ವಿಷಯದ ವಿವರಗಳಿಗೆ ದಾಟಿರಿ

Archive for

22
ಆಕ್ಟೋ

ಮಯಾಂಕ್ ಅಗರ್ವಾಲ್ – ಚುಕ್ಕೆಗಳ ನಡುವೆಯ ಚಂದ್ರಮ

– ಪ್ರಶಾಂತ ಮಾಸ್ತಿಹೊಳಿ

ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯದ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ , ಭಾರತ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಎಲ್ಲ  ಕ್ರಿಕೆಟ್ ಪ್ರೇಮಿಗಳ ಗಮನ ಆ ಪಂದ್ಯದಲ್ಲಿ ರೋಹಿತ ಶರ್ಮ ಮೇಲೆ ನೆಟ್ಟಿತ್ತು . ಮೊದಲ ಬಾರಿಗೆ ರೋಹಿತ ಆರಂಭಿಕ್ ಆಟಗಾರರಾಗಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತಿದ್ದರು. ರೋಹಿತ  ಎರಡೂ ಇನ್ನಿಂಗ್ಸನಲ್ಲಿ ಶತಕ  ದಾಖಲಿಸುವ ಮೂಲಕ  ತಮ್ಮಲ್ಲಿಟ್ಟಿದ್ದ ನೀರಿಕ್ಷೆಯನ್ನು ಹುಸಿಗೊಳಿಸಲಿಲ್ಲ. ಇವೆಲ್ಲ ಘಟನೆಗಳ ನಡುವೆಯೇ ಮತ್ತೊಬ್ಬ ಆರಂಭಿಕ  ಆಟಗಾರರಾದ  ಮಯಾಂಕ್  ಅಗರ್ವಾಲ್ ಕೂಡ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದ್ದರು। ಆದರೆ ರೋಹಿತ್ ಮೇಲಿನ ಎಲ್ಲರ ಗಮನದಿಂದಾಗಿ  , ಅಗರ್ವಾಲ್ ಅವರ ಮೇಲೆ ಒತ್ತಡ ಸ್ವಲ್ಪ ಕಡಿಮೆಯೇ ಆಗಿತ್ತು. ಮಾಯಾಂಕ್ ಶಾಂತವಾಗಿಯೇ ತಮ್ಮ ಜೀವನದ ಮೊದಲ ಶತಕ  ದಾಖಲಿಸಿದರು. ಶತಕವನ್ನು ದ್ವೀಶತಕವಾಗಿ  ಪರಿವರ್ತನೆ ಮಾಡಿ ದಾಖಲೆಯನ್ನೂ ಮಾಡಿದರು. ಈ ಮೂಲಕ  ಭಾರತ ಎದುರಿಸುತ್ತಿರುವ ಆರಂಭಿಕ ಆಟಗಾರರ ಸಮಸ್ಯೆಯನ್ನು ತಾತ್ಕಾಲಿಕ ಮಟ್ಟಿಗೆ ನಿವಾರಿಸಿದರು ಎಂದೇ ಹೇಳಬಹುದು.

ಮಯಾಂಕ್  ಅಗರ್ವಾಲ್ ಮತ್ತು ರೋಹಿತ್ ಶರ್ಮ ಅವರ ಕ್ರಿಕೆಟ್ ಜೀವನದ ಬಗ್ಗೆ ಹಲವು ಸಾಮ್ಯತೆಗಳಿವೆ. ಸಾಕಷ್ಟು ಪ್ರತಿಭೆ ಎದ್ದರೂ ಕೂಡ ಆರಂಭದ ದಿನಗಳಲ್ಲಿ ರೋಹಿತ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರಲಿಲ್ಲ. ಇದರಿಂದ ತಂಡದಲ್ಲಿ ಅವರ ಸ್ಥಾನ ಭದ್ರವಾಗಿರಲಿಲ್ಲ. ಆಯ್ಕೆ ಸಮೀತಿ ರೋಹಿತಗೆ ಹಲವು ಅವಕಾಶಗಳನ್ನು ನೀಡಿದ ನಂತರ ತಮ್ಮ ಲಯ ಕಂಡುಕೊಂಡರು. ಮಯಾಂಕ್ರ ಮೊದಲ ದರ್ಜೆಯ ವೃತ್ತಿ ಜೀವನ ಕೂಡ ಹಲವು  ಏಳುಬೀಳುಗಳನ್ನು ಕಂಡಿದೆ. ಅವರಿಂದ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಬಂದಿದ್ದು ಕಡಿಮೆಯೇ. ಉತ್ತಮವಾಗಿಯೇ ಆಟ ಆರಂಭಿಸುತಿದ್ದ ಮಯಾಂಕ್ ಅಷ್ಟೇ ವೇಗವಾಗಿ ವಿಕೆಟ್ ಒಪ್ಪಿಸುತ್ತಿದ್ದರು. ಆದ್ದರಿಂದ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯವಾಗದೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳುತಿದ್ದರು.

ಮತ್ತಷ್ಟು ಓದು »