ವಿಷಯದ ವಿವರಗಳಿಗೆ ದಾಟಿರಿ

Archive for

3
ಜುಲೈ

ರಾಮಾಯಣ,ಮಹಾಭಾರತ,ಪುರಾಣಗಳ 64 ಸಂಪುಟಗಳು ಕನ್ನಡದಲ್ಲಿ ಅತ್ಯಂತ ಕಡಿಮೆ ಬೆಲೆಗೆ

– ವಿಶ್ವನಾಥ ಸುಂಕಸಾಲ

ಮೂಲ ಶ್ಲೋಕಗಳೊಂದಿಗೆ ಕನ್ನಡದಲ್ಲಿ ರಾಮಾಯಣ, ಮಹಾಭಾರತದ ಗ್ರಂಥಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಹಲವರದು. ಕನ್ನಡದಲ್ಲಿ ಸಮಗ್ರವಾಗಿ ಇಂಥ ಗ್ರಂಥಗಳು ದೊರೆಯುವುದು ವಿರಳವೇ. ಒಂದೆರಡು ಪ್ರಕಾಶನಗಳು ಮಾತ್ರ ಇಂದಿಗೂ ರಾಮಾಯಣ, ಮಹಾಭಾರತ, ಪುರಾಣಗಳನ್ನು ಜನರಿಗೆ ದೊರಕುವಂತೆ ಮಾಡುತ್ತಿವೆ. ಅವುಗಳಲ್ಲಿ ಭಾರತ ದರ್ಶನ ಪ್ರಕಾಶನವೂ ಒಂದು.

ಅತ್ಯಂತ ಕಡಿಮೆ ಬೆಲೆಗೆ ಕನ್ನಡದ ಜನತೆಗೆ ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ತಲುಪಿಸಲೆಂದೇ ಹುಟ್ಟಿದ ಸಂಸ್ಥೆ ‘ಭಾರತ ದರ್ಶನ ಪ್ರಕಾಶನ’.

ಮುದ್ರಣದ ವ್ಯಯಕ್ಕಿಂತ ಕಡಿಮೆ ಬೆಲೆಗೆ ಪುಸ್ತಕವನ್ನು ಒದಗಿಸುತ್ತಿರುವ ಭಾರತ ದರ್ಶನ ಪ್ರಕಾಶನಕ್ಕೆ ಓದುಗರು, ದಾನಿಗಳೇ ಬೆನ್ನೆಲುಬು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅನೇಕ ಪುಸ್ತಕಗಳು ಸಿಗಬಹುದು. ಆದರೆ ಮೂಲ ವಾಲ್ಮೀಕಿ ಹಾಗೂ ವ್ಯಾಸರಿಂದ ಲಿಖಿತವಾದ ಪ್ರತಿ ಶ್ಲೋಕವನ್ನೂ ಸಂಪುಟದ ಒಂದು ಕಡೆ ಕೊಟ್ಟು, ಮತ್ತೊಂದು ಭಾಗದಲ್ಲಿ ಸಂಪೂರ್ಣ ಅರ್ಥವನ್ನು ವಿಸ್ತೃತವಾಗಿಯೂ, ನಿರ್ದುಷ್ಟವಾಗಿಯೂ, ಸರಳ ಕನ್ನಡದಲ್ಲಿ ವಿವರಿಸಿರುವ ಗ್ರಂಥಮಾಲೆ ತೀರಾ ವಿರಳ.

ಭಾರತ ದರ್ಶನ ಪ್ರಕಾಶನದ ಒಂದೊಂದು ಸಂಪುಟವೂ 620-650 ಪೇಜುಗಳಿಂದ ಕೂಡಿವೆ. ಪ್ರತಿ ಸಂಪುಟದ ಮುದ್ರಣಕ್ಕೂ ಸರಾಸರಿ 120-150 ರೂಪಾಯಿಗಿಂತ ಹೆಚ್ಚು ವ್ಯಯವಾಗುತ್ತದಂತೆ. ಆದರೆ, ರಾಮಾಯಣ, ಮಹಾಭಾರತಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಈ ಸಂಸ್ಥೆಯು ದಾನಿಗಳ ಸಹಕಾರದಿಂದ ಮುದ್ರಣ ವ್ಯಯಕ್ಕಿಂತಲೂ ಕಡಿಮೆ ದರಕ್ಕೆ ಅಂದರೆ ಸರಾಸರಿ ಬರೀ ನೂರು ರೂಪಾಯಿಗೆ ಕೊಡುತ್ತಿದೆ.

ಮತ್ತಷ್ಟು ಓದು »

3
ಜುಲೈ

ಕಮ್ಯುನಿಸಂನ ಅಭದ್ರತೆ ಮತ್ತು ಅಸಹನೆಯೇ ಚೀನಾ ಆಕ್ರಮಣದ ಮೂಲ

– ಅಜಿತ್ ಶೆಟ್ಟಿ ಹೆರಂಜೆ

ಯಾವುದೇ ದೇಶ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಭುತ್ವ ಸ್ಥಾಪಿಸಬೇಕಾದರೆ ಅದು ವ್ಯಾಪಾರ ನಡೆಸುವ ಮಾರ್ಗ ಸುರಕ್ಷಿತವಾಗಿರಬೇಕು ಮತ್ತು ಬಹುತೇಕ ಅದು ಆ ದೇಶದ ನಿಯಂತ್ರಣದಲ್ಲಿ ಇರಬೇಕು. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಸಮುದ್ರ ಮಾರ್ಗದ ಮುಖಾಂತರವೇ ನೆಡೆದಿದ್ದು. ಇದರ ನಿಯಂತ್ರಣ ಯಾರ ಕೈಯಲ್ಲಿ ಇರುತ್ತದೆಯೋ ಅವರು ಜಗತ್ತಿನ ರಾಜಕೀಯವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ನೆಪೋಲಿಯನ್ ಬೊನಪಾರ್ಟೆ ಇಂಗ್ಲೆಂಡನ್ನು ಸಾಮರಿಕವಾಗಿ ಬಗ್ಗುಬಡಿಯಲು ಆಗದ ಸಂದರ್ಭದಲ್ಲಿ ಅದರ ಆರ್ಥಿಕತೆಯ ನರಮಂಡಲವಾಗಿದ್ದ ಸಮುದ್ರ ವ್ಯಾಪಾರ ಮಾರ್ಗದ ಮೇಲೆ ದಿಗ್ಭಂಧನವನ್ನು ಹಾಕುತ್ತಾನೆ. ಇದು ಆ ಕಾಲದಲ್ಲಿ ಇಂಗ್ಲೆಂಡಿಗೆ ಬಲವಾದ ಹೊಡತವನ್ನೇ ಕೊಟ್ಟಿತ್ತು. ಯೂರೋಪ್ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಗಳ ಸಂಪರ್ಕದ ಕೊಂಡಿಯಾಗಿದ್ದ ಕಾಂನ್‌ಸ್ಟಾಂಟಿನೋಪಲನ್ನು ಒಟ್ಟೋಮನ್ ತುರ್ಕರು ವಶಪಡಿಸಿಕೊಂಡಾಗ ಯುರೋಪಿಯನ್ನರಿಗೆ ಪೂರ್ವದ ಜೊತೆಗೆ ವ್ಯವಹಾರ ಮಾಡಲು ಹೊಸ ಮಾರ್ಗದ ಅನ್ವೇಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗೆಯೆ ಇವತ್ತು ಚೀನಾ ಇಂತಹುದೇ ಒಂದು ಕೃತ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದೆ.

ಕಳೆದ ಕೆಲವು ದಿನಗಳಿಂದ ಲಡಾಕಿನ ಗಲ್ವಾನ್ ಸರೋವರದ ತೀರದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉಪದ್ರವ ಚೀನಾ ಇಡೀ ಜಗತ್ತಿನಲ್ಲಿ ತಾನು ವಿಶ್ವದ ಆರ್ಥಿಕ ಜಗತ್ತಿನ ಅನಭಿಶಕ್ತ ದೊರೆಯಾಗಬೇಕು ಎನ್ನುವ ಕೂಟ ನೀತಿಯ ಒಂದು ಚಿಕ್ಕ ಭಾಗ. ಇದು ಭಾರತ ಮತ್ತು ಚೀನಾದ ಒಂದು ಸಣ್ಣ ಗಡಿ ವಿವಾದ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ.

ಮತ್ತಷ್ಟು ಓದು »