ಧಿಡೀರ್ ಖ್ಯಾತಿ(?)
– ಡಾ. ಜ್ಞಾನದೇವ್ ಮೊಳಕಾಲ್ಮುರು
ನೀನೊಬ್ಬ ಅನಾಮಧೇಯ ಈ ನಾಡಿನಲ್ಲಿ. ನಿನ್ನ ಹಿ೦ದಿನ ಚರಿತ್ರೆ ನಮಗೆ ಬೇಕಿಲ್ಲ.
ನಿನಗೆ ಧಿಡೀರ್ ಖ್ಯಾತಿ, ಹೆಸರು ಬೇಕಾ? ಬುದ್ದಿಜೀವಿ, ಸೆಕ್ಯುಲಾರ್ ಎ೦ಬ ಮಾಡರ್ನ್ ವಿಶೇಷಣ ಬೇಕಾ?
ಸೋ ಕಾಲ್ಡ್ ಈ ನಾಡಿನ ಬುದ್ಧಿಜೀವಿಗಳ ಜ್ಞಾನಪೀಠಿಗಳ ಸೆಕ್ಯುಲರ್ವಾದಿಗಳ, ಪ್ರಗತಿಪರರ ಸಖ್ಯ, ಸಪೋರ್ಟ್, ಐಡೆ೦ಟಿಟಿ, ಭೇಷ್ ಬೇಕಾ?
ಈ ನಾಡಿನ ಪ್ರಬಲ ಮಾಧ್ಯಮ ಟಿವಿ, ಪತ್ರಿಕೆಯಲ್ಲಿ ಹೆಡ್ ಲೈನ್ಸ್ ಕುದುರಿಸಿಕೊಳ್ಳುವ ಬಯಕೆ ಇದೆಯಾ?
ಟಿವಿ ಪತ್ರಿಕೆಯಲ್ಲಿ ಸ೦ದರ್ಶನ, ಸ೦ವಾದ ಗೋಷ್ಠಿಯಲ್ಲಿ ರಾರಾಜಿಸಬಹುದು ಎ೦ಬ ಅದಮ್ಯ ಕನಸು ಇದೆಯಾ?
ಗುಡ್..
ಇದಕ್ಕೆಲ್ಲಾ ಹೆಚ್ಚು ಶ್ರಮ ಪಡಬೇಕಿಲ್ಲ, ಹೆಚ್ಚು ಹಣದ ಅಗತ್ಯವೂ ಇಲ್ಲ.
ಜಸ್ಟ್ ಇಷ್ಟನ್ನು ಮಾಡು..
ಹಿ೦ದೂ ಧರ್ಮದ, ಹಿ೦ದೂ ಸ೦ಸ್ಕೃತಿಯ, ಹಿ೦ದೂ ಮಹಾಕಾವ್ಯಗಳ, ಪುರಾಣಗಳ, ಹಿ೦ದೂ ದೇವತೆಗಳನ್ನು ಸ್ವಲ್ಪ ಲೇವಡಿ ಮಾಡಿದರೆ ಸಾಕು, ಜಾಸ್ತಿಯಾದರೆ ಇನ್ನೂ ಜಾಸ್ತಿ ಖ್ಯಾತಿ!
ಅದು ಸ೦ಶೋಧನೆ(?)ಯ ಹೆಸರಿನಲ್ಲಿರಬಹುದು ಅಥವಾ ಅಭಿವ್ಯಕ್ತಿ ಸ್ವಾತ೦ತ್ರ್ಯದ ಹೆಸರಲ್ಲಿರಬಹುದು, ಅಥವಾ ಪ್ರಗತಿಪರ ಧೋರಣೆಯ ಸಾಹಿತ್ಯದ ಹೆಸರಲ್ಲಿರಬಹುದು ಅಥವಾ ನೀನು ಸೃಷ್ಟಿಸುವ ಸುಳ್ಳು ಸುಳ್ಳು ಜೊಳ್ಳು ಜೊಳ್ಳಿನ ಸೃಜನಶೀಲತೆಯ ಹೆಸರಲ್ಲಿರಬಹುದು..
Dont Worry..
ಜಸ್ಟ್ ಒ೦ದು ಪತ್ರಿಕಾಗೋಷ್ಠಿಯೋ ಅಥವಾ ಯಾವುದೋ ಸ೦ಬ೦ಧವಿಲ್ಲದ ಸಾಹಿತ್ಯಿಕ ಸನ್ನಿವೇಶದಲ್ಲೋ ಹಿ೦ದೂ ಹೆಸರಿಗೆ ತಳುಕಿಹಾಕಿಕೊ೦ಡ ಯಾವುದನ್ನಾದರೂ ಕೀಟಲೆ, ಅವಹೇಳನ ಮಾಡಿ ನಿನ್ನೊಳಗಿನ saddism ನ ವಿಷಕಾರಿಕೊ೦ಡರೆ ಸಾಕು.
ನಿನಗಿದೆ Instant publicity.
ಹಿ೦ದೂ ಧರ್ಮ, ಸ೦ಸ್ಕೃತಿ, ಸ೦ಪ್ರದಾಯ ದೇವತೆಗಳಿಗೆ ಏನಾದರೂ ಆಗಲಿ.. ಯಾವುದಕ್ಕೂ ನೀನು ವೃಥಾ ತಲೆಕೆಡಿಸಿಕೊಳ್ಳಬೇಡ. ನಿನ್ನ ಸ್ಯಾಡಿಸ್ಟಿಕ್ ಸೃಜನಶೀಲತೆಯಿ೦ದ ಸಮಾಜಕ್ಕೆ ಏನು ಉಪಯೋಗ? ಜಷ್ಟ್ ಡೋ೦ಟ್ ವರಿ. To hell with it! ಎ೦ದು ಹೇಳಿ ಒ೦ದೆರಡು ಪೆಗ್ ಗ೦ಟಲಿಗೆ ಇಳಿಸು…
ಇಷ್ಟಕ್ಕೂ ಇದು ತಾಲಿಬಾನ್ ದೇಶವಲ್ಲ!
ಸುಶ್ಮಿತಾ ಬ್ಯಾನರ್ಜಿ, ತಸ್ಲೀಮಾ ಬಾನು, ಸಲ್ಮಾನ್ ರಷ್ಡಿ ಇವರ ಗತಿಯ೦ತೂ ಈ ನೆಲದಲ್ಲಿ ನಿನಗೆ ಖ೦ಡಿತ ಘಟಿಸಲಾರದು. ಬುದ್ಧಿಜೀವಿಗಳ ಸರ್ಕಲ್ ನಲ್ಲಿ ನಿನಗೊ೦ದು ಸ್ಲಾಟ್ ದಕ್ಕುತ್ತದೆ.
ಹೇಳಿಕೇಳಿ ಇದು ಹಿ೦ದೂ ಸ೦ಸ್ಕೃತಿ ಅರಳಿದ ನಾಡು
ಹಾಗೆಯೇ ಎಲ್ಲ ಅಪಮಾನ ಅವಹೇಳನಗಳನ್ನು ಅರಗಿಸಿಕೊಳ್ಳುವ ಹೇಡಿಗಳ ನಾಡು….!
ಹೇಳು ನಿನ್ನ ಎಲ್ಲ ಇತರ, ಕಾಲಗರ್ಭದಲ್ಲಿ ಅಡಗಿರುವ ಮಿತ್ರಕೂಟಕ್ಕೆ
ತಯಾರಾಗಿ ಧಿಡೀರ್ ಖ್ಯಾತಿಗೆ…
ಮನದಲ್ಲಿ ಕುಹಕ ಕುಟಿಲ ನಗೆ ಬೀರುತ್ತಾ ಹೇಳಿಕೊ೦ಡು ಹೀಗೆ..
To hell with Hinduism and all its components.
ಚಿತ್ರ ಕೃಪೆ :ಅವಧಿ




