“ರೋಟಿ ಕಪಡಾ ಔರ್ ಮಕಾನ್ ನಿಂದ ಹೊಸ ಆಶೋತ್ತರದತ್ತ ಯುವ ಸಮೂಹ”
– ಪ್ರೊ. ಪುನೀತ್‌ರಾಜ್ ಕೆ. ಎನ್
ಜೈನ್ ಯೂನಿವರ್ಸಿಟಿ
ವಿಶ್ವದ ಐದನೇ ಒಂದರಷ್ಟು ಯುವಜನರು ಭಾರತದಲ್ಲಿದ್ದಾರೆ. ದೇಶದ ಅರ್ಧದಷ್ಟು ಜನರ ವಯೋಮಾನ 25 ವರ್ಷಕ್ಕಿಂತ ಕಡಿಮೆ ಇದೆ. ದೇಶ ಮುನ್ನಡೆ ಸಾಧಿಸಬೇಕು ಎಂದರೆ ಈ ಯುವಜನರ ಆಶೋತ್ತರಗಳನ್ನು ಈಡೇರಿಸುವುದು ಬಹಳ ಮುಖ್ಯವಾದ ಸಂಗತಿ. ಕೈಬೆರಳ ತುದಿಯಲ್ಲಿ ಸಿಗುತ್ತಿರುವ ತಂತ್ರಜ್ಞಾನದ ಪರಿಣಾಮವಾಗಿ ಯುವಜನರ ಆಶೋತ್ತರಗಳಲ್ಲಿ ಗಣನೀಯ ಬದಲಾವಣೆ ಆಗಿರುವುದು ಗೋಚರಿಸುತ್ತದೆ. ವಿಶ್ವಾದಾದ್ಯಂತ ಏನಾಗುತ್ತಿದೆ ಎಂಬುದನ್ನು ಅರಿಯುವುದರ ಮೂಲಕ ಜೀವನದ ಬಗ್ಗೆ ತಮ್ಮದೇ ಆದ ವಿಶ್ವನೋಟವನ್ನು ಬೆಳೆಸಿಕೊಳ್ಳಲು ತಂತ್ರಜ್ಞಾನ ಸಹಕರಿಸುತ್ತ್ತಿದೆ. ಇತ್ತೀಚಿನ ವರ್ಷಗಳಲ್ಲಿ “ಸಫಲತೆ” ಎಂಬ ಅಂಶವೇ ಸಾಕಷ್ಟು ಬದಲಾವಣೆ ಕಂಡಿರುವುದನ್ನು ನಾವು ನೋಡಬಹುದು. ಇಂದಿನ ಯುವಕರು ಧೈರ್ಯಶಾಲಿಗಳು, ನಿರ್ಧಾರ ಕೈಗೊಳ್ಳಲು ಹಿಂಜರಿಯದ, ಖಂಡಿಸುವ, ಮುಕ್ತವಾಗಿ ಟೀಕಿಸುವ, ತಮಗೆ ಯಾವುದು ಉತ್ತಮ ಎಂಬುದನ್ನು ಅರಿಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ 20 ವರ್ಷಗಳ ಮುನ್ನ ಪರಿಸ್ಥಿತಿ ಹೀಗೆ ಇರಲಿಲ್ಲ. ಅದು ಐಐಟಿ/ಐಐಎಂಗಳಿಂದ ಪದವಿ ಪಡೆಯುವುದು, ಅಧಿಕಾರಿಯಾಗಿ ನೇಮಕವಾಗುವುದು, ಉತ್ತಮ ಸಂಬಳ ಹೊಂದಿರುವ ಸುರಕ್ಷಿತ ಕೆಲಸ ಅರಸುವುದು, ವಿದೇಶಗಳಲ್ಲಿರಬಹುದಾದ ಕೆಲಸದ ಅವಕಾಶಗಳತ್ತ ಆಕರ್ಷಣೆಗಳೇ ಸಫಲತೆಗೆ ಮಾನದಂಡವಾಗಿದ್ದವು. ಇದಕ್ಕೆ ತದ್ವಿರುದ್ಧವಾಗಿ, ಕುಟುಂಬ ಆಡಳಿತಕ್ಕೆ ಸಮಾನವಾಗಿದ್ದ ಹಾಗೂ ಸಫಲತೆಯ ಪ್ರಮಾಣ ಕಡಿಮೆಯಿದ್ದ ಕ್ರೀಡೆ, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳು ಬಹುತೇಕಯುವಕ/ಯುವತಿಯರ ಆಯ್ಕೆಯೇ ಆಗುತ್ತಿರಲಿಲ್ಲ. ಕ್ರೀಡಾತಾರೆಯ ಪುತ್ರನೊಬ್ಬ ತನ್ನ ಕ್ರೀಡಾ ಸಾಮರ್ಥ್ಯಕ್ಕಿಂತಲೂ ತನ್ನ ತಂದೆಯ ಪ್ರಭಾವದ ಕಾರಣಕ್ಕೆ ಕ್ರೀಡಾಪಟುವಾಗುವ ಅವಕಾಶ ಹೊಂದಿರುತ್ತಿದ್ದ. ಸಿನಿಮಾತಾರೆಯ ಪುತ್ರನನ್ನು ತನ್ನ ಪ್ರಭಾವದ ಕಾರಣದಿಂದಲೇ ಬೆಳ್ಳಿತೆರೆಗೆ ಕರೆತರುವ ಹಾಗೂ ರಾಜಕಾರಣಿಯ ಪ್ರಭಾವದಿಂದಲೇ ತನ್ನ ಪುತ್ರನನ್ನು ರಾಜಕೀಯಕ್ಕೆ ಕರೆತರುತ್ತಿದ್ದರು. ವಿಫಲವಾಗುವ ಹಾಗೂ ತಿರಸ್ಕಾರಕ್ಕೆ ಒಳಗಾಗುವ ಅಪಾಯಕ್ಕೆ ಹೆದರುತ್ತಿದ್ದ ಬಹುಪಾಲು ಯುವಕರು ಈ ಕ್ಷೇತ್ರಗಳಿಂದ ದೂರವೇ ಉಳಿಯುತ್ತಿದ್ದರು. ನಂತರದ ದಿನಗಳಲ್ಲಿ, ಅಷ್ಟೇನೂ ಉತ್ಸಾಹದಿಂದ ಸ್ವಾಗತಿಸದ ಪರಿಸ್ಥಿತಿ ಬಂದಿತು. ಘಟಾನುಘಟಿಗಳನ್ನು ದಾಟಿ ಈ ಬಾಗಿಲುಗಳನ್ನು ದಾಟಿ ಒಳಹೋಗುವುದು ಅಸಾಧ್ಯ ಎಂಬಷ್ಟೇ ಕಠಿಣ ಕೆಲಸವಾಗಿತ್ತು. ಈ ಪ್ರವಾಹದ ವಿರುದ್ಧ ಈಜಿ ದಡ ಸೇರಿದವರು ಬೆರಳೆಣಿಕೆ ಮಂದಿ ಮಾತ್ರ. ಶಾರೂಖ್‍ಖಾನ್, ಅಕ್ಷಯಕುಮಾರ್‌ನಂತಹ ಕೆಲ ಸಿನಿಮಾ ಸ್ಟಾರ್‍ಗಳು ಹಾಗೂ ಕೆಲವೇ ಕ್ರೀಡಾಪಟುಗಳು ಮಾತ್ರವೇ ಎಲ್ಲ ಅಡೆತಡೆಗಳನ್ನು ದಾಟಿ ಸಫಲರಾಗಲು ಸಾಧ್ಯವಾಯಿತೇ ಹೊರತು ಬಹುತೇಕ ಯುವಕರು ಇದು ತಮ್ಮ ಕೈಲಾಗುವ ಕೆಲಸವಲ್ಲ ಎಂದುಕೊಂಡು ಈ ಕ್ಷೇತ್ರಗಳಿಂದ ದೂರವುಳಿಯುತ್ತಿದ್ದರು. ಮತ್ತಷ್ಟು ಓದು
‘ನಿಧಿ’ಗಿಂತ ‘ದನಿ’ನೀಡುವ ಸಂಸದರು ಬೇಕು – ಸಂಸದರ ಕಾರ್ಯಕ್ಷೇತ್ರದ ಅರಿವೂ ಇರಬೇಕು!
– ತುರುವೇಕೆರೆ ಪ್ರಸಾದ್
ಉತ್ತರಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗಡೆ ಮಾತನಾಡಿದರೆ ವಿವಾದವಾಗುತ್ತದೆ ಎಂದು ತಿಳಿದವರೇ ಹೆಚ್ಚು. ಹೆಗಡೆಯವರು ನಮ್ಮ ಸಂಸ್ಕೃತಿ, ಪರಂಪರೆ, ಸಂವಿಧಾನ ಹಾಗೂ ಸಂಸದರ ಜವಾಬ್ಧಾರಿಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ, ತರ್ಕಬದ್ಧವಾಗಿ ಮಾತನಾಡಬಲ್ಲರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಅನಂತಕುಮಾರ ಹೆಗಡೆಯವರು ಸಂಸದರ ಜವಾಬ್ಧಾರಿಗಳ ಬಗ್ಗೆ ಮಾತಾಡಿರುವ ಒಂದು ಪುಟ್ಟ ವೀಡಿಯೋ ನೋಡಿದೆ. ಆ ಪುಟ್ಟ ವೀಡಿಯೋದಲ್ಲಿ ಹೆಗಡೆಯವರು ಸಂಸದರ ಕಾರ್ಯವ್ಯಾಪ್ತಿಯ ಬಗ್ಗೆ ಬಹಳ ಅದ್ಭುತವಾಗಿ ಮಾತನಾಡಿದ್ದಾರೆ. ಅಭಿವೃದ್ಧಿಯ ಅತ್ಯಂತ ಮಾರ್ಮಿಕ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಗಳಲ್ಲ, ಕಾಮಗಾರಿಗಳು ಕೇವಲ ಅಭಿವೃದ್ಧಿಯ ಒಂದು ಭಾಗವಷ್ಟೇ. ಸಮುದಾಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಲ್ಕು ವಿಧಗಳಿವೆ. ಮೂಲಭೂತ ಅಭಿವೃದ್ಧಿ, ಸಾಂಸ್ಕøತಿಕ ಅಭಿವೃದ್ಧಿ,ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ. ಅಭಿವೃದ್ಧಿ ನಿರಂತರ ಪ್ರಕ್ರಿಯೆ, ಅದಕ್ಕೆ ಅಂತ್ಯವಿಲ್ಲ. ಕಾಮಗಾರಿಗೆ ಮಾತ್ರ ಅಂತ್ಯವಿದೆ. ಜನಸಾಮಾನ್ಯರಿಗೆ ಮೂಲಭೂತ ಅಭಿವೃದ್ಧಿಯಷ್ಟೇ ಕಾಣುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅವರು ಹೆಚ್ಚು ಒತ್ತು ಕೊಡುವುದಿಲ್ಲ. ಸಮುದಾಯದ ಅಭಿವೃದ್ದಿಯ ಅಂತರಾಳ ಅಡಗಿರುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ! ಇದರ ಒಂದು ಭಾಗ ಮಾತ್ರ ಮೂಲಭೂತ ಅಭಿವೃದ್ಧಿ. ಇದು ಅವರ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ.ಕೇಂದ್ರ ಯಾವ ಮೂಲಭೂತ ಅಭಿವೃದ್ಧಿಗೆ ಒತ್ತು ಕೊಡಬೇಕು? ಒಂದು ಗ್ರಾಮೀಣ ಕಾಮಗಾರಿಗೆ ಗ್ರಾ.ಪಂ. ಜಿ.ಪಂ ಸದಸ್ಯರಷ್ಟೇ ಮಹತ್ವವನ್ನು ಸಂಸದರೂ ಕೊಡಬೇಕಾ?ಆ ಮಟ್ಟದಲ್ಲಿ ರಾಜಕಾರಣವನ್ನು ಒಬ್ಬ ಸಂಸದ ಮಾಡಬಾರದು.ಸಂಸದರ ಕಾರ್ಯವ್ಯಾಪ್ತಿಯ ಅರಿವೇ ಇಲ್ಲದೆ ಅತ್ಯಂತ ಕೆಳಹಂತಕ್ಕೆ ಇಳಿದು ರಾಜಕಾರಣ ಮಾಡುವುದು ಮತ್ತು ಹಾಗೆ ನಿರೀಕ್ಷಿಸುವುದು ದುರ್ದೈವ ಎನ್ನುತ್ತಾರೆ.
ಕುಮಾರರಾಮ
– ವರುಣ್ ಕುಮಾರ್
(ವಾರಕ್ಕೊಂದು ವೀರರು)
ಭಾರತದ ಹಿಂದೂ ಸಾಮ್ರಾಟ ಎಂದ ಕೂಡಲೇ ನಮ್ಮ ಸ್ಮೃತಿಪಟಲದಲ್ಲಿ ಶಿವಾಜಿ ಮಹಾರಾಜರ ಹೆಸರು ಬರುತ್ತದೆ. ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ರೀತಿ, ಅವರ ರಾಜಕೀಯ ತಂತ್ರಗಾರಿಕೆಗಳು, ಎಂಥವರಿಗೂ ರೋಮಾಂಚನವನ್ನು ಉಂಟು ಮಾಡುತ್ತದೆ. ತನ್ನ ಅಲ್ಪಾವಧಿಯಲ್ಲಿ ಮೊಘಲರ ಸಾಮ್ರಾಜ್ಯವನ್ನು ಕೇವಲ ಉತ್ತರ ಭಾರತಕ್ಕೆ ಸೀಮಿತಗೊಳಿಸುವಲ್ಲಿ ಶಿವಾಜಿಯ ಪಾತ್ರ ಅಪಾರವಾದುದು. ಆದರೆ ಶಿವಾಜಿಯ ಪೂರ್ವ ಕಾಲದಲ್ಲಿ ದಕ್ಷಿಣ ಪ್ರಾಂತ್ಯಕ್ಕೆ ಮೊಘಲರ ದಾಳಿಯನ್ನು ಹಿಮ್ಮಟ್ಟಿಸುವಲ್ಲಿ ಯುವ ಅರಸ ಕುಮಾರರಾಮನ ಪಾತ್ರ ಮಹತ್ವದ್ದು. ಹಿಂದೂ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಕೊಟ್ಟು ಮುಂದಿನ ೨೦೦ ವರ್ಷಗಳ ಕಾಲ ಅವರ ವಂಶಜರು ದಕ್ಷಿಣ ಪ್ರಾಂತ್ಯದಲ್ಲಿ ಹಿಂದೂ ಸಾಮ್ರಾಜ್ಯವನ್ನು ಪುನರುತ್ಥಾನಗೊಳಿಸಿದರು. ಮತ್ತಷ್ಟು ಓದು