ವೇಳಿ ನಾಚಿಯರ್
– ರಂಜನ್ ಕೇಶವ
ಅದು ೧೭೭೩ ರ ಸಮಯ. ಕಪಟ ದೊರೆ ಆರ್ಕೋಟ್ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂಡಿದ್ದ. ಇದಾಗಿ ೮ ವರ್ಷಗಳು ಕಳೆದಾಗಿತ್ತು. ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ತಮ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ. ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆಯುತ್ತಾ ಕಳೆದುಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು. ಇದಕ್ಕಾಗಿ ನೆರೆಹೊರೆಯವರೆಲ್ಲರ ಸಹಾಯವನ್ನು ಜೊತೆಗೂಡಿಸುತ್ತಿದ್ದರು . ಮತ್ತಷ್ಟು ಓದು 
ಸ್ವಾಮಿ ವಿವೇಕಾನಂದರ ಒಂದು ಮರು ಓದು
3, 4, 5 ಜೂನ್ 2016
ಸ್ಥಳ ಮತ್ತು ಆತಿಥ್ಯ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ, ಕರ್ನಾಟಕ
ಸಹ ಸಂಘಟಕರು: Vergelijkende Cultuurwetenschappen (ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ); SDM Centre for Interdisciplinary Research in Humanities and Social Sciences (ಉಜಿರೆ, ಭಾರತ) ಮತ್ತು India Platform
ಪ್ರವೇಶ: ಉಚಿತ, ಆದರೆ ನೊಂದಾವಣೆ ಖಡ್ಡಾಯ.
ನೊಂದಾಯಿಸಿಕೊಳ್ಳಲು, ತಮ್ಮ ಪೂರ್ಣ ಹೆಸರು, ಸಂಸ್ಥೆ ಮುಂತಾದ ವಿವರಗಳೊಂದಿಗೆ ಇಲ್ಲಿಗೆ ಬರೆಯಿರಿ: revisitingvivekananda@gmail.com
ಕಡೆಯ ದಿನಾಂಕ: 10 ಮೇ 2016.
ಸಮ್ಮೇಳನದ ಚಟುವಟಿಕೆಗಳ ತಾತ್ಕಾಲಿಕ ವೆಳಾಪಟ್ಟಿ ಮತ್ತು ಇಂಗ್ಲಿಷ್ concept noteಗಾಗಿ ನೋಡಿ: http://www.cslc.in/dharma-and-ethics/?page=Dharma_And_Ethics_8 ಮತ್ತಷ್ಟು ಓದು 
ಸಾವರ್ಕರ್ ಬಗ್ಗೆ ಮಾತಾಡುವುದಕ್ಕೂ ಯೋಗ್ಯತೆ ಬೇಕು
-ಡ್ಯಾನಿ ಪಿರೇರಾ
ಹಳ್ಳಿಮೈಸೂರು-573210
23-03-2016 ರಂದು ಭಗತ್ ಸಿಂಗ್, ರಾಜಗುರು ಸುಖದೇವರ ಬಲಿದಾನದ ದಿನ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಒಂದು ಸುದ್ಧಿ ಕಾಣಿಸಿತು. ಅದು ಕಾಂಗ್ರೆಸ್ಸಿನ ಅಧಿಕೃತ ಐಎನ್‍ಸಿ ಟ್ವಿಟರ್ ನಲ್ಲಿ ಪ್ರಕಟವಾದ ಸಂದೇಶ ವಾಗಿತ್ತು. ಅದರಲ್ಲಿ ಹೇಳುತ್ತಿರುವುದೇನು?! ಭಗತ್ ಸಿಂಗ್, ಸ್ವಾತಂತ್ರ್ಯವೀರ ಸಾವರ್ಕರ್‍ರ ಭಾವಚಿತ್ರದಡಿಯಲ್ಲಿ ಒಬ್ಬರನ್ನು ದೇಶಭಕ್ತ ಮತ್ತೊಬ್ಬರನ್ನು ದೇಶದ್ರೋಹಿ ಎಂದು ಟ್ವಿಟ್ ಮಾಡಲಾಗಿರುವ ಸಂದೇಶವದು! ಈ ದೇಶದ ಸ್ವಾತಂತ್ರ್ಯ ಯೋಧರ ಬಗೆಗಿನ ಕಾಂಗ್ರೆಸ್ಸಿನ ಮಾನಸೀಕತೆಯನ್ನು ಬಲ್ಲವರಿಗೆ ಈ ಹೇಳಿಕೆಯನ್ನು ನೋಡಿದಾಗ ಆಶ್ಚರ್ಯವಾಗುವುದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಹುಡುಕಾಟ ನಡೆಸುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಾತ್ರವಲ್ಲದೇ ಇಡೀ ಜೀವನವನ್ನೇ ದೇಶ ಮಾತೆಯ ಸೇವೆಗಿಟ್ಟ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಪ್ರೇರಣೆ ಕೊಡಬೇಕಾಗುವ ವಿಷಯವಾಗಬೇಕಾದ ಹಿನ್ನೆಲೆಯಲ್ಲಿ ಅವರ ಬಗೆಗಿನ ಕಾಂಗ್ರೆಸ್ ಪಕ್ಷದ ಮಾತು ನಿಜಕ್ಕೂ ತಪ್ಪು ಸಂದೇಶ ಕೊಡುವಂತದ್ದು! ಇವರೇಕೆ ಹೀಗೆ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಡುವೆ ಭಿನ್ನಾಭಿಯವಿದ್ದೊಡನೇ ಆ ವ್ಯಕ್ತಿ ವಿದ್ರೋಹಿ ಆಗಬಲ್ಲನೇ?! ಮತ್ತಷ್ಟು ಓದು 
ಬಾಜಿರಾಯನ ಉತ್ತರದ ದಂಡಯಾತ್ರೆ
-ರಂಜನ್ ಕೇಶವ
ಬಾಜಿರಾಯನ ಅಶ್ವದಳ ತಲ್ಕತೋರಾ ಎಂಬಲ್ಲಿ ಕೆಂಪುಕೋಟೆ ತೋರುವಲ್ಲೇ ಡೇರೆ ಹಾಕಿತ್ತು. ಮರಾಠರ ಖಡ್ಗಗಳನ್ನು ಹೊತ್ತ ಈ ಅಶ್ವಬಲ ದಿನಕ್ಕೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಒಂದೇ ಸಮನೇ ಯಾವ ಮುನ್ಸೂಚನೆಯಿಲ್ಲದೇ ಒಂದೇ ರಭಸಕ್ಕೆ ದೆಹಲಿಯ ಸರಹದ್ದನ್ನು ತಲುಪಿತ್ತು. ಇದರ ಸುದ್ದಿ ಹಬ್ಬಿದಂತೆ ಮೊಘಲ್ ಸಿಂಹಾಸನ ಗಡ ಗಡ ನಡುಗಿ ಅಲ್ಲಿಂದ ಕಾಲ್ಕೀಳಲು ದೋಣಿಗಳನ್ನು ಸಿದ್ಧಪಡಿಸಿದರು. ಅದರಲ್ಲೂ ಬಾಜಿರಾಯನ ಸೋಲಿಲ್ಲದ ಜಯಭೇರಿ ಭಾರತದುದ್ದಗಲಕ್ಕೂ ಹಬ್ಬಿತ್ತು. ಅವನ ಪರಾಕ್ರಮವನ್ನೆದುರಿಸುವ ಧೈರ್ಯ ಇವರಿಗೆಲ್ಲಿಂದ ಬರಬೇಕು ಪಾಪ. ಸಾವಿರ ವರ್ಷದ ಹಿಂದೆ ಇಮ್ಮಡಿ ಪುಲಕೇಶಿ ದಕ್ಷಿಣದಿಂದ ಉತ್ತರಕ್ಕೆ ಜಯಭೇರಿ ಬಾರಿಸಿದ್ದ. ಅದರ ನಂತರ ಈಗ ಬಾಜಿರಾಯ ಎರಡನೆಯ ಬಾರಿ ಉತ್ತರ ಭಾರತವನ್ನು ರಕ್ಷಿಸಲು ಕುದುರೆಯೇರಿ ಬಂದಿದ್ದ. ಮತ್ತಷ್ಟು ಓದು 
ನಿಜವಾದ ಹೀರೋಗಳಿವರು
– ಮಯೂರಲಕ್ಷ್ಮೀ.
ಅವರು ಯುವಕರು… ಅಪ್ರತಿಮ ಧೈರ್ಯ, ಸಾಹಸ ಪ್ರವೃತ್ತಿ, ತೇಜಸ್ಸು ಮತ್ತು ಸದ್ಗುಣಗಳು ಅವರಲ್ಲಿತ್ತು.. ಅವರಲ್ಲಿದ್ದ ನಾಯಕತ್ವ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತ ಜ್ಞಾನದಿಂದ ಅವರು ಏನನ್ನಾದರೂ ಸಾಧಿಸಬಹುದಿತ್ತು.. ಅದು ಬ್ರಿಟಿಷರು ಭಾರತೀಯರನ್ನು ದಾಸ್ಯದಲ್ಲಿಟ್ಟು ಆಳುತ್ತಿದ್ದ ಕಾಲ. ಆ ಮೂವರೂ ಯಾವುದೇ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ, ತಾವೇ ವಿಧಿಸಿಕೊಂಡ ದೇಶರಕ್ಷಣೆಯ ಕಟ್ಟುಪಾಡುಗಳನ್ನು ಮೀರದೆ ಆಂಗ್ಲರಿಂದ ದೇಶವನ್ನು ಮುಕ್ತಗೊಳಿಸಲು ಯಾವ ತ್ಯಾಗವನ್ನಾದರೂ ಮಾಡಲು ಸಿದ್ಧರಾದರು. ಅಂತೆಯೇ ತಮ್ಮ ಪ್ರಾಣವನ್ನೂ ದೇಶಕ್ಕಾಗಿ ಅರ್ಪಿಸಿದರು. ಈ ದೇಶ ಎಂದೂ ಮರೆಯದ ಮರೆಯಲಾಗದ ಯುವಚೇತನರು ಈ ಮೂವರು.. ನಮ್ಮ ಇಂದಿನ ಯುವಶಕ್ತಿಗೆ ನಿಜವಾದ ಮಾದರಿ ಇವರೇ…!
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ ಭಾಗ೧
– ಪ್ರೇಮಶೇಖರ
ಶ್ರೀಯುತ ದಿನೇಶ್ ಅಮೀನ್,
ನಿಮ್ಮ ಉತ್ತರದ ಮೊದಲೆರಡು ಕಂತುಗಳನ್ನು ಓದಿ, ಅವುಗಳಲ್ಲಿನ ಕೊಂಕು ಮತ್ತಿತರ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ, ಅವುಗಳಲ್ಲಿರುವ ವೈಚಾರಿಕತೆಯನ್ನಷ್ಟೇ ಗಮನಕ್ಕೆ ತೆಗೆದುಕೊಂಡೆ. ನಿಮ್ಮ ಮಾತುಗಳಿಗೆ ರೋಹಿತ್ ಚಕ್ರತೀರ್ಥರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಆದಾಗ್ಯೂ, ನಿಮಗೆ ಉತ್ತರಿಸಬೇಕಾದ್ದು ನನ್ನ ಜವಾಬ್ಧಾರಿ ಎಂಬ ಅರಿವಿನಿಂದ ದೀರ್ಘ ವಿವರಣೆಗಳುಳ್ಳ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದ್ದೆ. ಇಸ್ಲಾಂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾಗಳ ಬಹುಪಾಲು ನಾಡುಗಳಿಗೆ ಪ್ರಸರಿಸಿದ್ದು ಆಕ್ರಮಣದ ಮೂಲಕ ಎಂದು ಹೇಳಲು ಬಳಸಿದ ‘ಕತ್ತಿಯ ಮೂಲಕ’ ಎಂಬ ಮಾತನ್ನು ನೀವು ತಿಳಿದೋ ತಿಳಿಯದೆಯೋ ಅಪಾರ್ಥ ಮಾಡಿಕೊಂಡು ಕತ್ತಿಯ ಉಗಮದ ಬಗ್ಗೆ ಮಾತೆತ್ತಿ ಇಡೀ ಚರ್ಚೆಯನ್ನು ದಾರಿ ತಪ್ಪಿಸಲು ಹೋದ ನಿಮ್ಮ ವಾದಸರಣಿ; ಹಿಂದೂ-ಮುಸ್ಲಿಂ ಎಂದು ಧಾರ್ಮಿಕ ಸಂಘರ್ಷದ ಬಗ್ಗೆ ಹೇಳುತ್ತಲೇ ಹಠಾತ್ತಾಗಿ ಕಾಂಗ್ರೆಸ್-ಬಿಜೆಪಿ (ಗುಜರಾತ್ ೨೦೦೨-ದೆಹಲಿ ೧೯೮೪) ಎಂದು ರಾಜಕೀಯ ಆಯಾಮಕ್ಕೆ ಜಿಗಿಯುವ ನಿಮ್ಮ ಗೊಂದಲಮಯ ಚಿಂತನಾಧಾಟಿ; ರಕ್ತಪಾತಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತಿ ನಿಲುವು ತೋರುವ ನಿಮ್ಮ ವಿರೋಧಾಭಾಸಪೂರ್ಣ, ಅತಾರ್ಕಿಕ ನಡೆಗಳು- ಎಲ್ಲವುಗಳತ್ತ ಸೂಕ್ತ ಉದಾಹರಣೆಗಳ ಮೂಲಕ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅದು ನಮ್ಮ ನಾಡಿನ ಇತಿಹಾಸದ ಬಗ್ಗೆ, ವರ್ತಮಾನದ ಬಗ್ಗೆ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಂದು ನಂಬಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತನ್ನು ಓದಿದ ನಂತರ ನಿಮ್ಮೊಂದಿಗೆ ನಾಗರಿಕ ವಿಧಾನದಲ್ಲಿ ಸಂವಾದ ನಡೆಸುವುದು ಸಾಧ್ಯವಿಲ್ಲ ಎಂದರಿವಾಯಿತು. ಇಷ್ಟಾಗಿಯೂ, ಸುಮ್ಮನುಳಿದುಬಿಡುವುದೂ ಸರಿಯೆನಿಸಲಿಲ್ಲ. ಹೀಗಾಗಿ ಆ ದೀರ್ಘ, ವಿವರಣಾತ್ಮಕ ಉತ್ತರವನ್ನು ಬದಿಗಿರಿಸಿ ಒಂದೆರಡು ಮೂಲಭೂತ ಪ್ರಶ್ನೆಗಳನ್ನಷ್ಟೇ ಎತ್ತಿಕೊಂಡು ಆ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ಕೆಲವು ಮಾತುಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಾನು ಸ್ವಂತ ಅಧ್ಯಯನ, ಅವಲೋಕನ, ಚಿಂತನೆಯ ಮೂಲಕ ಗಳಿಸಿದವುಗಳಾದ್ದರಿಂದ ನಿಮಗೆ ಬೇರೆಲ್ಲೂ ಸಿಗಲಾರವು. “ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು” ಎಂದು ವಾರದ ಹಿಂದೆ ಘೋಷಿಸಿದ ನೀವು ನಿಮ್ಮ ಮಾತಿಗೆ ಸತ್ಯವಾಗಿ ನಡೆದುಕೊಂಡಿದ್ದರೆ ಇದನ್ನೆಲ್ಲಾ ಹೇಳಬೇಕಾದ ಅಗತ್ಯ ನನಗೆ ಬರುತ್ತಲೇ ಇರಲಿಲ್ಲ.
ಮೊದಲಿಗೆ ಒಂದು ಸ್ಪಷ್ಟೀಕರಣ- ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಹಿಂಸೆ, ಶೋಷಣೆ, ತಾರತಮ್ಯಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ. ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿ ನಾನಲ್ಲ. ಅಲ್ಲದೇ, ಹಣ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.
ಅಪ್ರಾಮಾಣಿಕ, ಅವಕಾಶವಾದಿ, ಆಷಾಡಭೂತಿ ಪ್ರಗತಿಪರರು : ಭಾಗ ೧
– ಪ್ರೇಮ ಶೇಖರ
ಅಯ್ಯೋ! ನಮ್ಮ ರಾಜ ಹೀಗೇಕೆ ಬೆತ್ತಲಾಗಿದ್ದಾನೆ?
ಮನುಷ್ಯನ ಕ್ಷುದ್ರತನದ ಬಗ್ಗೆ ಮಾತಾಡುವುದು, ಬರೆಯುವುದು ನನಗೆ ಖುಶಿ ನೀಡದ ಸಂಗತಿ. ಆದರೆ ಒಬ್ಬ ಅಂಕಣಕಾರನಾಗಿ ವೈವಿಧ್ಯಮಯ ವಸ್ತುವಿಷಯಗಳಲ್ಲಿ ನಾನು ಕೈಯಾಡಿಸ- ಬೇಕಾಗುತ್ತದೆ. ಇದು ಅಗತ್ಯವಾಗುವುದು ಬರಹಗಳ ಸಮಕಾಲೀನತೆ, ಉಪಯುಕ್ತತೆ ಹಾಗೂ ಒಟ್ಟಾರೆ ನಿರಂತರ ಚಲನಶೀಲ ಬೌದ್ಧಿಕ ಬೆಳವಣಿಗೆಯ ಪ್ರಕ್ರಿಯೆಗೆ ಅವುಗಳ ಕೊಡುಗೆಯ ಕುರಿತಾದ ನಿರೀಕ್ಷೆಗಳಿಗನುಗುಣವಾಗಿ. ಈ ‘ನಿರೀಕ್ಷೆ’ಗಳನ್ನು ಪರಿಗಣಿಸಿ ಇಂದು ನಾನು ವಿಶ್ಲೇಷಣೆಗೆತ್ತಿಕೊಳ್ಳುತ್ತಿರುವ ವಿಷಯ ಇಂಗ್ಲಿಷ್ನಲ್ಲಿ Political Correctiveness ಅಥವಾ “Political Correctitude” ಮತ್ತು ಇವೆರಡನ್ನೂ ಚಿಕ್ಕದಾಗಿಸಿ PC ಎಂದು ಕರೆಯಲಾಗುವ ಮನುಷ್ಯಸ್ವಭಾವ.ಇದು ಸಂಭಾಷಣೆಯಲ್ಲಿ ಹಾಗೂ ಬರವಣಿಗೆಯಲ್ಲಿ “politically correct” ಆಗಿ ಮಾತಾಡುವುದು, “ಜಾಣತನದ ಹೇಳಿಕೆ ನೀಡುವುದು” ಎಂದು ಬಳಕೆಯಾಗುತ್ತದೆ. ಇದು ಸೂಚಿಸುವ “ವಾಸ್ತವವನ್ನು, ನಿಜವನ್ನು ಮರೆಮಾಚುವುದು” ಎಂಬ ಅರ್ಥವಂತೂ ಈ ದಿನದ ವಾಸ್ತವವನ್ನು ಢಾಳಾಗಿ ಪ್ರತಿಬಿಂಬಿಸುತ್ತದೆ.
ಈ PCಯ ಮೂಲವನ್ನು ಶೋಧಿಸಹೊರಟರೆ ನಾವು ಸ್ಟ್ಯಾಲಿನ್ ಯುಗಕ್ಕೆ ಹೋಗಿ ನಿಲ್ಲುತ್ತೇವೆ.ಆತನ ಕಮ್ಯೂನಿಸ್ಟ್ ಸರಕಾರ ಏನೇ ಮಾಡಿದರೂ ಅದೆಲ್ಲವೂ ಸರಿಯೇ ಎಂದು ವಾದಿಸುವ ಪರಿಪಾಠ ಮೂವತ್ತರ ದಶಕದಲ್ಲಿ ಸೋವಿಯೆತ್ ಯೂನಿಯನ್ನಲ್ಲಿ ಕಾಣಿಸಿಕೊಂಡಿತು. ಇದು ಅವಾಸ್ತವಿಕ ವರ್ತನೆಯೇನೋ ನಿಜ, ಆದರೆ ಇದರ ಹಿಂದಿದ್ದ ಸದಾಶಯವನ್ನು ನಾವು ಗುರುತಿಸಲೇಬೇಕು.ಸ್ಟ್ಯಾಲಿನ್ನ ನೀತಿಗಳು ಆ ದಿನಕ್ಕೆ ತಪ್ಪಾಗಿ, ಕ್ರೂರವಾಗಿ ಕಂಡರೂ, ಭವಿಷ್ಯದಲ್ಲಿ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಸರಿಯಾಗಿಯೇ ಇವೆ ಎಂಬ ಸದಾಶಯ ಅದಾಗಿತ್ತು. ಯುದ್ಧಕಾಲದಲ್ಲಿ ಅದು ಅಮೆರಿಕಾಗೂ ತಲುಪಿತು.ಜರ್ಮನ್ ಪೈಶಾಚಿಕ ಧಾಳಿಯ ವಿರುದ್ಧ ಮಹಾನ್ ದೇಶಾಭಿಮಾನಿ ಯುದ್ಧದಲ್ಲಿ ಧೀಮಂತವಾಗಿ ಸೆಣಸುತ್ತಿದ್ದ ಸೋವಿಯೆತ್ ಯೂನಿಯನ್, ಆ ಮೂಲಕ ಅಮೆರಿಕಾಗೆ ಸ್ಟ್ಯಾಲಿನ್ ನೀಡುತ್ತಿದ್ದ ಸಹಕಾರ ಅಮೆರಿಕನ್ ಬುದ್ಧಿಜೀವಿಗಳಿಗೆ, ಮಾಧ್ಯಮದ ಒಂದು ವರ್ಗಕ್ಕೆ ಪ್ರಿಯವಾದದ್ದು ಸಹಜವೇ. ಆದರೆ ಎಡಪಂಥೀಯ ಬುದ್ಧಿಜೀವಿಗಳು ಇದನ್ನು ಅತಿಯಾಗಿ ಉಪಯೋಗಿಸತೊಡಗಿ ಎಲ್ಲ ವಿಷಯದಲ್ಲೂ “politically correct” ಆಗಿ ಮಾತಾಡುವುದು ಅಂದರೆ ಜಾಣತನದ ಹೇಳಿಕೆ ನೀಡುವುದು ಅವರ ಅಭ್ಯಾಸವಾಗಿಹೋಯಿತು.ಇದು ಮುಖ್ಯವಾಹಿನಿ ಮಾಧ್ಯಮದಲ್ಲೂ ಪ್ರಧಾನವಾಗಿ ಕಾಣಿಸಿಕೊಳ್ಳಲು ಹೆಚ್ಚುಕಾಲ ಬೇಕಾಗಲಿಲ್ಲ. ಅಂದರೆ ವಾಸ್ತವಕ್ಕೆ ವಿರುದ್ಧವಾಗಿ ಮಾತಾಡುವುದು, ಅದೇ ಪರಮಸತ್ಯವೆಂದು ವಾದಿಸುವುದು ಬುದ್ಧಿಜೀವಿ ವರ್ಗದ ಜಾಯಮಾನವಾಗಿಹೋಯಿತು.ಅತಿಯಾದರೆ ಹಾಲೂ ಹಾಲಾಹಲವಾಗುತ್ತದಂತೆ. PC ವಿಷಯದಲ್ಲಿ ಆದದ್ದೂ ಅದೇ.
ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ
ಇತ್ತೀಚೆಗೆ, ಲೇಖಕ ರೋಹಿತ್ ಚಕ್ರತೀರ್ಥ ಅವರ ಕಥಾಸಂಕಲನಕ್ಕೆ ಹಿರಿಯ ಲೇಖಕರಾದ ಬೊಳುವಾರ ಮಹಮ್ಮದ್ ಕುಂಞ್ ಯವರು ಮುನ್ನುಡಿ ಬರೆದಿರುವ ವಿಷಯವಾಗಿ ಫೇಸ್ಬುಕ್ಕಿನಲ್ಲಿ ವಾದ-ವಿವಾದಗಳು ನಡೆಯುತ್ತಿವೆ.ಅದಕ್ಕೆ ಪ್ರತಿಕ್ರಿಯಿಸಿದ ಬೊಳುವಾರರು, ಮೂವತ್ತು ವರ್ಷಗಳ ಹಿಂದೆ ಬರೆದಿದ್ದ “ಮುಸ್ಲಿಮನಾಗಿರುವುದೆಂದರೆ…” ಲೇಖನವನ್ನು ನೆನೆಸಿಕೊಂಡರು.ಆ ಲೇಖನದ ಕುರಿತಾಗಿ ಕಥೆಗಾರರು ಮತ್ತು ವಿಜಯವಾಣಿಯ ಅಂಕಣ ಬರಹಗಾರರಾದ ಪ್ರೇಮಶೇಖರ ಅವರು ತಮ್ಮ ವಾಲ್ನನಲ್ಲೊಂದು ಅಭಿಪ್ರಾಯ ಹಾಕಿದ್ದರು.ಆ ಅಭಿಪ್ರಾಯದ ಕುರಿತು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಅವರು “ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ” ಎಂದಿದ್ದರು.ಪ್ರೇಮಶೇಖರ ಅವರು ಅಮೀನರಿಗೆ ಕೊಟ್ಟ ಉತ್ತರ ಇಲ್ಲಿದೆ… ಜೊತೆಗೆ ಬೊಳುವಾರರ ಹಳೇ ಲೇಖನದ ಪ್ರತಿಯೂ ಇದೆ – ನಿಲುಮೆ
– ಪ್ರೇಮ ಶೇಖರ ಅವರ ಮೊದಲ ಅಭಿಪ್ರಾಯ
ಬೊಳುವಾರರು “ಸುಧಾ” ಸಾಪ್ತಾಹಿಕದಲ್ಲಿ “ಮುಸ್ಲಿಮನಾಗಿರುವುದೆಂದರೆ…” ಎಂಬ ಲೇಖನ ಬರೆದು ಮೂವತ್ತನಾಲ್ಕೂವರೆ ವರ್ಷಗಳಾಗುತ್ತಾ ಬಂದಿವೆ. ಈ ಆವಧಿಯಲ್ಲಿ ನೇತ್ರಾವತಿಯಲ್ಲಿ ಅದೆಷ್ಟು ನೀರು ಹರಿದಿದೆ! ಹಾಗೆಯೇ ಬೊಳುವಾರರು ಬೆಳೆಯುತ್ತಾ ಹೋಗಿದ್ದಾರೆ, ಅದು ಅವರ ಹೆಗ್ಗಳಿಕೆ. ಆದರೆ ಅದಕ್ಕೆ ವಿರುದ್ಧವಾಗಿ, ಆ ಲೇಖನವನ್ನು ಅಂದು ಓದಿದವರು ಅಲ್ಲೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಅಧಃಪಾತಾಳಕ್ಕಿಳಿಯುತ್ತಿದೆ.
ಮೂವತ್ತೂ ದಾಟದ ಆ ದಿನಗಳಲ್ಲಿ ಬೊಳುವಾರರು ಬರೆದ, ವೈಚಾರಿಕತೆಗಿಂತಲೂ ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದ, ಆ ಲೇಖನದಲ್ಲಿ ಒಳ್ಳೆಯ ಒಳನೋಟಗಳಿದ್ದಂತೇ ಉಪಖಂಡದ ಇತಿಹಾಸದ ಬಗ್ಗೆ, ದೇಶವಿಭಜನೆಯ ಬಗ್ಗೆ ಹಲವು ತಪ್ಪುಗ್ರಹಿಕೆಗಳೂ ಇದ್ದವು. ಭಾರತಕ್ಕೆ ಮುಸ್ಲಿಮರ, ನಂತರ ಬ್ರಿಟಿಷರ ಆಗಮನದ ಸ್ವರೂಪದ ಬಗ್ಗೆ, ದೇಶವಿಭಜನೆಯ ಬಗ್ಗೆ ಬೊಳುವಾರದ ತಿಳುವಳಿಕೆಗಳಲ್ಲಿ ಅಸ್ಪಷ್ಟತೆಯಿತ್ತು. ನನಗೆ ತಕ್ಷಣಕ್ಕೆ ನೆನಪಾಗುವುದು ಇದು- “ಪಾಕಿಸ್ತಾನ ಬೇಕೇ ಬೇಡವೇ ಎಂದು ಒಂದು ಜನಮತಗಣನೆ ನಡೆಯಿತಂತೆ, ಆದರೆ ಅಂಥದು ನಡೆದ ಬಗ್ಗೆ ನನ್ನ ತಂದೆಯವರಿಗೆ ಗೊತ್ತೇ ಇಲ್ಲ” ಎಂಬುದಾಗಿ ಬೊಳುವಾರರು ಬರೆದಿದ್ದರು. ವಾಸ್ತವವೆಂದರೆ ಬೊಳುವಾರರ ತಂದೆಯವರಿಗೆ ಆ ಜನಮತಗಣನೆಯ ಬಗ್ಗೆ ಗೊತ್ತಾಗಿ ಅವರದರಲ್ಲಿ ಭಾಗಿಯಾಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಂಥದೊಂದು ಆಯ್ಕೆ ಎದುದಾದದ್ದು ಗಡಿನಾಡು ಪ್ರಾಂತ್ಯ ಮತ್ತು ಸಿಲ್ಹೆಟ್ (ಈಗ ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯ ಜನತೆಗೆ ಮಾತ್ರ. ದೇಶವಿಭಜನೆಯ ನಿಜವಾದ ಆರೋಪಿಗಳಾದ ಮುಸ್ಲಿಂ ಲೀಗ್ ಮತ್ತು ಬ್ರಿಟಿಷರ ಪಾತ್ರವನ್ನು ಕಡೆಗಣಿಸಿ ಪರಿಸ್ಥಿತಿಯ ಕೈಗೊಂಬೆಯಾದ ಕಾಂಗ್ರೆಸ್‍ನ ಪಾತ್ರವನ್ನು ದೊಡ್ಡದಾಗಿ ತೋರಿಸುವ ಪ್ರಯತ್ನವೂ ಆ ಲೇಖನದಲ್ಲಿತ್ತು. ಕೋಮುವಾದದ ಉಗಮದ ಬಗೆಗೂ ಅಂಥದೇ ತಪ್ಪುತಿಳುವಳಿಕೆಯ ಭಾವನಾತ್ಮಕ ವಿವರಣೆಗಳಿದ್ದವು. ಅಂಥದೊಂದು ತಪ್ಪುಗ್ರಹಿಕೆಯನ್ನು ಎರಡುವಾರಗಳ ನಂತರ ಸಮುದ್ರಮಧನ ವಿಭಾಗದಲ್ಲಿ ಪ್ರಜ್ಞಾವಂತ ಓದುಗರೊಬ್ಬರು “ಮುಸ್ಲಿಂ ಲೀಗ್ ಯಾವಾಗ ಸ್ಥಾಪನೆಯಾಯಿತು, ಆರ್‌ಎಸ್‌ಎಸ್ ಯಾವಾಗ ಸ್ಥಾಪನೆಯಾಯಿತು ಎಂದು ನೋಡಿದರೆ ಯಾವುದು ಯಾವುದಕ್ಕೆ ಪ್ರತಿಕ್ರಿಯೆ ಎಂದು ತಿಳಿಯುತ್ತದೆ” ಎಂಬುದಾಗಿ ಹೇಳುವುದರ ಮೂಲಕ ಬೊಳುವಾರರಿಗೆ ಈ ದೇಶದ ಚರಿತ್ರೆಯ ಒಂದು ಸತ್ಯವನ್ನು ಮನಗಾಣಿಸಲು ಪ್ರಯತ್ನಿಸಿದ್ದರು. ನಂತರ ಬೊಳುವಾರದು ಬೆಳೆಯುತ್ತಾ ಹೋದರು. ಐದೇ ತಿಂಗಳಲ್ಲಿ “ದೇವರುಗಳ ರಾಜ್ಯದಲ್ಲಿ” ಎಂಬ ಅದ್ಭುತ ಕಥೆ ರಚಿಸಿದರು. ಅವರ ಬೆಳವಣಿಗೆಯ ಓಟ ಇನ್ನೂ ಸಾಗಿದೆ. ನನಗವರು ಅನುಕರಣೀಯವಾಗುವುದು, ಈ ನಾಡಿಗೆ ಅವರು ಮುಖ್ಯವಾಗುವುದು ಈ ಕಾರಣಕ್ಕಾಗಿ.
ದುರಂತವೆಂದರೆ ಆ ಲೇಖನವನ್ನು ಅಂದು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ, ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ. ಬೊಳುವಾರರನ್ನೂ ಅಂದಿನ ದಿನಗಳಿಗೇ ಕಟ್ಟಿಹಾಕಲು ನೋಡುತ್ತಿದ್ದಾರೆ. ನಮ್ಮ ಬೊಳುವಾರರನ್ನೂ, ನಮ್ಮ ನಾಡನ್ನೂ, ನಮ್ಮ ಸಾಂಸ್ಕೃತಿಕ ಚಿಂತನೆಯನ್ನೂ ಈ ಪ್ರತಿಗಾಮಿಗಳಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಆಪರೇಷನ್ ವ್ರಾತ್ ಆಫ್ ಗಾಡ್ ಮತ್ತು ಉಕ್ಕಿನ ಮಹಿಳೆ ಗೋಲ್ಡಾ ಮೈಯರ್
– ತಾರಾನಾಥ್ ಎಸ್.ಎನ್
” ನಾನು ಸಮಯವನ್ನು ಆಳುತ್ತೇನೆ ಹೊರತು ಸಮಯ ನನ್ನನಲ್ಲ.”
ಇಸ್ರೇಲ್ ಎಂದರೆ ತಕ್ಷಣ ನೆನಪಾಗುವುದು ಯುದ್ದ-ಹೋರಾಟ ಅಥವಾ ಅದರ ರಾಷ್ಟ್ರಭಕ್ತಿ.2000 ವರ್ಷಗಳಿಂದ ತಾಯಿನೆಲೆ ಬಿಟ್ಟು ಅಲೆಮಾರಿಯಾದ ಯಹೂದಿ ಜನಾಂಗ ಇಂದು ನೆಲೆಸಿರುವ ನಾಡು. 20 ಶತಮಾನಗಳು ಅವರಿವರಿಂದ ತುಳಿತಕ್ಕೆ ಒಳಗಾಗಿ ವಿಶ್ವದಾದ್ಯಂತ ಹಂಚಿ ಹೋದ ಜನಾಂಗ ಮತ್ತೆ ಒಂದುಗೂಡಿದ ದೇಶ. ಜರ್ಮನಿ ಸರ್ವಾಧಿಕಾರಿ ಹಿಟ್ಲರನ ವಿಷಾನೀಲಕ್ಕೆ ತಮ್ಮವರನ್ನು ಕಳೆದುಕೊಂಡ ನೋವಲ್ಲಿ ಮತ್ತೆ ದೇಶಕಟ್ಟಿದ ಛಲಗಾರರ ದೇಶ. ಸಿಕ್ಕ ಸ್ವಾತಂತ್ಯವನ್ನು ಉಳಿಸಿಕೊಳ್ಳಲು,ಸುತ್ತ ನೆರೆದಿರುವ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರಿಕೆಯಿಂದ ಇರುವ ದೇಶ. ಮರುಭೂಮಿಯಲ್ಲಿ ಹಸಿರು ಬೆಳೆದ ಮಾಯಗಾರರ ನಾಡು.ಇಂಥಹ ನಾಡಿನ ಧೀರ ಮಹಿಳೆಯೇ ಗೋಲ್ಡಾ ಮೈಯರ್.
ಗೋಲ್ಡಾ ಮೈಯರ್ ಇಂದಿನ ಉಕ್ರೇನ್ ದೇಶದಲ್ಲಿರುವ ಕೀವ್ ಪಟ್ಟಣದಲ್ಲಿ ಮೇ 3 1898ರಲ್ಲಿ ಜನಿಸಿದರು. ತಂದೆ ಮೋಶೆ ಮಬೋವಿಚ್ಚ್ ಒಬ್ಬ ಬಡಗಿ. ಅವರು ನಂತರ ಉದ್ಯೋಗ ಹುಡುಕಿ ಅಮೆರಿಕಕ್ಕೆ ಹೊರಟರು.ಅಮೇರಿಕಾದಲ್ಲಿ ಓದು ಮುಗಿಸಿದ ಗೋಲ್ಡಾ ಕೆಲಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಮಾರಿಸ್ ಮೆಯೇರ್ಸೋನ್ ಎನ್ನುವರನ್ನು ಮದುವೆಯಾದರು. 1921ರಲ್ಲಿ ಪ್ಯಾಲೆಸ್ಟೈನ್ನಲ್ಲಿ ನೆಲೆಯಾದರು. ಅಲ್ಲಿ ಕೃಷಿ ಮಾಡಿ ನೆಲೆಸುವುದು ಅವರ ಇಚ್ಛೆಯಾಗಿತ್ತು ಅವರಿಗೆ 2 ಜನ ಮಕ್ಕಳು ಜನಿಸಿದವು. ಇಲ್ಲಿಗೆ ಗೋಲ್ಡಾಳ ಬದುಕಿನ ಒಂದು ಘಟ್ಟ ಮುಗಿದಿತ್ತು. ಮತ್ತೆ ಅಮೇರಿಕಕ್ಕೆ ಹೋದ ಗೋಲ್ಡಾ ತಮ್ಮ ಬದುಕನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು. ಮೊದಲಿಗೆ ಪ್ಯಾಲೆಸ್ಟೈನ್ ನಲ್ಲಿ ಯಹೂದಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು.
ಬದಲಾದ ಸನ್ನಿವೇಶದಲ್ಲಿ ಹಿಟ್ಲರನ ಕಿರುಕುಳಕ್ಕೆ ನಲುಗಿದ ಯಹೂದಿಗಳಿಗೆ ಅಮೇರಿಕಾ ದೇಶ ಕಟ್ಟುವ ಭರವಸೆ ನೀಡಿತು. 1946ರಲ್ಲಿ ಗೋಲ್ಡಾ ಯಹೂದಿ ಹೋರಾಟ ವೇದಿಕೆಯ ರಾಜಕೀಯ ವಿಭಾಗದ ಮುಖ್ಯಸ್ಥರಾದರು. ದೇಶ ರಚಿಸುವ ಮಾತುಕತೆಗೆ ಹೋರಾಟಗಾರರು ಹಾಗು ಬ್ರಿಟನ್ ನಡುವಿನ ಕೊಂಡಿಯಾದರು. ಜೂನ್ 1948ರ ಹೊತ್ತಿಗೆ ಹೊಸ ದೇಶ ಇಸ್ರೇಲ್ ರಚನೆಗೆ ನೀಲನಕ್ಷೆ ಸಿದ್ದವಾದವು. ಸುತ್ತಮುತ್ತ ಶತ್ರುಗಳನ್ನು ಹೊಂದಿರುವ ಕಾರಣ ರಕ್ಷಣಾ ಉಪಕರಣಗಳ ಖರೀದಿಗೆ ಅಗತ್ಯವಾಗಿ 8 ಮಿಲಿಯನ್ ಡಾಲರ್ ಬೇಕಾಗಿತ್ತು. ಇದಕ್ಕಾಗಿ ಇಸ್ರೇಲ್ ನಾಯಕ ಬೆನ್ ಗುರಿಯನ್ ಅಮೇರಿಕಾಕ್ಕೆ ಹೋಗಲು ಯೋಚಿಸಿದರು. ಯುದ್ದ ನಡೆಯುವ ಸಂದರ್ಭ ಇರುವುದರಿಂದ ಅವರು ದೇಶ ಬಿಟ್ಟು ಹೋಗುವುದು ತರವಲ್ಲ ಎಂದು ಯೋಚಿಸಿದ ಗೋಲ್ಡಾ ತಾವು ಹೋದರು. ಅಮೇರಿಕಾದಲ್ಲಿ ನೆಲೆಸಿರುವ ಯಹೂದಿಗಳಿಂದ ಧನ ಸಂಗ್ರಹಿಸಲು ನಿರ್ಧರಿಸಿದರು.ತಾಯಿನೆಲಕ್ಕೆ ಒದಗಿದ ದುಸ್ಥಿತಿಯನ್ನು ಮನ ಮಿಡಿಯುವಂತೆ ವಿವರಿಸಿ 50 ಮಿಲಿಯನ್ ಡಾಲರ್ ಸಂಗ್ರಹಿಸಿ ನಾಡಿಗೆ ಮರಳಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಸ್ವತಹ ಬೆನ್ ಗುರಿಯನ್ ಅವರೇ “ಇಸ್ರೇಲ್ ಎನ್ನುವ ದೇಶವನ್ನು ಸಾಧ್ಯವಾಗಿಸಿದ ಮಹಿಳೆ” ಎಂದು ಘೋಷಿಸಿದರು. ಮೇ 14, 1948 ರಲ್ಲಿ ಇಸ್ರೇಲ್ ಸ್ವಾತಂತ್ರ ಘೋಷಣೆಗೆ ಸಹಿ ಹಾಕಿದ 24 ಮಂದಿಯಲ್ಲಿ ಗೋಲ್ಡಾ ಒಬ್ಬರಾಗಿದ್ದರು. ಮರುದಿನವೇ ಅರಬ್ ದೇಶಗಳು ಇಸ್ರೇಲ್ ನತ್ತ ದಾಳಿಯಿಕ್ಕಿದವು. ಇಸ್ರೇಲಿಗರು ಸಾಹಸದಿಂದ ಅರಬ್ಬರನ್ನು ಸೋಲಿಸಿ 2000 ವರ್ಷಗಳಿಂದ ಕಳೆದುಹೋಗಿದ್ದ ತಾಯಿನೆಲವನ್ನು ಮತ್ತೆ ಪಡೆದರು.
ಮತ್ತಷ್ಟು ಓದು 
ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಲೇಖನ – ಡಾ.ಅನಂತರಾಮ ಭಟ್ಟರ ದುರಂತ ಕಥನ
ಮಹಾಪಂಡಿತ ರಾಹುಲ ಸಾಂಕೃತ್ಯಾಯನ (1893-1963)ರ ಬದುಕು ಮತ್ತು ಬರಹ ಒಬ್ಬ ಲೇಖಕನ ಸಾಧ್ಯತೆಗಳ ಬಗ್ಗೆ ಇರುವ ಇದುವರೆಗಿನ ಕಲ್ಪನೆಗಳಿಗೊಂದು ದೊಡ್ಡ ಸವಾಲು. ಈ ಜಗತ್ತು ಕಂಡ ಅಪರೂಪದ ‘ಮಹಾಕಾವ್ಯಾತ್ಮಕ’ ವ್ಯಕ್ತಿತ್ವ ಅವರದು. ಧರ್ಮ-ದರ್ಶನ, ರಾಜಕೀಯ, ಇತಿಹಾಸ, ಪುರಾತತ್ವ, ಸಾಹಿತ್ಯ ಭಾಷೆ, ಸಂಶೋಧನೆ-ಇತ್ಯಾದಿ ನಾನಾ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆಯನ್ನಿತ್ತ ರಾಹುಲ್ ಒಂದು ಮಹಾವಿಸ್ಮಯ. ಅವರಿಗೆ ಮುವತ್ತಾರು ಭಾಷೆಗಳು ತಿಳಿದಿದ್ದುವು. ನೂರೈವತ್ತಕ್ಕೂ ಮಿಕ್ಕಿ ಅವರ ಕೃತಿಗಳು ಪ್ರಕಟವಾಗಿದ್ದರೆ, ಅಪ್ರಕಟಿತ ಸಾಕಷ್ಟಿವೆ. ಒಬ್ಬ ವ್ಯಕ್ತಿಯಾಗಿ ಒಂದು ವಿಶ್ವವಿದ್ಯಾಲಯಕ್ಕೂ ಅಸಂಭವವೆನಿಸುವಂತೆ ನಾಲ್ಕು ಕೋಶಗ್ರಂಥಗಳನ್ನು ರಚಿಸಿದವರು ರಾಹುಲರು (ಶಾಸನ ಶಬ್ದಕೋಶ, ಟಿಬೇಟ್ ಹಿಂದಿಕೋಶ್, ಟಿಬೇಟ್ ಸಂಸ್ಕೃತಕೋಶ್, ರಾಷ್ಟ್ರ ಭಾಷಾಕೋಶ್). ತ್ರಿಪಿಟಕಗಳ ಹಾಗೂ ಬೌದ್ಧದಾರ್ಶನಿಕ ಕೃತಿಗಳ ಮಹಾನ್ ಸಂಪಾದಕರು. ‘ದರ್ಶನ ದಿಗ್ದರ್ಶನ’ ಅವರು ಬರೆದ ತತ್ವಶಾಸ್ತ್ರದ ಮೇರುಕೃತಿ. ಕಾಶಿಯ ವಿದ್ಯಾಪೀಠವೇ ಇವರ ಅಗಾಧ ಸಂಸ್ಕೃತ ಪಾಂಡಿತ್ಯಕ್ಕೆ ‘ಮಹಾಪಂಡಿತ’ ಎಂಬ ಬಿರುದನ್ನಿತ್ತಿದೆ. ಶ್ರೀಲಂಕಾ ಬೌದ್ಧ ವಿಶ್ವವಿದ್ಯಾಲಯ ‘ತ್ರಿಪಿಟಕಾಚಾರ್ಯ’ ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿತ್ತು. ಮಹಾನ್ ಪರ್ಯಟಕ, ಪುರಾತತ್ವವೇತ್ತ, ಸಾಹಿತ್ಯ ವಾಚಸ್ಪತಿ, ಪದ್ಮವಿಭೂಷಣ, ಮಹಾಪಂಡಿತ ರಾಹುಲ ಸಾಂಕೃತ್ಯಾಯನರ ಕೃತಿಗಳ ಸಂಖ್ಯೆ ಅಗಾಧ. 1994ರಲ್ಲಿ ಡೆಲ್ಲಿಯ ರಾಧಾಕೃಷ್ಣ ಪ್ರಕಾಶನವು ದೊಡ್ಡ ಗಾತ್ರದ ಐವತ್ತು ಖಂಡಗಳಲ್ಲಿ ರಾಹುಲರ ಕೃತಿಗಳನ್ನು ಪ್ರಕಟಿಸಿದೆ. ಆದರೆ, ಅಪ್ರಕಟಿತ ಇನ್ನೂ ಸಾಕಷ್ಟಿವೆ. ಖೇದದ ವಿಷಯವೆಂದರೆ ಪ್ರಕಟಿತ ಖಂಡಗಳಲ್ಲಿ ಹಲವು ಈಗ ಉಪಲಬ್ಧವಿಲ್ಲ.
ಪ್ರಸ್ತುತ ಲೇಖನ ಖಂಡ 2 ಭಾಗ 1 (ಜೀವನ ಚರಿತ್ರೆ ಮತ್ತು ಸಂಸ್ಮರಣ)ದ “ಜಿನ್‍ಕಾ ಮೈ ಕೃತಜ್ಞ್” ಮಾಲೆಯಲ್ಲಿ 34ನೇ ಲೇಖನ ಡಾ| ಅನಂತರಾಮ ಭಟ್ಟರ ದುರಂತ ಕಥನ. ಇದು ಪುಟ 685 ರಿಂದ 692ರಲ್ಲಿದೆ. ಅದರ ಪೂರ್ತಿ ಕನ್ನಡ ಅನುವಾದ ತಮ್ಮ ಮುಂದಿದೆ.
ಹಿಂದಿ ಮೂಲ: ಮಹಾಪಂಡಿತ ರಾಹುಲ ಸಾಂಕೃತ್ಯಾಯನ
ಕನ್ನಡಕ್ಕೆ : ಡಾ| ಜಿ. ಭಾಸ್ಕರ ಮಯ್ಯ
ಕೊಡವೂರು ಶ್ರೀ ಅನಂತರಾಮ ಭಟ್ಟರನ್ನು ನಾನು ಮೊದಲು ಭೇಟಿಯಾದದ್ದು 1928ನೆಯ ಇಸವಿಯಲ್ಲಿ. ಕೊಲೊಂಬೋದಲ್ಲಿ. ಒಬ್ಬ ಪಂಡಿತ ಭಿಕ್ಷು ನನ್ನೊಡನೆಂದ – ‘ನಮ್ಮಲ್ಲಿ ಜಂಬೂ ದ್ವೀಪದ ಒಬ್ಬ ಪಂಡಿತರು ಇದ್ದಾರೆ.’ ಇದನ್ನು ಕೇಳಿ ನಾನು ಅಲ್ಲಿಗೆ ಹೋದೆ. ಇಪ್ಪತ್ತು ವರ್ಷದ ಒಬ್ಬ ತರುಣನೊಂದಿಗೆ ನನ್ನ ಭೇಟಿಯಾಯ್ತು – ಅನಂತರಾಮ ಹುಟ್ಟಿದ್ದು ಫೆಬ್ರವರಿ 7, 1908. ಆತ ಸಂಸ್ಕೃತವನ್ನು ಮಾತೃಭಾಷೆಯ ಹಾಗೆ ಮಾತನಾಡುತ್ತಿದ್ದ. ಆನಂತರ ಪರಸ್ಪರ ಭೇಟಿಯಾಗುತ್ತಿದ್ದೆವು. ಅದು ಆಳವಾದ ಮೈತ್ರಿಯನ್ನೇ ಉಂಟುಮಾಡಿತು.
ಅನಂತರಾಮ ಮದ್ರಾಸಿನ ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯವರಾಗಿದ್ದರು.ಅವರ ಮಾತೃಭಾಷೆ ಕನ್ನಡ. ಮಾಧ್ವ ಸಂಪ್ರದಾಯದ ವೈಷ್ಣವ ಬ್ರಾಹ್ಮಣ. ಅವರು ಬಾಲ್ಯದಿಂದಲೇ ಸಂಸ್ಕೃತ ಓದಿದವರು. ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯ ಪಡೆದವರು. ಮೈಸೂರಿನಲ್ಲಿ ಓದು ಮುಗಿಸಿದ ನಂತರ ಅವರಿಗೆ ಅನ್ನಿಸಿದ್ದೇನೆಂದರೆ ಸಂಸ್ಕೃತ ವಿದ್ವಾಂಸನಿಗೆ ಮಾರುಕಟ್ಟೆಯಲ್ಲಿ ಯಾವ ಬೆಲೆಯೂ ಇಲ್ಲ. ಇಂಗ್ಲಿಷ್ ಓದಿದರೆ ಬೆಲೆ ಹೆಚ್ಚಾಗುತ್ತದೆ. ಇಂಗ್ಲಿಷ್ ಓದಿ ಮೆಟ್ರಿಕ್ ಪರೀಕ್ಷೆಗೆ ಕುಳಿತರು. ಆದರೆ ತೇರ್ಗಡೆಯಾಗಲಿಲ್ಲ. ಮುಂದಿನ ವರ್ಷವೂ ಇದೇ ಗತಿ ಎಂದು ಅನ್ನಿಸಿತು. ಯಾರೋ ಹೇಳಿದರು … ಸಿಲೋನಿನಲ್ಲಿ ನೇರವಾಗಿ ಲಂಡನ್ ಯುನಿವರ್ಸಿಟಿಯ ಪರೀಕ್ಷೆಗೆ ಕುಳಿತುಕೊಳ್ಳಲಿಕ್ಕಾಗುತ್ತದೆ. ಅದರ ಬೆಲೆ ಭಾರತೀಯ ಡಿಗ್ರಿಗಳಿಗಿಂತ ಹೆಚ್ಚು. ಹೇಗೋ ಮಾಡಿ ಅವರು ಸಿಲೋನಿಗೆ ಬಂದರು. ಸಿಲೋನಿನ ಮಹಾಸ್ಥವಿರ ಧರ್ಮಸ್ಕಂಧರನ್ನು ಭೇಟಿ ಮಾಡಿದರು. ಅವರು ಅನಂತರಾಮ ಅವರನ್ನು ತಮ್ಮ ಬಳಿ ಸೇರಿಸಿಕೊಂಡರು. ಮಹಾಸ್ಥವಿರರದ್ದು ಒಂದು ಸಣ್ಣ ವಿಹಾರ. ಅದರಲ್ಲಿ ನಾಲ್ಕಾರು ಭಿಕ್ಷುಗಳು ವಾಸಿಸುತ್ತಿದ್ದರು. ಭಟ್ಟರ ವಿದ್ಯೆಯ ಪೂರ್ಣ ಉಪಯೋಗ ಅಲ್ಲಿ ಆಗುತ್ತಿರಲಿಲ್ಲ. ಆದರೆ, ಅಲ್ಲಿ ಇರುವುದರಿಂದ ವಾಸ ಮತ್ತು ಊಟದ ಚಿಂತೆ ನೀಗಿತು. ಮಹಾಸ್ಥವಿರರು ಆಗಾಗ್ಗೆ ಒಂದು ನಾಲ್ಕು ಪುಟದ ಸಂಸ್ಕೃತದ ಪತ್ರಿಕೆ ಪ್ರಕಟಿಸುತ್ತಿದ್ದರು. ಭಟ್ಟರು ಅದರಲ್ಲಿ ಬರೆಯ ತೊಡಗಿದರು.
ಮತ್ತಷ್ಟು ಓದು 






