ಅಂದು ರಾತ್ರಿ
– ಕಾಮನಬಿಲ್ಲು
ಅಂದು ಸಿಕ್ಕ ಪಟ್ಟೆ ಕೆಲಸ ಏನೋ ಒಂದು ಸ್ವಲ್ಪ ಅಂದ್ರೆ ಒಂದು ೧೫ ನಿಮಿಷ ಅಷ್ಟೇ ರೀ ತಡ ಆಯಿತು ನಾನು ಎಂದಿನಂತೆ ಎಂಟಕ್ಕೆ ಹೊರಡುವಾವಳು ಅಂದು ಸಿಕ್ಕೆ ಸಿಕ್ಕುತ್ತೆ ಬಸ್ ಅಂದು ಕೊಂಡವಳೇ ಹೊರಟೆ ..ಆಫೀಸ್ ನಿಂದ ಬಸ್ ಸ್ಟಾಪ್ ಸುಮಾರು ೫ ೧೦ನಿಮಿಷ ನಡೆದರೆ ಸಾಕು ಅಂದು ತಡ ಆಗಿರೋದರಿಂದ ಸ್ವಲ್ಪ ಬೇಗ ಬಂದೆ ..ಬಂದವಳೇ ಆ ಕಡೆ ಈ ಕಡೆ ನೋಡಿದೆ ಬಸ್ ಕಾಣಲಿಲ್ಲ ಸರಿ ಎಲ್ಲಿ ಹೋಗುತ್ತೆ ಇನ್ನು ಸಾಕಷ್ಟು ಟೈಮ್ ಇದೆಯಲ್ಲ ..ಬರುತ್ತೆ ಅಂತ ಅಲ್ಲೇ ಕುಳಿತೆ..
ನೋಡ್ತೀನಿ ಗಡಿಯಾರದ ಮುಳ್ಳುಗಳು ಎಂಟು ಗಂಟೆ ನಲವತ್ತು ನಿಮಿಷ ತೋರುಸ್ತ ಇದೆ …ನಾನು ತಕ್ಷಣ ಎದ್ದು ನಿಂತು ಮತ್ತೆ ಯಾವುದಾದರು ಬಸ್ ಬರುತ್ತಾ ಅಂತ ನೋಡ್ತಾ ನಿಂತೇ ..ಆಗ ಭಯ ಅನ್ನೋದು ಕೊಂಚ ಹತ್ತಿರ ಬಂತು ನಿಂತ ಜಾಗದಲ್ಲೇ ಹೊರಡಲು ಶುರು ಮಾಡಿದೆ ಮನಸ್ಸಲ್ಲಿ ಅಯ್ಯೋ ಇನ್ನೊಂದು ಬಸ್ ಅತ್ತಾ ಬೇಕಲ್ಲ ಇಲ್ಲಿ ತಡ ವಾದರೆ ಅಲ್ಲಿ ಬಸ್ ಸಿಕ್ಕುತ್ತಾ ಅನ್ನೋ ಚಿಂತೆ ಕಾಡಿತ್ತು ..ಮನಸ್ಸಿನಲ್ಲೇ ಎಲ್ಲ ದೇವರನ್ನು ಕರೆಯುತ್ತಾ ಇದ್ದೆ…
ಅಷ್ಟರಲ್ಲಿ ಬಂತು ಅಲ್ಲಿಗೆ ಬಸ್ ಒಂದು ಸ್ವಲ್ಪ ಸಮಾದಾನ ಸರಿ ಬೇಗ ಹೊರಟರೆ ಸಾಕು ಎಂದು ಬಸ್ ಏರಿದೆ ..ಆಗ ನನ್ನ ಗಡಿಯಾರದಲ್ಲಿ ಸಮಯ ಒಂಬತ್ತು ಗಂಟೆ ನಾನು ನವರಂಗ್ ಹೋಗೋ ಅಷ್ಟರಲ್ಲಿ ಸರಿಯಾಗಿ ಒಂಬತ್ತು ಇಪ್ಪತ್ತು ಕೊನೆಗೂ ನವರಂಗ್ ಗೆ ಬಂದೆ.. ಕೊಂಚ ಭಯ ನನ್ನಿಂದ ದೂರ ಸರಿದಿತ್ತು ಆದರೆ ಅಲ್ಲೇ ಅದರ ಹತ್ತು ಪಟ್ಟು ಭಯ ನನ್ನಲ್ಲಿ ಕಾಡೋಕೆ ಶುರು ಮಾಡಿತ್ತು ಏಕೆ ಅಂದ್ರೆ ಆ ಬಸ್ ಸ್ಟಾಪ್ ನಲ್ಲಿ ವಿಜಯನಗರಕ್ಕೆ ಹೋಗೋ ಬಸ್ ಬಂದೆ ಇರಲಿಲ್ಲ.. ಬಂದೆ ಬರುತ್ತೆ ಎಂಬ ನಂಬಿಕೆ ಧೈರ್ಯ ನನ್ನ ಅಲ್ಲಿ ಇದ್ದಿದ್ದು ಸತ್ಯ ಅದೇನೋ ಅಂತಾರಲ್ಲ ತುಂಬಾ ಆದರೆ ಅಮೃತನು ವಿಷ ಆಗುತ್ತೆ ಅಂತ ಅದೇ ನನಗು ಆಗಿದ್ದು ..
ಕಾದೆ ಕಾದೆ ಒಂಬತ್ತು ಮುವತ್ತು ನನ್ನ ಸ್ನ್ಹೆಹಿತರಿಗೆ ಕಾಲ್ ಮಾಡೋಕೆ ಶುರು ಮಾಡಿದೆ ಯಾಕೆ ಅಂದ್ರೆ ನನ್ನ ಸುತ್ತ ಭಯ ಎಂಬ ಛಾಯೆ ಸುತ್ತಿತ್ತು ..ಅದೇನೋ ಅಂತಾರಲ್ಲ ಅದೇನು ಅಂತ ಯಾರು ಕೇಳಬೇಡಿ ಯಾಕೆ ಅಂದ್ರೆ ಅದೇನು ಅಂತ ನನಗೂ ಗೊತ್ತಿಲ್ಲ .. ಅವರಿಂದ ಸಹಾಯಕ್ಕೆ ಅಂತ ಕರೆ ಮಾಡಿದರೆ ಯಾರು ನನ್ನ ಸಹಾಯಕ್ಕೆ ಬರೋದೆ ಬೇಡ್ವ ..ಅವರು ಮನಸ್ಸು ಮಾಡಿದ್ದರೆ ಯಾರನ್ನ ಅದ್ರು ಕಳ್ಸೋದ ಅಂತ ಕೇಳ ಬಹುದಿತ್ತು ಆದರೆ ಹಾಗೆ ಬಾಯಿ ಮಾತಿಗಾದರೂ ಹೇಳಬಹುದಿತ್ತು ಆದರೆ ಯಾರು ಮಾತಿಗೂ ಹೇಳಿಲ್ಲ ಸರಿ ಬಸ್ ಬಾರೋ ತನಕ ಆದರು ಮಾತಾಡ್ರೆ ಅಂದ್ರೆ ಅದಕ್ಕೂ ರೆಡಿ ಇಲ್ಲ ..
ಅಮ್ಮ ತಂಗಿ ಒಂದೇ ಕಾಲ್ ಮಾಡ್ತಾ ಇದ್ದಾರೆ ಬಂಡ ಧೈರ್ಯ ನಿನಗೆ ಅಂತ ಬಯ್ಯೋಕೆ ಶುರೂ ಮಾಡಿದ್ದರು ಅಮ್ಮನ ಮನಸ್ಸಿನಲ್ಲಿ ಆತಂಕ ಇದ್ದೆ ಇತ್ತು ..ಇಷ್ಟು ದಿನ ಮೊಬೈಲ್ ಅನ್ನು ಜೊತೆಯಲ್ಲೇ ಇಟ್ಟು ಕೊಳ್ಳುತ್ತಿದ್ದ ಅಪ್ಪ ಅಂದು ಮೊಬೈಲ್ ತೆಗೆದುಕೊಂಡು ಹೊಗುವುದನ್ನು ಮರೆತ್ತಿದ್ದರು ..ಆತಂಕ ಭಯ ಎಲ್ಲವು ನನ್ನ ಸುತ್ತಲ್ಲೂ ಸುತ್ತುತ್ತ ನನನ್ನು ಹಿಯಳಿಸುತಿತ್ತು …ಅಲ್ಲಿ ಯಾರೋ ಒಬ್ಬ ಅಜ್ಜಿ ನಾನು ಸುಮಾರು ಒಂದು ಗಂಟೆ ಇಂದ ಕಾಯುತ್ತ ಇದ್ದೀನಿ ಒಂದು ಬಸ್ ಇಲ್ಲ ಕಣವ್ವ ಅಂತ ಗೊಳಡುತ್ತಿದ್ದರು ಅಳದ ಸಂಬಳ ಖಾಲಿ ಆಗ್ಬಿಟ್ಟಿತ್ತು ಆಟೋದಲ್ಲಿ ಹೋಗೋದಕ್ಕೂ ದುಡ್ಡಿಲ್ಲ ಅಳು ಕೂಡ ಬಂದಿತ್ತು ಯಾರೇ ಕಷ್ಟ ದಲ್ಲಿದರು ಸಹಾಯ ಮಾಡುವ ನನಗೆ ನಾನು ಕಷ್ಟ ದಲ್ಲಿ ಇದ್ದಾಗ ಯಾರೊಬ್ಬರು ನನ್ನ ಸಹಾಯಕ್ಕೆ ಬರದೆ ಹೋದರು ಎಂಬ ದುಃಖ ನನ್ನ ಸುತ್ತಿತ್ತು ಅಲ್ಲಿದ್ದವರಲ್ಲಿ ಕೆಲವರು ಆಟೋ ಗಳಲ್ಲಿ ೫ ೬ ಜನರು ಜೊತೆಯಾಗಿ ಅರ್ಧ ಅರ್ಧ ಹಂಚಿಕೊಂಡು ಹೋಗುತ್ತಿದ್ದರು.
ಭಯ ಎಂದರೆ ಏನು ಅಂತ ತಿಳಿಯದ ನಾನು ಅಂದು ರಾತ್ರಿ ಭಯ ಹೆದರಿಕೆ ಎಂದರೇನು ಎಂದು ತಿಳಿದೇ ಅಷ್ಟರಲ್ಲಿ ನನ್ನ ಅಣ್ಣನ ಕಾಲ್ ಬಂತು ಅದೆಷ್ಟು ಭಯ ಆಗಿತ್ತು ಅಂದ್ರೆ ನನ್ನ ಅಣ್ಣನಿಗೆ ಕಾಲ್ ಮಾಡೋದೇ ಮರೆತಿದ್ದೆ ಅಣ್ಣ ಅಲ್ಲಿಗೆ ಬಂದಾಗ ಸುಮಾರು ಹತ್ತು ನಲವತ್ತು ಅಣ್ಣ ಬಂದು ಮನೆಗೆ ಕರೆದು ಕೊಂಡು ಹೋಗುವ ವರೆಗೆ ನನ್ನ ಬೈದರು ಎಷ್ಟೇ ಆದರು ಅಣ್ಣ ಅಲ್ವ .. ಅಣ್ಣ ಇಲ್ಲ ಅಂದಿದ್ದಾರೆ ನನ್ನ ಕಥೆ ನೆನಸಿಕೊಂಡರೆ ಮೈ ಜುಮ್ ಅನ್ನುತ್ತೆ ……
ಆಮೇಲೆ ಗೊತ್ತಾಯಿತು ಅವತ್ತು ಸರ್ಕಾರೀ ರಜೆ ಅದಕ್ಕೆ ಬಸ್ ಕಡಿಮೆ ಇದಿದ್ದು ಅಂತ ನನ್ನದು ಎರೆಡು ಮಾತು ಸರ್ಕಾರಕ್ಕೆ ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕು ಸರ್ಕಾರಿ ರಜೆ ಇದ್ದವರು ಮನೆಯಲ್ಲಿ ಇರ್ತಾರೆ ಸರ್ಕಾರೀ ರಜೆ ಇಲ್ಲದೆ ಇರುವ ಹೆಣ್ಣು ಮಕ್ಕಳು ಗಂಡು ಮಕ್ಕಳು ಕೆಲಸಕ್ಕೆ ಹೋಗಿರ್ತಾರೆ ಅವರಿಗೋಸ್ಕರ ಆದರು ರಾತ್ರಿ ೧೧ ಗಂಟೆ ವರೆಗೂ ಬಸ್ ಹೊರಡೋಕೆ ಬಿಡಿ ಇದು ನನ್ನ ಮನವಿ …
ಇನ್ನೊಂದು ಸ್ನ್ಹೇಹಿತರೆ ನಾನು ಕಷ್ಟ ದಲ್ಲಿ ಇದ್ದೀನಿ ಅಂದಾಗ ನೀವು ಅಲ್ಲಿ ಹೋಗೋದಕ್ಕೆ ಆಗಲಿಲ್ಲ ಅಥವಾ ಸಹಾಯ ಮಾಡೋಕೆ ಆಗಲಿಲ್ಲ ಅಂದ್ರು ಸರಿ ಅವರಿಗೆ ಧೈರ್ಯ ಹೇಳಿ ..ಯಾಕೆ ಅಂದ್ರೆ ಅವರು ಸಾಕಷ್ಟು ಭಯದಲ್ಲಿ ಇರ್ತಾರೆ ..ಯಾರಾದರು ಸಮಾದಾನ ಹೇಳಿ ಧೈರ್ಯ ತುಂಬಿದರೆ ಸಾಕು ..ಅವರಿಗೆ ಸ್ವಲ್ಪ ವಾದರೂ ಹೆದರಿಕೆ ಕಡಿಮೆ ಆಗುತ್ತೆ…




