“ರೋಟಿ ಕಪಡಾ ಔರ್ ಮಕಾನ್ ನಿಂದ ಹೊಸ ಆಶೋತ್ತರದತ್ತ ಯುವ ಸಮೂಹ”
– ಪ್ರೊ. ಪುನೀತ್‌ರಾಜ್ ಕೆ. ಎನ್
ಜೈನ್ ಯೂನಿವರ್ಸಿಟಿ
ವಿಶ್ವದ ಐದನೇ ಒಂದರಷ್ಟು ಯುವಜನರು ಭಾರತದಲ್ಲಿದ್ದಾರೆ. ದೇಶದ ಅರ್ಧದಷ್ಟು ಜನರ ವಯೋಮಾನ 25 ವರ್ಷಕ್ಕಿಂತ ಕಡಿಮೆ ಇದೆ. ದೇಶ ಮುನ್ನಡೆ ಸಾಧಿಸಬೇಕು ಎಂದರೆ ಈ ಯುವಜನರ ಆಶೋತ್ತರಗಳನ್ನು ಈಡೇರಿಸುವುದು ಬಹಳ ಮುಖ್ಯವಾದ ಸಂಗತಿ. ಕೈಬೆರಳ ತುದಿಯಲ್ಲಿ ಸಿಗುತ್ತಿರುವ ತಂತ್ರಜ್ಞಾನದ ಪರಿಣಾಮವಾಗಿ ಯುವಜನರ ಆಶೋತ್ತರಗಳಲ್ಲಿ ಗಣನೀಯ ಬದಲಾವಣೆ ಆಗಿರುವುದು ಗೋಚರಿಸುತ್ತದೆ. ವಿಶ್ವಾದಾದ್ಯಂತ ಏನಾಗುತ್ತಿದೆ ಎಂಬುದನ್ನು ಅರಿಯುವುದರ ಮೂಲಕ ಜೀವನದ ಬಗ್ಗೆ ತಮ್ಮದೇ ಆದ ವಿಶ್ವನೋಟವನ್ನು ಬೆಳೆಸಿಕೊಳ್ಳಲು ತಂತ್ರಜ್ಞಾನ ಸಹಕರಿಸುತ್ತ್ತಿದೆ. ಇತ್ತೀಚಿನ ವರ್ಷಗಳಲ್ಲಿ “ಸಫಲತೆ” ಎಂಬ ಅಂಶವೇ ಸಾಕಷ್ಟು ಬದಲಾವಣೆ ಕಂಡಿರುವುದನ್ನು ನಾವು ನೋಡಬಹುದು. ಇಂದಿನ ಯುವಕರು ಧೈರ್ಯಶಾಲಿಗಳು, ನಿರ್ಧಾರ ಕೈಗೊಳ್ಳಲು ಹಿಂಜರಿಯದ, ಖಂಡಿಸುವ, ಮುಕ್ತವಾಗಿ ಟೀಕಿಸುವ, ತಮಗೆ ಯಾವುದು ಉತ್ತಮ ಎಂಬುದನ್ನು ಅರಿಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ 20 ವರ್ಷಗಳ ಮುನ್ನ ಪರಿಸ್ಥಿತಿ ಹೀಗೆ ಇರಲಿಲ್ಲ. ಅದು ಐಐಟಿ/ಐಐಎಂಗಳಿಂದ ಪದವಿ ಪಡೆಯುವುದು, ಅಧಿಕಾರಿಯಾಗಿ ನೇಮಕವಾಗುವುದು, ಉತ್ತಮ ಸಂಬಳ ಹೊಂದಿರುವ ಸುರಕ್ಷಿತ ಕೆಲಸ ಅರಸುವುದು, ವಿದೇಶಗಳಲ್ಲಿರಬಹುದಾದ ಕೆಲಸದ ಅವಕಾಶಗಳತ್ತ ಆಕರ್ಷಣೆಗಳೇ ಸಫಲತೆಗೆ ಮಾನದಂಡವಾಗಿದ್ದವು. ಇದಕ್ಕೆ ತದ್ವಿರುದ್ಧವಾಗಿ, ಕುಟುಂಬ ಆಡಳಿತಕ್ಕೆ ಸಮಾನವಾಗಿದ್ದ ಹಾಗೂ ಸಫಲತೆಯ ಪ್ರಮಾಣ ಕಡಿಮೆಯಿದ್ದ ಕ್ರೀಡೆ, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳು ಬಹುತೇಕಯುವಕ/ಯುವತಿಯರ ಆಯ್ಕೆಯೇ ಆಗುತ್ತಿರಲಿಲ್ಲ. ಕ್ರೀಡಾತಾರೆಯ ಪುತ್ರನೊಬ್ಬ ತನ್ನ ಕ್ರೀಡಾ ಸಾಮರ್ಥ್ಯಕ್ಕಿಂತಲೂ ತನ್ನ ತಂದೆಯ ಪ್ರಭಾವದ ಕಾರಣಕ್ಕೆ ಕ್ರೀಡಾಪಟುವಾಗುವ ಅವಕಾಶ ಹೊಂದಿರುತ್ತಿದ್ದ. ಸಿನಿಮಾತಾರೆಯ ಪುತ್ರನನ್ನು ತನ್ನ ಪ್ರಭಾವದ ಕಾರಣದಿಂದಲೇ ಬೆಳ್ಳಿತೆರೆಗೆ ಕರೆತರುವ ಹಾಗೂ ರಾಜಕಾರಣಿಯ ಪ್ರಭಾವದಿಂದಲೇ ತನ್ನ ಪುತ್ರನನ್ನು ರಾಜಕೀಯಕ್ಕೆ ಕರೆತರುತ್ತಿದ್ದರು. ವಿಫಲವಾಗುವ ಹಾಗೂ ತಿರಸ್ಕಾರಕ್ಕೆ ಒಳಗಾಗುವ ಅಪಾಯಕ್ಕೆ ಹೆದರುತ್ತಿದ್ದ ಬಹುಪಾಲು ಯುವಕರು ಈ ಕ್ಷೇತ್ರಗಳಿಂದ ದೂರವೇ ಉಳಿಯುತ್ತಿದ್ದರು. ನಂತರದ ದಿನಗಳಲ್ಲಿ, ಅಷ್ಟೇನೂ ಉತ್ಸಾಹದಿಂದ ಸ್ವಾಗತಿಸದ ಪರಿಸ್ಥಿತಿ ಬಂದಿತು. ಘಟಾನುಘಟಿಗಳನ್ನು ದಾಟಿ ಈ ಬಾಗಿಲುಗಳನ್ನು ದಾಟಿ ಒಳಹೋಗುವುದು ಅಸಾಧ್ಯ ಎಂಬಷ್ಟೇ ಕಠಿಣ ಕೆಲಸವಾಗಿತ್ತು. ಈ ಪ್ರವಾಹದ ವಿರುದ್ಧ ಈಜಿ ದಡ ಸೇರಿದವರು ಬೆರಳೆಣಿಕೆ ಮಂದಿ ಮಾತ್ರ. ಶಾರೂಖ್‍ಖಾನ್, ಅಕ್ಷಯಕುಮಾರ್‌ನಂತಹ ಕೆಲ ಸಿನಿಮಾ ಸ್ಟಾರ್‍ಗಳು ಹಾಗೂ ಕೆಲವೇ ಕ್ರೀಡಾಪಟುಗಳು ಮಾತ್ರವೇ ಎಲ್ಲ ಅಡೆತಡೆಗಳನ್ನು ದಾಟಿ ಸಫಲರಾಗಲು ಸಾಧ್ಯವಾಯಿತೇ ಹೊರತು ಬಹುತೇಕ ಯುವಕರು ಇದು ತಮ್ಮ ಕೈಲಾಗುವ ಕೆಲಸವಲ್ಲ ಎಂದುಕೊಂಡು ಈ ಕ್ಷೇತ್ರಗಳಿಂದ ದೂರವುಳಿಯುತ್ತಿದ್ದರು. ಮತ್ತಷ್ಟು ಓದು