ಹೀಗೂ ಆಗಿರುತ್ತೆ!!!
– ಮಧು ಚಂದ್ರ , ಭದ್ರಾವತಿ
ನಮ್ಮ ದಿನನಿತ್ಯ ಜೀವನದಲ್ಲಿ ಹಲವಾರು ಸನ್ನಿವೇಶಗಳು ಬಂದು ಹೋಗಿರುತ್ತವೆ. ಅವುಗಳಲ್ಲಿ ಕೆಲವೊಂದು ಪ್ರಸಂಗಗಳು ಮುಜುಗರಕ್ಕಿಡು ಮಾಡುತ್ತವೆ. ಉದಾಹರಣೆಗೆ, ನಾವು ಪ್ರಯಾಣ ಮಾಡುವಾಗ ಅಥವಾ ಇನ್ನಾವುದೋ ಸಂಧರ್ಭದಲ್ಲಿ ಅಪರಿಚಿತರನ್ನು ಭೇಟಿ ಮಾಡುತ್ತೇವೆ. ನಾವು ಅವರ ಹೆಸರು ಕುಲ ಗೊತ್ರಗಳನ್ನೆಲ್ಲಾ ತಿಳಿದು ಕೊಂಡು ಮುಂದಿನ ಮಾತುಕತೆಗೆ ಮುನ್ನಡಿ ಬರೆಯುತ್ತೇವೆ. ಕೆಲವೊಮ್ಮೆ ಅವರ ಕಾರ್ಯಕ್ಷೇತ್ರದ ಬಗ್ಗೆ ವಿಚಾರಿಸದೆ ಅವರ ಕಾರ್ಯಕ್ಷೇತ್ರದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತೇವೆ. ಆಮೇಲೆ ಅವರಾರು ಎಂದು ಅರಿತು ನಮಗೆ ಮುಜುಗರವಾಗಿ ” ಅಯ್ಯೋ ಹೀಗೆಲ್ಲ ಮಾತಾಡಬಾರದಿತ್ತು ” ಎಂದು ಅಂದುಕೊಂಡು ನಾವು ತಲೆ ಮೇಲೆ ಕೈ ಇಟ್ಟು ಕೂರುತ್ತೇವೆ. ಇದೆ ರೀತಿಯ ಒಂದು ಪ್ರಸಂಗವು ಕನ್ನಡ ಕಟ್ಟಾಳು ಅ ನ ಕೃಷ್ಣರಾಯರು ಮತ್ತು ಕನ್ನಡದ ಅಸ್ತಿ ” ಮಾಸ್ತಿ ” ಯವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಡೆಯಿತು.
ಮಾಸ್ತಿ ಮತ್ತು ಅನಕೃ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದ ಸಲುವಾಗಿ ಆಂಧ್ರದ ಅದವಾನಿಗೆ ರೈಲಿನಲ್ಲಿ ಹೋಗುವರಿದ್ದರು.
ಆಗ ಅವರಿಗೆ ಮುಂಗಡವಾಗಿ ಪ್ರಯಾಣದ ಟಿಕೆಟ್ ಕಾಯ್ದಿರಿಸಲಾಗಿತ್ತು. ಅಂದು ಅವರು ಯಾವುದೂ ಕಾರಣದಿಂದ ತಮಗಾಗಿ ಕಾಯ್ದಿರಿಸಿದ ಬೋಗಿಗೆ ಹತ್ತಲಾಗಲಿಲ್ಲ. ಕಡೆಗೆ ಸಾಮಾನ್ಯ ಬೋಗಿಗೆ ಹತ್ತಿದರು. ಮೊದಲೇ ಸಾಮಾನ್ಯ ಬೋಗಿ ಅದು ತುಂಬಿ ತುಳುಕುತ್ತಿತ್ತು. ಹಾಗು ಹೀಗೂ ಮಾಡಿ ಕಡೆಗೆ ಒಬ್ಬರು ಕೂರುವ ಜಾಗದಲ್ಲಿ ಮಾಸ್ತಿ ಮತ್ತು ಅನಕೃ ಕುಳಿತು ಕೊಂಡರು. ಅವರ ಎದುರಿನ ಆಸನದಲ್ಲಿ ಒಬ್ಬ ಭಾರಿ ಅಸಾಮಿ ಇಬ್ಬರು ಕೂರುವ ಜಾಗದಲ್ಲಿ ಒಬ್ಬನೇ ಕೊತಿದ್ದನು.
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೨
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು:
1960 ಹಾಗೂ 70ರ ದಶಕದಲ್ಲಿ ಪ್ರಾರಂಭವಾದ ನವ ಸಾಮಾಜಿಕ ಚಳುವಳಿ ಸಿದ್ಧಾಂತಗಳು ಮಾರ್ಕ್ಸ್ ವಾದಿ ನಿಲುವುಗಳಿಗಿಂತ ಭಿನ್ನವಾದ ನಿಲುವನ್ನು ಮುಂದಿಡಲು ಯಶಸ್ವಿಯಾದವು. ವರ್ಗಾದಾರಿತವಲ್ಲದ ಅಸ್ಮಿತೆಯ ರಾಜಕೀಯ ಕೇವಲ ಸಾಂಕೇತಿಕ ಎನ್ನುವ ಮಾರ್ಕ್ಸ್ ವಾದಿ ನಿಲುವನ್ನು ಇವು ಅಲ್ಲಗಳೆಯುತ್ತವೆ. ಈ ಸಿದ್ಧಾಂತವು ಅಸ್ಮಿತೆ ರಾಜಕೀಯವನ್ನು ಒಂದು ವಿಶಿಷ್ಟ ಬಗೆಯ ರಾಜಕೀಯ ಎಂದೇ ಪ್ರತಿಪಾದಿಸುತ್ತದೆ. ಅಸ್ಮಿತೆಯಾದಾರಿತ ಚಳುವಳಿಗಳನ್ನು ಆಧುನಿಕತೆಯ ಪರಿಣಾಮವಾಗಿ ಆರ್ಥಿಕ ಮತ್ತು ಸಾಮಾಜಿಕ ವಲಯದ ಉನ್ನತ ಸ್ಥರದಲ್ಲಿ ಆದ ರಾಚನಿಕ ಬದಲಾವಣೆ ಅಸ್ಮಿತೆ ರಾಜಕೀಯವನ್ನು ಹುಟ್ಟು ಹಾಕಿದೆ ಮತ್ತು ಇದೊಂದು ಐತಿಹಾಸಿಕವಾದ ಸಾಮೂಹಿಕ ಪ್ರತಿಕ್ರಿಯೆ ಎಂದು ಈ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಕೆಲವು ವಿದ್ವಾಂಸರು ಹೇಳುವಂತೆ ಅಸ್ಮಿತೆ ರಾಜಕೀಯವು ಕೈಗಾರಿಕೋತ್ತರ ಸಮಾಜದಲ್ಲಾಗುತ್ತಿರುವ ಒಂದು ಬಗೆಯ ಸ್ಥಿತ್ಯಂತರ (ಟೌರಿನ್ 1981). ಹಬರ್ಮಾಸ್ರವರ ಅಭಿಪ್ರಾಯದಲ್ಲಿ ಅಸ್ಮಿತೆ ಚಳುವಳಿಗಳು ಪ್ರಭುತ್ವದ ನಿಯಂತ್ರಣ ಹಾಗೂ ಅದರ ನಿರ್ಣಯಗಳ ಒತ್ತಡಕ್ಕೆ ಹೆಚ್ಚು ಹೆಚ್ಚಾಗಿ ಒಳಗಾಗುತ್ತಿರುವ ಸಮುದಾಯಗಳು ಅಂತಹ ಹಿಡಿತದಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಫಲವಾಗಿವೆ (ಹಬರ್ಮಾಸ್ 1985).
ಡಬ್ಬಿಂಗ್ ವಿರೋಧ ಎಂಬ ಮೂಲಭೂತವಾದ
– ಡಾ. ಶ್ರೀಪಾದ ಭಟ್
ಇದೀಗ ಕನ್ನಡ ಸಿನಿಮಾ ರಂಗದ ಕೆಲವರು ಹಾಗೂ ಕೆಲ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧಿಸಿ ಹೋರಾಟ ನಡೆಸಿದ್ದಾರೆ, ಪ್ರತಿಭಟನೆಗಳು ನಡೆದಿವೆ. ಯಾರ ವಿರುದ್ಧ ಯಾರು ಪ್ರತಿಭಟಿಸುತ್ತಿದ್ದಾರೆ? ಪ್ರತಿಭಟನೆಯ ಪರಿಸ್ಥಿತಿ ಯಾಕೆ ಬಂದಿದೆ ಎಂಬ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಈ ಪ್ರತಿಭಟನೆ ಸರ್ಕಾರದ ವಿರುದ್ಧವೇ? ಡಬ್ಬಿಂಗ್ ಆದ ಚಿತ್ರ, ಧಾರಾವಾಹಿ, ಇತರೆ ಟಿವಿ ಕಾರ್ಯಕ್ರಮ ನೋಡುವ ಪ್ರೇಕ್ಷಕರ ವಿರುದ್ಧವೇ? ಅಥವಾ ಡಬ್ಬಿಂಗ್ ಚಿತ್ರ ತಯಾರಿಸುವ ಜನರ ವಿರುದ್ಧವೇ? ಡಬ್ಬಿಂಗ್ ವಿರೋಧಿ ಪ್ರತಿಭಟನೆ ಅಂತಿಮವಾಗಿ ಸಾಧಿಸುವುದೇನು? ‘ಕನ್ನಡದಲ್ಲಿ ಡಬ್ಬಿಂಗ್ ತಯಾರಿಸಿದರೆ ನೋಡಿ, ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಇವರೆಲ್ಲರಿಗೂ ಎಚ್ಚರಿಕೆ ಕೊಟ್ಟು ಹೆದರಿಸುವುದೇ? ಬಹುಶಃ ಇದೇ ಉದ್ದೇಶ ಇರಬಹುದು. ಯಾಕೆಂದರೆ ‘ನಿಮ್ಮ ಡಬ್ಬಿಂಗ್ ಸಿನಿಮಾಗಿಂತ ಅತ್ಯುತ್ತಮ ಚಿತ್ರವನ್ನು ಸ್ವತಃ ತಯಾರಿಸಿ ಪ್ರೇಕ್ಷಕರನ್ನು ಸೆಳೆಯುತ್ತೇವೆ. ಯಾರು ಗೆಲ್ಲುತ್ತಾರೋ ನೋಡೋಣ’ ಎಂಬ ಆರೋಗ್ಯಕರ ಸ್ಪರ್ಧೆಯಂತೂ ಇದರಲ್ಲಿ ಕಾಣುತ್ತಿಲ್ಲ. ಕನ್ನಡ ಚಿತ್ರರಂಗದ ಇಂಥ ಬಂದ್ನಿಂತದ, ಪ್ರತಿಭಟನೆಗಳಿಂದ ಕರ್ನಾಟಕದಲ್ಲಿರುವ ಪ್ರೇಕ್ಷಕರಿಗಂತೂ ಖಂಡಿತ ನಷ್ಟವಿಲ್ಲ. ಕಷ್ಟವಾಗುವುದು ವಾಹನ ಸವಾರರಿಗೆ ಹಾಗೂ ವಿವಿಧ ಕೆಲಸಕಾರ್ಯಕ್ಕೆ ಅಡ್ಡಿಯಾಗುವ ಕಾರಣ ಜನಸಾಮಾನ್ಯನಿಗೆ. ಉಳಿದಂತೆ ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರ ಕಾರ್ಮಿಕರಿಗೇ ಅದರ ನೇರ ಹೊಡೆತ ಬೀಳುವುದು. ಇದು ಎಲ್ಲರಿಗೂ ತಿಳಿದಿದೆ. ಆದರೂ ವಿರೋಧ ಏಕೆ? ‘ಕನ್ನಡದ ಭಾಷೆ, ಸಂಸ್ಕೃತಿ ನಾಶವಾಗುತ್ತದೆ ಮತ್ತು ಕನ್ನಡದ ತಂತ್ರಜ್ಞರು, ಕಾರ್ಮಿಕರು ಹಾಗೂ ಕಲಾವಿದರಿಗೆ ಅವಕಾಶಗಳಿರುವುದಿಲ್ಲ’ ಎಂಬುದು ಡಬ್ಬಿಂಗ್ ವಿರೋಧಿಗಳ ವಾದ.
ಹೌದೇ? ವಾಸ್ತವ ಗಮನಿಸಿದರೆ ಡಬ್ಬಿಂಗ್ ವಿರೋಧಿಗಳೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ ಅನಿಸದಿರದು. ಕನ್ನಡ ಸಿನಿಮಾ ಜಗತ್ತಿಗೆ ಈಗ 79 ವರ್ಷ ವಯಸ್ಸು. ಈ ಅವಧಿಯಲ್ಲಿ ಪ್ರೇಕ್ಷಕ ವರ್ಗ ಬದಲಾಗಿದೆ. ಜನರ ನಿರೀಕ್ಷೆ, ಅಭಿರುಚಿ ಕೂಡ ಬದಲಾಗಿದೆ. 80 ವರ್ಷದ ಅಜ್ಜನೊಬ್ಬ ಮೊಮ್ಮಕ್ಕಳ ಜೊತೆ ಬೆರೆಯಲು ಬಳಸುವ ಸಮಕಾಲೀನತೆಯ ಉಪಾಯವನ್ನು ಮಾತ್ರ ಕನ್ನಡ ಚಿತ್ರರಂಗ ಅಳವಡಿಸಿಕೊಳ್ಳದೇ ತನ್ನ ವೃದ್ಧಾಪ್ಯವನ್ನೇ ಸಮರ್ಥಿಸಿಕೊಳ್ಳುತ್ತಿದೆ. ಕನ್ನಡ ಪ್ರೇಕ್ಷಕ ವರ್ಗ ಗಾಂಧಿನಗರದ ಹಣವಂತ ನಿರ್ಮಾಪಕ ಜನ ತಿಳಿದಿರುವಂತೆ ಬರೀ ದ್ವಂದ್ವ ಸಂಭಾಷಣೆಯನ್ನೋ ಉದ್ದುದ್ದ ಕತ್ತಿ, ಮಚ್ಚು, ಲಾಂಗುಗಳನ್ನಷ್ಟೇ ಬಯಸುವಂಥದ್ದಲ್ಲ. ಬೇರೆ ಬೇರೆ ಮಾಧ್ಯಮಗಳ ಮೂಲಕ ಅವರ ಮೇಲೂ ಜಾಗತಿಕ ಪರಿಣಾಮ ಉಂಟಾಗುತ್ತಲೇ ಇರುತ್ತದೆ. ಹೊಸದನ್ನು ಅವರೂ ಸದಾ ಬಯಸುತ್ತಾರೆ. ತಥಾಕಥಿತ ಕೌಟುಂಬಿಕ ಕಥಾ ಹಂದರದ ಚಿತ್ರಗಳು ಬೇಸರವಾದಾಗ ‘ಓಂ’ ನಂಥ ಚಿತ್ರಗಳು ಅವರಿಗೆ ಭಿನ್ನ ಅನುಭವ ಕೊಡಬಹುದು. ಕಾಲೇಜು ಹುಡುಗ-ಹುಡುಗಿಯ ಕಿತ್ತು ಹೋದ ಪ್ರೇಮ ಕಥೆಗಳನ್ನು, ತಾಯಿ ಮಮತೆಯ ಹಳಸಲು ಸನ್ನಿವೇಶಗಳನ್ನು ನೋಡಿ ಬೇಸತ್ತಾಗ ‘ಆ ದಿನಗಳೋ’ ಮತ್ತೊಂದು ‘ದುನಿಯಾ’ವೋ ಬದಲಾವಣೆ ನೀಡಬಹುದು. ಅಂದ ಮಾತ್ರಕ್ಕೆ ನಮ್ಮ ಜನಕ್ಕೆ ಏನು ಬೇಕು ಎಂಬುದು ನಮಗೆ ಗೊತ್ತು ಎಂಬಂತೆ ಸದಾ ಕಾಲ ಹಳೆ ಪಾತ್ರೆ, ತಗಡುಗಳನ್ನು ಕೊಡುತ್ತ ಹೋದರೆ ಕೊಡುವುದನ್ನೆಲ್ಲ ಪಡೆಯಲು ಜನರೇನೂ ಮೂರ್ಖರಲ್ಲ.
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ ೧
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ರಾಜಕೀಯ ಸಿದ್ಧಾಂತದಲ್ಲಿ ಅಸ್ಮಿತೆ ರಾಜಕೀಯದ ಪರಿಕಲ್ಪನೆ ಪ್ರಬಲವಾಗಿದ್ದು 20ನೇ ಶತಮಾನದ ಉತ್ತರಾರ್ಧದಲ್ಲಿ. ತಮ್ಮ ಅಸ್ತಿತ್ವ ಸಂಪೂರ್ಣ ಅವಗಣನೆಗೆ ಒಳಗಾಗಿದೆ ಮತ್ತು ಆ ಕಾರಣದಿಂದ ತಮ್ಮನ್ನು ಪ್ರಾತಿನಿಧ್ಯದಿಂದ ವಂಚಿತರನ್ನಾಗಿಸಿ ರಾಜಕೀಯ ಮುಖ್ಯವಾಹಿನಿಯಿಂದ ದೂರವಿರಸಲಾಗಿದೆ ಎನ್ನುವ ಭಾವನೆ ಬೆಳೆಸಿಕೊಂಡ ಒಂದು (ಸಾಮಾಜಿಕ/ಸಾಂಸ್ಕೃತಿಕ) ಗುಂಪು ರಾಜಕೀಯ ಸಂಚಲನೆಗೆ ತೊಡಗುವ ಪ್ರಕ್ರಿಯೆಯನ್ನು ಅಸ್ಮಿತೆ ರಾಜಕೀಯ ಎಂದು ಕರೆಯಲಾಗುತ್ತದೆ. ಸಾರ್ವತ್ರಿಕ ಒಳಿತು ಅಸ್ಮಿತೆ ರಾಜಕೀಯದ ಗುರಿಯಾಗಿರುವುದಿಲ್ಲ ಮತ್ತು ಅಂತಹ ರಾಜಕೀಯ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ತನ್ನನ್ನು ಮುಖ್ಯವಾಹಿನಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದು ಒಂದು ಗುಂಪಿನ ಅಸ್ಮಿತೆ ರಾಜಕೀಯದ ಮುಖ್ಯ ಉದ್ದೇಶವಾಗಿರುತ್ತದೆ.
20ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕಾ ದೇಶದಲ್ಲಿ ಪ್ರಾರಂಭವಾದ (ದ್ವಿತೀಯ ಹಂತದ) ಸ್ತ್ರೀವಾದೀ ಚಳುವಳಿ, ಕರಿಯರ ನಾಗರೀಕ ಹಕ್ಕುಗಳ ಹೋರಾಟ, ಸಲಿಂಗಿಗಳು ತಮ್ಮ ಹಕ್ಕಿಗಳಿಗಾಗಿ ಮಾಡಿದ ಹೋರಾಟ ಮೊದಲಾದವುಗಳನ್ನು ಅಸ್ಮಿತೆ ರಾಜಕೀಯ ಎಂದು ಮೊತ್ತ ಮೊದಲ ಬಾರಿಗೆ ಗುರುತಿಸಲಾಯಿತು. ಈ ಎಲ್ಲಾ ಗುಂಪುಗಳು ತಮ್ಮ ವಿಶಿಷ್ಟ ಅಸ್ಮಿತೆಯನ್ನು ಗುರುತಿಸಿ ಗೌರವಿಸದೆ ಆ ಕಾರಣಕ್ಕಾಗಿ ತಾವು ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟ ಪ್ರಕ್ರಿಯೆಯ ವಿರುದ್ಧ ಹೋರಾಟ ಪ್ರಾರಂಬಿಸಿದವು. ತಾವು ಸಾಮಾಜಿಕವಾಗಿ ರಾಜಕೀಯವಾಗಿ ತುಳಿತಕ್ಕೊಳಗಾಗಿದ್ದೇವೆ ಎನ್ನುವ ಭಾವನೆಯನ್ನು ಆಧರಿಸಿ ಅಸ್ಮಿತೆ ರಾಜಕೀಯದ ಸಂಘಟನೆಯು ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಸ್ಮಿತೆ ರಾಜಕೀಯ ಎಂದು ಕರೆಯಲ್ಪಡುವ ರಾಜಕೀಯ/ಸಾಮಾಜಿಕ ಚಳುವಳಿಗಳ ವ್ಯಾಪ್ತಿ ವಿಶಾಲವಾದುದಾಗಿದೆ. ರಾಜಕೀಯ ಶಾಸ್ತ್ರದ ಅಧಯಯನಗಳಲ್ಲಿ ಅಸ್ಮಿತೆ ರಾಜಕೀಯಕ್ಕೆ ಸಂಬಂದಿಸಿದ ಬರವಣೆಗೆಗಳು ಪಾಶ್ಚಾತ್ಯ ಬಂಡವಾಳಿಶಾಹಿ ಪ್ರಜಾಪ್ರಭುತ್ವಗಳಿಗೆ ಸಂಬಂದಿಸಿರುತ್ತವೆ. ಬಂಡವಾಳಶಾಹಿ ವ್ಯವಸ್ಥೆಯ ಹಿಡಿತ ಪ್ರಬಲವಾಗುತ್ತಾ ಹೋದ ಹಾಗೆ ಪರಂಪರಾನುಗತವಾಗಿ ಬಂದ ಸಮುದಾಯಗಳು ತಮ್ಮ ಅಸ್ಮಿತೆಗಳನ್ನು ಕಳೆದುಕೊಳ್ಳುತ್ತಾ ಹೋಗಿ ಅಂತಹ ಸಮುದಾಯಗಳ ಸದಸ್ಯರಲ್ಲಿ ಪರಕೀಯತೆಯ ಭಾವನೆ ಹೆಚ್ಚಗುತ್ತಾ ಹೋದದ್ದರ ಪರಿಣಾಮದಿಂದಾಗಿ ಅಸ್ಮಿತೆ ರಾಜಕೀಯ ಹುಟ್ಟಿಕೊಂಡಿದೆ ಎಂದು ಕೆಲವರು ಭಾವಿಸುತ್ತಾರೆ.
ಮತ್ತಷ್ಟು ಓದು 
ಆತ್ಮವಿಶ್ವಾಸ
– ಮಯೂರಲಕ್ಷ್ಮಿ
ಯಾವುದೇ ಪ್ರಯತ್ನವನ್ನೇ ಮಾಡದೆಯೇ ‘ನಮ್ಮಿಂದಾಗುವುದಿಲ್ಲ” ಎಂದು ಒಪ್ಪಿಕೊಳ್ಳಬಾರದು. ಆರಂಭದಲ್ಲಿ ನಮ್ಮ ಪ್ರಯತ್ನಗಳಲ್ಲಿ ಸೋಲೆದುರಾಗುವುದು ಸಹಜ, ಆದರೆ ಎದೆಗುಂದದೆ, ಆತ್ಮವಿಶ್ವಾಸವನ್ನೂ ಕಳೆದುಕೊಳ್ಳದೆ ನಮ್ಮ ಯತ್ನದಲ್ಲಿರಬೇಕು. ಪ್ರಯತ್ನ ನಮ್ಮದು, ಫಲ ನಮ್ಮದಲ್ಲ ಎಂಬುವುದರ ಅರಿವು ಅತಿಮುಖ್ಯ. ಎಂತಹ ಕ್ಲಿಷ್ಟ ಪರಿಸ್ಥಿತಿ ಎದುರಾದಾಗಲೂ ಧೈರ್ಯದಿಂದ ಎದುರಿಸಿ ಗೆದ್ದ ಮಹಾನ್ ವ್ಯಕ್ತಿಗಳ ನಿದರ್ಶನದಿಂದ ನಾವು ಕಲಿಯಬೇಕು. “ನಾವು ಗೆಲ್ಲಲೇ ಬೇಕೆಂಬ ಸಂಕಲ್ಪದೊಂದಿಗೆ ಮಾಡುವುದೇ ಉತ್ತಮ ಪ್ರಯತ್ನಗಳು” ಎಂದಿದ್ದಾರೆ ಅಬ್ರಹಾಂ ಲಿಂಕನ್.
ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥ್ಯೇ:ı
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ:ıı
ಇದೊಂದು ಪಂಚತಂತ್ರದ ವಾಕ್ಯ, ಇದರರ್ಥ: ನಾವು ಕಾರ್ಯದಲ್ಲಿ ತೊಡಗಿ ಮುಂದುವರೆದರೆ ಮಾತ್ರವೇ ಯಶಸ್ಸು ಸಿಗುವುದು, ಆಸೆ-ಆಕಾಂಕ್ಷೆಗಳಿಂದಷ್ಟೇ ಫಲ ದೊರೆಯದು, ತಾನು ಸುಮ್ಮನೆ ಮಲಗಿದ್ದರೆ ಸಿಂಹದ ಬಾಯಲ್ಲಿ ತಾವಾಗಿಯೇ ಪ್ರಾಣಿಗಳು ಬಂದು ಬೀಳುವುದಿಲ್ಲ, ಆಹಾರಕ್ಕಾಗಿ ಅದೂ ಪರಿಶ್ರಮಿಸಲೇಬೇಕಲ್ಲವೇ?
ಗಾಳಿ ಮಾತು!!!
– ಮಧು ಚಂದ್ರ, ಭದ್ರಾವತಿ

ಅರ್ಕಿಮಿಡಿಸ್, ಎಂದರೆ ತಕ್ಕ್ಷಣ ನೆನಪಿಗೆ ಬರುವುದು “ಯುರೇಕಾ, ಯುರೇಕಾ” ಎಂದು ಬಚ್ಚಲಿನಿಂದ ಬೆತ್ತಲಾಗಿ ಬೀದಿಯಲ್ಲಿ ಓಡಿದ ವ್ಯಕ್ತಿ . ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು, ಇದರಿಂದ ತನ್ನ ರಾಜನ ಚಿನ್ನದ ಕಿರೀಟದ ಸಮಸ್ಯೆಗೆ ಪರಿಹಾರ ಕಂಡು ಹಿಡಿದ ಗ್ರೀಕ್ ದೇಶದ ಗಣಿತಜ್ಞ, ತತ್ವಜ್ಞಾನಿ, ಮೇಧಾವಿ, ವಿಜ್ಞಾನಿ.
ಇಂದು ನಾನು ಹೇಳಬಯಸುವುದು ಅರ್ಕಿಮಿಡಿಸನ ದುರಂತ ಅಂತ್ಯದ ಬಗ್ಗೆ.
ರೋಮನ್ ಸೇನೆಯ ನಾಯಕನಾದ ಮರ್ಸಿಲಸ್(Marcellus) ಸ್ಯರಕಾಸ್(Syracuse) ನಗರವನ್ನು ಆಕ್ರಮಿಸಿದ. ಆಗ ಅವನು ತತ್ವಜ್ಞಾನಿ ಅರ್ಕಿಮಿಡಿಸ್ನನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದ. ತನ್ನ ಸೇನೆಯ ಅಧಿಕಾರಿಯನ್ನು ಕರೆದು
” See if you can find archimedes for me! I should like to see him!” ಎಂದು ಹೇಳಿದ.
ನಂತರ ಅ ಅಧಿಕಾರಿ ತನ್ನ ಕೆಳಗಿನ ಅಧಿಕಾರಿಗೆ ಮರ್ಸಿಲಸ್ ಆಸೆಯನ್ನು ಹೇಳಿದ. ಕಡೆಗೆ ಅದು ಅಲ್ಲಿನ ಕಟ್ಟ ಕಡೆಯ ಸೈನಿಕನಿಗೆ ಮುಟ್ಟಿದಾಗ ಮೆರ್ಸಿಲಸ್ ನೀಡಿದ ಮಾಹಿತಿ ಮೂಲವೆ ಬದಲಾಗಿತ್ತು. ಇದು ಮೆರ್ಸಿಲಸ್ ಇಚ್ಛೆ ಬದಲಾಗಿ ಆದೇಶದ ರೂಪ ಪಡೆದಿತ್ತು.
“Find Archimededes ! the general wants him!” ಎಂದಾಗಿತ್ತು.
ನಿನ್ನೆಗೆ ನನ್ನ ಮಾತು …. ಭಾಗ 3
– ಮು ಅ ಶ್ರೀರಂಗ ಬೆಂಗಳೂರು
ಭಾಗ ೧ : ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ
ಭಾಗ ೨ : ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು
ಅಂಚೆ ಗುಮಾಸ್ತನ ಕೆಲಸದ ತರಬೇತಿಗೆಂದು ಡಿಸೆಂಬರ್ ೧೯೭೮ರ ಕೊನೆಯ ವಾರದಲ್ಲಿ ಕೋಲಾರದಲ್ಲಿ ಬಂದಿಳಿದಾಗ ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಬೆಳಗ್ಗೆ ಮಾಗಡಿಯಿಂದ ಹೊರಟಾಗ ಚಳಿಯಿತ್ತು. ಆದ್ದರಿಂದ ಬೆಚ್ಚಗಿರಲಿ ಎಂದು ಆಗ ಜೀನ್ಸ್ ಎಂದು ಕರೆಸಿಕೊಳ್ಳುತ್ತಿದ್ದ ದಪ್ಪ textureನ ಪ್ಯಾಂಟು ಮತ್ತು ಪ್ಯಾಂಟಿನ ಬಟ್ಟೆಯಷ್ಟೇ ದಪ್ಪವಿದ್ದ ಬಣ್ಣ ಬಣ್ಣದ ಬಟ್ಟೆಯಿಂದ ಹೊಲಿಸಿಕೊಂಡಿದ್ದ ಒಂದು ಫುಲ್ ತೋಳಿನ ಷರ್ಟ್ ಹಾಕಿಕೊಂಡಿದ್ದೆ. ಒಂದು ಕಡಿಮೆ ದರ್ಜೆಯ ದೊಡ್ಡ ಏರ್ ಬ್ಯಾಗ್ ನಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿಕೊಂಡು ಮಿಕ್ಕಿದ್ದನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೊರಟಿದ್ದೆ. ನಾನು ಈ ಮೊದಲು ಕೋಲಾರ ನೋಡಿರಲಿಲ್ಲ. ಬಸ್ ನಿಲ್ದಾಣದಲ್ಲಿ ಇಳಿದ ಮೇಲೆ ಒಂದಿಬ್ಬರನ್ನು ದಾರಿ ಕೇಳಿಕೊಂಡು .ಅಂಚೆ ಇಲಾಖೆಯ ಆಡಳಿತ ಕಛೇರಿಯನ್ನು ಪ್ರವೇಶ ಮಾಡಿದ್ದಾಯ್ತು. ಮೊದಲು ಅಲ್ಲಿ report ಮಾಡಿಕೊಳ್ಳ ಬೇಕಾಗಿತ್ತು. ಮೊದಲ ದಿನದ ಭಯ ಮಿಶ್ರಿತ ಆತಂಕ ಸಹಜ ತಾನೇ? ಜತೆಗೆ ನನ್ನ ವೇಷ-ಭೂಷಣ ಇವೆಲ್ಲ ಕಂಡು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಅಕ್ಕ ಪಕ್ಕ ಕೂತಿದ್ದ ಒಂದಿಬ್ಬರು ಲಲನಾಮಣಿಗಳು ಪರಸ್ಪರ ಮೆಲು ದನಿಯಲ್ಲಿ ಮಾತಾಡಿಕೊಂಡು ನಕ್ಕಂತಾಯ್ತು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನ ಪ್ರವರ ಒಪ್ಪಿಸಿದ್ದಾಯ್ತು. ಅವರು ಕೇಳಿದ ದಾಖಲಾತಿ ಪತ್ರಗಳು,ಸರ್ಟಿಫಿಕೇಟ್ ಇತ್ಯಾದಿಗಳನ್ನೆಲ್ಲ ತೋರಿಸಿದ್ದಾಯ್ತು.
ಜೀವನವೆ೦ಬ ಪತ್ತೆದಾರಿ ಕಾದ೦ಬರಿ
– ಗುರುರಾಜ್ ಕೊಡ್ಕಣಿ
“ನೀನಿನ್ನು ಪತ್ರಿಕೆಗಳಿಗೆ ಕಥೆ ಕಳುಹಿಸಬೇಡ,ನಿನ್ನ ಕಥೆಗಳಲ್ಲಿ ಗುಣಮಟ್ಟವಿಲ್ಲ,ನೀನು ಕಥೆಗಾರನಾಗಲು ಸಾಧ್ಯವೇ ಇಲ್ಲ.”
ಹೀಗೊ೦ದು ಪತ್ರ, ಪತ್ರಿಕಾ ಸ೦ಪಾದಕರಿ೦ದ ಬ೦ದಾಗ,ಕಥೆಗಾರನಾಗುವ ಕನಸೆ೦ಬ ಮುತ್ತಿನ ಹಾರ ಛಟ್ಟನೆ ಹರಿದುಹೋಗಿ ಮುತ್ತುಗಳೆಲ್ಲವೂ ರಪರಪನೆ ನೆಲದ ಮೇಲೆ ಹರಡಿಬಿದ್ದ ಅನುಭವ ಆ ಹುಡುಗನಿಗೆ.ಅವನು ತು೦ಬಾ ಖಿನ್ನನಾಗಿದ್ದ.ಪತ್ರಿಕೆಗೆ ಪ್ರಕಟಣೆಗೆ೦ದು ಕಳುಹಿಸಿದ್ದ ಅವನ ಕಥೆಗಳು ಸಾಲುಸಾಲಾಗಿ ಮರಳಿ ಬ೦ದಿದ್ದವು.ಅತ್ಯ೦ತ ನಿರಾಸೆಯಿ೦ದ ದಿನವಿಡಿ ಮನೆಯ ಮೂಲೆಯೊ೦ದರಲ್ಲಿ ಕೂತು ಆತ್ತಿದ್ದ ಅವನು ಸ೦ಜೆ ಹೊತ್ತಿಗಾಗಲೇ ಒ೦ದು ನಿರ್ಧಾರಕ್ಕೆ ಬ೦ದಿದ್ದ.ಯಸ್..! ತಾನಿನ್ನು ಬದುಕಿರಬಾರದು,ಕಥೆಗಾರನಾಗದಿದ್ದ ಮೇಲೆ ತಾನು ಬದುಕಿದ್ದು ಪ್ರಯೋಜನವಿಲ್ಲ,ತಾನಿನ್ನು ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು.ಹಾಗೆ ನಿಶ್ಚಯಿಸಿದವನೇ ಅಪ್ಪನ ಕೋಣೆಯಲ್ಲಿದ್ದ ನಿದ್ದೆ ಮಾತ್ರೆಗಳ ಬಾಟಲಿಯನ್ನು ಕಳ್ಳನ೦ತೆ ತೆಗೆದುಕೊ೦ಡು ತನ್ನ ಕೊಣೆಗೆ ಓಡಿದ.ಒ೦ದು ಗ್ಲಾಸಿನ ತು೦ಬಾ ನೀರು ತು೦ಬಿಕೊ೦ಡು,ಮುಷ್ಟಿ ತು೦ಬಾ ಮಾತ್ರೆಗಳನ್ನು ಹಿಡಿದು,ಇನ್ನೇನು ಬಾಯಿಗೆ ಹಾಕಬೇಕು ಎನ್ನುವಷ್ಟರಲ್ಲಿ ,ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎ೦ಬ ಅನುಮಾನ ಮೂಡಿ ಒಮ್ಮೆ ಕೋಣೆಯ ಸುತ್ತ ನೋಡಿದ.ಕೋಣೆಯ ಬಾಗಿಲೆಡೆಗೆ ನೋಡಿದವನಿಗೆ ಒ೦ದು ಕ್ಷಣ ಗಾಭರಿಯಾಗಿಬಿಟ್ಟಿತು. ಅಲ್ಲಿ ಅವನ ಅಪ್ಪ ಅವನನ್ನೇ ನೋಡುತ್ತಾ ನಿ೦ತಿದ್ದರು.ಅವನು ಮಾತ್ರೆಗಳನ್ನು ಮುಚ್ಚಿಡಬೇಕು ಎನ್ನುವಷ್ಟರಲ್ಲಿ ತ೦ದೆಯೇ ಅವನ ಕೈ ಹಿಡಿದು ಮಾತನಾಡಿಸಿದರು.
’ಯಾಕೆ ಮಗು,ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಈಗಿನ್ನೂ ಹದಿನೇಳು ವರ್ಷ ವಯಸ್ಸು ನಿನಗೆ!! ಸಾಯುವ೦ಥದ್ದೇನಾಗಿದೆ ,ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ..’?? ಎ೦ದು ಕೇಳಿದರು ಅಪ್ಪ ಶಾ೦ತವಾಗಿ.ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ ,ಅಪ್ಪ ಯಾವುದೇ ಭಾವೋದ್ವೇಗಕ್ಕೊಳಗಾಗದ್ದನ್ನು ಕ೦ಡು ಹುಡುಗನಿಗೆ ಆಶ್ಚರ್ಯವಾಯಿತಾದರೂ,ತಾನು ಸಾಯುವುದು ನಿಶ್ಚಿತವಾದುದರಿ೦ದ ತ೦ದೆಗೆ ಎಲ್ಲವನ್ನೂ ಹೇಳಿ ಬಿಡುವುದೇ ಸರಿಯೆ೦ದು ಅವನು ಭಾವಿಸಿದ .
ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್
– ಡಾ ಅಶೋಕ್ ಕೆ ಆರ್
ಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”. ಇಲ್ಲೂ ಹೀರೋ ಇದ್ದಾನೆ ಹೀರೋಯಿನ್ ಇದ್ದಾಳೆ ವಿಲನ್ ಕೂಡ ಇದೆ! ಇದೆ ಯಾಕೆಂದರೆ ವಿಲನ್ ಒಂದು ಖಾಯಿಲೆಯ ರೂಪದಲ್ಲಿ ಹೀರೋನ ಮನಸ್ಸಿನ ರೂಪದಲ್ಲಿ ಇದೆಯೇ ಹೊರತು ವಿಲನ್ ಒಬ್ಬ ವ್ಯಕ್ತಿಯ ರೂಪದಲ್ಲಿಲ್ಲ. ಹೋಮಾಯುನ ಅಸಾದಿಯನ್ (Homayoun Asadian) ನಿರ್ದೇಶನದ ಪರ್ಷಿಯನ್ ಭಾಷೆಯ ಈ ಚಿತ್ರ ಅಪರೂಪದ ಖಾಯಿಲೆಯೊಂದು ಹೇಗೆ ಒಂದು ಇಡೀ ಕುಟುಂಬದ ಜೀವನ ರೀತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ತಿಳಿಸುವುದರ ಜೊತೆಜೊತೆಗೆ ಆ ಮಾರಣಾಂತಿಕ ಖಾಯಿಲೆ ಮನುಷ್ಯನ ಮನದ ಒಳಪದರದಲ್ಲಿ ಕಳೆದುಹೋಗಿದ್ದ ಸೂಕ್ಷ್ಮತೆಯನ್ನು ಹೊರತೆಗೆಯುವುದರಲ್ಲಿಯೂ ಸಹಕರಿಸುತ್ತದೆ!





