ಮಾಧ್ಯಮಗಳೇ ಸಾಕು ನಿಲ್ಲಿಸಿ ನಿಮ್ಮ ಬೂಟಾಟಿಕೆಯ..
– ವರುಣ್ ಕುಮಾರ್
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇವು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೊಂದು ಅಂಗ ನಿಷ್ಕ್ರೀಯಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳಿರುತ್ತದೆ. ಇಂತಹ ನಿಷ್ಕ್ರೀಯ ವ್ಯವಸ್ಥೆಗಳಿಗೆ ಚುರುಕು ಮುಟ್ಟಿಸಲು, ನಿದ್ದೆಯಲ್ಲಿರುವ ಅಧಿಕಾರಿಗಳನ್ನು ಎಬ್ಬಿಸಲು ಜನತೆ ಹಾಗೂ ಆಡಳಿತ ವ್ಯವಸ್ಥೆಯ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲು ಸುದ್ದಿ ಮಾದ್ಯಮಗಳ ಪಾತ್ರ ಬಹುಮುಖ್ಯವಾದುದು. ಅದಕ್ಕಾಗಿ ಮಾದ್ಯಮಕ್ಕೆ ೪ ನೇ ಆಧಾರಸ್ತಂಭವೆಂಬ ವಿಶೇಷ ಸ್ಥಾನವನ್ನು ಕಲ್ಪಿಸಲಾಗಿದೆ.
ಈ ಸ್ಥಾನವನ್ನು ಮಾದ್ಯಮ ರಂಗದವರು ಕಾಪಾಡಿಕೊಂಡಿದ್ದಾರೆಯೇ?, ಇವರ ಕಾರ್ಯಶೈಲಿ, ನಿರ್ವಹಣೆ ಹಾಗೂ ಅವರ ನಡವಳಿಕೆಗಳು ಇದರ ಬಗ್ಗೆ ಸಣ್ಣ ವಿಶ್ಲೇಷಣೆಯನ್ನು ನಡೆಸೋಣ.
ಕೆಲ ದಶಕಗಳ ಹಿಂದೆ ಹೋದರೆ ಸುದ್ದಿ ವಾಹಿನಿಗಳ ಆರ್ಭಟ ಇಷ್ಟೊಂದಿರಲಿಲ್ಲ. ಆಯಾ ದಿನಗಳಲ್ಲಿ ನಡೆದಂತಹ ಸುದ್ದಿಗಳನ್ನು ಕೇವಲ ೨೦ ಅಥವಾ ೩೦ ನಿಮಿಷಗಳಲ್ಲಿ ಎಲ್ಲ ಪ್ರಮುಖ ವಾರ್ತೆಗಳನ್ನು ಪ್ರಸಾರ ಮಾಡುತ್ತಿದ್ದವು. ಆದರೆ ಯಾವಾಗ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಭಾರತ ಸಾಧಿಸಿದಾಗ ಎಲ್ಲ ವಿಭಾಗಗಳಲ್ಲಿ ಮಹತ್ತರ ಬದಲಾವಣೆಗಳು ಕಾಣಲಾರಂಭಿಸಿದರು. ಒಂದೆರಡು ವಾಹಿನಿಗಳಿದ್ದಲ್ಲಿ ನೂರಾರು ವಾಹಿನಿಗಳು ಟಿ.ವಿ.ಪರದೆಯಲ್ಲಿ ಕಾಣತೊಡಗಿಸಿದವು. ಅದರಲ್ಲೂ ಮುಖ್ಯವಾಗಿ ೨೪*೭ ಘಂಟೆ ಸುದ್ದಿಗಳನ್ನು ಬಿತ್ತರಿಸುವ ವಾಹಿನಿಗಳೆಂದರೆ ಅದೊಂದು ಪ್ರತಿಷ್ಠೆಯ ವಿಷಯವೇ ಆಗಿತ್ತು. ಇಲ್ಲಿಂದ ಸುದ್ದಿಗಳನ್ನು ಕೊಡುವ ವ್ಯಾಖ್ಯೆಯೇ ಬದಲಾಗತೊಡಗಿತು, ಬ್ರೇಕಿಂಗ್ ನ್ಯೂಸ್, ಫ್ಲಾಶ್ ನ್ಯೂಸ್ ಈ ರೀತಿಯಾಗಿ ಪ್ರತಿ ಕ್ಷಣದಲ್ಲೂ ಸುದ್ದಿಯನ್ನು ಬಿತ್ತರಿಸುವ ರೀತಿಯಲ್ಲಿ ವಾಹಿನಿಗಳು ಬಂದುಬಿಟ್ಟವು. ಆದರೆ ಯಾವಾಗ ತಮ್ಮ ಲಾಭಕ್ಕೋಸ್ಕರ, ವಾಣಿಜ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹಿನಿಗಳು ಕೆಲಸ ಮಾಡತೊಡಗಿದಾಗ ಪ್ರಜಾಪ್ರಭುತ್ವದ ಆಧಾರ ಸ್ತಂಭವೇ ಅಲುಗಾಡುವ ಪರಿಸ್ಥಿತಿಗೆ ಬರತೊಡಗಿತು. ಮತ್ತಷ್ಟು ಓದು