ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

22
ಮಾರ್ಚ್

ನಿಜವಾದ ಹೀರೋಗಳಿವರು

 ಮಯೂರಲಕ್ಷ್ಮೀ.

Bhagat-Singh-Factsಅವರು ಯುವಕರು… ಅಪ್ರತಿಮ ಧೈರ್ಯ, ಸಾಹಸ ಪ್ರವೃತ್ತಿ, ತೇಜಸ್ಸು ಮತ್ತು ಸದ್ಗುಣಗಳು ಅವರಲ್ಲಿತ್ತು.. ಅವರಲ್ಲಿದ್ದ ನಾಯಕತ್ವ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಜ್ಞಾನದಿಂದ ಅವರು ಏನನ್ನಾದರೂ ಸಾಧಿಸಬಹುದಿತ್ತು.. ಅದು ಬ್ರಿಟಿಷರು ಭಾರತೀಯರನ್ನು ದಾಸ್ಯದಲ್ಲಿಟ್ಟು ಆಳುತ್ತಿದ್ದ ಕಾಲ. ಆ ಮೂವರೂ ಯಾವುದೇ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ, ತಾವೇ ವಿಧಿಸಿಕೊಂಡ ದೇಶರಕ್ಷಣೆಯ ಕಟ್ಟುಪಾಡುಗಳನ್ನು ಮೀರದೆ ಆಂಗ್ಲರಿಂದ ದೇಶವನ್ನು ಮುಕ್ತಗೊಳಿಸಲು ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧರಾದರು. ಅಂತೆಯೇ ತಮ್ಮ ಪ್ರಾಣವನ್ನೂ ದೇಶಕ್ಕಾಗಿ ಅರ್ಪಿಸಿದರು. ಈ ದೇಶ ಎಂದೂ ಮರೆಯದ ಮರೆಯಲಾಗದ ಯುವಚೇತನರು ಈ ಮೂವರು.. ನಮ್ಮ ಇಂದಿನ ಯುವಶಕ್ತಿಗೆ ನಿಜವಾದ ಮಾದರಿ ಇವರೇ…!

ಮತ್ತಷ್ಟು ಓದು »

22
ಮಾರ್ಚ್

ಸಾವರ್ಕರ್ ಉಗ್ರಗಾಮಿ ಅಂದವರನ್ನು ಇತಿಹಾಸ ಹೇಗೆ ತಾನೆ ಕ್ಷಮಿಸೀತು?

-ಸಂಕೇತ್ ಡಿ ಹೆಗಡೆ, ಸಾಗರ

45ಅಹಿಂಸೆಯ ಪ್ರತಿಪಾದಕರಿಗೆ ಸಂಪೂರ್ಣ ಗೌರವದಿಂದ ನಾನೊಂದು ಮೂಲಭೂತ ಪ್ರಶ್ನೆ ಕೇಳಬಯಸುತ್ತೇನೆ. ನಿಮಗ್ಯಾಕೆ ಹಿಂಸೆ ಮತ್ತು ಸ್ವರಕ್ಷಣೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ? ಎಂದು. ಹಿಂಸೆ ಅಪ್ರಚೋದಕವಾದ ಕ್ರೌರ್ಯ. ಸ್ವರಕ್ಷಣೆ ಹಿಂಸೆಯಲ್ಲ, ಅದೊಂದು ಅನಿವಾರ್ಯದ ಪ್ರತಿಕ್ರಿಯೆ. ಶಾರ್ಕ್ ಮೀನೊಂದು ಸಣ್ಣ ಮೀನುಗಳನ್ನು ತಿನ್ನಲು ಬಂದರೆ, ಸಣ್ಣ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಶಾರ್ಕ್ ನ ಮೇಲೇ ದಾಳಿ ಮಾಡುತ್ತವೆ. ಅದು ಹಿಂಸೆಯೇನು? ಅಪರಿಚಿತನೊಬ್ಬ ಬೆಕ್ಕುಮರಿಯೊಂದನ್ನು ಬಲವಂತವಾಗಿ ಎತ್ತಿಕೊಳ್ಳಹೋದರೆ ಪರಚಿ ಹಾಕುತ್ತೆ. ಸುಂದರವಾಗಿ ಕಟ್ಟಿಕೊಂಡ ಜೆನೂಗೂಡಿಗೋ, ಕಷ್ಟಪಟ್ಟು ಕಟ್ಟಿಕೊಂಡ ಇರುವೆ ಗೂಡಿಗೋ ಹೋಗಿ ಒಂದು ಗುದ್ದು ಕೊಡಿ ನೋಡೋಣ. ಸಾಯುವಂತೆ ಕಚ್ಚಿ ಕಳಿಸುತ್ತವೆ. ಇವೆಲ್ಲ ನಿಮಗೆ ಹಿಂಸೆಯಂತೆ ಕಾಣುವುದೇನು? “Struggle For Existence” ಎಂದು ಡಾರ್ವಿನ್ ಹೇಳಿದ್ದು ಇಂಥವಕ್ಕೇ!

ಮತ್ತಷ್ಟು ಓದು »

21
ಮಾರ್ಚ್

ದೆವ್ವಗಳ ಊರಿನಲ್ಲಿ

– ರಾಕೇಶ್ ಶೆಟ್ಟಿ

Kuldhara-Source-musetheplace.com_Most Haunted Places in India ಎನ್ನುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ರಾಜಸ್ಥಾನದಲ್ಲಿರುವ ಬಾಂಗ್ರಾ ಕೋಟೆ.

ಬಾಂಗ್ರಾ ಕೋಟೆಯಲ್ಲಿ ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತದ ನಂತರ ಯಾರಿಗೂ ಪ್ರವೇಶವಿಲ್ಲ ಎಂಬ ಬೋರ್ಡನ್ನು ಭಾರತೀಯ ಪುರಾತತ್ವ ಇಲಾಖೆಯೇ ತಗುಲಿಹಾಕಿದೆಯಂತೆ. ಈ ಎಚ್ಚರಿಕೆಯನ್ನು ಮೀರಿ ಸೂರ್ಯಾಸ್ತದ ನಂತರ ಕೋಟೆಯಲ್ಲಿಯೇ ಉಳಿಯಲೆತ್ನಿಸಿದವರು ಮರಳಿಬಂದಿಲ್ಲವೆಂಬುದು ಅಲ್ಲಿನ ಗ್ರಾಮಸ್ಥರ ಅಂಬೋಣ. ಸತ್ಯವೋ,ಸುಳ್ಳೋ ಗೊತ್ತಿಲ್ಲ. ಈ ಭೂತದ ಕೋಟೆಯ ಹಿಂದೆ ಎರಡು ಮೂರು ಕತೆಗಳಿವೆ. ಮತ್ತಷ್ಟು ಓದು »

19
ಮಾರ್ಚ್

ಪರೀಕ್ಷೆಯ ಲೆಕ್ಕಾಚಾರ

– ನಾಗೇಶ ಮೈಸೂರು

2284916ಒಲ್ಲದ ಮನಸ್ಸಿನಿಂದ ಪುಸ್ತಕ ಹಿಡಿದು ಪರೀಕ್ಷೆಗೆ ಓದಿಕೊಳ್ಳಲು ಒದ್ದಾಡುತ್ತಿದ್ದ ಮಗನನ್ನು ಸಾಮ, ದಾನ, ದಂಡ, ಭೇಧೋಪಾಯಗಳೆಲ್ಲದರ ಬಳಕೆ ಮಾಡುತ್ತ ಸಿದ್ಧಗೊಳಿಸಲು ಹೆಣಗಾಡುತ್ತಾ ಕುಳಿತಿದ್ದೆ. ಅದೇ ಹೊತ್ತಿನಲ್ಲಿ ಟೀವಿಯಲ್ಲಿ ಪ್ರವೇಶ ಪರೀಕ್ಷೆಯ ನಂತರದ ಸವಾಲು, ಮತ್ತದನ್ನೆದುರಿಸುವ ಬಗೆಯನ್ನು ಕುರಿತು ಆತಂಕಪೂರ್ಣ ಚರ್ಚೆ ನಡೆಯುತ್ತಾ ಇತ್ತು. ಒಂದು ಕಾಲದಲ್ಲಿ ನಾವೂ ಇದನ್ನೆಲ್ಲಾ ಅನುಭವಿಸಿ ಮುಂದೆ ಸಾಗಿದ್ದವರೇ. ಆದರೆ ಆ ದಿನದಲ್ಲಿ ಕಾಡಿದ್ದ ಅದೆಷ್ಟೋ ಆತಂಕ, ಒತ್ತಡಗಳು ಕೇವಲ ಆತಂಕ, ಅಜ್ಞಾನ, ನಿಖರ ಗಮ್ಯವಿಲ್ಲದ ಒದ್ದಾಟಗಳ ಕಾರಣದಿಂದ ಉಂಟಾದದ್ದು. ಇಂದು ತಿರುಗಿ ನೋಡಿದರೆ ನಾನು ಓದಿದ್ದಕ್ಕೂ, ಮಾಡುತ್ತಿರುವ ಕೆಲಸಕ್ಕೂ ನೇರ ಸಂಬಂಧವೇ ಇಲ್ಲ. ವಿದ್ಯಾರ್ಹತೆ ಕೇವಲ ಕೆಲಸ ಗಿಟ್ಟಿಸುವ ಆರಂಭದ ರಹದಾರಿಯಾಯ್ತೆಂಬುದನ್ನು ಬಿಟ್ಟರೆ ಮಿಕ್ಕೆಲ್ಲಾ  ಹೊಸ ಹೋರಾಟ, ಪರೀಕ್ಷೆಗಳೇ ಎದುರಾದದ್ದು ವಾಸ್ತವ ಸತ್ಯ. ನಮ್ಮ ವಿದ್ಯಾರ್ಹತೆ, ವಿದ್ಯಾಭ್ಯಾಸ ಆ ಹೋರಾಟಕ್ಕೆ ನಮ್ಮನ್ನು ಸಿದ್ದಪಡಿಸಿರಲೇ ಇಲ್ಲ. ಆದರೂ ನಾವು ಅದೇ ಮರೀಚಿಕೆಯ ಹಿಂದೆ ನಮ್ಮ ಭವಿಷ್ಯದ ಪೀಳಿಗೆಯನ್ನು ತಳ್ಳುತ್ತ ಕುರಿಮಂದೆಗಳ ಹಾಗೆ ಸಾಗುತ್ತಿದ್ದೇವಲ್ಲ ಎಂದೆನಿಸಿ ಖೇದವೂ ಆಯ್ತು.
ಮತ್ತಷ್ಟು ಓದು »

17
ಮಾರ್ಚ್

ಗೂಗಲ್ ಸರ್ಚ್ ಮಾಡಲು ಕೆಲವು ಸುಲಭ ಟ್ರಿಕ್ಸ್

-ಅವಿನಾಶ್ ಬಿ

google_lupaಹಿಂದೆಂದೂ ಗೂಗಲ್ ಎಂಬ ಕ್ಷಿಪ್ರ ಸಂಶೋಧಕ ಇರಲಿಲ್ಲ. ಮುಂದೆ ಅದು ಇಲ್ಲದೆ ಜೀವನವೇ ಮುಂದೆ ಸಾಗದು ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ಹೆಚ್ಚಿನವರಿಗೆ ಗೊತ್ತು. ಅಂತರ್ಜಾಲದಲ್ಲಿ ಮಾಹಿತಿಯ ಹುಡುಕಾಟಕ್ಕೆ ಸಂಬಂಧಿಸಿದಂತೆ ಗೂಗ್ಲಿಸುವುದು ಎಂಬ ಕ್ರಿಯಾಪದವೇ ಹುಟ್ಟಿಕೊಂಡಿದೆ ಎಂದಾದರೆ, ಸರ್ಚ್ ಎಂಜಿನ್ ಗೂಗಲ್‌ನ ಸಾಮರ್ಥ್ಯ ಮತ್ತು ವ್ಯಾಪ್ತಿ ಎಷ್ಟೆಂಬುದು ವೇದ್ಯವಾಗುತ್ತದೆ. ಅಂತಹಾ ಗೂಗಲ್‌ನಲ್ಲಿ ಯಾವುದೇ ಮಾಹಿತಿ ಹುಡುಕುವುದಕ್ಕಾಗಿ ಕೆಲವೊಂದು ಸರಳವಾದ ಟ್ರಿಕ್ಸ್ ಇಲ್ಲಿದೆ. ನಿಮಗೆ ಉಪಯುಕ್ತವಾಗುತ್ತದೆ.

* ಯಾವುದೇ ನಿರ್ದಿಷ್ಟ ಪದ ಗುಚ್ಛ, ಉದಾಹರಣೆಗೆ ಒಂದು ಹಾಡಿನ ಬಗ್ಗೆ ಮಾಹಿತಿ ಬೇಕೆಂದಾದರೆ ಮತ್ತು ಆ ಪದಗಳು ಇರಲೇಬೇಕಾದ ಒಂದು ವಾಕ್ಯವನ್ನು ಹುಡುಕಿ ತೋರಿಸಬೇಕೆಂದಾದರೆ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಉದ್ಧರಣ ಚಿಹ್ನೆ (ಕೋಟ್ ಮಾರ್ಕ್ಸ್) ಬಳಸಿ. ಉದಾಹರಣೆಗೆ, “ಕನ್ನಡದಲ್ಲಿ ಬರೆಯುವುದು ಹೇಗೆ” ಅಂತ ಸರ್ಚ್ ಮಾಡಿದರೆ, ಆ ಮೂರೂ ಅಕ್ಷರಗಳು ಒಟ್ಟಾಗಿಯೇ ಇರುವ ಪುಟಗಳು ಮಾತ್ರವೇ ಕಾಣಸಿಗುತ್ತವೆ. ಕೋಟ್ ಮಾರ್ಕ್ ತೆಗೆದರೆ, ಕನ್ನಡ, ಬರೆಯುವುದು, ಹೇಗೆ ಎಂಬ ಅಕ್ಷಗಳಿರುವ ಎಲ್ಲ ಪುಟಗಳೂ ಕಾಣಸಿಗುತ್ತವೆ.

ಮತ್ತಷ್ಟು ಓದು »

15
ಮಾರ್ಚ್

ಮೂಕಜ್ಜಿಯ ಕನಸುಗಳು (ಪುಸ್ತಕ ಪರಿಚಯ)

– ನಾಗೇಶ ಮೈಸೂರು

image1‘ … ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ಸಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯ್ತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ…. ‘

‘ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು…’

ಬಹುಶ ಮುನ್ನುಡಿಯಲ್ಲಿ ಶಿವರಾಮಕಾರಂತರು ಕಾಣಿಸಿರುವ ಇವೆರಡು ಸಾಲುಗಳು ಸಾಕೇನೋ – ಈ ಅದ್ಭುತ ಪುಸ್ತಕದ ಸಾರಾಂಶವನ್ನು ಎರಡೇ ಮಾತಲ್ಲಿ ಹಿಡಿದಿಡಲು. ಪರಂಪರಾನುಗತವಾಗಿ ಹರಿದುಬಂದ ನಂಬಿಕೆ, ಸಂಪ್ರದಾಯಗಳಲ್ಲಿ ನಿಮಿತ್ತವೆಂಬಂತೆ ಬದುಕು ಸಾಗಿಸಿದ ಜನಮಾನಸದ ಕೆಲವಾದರೂ ಚಿತ್ತಗಳನ್ನು ಕೆದಕಿ ಕದಡಿರಬಹುದಾದ ‘ಏನೀ ಜಗ ? ನಾನೇಕಿಲ್ಲಿದ್ದೇನೆ ?’ ಎಂಬ ಗಹನ ಪ್ರಶ್ನೆಗಳಿಗೆ ತನ್ನರಿವಿನ ಪರಿಧಿಯನುಸಾರ ಉತ್ತರ ಕಂಡುಕೊಳ್ಳುವ ಸೂಕ್ಷ್ಮಚಿತ್ರಣ ಈ ಕಾದಂಬರಿಯ ಸ್ಥೂಲ ಮೊತ್ತ ಎಂದರೆ ತಪ್ಪಾಗಲಾರದು.
ಮತ್ತಷ್ಟು ಓದು »

13
ಮಾರ್ಚ್

ವಾಸನ್ ಐ ಕೇರ್ ಎಂಬ “ಡೋಂಟ್ ಕೇರ್” ಕಂಪೆನಿಯ ಕತೆ

_ ರೋಹಿತ್ ಚಕ್ರತೀರ್ಥ

Vasan-WhenAt60ವಾಸನ್ ಐ ಕೇರ್ – ಹೆಸರು ಕೇಳಿಯೇ ಇರುತ್ತೀರಿ. ಟಿವಿಯಲ್ಲಿ, ಸಿನೆಮಾ ಪರದೆಗಳಲ್ಲಿ, ಮಾಲ್‍ಗಳಲ್ಲಿ, ರಸ್ತೆಬದಿಯ ಆಳೆತ್ತರದ ಹೋರ್ಡಿಂಗ್‍ಗಳಲ್ಲಿ, ಪತ್ರಿಕೆಯ ಪುಟಗಳಲ್ಲಿ – ಹೀಗೆ ಎಲ್ಲೆಂದರಲ್ಲಿ ಇದರ ಜಾಹೀರಾತು ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ನಿಮ್ಮ ಕಣ್ಣುಗಳ ಕಾಳಜಿ ನಾವು ಮಾಡುತ್ತೇವೆ; ಒಮ್ಮೆ ಭೇಟಿ ಕೊಡಿ ಎಂದು ಅವರು ಪ್ರೀತಿಯಿಂದ ಕರೆದದ್ದನ್ನು ಕಂಡು ಖುಷಿಯಾಗಿ ಒಂದೆರಡು ಬಾರಿ ಭೇಟಿ ಇತ್ತಿರಲೂಬಹುದು. ಅಥವಾ ಈ ಲೇಖನವನ್ನು ನೀವು ವಾಸನ್ ಐ ಕೇರ್‍ನಲ್ಲಿ ಪರೀಕ್ಷಿಸಿ ಕೊಂಡ ಕನ್ನಡಕದ ಮೂಲಕವೇ ಓದುತ್ತಿರಲೂಬಹುದು! ಬೆಂಗಳೂರಂಥ ಸಿಟಿಗಳಲ್ಲಿ ಬೀದಿಗೊಂದರಂತೆ ತಲೆ ಎತ್ತಿರುವ ವಾಸನ್ ನೇತ್ರಾಸ್ಪತ್ರೆಗಳು ಕೇವಲ ಮೂರು ವರ್ಷಗಳ ಹಿಂದೆ ಅಪರೂಪವಾಗಿದ್ದವು. ಐದು ವರ್ಷಗಳ ಹಿಂದೆಯಂತೂ ಅವುಗಳ ಹೆಸರನ್ನೇ ಯಾರೂ ಕೇಳಿರಲಿಲ್ಲ. ಈ ಕ್ಲಿನಿಕ್ ಯಾ ಆಸ್ಪತ್ರೆ ಅಷ್ಟೊಂದು ವೇಗವಾಗಿ ಬೆಳೆಯಲು ಏನು ಕಾರಣ? ಇದರ ಹಿಂದಿನ ಪ್ರೇರಕಶಕ್ತಿ ಯಾರು? ಇವನ್ನೆಲ್ಲ ತಿಳಿದುಕೊಳ್ಳಬೇಕಾದರೆ ನಾವು ವಾಸನ್ ಚರಿತ್ರೆಯಲ್ಲಿ ನಡೆದುಹೋಗಿರುವ ಒಂದಷ್ಟು ಘಟನೆಗಳನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಂದಹಾಗೆ, 2004ರಿಂದ 14ರವರೆಗೆ ನಮ್ಮ ದೇಶವನ್ನು ಆಳಿಹೋದ ಯುಪಿಎ ಸರಕಾರದ ಹತ್ತುಹಲವು ಹಗರಣಗಳ ಪಟ್ಟಿಯಲ್ಲಿ ವಾಸನ್ ಹೆಸರನ್ನೂ ದೊಡ್ಡದಾಗೇ ಬರೆಯಬೇಕಾಗುತ್ತದೆಂಬ ವಿಷಯ ನಿಮಗೆ ಅಚ್ಚರಿ ಮೂಡಿಸಬಹುದು. ಇಡೀ ಕತೆ ಶುರುವಾಗುವುದು 2007ರಲ್ಲಿ.

ಮತ್ತಷ್ಟು ಓದು »

12
ಮಾರ್ಚ್

“ಯೇಗ್ದಾಗೆಲ್ಲಾ ಐತೆ ” (ಪುಸ್ತಕ ಪರಿಚಯ)

– ನಾಗೇಶ ಮೈಸೂರು

4046ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೇ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೇ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. ೨೫ ಸಾವಿರಕ್ಕೂ ಅಧಿಕ ಪ್ರತಿಗಳು ಅಚ್ಚಾಗಿದ್ದೇ ಅಲ್ಲದೆ ಇತರ ನಾಲ್ಕು ಭಾಷೆಗಳಿಗೂ ಅನುವಾದವಾಗಿದ್ದು, ನಾಟಕದ ರೂಪದಲ್ಲು ಜನಮನ ತಲುಪಿದ್ದು – ಇದೆಲ್ಲಾ ನೋಡಿದರೆ ಚಾಪೆಯಡಿ ನುಸುಳುವ ನೀರಂತೆ ಹರಿದು ಜನಪ್ರಿಯವಾಗುವುದು ಈ ಪುಸ್ತಕದ ‘ಯೇಗ್ದಾಗೇ’ ಇರುವಂತೆ ಕಾಣುತ್ತಿದೆ.

ಒಂಬತ್ತಿಂಚಿನ ಪೀಜಾಗು ೩೦೦ ರಿಂದ ೬೦೦ ರೂಪಾಯಿ ಪೀಕುವ ಈ ಕಾಲದಲ್ಲಿ, ೧೪೦ ಪುಟಗಳ ಈ ಪುಸ್ತಕ, ಎಷ್ಟೋ ಕಡೆ   ತೆರುವ  ಕಾಫಿಯ  ಕಾಸಿಗಿಂತಲು   ಅಗ್ಗವಾಗಿ  ೬೦  ರೂಪಾಯಿಗೆ ಸಿಕ್ಕಿತ್ತು ! ರೆಸ್ಟೋರೆಂಟಿನಲ್ಲಿ ಹಿಂದೆಮುಂದೆ ನೋಡದೆ ಸಾವಿರಾರು ಸುರಿವ ನಮಗೆ – ವರ್ಷಕ್ಕೊಂದು  ಸಾರಿಯಾದರು ಕನ್ನಡ ಪುಸ್ತಕ ಕೊಳ್ಳುವುದು ‘ ಯೇಗ್ದಾಗೆ ಬರ್ದಿಲ್ಲ’ ಅಂತ ಕಾಣುತ್ತೆ. ಆದರು ಪ್ಲೀಸ್ – ಓದಲಿ, ಬಿಡಲಿ ಛಾನ್ಸ್ ಸಿಕ್ಕಿದ್ರೆ ಈ ಪುಸ್ತಕ ಮಾತ್ರ ಕೊಂಡುಕೊಂಡು ಬಿಡಿ. ಯಾಕೇಂದ್ರೆ ಈ ಪುಸ್ತಕ ಮಾರಿ ಬಂದ ಆದಾಯವೆಲ್ಲ ನೇರವಾಗಿ ಹೋಗೋದು ಬೆಳಗೆರೆಯ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ. ಓದದೇ ಇದ್ದರೂ ನಿಮ್ಮಿಂದ ಪುಕ್ಕಟೆಯಾಗಿ ಸಮಾಜ ಸೇವೆ ಮಾಡಿಸುತ್ತೆ ಈ ಪುಸ್ತಕ – ಅದೂ ತೀರಾ ಅಗ್ಗವಾಗಿ!

ಈ ಪುಸ್ತಕ ಮೂಲತಃ ಶ್ರೀ ಸಾಮಾನ್ಯನಂತಿದ್ದೂ ಅದ್ಭುತ ಯೋಗಿಯ ಬಾಳು ಬದುಕಿದ ಶ್ರೀ ಮುಕುಂದೂರು ಸ್ವಾಮಿಗಳ ‘ಪವಾಡ’ ವನ್ನು ಕುರಿತದ್ದು. ಪವಾಡವೆಂದರೆ ಇದು ಯಾವುದೊ ‘ಛೂ ಮಂತ್ರಕಾಳಿ’ಯ ತರದ ಬೂಟಾಟಿಕೆಯ ಪುಸ್ತಕವೆಂದು ಮೂಗು ಮುರಿಯಬೇಡಿ ತಾಳಿ… ಈ ಸ್ವಾಮಿಗಳನ್ನು ಹತ್ತಿರದಿಂದ ಕಂಡು ಅಲ್ಲೇನಾದರು ಢೋಂಗಿತನವಿತ್ತೆ ಎಂದು ಸ್ವತಃ ತಾವೇ ಅಳೆದು ನೋಡಲೆತ್ನಿಸಿದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು, ವಿಜ್ಞಾನದ ನಿಲುಕಿಗೆ ಸಿಗದ ನೂರಾರು ಘಟನೆ, ಅನುಭವಗಳಿಂದ ವಿಸ್ಮಿತರಾಗಿ ನೆನಪಿನ ಕೋಶದಿಂದ ಸಿಕ್ಕಷ್ಟನ್ನು ಹೆಕ್ಕಿ ಕೊನೆಗೆ ಈ ಪುಸ್ತಕರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ವೇಳೆ ಬರೆಯುವ ಉದ್ದೇಶದಿಂದಲೇ ಅಭ್ಯಸಿಸಿ ಬರೆದಿದ್ದರೆ ಈ ಪುಸ್ತಕ ಇನ್ನೂ ಹೇಗಿರುತ್ತಿತ್ತೊ ?!
ಮತ್ತಷ್ಟು ಓದು »

10
ಮಾರ್ಚ್

ಪಕ್ಷಿಗಳಿಗೆ ಒಂದು ಬೊಗಸೆ ನೀರು ಕೊಡಿ.ಪ್ಲೀಸ್…!

9
ಮಾರ್ಚ್

ನನ್ನಿ- ತಾತ್ವಿಕ ಒಳಸುಳಿಗಳ ವಿಶ್ಲೇಷಣೆ.

ನವೀನ ಗಂಗೋತ್ರಿ

12122868_977678548941892_2941475822589158080_nಗಂಭೀರ ಓದುಗರು, ನೋಡುಗರು, ಕನ್ನಡದಲ್ಲಿ ಕಡಿಮೆಯಾದ್ದರಿಂದಲೇ ಕಡಮೆ ದರ್ಜೆಯ ಪತ್ರಿಕೆಗಳು, ಸಿನಿಮಾಗಳು, ಕಾದಂಬರಿಗಳು ನಮ್ಮಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಎನ್ನುವ ಮಾತನ್ನು ಆಗಾಗ ನಿರಾಶಾವಾದಿ ವಿಮರ್ಶಕರೂ, ತಮ್ಮ ಕಣ್ಣೀರಿನ ಕಾರ್ಯಕ್ರಮಗಳ ಸಮರ್ಥಕರಾದ ಚಾನೆಲ್ಗಳೂ ಹೇಳಿಕೊಂಡು ಬಂದಿವೆ. ಸಕಾರಾತ್ಮಕ ಧೋರಣೆಯ ಕೆಲವು ಬರಹಗಾರರು, ಚಿಂತಕರು ಓದುಗರನ್ನು ಇಷ್ಟು ತಳಮಟ್ಟದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಘನವಾದ ಕೃತಿಗಳನ್ನು ಕೊಡುವುದು ಅವರಿಗೆ ಇಂದಿಗೂ ಸಾಧ್ಯವಾಗುತ್ತಿದೆ.

ಕರ್ಮ ಕಾದಂಬರಿಯ ಮೂಲಕ ಕರಣಂ ಪವನ್ ಪ್ರಸಾದ್ ಹಾಗೊಬ್ಬ ಆಳ ಚಿಂತನೆಯ ಕಾದಂಬರಿಕಾರರಾಗುವ ಭರವಸೆಯನ್ನು ಹುಟ್ಟಿಸಿದ್ದರು. ತಾತ್ತ್ವಿಕ ಎತ್ತರವನ್ನು ಅಡಕಗೊಳಿಸಿಕೊಂಡಿದ್ದರೂ ಕರ್ಮದ ಓಘದಲ್ಲಿ ಇನ್ನೊಂದಿಷ್ಟು ನೈಪುಣ್ಯವನ್ನು ಬಯಸಿದ್ದ ಓದುಗ, ಇದೀಗ ಅವರ ಹೊಸ ಕಾದಂಬರಿ ’ನನ್ನಿ’ಯ ಮೂಲಕ ಹೆಚ್ಚು ಕುಶಲಿಯಾದ ಮತ್ತು ಪ್ರಭಾವಿಯಾದ ಕಾದಂಬರಿಕಾರನನ್ನು ಕಂಡಿದ್ದಾರೆ. ಎರಡುವಾರದ ಹಿಂದೆ ಬಿಡುಗಡೆಯಾದ ನನ್ನಿ ಅದಾಗಲೇ ಎರಡುಬಾರಿ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆನ್ ಲೈನ್ ನ್ಯೂಸ್ ಪೋರ್ಟಲ್ಗಳಲ್ಲಿ ಸುದ್ದಿಯಾಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಹೊತ್ತಿ ಉರಿವ ಬೆಂಕಿಯಂತಲ್ಲದೆ, ಚಾಪೆಯಡಿಗೆ ಹರಿವ ನೀರಿನಂತೆ ಓದುಗನನ್ನು ಆಂತವಾಗಿ ತಲುಪುತ್ತಿದೆ. ಅದ್ಯಾಕೆ ಹಾಗೆ ತಲುಪುತ್ತಿದೆ ಎನ್ನುವುದಕ್ಕೆ ನನ್ನಿ ಕಾದಂಬರಿಯ ಸಾಮರ್ಥ್ಯವೇ ಉತ್ತರ.

ಮತ್ತಷ್ಟು ಓದು »