ವಿಷಯದ ವಿವರಗಳಿಗೆ ದಾಟಿರಿ

Posts tagged ‘ಕವಲು’

10
ಆಕ್ಟೋ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧

– ಮು.ಅ ಶ್ರೀರಂಗ, ಬೆಂಗಳೂರು

S L Byrappaಎಸ್. ಎಲ್. ಭೈರಪ್ಪನವರ” ಧರ್ಮಶ್ರೀ”ಯಿಂದ  “ಅನ್ವೇಷಣ”ದವರೆಗಿನ ಹನ್ನೆರೆಡು ಕಾದಂಬರಿಗಳನ್ನು ಕುರಿತಂತೆ ಒಟ್ಟು ಅರವತ್ತಾರು ವಿಮರ್ಶೆಗಳಿರುವ “ಸಹಸ್ಪಂದನ” ಎಂಬ ವಿಮರ್ಶಾ ಗ್ರಂಥ ೧೯೭೮ರಲ್ಲಿ ಪ್ರಕಟವಾಯ್ತು. (ಪ್ರಕಾಶಕರು :ಸಾಹಿತ್ಯ ಭಂಡಾರ ಬೆಂಗಳೂರು —೫೩) ಅದರ ಪ್ರಕಾಶಕರು ಹೇಳಿರುವ ಮಾತುಗಳಿಂದ ಈ ನನ್ನ ಮುನ್ನುಡಿಯನ್ನು ಪ್ರಾರಂಭಿಸುವುದು ಉತ್ತಮ.”ಇದು (ಸಹಸ್ಪಂದನ) ಭೈರಪ್ಪನವರ ಮೇಲಿನ ಕೇವಲ ಅಭಿಮಾನದಿಂದ ತಂದಿರುವ ಗ್ರಂಥವಲ್ಲ. ಮೆಚ್ಚಿಗೆ,ಹೊಗಳಿಕೆಗಳ ಬರವಣಿಗೆಯಿಂದ ಯಾವ ಲೇಖಕನ ಕೃತಿಗಳೂ ಬದುಕಲಾರವು. ಇಲ್ಲಿ ಬಂದಿರುವ ಲೇಖನಗಳು ಒಂದೇ ಬಗೆಯ ದೃಷ್ಟಿಕೋನದವೂ ಅಲ್ಲ. ಮೆಚ್ಚುಗೆ, ವಿರೋಧ,ಟೀಕೆ,ಘಾಟು, ಹೀಗೆ ……….. ”

ಈ ಮುಖಾಮುಖಿಯನ್ನು ಆ ಒಂದು ಎಚ್ಚರ,ಜವಾಬ್ದಾರಿಗಳ ಹಿನ್ನೆಲೆಯಲ್ಲಿ ನಡೆಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ನಮ್ಮ ಅಕಾಡೆಮಿಕ್ ವಲಯದ ವಿಮರ್ಶಕರುಗಳು ಜತೆಗೆ ನಾನ್ ಅಕಾಡೆಮಿಕ್ ವಿಮರ್ಶಕರುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಹೊಸ ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಗೊಂದು ಮಹತ್ವವಿದೆ. ಕಾಲಾನುಕಾಲಕ್ಕೆ ಅದು ಓದುಗರ ವಿವೇಕವನ್ನು ಎಚ್ಚರಿಸುತ್ತಾ, ಸಾಹಿತಿಗಳನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವಿಸುತ್ತಲಿದೆ. ಇಷ್ಟಲ್ಲದೆ ಸಾಹಿತಿಗಳು ಹೊಸಹೊಸ ತಂತ್ರಗಳತ್ತ, ವಿಷಯಗಳತ್ತ ಯೋಚಿಸುವಂತೆ ಹೊರಳುವಂತೆ ಮಾಡಿವೆ. ಭಾಷೆಯನ್ನು ಪರಿಣಾಮಕಾರಿಯಾಗಿ ಯಾವ ರೀತಿ ಉಪಯೋಗಿಸಬೇಕೆನ್ನುವ ಮಾರ್ಗದರ್ಶನ ಕೂಡ ವಿಮರ್ಶೆಯಿಂದ ನಡೆಯುತ್ತಿರುತ್ತದೆ.
ಮತ್ತಷ್ಟು ಓದು »

17
ಸೆಪ್ಟೆಂ

‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨

ಮು. ಅ. ಶ್ರೀರಂಗ,ಬೆಂಗಳೂರು

ನಕ್ಸಲ್ ವರಸೆ ಮತ್ತು ಹೆಗ್ಗುರುತು“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.

ಮತ್ತಷ್ಟು ಓದು »

26
ಆಗಸ್ಟ್

ಯು ಟರ್ನ್ ತೆಗೆದುಕೊಂಡ ಸ್ತ್ರೀ ವಾದಿಗಳು !

– ಮು . ಅ . ಶ್ರೀರಂಗ  ಯಲಹಂಕ  ಬೆಂಗಳೂರು

Kavalu - SL Bhairappaಎಸ್ ಎಲ್ ಭೈರಪ್ಪ ಅವರ “ಕವಲು” ಕಾದಂಬರಿ ಪ್ರಕಟವಾದಾಗ ಸುಮಾರು ಎರಡು ಮೂರು ತಿಂಗಳು ಪತ್ರಿಕೆಗಳಲ್ಲಿ ಎಡಬಿಡದೆ ವಾದ-ವಿವಾದಗಳ ಸುನಾಮಿ! ಜತೆಗೆ ಸ್ತ್ರೀ-ಪುರುಷ ಎಂಬ ಭೇದ ಭಾವ ಇಲ್ಲದೆ ಎಲ್ಲಾ ಸ್ತ್ರೀವಾದಿ ಸಾಹಿತಿಗಳು “ಕವಲು”ಕಾದಂಬರಿ ಸ್ತ್ರೀ ವಿರೋಧಿ ಎಂದು ಟೀಕಿಸಿದ್ದೆ ಟೀಕಿಸಿದ್ದು. ಭೈರಪ್ಪನವರ ವಿರೋಧಿ ಬಣಕ್ಕಂತೂ ಹೊಸ ಅಸ್ತ್ರ ಸಿಕ್ಕಿತು. ಸುಮಾರು ೫೦ ವರ್ಷಗಳಿಂದ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಳನ್ನು ಮಾಡುತ್ತಾ ಬಂದಿರುವ ಕಾದಂಬರಿಯಿಂದ ಕಾದಂಬರಿಗೆ ಬೆಳೆಯುತ್ತಿರುವ ಭೈರಪ್ಪನವರನ್ನು ನಮ್ಮ ಅಕಾಡೆಮಿಕ್ ವಲಯದ ಧೀಮಂತರುಗಳು ತಮ್ಮ ಪರಿಧಿಯಿಂದ ಹೊರಗೆ ಇಟ್ಟಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯವೇ ಆಗಿದೆ. ನನ್ನ ಹಿರಿಯ ಸ್ನೇಹಿತರೂ ವಿಮರ್ಶಕರೂ ಮತ್ತು ಕಾಲೇಜೊಂದರಲ್ಲಿ ಕನ್ನಡದ ಪ್ರಾಧ್ಯಾಪಕರೂ ಆಗಿರುವ ಒಬ್ಬರು ಸ್ನಾತಕೋತ್ತರ ಕನ್ನಡದ ಸಿಲಬಸ್ಸಿನಲ್ಲಿ ಭೈರಪ್ಪನವರ ಬಗ್ಗೆ ಒಂದು ಪುಟದಷ್ಟೂ ಮಾಹಿತಿಗಳಿಲ್ಲ ಎಂದು ತಿಳಿಸಿದ್ದರು.ಈ ಮಾತು ಹೇಳಿ ಮೂರ್ನಾಲಕ್ಕು ವರ್ಷಗಳು ಕಳೆಯಿತು. ಈಗ ಪರಿಸ್ಥಿತಿ ಬದಲಾಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಗೊತ್ತಿರುವವರು ಹೇಳಬೇಕು.

ಈ ಪೀಠಿಕೆಗೆ ಮುಖ್ಯ ಕಾರಣ ೨೬ ಆಗಷ್ಟ್ ೨೦೧೩ರ  ಕನ್ನಡಪ್ರಭ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ “ಪುರುಷರ ಆತ್ಮಹತ್ಯೆಗೆ ಮಹಿಳೆಯರೇ ಕಾರಣ” ಎಂಬ ಸುದ್ದಿ. ಇದೇನೂ ಮುದ್ರಾರಾಕ್ಷಸನ ಹಾವಳಿಯಿಂದಾದ ತಪ್ಪು ಸುದ್ದಿಯಲ್ಲ. ಕರ್ನಾಟಕ ರಾಜ್ಯ ಪುರುಷ ರಕ್ಷಣಾ ಸಮಿತಿ ಸದಸ್ಯರ ಪ್ರತಿಭಟನೆಯ ಸುದ್ದಿ. ಈ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್ ಅವರು ಎಲ್ಲಾ ವರ್ಗದ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚಲು ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ  ಕಾರಣ ಎಂದಿದ್ದಾರೆ. ರಾಜ್ಯ ಅಪರಾಧ ಮಾಹಿತಿ ಸಂಗ್ರಹ ಘಟಕದಲ್ಲಿ ದಾಖಲಾಗಿರುವ ಅಂಕಿ ಅಂಶಗಳೇ ಇದಕ್ಕೆ ಉದಾಹರಣೆ ಎಂದೂ ಹೇಳಿದ್ದಾರೆ.
ಮತ್ತಷ್ಟು ಓದು »