ನಂದಿ ಬೆಟ್ಟ ಟ್ರಿಪ್ -೧
– ಪ್ರಶಸ್ತಿ.ಪಿ, ಸಾಗರ
ಬೆಂಗಳೂರಿಗೆ ಬಂದು ಪೀಜಿ ಹಿಡ್ದಾಗಿನಿಂದ ವಾರಾಂತ್ಯದಲ್ಲಿ ಎಲ್ಲೂ ಸುತ್ಲಿಲ್ಲ ಅಂದ್ರೆ ಏನೋ ಮಿಸ್ಸಿಂಗು, ಬೋರಿಂಗು ಅನ್ಸೋಕೆ ಶುರು ಆಗತ್ತೆ. ಮಾಡಕ್ಕೆ ಬೇರೆ ಕೆಲ್ಸ ಇಲ್ಲದೇ ಸುತ್ತೋದು ಅಂತೇನೂ ಅಲ್ಲ..ಆದ್ರೆ ಯಾಕೋ ಗೊತ್ತಿಲ್ಲ “ದೇಶ ಸುತ್ತು, ಕೋಶ ಓದು ಅಂತಾರಲ್ಲ”. ಅದರಲ್ಲಿ ೨ನೇದೇ ಸ್ವಲ್ಪ ಇಷ್ಟ ಆಗ್ತಿತ್ತು ನಂಗೆ. ಹಿಂಗಿರೋವಾಗ ಬೆಂಗಳೂರಲ್ಲೇ ಇದ್ದು ನಂದಿ ಬೆಟ್ಟಕ್ಕೆ ಹೋಗಿಲ್ಲ ಅಂದ್ರೆ ಹೆಂಗೆ ಅಂತ ಅನ್ಸಿಬಿಡ್ತು ಒಂದು ವಾರ. ಕೆಲ ತಿಂಗಳ ಹಿಂದೆ ಹರೀಶಣ್ಣ ಮತ್ತು ತಂಡದವ್ರು ಹೋಗಿದ್ದ ಫೋಟೋ ನೋಡಿ ನಾನೂ ಹೋಗ್ಬೇಕಿತ್ತು, ಛೆ , ಅಂತ ಆಸೆ ಆಗಿದ್ದೂ ಸುಳ್ಳಲ್ಲ. ಸರಿ ಅಂತ ಮುಂದಿನ ಶನಿವಾರಕ್ಕೆ ಅಲ್ಲಿಗೇ ಹೋಗದು ಅಂತ ಫಿಕ್ಸ್ ಮಾಡಿ ಸ್ವಲ್ಪ ಚೇಂಜ್ ಇರ್ಲಿ ಅಂತ FB ಲೊಂದು Event ಮಾಡಿಕರಿದ್ವಿ..೨-೩ ದಿನ ಆದ್ರೂ ಪ್ರತಿಕ್ರಿಯೆ ನೋಡಿ ಕೂಸು ಹುಟ್ಸಕ್ಕೆ ಮುಂಚೇನೆ ಕುಲಾವಿ ಹೊಲ್ಸಿದ್ವಾ ಅಂತನೇ ಅನಿಸ್ತಿತ್ತು. ಕೊನೆಗೆ ಗುರುವಾರ, ಮತ್ತೆ ತಕಾ ಅಂತ ಬೆಂದಕಾಳೂರ ಸೆಕೇಲಿ ಬೆಂದು ಶನಿವಾರ ಮಧ್ಯಾಹ್ನದವರ್ಗೆ ಪಾಚ್ಕೊಳೋಕೆ(ಮಲ್ಗೋಕೆ!!) ಸ್ಕೆಚ್ ಹಾಕಿದ್ದ ಗೆಳೆಯರಿಗೆಲ್ಲಾ ಮೆಸೇಜಾಯ ನಮಃ ಅಂದಾಯ್ತು. ಕೆಲೋರು ಬರ್ತೋನಿ ಅಂದ್ರು. ಕೆಲೋರು ಪ್ರತೀ ಸಲದಂಗೇ ಕೈಯತ್ತಿದ್ರು. ಕೆಲೋರು ಸರಿ ಮಚಾ, ಶುಕ್ರವಾರ ರಾತ್ರೆ ಹೇಳ್ತೀನಿ ಅಂದ್ರು. ಇಲ್ಲಾ ಮಗಾ ಊರಿಗೆ ಹೋಗ್ಬೇಕು, ಸೋರಿ ಕಣೋ ಅಲ್ಲಿಗೆ ಹೋಗ್ಬೇಕು, ಮುಂಚೇನೆ ಪ್ಲಾನ್ ಆಗ್ಬಿಟ್ಟಿದೆ ಅವನನ್ನ ಮೀಟ್ ಮಾಡ್ಬೇಕು ಅನ್ನೋ ತರಾವರಿ ಉತ್ರಗಳೂ ಬಂದ್ವು. ಒಂದು ವರ್ಷ ಮುಂಚೆ ಪ್ಲಾನ್ ಮಾಡಿದ್ರೂ ಇದೇ ಕತೆ ಬಿಡೋ .. ಕರ್ಮ ಅಂತ ಒಂದ್ಸಲ ಬೇಜಾರ್ ಮಾಡ್ಕಂಡ ಫ್ರೆಂಡು..ಎಲ್ಲಾದ್ರೂ ಬಿಟ್ ಹೋದ್ರೆ ನನ್ಯಾಕೆ ಕರ್ದಿಲ್ಲ ಅಂತ ಹಿಗ್ಗಾಮುಗ್ಗಾ ಜಾಡಿಸೋ ಇವ್ರುಗಳ್ನ ಎಲ್ಲಿಗಾದ್ರೂ ಬರ್ತೀರ ಕರದ್ರೆ ಇದೇ ಗೋಳು ಕಣ್ಲಾ ಅಂದ ಗೆಳೆಯ. ಕೊನೆಗೆ ಆ ಮೆಸೇಜು ಎಲ್ಲೆಲ್ಲೋ ತಿರ್ಗಿ ತಿರ್ಗಿ, ಯಾರ್ಯಾರೋ ಎಲ್ಲ ಕೇಳಂಗೆ ಆಗಿ ನಿರೀಕ್ಷೆನೇ ಮಾಡ್ದೇ ಇದ್ದ ಹಳೇ ಗೆಳೆಯರೆಲ್ಲಾ ಸಿಕ್ಕು ಒಟ್ಟು ೮ ಜನ ಬೆಟ್ಟ ಹತ್ತೋ ಭೂಪರು ರೆಡಿ ಆದ್ವಿ ಅನ್ನಿ ಕೊನೆಗೆ 🙂
ನಂದಿ ಬೆಟ್ಟ ಬೆಳಗಿಂದು , ಸ್ಕಂದ ಗಿರಿ ರಾತ್ರೀದು ಅಂದಿದ್ದ ಗೆಳೆಯ ವಿಶು. ಬೆಳ ಬೆಳಗ್ಗೆ ೪:೩೦ ಗೆ ಅಲ್ಲಿಗೆ ಹೋಗಿದ್ವಿ. ಏನು ಚಂದಾ ಇತ್ತು ಅನ್ನಿ. ಮಂಜು ಬೀಳೋದು ನೋಡೋದೇ ಸ್ವರ್ಗ ಅನ್ನೋ ತರ ಅಲ್ಲಿಗೆ ಹೋದ ಬ್ಲಾಗ್ ಗೆಳೆಯ ಒಬ್ಬ ಬರ್ಕೊಂಡಿದ್ದ. ಆದ್ರೆ ಅಷ್ಟು ಮುಂಚೆ, ಅದೂ ವಾರಾಂತ್ಯದ ಶನಿವಾರ ಗೆಳೆಯರನ್ನ ಹೊರಡ್ಸೋ ಸೀನೇ ಇರ್ಲಿಲ್ಲ. ಸರಿ ಅಂತ ೭:೩೦ ಗೆ ಹೊರಡೋದು ಅಂತ ಅಂದ್ವಿ. ಎರ್ಲನ್ನೂ ಸೇರಿಸ್ಕಂಡು ಅಲ್ಲಿಗೆ ಹೋಗಿದ್ದನ್ನ ಬರದ್ರೆ ಅದೇ ಒಂದು ಲೇಖನ ಆಗ್ಬೋದು. ಈಗಾಗ್ಲೇ ಈ ಲೇಖನ ಓದಕ್ಕೆ ಯಾಕೆ ಶುರು ಮಾಡಿದ್ನೋ ಅಂತ ಬೋರು ಹೊಡೆದು ಪೇಜು ಬಿಡೋಕೆ ಪ್ಲಾನ್ ಮಾಡ್ತಿರಬಹುದಾದ ನಿಮಗೆಲ್ಲಾ ಇನ್ನೂ ಕೊರೆಯದೇ ನಂದಿ ಬೆಟ್ಟದ ನಿಜವಾದ ಅನುಭವಕ್ಕೆ ಬರ್ತೀನಿ.
ಅಮೀರ್ ಜೀ, ನಿ೦ಙಲೊಟ್ಟುಗು ನ೦ಙಯು೦ ಉಳ್ಳ, ಒಟ್ಟುಗು ಚೊಲ್ಲುವ “ಸತ್ಯಮೇವ ಜಯತೇ”
– ಶಿಹಾ ಉಳ್ಳಾಲ್, ಮಂಗಳೂರು
ತಿ೦ಙಳ್ ಇಪ್ಪರ ಬಾರಿ ಚರ್ಜೆ ಲ್ ಉಲ್ಲೆದಾಯೊ ಬಿಶಯ ಆಯಿತಿಕ್ಕ್ ರ್ ಕನ್ನಡ ಡಬ್ಬಿ೦ಗ್ ಬೇನು ಬೇ೦ಡ ಚೆ೦ತ್, ಕನ್ನಡೇತರ ಏದ್ ಪಿಲ೦ ರೆಯುಮ್ ಕನ್ನಡ ಡಬ್ಬಿ೦ಗ್ ಆಕಗು, ಚೆನ್ನೆ೦ಗ್ ಕನ್ನಡೇತರ ಪಿಲ೦ ಗ್ ಕನ್ನಡ ಪಲಕ ಸೇರ್ಪಟಿತ್ತ್ ಪಿಲ೦ ಆಕಗು, ಇ೦ಟರ್ನೆಟ್ ಲ್ ಈ ಬಿಸಯ ಚಮ್ಮೆ ಚರ್ಚೆ ಆಯಿತ್, ಕನ್ನಡ ಪಿಲ೦ ಇ೦ಡಸ್ತ್ರಿರ೦ಙ ಡಬ್ಬಿ೦ಗ್ ಬೇ೦ಡ, ಮುನ್ನಲ್ಗ್ ನ೦ಕ್ ಸ್ವರ ಪನಿ ಇಲ್ಲಾ೦ಟಾವು೦ಟುಲ್ಲದಾಯೊ ಪೇಡಿಯು೦ ಅರಿಪಾಟಿತ್ತ್.
ಸಾಮಾನ್ಯಮಾಯಿಟ್ ನ೦ಙ ಮನಸ್ಸಿಲಾಕ್ಕಿಯ ಡಬ್ಬಿ೦ಗ್ ಆಯೆ೦ಗು೦ ಆಯಿಟಿಲ್ಲೆ೦ಗುಮ್ ಪೈಸಾ ಆಕ್ ಡೆ ಅ೦ಙ ಅಲ್ಲೆ ನ೦ಕ್ ಎ೦ದ್ ಗ್ ಈ ಬಿಸಯತ್ತ್ ಲ್ ತಕರಾರ್ ಚೆ೦ತ್. ನಾನು೦ ಅ೦ಙನೆಮೆ ಬಿಯಾರ್ಚೊ.
ಬಿಸಯ ಎನಿಯುಮ್ ಚರ್ಚೆ ಆಯೊ ಅಮೀರ್ ಖಾನ್ ರೊ ಸತ್ಯ ಮೇವ ಜಯತೇ ಚೊಲ್ಡ್ರೊ ಒರು ಪ್ರೋಗ್ರಾಮ್ ಇಡೀ ದುನಿಯಾವುಗು ಪ್ರಸಾರ ಆವು೦ಬೊ ಕನ್ನಡ ಡಬ್ಬಿ೦ಗ್ ಆಕನು ಚೊ೦ತು, ಇದ್ ರೊ ಬಿಸಯತ್ತ್ ಲ್ ಕರ್ನಾಟಕ ಗ್ ಲೆಟರುಮ್ ಕಡ್ತಿತ್ತ್. ಚರ್ಚೆ ಚಮ್ಮೆ ಗ೦ಬೀರತ್ತ್ ಗ್ ಎತ್ತಿತ್, ಚಮ್ಮೆ ಆಲ್ಮಾರ್ ಕನ್ನಡ ಡಬ್ಬಿ೦ಗ್ ಬೇನು ಚೆನ್ನಾರ್, ಕರ್ನಾಟಕತ್ತ್ ಲೇ ಒಳ ಪ್ರದೇಶ ಪೋಯೆ೦ಗ್ ಕನ್ನಡ ಮಾತ್ರ ಗೊ೦ತುಲ್ಲೆದಾಯೋ ಎತ್ರಮಾ ಕುಟು೦ಬ ಉ೦ಡು, ಸತ್ಯ ಮೇವ ಜಯತೇ ಎಲ್ಲಾರ್ಗು೦ ಬಿಸಯ ಪಿಡಿಯಾವನು,ಸಮಾಜತ್ತ್ ಲ್ ಬದಲಾವಣೆ ತರಣು ಚೆ೦ತ್. ನ೦ಙಲೊ ಮುನ್ನಲ್ ಕಾ೦ಡೆದಾಯೋ ಎಲ್ಲಾ, ಬಲಾಹತ್ತ್ ಗುಮ್, ಕೊಲೆ,ಅತ್ಯಾಚಾರ, ಕೋಮುಗಲಬೆ ಇದ್ ಗೆಲ್ಲಾ ಮುಖ್ಯಮಾಯಿತ್ ನ೦ಙ ನೋಕಗು ಪೋಯೆ೦ಗ್ ನ೦ಕ್ ಕಾಣಗು ಕಿಟ್ಟ್ ರೊ, ಪಿರ್ಸ ಚೊಲ್ಡ್ರೆದ್ ಮನುಷ್ಯರೈಲ್ ಇಲ್ಲಾತದ್, ಇ೦ಡ್ ನ೦ಙ ನೋಕುರ ಸ್ಕೂಲ್, ಕಾಲೇಜ್ ಲ್ ಎಲ್ಲಾ ಪಡಿಕ್ಕ್ ರ , ಆಯೆ೦ಗ್ ಲಾ ಎವುಡೆಯು೦ ಉಮ್ಮರೋ ಪಿರ್ಸ ಪಡಿಪಾಟ್ ರೊ ಚಾಪ್ಟರಾ ಅಲ್ಲ ಮನುಷ್ಯ ಮನುಷ್ಯರೊ ಒತ್ತೊರುಮ ಪಡಿಪಾಟ್ರೆ ಒರು ಪಾಠಯುಮ್ ಇಲ್ಲೆ. ಕಾಲಿ a2+b2+c2 ಪಡಿಪಾಟ್ ರೊ ಬ್ಯುಸಿಲ್ ಉಲ್ಲಾರ್ . ಮತ್ತಷ್ಟು ಓದು 
ಕನ್ನಡಿಗನಿಗೆ ಕನ್ನಡಿಗನೇ ಸಾರಥಿ
– ಪವನ್ ಪಾರುಪತ್ತೇದಾರ
ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.
ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.
ಅದು ಅಮ್ಮನದೇ ಮುತ್ತು..!
ಶ್ರೀಧರ್ ಜಿ ಸಿ
ಅಮ್ಮನಿಗೆ ಪರಿಪರಿಯಾಗಿ ಕೇಳಿಕೊಂಡಿದ್ದೆ.
ಅಮ್ಮ ಮುಂದೆಂದೂ ಇಂತಹ ತಪ್ಪು ಮಾಡಲಾರೆ..!
ಕ್ಷಮಿಸಿ ಬಿಡು ಎನ್ನನು…
ಅಮ್ಮ ಮೌನವಾಗಿ ಕೇಳಿದಳು, ನಗುತ್ತಾ ಹೇಳಿದಳು.
ಮಗು, ಒಪ್ಪಬೇಕಾದವಳು,
ಮಾಡಬಾರದು ಅಂತ ಹೇಳುವ ವಯಸು ಮುಗಿದಿದೆ. .
ನೀನಿನ್ನೂ ಚಿಕ್ಕ ಮಗು ಅಲ್ಲ..!
ಬೆಳೆದ ದೇಹ ನಿನ್ನದು.
ಹಾರುತ್ತಿರುವ ಪಕ್ಷಿ, ಓಡುವ ಪ್ರಾಣಿ ನೀನು.
ಈಗಾಗಲೇ ನಿನಗರಿವಿಲ್ಲದೇ, ನಿನ್ನೊಳಗೆ ಇನ್ನೊಬ್ಬ ಅಮ್ಮನನ್ನು
ತಂದು ಇಟ್ಟಿದ್ದೇನೆ.
ಅವಳು ಇದ್ದಾಳೆ, ನಿನ್ನೊಳಗೆ, ನಿನಗರಿವಿಲ್ಲದೇ..!
ಜೊತೆಗೆ ನಿಮ್ಮಪ್ಪನೂ ಬೆನ್ನಿಗಂಟಿದ್ದಾನೆ.
ನಿನ್ನೊಳಗೆ ಇಬ್ಬರೂ ಇದ್ದಾರೆ, ಕೊರಗುವ ಪ್ರಶ್ನೆಯೇ ಇಲ್ಲ.
ಕೇಳುವುದೇನಿದ್ದರೂ ಅವರನ್ನು ಕೇಳು..!
——-2———-
ಮೆದು ಮಾಂಸದವರೆಗೆ ನೀನು ನನ್ನವನಾಗಿದ್ದೆ.
ನಾ ಹೇಳುತ್ತಿದ್ದೆ, ನೀನು ಕೇಳುತ್ತಿದ್ದೆ.
ನೀನು ಈಗ ಬಲಿತದೇಹ. ತಪ್ಪು ಮಾಡುವ ಮುಂಚೆ, ತಪ್ಪು
ಮಾಡಿದ ಮೇಲೆ, ನಿನ್ನೊಳಗಿನ ಅಮ್ಮನನ್ನೇ ಕೇಳು.
ಅವಳು ಕ್ಷಮೆ ನೀಡಿದರೆ…
ನಾನು ಕ್ಷಮೆ ನೀಡಿದಂತೆ.
ನೀನಿನ್ನೂ ಚಿಕ್ಕವನಲ್ಲ… ಎತ್ತಿ ಮುದ್ದಾಡುವ ಮಗುವಲ್ಲ..!
ಮತ್ತೋಮ್ಮೆ ಅಮ್ಮ ಈ ಮಾತನ್ನು ಹೇಳಿದಳು, ಎಚ್ಚರಿಸಿದಳು.
ಅಮ್ಮನ ಮಾತು ಕಠೋರವಾಗಿತ್ತು, ಒಡಲ ನೋವು ತುಂಬಿತ್ತು.
ಸುತ್ತಲೂ ಕತ್ತಲು ಕವಿದಿತ್ತು. ಅಮ್ಮನ ದನಿ ಬೆಳಕಾಗಿರಲು..
ಅಮ್ಮ… ಅಮ್ಮ… ಅಮ್ಮ… ಅಂತ ಜೋರಾಗಿ ಕಿರುಚಿದೆ.
ಅಮ್ಮ ಅಂತ ಕೂಗಿದ ನನ್ನ ದನಿಯ ನೋವಿಗೆ
ಒಳಗೆ ಯಾರೋ ನನ್ನ ಎದೆಗೆ
ಮುತ್ತಿಕ್ಕಿದಂತಾಯಿತು.
—–3——–
ಹೌದು, ಇದು ನನ್ನ ಅಮ್ಮನದೇ ಮುತ್ತು.
ಅಮ್ಮ ಹೇಳಿದ್ದು ನಿಜ… ಅವಳು ಪೇಳಿದಾಗೆ
ನನ್ನೊಳಗೆ ಇನ್ನೊಬ್ಬ ಅಮ್ಮ ಇದ್ದಾಳೆ. ಸೇರಿಕೊಂಡಿದ್ದಾಳೆ.
ನಾನು ತಪ್ಪು ಮಾಡಿದ್ದಕ್ಕೆ ದುಃಖಿಸುತ್ತಿದ್ದಾಳೆ. ಉಮ್ಮಳಿಸಿ ಅಳುತ್ತಿದ್ದಾಳೆ.
ಅಮ್ಮ… ಹೇಗೆ ನಿನ್ನನು ಸಮಾಧಾನ ಮಾಡಲಿ,
ಕಾಡುತಿಹೆ ನೀನು… ಕ್ಷಮೆ ಕೇಳುವೆ.
ಎದೆಯಲಿ ನೀನಿರುವೆ, ಹೇಗೆ ಹೊರಿಸಲಿ
ನನ್ನ ತಪ್ಪಿನ ಭಾರವ..!
ಬೆನ್ನಿಗಂಟಿದ ಅಪ್ಪನನ್ನು ಬಿಟ್ಟು ಬಂದು ಬಿಡು ಅಂತ ಕೂಗಿದೆ.
ಬೇಡಿಕೊಂಡರೂ, ಪಾಡಿಕೊಂಡರೂ
ಒಳಗಿನ ಅಮ್ಮ ಬರಲಿಲ್ಲ.
ಬರುವ ಇಚ್ಚೆ ಇದ್ದಂತೆ ಕಾಣಲಿಲ್ಲ.
ಅವಳು ಪಿಸುಗುಟ್ಟಿದ ಒಂದು ಮಾತು
ಅರ್ಥವಾಗಿತ್ತು. ಲೋಕಸತ್ಯವಾಗಿತ್ತು.
ನಾ ಹೊರಗೆ ಬಂದರೆ, ಜೀವನವಿಡೀ ನನ್ನ ಕುಡಿಯನು,
ಕ್ಷಮಿಸುವವರು ಈ ಜಗತ್ತಿನಲ್ಲೇ ಯಾರಿಹರು?
ಅವಳು ನೇರವಾಗಿ ಪ್ರಶ್ನಿಸಿದಳು.
ಮಾತು ಅರ್ಥವಾಯಿತು. ಕ್ಷಮೆ ಸಿಕ್ಕಿತು.
ನೀನೊಬ್ಬಳು ನನ್ನ ಜೊತೆಗಿರು.
ನೀನು ಅಲ್ಲೇ ಇರು.. ನಿನ್ನ ಬೆನ್ನಿಗಂಟಿದ ಅಪ್ಪನೂ…
******
hdwallpapersarena.com
ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ
– ಸಾತ್ವಿಕ್ ಎನ್ ವಿ
ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು. ಮತ್ತಷ್ಟು ಓದು 
ದೀಪ ಭಾಗ ೨
– ವಿಜಯ್ ಹೂಗಾರ್
ಬೆಳಕಿಂಡಿಯಿಂದ ಮೂಡುವ ಹಿಡಿ ಬಿಸಿಲುಗರಿಗಳು ಇಣುಕುವ ಮುಂಚೆ ದೇವಕಿ ಅಡುಗೆ ಮನೆ ಸೇರಿದ್ದಳು.ಒಲೆ ಹತ್ತಿಸಿದ ಮೇಲೆ ಅಡುಗೆ ಮನೆ ಹೊಗೆಯಿಂದ ತುಂಬಿ ತುಳುಕುತ್ತಿತ್ತು.ಅಡುಗೆಮನೆಯಿಂದ ಹೊರಮನೆ,ಹೊರಮನೆಯಿಂದ ಕೇರಿಯಲ್ಲ ಹರಡುತಿತ್ತು.ಅಮಾವಾಸ್ಸೆಯ ಕತ್ತಲೆಯಂತೆ ಗೋಚರಿಸುತ್ತಿರುವ ಗೋಡೆಗಳ ಮಧ್ಯೆ ಖೆಮ್ಮುತ್ತ,ಬೆಂಕಿ ಆರುವಂತಿದ್ದರೆ ಊದುತ್ತ,ಮೈಯಲ್ಲ ಬೆವತು,ಸುರಿಯುವ ಬೆವರ ಧಾರೆಗೆ ಸೆರಗಿನಿಂದ ಒರೆಸುತ್ತಾ ರುಚಿ ರುಚಿಯಾದ ಅಡುಗೆ ಮಾಡುತ್ತಿದ್ದಳು.
ಅಷ್ಟೊತ್ತಿಗೆ “ಏ ಇನ್ಯಾ…! ಹೋಗಿ ಆ ಭುರೆಗೊಳ್ ಮನ್ಯಾಗಿಂದು ಪಾವ್ ಲೀಟರ್ ಹಾಲ ಸಿಗ್ತದೆನು ತೊಗೊಂಬಾ,ಚಾ ಮಾಡಕ್ಕ ಹಾಲಿಲ್ಲ” ಅಂತ ದೇವರ ಮನೆಯಿಂದ ತರಕಸ್ವಾರದಲ್ಲಿ ಕಮಲಜ್ಜಿಯ ಅವಾಜ್ ಕೇಳಿ, ಪಡಸಾಲೆಲ್ಲಿ ಟಿವಿ ನೋಡುತ್ತಾ ಕುಳಿತ ಮೊಮ್ಮಗ ಇನ್ಯಾ ತನ್ನ ಸಂಗಡಿಗರ ಸಮೇತ ಪುರ್ರ್ ಅಂತ ಹಾರಿಹೋದ.ಮನೆಯೆಲ್ಲ ಊದಿನ ನುರುಹೊಗೆಯ ಪರಿಮಳ ಸೂಸುತ್ತ ದೇವರ ಮನೆಯಿಂದ ಬಂದ ಕಮಲಜ್ಜಿ ಹಠತ್ತಾನೆ ಖಾಲಿಯಾದ ಪಡಸಾಲೆಯನ್ನು ನೋಡಿ,”ಅಯಿ…!ಹಾಟ್ಯಗಳ ತೊಗೊಂಬಂದು…!ಕೆಲಸ ಮಾಡಕ್ಕ ಏನ್ ಬ್ಯಾನಿ ಬರ್ತದ…?ತಿಲ್ಲಕ್ ಹ್ಯಾಂಗ್ ಬರ್ತದ,ಎರಡೂ ದವಡಿಯಲ್ಲಿ …!”ಅಂತ ಕೈಯಲ್ಲಿರುವ ನೈವಿದ್ಯದ ತಟ್ಟೆ ಹಿಡಿದು ಖಾಲಿ ಪಡಸಾಲೆಯ ಮೇಲೆ ತನ್ನ ಕೋಪ ತೋರಿಸುತ್ತ ನಿಂತಳು.’ಇನ್ಯಾರಿಗೆ ತೋರಿಸಬೇಕು…..?’ ಅಂತ ಪ್ರಶ್ನಾರ್ಥಕ ಮುಖದಿಂದ ಟಿವಿಯ ಪರದೆ ಕಮಲಜ್ಜಿಯ ಕಡೆ ಹೆದರಿ ಮುಜುಗುರದಿಂದ ನೋಡತೊಡಗಿತು.ಹಾಗೆ ಕೋಪದಿಂದ ಗಲಿಬಿಲಿಗೊಂಡ ಮುಖದಿಂದ ಮನೆಯ ಹೊರಗಡೆಯ ಇರುವ ಚಿಕ್ಕ ಕಟ್ಟೆಯಮೇಲೆ ಆಸಿನಳಾದ ತುಳಸಿಗೆ ಭುಸುಗುಟುತ್ತಲೇ ನೈವಿದ್ಯ ಅರ್ಪಿಸತೊಡಗಿದಳು.
ಮತ್ತಷ್ಟು ಓದು 
ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?
– ರೂಪ ರಾವ್
ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.
ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.
ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?
ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
ಮತ್ತಷ್ಟು ಓದು 
’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?
– ರಾಕೇಶ್ ಶೆಟ್ಟಿ
ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.
ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?
ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?
ಕಾನೂನಿನಂಗಳ ೨ : ಸಂಸ್ಕೃತಿಯೇ ಪ್ರಾಚೀನ ಭಾರತೀಯ ಕಾನೂನು
– ಉಷಾ ಐನಕೈ ಶಿರಸಿ
ಮನುಷ್ಯ ಆದಿಯಲ್ಲಿ ಯಾವಾಗ ಸಾಂಘಿಕಜೀವನವನ್ನು ಪ್ರಾರಂಭಿಸಿದನೋ ಆಗಿನಿಂದಲೇ ಹಲವಾರು ಅವ್ಯಕ್ತವಾದ ಕಾನೂನುಗಳನ್ನು ಕಟ್ಟಿ ಕೊಳ್ಳುತ್ತಾಬಂದ. ಶಿಲಾಯುಗದ ಮನುಷ್ಯ ಒಬ್ಬನೇ ಬೇಟೆಯಾಡುವುದನ್ನು ನಿಲ್ಲಿಸಿ ಹಲವಾರು ಜನರೊಂದಿಗೆ ಪ್ರಾಣಿಗಳ ಬೇಟೆಗೆ ಹೋಗತೊಡಗಿದ. ಬೇಟೆಯಾಡಿ ಬಂದನಂತರ ತಾವು ಬೇಟೆ ಯಾಡಿದ ರೀತಿಯನ್ನು ಈ ಗುಂಪು ಅಭಿನಯದ ಮೂಲಕ ತೋರಿಸುವ ಪ್ರಯತ್ನ ನಡೆಯಿತು. ಇದೇ ಮುಂದೆ ವಿಧಿ, ಆಚರಣೆಯಾಗಿ ಖಾಯಂ ಗೊಂಡಿತು. ಈ ಸಂದರ್ಭದಲ್ಲಿ ವಿಧಿಯಾಚರಣೆಗಳಿಗೆ ಕೆಲವು ನಿಯಮಾವಳಿಗಳನ್ನು ಹೆಣೆದುಕೊಳ್ಳುತ್ತ ಬಂದರು. ಅದನ್ನೇ ಆ ಕಾಲದ ಕಾನೂನಿನ ಸ್ವರೂಪ ಎಂದು ಗುರುತಿಸಬಹುದು. ಮನುಷ್ಯ ಗುಂಪು ಕಟ್ಟಿ ಸಮಾಜಜೀವನ ನಡೆಸತೊಡಗಿದಾಗ ಗುಂಪು-ಗುಂಪುಗಳ ನಡುವೆ ಗುಂಪು ಹಾಗೂ ವ್ಯಕ್ತಿಯ ನಡುವಿನ ವ್ಯವಹಾರಕ್ಕೆ ಹಲವು ನಿಯಮಾವಳಿಗಳು ಹುಟ್ಟಿಕೊಂಡವು. ಇದನ್ನು ಕಾನೂನು ಎಂದು ಕರೆಯುತ್ತೇವೆ. ಹೀಗೆ ಮನುಷ್ಯ ನಾಗರಿಕತೆಯುದ್ದಕ್ಕೆ ಒಂದಲ್ಲಒಂದು ರೀತಿಯ ಕಾನೂನು ರೂಪಗೊಳ್ಳುತ್ತ ಪರಿವರ್ತನೆಯಾಗುತ್ತ ಸಮಾಜವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಬಂದದ್ದನ್ನು ನಾವು ಕಾಣುತ್ತೇವೆ.
ನಮ್ಮ ಭಾರತ ದೇಶದ ಮಟ್ಟಿಗೆ ನೋಡುವುದಾದರೆ ಇಲ್ಲೂ ಕೂಡ ಕಾನೂನಿನ ಇತಿಹಾಸ ಬಹು ದೀರ್ಘವಾಗಿದೆ. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದ ಭಾರತೀಯ ಸಂಸ್ಕೃತಿ ಇಡೀ ಜಗತ್ತಿನ ಗಮನ ಸೆಳೆದಿದೆ. ಸಮೃದ್ಧಿಯಿಂದ ಮರೆದಿದೆ. ಹೀಗಿದ್ದಾಗ ಈ ಸಂಸ್ಕೃತಿಯ ಜನ ನೆಮ್ಮದಿಯಿಂದ ಬಾಳಿ ಬದುಕಿ ಬಂದಿದ್ದಾರೆಂಬು ದಂತೂ ನಿಜ. ಅಂದರೆ ಅಂತಹ ಒಂದು ಸುಸಂಬದ್ಧವಾದ ವ್ಯವಸ್ಥೆ ಈ ಸಂಸ್ಕೃತಿಯಲ್ಲಿ ಇತ್ತು ಅಂತಾಯಿತು. ಅದು ಯಾವ ವ್ಯವಸ್ಥೆ? ಹೇಗೆ ನಡೆಯುತ್ತಿತ್ತು? ಯಾವ ಪ್ರೇರಣೆಯಿಂದ ಹಾಗೂ ಹಿನ್ನೆಲೆಯಿಂದ ನಡೆಯುತ್ತಿತ್ತು ಎಂಬಿವೇ ಮುಂತಾದ ಪ್ರಶ್ನೆಗಳು ಎದುರಾಗುತ್ತವೆ. ಇದಕ್ಕೆಲ್ಲ ಒಂದೇ ಒಂದು ಸರಳವಾದ ಉತ್ತರ ಎಂದರೆ ‘ಪ್ರಾಚೀನ ಭಾರತದ ಕಾನೂನುಗಳು’.






