಗಾ ಮಠದ ಶಾಲೆಯ ಮೊತ್ತ ಮೊದಲ ವಿದ್ಯಾರ್ಥಿನಿಯಾದ ನನ್ನ ತಾಯಿಯ ಅನುಭವದ ಪರಿಚಯ ಈ ಲೇಖನದ ಉದ್ದೇಶ. ಇದನ್ನು ಹೇಳುವಾಗ, ಬರೆಯುವಾಗ ಭಕ್ತಿ, ಕೃತಜ್ಞತೆಗಳು ಎದೆತುಂಬಿ ನಿಂತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ. ಮತ್ತಷ್ಟು ಓದು