ರಾಜಿನಾಮೆ ಕೊಡಲು ಸಿದ್ಧ !
– ನವೀನ್ ನಾಯಕ್
ರಾಜಿನಾಮೆ ಕೊಡಲು ಸಿದ್ಧ !
ಯಾರು ಗೊತ್ತೇ ಹೀಗೆ ಹೇಳಿದ್ದು ? ನರೇಂದ್ರ ಮೋದಿಯವರು !
ಅಡ್ವಾಣಿ ಮತ್ತು ಅಟಲ್ ಜೀಯರ ನಡುವೆ ಎದ್ದ ಭಿನ್ನಾಭಿಪ್ರಾಯಗಳಲ್ಲಿ ಮಹತ್ವದ ಎರಡು ಘಟನೆಗಳು ಒಂದು ಅಯೋಧ್ಯಾ ವಿಚಾರ ಇನ್ನೊಂದು ಮೋದಿಯವರ ರಾಜಿನಾಮೆ ವಿಚಾರ. ಮೋದಿಯವರ ವಿಚಾರದಲ್ಲಿ ಅಡ್ವಾಣಿಯವರು ತಮ್ಮ ದೃಷ್ಟಿಕೋನವನ್ನು ಬೇರೆ ರೀತಿಯಾಗಿಸಿಕೊಂಡರು. ದಂಗೆಯ ಸಮಯದಲ್ಲಿ ಗುಜರಾತಿಗೆ ತೆರಳಿ ಅಲ್ಲಿಯ ಸಮಾಜದ ವಿವಿಧ ವರ್ಗಕ್ಕೆ ಸೇರಿದ ಅಪಾರ ಜನದೊಂದಿಗೆ ಮಾತನಾಡಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಅರಿತುಕೊಂಡರು. ಕ್ರಮಗಳ ಕುರಿತು ಅಲ್ಲಿಯ ಜನತೆ ತೃಪ್ತಿಯನ್ನು ಹೊಂದಿತ್ತು. ಇದರಿಂಧ ಮೋದಿಯವರು ಅಪರಾಧಿಯಾಗಿರಲಿಲ್ಲ ಬದಲಾಗಿ ಅವರು ಸ್ವಯಂ ರಾಜಕೀಯ ಬಲಿಪಶುವಾಗಿದ್ದಾರೆಂಬುದು ತಿಳಿದುಕೊಂಡರು. ಆದ್ದರಿಂದ ಮುಖ್ಯಮಂತ್ರಿಯಾಗಿ ಒಂದು ವರ್ಷವೂ ಕಳೆಯದ ಮೋದಿಯವರನ್ನು ಸಂಕೀರ್ಣ ಕೋಮು ಸನ್ನಿವೇಶಕ್ಕೆ ರಾಜಿನಾಮೆ ಪಡೆಯುವುದು ಅನ್ಯಾಯವಾಗುತ್ತದೆ. ಅದಲ್ಲದೇ ರಾಜಿನಾಮೆ ಪಡೆಯುವುದರಿಂದ ಗುಜರಾತಿನ ಸಾಮಾಜಿಕ ಸ್ಥಿತಿಗತಿಯನ್ನು ಧೀರ್ಘಕಾಲೀನವಾಗಿ ಹದಗೆಡಬಹುದೆಂದು ಅಡ್ವಾಣಿಯವರು ಅರಿತುಕೊಂಡರು.
ನಾಡು-ನುಡಿ:ಮರುಚಿಂತನೆ – “ಜಾತಿ ಹಾಗೂ ಅಸ್ಮಿತೆ ರಾಜಕೀಯ” ಭಾಗ 3
– ಪ್ರೊ. ಜೆ.ಎಸ್. ಸದಾನಂದ, ಕುವೆಂಪು ವಿಶ್ವವಿದ್ಯಾನಿಲಯ
ಜಾತಿ ವರ್ಗೀಕರಣದ ಬಗ್ಗೆ ಅನೇಕ ಜನಾಂಗ ಅಧ್ಯಯನಕಾರರು ಮತ್ತು ಸಮಾಜಶಾಸ್ತ್ರಜ್ಞರುಗಳು ವಿವರಣೆಗಳನ್ನು ನೀಡಿದರೂ ಸಹ ಅದರ ಬಗೆಗಿನ ಅಸ್ಪಷ್ಟತೆ ಹಾಗೆಯೇ ಮುಂದುವರೆದಿದೆ. ಈ ಸಂಗತಿಯ ಬಗ್ಗೆ ಅಧ್ಯಯನಕಾರರು ನೀಡಿರುವ ವಿವರಣೆಗಳನ್ನು ನೋಡುತ್ತಾ ಹೋದಂತೆ ಮುಖ್ಯವಾದ ಕೆಲವು ಸಮಸ್ಯೆಗಳಿರುವುದು ಕಂಡುಬರುತ್ತವೆ. ಅವುಗಳನ್ನು ಕೆಳಗಿನಂತೆ ನೋಡೋಣ.
ಜಾತಿ, ಉಪ-ಜಾತಿ – ರಚನಾಂಶದ ಸಮಸ್ಯೆ: ಜನಾಂಗ ಮತ್ತು ಸಮಾಜಶಾಸ್ತ್ರ ಅಧ್ಯಯನಕಾರರು ಜಾತಿ, ಉಪ-ಜಾತಿಯ ರಚನಾಂಶಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ನೀಡುವಾಗ ಒಳವಿವಾಹ ಪದ್ಧತಿ(Endogamy)ಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದಾರೆ, ಮತ್ತು ಇಂದಿನ ಸಮಾಜಶಾಸ್ತ್ರಜ್ಞರುಗಳು ಜಾತಿ, ಉಪ-ಜಾತಿಯ ರಚನಾಂಶವೆಂದರೆ ಒಳವಿವಾಹ ಪದ್ಧತಿ ಎಂದೇ ನಿಖರವಾಗಿ ಹೇಳುತ್ತಾರೆ. ಅಧ್ಯಯನಕಾರರು ಇಷ್ಟು ನಿಖರತೆಯಿಂದ ಹೇಳಿದರೂ ಸಹ ಜಾತಿಯ ರಚನಾಂಶದ ಕುರಿತಂತೆ ಸ್ಪಷ್ಟತೆಯಿಲ್ಲ. ಒಳವಿವಾಹ ಪದ್ಧತಿಯು ಜಾತಿಯ ರಚನಾಂಶ ಎಂದು ಒಬ್ಬ ಅಧ್ಯಯನಕಾರನು ತನ್ನ ಅಧ್ಯಯನದ ತಿರುಳನ್ನು ಮುಂದಿಟ್ಟರೆ, ಇಲ್ಲ ಒಳವಿವಾಹ ಪದ್ಧತಿಯು ಉಪ-ಜಾತಿಯ ನಿರ್ಣಾಯಕ ರಚನಾಂಶ ಎಂದು ಮತ್ತೊಬ್ಬ ಅಧ್ಯಯನಕಾರನು ಪ್ರತಿವಾದವನ್ನು ಮುಂದಿಡುವುದು ಕಂಡುಬರುತ್ತದೆ. ಇದರ ಜೊತೆಗೆ (ಏಕಕಾಲದಲ್ಲಿಯೇ) ಜಾತಿ, ಉಪ-ಜಾತಿ ಎರಡು ಘಟಕಗಳೂ ಸಹ ಒಳ ವಿವಾಹ ಪದ್ಧತಿಯ ಗುಂಪುಗಳು ಎಂಬ ವಾದಗಳೂ ಕೂಡ ಲಭ್ಯವಿದೆ. ಅಧ್ಯಯನಕಾರರ ವಿವರಣೆಗಳನ್ನು ಗಮನಿಸಿದರೆ ಒಳವಿವಾಹ ಪದ್ಧತಿಯು ಜಾತಿ, ಉಪ-ಜಾತಿ ಮತ್ತು ಕೆಲವೊಮ್ಮೆ ಉಪ-ಉಪ-ಜಾತಿಯ ರಚನಾಂಶವೂ ಸಹ ಆಗುತ್ತದೆ. ಹಾಗೂ ಏಕಕಾಲದಲ್ಲಿಯೇ ಇದು ಜಾತಿ ಮತ್ತು ಅದರ ಉಪ-ಜಾತಿಗಳ ರಚನಾಂಶವೂ ಸಹ ಆಗುತ್ತದೆ. ಈ ವಿವರಣೆಗಳು ಮುಂದಿನ ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿವೆ; ಜಾತಿಯು ಒಳವಿವಾಹ ಪದ್ಧತಿಯ ಘಟಕವಾಗಿ ಮತ್ತು ಅದರ ಉಪ-ಜಾತಿಗಳೂ ಸಹ ಒಳವಿವಾಹ ಪದ್ಧತಿಯ ಘಟಕಗಳಾದರೆ ಜಾತಿಯು ಅದರ ಉಪ-ಜಾತಿಗಳೊಡನೆ ಯಾವ ರೀತಿಯ ಸಂಬಂಧ ಹೊಂದಿರುತ್ತದೆ? ಹಾಗೆಯೇ ಒಂದು ಜಾತಿಯ, ಉಪ-ಜಾತಿಗಳು ಮಧ್ಯೆ ವೈವಾಹಿಕ ಸಂಬಂಧ ಏರ್ಪಡುವುದಿಲ್ಲ ಎಂದಾದ ಮೇಲೆ ಉಪ-ಜಾತಿಗಳು ಪರಸ್ಪರ ಯಾವ ರೀತಿಯ ಸಂಬಂಧವನ್ನು ಹೊಂದಿರುತ್ತವೆ? ಆದ್ದರಿಂದ ಯಾವ ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಅಥವಾ ಯಾವ ಇನ್ನೊಂದು ನಿರ್ದಿಷ್ಟ ಅಂಶವು ಒಂದು ಜನಗುಂಪನ್ನು ‘ಉಪ-ಜಾತಿ’ಯನ್ನಾಗಿಸುತ್ತದೆ ಎಂಬುದರ ಕುರಿತಾಗಲೀ ಸ್ಪಷ್ಟತೆಯಿಲ್ಲ. ಮತ್ತಷ್ಟು ಓದು 
ಕಾನೂನಿನ ಶಂಖದಿಂದ ಪರಿಹಾರದ ತೀರ್ಥ ಬರುತ್ತದೆಯೇ?
– ರಾಕೇಶ್ ಶೆಟ್ಟಿ
ಇತ್ತೀಚೆಗೆ ಪ್ರಕಟವಾದ ಸುದ್ದಿಗಳಲ್ಲಿ ಬಹುವಾಗಿ ಕಾಡಿದ್ದು,ವಿಜಯವಾಣಿಯಲ್ಲಿ ಜನವರಿ ೨೯ರಂದು ಮತ್ತೆ ಫೆಬ್ರವರಿ ೫ರಂದು ಪ್ರಕಟವಾದ ೨ ಸುದ್ದಿಗಳು.ಒಂದು ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ವರದಿಯಾದ ಮಲಹೊರುವ ಪ್ರಕರಣ ಮತ್ತು ಇನ್ನೊಂದು ಮಂಡ್ಯದ ಕಾಂಗ್ರೆಸ್ಸ್ ಕಛೇರಿಗೆ ಸಂಬಂಧಿಸಿದ ಮ್ಯಾನ್ ಹೋಲ್ ಅನ್ನು ಪೌರಕಾರ್ಮಿಕನೊಬ್ಬ ಬರಿಗೈಯಿಂದ ಸ್ವಚ್ಚ ಮಾಡುತಿದ್ದ ವರದಿ.
ಆನೇಕಲ್ಲಿನ ಪ್ರಕರಣ ವರದಿಯಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡು, ‘ಮಲಹೊರುವಂತೆ ಪ್ರೇರೆಪಿಸಿದ’ ಮತ್ತು ‘ಜಾತಿನಿಂದನೆ’ಯ (ಇದರಲ್ಲಿ ಜಾತಿ ನಿಂದನೆಯಾಗಿದ್ದು ಹೇಗೆ ಅನ್ನುವುದು ತಿಳಿಯಲಿಲ್ಲ) ಆರೋಪದ ಮೇಲೆ ಒಬ್ಬರನ್ನು ಬಂಧಿಸಿದ ಫಾಲೋ-ಅಪ್ ಸುದ್ದಿಯೂ ಪತ್ರಿಕೆಯಲ್ಲಿ ಬಂದಿತ್ತು. ಆದರೆ,ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸದ ಸರ್ಕಾರ ಇಂತ ಪ್ರಕರಣದಲ್ಲಿ ಮೊದಲ ಆರೋಪಿಯಾಗಬೇಕೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದ ಅನಿವಾರ್ಯತೆಗೆ ಬಿದ್ದು,ಕಾರ್ಮಿಕರಿಂದ ಮಲಹೊರಿಸುವ ಸ್ಥಿತಿಗೆ ಬಂದು ನಿಲ್ಲುವವರು ಆರೋಪಿಗಳಾಗಬೇಕೆ?
ಅತ್ಯಾಧುನಿಕ ಉಪಕರಣಗಳು ಆಯಾ ಪಾಲಿಕೆ/ನಗರಸಭೆ/ಪುರಸಭೆ/ಗ್ರಾಮಪಂಚಾಯಿತಿ ಗಳಲ್ಲಿ ಲಭ್ಯವಿದ್ದೂ ಮತ್ತು ಅವುಗಳನ್ನು ಬಳಸುವ ಬಗ್ಗೆ ಜನರಿಗೆ ಅರಿವು ಮೂಡಿಸಿ,ಅವು ಸುಲಭವಾಗಿ ದಕ್ಕುವಂತೆ ಸರ್ಕಾರ ಮಾಡಿದ್ದರೆ,ಒಬ್ಬರು ಜೈಲಿಗೆ ಹೋಗುವುದನ್ನು ತಪ್ಪಿಸಬಹುದಿತ್ತಲ್ಲವೇ?
ಆರ್.ಕೆ ಶ್ರೀಕಂಠನ್ ಅವರೊಂದಿಗಿನ ಮಾತುಕತೆಯ ನೆನಪು
ಕರ್ನಾಟಕ ಸಂಗೀತದ ಹಿರಿಯ ಗಾಯಕರಾದ ಆರ್.ಕೆ ಶ್ರೀಕಂಠನ್ ಅವರು ನಿನ್ನೆ ವಿಧಿವಶರಾದರು.ತಮ್ಮ ೯೪ರ ವಯಸ್ಸಿನಲ್ಲೂ ಸಂಗೀತ ಕಛೇರಿಯನ್ನು ನಡೆಸಿಕೊಡುತಿದ್ದ ಶ್ರೀಕಂಠನ್ ಅವರ ಬಗ್ಗೆ ಹಂಸಾನಂದಿ ಹಾಗೂ ಪ್ರಭುಮೂರ್ತಿಯವರು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ಪರವಾಗಿ ೨೦೦೮ರಲ್ಲಿ ನಡೆಸಿದ ಸಂದರ್ಶನವನ್ನು ಪ್ರಕಟಿಸುತಿದ್ದೇವೆ – ನಿಲುಮೆ
ಒಂದು ಮಾಘದ ತಂಪಿನಿರುಳಲಿ
ನಂದನದಿ ಸೇರಿರಲು ಸುರಗಣ
ಚಂದದಲಿ ತಲೆದೂಗಲಿಕೆ ನಾರದನ
ಗಾಯನಕೆ
ಇಂದದೇಕೋ ತನ್ನ ಹಾಡ
ಲ್ಲೊಂದು ಸೊಗಸೂ ಕಾಣದೆಯೆ ಕರೆ
ತಂದನೈ ಹಾಡಲಿಕೆ ಕರ್ನಾಟಕದ
ಕೋಗಿಲೆಯ!
ಜಾತಿ ಧರ್ಮವನ್ನು ಮೀರಿ ನಿ೦ತ ಸೋದರ ಪ್ರೇಮ
– ಗುರುರಾಜ್ ಕೊಡ್ಕಣಿ
ಆಕೆಯ ಹೆಸರು ಲಕ್ಷ್ಮಿ. ಹತ್ತೊ೦ಬತ್ತರ ಹರೆಯದ ಹೆಣ್ಣು ಮಗಳು.ನೋಡಲು ಅಷ್ಟೇನೂ ಸು೦ದರಿಯಲ್ಲದಿದ್ದರೂ ಲಕ್ಷಣವಾಗಿದ್ದಳು.ಬಡತನಕ್ಕೆ ಅತ್ಯುತ್ತಮ ಉದಾಹರಣೆ ಎ೦ಬ೦ಥಹ ಕುಟು೦ಬದಲ್ಲಿ ಜನಿಸಿದ್ದ,ಲಕ್ಷ್ಮಿ ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತಾಯಿ ಸದಾಕಾಲ ಕಾಯಿಲೆಯಿ೦ದ ನರಳುತ್ತಿದ್ದರೆ ,ಅಪ್ಪ ಪರವೂರಿನಲ್ಲಿ ಅವಳ ಅಣ್ಣನೊ೦ದಿಗೆ ವಾಸವಾಗಿದ್ದ.ಮನೆಯ ಹತ್ತಿರದ ಬಟ್ಟೆ ಅ೦ಗಡಿಯೊ೦ದರಲ್ಲಿ ಲಕ್ಷ್ಮಿ ಹೊಲಿಗೆ ಕೆಲಸ ಮಾಡಿಕೊ೦ಡಿದ್ದಳು.ಮನೆಯ ಹೆಚ್ಚಿನ ಜವಾಬ್ದಾರಿಗಳು ಲಕ್ಷ್ಮಿಯದ್ದೇ.ಕಿತ್ತು ತಿನ್ನುವ ಇ೦ಥಹ ಬಡತನದ ಮಧ್ಯೆಯೂ ತನ್ನ ತ೦ಗಿ ಸರಸ್ವತಿಯನ್ನು ವೈದ್ಯಳನ್ನಾಗಿಸುವ ಆಸೆ ಅವಳಿಗಿತ್ತು. ಬಡತನಕ್ಕೆ,ಬಡವರಿಗೆ ಕಷ್ಟಗಳು ಹೆಚ್ಚಲ್ಲವೇ..?? ಲಕ್ಷ್ಮಿಯ ಜೀವನವೂ ಹಾಗೆಯೇ ಇತ್ತು.ಆಕೆಯ ದುಡಿತದಿ೦ದ ಬರುತ್ತಿದ್ದ ಸ೦ಬಳ ಕುಟು೦ಬದ ನಿರ್ವಹಣೆಗೆ ಸಾಲುತ್ತಿರಲಿಲ್ಲ.ಅ೦ಗಡಿಯಿ೦ದ ದಿನಸಿ ಪದಾರ್ಥಗಳನ್ನು ತ೦ದು ಮನೆ ನಡೆಸುವುದು ಆಕೆಗೆ ಕಷ್ಟವಾಗುತ್ತಿತ್ತು.ಪಡಿತರ ಅ೦ಗಡಿಯಲ್ಲಿ ದಿನಸಿ ಪದಾರ್ಥಗಳನ್ನು ಪಡೆದುಕೊಳ್ಳೋಣವೆ೦ದರೇ ಆಕೆ ಬಳಿಯಿದ್ದ ಪಡಿತರ ಚೀಟಿ ಅಕೆಯ ಕುಟು೦ಬ ಮೊದಲು ವಾಸವಾಗಿದ್ದ ಊರಿನ ವಿಳಾಸದ್ದಾಗಿತ್ತು.ಆಕೆ ದಿನವೂ ಪಡಿತರ ಅ೦ಗಡಿಯ ಮಾಲಿಕನಿಗೆ ತನಗೂ ರೇಶನ್ ನೀಡುವ೦ತೆ ಕಾಡುತ್ತಿದ್ದಳು.ತಾನು ಬಡವಳು,ಬೇರೆ ಕಿರಾಣಿ ಅ೦ಗಡಿಗಳಲ್ಲಿ ದಿನಸಿ ಪದಾರ್ಥಗಳನ್ನು ಕೊ೦ಡು ಸ೦ಸಾರ ನಡೆಸುವಷ್ಟುಶಕ್ತಿ ನನಗಿಲ್ಲ,ದಯಮಾಡಿ ನನಗೂ ದಿನಸಿ ನೀಡು ಎ೦ದು ಪರಿಪರಿಯಾಗಿ ಅ೦ಗಲಾಚುತ್ತಿದ್ದಳು.ನಿನ್ನ ಪಡಿತರ ಚೀಟಿ ಬೇರೆ ಊರಿನದೆ೦ದು,ನಿನಗೆ ಇಲ್ಲಿ ರೇಶನ್ ನೀಡಲು ಸಾಧ್ಯವಿಲ್ಲವೆ೦ದು ಅ೦ಗಡಿಯ ಮಾಲೀಕ ಎಷ್ಟೇ ಹೇಳಿದರು ಆಕೆ ಕೇಳುತ್ತಿರಲಿಲ್ಲ.ಏನೇ ಮಾಡಿದರೂ ಈಕೆಗೆ ರೇಶನ್ ಕಾರ್ಡಿನ ನಿಯಮಗಳನ್ನು ಅರ್ಥ ಮಾಡಿಸುವುದು ಕಷ್ಟವೆ೦ದರಿತ ರೇಶನ್ ಅ೦ಗಡಿಯ ಮಾಲೀಕ,ಸ್ಥಳೀಯ ಪುಢಾರಿ ಜಗನ್ನಾಥ ಬಾಬುರವರನ್ನು ಕ೦ಡು,ಅವರ ಸಹಾಯದಿ೦ದ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳುವ೦ತೇ ಸಲಹೆ ನೀಡುತ್ತಾನೆ.
ಪೆಪ್ಪರ್ ಸ್ಪ್ರೇ ಮತ್ತು ಕಾಂಗ್ರೆಸ್ಸ್
– ಪ್ರಸನ್ನ,ಬೆಂಗಳೂರು
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಪ್ರಸಂಗವನ್ನು ಎಲ್ಲ ಮಾಧ್ಯಮಗಳು ಒಕ್ಕೊರಲಿನಿಂದ ಪೆಪ್ಪರ್ ಸ್ಪ್ರೇಯಷ್ಟೇ ಖಾರವಾದ ಮತ್ತು ಚಾಕುವಿನಷ್ಟೇ ಹರಿತವಾದ ಶಬ್ದಗಳಲ್ಲಿ ಖಂಡಿಸಿವೆ. ಆದರೆ ಈ ಘಟನೆಗೆ ಕಾರಣಾರು? ಎಂಬುದನ್ನು ಎಲ್ಲಿಯಾದರೂ ವಿಶ್ಲೇಷಣೆಗೊಳಪಡಿಸಿವೆಯೆ?
ನಮ್ಮ ನ್ಯಾಯಾಲಯಗಳೂ ಕೂಡ ಎಲ್ಲ ಪ್ರಕರಣಗಳಲ್ಲೂ ಉತ್ತೇಜನಕಾರಿ ಮತ್ತು ಅಪರಾಧಕ್ಕೆ ಕಾರಣವಾಗುವ ಪ್ರಚೋದನಾಕಾರಿ ಅಂಶಗಳನ್ನು ಹುಡುಕಲು ಪ್ರಯತ್ನಿಸುತ್ತದೆ. ಬಲವಾದ ಕಾರಣವಿಲ್ಲದೆ ನಡೆದ ಪ್ರಕರಣಗಳನ್ನು ನ್ಯಾಯಾಲಯ ಹೆಚ್ಚು ಕಠಿಣ ಶಿಕ್ಷೆಗೆ ಗುರಿ ಪಡಿಸಲು ಹೋಗುವುದಿಲ್ಲ. ಕೆಲವೊಮ್ಮೆ ಕಾರಣವಿಲ್ಲದೆ ಜರುಗುವ ಅಪರಾಧಗಳನ್ನು ಕೇವಲ ಕಣ್ತಪ್ಪಿನಿಂದಾದ ಅನಾಹುತಗಳೆಂದೆ ಪರಿಗಣಿಸಿದ ಉದಾಹರಣೆಗಳಿವೆ.
೨೦೦೪ ರಲ್ಲಿ ಕೇವಲ ಪ್ರಾದೇಶಿಕ ಪಕ್ಷಗಳ ವೈಫಲ್ಯದಿಂದ ಚುಕ್ಕಾಣಿ ಹಿಡಿದ ಸರಕಾರದ ನಡವಳಿಕೆಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿ ನೋಡಿ. ಇಂದಿನ ಸಂಸದರ ನಡವಳಿಕೆಗೆ ಒಂದು ಸಣ್ಣ ಕಾರಣದ ಎಳೆ ಕಾಣಿಸಿಕೊಳ್ಳುತ್ತದೆ. ಅದು ಹೇಗೋ ಹಿಂದಿನ ಸರಕಾರದ ಆರ್ಥಿಕ ನೀತಿಗಳಿಂದ ಮೊದಲ ಮೂರು ವರ್ಷ ತಳ್ಳಿದ ಈ ಸರಕಾರ, ಯುಪಿಎ-೧ರ ಕೊನೆಯ ೨ ವರ್ಷಗಳಲ್ಲಿ ನಡೆಸಿದ ಹಗರಣಗಳು ಹೊರ ಬರುವಷ್ಟರಲ್ಲಿ ಎರಡನೇ ಬಾರಿ ಚುನಾವಣೆ ಗೆದ್ದಿತ್ತು. ಅದರಲ್ಲೂ ನಮ್ಮ ಮೂಕ ಪ್ರಧಾನಿಯವರು ನಾವು ಚುನಾವಣೆ ಗೆದ್ದಿದ್ದೇವೆ ಹಾಗಾಗಿ ನಾವು ಮಾಡಿದ್ದೆಲ್ಲ ಸರಿ ೫ ವರ್ಷ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಯಾರಿಗೂ ಉತ್ತರದಾಯಿಗಳಲ್ಲ ಎನ್ನುವಂತೆ ಹೇಳಿಕೆಗಳನ್ನು ಕೊಟ್ಟು ಅಂತೆಯೇ ನಡೆದು ಕೊಂಡರು.
ಮತ್ತಷ್ಟು ಓದು 
ಚುನಾವಣಾ ಸಮೀಕ್ಷೆಗಳನ್ನೆಲ್ಲಾ ಸುಳ್ಳು ಮಾಡಬಹುದಾ ೨೦೧೪ ರ ಚುನಾವಣಾ ಫಲಿತಾಂಶ ?
– ಅನಿಲ್ ಚಳಗೇರಿ
೨೦೧೪ ರ ಚುನಾವಣಾ ಸಮೀಪಿಸುತ್ತಲೇ ರಾಜಕೀಯ ಪಕ್ಷಗಳ ಪ್ರಚಾರದ ಕಾವು ಏರುತ್ತಿದೆ, ಒಂದಡೆ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಅಬ್ಬರ, ಮತ್ತೊಂದಡೆ ರಾಹುಲ್ ಗಾಂಧಿಯನ್ನು ಶತಾಯ ಗತಾಯ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆನ್ನುವ ಕಾಂಗ್ರೆಸ್ ನಾಯಕರ ಹಠ, ನಾವು ಕಾಂಗ್ರೆಸ್ಸಿನ ಜೊತೆಗೂ ಇಲ್ಲ, ಬಿಜೆಪಿಯ ಜೊತೆಗೂ ಇಲ್ಲ ಎನ್ನುವ ಥರ್ಡ್ ಫ್ರಂಟ್ ನ ಎನ್ನುವ ಪ್ರಾದೇಶಿಕ ಪಕ್ಷಗಳ ಗುಂಪು, ಈ ತ್ರಿಕೋಣ ಪೈಪೋಟಿಯಲ್ಲಿ ಅತ್ಯಂತ ಮುಂಚುಣಿಯಲ್ಲಿರುವವರು ನರೇಂದ್ರ ಮೋದಿ ಎನ್ನುವದರಲ್ಲಿ ಯಾವುದೇ ಸಂಶವೇಯಿಲ್ಲ, ಆದರೆ ೨೦೦೯ ರ ಚುನಾವಣೆಯಲ್ಲಿ ಒಂಬತ್ತು ರಾಜ್ಯಗಳಲ್ಲಿ ತನ್ನ ಖಾತೆಯನ್ನೇ ತಗೆಯದ ಬಿಜೆಪಿ ೨೦೧೪ ಚುನಾವಣೆಯಲ್ಲಿ ೨೭೨ ಮುಟ್ಟಬಹುದೆ? ಎನ್ನುವ, ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಮೋದಿಯವರು ಸುಳ್ಳು ಮಾಡುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತಲ್ಲಿವೆ.
೯ ರಾಜ್ಯಗಳಲ್ಲಿ ನಿಮ್ಮ ಖಾತೆಯೇ ತೆರೆದಿಲ್ಲ, ಅಂದರೆ ಒಂದು ಲೋಕಸಭಾ ಸೀಟ್ ಗೆಲ್ಲಿಸಲಾಗಿಲ್ಲ, ಅದ್ಹೇಗೆ ಬಿಜೆಪಿ ದೆಹಲಿಯ ಕನಸು ಕಾಣುತ್ತಿದೆ ಎನ್ನುವವರು ಇತ್ತೀಚಿಗಿನ ಮೋದಿಯವರ ಜನಪ್ರೀಯತೆ ಹಾಗು ಹಿಂದೆಂದಿಗೂ ಇರದ ರಾಜ್ಯಗಳಲ್ಲಿ ಬಿಜೆಪಿಯ ದೊಡ್ಡ ಸಂಖ್ಯೆಯ ಕಾರ್ಯಕರ್ತರನ್ನು ನೋಡಿ ಹುಬ್ಬೇರಿಸುವಂತೆ ಮಾದಿದೆ. ೨೦೦೯ ರಲ್ಲಿ ನಡೆದ ಚುನಾವಣೆ ಫಲಿತಾಂಶ ನೋಡಿದರೆ ಆಂಧ್ರ ಪ್ರದೇಶ, ದೆಹಲಿ, ಹರ್ಯಾಣ, ಜಮ್ಮು ಕಾಶ್ಮೀರ , ಕೇರಳ, ಒರಿಸ್ಸಾ, ತಮಿಳ್ ನಾಡು ಹಾಗು ಉತ್ತರಾಖಂಡದಲ್ಲಿ ಬಿಜೆಪಿ ಒಬ್ಬ ಲೋಕಸಭಾ ಸದಸ್ಯನನ್ನು ಗೆಲ್ಲಿಸಲಾಗಲಿಲ್ಲ, ಅದನ್ನೇ ಗುರಿಯಾಗಿಟ್ಟುಕೊಂಡ ಬಿಜೆಪಿ ನರೇಂದ್ರ ಮೋದಿಯವರ ಈ ಅಲೆಯನ್ನು ಈ ರಾಜ್ಯಗಳಲ್ಲಿ ತನ್ನ ಪ್ರಭಾವ ಹೆಚ್ಚಿಸುವದರಲ್ಲಿ ಒಂದಿಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ಯಾವ ಜಮ್ಮು ಹಾಗು ಕಾಶ್ಮೀರ ಅಬ್ದುಲ್ಲಾ ಗಳ ಕೈಯಲ್ಲಿ ಕಳೆದ ೬೦ ವರ್ಷಗಳಿಂದ ಬೇರೆ ರಾಜಕೀಯ ವಿಕಲ್ಪವೇ ಇಲ್ಲವೇನು ಅನ್ನುತ್ತಿತ್ತೋ ಅಲ್ಲಿಂದ ಪ್ರಾರಂಭಿಸಿ, ಬರಿ ಡಿಎಂಕೆ ಹಾಗು ಎಐಡಿಎಂಕೆಗಳಿಗೆ ಮಾತ್ರ ಇಲ್ಲಿ ಉಳಿಗಾಲ ಎನ್ನುವ ತಮಿಳು ನಾಡಿನ ರಾಜಕೀಯ ಲೆಕ್ಕಾಚಾರವನ್ನು ಸುಳ್ಳು ಮಾಡಲು ಹೊರಟಿದೆ, ಇದಕ್ಕೆ ಸಾಕ್ಷಿಯಾಗಿದ್ದೆ ಜಮ್ಮು ಹಾಗು ತಮಿಳು ನಾಡಿನಲ್ಲಿ ನಡೆದ ಬೃಹತ್ತ್ ಸಮಾವೇಶ ಹಾಗು ಸಾಲು ಸಾಲು ಬಿರುಸಿನ ರಾಜಕೀಯ ಚಟುವಟಿಕೆಗಳೇ ಸಾಕ್ಷಿ.
ಮತ್ತಷ್ಟು ಓದು 
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ 
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಆವರಣ —- ಅನಾವರಣ
ಹೊಸ ಕನ್ನಡ ಸಾಹಿತ್ಯದ ಇತ್ತೀಚಿನ ಮೂವತ್ತು ನಲವತ್ತು ವರ್ಷಗಳಲ್ಲಿ ಎಸ್ ಎಲ್ ಭೈರಪ್ಪನವರ “ಆವರಣ” ಕಾದಂಬರಿಯಷ್ಟು ವಿವಾದಿತ ಕೃತಿ ಬಹುಶಃ ಬೇರೊಂದು ಇರಲಾರದೆನಿಸುತ್ತದೆ. “ಧರ್ಮ ಕಾರಣ” ಮತ್ತು”ಅನುದೇವ ಹೊರಗಣವನು” ಎಂಬ ಎರಡು ಕೃತಿಗಳ ಬಗ್ಗೆ ವಿವಾದವಾಗಿತ್ತು. ಆದರೆ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ನಂತರದಲ್ಲಿ “ಧರ್ಮಕಾರಣ”ವನ್ನು ಬ್ಯಾನ್ ಮಾಡಲಾಯಿತು. “ಆವರಣದ ವಾದ-ವಿವಾದಗಳಲ್ಲಿ”ಸಾಹಿತ್ಯ ಮತ್ತು ಸಾಹಿತ್ಯೇತರ ಕಾರಣಗಳು ಸೇರಕೊಂಡಿದ್ದವು. ಕನ್ನಡದ ನಾಲ್ಕೈದು ಪ್ರಮುಖ ದಿನ ಪತ್ರಿಕೆಗಳಲ್ಲಿ ಈ ಚರ್ಚೆ ಸುಮಾರು ಆರು ತಿಂಗಳುಗಳ ಕಾಲ ನಡೆಯಿತು. Front line ಮತ್ತು The pioneer ಎಂಬ ಇಂಗ್ಲಿಷ್ ಪತ್ರಿಕೆಗಳಲ್ಲಿ ಆವರಣ ಕುರಿತಂತೆ ವಿಮರ್ಶೆ ಪ್ರಕಟವಾಯ್ತು . ಜತೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಾಲ್ಕೈದು ಪ್ರಮುಖ ನಗರಗಳಲ್ಲಿ ಆವರಣದ ಬಗ್ಗೆ ಸಭೆಗಳು,ವಿಚಾರಗೋಷ್ಠಿಗಳು ನಡೆದವು.
ನಿಜವಾದ ಜ್ಞಾನ
ನಿಜವಾದ ಜ್ಞಾನವೆಂದರೆ ಓದಿ ತಿಳಿಯುವುದೋ? ಹಿರಿಯರ ಅನುಭವಗಳಿಂದ ಅರಿಯುವುದೋ? ಹೀಗೊಂದು ಜಿಜ್ಞಾಸೆ ಕಾಡುವುದುಂಟು. ಲಿಪಿಗಳ ಅನ್ವೇಷಣೆಯೇ ಇರದಿದ್ದ ಕಾಲದಲ್ಲಿ ಎಲ್ಲವನ್ನೂ ಅಸಾಮಾನ್ಯ ಸ್ಮರಣ ಶಕ್ತಿಯಿಂದ ಅರಿತು ಕಲಿಯುತ್ತಿದ್ದರು. ನಂತರ ಪುಸ್ತಕಗಳ ಸಹಾಯದಿಂದ ಓದಿ, ಬರೆದು ಕಲಿಯಲು ಸಮಯವೇನೋ ಹಿಡಿಯುತ್ತಿತ್ತು, ಆದರೆ ಅದು ಸಹಜವಾಗಿರುತ್ತಿತ್ತು. ಇಂದಿನ ನಮ್ಮ ಕಲಿಕಾ ರೀತಿಯಲ್ಲಿ ಆ ಸಹಜತೆಯನ್ನು ನಾವು ಕಾಣುತ್ತೇವೆಯೇ? ಒತ್ತಡವಿಲ್ಲದೆ ಕಲಿಯಲು ನಮ್ಮ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣದಿಂದ ನಾವು ಗಳಿಸುವ ಪದವಿಗಳು ನಿಜವಾದ ಜ್ಞಾನವಾಗುವುದೇ? ನಮ್ಮ ಇಂದಿನ ವಿದ್ಯಾರ್ಥಿಗಳು ಮಾಹಿತಿಯನ್ನು ನಿಜವಾದ ಅಧ್ಯಯನದಿಂದ ಪಡೆಯುತ್ತಿದ್ದಾರೆಯೇ? ಇಲ್ಲ, ಓದಿ ಕಲಿಯುವ ತಾಳ್ಮೆ ಈಗಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಈ ವೇಗದ ಯುಗದಲ್ಲಿ ಎಲ್ಲವೂ ಕಣ್ಣ ಮುಂದೆ ಕೈಬೆರಳುಗಳ ಚಲನೆಯಿಂದಲೇ ಸಾಧ್ಯವಾಗುತ್ತಿದೆ. ಧರ್ಮ ಅಂದರೇನು?
– ಸಚ್ಚಿದಾನಂದ ಹೆಗ್ಡೆ
ಫೇಸ್ ಬುಕ್ಕೂ ಸೇರಿದಂತೆ ನಮ್ಮ ಮಾತುಗಳಲ್ಲಿ, ಬರಹಗಳಲ್ಲಿ ಮತ್ತು ನಿತ್ಯದ ನಮ್ಮ ವ್ಯವಹಾರಗಳಲ್ಲಿ “ಧರ್ಮ” ಶಬ್ದ ಅಪಾರವಾದ ಅಪಾರ್ಥದಲ್ಲಿ ಬಳಕೆಯಾಗುತ್ತಿರುವುದನ್ನು ಕಂಡು ಮನಸ್ಸಿಗೆ ಅಸಹನೀಯವಾದ ಕಿರಿಕಿರಿ ಉಂಟಾಗುತ್ತದೆ. ಧರ್ಮಗುರುಗಳೂ ಸಹ ಈ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದನ್ನು ಕಂಡಾಗ ಸಂಕಟವಾಗುತ್ತದೆ.
ಎಲ್ಲರೂ ಧರ್ಮ ಶಬ್ದವನ್ನು ಹೇಗೆ ಬಳಸುತ್ತಿದ್ದಾರೆ? ಕ್ರೈಸ್ತ ಧರ್ಮ, ಇಸ್ಲಾಮ್ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ವೀರಶೈವ ಧರ್ಮ, ಸಿಖ್ ಧರ್ಮ ಇತ್ಯಾದಿ ಇತ್ಯಾದಿ. ನಿಜಕ್ಕೂ ಇವು ಧರ್ಮಗಳೇ? ಅಸಲಿಗೆ ಇವೆಲ್ಲ ಏನು?
ಧರ್ಮ ಶಬ್ದವನ್ನು ತಪ್ಪರ್ಥದಲ್ಲಿ ಬಳಸುವುದು ಆ ಶಬ್ದಕ್ಕೆ ಮಾಡುವ ಅಪಚಾರವಲ್ಲವೇ? ಅದು ಅಧರ್ಮವಾಗುವುದಿಲ್ಲವೇ? ಇದರ ಬಗ್ಗೆ ತಲಸ್ಪರ್ಶೀ ಚಿಂತನೆಯಾಗಲಿ ಎನ್ನುವುದು ನನ್ನ ಆಶಯ.ನನ್ನ ಅಭಿಪ್ರಾಯದಲ್ಲಿ ಧರ್ಮವು ದೇವರನ್ನು ಹುಡುಕುವ ನಿರ್ದಿಷ್ಟ ಮಾರ್ಗವಲ್ಲ. ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ, ಸಿಖ್, ವೀರಶೈವ ಮುಂತಾದವು ದೇವರನ್ನು ಹುಡುಕುವ ಯಾ ಸಾಕ್ಷಾತ್ಕರಿಸಿಕೊಳ್ಳುವ ನಿರ್ದಿಷ್ಟ ದಾರಿಗಳು. ಆಯಾ ದಾರಿಗಳಲ್ಲಿ ಸಾಗುವವರಿಗೆ ಅವು ಶ್ರೇಷ್ಠ. ಆದರೆ ಎಲ್ಲರಿಗೂ ಎಲ್ಲ ದಾರಿಗಳು ಶ್ರೇಷ್ಠವಲ್ಲ ಮತ್ತು ಏಕಕಾಲದಲ್ಲಿ ಎಲ್ಲ ದಾರಿಗಳಲ್ಲಿ ಹೆಜ್ಜೆ ಹಾಕಲೂ ಸಾಧ್ಯವಿಲ್ಲ.





