ಧಿಡೀರ್ ಖ್ಯಾತಿ(?)
– ಡಾ. ಜ್ಞಾನದೇವ್ ಮೊಳಕಾಲ್ಮುರು
ನೀನೊಬ್ಬ ಅನಾಮಧೇಯ ಈ ನಾಡಿನಲ್ಲಿ. ನಿನ್ನ ಹಿ೦ದಿನ ಚರಿತ್ರೆ ನಮಗೆ ಬೇಕಿಲ್ಲ.
ನಿನಗೆ ಧಿಡೀರ್ ಖ್ಯಾತಿ, ಹೆಸರು ಬೇಕಾ? ಬುದ್ದಿಜೀವಿ, ಸೆಕ್ಯುಲಾರ್ ಎ೦ಬ ಮಾಡರ್ನ್ ವಿಶೇಷಣ ಬೇಕಾ?
ಸೋ ಕಾಲ್ಡ್ ಈ ನಾಡಿನ ಬುದ್ಧಿಜೀವಿಗಳ ಜ್ಞಾನಪೀಠಿಗಳ ಸೆಕ್ಯುಲರ್ವಾದಿಗಳ, ಪ್ರಗತಿಪರರ ಸಖ್ಯ, ಸಪೋರ್ಟ್, ಐಡೆ೦ಟಿಟಿ, ಭೇಷ್ ಬೇಕಾ?
ಈ ನಾಡಿನ ಪ್ರಬಲ ಮಾಧ್ಯಮ ಟಿವಿ, ಪತ್ರಿಕೆಯಲ್ಲಿ ಹೆಡ್ ಲೈನ್ಸ್ ಕುದುರಿಸಿಕೊಳ್ಳುವ ಬಯಕೆ ಇದೆಯಾ?
ಟಿವಿ ಪತ್ರಿಕೆಯಲ್ಲಿ ಸ೦ದರ್ಶನ, ಸ೦ವಾದ ಗೋಷ್ಠಿಯಲ್ಲಿ ರಾರಾಜಿಸಬಹುದು ಎ೦ಬ ಅದಮ್ಯ ಕನಸು ಇದೆಯಾ?
ಗುಡ್..
ಇದಕ್ಕೆಲ್ಲಾ ಹೆಚ್ಚು ಶ್ರಮ ಪಡಬೇಕಿಲ್ಲ, ಹೆಚ್ಚು ಹಣದ ಅಗತ್ಯವೂ ಇಲ್ಲ.
ಜಸ್ಟ್ ಇಷ್ಟನ್ನು ಮಾಡು..
ಹಿ೦ದೂ ಧರ್ಮದ, ಹಿ೦ದೂ ಸ೦ಸ್ಕೃತಿಯ, ಹಿ೦ದೂ ಮಹಾಕಾವ್ಯಗಳ, ಪುರಾಣಗಳ, ಹಿ೦ದೂ ದೇವತೆಗಳನ್ನು ಸ್ವಲ್ಪ ಲೇವಡಿ ಮಾಡಿದರೆ ಸಾಕು, ಜಾಸ್ತಿಯಾದರೆ ಇನ್ನೂ ಜಾಸ್ತಿ ಖ್ಯಾತಿ!
ಅದು ಸ೦ಶೋಧನೆ(?)ಯ ಹೆಸರಿನಲ್ಲಿರಬಹುದು ಅಥವಾ ಅಭಿವ್ಯಕ್ತಿ ಸ್ವಾತ೦ತ್ರ್ಯದ ಹೆಸರಲ್ಲಿರಬಹುದು, ಅಥವಾ ಪ್ರಗತಿಪರ ಧೋರಣೆಯ ಸಾಹಿತ್ಯದ ಹೆಸರಲ್ಲಿರಬಹುದು ಅಥವಾ ನೀನು ಸೃಷ್ಟಿಸುವ ಸುಳ್ಳು ಸುಳ್ಳು ಜೊಳ್ಳು ಜೊಳ್ಳಿನ ಸೃಜನಶೀಲತೆಯ ಹೆಸರಲ್ಲಿರಬಹುದು..
Dont Worry..
ಮತ್ತಷ್ಟು ಓದು 
“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)




