ನಮೋ ಶಿವಕುಮಾರ ಸ್ವಾಮಿ: ಶರಣಂ ಗಚ್ಛಾಮಿ!
~ ತುರುವೇಕೆರೆ ಪ್ರಸಾದ್
ಗಾಂಧಿನಗರ
ತುರುವೇಕೆರೆ-572227
ಸಿದ್ಧಗಂಗೆಯ ಐಸಿರಿ, ತಾನಾಗಬಲ್ಲನಿಲ್ಲಿ ನರನು ನಾರಾಯಣನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಸುಮಾರು 9 ದಶಕಗಳ ಕಾಲ ಅವರು ಮನುಕುಲಕ್ಕೆ ಸಲ್ಲಿಸಿದ ಸೇವೆ ಅನುಪಮವಾದದು, ಅನನ್ಯವಾದದು, ಮಾನವೀಯತೆಯ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿ ‘ನಭೂತೋ ನಭವಿಷ್ಯತ್’ ಎನ್ನುವಂತೆ ದಾಖಲಾಗುವಂತಾದ್ದು. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗ್ದರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ ಬಹುಮುಖಿ ದಾಸೋಹದ ವೈಖರಿಯೇ ಅನನ್ಯ! ಮತ್ತಷ್ಟು ಓದು 




