ನಿನ್ನೆಗೆ ನನ್ನ ಮಾತು – ಭಾಗ ೪
– ಮು ಅ ಶ್ರೀರಂಗ ಬೆಂಗಳೂರು
ನಿನ್ನೆಗೆ ನನ್ನ ಮಾತು – ಭಾಗ ೧
ನಿನ್ನೆಗೆ ನನ್ನ ಮಾತು – ಭಾಗ ೨
ನಿನ್ನೆಗೆ ನನ್ನ ಮಾತು – ಭಾಗ ೩
ಮೂವತ್ತು ಮೂರು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ನಾನು ಮುಂದೆ ಮುಂದೆ ಸಾಗಿ ಸಾಧಿಸಿದ್ದೇನೂ ಇಲ್ಲ. ಅಂಚೆ ಗುಮಾಸ್ತನಾಗಿ ಕೆಲಸಕ್ಕೆ ಸೇರಿದೆ. ಇಪ್ಪತ್ತು ವರ್ಷಗಳು ಗುಮಾಸ್ತನಾಗಿದ್ದ ಮೇಲೆ ಅಂಚೆ ಇಲಾಖೆಯು ತನ್ನ ನೌಕರರಿಗೆ ತಾನಾಗಿಯೇ ಒಂದು promotion ಕೊಡುತ್ತದೆ. ಹೀಗಾಗಿ ನಾನು ಅಂಚೆ ಮಾಸ್ತರನಾದೆ. ಇಲಾಖೆಯ ಪರೀಕ್ಷೆಗಳನ್ನು ಪಾಸು ಮಾಡಿ ನಿವೃತ್ತಿಯ ವೇಳೆಗೆ assistant director ಆಗಿರಬಹುದಿತ್ತು. ನನ್ನ ಸಹೋದ್ಯೋಗಿಗಳಲ್ಲಿ ಕೆಲವರು ಆ ಹಂತ ಮುಟ್ಟಿದ್ದಾರೆ. ಇನ್ನು ಕೆಲವರು ಅಂಚೆ ಇಲಾಖೆಯ ಕಡಿಮೆ ಸಂಬಳ ಸವಲತ್ತು ನೋಡಿ ಒಂದೆರೆಡು ವರ್ಷಗಳ ನಂತರ ರಾಜೀನಾಮೆ ನೀಡಿ ಬ್ಯಾಂಕ್ ಗಳಿಗೆ ಸೇರಿದರು. ಪ್ರೌಢಶಾಲೆಯಲ್ಲಿ ನನ್ನ ಕಿರಿಯ ಸ್ನೇಹಿತನಾಗಿದ್ದ ಒಬ್ಬ ಮೊದಲಿಗೆ ಅಂಚೆ ಇಲಾಖೆಯ ಕೆಲಸದಲ್ಲಿದ್ದು ನಂತರದಲ್ಲಿ ಬಿಟ್ಟು ಈಗ corporation Bank ನಲ್ಲಿ chief Manager ಆಗಿದ್ದಾನೆ. ಇವರೆಲ್ಲರನ್ನೂ ನೋಡಿ ನಾನೂ ಏಕೆ ಪ್ರಯತ್ನ ಪಡಲಿಲ್ಲ ಎಂದು ಒಮ್ಮೊಮ್ಮೆ ಅನಿಸುವುದುಂಟು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆಂಬ ಉದರ ವೈರಾಗ್ಯವನ್ನು ನಾವು ಮೇಲ್ನೋಟಕ್ಕೆ ಎಷ್ಟೇ ತೋರ್ಪಡಿಸಿಕೊಂಡರೂ ಹಣದ ಮುಗ್ಗಟ್ಟು ನಮ್ಮನ್ನು ಕೆಲವೊಮ್ಮೆ ಪೇಚಾಟಕ್ಕೆ ಸಿಲುಕಿಸಬಹುದು. ಸಂಸಾರಸ್ಥರಾದ ಮೇಲಂತೂ ಇದು ಇನ್ನೂ ಜಟಿಲವಾಗುತ್ತದೆ. ಇವೆಲ್ಲ ಗೊತ್ತಿದ್ದೂ ನಾನು ಇದ್ದಲ್ಲೇ ಇದ್ದುದಕ್ಕೆ.ಆಗ ಮುಂದಿನ ದಿನಗಳ ಬಗ್ಗೆ ಯೋಚಿಸದೆ ಕಾಲ ಕಳೆದದ್ದೇ ಕಾರಣ. ಒಂದೆರೆಡು ಸಂದರ್ಭಗಳಲ್ಲಿ ಹಣದ ಮುಗ್ಗಟ್ಟು ಆದಾಗ ನನ್ನ ಬಂಧು ಬಾಂಧವರಿಂದ ಸಾಲ ಪಡೆದು ಆ ಸನ್ನಿವೇಶವನ್ನು ನಿಭಾಯಿಸಿದ್ದಾಯ್ತು. ಕೆಲಸಕ್ಕೆ ಸೇರಿದಾಗ ಒಂದು ಸಾವಿರದಷ್ಟು ಇದ್ದ ಸಂಬಳ(೧೯೭೯ರಲ್ಲಿ) ನಿವೃತ್ತನಾಗುವ ವೇಳೆಗೆ ಮೂವತ್ತು ಸಾವಿರದಷ್ಟಾಗಿತ್ತು(೨೦೧೧ರಲ್ಲಿ). ಆ ಮೂವತ್ತುಮೂರು ವರ್ಷಗಳಲ್ಲಿ ಎರಡು ಮೂರು pay commissionಗಳ ಶಿಫಾರಸ್ಸುಗಳು ಅಷ್ಟಿಷ್ಟು ಜಾರಿಯಾಯ್ತು. ಅದರಿಂದ ಹೊಸಬರಿಗೆ ಅನುಕೂಲವಾದಷ್ಟು ಹಳಬರಿಗೆ ಆಗುವುದಿಲ್ಲ. (ನಾನು ನಿವೃತ್ತನಾದಾಗ ಮೂರು ವರ್ಷ ಕೆಲಸ ಮಾಡಿದ ಗುಮಾಸ್ತನಿಗೆ ಹದಿನೈದು ಸಾವಿರದಷ್ಟು ಸಂಬಳ ಬರುತ್ತಿತ್ತು. ಮೂವತ್ತುಮೂರು ವರ್ಷ ಕೆಲಸ ಮಾಡಿದ ನನಗೆ ಮೂವತ್ತು ಸಾವಿರ!) ಆದರೆ ಹೊಸಬರಿಗೆ pension ಇಲ್ಲ. ಹಳಬರಿಗೆ ಇದೆ.
‘ತುರ್ತು ಪರಿಸ್ಥಿತಿ’ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ
-ಕ.ವೆಂ.ನಾಗರಾಜ್
ಪರಕೀಯರ ಸಂಕೋಲೆಯಿಂದ ೧೯೪೭ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ ೨೮ ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ ಪ್ರಜಾಪ್ರಭುತ್ವಕ್ಕೆ ಅತಿ ದೊಡ್ಡ ಗಂಡಾಂತರ ೧೯೭೫ರಲ್ಲಿ ತುರ್ತುಪರಿಸ್ಥಿತಿ ರೂಪದಲ್ಲಿ ಬಂದೆರಗಿತ್ತು. ಎರಡು ವರ್ಷಗಳ ಈ ತುರ್ತುಪರಿಸ್ಥಿತಿಯ ಅವಧಿ ದೇಶದ ಅತ್ಯಂತ ಕಲಂಕಿತ ಅವಧಿಯಾಗಿದ್ದು, ಇಂದು ಕಂಡುಬರುತ್ತಿರುವ ಅಧಿಕಾರದ ಹಪಾಹಪಿಗೆ ಭದ್ರ ತಳಪಾಯ ಒದಗಿಸಿತ್ತು. ಅಲಹಾಬಾದ್ ಉಚ್ಚನ್ಯಾಯಾಲಯವು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಮೇಲಿದ್ದ ಭ್ರಷ್ಠಾಚಾರದ ಆರೋಪವನ್ನು ಎತ್ತಿ ಹಿಡಿದು ಅವರ ಚುನಾವಣೆಯ ಗೆಲುವನ್ನು ಅನೂರ್ಜಿತಗೊಳಿಸಿದ್ದಲ್ಲದೆ ಮುಂದಿನ ಆರು ವರ್ಷಗಳು ಅವರು ಚುನಾವಣೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದನ್ನು ಅವರು ಲೆಕ್ಕಿಸದೆ ಹೇಯಮಾರ್ಗ ಹಿಡಿದು ದೇಶದ ಮೇಲೆ ಅನಗತ್ಯವಾದ ತುರ್ತುಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ಅಟ್ಟಹಾಸದಿಂದ ಮೆರೆದರು. ಕಹಿಯಾದ ಕಠಿಣ ಸತ್ಯವೆಂದರೆ ಭ್ರಷ್ಠಾಚಾರ ತಪ್ಪಲ್ಲವೆಂಬ ಭಾವನೆಗೆ, ಭ್ರಷ್ಠಾಚಾರ ಇಂದು ಮುಗಿಲೆತ್ತರಕ್ಕೆ ಬೆಳೆದಿರುವುದಕ್ಕೆ ಅಂದು ಹಾಕಿದ್ದ ಈ ಭದ್ರ ಬುನಾದಿಯೇ ಕಾರಣ. ಕಾಯದೆ, ಕಾನೂನುಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಯಿತು. ಲೋಕಸಭೆಯ ಅವಧಿ ಪೂರ್ಣಗೊಂಡರೂ ಸಂಸತ್ತಿನಲ್ಲಿ ನಿರ್ಣಯ ಮಾಡಿ ಮತ್ತೆ ಎರಡು ವರ್ಷಗಳ ಅವಧಿಗೆ ಮುಂದುವರೆಸಲಾಯಿತು. ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ಮಾಡಲಾಯಿತು. ೧೯೭೫ರ ಜೂನ್ ೨೬ರ ಬೆಳಕು ಹರಿಯುವಷ್ಟರಲ್ಲಿ ಭಾರತದ ಸ್ವತಂತ್ರತೆ ನಿರ್ಬಂಧಿಸಲ್ಪಟ್ಟಿತು. ಅಭಿವ್ಯಕ್ತಿ ಸ್ವಾತಂತ್ರ್ಯ, ಲೇಖನ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸ್ವಂತ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ, ಇತ್ಯಾದಿ ಎಲ್ಲಾ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ದೇಶಾದ್ಯಂತ ನೂರಾರು ವಿರೋಧ ಪಕ್ಷದ ನಾಯಕರುಗಳನ್ನು ಬಂಧಿಸಿ ಸೆರೆಯಲ್ಲಿರಿಸಿದರು. ಜನರು ಸರ್ಕಾರದ ವಿರುದ್ಧ ಮಾತನಾಡಲು ಅಂಜುವಂತೆ ಆಯಿತು. ಆಕಾಶವಾಣಿ ಇಂದಿರಾವಾಣಿ ಆಯಿತು, ದೂರದರ್ಶನ ಇಂದಿರಾದರ್ಶನವಾಯಿತು. ಇಂದಿರಾ ಪರ ಸುದ್ದಿಗಳಿಗೆ ಮಾತ್ರ ಅವಕಾಶ. ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಆಗಿಹೋಯಿತು.
’ಗ೦ಡಸರೇ ಕೆಟ್ಟವರು’ ಎನ್ನುವ ಮುನ್ನ..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ರಾಹುಲ್ ತು೦ಬಾ ಬುದ್ದಿವ೦ತ ಇ೦ಜೀನಿಯರಿ೦ಗ್ ವಿದ್ಯಾರ್ಥಿಯಾಗಿದ್ದ.ಪದವಿ ಮುಗಿಸಿದ ಅವನಿಗೆ ಅವನ ಬುದ್ದಿಮತ್ತೆಗೆ ತಕ್ಕ೦ತೇ ಅಮೇರಿಕದ ಪ್ರತಿಷ್ಠಿತ ಕ೦ಪನಿಯೊ೦ದರಲ್ಲಿ ನೌಕರಿ ಸಿಕ್ಕಿತ್ತು.ಸುಮಾರು ಐದು ವರ್ಷಗಳ ಕಾಲ ಅಲ್ಲಿ ದುಡಿದ ಅವನು ಮರಳಿ ಭಾರತಕ್ಕೆ ತೆರಳಲು ನಿಶ್ಚಯಿಸಿದ.ತನ್ನ ಪೋಷಕರಿಗೆ ಅವನು ತನ್ನ ನಿರ್ಧಾರ ತಿಳಿಸಿದಾಗ ಅವರೂ ಸಹ ಸ೦ತಸ ವ್ಯಕ್ತಪಡಿಸಿದ್ದರು.ಇದೇ ಖುಷಿಯಲ್ಲಿ ಅವರು ತಮ್ಮ ಒಬ್ಬನೇ ಮಗನ ಮದುವೆ ಮಾಡುವುದರ ಬಗ್ಗೆ ಯೋಚಿಸಿದರು.ಆ ಬಗ್ಗೆ ಅವರು ರಾಹುಲನೊ೦ದಿಗೆ ಚರ್ಚಿಸಿದಾಗ ಅವನೂ ಸಮ್ಮತಿಸಿದ್ದ.ಅವರು ಅವನಿಗೆ ತಕ್ಕ ವಧುವಿಗಾಗಿ ಹುಡುಕಾಟ ನಡೆಸತೊಡಗಿದರು.ಅಲ್ಲದೇ ಅವನ ಮಾಹಿತಿಯನ್ನು ವಿವಾಹ ಸ೦ಬ೦ಧಿ ಅ೦ತರ್ಜಾಲ ತಾಣವೊ೦ದರಲ್ಲೂ ಪ್ರಕಟಿಸಿದ್ದರು.
ಹಾಗೆ ರಾಹುಲನ ಅಪ್ಪ ಅಮ್ಮ ರಾಹುಲನಿಗಾಗಿ ಹುಡುಗಿ ಹುಡುಕುವ ಪ್ರಯತ್ನದಲ್ಲಿದ್ದಾಗ ಮದುವೆಯ ವೆಬ್ ಸೈಟಿನಲ್ಲಿ ಅವರಿಗೆ ಪರಿಚಯವಾದ ಹುಡುಗಿಯ ಹೆಸರು ಕವಿತಾ.ಅವರಿಗೆ ಹುಡುಗಿಯ ರೂಪ ಇಷ್ಟವಾಗಿತ್ತು. ಅವರು ರಾಹುಲನಿಗೆ ಅವಳನ್ನು ತೋರಿಸಿದಾಗ ಅವನು ಕವಿತಾಳನ್ನು ಮೊದಲ ನೋಟದಲ್ಲೇ ಮೆಚ್ಚಿದ್ದ.ಎಲ್ಲರಿಗೂ ಹುಡುಗಿ ಒಪ್ಪಿಗೆಯಾಗಿದ್ದರಿ೦ದ ಅವರು ಕವಿತಾ ಮತ್ತವಳ ಪೋಷಕರನ್ನು ತಮ್ಮ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಲು ನಿರ್ಧರಿಸಿದರು.ಕವಿತಾಳ ತಾಯಿ ಕೆಲವು ವರ್ಷಗಳ ಹಿ೦ದೆ ತೀರಿ ಹೋಗಿದ್ದರು.ಕವಿತಾ ಮತ್ತು ಅವಳ ತ೦ದೆ ರಾಹುಲನ ಮನೆಗೆ ಬ೦ದು ಮದುವೆಯ ಮಾತುಕತೆ ನಡೆಸಿದರು.ಮೂಲತ: ತಾವು ಮು೦ಬಯಿಯ ನಿವಾಸಿಗಳೆ೦ದು,ತಮಗೂ ರಾಹುಲ್ ಇಷ್ಟವಾಗಿರುವುದಾಗಿ ತಿಳಿಸಿದರು.ಕವಿತಾಳ ಸರಳ ವ್ಯಕ್ತಿತ್ವ,ಹಿರಿಯರೆಡೆಗಿನ ಅವಳ ಗೌರವವನ್ನು ಕ೦ಡ ರಾಹುಲನ ತ೦ದೆತಾಯಿಗಳು ಇವಳೇ ತಮ್ಮ ಸೊಸೆಯೆ೦ದು ಆಗಲೇ ತೀರ್ಮಾನಿಸಿದ್ದರು.ಹಿರಿಯರೆಲ್ಲರೂ ಸೇರಿ ಮದುವೆಯ ದಿನಾ೦ಕವನ್ನು ನಿರ್ಧರಿಸಿದರು. ಅತ್ಯ೦ತ ಸರಳ ಜೀವಿಗಳಾಗಿದ್ದ ರಾಹುಲನ ಪೋಷಕರು ವರದಕ್ಷಿಣೆ ,ವರೋಪಚಾರದ೦ತಹ ಯಾವ ಬೇಡಿಕೆಗಳನ್ನೂ ವಧುವಿನ ತ೦ದೆಯ ಮು೦ದಿಡಲಿಲ್ಲ.
ಜಾತೀಯತೆ: ಏನು? ಎತ್ತ?
– ಡಾ. ಶ್ರೀಪಾದ ಭಟ್
ಸೆಪ್ಟೆಂಬರ್ 13, 2007ರಂದು 11 ನೇ ಪಂಚವಾರ್ಷಿಕ ಯೋಜನೆ ಕುರಿತ ಯೋಜನಾ ಆಯೋಗದ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ “ಸ್ಪೆಶಲ್ ಅಟೆನ್ಷನ್ ವುಡ್ ನೀಡ್ ಟು ಬಿ ಪೇಯ್ಡ್ ಟು ಡಿಸ್ಟ್ರಿಕ್ಟ್ಸ್ ವಿತ್ ಎಸ್‍ಸಿ, ಎಸ್‍ಟಿ, ಒಬಿಸಿ ಆಂಡ್ ಮೈನಾರಿಟಿ ಕಾನ್ಸನ್‍ಟ್ರೇಶನ್’’ ಎಂದು ಭಾಷಣ ಮಾಡಿದ್ದರು. ಅಲ್ಪ ಸಂಖ್ಯಾತರಿಗೆ ಸರ್ಕಾರಿ ಯೋಜನೆಯಲ್ಲಿ ಸಿಂಹಪಾಲು ದೊರೆಯಬೇಕು ಎಂದೂ ಅವರು ಹೇಳಿದ್ದರು. ಸಿಂಗ್ ಮೂಲತಃ ಅರ್ಥಶಾಸ್ತ್ರಜ್ಞರು, ರಾಜಕಾರಣಿಯಲ್ಲ. ಆದರೆ ಅವರ ಧಾಟಿ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಯಾವ ರಾಜಕಾರಣಿಗೂ ಕಡಿಮೆ ಇರಲಿಲ್ಲ. ಅಂದಿನ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಎಲ್ಲ ಹಾಜರಿದ್ದರು. ಸರ್ಕಾರದ ಯೋಜನೆಯ ಲಾಭ ಬಡವರಿಗೆ ದೊರೆಯಬೇಕು ಎಂದು ಹೇಳುವ ಬದಲು ಅಲ್ಪ ಸಂಖ್ಯಾತರಿಗೆ ದೊರೆಯಬೇಕು ಎಂದು ಅವರು ಹೇಳಿದ್ದರಲ್ಲಿ ಅಭಿವೃದ್ಧಿಗಿಂತಲೂ ಮತಗಳಿಕೆಯ ವಾಸನೆ ಢಾಳಾಗಿ ರಾಚಿದರೆ ಅದರಲ್ಲಿ ಅವರ ತಪ್ಪಿಲ್ಲ. ಕರ್ನಾಟಕದಲ್ಲಿ ಶಾದಿ ಭಾಗ್ಯ ಯೋಜನೆ ಕುರಿತ ಸರ್ಕಾರದ ನಿಲುವನ್ನು ಕೂಡ ಇದೇ ದೃಷ್ಟಿಯಲ್ಲಿ ನೋಡಬಹುದು. ಆ ಸರ್ಕಾರ, ಈ ಸರ್ಕಾರ ಎಂದಲ್ಲ ಎಲ್ಲ ಸರ್ಕಾರಗಳ ಯೋಜನೆಗಳೂ ಮತಗಳಿಕೆಯತ್ತ ನೆಟ್ಟಿರುವುದರಿಂದ ಅವರ ಘೋಷಣೆಗಳು ಹೀಗಾಗಿಬಿಡುತ್ತವೆ ಅಷ್ಟೆ.
ಸತ್ಕಾರದ ಸ್ವರೂಪ
-ಮಯೂರಲಕ್ಷ್ಮಿ
ಮನೆಗೆ ಬರುವ ಅತಿಥಿ ಅಭ್ಯಾಗತರನ್ನು ಆದರದಿಂದ ಸ್ವಾಗತಿಸಿ ಸತ್ಕರಿಸುವುದು ನಮ್ಮ ಭಾರತೀಯ ಸಂಸ್ಕೃತಿಯಷ್ಟೇ! ಸುಭಾಷಿತವೊಂದು ಹೀಗಿದೆ:
ಯ: ಸಾಯಮತಿಥಿಂ ಪ್ರಾಪ್ತಂ
ಯಥಾಶಕ್ತಿ ನ ಪೂಜಯೇತ್|
ತಸ್ಯಾಸೌ ದುಷ್ಕೃತಂ ದತ್ತ್ವಾ
ಸುಕೃತಂ ಚಾಪಕರ್ಪತಿ||
ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ
– ರಾಘವೇಂದ್ರ ಅಡಿಗ ಎಚ್ಚೆನ್
ಮಾರ್ಚ್ 8 `ಅಂತರಾಷ್ಟ್ರೀಯ ಮಹಿಳಾ ದಿನ’. ಇಂದು ಮಹಿಳೆ ತಾನು ಪುರುಷನಿಗೆ ಸರಿಸಮನಾಗಿ ಕಛೇರಿ ಕೆಲಸದಿಂದ ತೊಡಗಿ, ಬಾಹ್ಯಾಕಾಶ ಯಾನದವರೆವಿಗಿನ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಅಂತಹವರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ನವರ ಸಾಧನೆಯೂ ಸ್ತುತ್ಯಾರ್ಹವಾದುದು. ಬಡತನದ ಬೇಗೆಯ ನಡುವೆಯೂ ಆದರ್ಶಮಯ ಜೀವನ ನಡೆಸುತ್ತಿರುವ ಸಾರ್ಥಕ ಜೀವ ಅದು. ಮಕ್ಕಳಿಲ್ಲದ ಕೊರಗು, ಬಡತನದಿಂದ ಬೆಂಡಾದ ಬಾಳ್ವೆಯ ನಡುವೆಯೂ ‘ನೆರಳು ನೀಡುವ ಮರಗಳೆ ನನ್ನ ಮಕ್ಕಳು, ಅವುಗಳನ್ನು ಬೆಳೆಸಿ ಪೋಷಿಸುವುದೇ ನನ್ನ ಜೀವನದ ಗುರಿ’ ಎಂದು ನಂಬಿ ನಡೆದ ಈ ವೃಕ್ಷ ಮಹಿಳೆಗೆ ಇದೀಗ ನೂರರ ವಸಂತ.
ಕೆಲ ವರ್ಷಗಳ ಹಿಂದೊಮ್ಮೆ ದಾವಣಗೆರೆ ಲೋಕಸಭಾ ಸದಸ್ಯರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ತಾವು ಕಾರ್ಯಕ್ರಮವೊಂದರ ನಿಮಿತ್ತ ಕನಕಪುರದತ್ತ ಹೊರಟಿರುತ್ತಾರೆ. ಅದಾಗ ಮಾರ್ಗ ಮದ್ಯದಲ್ಲಿ ವಾಹನವನ್ನು ನಿಲ್ಲಿಸಿ ತಾವು ದೇಹಬಾಧೆಯನ್ನು ಕಳೆಯಲೋಸುಗ ಮರಗಳ ಮರೆಗೆ ಸಾಗುತ್ತಾರೆ. ಅಲ್ಲಿ ಬೆಳೆದಿದ್ದ ಸಾಲು ಮರಗಳನ್ನು ಕಂಡು ಅಚ್ಚರಿಗೊಂಡ ಶಿವಶಂಕರಪ್ಪನವರು ಅಲ್ಲಿನ ದಾರಿಹೋಕರನ್ನು “ಈ ಮರಗಳಾನ್ನೆಲ್ಲಾ ಯಾವ ಮಂಡಲ ಪಂಚಾಯ್ತಿಯವ್ರು ಬೆಳೆಸಿದ್ದಾರೆ?” ಎಂದು ಪ್ರಶ್ನಿಸುತ್ತಾರೆ. ಆಗ ಆ ದಾರಿಹೋಕನು ಹೇಳಿದ ಉತ್ತರ ಕೇಳಿ ಶಿವಶಂಕರಪ್ಪನವರಿಗೆ ಆಶ್ಚರ್ಯದೊಂದಿಗೆ ಮನಸ್ಸು ತುಂಬಿ ಬರುತ್ತದೆ.
ನಾಡು- ನುಡಿ:ಮರುಚಿಂತನೆ :– “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 5
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಕುರುಬರ ಮೂಲವನ್ನು ಕುರಿತಾದ ವಿಶ್ಲೇಷಣೆಗಳನ್ನು ನೋಡವುದಾದರೆ ಪ್ರಸ್ತುತ ಲಭ್ಯವಿರುವ ಸಾಹಿತ್ಯವು ಕುರುಬರ ಮೂಲಕ್ಕೆ ಕೆಲವು ಕಥೆ ಮತ್ತು ಪುರಾಣಗಳನ್ನು ಆಧಾರವಾಗಿರಿಸಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ ಹಾಲುಮತ ಪುರಾಣ ಮತ್ತು ಉಂಡಾಡು ಪದ್ಮಣ್ಣನ ಕಥೆಗಳು ಕುರುಬರ ಮೂಲದ ಕುರಿತಾದ ವಿಶ್ಲೇಷಣೆಗಳನ್ನು ಬಹಳವಾಗಿ ಪ್ರಭಾವಿಸಿದೆ. ಇದನ್ನು ನಾವು ಕುರುಬರ ಕುರಿತಾಗಿ ಅಧ್ಯಯನ ನಡೆಸಿರುವ ಪಾಶ್ಚಾತ್ಯ ಚಿಂತಕರಾದ ಎಡ್ಗರ್ ಥಸ್ರ್ಟನ್ ರವರ ದಿ ಟ್ರೈಬ್ಸ್ ಅಂಡ್ ಕ್ಯಾಸ್ಟ್ ಆಫ್ ಸೌಥ ಇಂಡಿಯಾ (1987) ಮತ್ತು ಎಂಥೋವೆನ್ ರವರ ದಿ ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಬಾಂಬೆ, (1990) ಪುಸ್ತಕಗಳ ವಿವರಗಳಲ್ಲಿಯೇ ಗುರುತಿಸಬಹುದಾಗಿದೆ. ಕುರುಬರ ಮೂಲವನ್ನು ಕುರಿತಾಗಿ ಹಲವಾರು ಕಥೆಗಳು ಚಾಲಿಯಲ್ಲಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಕುರುಬರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾದಂತಹ ಕಥೆಗಳನ್ನು ಹೇಳುವುದು ಅಲ್ಲದೇ, ಈ ಎಲ್ಲಾ ಕಥೆಗಳು ಅಂದಿನ ಅಥವಾ ಆ ಪ್ರದೇಶದ ಜಾನಪದ ಹಿನ್ನೆಲೆಯಲ್ಲಿ ರೂಪ ಪಡೆದಿದ್ದು, ಮೌಖಿಕವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬದಲಾವಣೆಗಳೊಂದಿಗೆ ಉಳಿದು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಈ ಎಲ್ಲಾ ಕಥೆಗಳು ಕುರುಬರ ಮೂಲವನ್ನೇ ವಿವರಿಸುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅಲ್ಲದೇ ಬಹುಪಾಲು ಉಪಜಾತಿಗಳು (ಅವುಗಳನ್ನು ಉಪಜಾತಿಗಳು ಎಂದು ಹೇಗೆ ಗುರುತಿಸುವುದು ಎನ್ನುವುದು ಬೇರೆಯದೇ ಪ್ರಶ್ನೆ) ತಮ್ಮದೇ ಆದಂತಹ ಬೇರೆ ಬೇರೆ ಕಥೆಗಳನ್ನು ಹೇಳುವುದು ಕಂಡುಬರುತ್ತದೆ. ಕುರುಬ ಸಮುದಾಯದಲ್ಲಿನ ಆಚರಣೆ ಮತ್ತು ಉಪಜಾತಿಗಳ ಕುರಿತಾದ ವಿವರವನ್ನು ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾಗಲಿದೆ.
‘ಗುಹೆ’ ತೊರೆದ ‘ಸಿಂಹ’
– ರಾಘವೇಂದ್ರ ಅಡಿಗ ಎಚ್ಚೆನ್
ಹೌದು ಸ್ನೇಹಿತರೆ, ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.
ಚಿಕ್ಕಂದಿನಿಂದಲೂ ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದ ಸಿ.ಆರ್. ಸಿಂಹರವರು ತಾವೇ ರಚಿಸಿದ ‘ನಟಾರಂಗ’ ಎನ್ನುವ ನಾಟಕ ತಂಡದ ಮೂಲಕ ‘ತುಘಲಕ್’, ‘ಸಂಕ್ರಾಂತಿ’, ಮೊದಲಾದ ನಾಟಕಗಳಾನ್ನು ರಂಗದ ಮೇಲೆ ತಂದು ಜನಪ್ರಿಯಗೊಳಿಸಿದ್ದರು. ಅದರಲ್ಲಿಯೂ ‘ತುಘಲಕ್’ ನಾಟಕದ ತುಘಲಕ್ ಪಾತ್ರವನ್ನು ತಾವೇ ನಟಿಸಿದ್ದ ಆ ಪಾತ್ರವೇ ಅವರಿಗೆ ಸಾಕಷ್ಟು ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಕಾಲದಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತುಘಲಕ್’ ಬರೋಬ್ಬರಿ 200 ಪ್ರದರ್ಶನಗಳನ್ನು ಕಂಡಿತ್ತು! ಗಿರೀಶ್ ಕಾರ್ನಾಡರ ಇನ್ನೊಂದು ಪ್ರಸಿದ್ದ ನಾಟಕ ’ತಲೆದಂಡ’ ದಲ್ಲಿನ ಬಿಜ್ಜಳನ ಪಾತ್ರದಲ್ಲಿಯೂ ಮಿಂಚಿದ್ದ ಸಿಂಹರವರಿಗೆ ತಾವು ನಟಿಸಿದ ಪಾತ್ರದೊಳಗೆ ಪ್ರವೇಶಿಸಿ ಅದನ್ನು ತನ್ನದಾಗಿಸಿಕೊಳ್ಳುವ ಕಎಲೆಯು ಸಿದ್ದಿಸಿತ್ತು. ಇವರ ನಿರ್ದೇಶನದಲ್ಲಿ ಮೂಡಿಬಂದ ಏಕವ್ಯಕ್ತಿ ನಾಟಕ ‘ಟಿಪಿಕಲ್ ಕೈಲಾಸಮ್’ ಕೈಲಾಸಂ ಬಗೆಗಿನ ಸಿಂಹರವರ ಅಭಿಮಾನಕ್ಕೊಂದು ಸಾಕ್ಷಿಯಾದರೆ ‘ ರಸಋಷಿ ಕುವೆಂಪು’ ಸಿಂಹರಿಗೆ ರಸಋಷಿಯ ಮೇಲಿದ್ದ ಪ್ರೀತಿಯನ್ನು ತೋರುವಂತಹುದು.
ಧರ್ಮದ ಅರ್ಥ ಮತ್ತು ಅದರ ಮೇಲಿನ ಹಣದ ಸಂಬಂಧ
-ನವೀನ್ ನಾಯಕ್
ಜಗತ್ತಿಗೆ ಕಮ್ಯುನಿಸಂನ ಕೊಡುಗೆ ಕತ್ತಲೆ!?
– ನರೇಂದ್ರ ಕುಮಾರ್
ರಷ್ಯಾ ಕಮ್ಯುನಿಸ್ಟ್ ದೇಶವಾಗಿತ್ತು. ಅದು ಕೂಡಾ “Super Power” ಎನಿಸಿಕೊಂಡು ಅಮೆರಿಕಕ್ಕೆ ಸರಿಸಮಾನವಾಗಿ ನಿಂತಿತ್ತು. ಅಮೆರಿಕ ಅಂತರಿಕ್ಷಕ್ಕೆ ಉಪಗ್ರಹವನ್ನು ಚಿಮ್ಮಿಸಿದರೆ, ರಷ್ಯಾವೂ ಉಪಗ್ರಹವನ್ನು ಕಳುಹಿಸಿತ್ತಿತ್ತು. ಹೀಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ, ತಾನು ಅಮೆರಿಕಕ್ಕಿಂತ ಹಿಂದಿಲ್ಲ ಎಂದು ತೋರಿಸುತ್ತಿತ್ತು. ಯುದ್ಧ ಸಾಮಾಗ್ರಿಗಳ ಉತ್ಪಾದನೆಯಲ್ಲೂ ಅದು ತನ್ನ ಸಾಮರ್ಥ್ಯ ತೋರ್ಪಡಿಸುತ್ತಿತ್ತು. ಒಟ್ಟಿನಲ್ಲಿ, ರಷ್ಯಾವೂ ಒಂದು ಮುಂದುವರೆದ ರಾಷ್ಟ್ರವೆಂದು ಜಗತ್ತು ನಂಬಿತ್ತು. ಆದರೆ, 80ರ ದಶಕದ ಅಂತ್ಯ ಭಾಗದಲ್ಲಿ ಗೋರ್ಬಚೇವ್ ಅವರು ಅಧಿಕಾರಕ್ಕೆ ಬಂದ ನಂತರ ಪೊರೆ ಹರಿಯಿತು. ರಷ್ಯಾದಿಂದ ಕಮ್ಯುನಿಸಂ ಉಚ್ಚಾಟಿಸಲಾಯಿತು. USSR ಎನ್ನುವ ರಾಷ್ಟ್ರ ಛಿದ್ರವಾಯಿತು. ಆಗ ತಿಳಿದ ಸತ್ಯವೆಂದರೆ, ರಷ್ಯಾದಲ್ಲಿ ಕಿತ್ತು ತಿನ್ನುವ ಬಡತನವಿದೆ, ಅದು ಆರ್ಥಿಕವಾಗಿ ದಿವಾಳಿಯಾಗಿದೆ! ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಕಮ್ಯುನಿಸ್ಟ್ ದೇಶಗಳಲ್ಲಿ ಏನಾಗುತ್ತಿದೆ, ಅವುಗಳ ನಿಜವಾದ ಸ್ಥಿತಿ ಏನೆಂಬುದು ಹೊರಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಮಾದ್ಯಮಗಳೂ ಅಲ್ಲಿನ ಸರಕಾರದ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ, ತಮಗೆ ಬೇಕಾದ ಚಿತ್ರವನ್ನು ಮಾತ್ರ ಎಲ್ಲೆಡೆ ಅವರು ಬಿತ್ತರಿಸುತ್ತಿರುತ್ತಾರೆ.







